ಪ್ರಥಮ ಪಿ.ಯು.ಸಿ ಸಹ ಸಂಬಂಧ ಅರ್ಥಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳು, 1st Puc Economics Chapter 17 Notes Question Answer Mcq Pdf Download in Kannada Medium 2023 Kseeb Solutions For Class 11 Economics Chapter 17 Notes 1st Puc Saha Sambandha Economics Notes in Kannada Correlation Questions and Answers correlation notes class 11 Statistics for Economics
1st Puc Economics Chapter 17 Notes
1. ಸಹಸಂಬಂಧದ ಮಾಪನವಾಗಿ ಸಹ ಪ್ರಸರಣಕ್ಕಿಂತ ‘r’ ಹೆಚ್ಚು ಏಕೆ ?
ಸಂಘಟನೆಯನ್ನು ಮಾಪನ ಮಾಡಲು ಸಹ ಪ್ರಸರಣಕ್ಕಿಂತ ‘r’ ಅನ್ನು ಹೆಚ್ಚು ಬಳಸುತ್ತಾರೆ ಏಕೆಂದರೆ, ಚಲಕಗಳ ನಡುವಣ ಸಂಬಂಧದ ಸಾಂದ್ರತೆ ಮತ್ತು ದಿಕ್ಕನ್ನು ಮಾಪನ ಮತ್ತು ಅಧ್ಯಯನ ಮಾಡುತ್ತದೆ.
2. ದತ್ತಾಂಶಗಳ ವಿಧಗಳಿಗೆ ಅನುಗುಣವಾಗಿ ‘r’ನ ಮೌಲ್ಯವು -1 ಮತ್ತು 1 ರ ವ್ಯಾಪ್ತಿಯ ಹೊರಗಿರಲು ಸಾಧ್ಯವೇ?
ಇಲ್ಲ rನ ಮೌಲ್ಯವು -1 ಮತ್ತು +1 ರ ವ್ಯಾಪ್ತಿಯ ಹೊರಗಿರಲು ಸಾಧ್ಯವಿಲ್ಲ.
ಇದು ಸಹ ಸಂಬಂಧ ಗುಣಾಂಕದ ಮೌಲ್ಯವು -I & +1ರ ನಡುವೆ ಇರುತ್ತದೆ. -1<̲- r<̲1
3. ಸಹಸಂಬಂಧವು ಕಾರ್ಯ-ಕಾರಣ ಸಂಬಂಧ ಎಂಬ ಅರ್ಥವನ್ನು ನೀಡುತ್ತದೆಯೇ?
ಸಹಸಂಬಂಧವು ಕಾರ್ಯ ಕಾರಣ ಸಂಬಂಧವನ್ನು ಹೊಂದಿಲ್ಲ. ಇದು ಸಹ ಸಂಬಂಧ ಗುಣಾಂಕವನ್ನು ಒಳಗೊಂಡಿದೆ. ಇದು ಕಾರಣಗಳು & ಪರಿಣಾಮಗಳ ಸಂಬಂಧವನ್ನು ಅರ್ಥೈಸುವುದಿಲ್ಲ.
4. ಯಾವಾಗ ಶ್ರೇಣಿ ಸಹಸಂಬಂಧವು ಸರಳ ಸಹಸಂಬಂಧ ಗುಣಾಂಕಕ್ಕಿಂತ ಹೆಚ್ಚು ನಿಖರವಾಗಿರುತ್ತದೆ?
ಬೆಲೆ, ಆದಾಯ, ತೂಕ ಮುಂತಾದ ಚಲಕಗಳನ್ನು ಅರ್ಥಪೂರ್ಣವಾಗಿರುವಂತೆ ಅಳತೆ ಮಾಡಲು ಸಾಧ್ಯವಿಲ್ಲದಿದ್ದಾಗ ಶೇಣಿ ಸಹಸಂಬಂಧವನ್ನು ಉಪಯೋಗಿಸುತ್ತಾರೆ. ಅಳತೆಗಳು ಸಂಶಯಾಸ್ಪದವಾಗಿದ್ದಲ್ಲಿ, ಶ್ರೇಣಿ ಸಂಬಂಧದ ಬಳಕೆಯು ಹೆಚ್ಚು ಅರ್ಥಪೂರ್ಣವಾಗಿರುತ್ತದೆ.
5. ಶೂನ್ಯ ಸಹಸಂಬಂಧ ಎಂದರೆ ತಂದೆಯನ್ನು ಹೊಂದಿದೆ ಎಂದು ಅರ್ಥವಾಗುತ್ತದೆಯೇ?
ಇಲ್ಲ, ಆದೆ ಸ್ವಾತಂತ್ರತೆಯ ಸಾಧ್ಯತೆಯಿದೆ.
6. ಸರಳ ಸಹಸಂಬಂಧ ಗುಣಾಂಕವು ಯಾವುದೇ ವಿಧದ ಸಂಬಂಧವನ್ನು ಅಳತೆ ಮಾಡುತ್ತದೆಯೇ?
ಇಲ್ಲ
7. ಸಹಸಂಬಂಧ ಎಂದರೇನು?
ಎರಡು ಚಲಕಗಳ ನಡುವಿನ ಸಂಬಂಧವನ್ನು ಪರೀಕ್ಷಿಸುವುದನ್ನು ಸಹಸಂಬಂಧ ಎನ್ನುವರು.
8. ಸಹಸಂಬಂಧವು ಏನನ್ನು ಮಾಪನ (ಅಳತೆ) ಮಾಡುತ್ತದೆ?
ಸಹಸಂಬಂಧವು ಚಲಕಗಳ ನಡುವೆ ಇರುವ ಸಂಬಂಧದ ದಿಕ್ಕು ಮತ್ತು ತೀವತೆಗಳನ್ನು ಅಧ್ಯಯನ ಮಾಡುತ್ತದೆ ಮತ್ತು ಅಳತೆ ಮಾಡುತ್ತದೆ. ಇಲ್ಲಿ ಎರಡು ಚಲಕಗಳಾದ x & y ಗಳ ನಡುವೆ ಸಂಬಂಧ ಅಸ್ತಿತ್ವದಲ್ಲಿದೆ.
9. ಧನಾತ್ಮಕ ಮತ್ತು ಋಣಾತ್ಮಕ ಸಹಸಂಬಂಧದ ನಡುವಿನ ವತ್ಯಾಸವೇನು?
ಚಲಕಗಳು ಒಟ್ಟಿಗೆ ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದರೆ, ಸಹ ಸಂಬಂಧವು ಧನಾತ್ಮಕವಾಗಿದೆ ಎಂದು ಹೇಳುತ್ತೇವೆ. ಉದಾ : ಯಾವಾಗ ಆದಾಯ ಹೆಚ್ಚಾಗುತ್ತದೆಯೋ ಅನುಭೋಗವೂ ಹೆಚ್ಚಾಗುತ್ತದೆ.
ಚಲಕಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಿದರೆ ಸಹ ಸಂಬಂಧ ಋಣಾತ್ಮಕವಾಗಿರುತ್ತದೆ. ಉದಾ : ಯಾವಾಗ ಬೆಲೆಗಳು ಏರುತ್ತದೆಯೋ ಅದರ ಬೇಡಿಕೆಯು ಇಳಿಯುತ್ತದೆ.
10. ಸಹ ಸಂಬಂಧದ ವಿಧಗಳಾವುವು?
ಸಹ ಸಂಬಂಧದ 2 ವಿಧಗಳೆಂದರೆ :
ಎ) ಋಣಾತ್ಮಕ ಸಹಸಂಬಂಧ
ಬಿ) ಧನಾತ್ಮಕ ಸಹಸಂಬಂಧ
11. ಸಹ ಸಂಬಂಧವನ್ನು ಮಾಪನ ಮಾಡುವ ತಂತ್ರಗಳನ್ನು ತಿಳಿಸಿ.
ಸಹ ಸಂಬಂಧವನ್ನು ಮಾಪನ ಮಾಡುವ ತಂತ್ರಗಳೆಂದರೆ :
1) ಚದರಿಕೆಯ ಚಿತ್ರಗಳು
2) ಕಾರ್ಲ್‌ಪಿಯರ್‌ಸನ್‌ರವರ ಸಹಸಂಬಂಧ ಗುಣಾಂಕ
3) ಸ್ಪಿಯರ್‌ಮನ್ ರವರ ಶ್ರೇಣಿ ಸಹಸಂಬಂಧ
12.. ರೇಖಾತ್ಮಕ ಸಂಬಂಧ ಎಂದರೇನು?
ಒಂದು ಸಂಬಂಧವನ್ನು ಒಂದು ಸರಳರೇಖೆಯಿಂದ ಪ್ರತಿನಿಧಿಸಲು ಸಾಧ್ಯವಾದರೆ ಅದನ್ನು ರೇಖಾತ್ಮಕ ಸಂಬಂಧ ಎಂದು ಕರೆಯುತ್ತಾರೆ.
13. ಚದರಿಕೆಯ ಚಿತ್ರದ ತಂತ್ರವನ್ನು ತಿಳಿಸಿ.
ಸಂಬಂಧದ ಸ್ವರೂಪವನ್ನು ಯಾವುದೆ ಸಾಂಖ್ಯಿಕ ಮೌಲ್ಯದಿಂದ ಲೆಕ್ಕ ಮಾಡದೇ, ದೃಶ್ಯರೂಪದಲ್ಲಿ ಪರೀಕ್ಷಿಸಬಹುದಾದ ಒಂದು ಉಪಯುಲ್ತವಾದ ತಂತ್ರವೇ ಚದುರಿಕೆಯ ಚಿತ್ರವಾಗಿದೆ.
14. ಖಚಿತವಾಗಿ ಅಳತೆ ಮಾಡಲು ಕಷ್ಟಸಾಧ್ಯವಾದ ಕೆಲವು ಚಲಕಗಳನ್ನು ಪಟ್ಟಿ ಮಾಡಿ,
ನಿಷ್ಪಕ್ಷಪಾತ, ಜಾತ್ಯಾತೀತತೆ, ಸೌಂದರ್ಯ, ಪ್ರಾಮಾಣಿಕತೆ, ದೇಶಭಕ್ತಿ ಇತ್ಯಾದಿ ಕೆಲವು ಚಲಕಗಳನ್ನು ಖಚಿತವಾಗಿ ಅಳತೆ ಮಾಡಲು ಕಷ್ಟಸಾಧ್ಯ.
15. ‘r’ನ ಮೌಲ್ಯವಾಗಿ 1, -1 ಮತ್ತು 0 ಗಳ ಅರ್ಥವನ್ನು ಚರ್ಚಿಸಿ.
ಒಂದು ವೇಳೆ r = 1 ಎಂದರೆ ಎರಡು ಚಲಕಗಳ ನಡುವೆ ಪರಿಪೂರ್ಣ ಋಣಾತ್ಮಕ ಸಂಬಂಧ ಎಂದರ್ಥ.
r=0 ಎಂದರೆ ಎರಡು ಚಲಕಗಳು ಸಹಸಂಬಂಧವನ್ನು ಹೊಂದಿಲ್ಲ.
16. ಶ್ರೇಣಿ ಸಹಸಂಬಂಧ ಗುಣಾಂಕವು ಪಿಯರ್‌ಸನ್‌ರವರ ಸಹಸಂಬಂಧ ಗುಣಾಂಕಕ್ಕಿಂತ ಯಾಕೆ ಭಿನ್ನವಾಗಿದೆ?
ಶ್ರೇಣಿ ಸಹಸಂಬಂಧ ಗುಣಾಂಕವು ಪಿಯರಸ್‌ರವರ ಸಹಸಂಬಂಧ ಗುಣಾಂಕಕಿಂತ ಬಿನ್ನವಾಗಿದೆ. ಏಕೆಂದರೆ, ಶ್ರೇಣಿಕ ಸಹಸಂಬಂಧ ಗುಣಾಂಕವು ಶ್ರೇಣಿಗಳ ನಡುವಿನ ರೇಖೀಯ ಸಂಬಂಧದ ಮಿತಿಗಳ ಮಾಪನವನ್ನು ಒದಗಿಸುತ್ತದೆಯೇ ಹೊರತು ಅವುಗಳ ಮೌಲ್ಯವನ್ನಲ್ಲ.
17. ತಂದೆಯವರ ಎತ್ತರಗಳು (X) ಮತ್ತು ಅವರ ಮಕ್ಕಳ ಎತ್ತರಗಳ (ಇಂಚುಗಳಲ್ಲಿ) ನಡುವಿನ ಸಹಸಂಬಂಧ ಗುಣಾಂಕವನ್ನು ಲೆಕ್ಕಚಾರ ಮಾಡಿ.
18. ಚದರಿಕೆಯ ಚಿತ್ರದ ಗುಣಗಳು ಮತ್ತು ದೋಷಗಳಾವುವು?
ಗುಣಗಳು
1) ಎರಡು ಚಲಕಗಳ ನಡುವಿನ ಸಹಸಂಬಂಧವನ್ನು ತುಂಬಾ ಸರಳ ವಿಧಾನದಿಂದ ಅಧ್ಯಯನ ಮಾಡುವುದು,
2) .ಚಲಕಗಳಿಗೆ ಸಂಬಂಧವಿದೆ ಅಥವಾ ಇಲ್ಲ ಎಂಬುದನ್ನು ತಿಳಿಯಲು ಚಿತ್ರಗಳು ಸಾಕಾಗಿದೆ.
3) ಚದರಿಕೆಯ ಚಿತ್ರವು ಧನಾತ್ಮಕ ಅಥವಾ ಋಣಾತ್ಮಕ ಸಂಬಂಧವನ್ನು ಸಹ ಸೂಚಿಸುತ್ತದೆ.
ದೋಷಗಳು :
1) ಚದರಿಕೆಯ ಚಿತ್ರ ಸ್ಪಷ್ಟವಾಗಿ ಮಾಪನ ಮಾಡುವುದಿಲ್ಲ.
2) ಇದು ಸಂಬಂಧದ ಬಗ್ಗೆ ಕೇವಲ ಅಂದಾಜಿನ ಕಲ್ಪನೆಯನ್ನು ನೀಡುತ್ತದೆ.
3) ಇದು ಪರಿಮಾಣಾತ್ಮಕ ಬದಲಾವಣೆಯನ್ನು ಕೇವಲ ಗುಣಾತ್ಮಕವಾಗಿ ತೋರಿಸುತ್ತದೆ.
19. ಸಹಸಂಬಂಧ ಗುಣಾಂಕದ ಗುಣಲಕ್ಷಣಗಳನ್ನು ವಿವರಿಸಿ.
ಸಹಸಂಬಂಧ ಗುಣಾಂಕದ ಲಕ್ಷಣಗಳೆಂದರೆ :
1) rಗೆ ಯಾವುದೇ ಮೂಲಮಾನವಿಲ್ಲ. ಅದು ಒಂದು ಶುದ್ಧ ಸಂಖ್ಯೆಯಾಗಿದೆ. ಇದರ ಅರ್ಥ, ಅಳತೆಯ ಮಾನಗಳು r ದ ಭಾಗವಾಗಿಲ್ಲ.
2) r ನ ಋಣಾತ್ಮಕ ಮೌಲ್ಯಗಳು ವಿಲೋಮ ಸಂಬಂಧವನ್ನು ಸೂಚಿಸುತ್ತದೆ. ಒಂದು ಚಲಕದಲ್ಲಿ ಉಂಟಾಗುವ ಬದಲಾವಣೆಯು ಇನ್ನೊಂದು ಚಲಕದ ವಿರುದ್ಧ ದಿಕ್ಕಿನಲ್ಲಿ ಉಂಟಾಗುವ ಬದಲಾವಣೆಗೆ ಸಂಬಂಧವನ್ನು ಹೊಂದಿದೆ.
3) rಧನಾತ್ಮಕವಾಗಿದ್ದರೆ ಎರಡೂ ಚಲಕಗಳು ಒಂದೇ ದಿಕ್ಕಿನಲ್ಲಿ ಚಲಿಸುತ್ತವೆ.
4) ಸಹ ಸಂಬಂಧ ಗುಣಾಂಕದ ಮೌಲ್ಯವು, -1 ಮತ್ತು +1ರ ನಡುವೆ ಇರುತ್ತದೆ. rನ ಮೌಲ್ಯವು ವ್ಯಾಪ್ತಿಯ ಹೊರಗಡೆ ಇದ್ದರೆ, ಅದು ಲೆಕ್ಕಾಚಾರದಲ್ಲಿ ದೋಷವಿದೆ ಎಂದು ಸೂಚಿಸುತ್ತದೆ.
5) r=0 ಆದರೆ ಎರಡು ಚಲಕಗಳು ಸಹಸಂಬಂಧವನ್ನು ಹೊಂದಿಲ್ಲ.
6) r=1 ಅಂದರೆ ಸಹಸಂಬಂಧವು ಪರಿಪೂರ್ಣವಾಗಿದೆ.
7) rನ ಅಧಿಕ ಮೌಲ್ಯವು ಬಲವಾದ ಸರಳರೇಖಾ ಸಂಬಂಧವನ್ನು ಸೂಚಿಸುತ್ತದೆ. ಅದು +1 ಅಥವಾ -1ರ ಅತ್ಯಂತ ಸಮೀಪದಲ್ಲಿದ್ದರೆ, ಅದರ ಮೌಲ್ಯವು ಅಧಿಕವಾಗಿದೆ ಎಂದು ಹೇಳಲಾಗುತ್ತದೆ.
8) rನ ಕಡಿಮೆ ಮೌಲ್ಯವು ದುರ್ಬಲ ಸರಳ ರೇಖಾ ಸಂಬಂಧವನ್ನು ಸೂಚಿಸುತ್ತವೆ.
FAQ :
ಎರಡು ಚಲಕಗಳ ನಡುವಿನ ಸಂಬಂಧವನ್ನು ಪರೀಕ್ಷಿಸುವುದನ್ನು ಸಹಸಂಬಂಧ ಎನ್ನುವರು.
ಸಹಸಂಬಂಧವು ಚಲಕಗಳ ನಡುವೆ ಇರುವ ಸಂಬಂಧದ ದಿಕ್ಕು ಮತ್ತು ತೀವತೆಗಳನ್ನು ಅಧ್ಯಯನ ಮಾಡುತ್ತದೆ ಮತ್ತು ಅಳತೆ ಮಾಡುತ್ತದೆ. ಇಲ್ಲಿ ಎರಡು ಚಲಕಗಳಾದ x & y ಗಳ ನಡುವೆ ಸಂಬಂಧ ಅಸ್ತಿತ್ವದಲ್ಲಿದೆ.
ಬೆಲೆ, ಆದಾಯ, ತೂಕ ಮುಂತಾದ ಚಲಕಗಳನ್ನು ಅರ್ಥಪೂರ್ಣವಾಗಿರುವಂತೆ ಅಳತೆ ಮಾಡಲು ಸಾಧ್ಯವಿಲ್ಲದಿದ್ದಾಗ ಶೇಣಿ ಸಹಸಂಬಂಧವನ್ನು ಉಪಯೋಗಿಸುತ್ತಾರೆ. ಅಳತೆಗಳು ಸಂಶಯಾಸ್ಪದವಾಗಿದ್ದಲ್ಲಿ, ಶ್ರೇಣಿ ಸಂಬಂಧದ ಬಳಕೆಯು ಹೆಚ್ಚು ಅರ್ಥಪೂರ್ಣವಾಗಿರುತ್ತದೆ.
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್
1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.