10ನೇ ತರಗತಿ ಅಧ್ಯಾಯ-18 ಸ್ವಾತಂತ್ರ್ಯ ಹೋರಾಟ ಸಮಾಜ ವಿಜ್ಞಾನ ನೋಟ್ಸ್‌ | 10th Standard Social Science Chapter 18 Notes Question Answer

10ನೇ ತರಗತಿ ಅಧ್ಯಾಯ-18 ಸ್ವಾತಂತ್ರ್ಯ ಹೋರಾಟ ಸಮಾಜ ವಿಜ್ಞಾನ ನೋಟ್ಸ್‌, 10th Social Science Chapter 18 Notes Question Answer Pdf in Kannada Medium 2024 10th Swatantra Horata Social Science Notes Sslc Social Science Chapter 18 Mcq Pdf in Kannada Kseeb Solution For Class 10 Social Science History Chapter 18 Notes Question Answer Class 10 Social Science Chapter 18 Question Answer

 
10th Standard Social Science Chapter 18 Notes
10th Standard Social Science Chapter 18 Notes

Class 10 Social Science History Chapter 18 Question Answer

I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ

1. ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನು 1885 ರಲ್ಲಿ ಸ್ಥಾಪಿಸಲಾಯಿತು.

2. ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ತಿಳಿಸಿದವರು ದಾದಾಬಾಯಿ ನವರೋಜಿ

3. ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂದು ಬಾಲಗಂಗಾಧರ ತಿಲಕರವರು ಘೋಷಿಸಿದರು.

4. ಬಾಲಗಂಗಾಧರ ತಿಲಕರು ಮರಾಠಿ ಭಾಷೆಯಲ್ಲಿ ಕೇಸರಿ ಪತ್ರಿಕೆಯನ್ನು ಪ್ರಕಟಿಸಿದರು.

5. ಅಭಿನವ ಭಾರತ ಎಂಬ ರಹಸ್ಯ ಸಂಘಟನೆಯನ್ನು ಕ್ರಾಂತಿಕಾರಿಗಳು ಗಳು ಹೊಂದಿದ್ದರು,

II. ಕೆಳಗಿನ ಪ್ರಶ್ನೆಗಳಿಗೆ ಒಂದು ಉತ್ತರಿಸಿ

1. ‘ಭಾರತ ರಾಷ್ಟ್ರೀಯ ಕಾಂಗ್ರೆಸ್ ನ್ನು ಯಾವಾಗ ಸ್ಥಾಪನೆ ಮಾಡಲಾಯಿತು?

1885

2. ‘ಭಾರತ ರಾಷ್ಟ್ರೀಯ ಕಾಂಗ್ರೆಸ್’ ಯಾವ ರಾಷ್ಟ್ರೀಯ ಸಮಾವೇಶದಲ್ಲಿ ಹುಟ್ಟಿಕೊಂಡಿತು?

ಬಾಂಬೆ

3, ‘ಭಾರತ ರಾಷ್ಟ್ರೀಯ ಕಾಂಗ್ರೆಸ್’ ಮೊದಲ ಅಧ್ಯಕ್ಷರು ಯಾರು?

W.C ಬ್ಯಾನರ್ಜಿ

4. ‘ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕರು ಯಾರು?

ಎ.ಓ ಹ್ಯೂಮ್

5. ‘ಮಂದಗಾಮಿ ಯುಗ’ ಎಂದರೇನು?

ಸಾಂಪ್ರದಾಯಿಕವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪ್ರಾರಂಭದ ಇಪ್ಪತ್ತು ವರ್ಷಗಳನ್ನು ‘ಮಂದಗಾಮಿ ಯುಗ’ ಎನ್ನುತ್ತಾರೆ.

6, ಮಂದಗಾಮಿ ನಾಯಕರುಗಳನ್ನು ಹೆಸರಿಸಿ,

W.C ಬ್ಯಾನರ್ಜಿ, ಎಂ.ಜಿ. ರಾನಡೆ, ಸುರೇಂದ್ರನಾಥ ಬ್ಯಾನರ್ಜಿ, ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ

7. ‘ಸಂಪತ್ತಿನ ಸೋರುವಿಕೆ ಸಿದ್ಧಾಂತ’ದ ಪ್ರತಿಪಾದಕರು ಯಾರು?

ದಾದಾಬಾಯಿ ನವರೋಜಿ

8. ‘ಸಂಪತ್ತಿನ ಸೋರುವಿಕೆ ಸಿದ್ಧಾಂತ’ ಎಂದರೇನು?

ಭಾರತದ ಸಂಪತ್ತು ಯಾವ ರೀತಿಯಲ್ಲಿ ಇಂಗ್ಲೆಂಡಿಗೆ ಸೋರಿ ಹೋಗುತ್ತಿದೆ ಎಂಬುದನ್ನು ಅಂಕಿ ಅಂಶಗಳೊಂದಿಗೆ ಅವರು ವಿವರಿಸಿದರು. ದಾದಾಬಾಯಿ ನವರೋಜಿಯವರು ಅವರು ಅದನ್ನು ‘ಸಂಪತ್ತಿನ ಸೋರುವಿಕೆ ಸಿದ್ಧಾಂತ’ ಎಂದು ಕರೆದರು.

9. ತೀವ್ರವಾದಿಗಳು ಯಾರನ್ನು ರಾಜಕೀಯ ಭಿಕ್ಷುಕರು ಎಂದು ಕರೆದರು?

ತೀವ್ರವಾದಿಗಳು ಮಂದಗಾಮಿಗಳನ್ನು ರಾಜಕೀಯ ಭಿಕ್ಷುಕರು ಎಂದು ಕರೆದರು

10. ತೀವ್ರವಾದಿ ನಾಯಕರುಗಳನ್ನು ಹೆಸರಿಸಿ,

ಅರಬಿಂದೋ ಘೋಷ್, ಬಿಪಿನ್ ಚಂದ್ರ ಪಾಲ್, ಲಾಲ ಲಜಪತ ರಾಯ್ ಮತ್ತು ಬಾಲಗಂಗಾಧರ್

11. ಬಂಗಾಳದ ವಿಭಜನೆಯನ್ನು ಮಾಡಿದವರು ಯಾರು?

ಲಾರ್ಡ ಕರ್ಜನ್

12.ಬಂಗಾಳದ ವಿಭಜನಗೆ ಮುಖ್ಯ ಕಾರಣವೇನು?

ಬಂಗಾಳವು ತೀವ್ರ ಸ್ವರೂಪದ ಬ್ರಿಟಿಷ್ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರವಾಗಿತ್ತು. ಇದನ್ನು ಹತ್ತಿಕ್ಕಲು ಬಂಗಾಳವನ್ನು ವಿಭಜಿಸಲಾಯಿಸಲಾಯಿತು.

13. ಬಂಗಾಳದ ವಿಭಜನೆಯನ್ನು ಯಾವಾಗ ಮಾಡಲಾಯಿತು?

1905

14. ‘ಸ್ವರಾಜ್ಯವು ನನ್ನ ಜನ್ಮ ಸಿದ್ಧ ಹಕ್ಕು; ಅದನ್ನು ಪಡೆದೇ ತೀರುವೆ’ ಎಂದು ಘೋಷಿಸಿದವರು ಯಾರು?

ಬಾಲಗಂಗಾಧರ ತಿಲಕ್

15. ಬಾಲಗಂಗಾಧರ ತಿಲಕರು ಆರಂಭಿಸಿದ ಪತ್ರಿಕೆಗಳು ಯಾವುವು?

ತಿಲಕರು ಮರಾಠಿ ಭಾಷೆಯಲ್ಲಿ ‘ಕೇಸರಿ’ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮರಾಠ’ ಪತ್ರಿಕೆಗಳನ್ನು ಆರಂಭಿಸಿದರು.

16, ‘ಗೀತಾರಹಸ್ಯ’ ಎಂಬ ಗ್ರಂಥವನ್ನು ರಚಿಸಿದವರು ಯಾರು?

ಬಾಲಗಂಗಾಧರ ತಿಲಕ್

17. ಇಂಗ್ಲೆಂಡಿನ ಗುಪ್ತ ಸಂಘಟನೆಗಳನ್ನು ಹೆಸರಿಸಿ.

ಲೋಟಸ್ ಮತ್ತು ಡಾಗ‌ರ್

18. ಕ್ರಾಂತಿಕಾರಿ ನಾಯಕರುಗಳನ್ನು ಹೆಸರಿಸಿ,

ವಿ.ಡಿ. ಸಾವರ್ಕರ್, ಅರಬಿಂದೋ ಘೋಷ್, ಅಶ್ವಿನಿಕುಮಾರದತ್ತ, ರಾಜನಾರಾಯಣ ಬೋಸ್, ರಾಜಗುರು, ರಾಸ್ ಬಿಹಾರಿ ಬೋಸ್, ಮ್ಯಾಡಮ್ ಕಾಮಾ, ಖುದಿರಾಮ್ ಬೋಸ್, ರಾಮ್ ಪ್ರಸಾದ ಬಿಸ್ಮಿಲ್, ಅಶ್ಚಯಿಲ್ಲಾಖಾನ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್‌ ಜತಿನ್‌ ದಾಸ್

III. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,

1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸ್ಥಾಪನೆಗೆ ಮೊದಲು ಇದ್ಧ ಸಂಘಟನೆಗಳು ಯಾವುವು?

  • ‘ದ ಹಿಂದೂ ಮೇಳ’
  • ‘ದ ಈಸ್ಟ್ ಇಂಡಿಯನ್ ಅಸೋಸಿಯೇಷನ್’
  • ‘ಪೂನಾ ಸಾರ್ವಜನಿಕ ಸಭಾ’
  • ‘ದ ಇಂಡಿಯನ್ ಅಸೋಸಿಯೇಷನ್’

2. ಬ್ರಿಟಿಷ್ ಸರ್ಕಾರದ ಮುಂದಿಟ್ಟ ಮಂದಗಾಮಿಗಳ ಬೇಡಿಕೆಗಳಾವುವು?

  • ದೇಶದ ಕೈಗಾರಿಕೆಗಳ ಅಭಿವೃದ್ಧಿ
  • ಸೈನಿಕ ವೆಚ್ಚ ಕಡಿಮೆ ಮಾಡುವುದು
  • ಉತ್ತಮ ಶಿಕ್ಷಣ ಕೊಡುವುದು
  • ಬಡತನದ ಬಗ್ಗೆ ಅಧ್ಯಯನ
  • ಪರಿಹಾರ ಕಾರ್ಯಕ್ರಮಗಳನ್ನು ಬ್ರಿಟಿಷ್ ಸರ್ಕಾರ ಕೈಗೊಳ್ಳಬೇಕೆಂದು ಒತ್ತಾಯಿಸುವುದು

3. ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ವಿವರಿಸಿ.

  • ಭಾರತದ ಸಂಪತ್ತು ಯಾವ ರೀತಿಯಲ್ಲಿ ಇಂಗ್ಲೆಂಡಿಗೆ ಸೋರಿ ಹೋಗುತ್ತಿದೆ ಎಂಬುದನ್ನು ಅಂಕಿ ಅಂಶಗಳೊಂದಿಗೆ ಸಂಪತ್ತಿನ ಸೋರಿಕೆ ಸಿದ್ಧಾಂತದಲ್ಲಿ ವಿವರಿಸಲಾಯಿತು.
  • ದಾದಾಬಾಯಿ ನವರೋಜಿಯವರು ಅವರು ಅದನ್ನು ‘ಸಂಪತ್ತಿನ ಸೋರುವಿಕೆ ಸಿದ್ಧಾಂತ’ ಎಂದು ಕರೆದರು.
  • ಆಮದನ್ನು ಹೆಚ್ಚಿಸಿ ರಜ್ಜನ್ನು ಕಡಿಮೆ ಮಾಡಿದ್ದರಿಂದ ಪ್ರತಿಕೂಲ ಸಂದಾಯ ಉಂಟಾಗಿ ದೇಶದ ಸಂಪತ್ತು ಇಂಗ್ಲೆಂಡಿಗೆ ಹರಿಯಲು ಕಾರಣವಾಯಿತೆಂದು ಅವರು ಪ್ರತಿಪಾದಿಸಿದರು.
  • ಬ್ರಿಟಿಷ್ ಅಧಿಕಾರಿಗಳಿಗೆ ನೀಡುತ್ತಿದ್ದ ವೇತನ, ನಿವೃತ್ತಿ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭಾರತವೇ ಭರಿಸಬೇಕಾದ ಹಿನ್ನೆಲೆಯಲ್ಲಿ ಅಪಾರವಾದ ಸಂಪತ್ತು ಬ್ರಿಟನ್ನಿಗೆ ಪರೋಕ್ಷವಾಗಿ ಹರಿದು ಹೋಗುತ್ತಿತ್ತು ಎಂಬುದನ್ನು ಅವರು ವಿವರವಾಗಿ ವಿಶ್ಲೇಷಿಸಿ, ಜನರ ಮುಂದಿಟ್ಟರು.

4. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿನ ಕ್ರಾಂತಿಕಾರಿಗಳ ಹೋರಾಟದ ವಿಧಾನವನ್ನು ವಿವರಿಸಿ

  • ಕ್ರಾಂತಿಕಾರಿಗಳು ಪೂರ್ಣ ಸ್ವಾತಂತ್ರ್ಯದ ಕನಸನ್ನು ಕಂಡಿದ್ದರು.
  • ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಹಿಂಸಾತ್ಮಕ ಮಾರ್ಗದಿಂದ ಮಾತ್ರ ಭಾರತದಿಂದ ಓಡಿಸಬಹುದೆಂದು ಅವರು ಬಲವಾಗಿ ನಂಬಿದ್ದರು.
  • ಇವರುಗಳು ರಹಸ್ಯಸಂಘಗಳ ಮೂಲಕ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸಿ ಹಣಕಾಸು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕಾರ್ಯದೊಂದಿಗೆ ಕ್ರಾಂತಿಕಾರಿಗಳಿಗೆ ತರಬೇತಿ ನೀಡಿದರು.
  • ಇಂಗ್ಲೆಂಡಿನಲ್ಲಿ ‘ಲೋಟಸ್ ಮತ್ತು ಡಾಗ‌’ ಎನ್ನುವ ಗುಪ್ತ ಸಂಘಟನೆ ಹುಟ್ಟಿತು.
  • ಅದರ ಮೂಲಕ ಅಲ್ಲಿದ್ದ ಅರಬಿಂದೋ ಘೋಷ್ ಮುಂತಾದ ಕ್ರಾಂತಿಕಾರಿಗಳು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಒತ್ತಾಸೆಯನ್ನು ನೀಡಿದರು.
  • ಹಾಗೆಯೇ ಅಮೆರಿಕದಲ್ಲಿ ಪ್ರಾರಂಭವಾದ “ಗದ’ ಕ್ರಾಂತಿಕಾರಿ ಸಂಘಟನೆಯನ್ನು ಹೆಸರಿಸಬಹುದು.
  • ಹಾಗೆಯೇ ಭಾರತದಲ್ಲಿದ್ದ ‘ಅನುಶೀಲನ ಸಮಿತಿ’ ಮತ್ತು ‘ಅಭಿನವ ಭಾರತ’ ರಹಸ್ಯ ಸಂಘಟನೆಗಳು ಮುಖ್ಯವಾದವು. ಇವರು ತಮ್ಮ ಗುರಿ ಸಾಧನೆಗಾಗಿ ಬಾಂಬುಗಳು ಮತ್ತು ಬಂದೂಕುಗಳ ಪ್ರಯೋಗ ಮಾಡಿದರು.
  • ಸರ್ಕಾರವು ಇವರನ್ನು ಹತ್ತಿಕ್ಕುವ ಸರ್ವ ಪ್ರಯತ್ನವನ್ನು ಮಾಡಿತು.
  • ಕ್ರಾಂತಿಕಾರಿಗಳನ್ನು ಕೊಲೆ ಸಂಚಿನ ಆರೋಪದ ಮೇಲೆ ಬಂಧಿಸಲಾಯಿತು.

5. ಸ್ವಾತಂತ್ರ ಚಳವಳಿಯಲ್ಲಿ ಬಾಲಗಂಗಾಧರ ತಿಲಕರ ಪಾತ್ರವನ್ನು ವಿವರಿಸಿ,

  • ತಿಲಕರು ‘ಸ್ವರಾಜ್ಯವು ನನ್ನ ಜನ್ಮ ಸಿದ್ಧ ಹಕ್ಕು; ಅದನ್ನು ಪಡೆದೇ ತೀರುವೆ’ ಎಂದು ಘೋಷಿಸುವ ಮೂಲಕ ಬಹುಸಂಖ್ಯಾತ ಭಾರತೀಯರ ಮನದಾಳದ ಭಾವನೆಯನ್ನು ಹೊರಹಾಕಿದರು.
  • ಪೂರ್ಣ ಸ್ವರಾಜ್ಯವನ್ನು ಪಡೆಯುವುದು ತೀವ್ರವಾದಿಗಳ ಗುರಿಯಾಗಿತ್ತು.
  • ಇವರು ಸ್ವಾತಂತ್ರ್ಯ ಹೋರಾಟಕ್ಕೆ ಜನಸಾಮಾನ್ಯರನ್ನು ಸಂಘಟಿಸುವ ಪ್ರಯತ್ನ ಮಾಡಿದರು.
  • ಈ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳ ಮೂಲಕ ಜನರನ್ನು ಸಂಘಟಿಸಿ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಅವರನ್ನು ಸಜ್ಜುಗೊಳಿಸಿದರು.
  • ಗಣೇಶ, ಶಿವಾಜಿ, ದುರ್ಗಾ ಮುಂತಾದ ಉತ್ಸವಗಳ ಮೂಲಕ ಜನರನ್ನು ಹೋರಾಟಕ್ಕೆ ಪ್ರೇರೇಪಿಸಿದರು.
  • ತಿಲಕರು ಮರಾಠಿ ಭಾಷೆಯಲ್ಲಿ ‘ಕೇಸರಿ’ ಮತ್ತು ಇಂಗ್ಲಿಷ್ ಭಾಷೆಯಲ್ಲಿ ‘ಮರಾಠ’ ಪತ್ರಿಕೆಗಳನ್ನು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಬಳಸಿಕೊಂಡರು.
  • ಈ ಪತ್ರಿಕೆಗಳ ಮೂಲಕ ಜನಸಾಮಾನ್ಯರನ್ನು ರಾಷ್ಟ್ರೀಯ ಹೋರಾಟಕ್ಕೆ ಪ್ರೇರೇಪಿಸಿದರು. ಅವರ
  • ಕ್ರಾಂತಿಕಾರಕ ಬರವಣಿಗೆಗಳು ಜನರನ್ನು ಕೆರಳಿಸಿದವು.ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರವು ತಿಲಕರನ್ನು ಬಂಧಿಸಿತು.
  • ಜೈಲಿನಲ್ಲಿಯ ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ತಿಲಕರು ‘ಗೀತಾರಹಸ್ಯ’ ಗ್ರಂಥವನ್ನು ರಚಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ತೀವ್ರತೆಯನ್ನು ತಂದುಕೊಟ್ಟರು.

6. ಬಂಗಾಳ ವಿಭಜನೆಯನ್ನು ಹಿಂಪಡೆಯಲು ಕಾರಣಗಳೇನು?

  • ಬ್ರಿಟಿಷರ ಒಡೆದು ಆಳುವ ನೀತಿಯ ಪ್ರತೀಕವಾಗಿದ್ದ 1905ರ ಬಂಗಾಳ ವಿಭಜನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ವಿರೋಧಿಸಿತು.
  • ಆದರೆ ಬಂಗಾಳಿ ಭಾಷೆಯು ಮುಸ್ಲಿಂ ಮತ್ತು ಹಿಂದೂ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯಾಗಿ ಪರಿಣಮಿಸಿತು.
  • ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಸಾಧಿಸಲು ರಕ್ಷಾಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
  • ಬಂಗಾಳದ ವಿಭಜನೆಯ ವಿರುದ್ಧ ದೇಶದಾದ್ಯಂತ ಪ್ರತಿರೋಧಗಳು ವ್ಯಕ್ತವಾದವು.
  • ಪ್ರತಿರೋಧದ ಒಂದು ಬಗೆಯಾಗಿ ಸ್ವದೇಶಿ ಚಳವಳಿಯನ್ನು ಪ್ರಾರಂಭಿಸಲಾಯಿತು.
  • ಇದನ್ನು ದೇಶದಾದ್ಯಂತ ಕೊಂಡೊಯ್ದವರು ತೀವ್ರವಾದಿಗಳು,
  • ವಿದೇಶಿ ವಸ್ತುಗಳು ಮತ್ತು ಅದನ್ನು ಪ್ರೋತ್ಸಾಹಿಸುವ ಸಂಸ್ಥೆಗಳನ್ನು ಬಹಿಷ್ಕರಿಸಲು ಸ್ವದೇಶಿ ಆಂದೋಲನಕ್ಕೆ ಕರೆ ನೀಡಿದರು.
  • ಸ್ವದೇಶಿ ವಸ್ತುಗಳನ್ನು ಬಳಸುವಂತೆ ಅವರು ಭಾರತೀಯರನ್ನು ಪ್ರೇರೇಪಿಸಿದರು.
  • ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಂಗಾಳದ ವಿಭಜನೆಯನ್ನು 1911ರಲ್ಲಿ ಬ್ರಿಟಿಷ್ ಸರ್ಕಾರವು ಹಿಂಪಡೆಯಿತು.‌

FAQ

1. ‘ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕರು ಯಾರು?

ಎ.ಓ ಹ್ಯೂಮ್

2. ‘ಮಂದಗಾಮಿ ಯುಗ’ ಎಂದರೇನು?

ಸಾಂಪ್ರದಾಯಿಕವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪ್ರಾರಂಭದ ಇಪ್ಪತ್ತು ವರ್ಷಗಳನ್ನು ‘ಮಂದಗಾಮಿ ಯುಗ’ ಎನ್ನುತ್ತಾರೆ.

2, ‘ಗೀತಾರಹಸ್ಯ’ ಎಂಬ ಗ್ರಂಥವನ್ನು ರಚಿಸಿದವರು ಯಾರು?

ಬಾಲಗಂಗಾಧರ ತಿಲಕ್

ಇತರೆ ವಿಷಯಗಳು:

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ವಿಜ್ಞಾನ ಎಲ್ಲಾ ಪಾಠಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh