ಪ್ರಥಮ ಪಿ.ಯು.ಸಿ ಹರವಿನ ಅಳತೆಗಳು ಅರ್ಥಶಾಸ್ತ್ರ ನೋಟ್ಸ್‌ | 1st Puc Economics Chapter 16 Notes

ಪ್ರಥಮ ಪಿ.ಯು.ಸಿ ಹರವಿನ ಅಳತೆಗಳು ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು,1st Puc Economics Chapter 16 Notes Question Answer Mcq Pdf Download in Kannada Medium 2023 Kseeb Solutions For Class 11 Economics Chapter 16 Notes 1st Puc Haravina alategalu Economics Notes in Kannada Measures of Dispersion in Statistics Notes

 

1. ಆವೃತ್ತಿ ವಿತರಣೆಯನ್ನು ಅರಿಯಲು ಹರವಿನ ಅಳತೆಯೊಂದು ಕೇಂದ್ರೀಯ ಮೌಲ್ಯಕ್ಕೆ ಒಂದು ಉತ್ತಮ ಉಪ ಅಳತೆಯಾಗಿದೆ. ಅಭಿಪ್ರಾಯ ವ್ಯಕ್ತಪಡಿಸಿ

ಆವೃತ್ತಿ ವಿತರಣೆಯನ್ನು ಅರಿಯಲು ಹರಿವಿನ ಅಳತೆಯೊಂದು ಕೇಂದ್ರೀಯ ಮೌಲ್ಯಕ್ಕೆ ಒಂದು ಉತ್ತಮ ಉಪ ಅಳತೆಯಾಗಿದೆ. ಹರವು (ಚದರಿಕೆ) ಎಂಬುದು ಒಂದು ಮಾಪನವಾಗಿದ್ದು ವಿತರಣೆಯಲ್ಲಿನ ಪ್ರಾಪ್ತಾಂಕಗಳು ವಿತರಣೆಯ ಸರಾಸರಿಗಿಂತ ಎಷ್ಟು ಭಿನ್ನವಾಗಿದೆ ಎಂಬುದನ್ನು ತಿಳಿಸುತ್ತದೆ. ಸರಾಸರಿಗಳು ವಿತರಣೆಯ ಒಂದು ನಿರ್ದಿಷ್ಟ ಅಂಶವನ್ನು ಅಂದರೆ ಪ್ರಾಪ್ತಾಂಕಗಳ ಪ್ರಾತಿನಿಧಿಕ ಮೌಲ್ಯದ ಗಾತ್ರವನ್ನು ಮಾತ್ರ ಹೇಳಲು ಪ್ರಯತ್ನಿಸುತ್ತದೆ. ಇದನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕೆಂದರೆ ನೀವು ಪ್ರಾಪ್ತಾಂಕಗಳ ಚದರಿಕೆಯನ್ನು ತಿಳಿಯುವುದು ಅಗತ್ಯವಾಗಿದೆ.

ದೇಶದಲ್ಲಿ ಸರಾಸರಿ ಅಥವಾ ಆಸ್ತಿ ಸಮನಾಗಿರಬಹುದು. ಆದರೆ ಅದರ ವಿತರಣೆಯಲ್ಲಿ ವ್ಯತ್ಯಾಸಗಳಿವೆ, ಇದರ ಫಲಿತಾಂಶವಾಗಿ, ಗರಿಷ್ಟ ಜನರು ಬಡತನದ ರೇಖೆಗಿಂತ ಕೆಳಮಟ್ಟದಲ್ಲಿದ್ದಾರೆ. ಆದ್ದರಿಂದ ಹರಿವಿನ ಗುಣಾಂಕದ ಅಳತೆ ಮತ್ತು ಒ೦ದೇ ಮೌಲ್ಯವನ್ನು ತಿಳಿಸುವುದು ಅಗತ್ಯವಿದೆ. ಇದನ್ನು ಉದಾಹರಣೆಗಳ ಮೂಲಕ ವಿವರಿಸಬಹುದಾಗಿದೆ. ಮೂವರು ಸ್ನೇಹಿತರಾದ ರಾಮ್‌ ರಹೀಮ್ ಮತ್ತು ಮರಿಯಾ ಎಂಬುವವರ ಕುಟುಂಬಗಳ ಆದಾಯವನ್ನು ಕೆಳಗೆ ನೀಡಲಾಗಿದೆ. ರಾಮ, ರಹೀಮ ಮತ್ತು ಮರಿಯಾ ಕುಟುಂಬಗಳಲ್ಲಿ ನಾಲ್ಕು, ಆರು ಮತ್ತು ಐದು ಸದಸ್ಯರಿದ್ದಾರೆ.

ಆದರೆ ವೈಯಕ್ತಿಕ ಆದಾಯಗಳಲ್ಲಿ ಗಣನೀಯ ವ್ಯತ್ಯಾಸಗಳಿರುವುದು ಕಂಡುಬರುತ್ತದೆ. ರಾಮನ ಕುಟುಂಬದಲ್ಲಿ, ಆದಾಯಗಳಲ್ಲಿನ ವ್ಯತ್ಯಾಸಗಳು ತುಲನಾತ್ಮಕವಾಗಿ ಕಡಿಮೆಯಿರುವುದು ಕಂಡುಬರುತ್ತದೆ. ರಹೀಮನ ಕುಟುಂಬದಲ್ಲಿ ಸ್ವಲ್ಪ ಹೆಚ್ಚು ವ್ಯತ್ಯಾಸಗಳು ಕಂಡು ಬಂದರೆ, ಮರಿಯಾಳ ಕುಟುಂಬದಲ್ಲಿ ಗರಿಷ್ಟ ವ್ಯತ್ಯಾಸಗಳಿವೆ. ಪ್ರಾಪ್ತಾಂಕಗಳ ವ್ಯತ್ಯಾಸಗಳ ಪ್ರಮಾಣವನ್ನು ತಿಳಿಸುವ ಇನ್ನೊಂದು ಮೌಲ್ಯ ದೊರೆತರೆ, ವಿತರಣೆಯ ಕುರಿತಾದ ತಿಳುವಳಿಕೆ ಹೆಚ್ಚಾಗುತ್ತದೆ.

2. ಹರವಿನ ಯಾವ ಅಳತೆಯು ಅತ್ಯುತ್ತಮವಾಗಿದೆ ಮತ್ತು ಹೇಗೆ?

ಮಾನಕ ವಿಚಲನೆಯು ಹರವಿನ ಅಳತೆಯ ಅತ್ಯುತ್ತಮವಾಗಿದೆ. ಹೇಗೆಂದರೆ ಇದು ಹರವಿನ ಅಳತೆಗಳ ಎಲ್ಲ ಗುಣಲಕ್ಷಣಗಳನ್ನು ಹೊಂದಿದೆ.

3. ಹರವಿನ ಕೆಲವು ಅಳತೆಗಳು ಪ್ರಾಪ್ತಾಂಕಗಳ ಚದುರಿಕೆಯನ್ನೂ ಅವಲಂಬಿಸಿದ್ದರೆ ಮತ್ತೆ ಕೆಲವು ಅಳತೆಗಳು ಕೇಂದ್ರೀಯ ಮೌಲ್ಯದಿಂದ ಇರುವ ಮೌಲ್ಯಗಳ ಆಧಾರದ ಮೇಲೆ ಲೆಕ್ಕ ಮಾಡುತ್ತದೆ. ಇದನ್ನು ನೀವು ಒಪ್ಪುವಿರಾ?

ಹೌದು, ಪ್ರಾಪ್ತಾಂಕಗಳನ್ನು ಒಳಗೊಂಡಿರುವ ಚದುರಿಕೆಯನ್ನು ಲೆಕ್ಕ ಮಾಡುವ ಮೂಲಕ ವ್ಯಾಪ್ತಿ ಮತ್ತು ಚತುರ್ಥಕ ವಿಚಲನೆಗಳು ಹರವನ್ನು ಅಳತೆ ಮಾಡುತ್ತವೆ. ಮತ್ತೊಂದು ಕಡೆ, ಪ್ರಾಪ್ತಾಂಕಗಳು ಸರಾಸರಿಯಿಂದ ಎಷ್ಟರ ಮಟ್ಟಿಗೆ ವ್ಯತ್ಯಾಸವನ್ನು ಹೊಂದಿದೆ ಎಂಬುದನ್ನು ಸರಾಸರಿ ವಿಚಲನೆ ಮತ್ತು ಮಾನಕ ವಿಚಲನೆಗಳು ಲೆಕ್ಕ ಮಾಡುತ್ತವೆ.

4. ಒಂದು ಪಟ್ಟಣದಲ್ಲಿ ಶೇಕಡ 25ರಷ್ಟು ಜನರು 45000 ರೂಗಿಂತ ಹೆಚ್ಚು ಹಣವನ್ನು ಮತ್ತು ಶೇಕಡ 75ರಷ್ಟು ಜನರು 18000ರೂ ಗಳಿಗಿಂತ ಹೆಚ್ಚು ಹಣವನ್ನು ಗಳಿಸುತ್ತಾರೆ. ಹರಿವಿನ ನಿರಪೇಕ್ಷ ಮತ್ತು ಸಾಪೇಕ್ಷ ಮೌಲ್ಯಗಳನ್ನು ಲೆಕ್ಕ ಮಾಡಿ,

5. ಒಂದು ರಾಜ್ಯದ 10 ಜಿಲ್ಲೆಗಳಲ್ಲಿನ ಪ್ರತಿ ಎಕರೆವಾರು ಗೋಧಿ ಮತ್ತು ಭತ್ತದ ಇಳುವರಿಯು ಈ ಕೆಳಗಿನಂತಿವೆ.

FAQ :

1. ಹರವು ಎಂದರೇನು ?

ಹರವು ಎಂಬುದು ಒಂದು ಮಾಪನವಾಗಿದ್ದು ವಿತರಣೆಯಲ್ಲಿನ ಪ್ರಾಪ್ತಾಂಕಗಳು ವಿತರಣೆಯ ಸರಾಸರಿಗಿಂತ ಎಷ್ಟು ಭಿನ್ನವಾಗಿದೆ ಎಂಬುದನ್ನು ತಿಳಿಸುತ್ತದೆ.

2. ವ್ಯಾಪ್ತಿ ಎಂದರೇನು ?

ಒಂದು ವಿತರಣೆಯಲ್ಲಿನ ಗರಿಷ್ಟ ಪ್ರಾಪ್ತಾಂಕ ಮತ್ತು ಕನಿಷ್ಟ ಪ್ರಾಪ್ತಾಂಕಗಳ ನಡುವಿನ ವ್ಯತ್ಯಾಸವನ್ನು ವ್ಯಾಪ್ತಿ ಎಂದು ಕರೆಯುತ್ತೇವೆ.

ಇತರೆ ವಿಷಯಗಳು :

1st Puc All Subject Notes

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

First PUC All Textbooks Pdf

1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್

1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ 

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh