‌10ನೇ ತರಗತಿ ಅಧ್ಯಾಯ -5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಸಮಾಜ ವಿಜ್ಞಾನ ನೋಟ್ಸ್ | 10th Standard Social Science Chapter 5 Notes In Kannada

10ನೇ ತರಗತಿ ಅಧ್ಯಾಯ -5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಸಮಾಜ ವಿಜ್ಞಾನ ನೋಟ್ಸ್, 10th Class Social Science Chapter 5 Notes in Kannada 2024 Kseeb Solution For Class 10 Chapter 5 Notes samajika mattu dharmika sudharana chaluvaligalu Question Answer Pdf Mcq in Kannada class 10 social science history chapter 5 Notes Kannada Medium sslc social science chapter 5

 

10th Class Social Science Chapter 5 Notes in Kannada

10th Standard Social Science Chapter 5 Notes In Kannada
10th Class Social Science Chapter 5

Class 10 Social Science History Chapter 5 Notes

I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.

1. 19ನೆಯ ಶತಮಾನವನ್ನು ಭಾರತೀಯ ನವೋದಯ ಕಾಲವೆಂದು ಕರೆಯಲಾಗಿದೆ.

2. ರಾಜಾ ರಾಮ್‌ ಮೋಹನರಾಯರು ಸಂವಾದ ಕೌಮುದಿ ಪತ್ರಿಕೆಯನ್ನು ಪ್ರಾರಂಭಿಸಿದರು.

3. ಪ್ರಾರ್ಥನಾ ಸಮಾಜದ ಸ್ಥಾಪಕರು ಆತ್ಮಾರಾಮ್ ಪಾಂಡುರಂಗ

4. ಯುವಬಂಗಾಳಿ ಚಳವಳಿಯನ್ನು ಪ್ರಾರಂಭಿಸಿದವರು ಹೆನ್ರಿ ವಿವಿಯನ್ ಡಿರೇಜಿಯೋ

5. ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು ರಾಮಕೃಷ್ಣ ಪರಮಹಂಸ

6. ಆಂಗ್ಲೋ ಓರಿಯಂಟಲ್ ಕಾಲೇಜನ್ನು ಆಲಿಘರ್ ಎಂಬಲ್ಲಿ ಸ್ಥಾಪಿಸಲಾಗಿದೆ.

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ,

1. 19ನೇ ಶತಮಾನವನ್ನು ಭಾರತದ ಚರಿತ್ರೆಯಲ್ಲಿ ಏನೆಂದು ಚಿತ್ರಿಸಲಾಗಿದೆ?

19ನೇ ಶತಮಾನವನ್ನು ಭಾರತದ ಚರಿತ್ರೆಯಲ್ಲಿ ಸಮಾಜ ಸುಧಾರಣಾ ಕಾಲ ಮತ್ತು ಭಾರತೀಯ ನವೋದಯ ಕಾಲವೆಂದು ಚಿತ್ರಿಸಲಾಗಿದೆ.

2. “ಬಿಳಿಯನ ಮೇಲಿನ ಹೊರೆ” ಸಿದ್ಧಾಂತ ಎಂದರೇನು?

ಬ್ರಿಟಿಷರು ತಮ್ಮನ್ನು ನಾಗರಿಕರು ಎಂದು ಚಿತ್ರಿಸಿಕೊಳ್ಳುತ್ತಾ ತಾವು ಇಲ್ಲಿಗೆ ಬಂದಿರುವುದೇ ಭಾರತೀಯರನ್ನು ನಾಗರಿಕರನ್ನಾಗಿ ಮಾಡಲು ಎನ್ನುವ ಸಿದ್ದಾಂತವನ್ನು “ಬಿಳಿಯನ ಮೇಲಿನ ಹೊರೆ” ಎನ್ನುವರು.

3. ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು?

ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ರಾಜಾ ರಾಮಮೋಹನ್‌ ರಾಯರು

4. ಆತ್ಮೀಯ ಸಭಾದ ಸ್ಥಾಪಕರು ಯಾರು?

ಆತ್ಮೀಯ ಸಭಾದ ಸ್ಥಾಪಕರು ರಾಜಾ ರಾಮಮೋಹನ್ ರಾಯರು

5. ಆತ್ಮೀಯ ಸಭಾದ ಮುಖ್ಯ ಆಶಯವೇನು?

ಆತ್ಮೀಯ ಸಭಾದ ಮುಖ್ಯ ಆಶಯ ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಬಂಗಾಳದ ಸಮಾಜದಿಂದ ಕೊನೆಗೊಳಿಸುವುದು.

6. ಸತಿ ಪದ್ಧತಿಯನ್ನು 1829ರಲ್ಲಿ ನಿಷೇಧಿಸಿದವರು ಯಾರು?

ಸತಿ ಪದ್ಧತಿಯನ್ನು 1829ರಲ್ಲಿ ನಿಷೇಧಿಸಿದವರು ವಿಲಿಯಂ ಬೆಂಟಿಂಕ್

7. ರಾಜಾ ರಾಮಮೋಹನ್‌ ರಾಯರು ಆರಂಭಿಸಿದ ಪತ್ರಿಕೆ ಯಾವುದು?

ರಾಜಾ ರಾಮಮೋಹನ್‌ ರಾಯರು ಆರಂಭಿಸಿದ ಪತ್ರಿಕೆ ಸಂವಾದ ಕೌಮುದಿ

8. ಭಾರತದ ಪುನರುಜ್ಜಿವನದ ಜನಕ ಮತ್ತು ಭಾರತೀಯ ರಾಷ್ಟ್ರೀಯತೆಯ ಪ್ರವಾದಿ ಎಂದು ಯಾರನ್ನು ಕರೆಯುವರು?

ಭಾರತದ ಮನರುಜ್ಜಿವನದ ಜನಕ ಮತ್ತು ಭಾರತೀಯ ರಾಷ್ಟ್ರೀಯತೆಯ ಪ್ರವಾದಿ ಎಂದು ರಾಜಾ ರಾಮಮೋಹನ್‌ ರಾಯರನ್ನು ಕರೆಯುವರು.

9, ಯುವ ಬಂಗಾಳಿ ಚಳವಳಿಯನ್ನು ಪ್ರಾರಂಭಿಸಿದವರು ಯಾರು?

ಯುವ ಬಂಗಾಳಿ ಚಳವಳಿಯನ್ನು ಪ್ರಾರಂಭಿಸಿದವರು ಹೆನ್ರಿ ವಿವಿಯನ್ ಡಿರೇಜಿಯೊ

10, ಅಕಾಡೆಮಿಕ್ ಅಸೋಸಿಯೇಷನ್ ಎನ್ನುವ ಚರ್ಚಾವೇದಿಕೆಯನ್ನು ಹುಟ್ಟು ಹಾಕಿದವರು ಯಾರು?

ಅಕಾಡೆಮಿಕ್ ಅಸೋಸಿಯೇಷನ್ ಎನ್ನುವ ಚರ್ಚಾವೇದಿಕೆಯನ್ನು ಹುಟ್ಟು ಹಾಕಿದವರು ಹೆನ್ರಿ ವಿವಿಯನ್

11. ಆರ್ಯ ಸಮಾಜದ ಸ್ಥಾಪಕರು ಯಾರು?

ಆರ್ಯ ಸಮಾಜದ ಸ್ಥಾಪಕರು ದಯಾನಂದ ಸರಸ್ವತಿ

12. ದಯಾನಂದ ಸರಸ್ವತಿ ಅವರ ಆರಂಭಿಕ ಹೆಸರೇನು?

ದಯಾನಂದ ಸರಸ್ವತಿ ಅವರ ಆರಂಭಿಕ ಹೆಸರು ಮೂಲ ಶಂಕರ

13. ದಯಾನಂದ ಸರಸ್ವತಿ ಅವರ ಗ್ರಂಥ ಯಾವುದು?

ದಯಾನಂದ ಸರಸ್ವತಿ ಅವರ ಗ್ರಂಥ ಸತ್ಯಾರ್ಥ ಪ್ರಕಾಶ

14. ದಯಾನಂದ ಸರಸ್ವತಿ ಅವರು ಘೋಷಿಸಿದ ವಾಕ್ಯ ಯಾವುದು?

ದಯಾನಂದ ಸರಸ್ವತಿ ಅವರು ಘೋಷಿಸಿದ ವಾಕ್ಯ -ವೇದಗಳಿಗೆ ಮರಳಿ

15. ವೇದಗಳಿಗೆ ಮರಳಿ ಎಂದರೇನು?

ವೇದಗಳಿಗೆ ಮರಳಿ ಎಂದರೇ -ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿವೆ.

16, ಆರ್ಯ ಸಮಾಜದ ಪ್ರಮುಖ ಕಾರ್ಯಸೂಚಿ ಯಾವುದು?

ಆರ್ಯ ಸಮಾಜದ ಪ್ರಮುಖ ಕಾರ್ಯಸೂಚಿ ಶುದ್ಧಿ ಚಳವಳಿ

17. ಶುದ್ದಿ ಚಳವಳಿ ಎಂದರೇನು?

ಹಿಂದೂ ಧರ್ಮದಿಂದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳುವುದನ್ನು ಶುದ್ದಿ ಚಳವಳಿ ಎನ್ನುವರು.

18. ಗೋ ರಕ್ಷಣಾ ಸಂಘವನ್ನು ಸ್ಥಾಪಿಸಿದವರು ಯಾರು?

ಗೋ ರಕ್ಷಣಾ ಸಂಘವನ್ನು ಸ್ಥಾಪಿಸಿದವರು ಆರ್ಯ ಸಮಾಜ

19. ಭಾರತೀಯ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಲಾಲ ಲಜಪತ್ ರಾಯ್ ಯಾವ ಸಮಾಜದ ತತ್ವಗಳಿಂದ ಪ್ರೇರಣೆ ಪಡೆದಿದ್ದರು?

ಭಾರತೀಯ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಲಾಲ ಲಜಪತ್‌ ರಾಯ್ ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆ ಪಡೆದಿದ್ದರು.

20. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು?

ಪ್ರಾರ್ಥನಾ ಸಮಾಜದ ಸ್ಥಾಪಕರು ಡಾ.ಆತ್ಮಾರಾಮ್ ಪಾಂಡುರಂಗ

21. ಸತ್ಯ ಶೋಧಕ ಸಮಾಜದ ಸ್ಥಾಪಕರು ಯಾರು?

ಸತ್ಯ ಶೋಧಕ ಸಮಾಜದ ಸ್ಥಾಪಕರು ಮಹಾತ್ಮ ಜ್ಯೋತಿಭಾ ಫುಲೆ

22. ಗುಲಾಮಗಿರಿ ಎನ್ನುವ ಗ್ರಂಥವನ್ನು ರಚಿಸಿದವರು ಯಾರು?

ಮಹಾತ್ಮ ಜ್ಯೋತಿಭಾ ಫುಲೆ

23. ಆಲಿಫರ್ ಸುಧಾರಣಾ ಚಳುವಳಿಯನ್ನು ಆರಂಭಿಸಿದರು ಯಾರು?

ಅಲಿಘರ್ ಸುಧಾರಣಾ ಚಳುವಳಿಯನ್ನು ಆರಂಭಿಸಿದರು ಸರ್ ಸಯ್ಯದ್‌ ಅಹಮದ್‌ ಖಾನ್

24. ಆಂಗ್ಲೋ ಓರಿಯೆಂಟಲ್ ಕಾಲೇಜಿನ ಈಗಿನ ಹೆಸರೇನು?

ಆಂಗ್ಲೋ ಓರಿಯೆಂಟಲ್ ಕಾಲೇಜಿನ ಈಗಿನ ಹೆಸರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ

25. ರಾಮಕೃಷ್ಣ ಮಿಷನ್‌ ಸ್ಥಾಪಕರು ಯಾರು?

ರಾಮಕೃಷ್ಣ ಮಿಶನ್ ಸ್ಥಾಪಕರು ಸ್ವಾಮಿ ವಿವೇಕಾನಂದರು

26. ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್‌ ಅನ್ನು ಎಲ್ಲಿ ಮತ್ತು ಯಾವಾಗ ಸ್ಥಾಪಿಸಿದರು?

ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್‌ ಅನ್ನು ಕಲ್ಕತ್ತಾ ಬಳಿಯ ಬೇಲೂರು 1897ರಲ್ಲಿ ಸ್ಥಾಪಿಸಿದರು.

27. ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಠವನ್ನು ಎಲ್ಲಿ ಸ್ಥಾಪಿಸಿದರು?

ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಠವನ್ನು ಮಾಯಾವತಿಯಲ್ಲಿ ಸ್ಥಾಪಿಸಿದರು.

28.ವಿಶ್ವ ಧಾರ್ಮಿಕ ಸಮ್ಮೇಳನ ಎಲ್ಲಿ ನಡೆಯಿತು?

ವಿಶ್ವ ಧಾರ್ಮಿಕ ಸಮ್ಮೇಳನ ಅಮೇರಿಕದ ಚಿಕಾಗೋ ನಗರದಲ್ಲಿ ನಡೆಯಿತು.

29. ಕಾಂಗ್ರೆಸ್ ಆಫ್ ರಿಲಿಜಿಯನ್ಸ್ ಎಲ್ಲಿ ನಡೆಯಿತು?

ಕಾಂಗ್ರೆಸ್ ಆಫ್ ರಿಲಿಜಿಯನ್‌ ಪ್ಯಾರೀಸ್‌ನಲ್ಲಿ ನಡೆಯಿತು.

30. ಥಿಯೋಸಾಫಿಕಲ್ ಸೊಸೈಟಿಯನ್ನು ಪ್ರಾರಂಭಿಸಿದವರು ಯಾರು?

ಥಿಯೋಸಾಫಿಕಲ್ ಸೊಸೈಟಿಯನ್ನು ಪ್ರಾರಂಭಿಸಿದವರು ಮೇಡಂ ಭವಾಟ್‌ ಮತ್ತು ಕರ್ನಲ್

31. ಥಿಯೋಸಾಫಿಕಲ್ ಸೊಸೈಟಿಯ ಕೇಂದ್ರ ಕಚೇರಿ ಎಲ್ಲಿದೆ?

ಥಿಯೋಸಾಫಿಕಲ್ ಸೊಸೈಟಿಯ ಕೇಂದ್ರ ಕಚೇರಿ ಆಡ್ಯಾರ್‌ನಲ್ಲಿದೆ.

32. ಶ್ವೇತ ಸರಸ್ವತಿ ಎಂದು ಯಾರನ್ನು ಕರೆಯುವರು?

ಶ್ವೇತ ಸರಸ್ವತಿ ಎಂದು ಅನಿಬೆಸೆಂಟ್ ಅವರನ್ನು ಕರೆಯುವರು

33. ಶ್ವೇತ ಸರಸ್ವತಿ ಎಂದು ಅನಿಬೆಸೆಂಟ್ ಅವರನ್ನು ಏಕೆ ಕರೆಯುವರು?

ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದರಿಂದ ಶ್ವೇತ ಸರಸ್ವತಿ ಎಂದು ಅನಿಬೆಸೆಂಟ್ ಅವರನ್ನು ಏಕೆ ಕರೆಯುವರು.

34. ಅನಿಬೆಸೆಂಟ್ ಅವರ ಪತ್ರಿಕೆಗಳು ಯಾವುವು?

ಅನಿಬೆಸೆಂಟ್ ಅವರ ಪತ್ರಿಕೆಗಳು ನ್ಯೂ ಇಂಡಿಯ ಮತ್ತು ಕಾಮನ್ ವೀಲ್

35. ಹೋಂ ರೂಲ್ ಲೀಗ್‌ನ್ನು ಪ್ರಾರಂಭಿಸಿದವರು ಯಾರು?

ಹೋಂ ರೂಲ್ ಲೀಗ್‌ನ್ನು ಪ್ರಾರಂಭಿಸಿದವರು ಆನಿಬೆಸೆಂಟ್

36, 20ನೇ ಶತಮಾನದ ಆರಂಭಿಕ ಕಾಲಘಟ್ಟದ ಭಾರತದಲ್ಲಿ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಸಂವೇದನೆ ರೂಪಿಸಿದ ಕೀರ್ತಿ ಯಾರಿಗೆ ಸಲ್ಲಬೇಕು?

20ನೇ ಶತಮಾನದ ಆರಂಭಿಕ ಕಾಲಘಟ್ಟದ ಭಾರತದಲ್ಲಿ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಸಂವೇದನೆ ರೂಪಿಸಿದ ಕೀರ್ತಿ ಅನಿಬೆಸೆಂಟ್ ಅವರಿಗೆ ಸಲ್ಲಬೇಕು

37. ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ ಯಾರು?

ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ ಅನಿಬೆಸೆಂಟ್.

38. ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಂ ಸ್ಥಾಪಕರು ಯಾರು?

ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಂ ಸ್ಥಾಪಕರು ನಾರಾಯಣಗುರು ಮತ್ತು ಕುಮಾರನ್ ಆಸನ್,

39, ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಂ ಮುಖ್ಯ ಉದ್ದೇಶವೇನು?

ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಂ ಮುಖ್ಯ ಉದ್ದೇಶ ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣ.

40. “ಮಾನವ ಕುಲಕ್ಕೆ ಒಂದೇ ಜಾತಿ,ಒಂದೇ ಧರ್ಮ ಮತ್ತು ಒಬ್ಬನೇ ದೇವರು” ಎಂಬುದು ಯಾರ ಆಶಯ?

ಮಾನವ ಕುಲಕ್ಕೆ ಒಂದೇ ಜಾತಿ ಒಂದೇ ಧರ್ಮ ಮತ್ತು ಒಬ್ಬನೇ ದೇವರು” ಎಂಬುದು ನಾರಾಯಣಗುರು ಅವರ ಆಶಯ

41. ವೈಕಂ ಸತ್ಯಾಗ್ರಹವನ್ನು ಆರಂಭಿಸಿದವರು ಯಾರು?

ವೈಕಂ ಸತ್ಯಾಗ್ರಹವನ್ನು ಆರಂಭಿಸಿದವರು ನಾರಾಯಣಗುರು

42. ಆತ್ಮ ಗೌರವ ಚಳುವಳಿಯ ರೂವಾರಿ ಯಾರು?

ಆತ್ಮ ಗೌರವ ಚಳುವಳಿಯ ರೂವಾರಿ ಪೆರಿಯಾರ್

43. ಪೆರಿಯಾರ್ ಅವರು ಆರಂಭಿಸಿದ ಸಂಘಟನೆ ಯಾವುದು?

ಪೆರಿಯಾರ್ ಅವರು ಆರಂಭಿಸಿದ ಸಂಘಟನೆ ದ್ರಾವಿಡ ಕಳಗಂ

44. ಪೆರಿಯಾರ್ ಅವರು ಆರಂಭಿಸಿದ ಪತ್ರಿಕೆ ಯಾವುದು?

ಪೆರಿಯಾರ್ ಅವರು ಆರಂಭಿಸಿದ ಪತ್ರಿಕೆ ಜಸ್ಟೀಸ್

10th Class Social Science Chapter 5 Notes Question Answer

II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ, ಉತ್ತರ ಬರೆಯಿರಿ,

1. ಬ್ರಹ್ಮಸಮಾಜದ ಬೋಧನೆಗಳಾವುವು?

  • ಏಕದೇವತಾರಾಧನೆಯನ್ನು ಪ್ರತಿಪಾದಿಸಿದರು.
  • ಅರ್ಥಹೀನ ಆಚರಣೆಗಳನ್ನು ವಿರೋಧಿಸಿದರು.
  • ಪ್ರತಿಯೊಬ್ಬ ವ್ಯಕ್ತಿಯು ಘನತೆಯಿಂದ ಬಾಳಬೇಕು ಮತ್ತು ಯಾವ ನಿಯಮ ಮತ್ತು ಆಚರಣೆಗಳು ಇದಕ್ಕೆ ಕೇಡುಂಟು ಮಾಡಬಾರದೆನ್ನುವುದು ಅವರ ನಿಲುವಾಗಿತ್ತು.
  • ಬಹುಪತ್ನಿತ್ವ ಪದ್ಧತಿಯನ್ನು ವಿರೋಧಿಸುವ ಮೂಲಕ ಸ್ತ್ರೀಯರಿಗೆ ಸಮಾನತೆ ದೊರಕಬೇಕೆಂದು ಬ್ರಹ್ಮಸಮಾಜವು ಆಶಿಸಿತು.
  • ವಿಶೇಷವಾಗಿ ವಿಧವೆಯರ ದುಸ್ಥಿತಿಯನ್ನು ದೂರ ಮಾಡುವ ಸಲುವಾಗಿ ಅವರಿಗೆ ಆಸ್ತಿಯಲ್ಲಿ ಪಾಲು ಇರಬೇಕೆಂದು ಪ್ರತಿಪಾದಿಸಿತು. ಬ್ರಹ್ಮಸಮಾಜವು ಬಾಲ್ಯವಿವಾಹವನ್ನು ವಿರೋಧಿಸಿತು.
  • ಒಳ್ಳೆಯದು ಎಲ್ಲಿದ್ದರೂ ಅದನ್ನು ಸ್ವೀಕರಿಸಬಹುದು ಎಂದು ಬ್ರಹ್ಮಸಮಾಜವು ಸಾರಿತು.
  • ವೇದಾಂತ ಮತ್ತು ಉಪನಿಷತ್ತುಗಳು ಈ ಆಶಯಗಳನ್ನು ಬೋಧಿಸುತ್ತವೆಂದು ಸಾರಿದರು.
  • ಪಶ್ಚಿಮದ ನಾಗರಿಕತೆಯಲ್ಲಿ ಒಳ್ಳೆಯದಿದ್ದರೆ ಅದೂ ಕೂಡ ಸ್ವೀಕಾರಾರ್ಹ ಎನ್ನುವುದು ಅವರ ನಿಲುವಾಗಿತ್ತು.
  • ಇಂಗ್ಲಿಷ್ ಶಿಕ್ಷಣಕ್ಕೆ ಇವರು ಒತ್ತು ನೀಡಿದರು.

2. ದಯಾನಂದ ಸರಸ್ವತಿಯವರ ‘ವೇದಗಳಿಗೆ ಹಿಂದಿರುಗಿ’ ಎನ್ನುವ ಘೋಷಣೆಯನ್ನು ವಿಶ್ಲೇಷಿಸಿ.

  • ಅವರು ವೇದಗಳ ಅಧ್ಯಯನದಿಂದ ಕಂಡುಕೊಂಡ ಅಂಶವೆಂದರೆ ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿವೆ ಎಂಬುದಾಗಿದೆ.
  • ಈ ಹಿನ್ನೆಲೆಯಲ್ಲಿ ಅವರು ಘೋಷಿಸಿದ ವಾಕ್ಯ ‘ವೇದಗಳಿಗೆ ಮರಳಿ’ ಎಂಬುದಾಗಿತ್ತು.
  • ಆದ್ದರಿಂದ ಇವರು ಸುಧಾರಣಾವಾದಿಯೆಂಬುದಕ್ಕಿಂತ ಬದಲಿಗೆ ಮನರುತ್ಥಾನವಾದಿ ಎಂದೆನಿಸಿಕೊಂಡರು

3. ಸತ್ಯಶೋಧಕ ಸಮಾಜವು ಪ್ರತಿಪಾದಿಸಿದ ಸುಧಾರಣೆಗಳನ್ನು ವಿವರಿಸಿ,

  • ಈ ಸಮಾಜವನ್ನು ಮಹಾತ್ಮ ಜ್ಯೋತಿಭಾ ಫುಲೆಯವರು ಸ್ಥಾಪಿಸಿದರು
  • ಸತ್ಯಶೋಧಕ ಸಮಾಜವು ಬ್ರಾಹ್ಮಣೇತರ ವರ್ಗಗಳಿಗೆ ಮತ್ತು ಸ್ತ್ರೀಯರಿಗೆ ಸಮಾನತೆಯ ಹಕ್ಕುಗಳನ್ನು ದೊರಕಿಸಿಕೊಡುವ ಚಳವಳಿಯನ್ನು ಪ್ರಾರಂಭಿಸಿತು.
  • ಸೈದ್ಧಾಂತಿಕ ಹೋರಾಟವನ್ನು ಕಟ್ಟುವ ಹಿನ್ನೆಲೆಯಲ್ಲಿ ‘ಗುಲಾಮಗಿರಿ’ ಶೇಟ್ನಾರ್ಯಚಾ ಅಸೂದ್ ಎನ್ನುವ ಗ್ರಂಥ ರಚಿಸಿದರು.
  • ಶಾಲೆಗಳನ್ನು ಪ್ರಾರಂಭಿಸಿ ಶೂದ್ರರಿಗೆ ಮತ್ತು ಹೆಣ್ಣುಮಕ್ಕಳಿಗೆ ವಿದ್ಯೆಯನ್ನು ನೀಡಿದರು.
  • ಮಾಲಿ ಸಮುದಾಯಕ್ಕೆ ಸೇರಿದ್ದ ಫುಲೆಯವರು ತಮ್ಮ ಬಾವಿಯಲ್ಲಿ ಅಸ್ಪೃಶ್ಯರು ಮತ್ತು ಎಲ್ಲ ಜಾತಿಯವರಿಗೂ ನೀರು ಸೇದಿಕೊಳ್ಳಲು ಅವಕಾಶವನ್ನು ಕೊಟ್ಟರು.
  • ಫುಲೆಯವರ ಈ ಪ್ರಯತ್ನದಲ್ಲಿ ಅವರ ಪತ್ನಿ ಸಾವಿತ್ರಿಬಾಯಿ ಫುಲೆಯವರು ಒತ್ತಾಸೆಯಾಗಿದ್ದರು.
  • ಇವರ ಪ್ರಯತ್ನದಿಂದ ಹೆಣ್ಣುಮಕ್ಕಳಿಗೆ ವಸತಿ ನಿಲಯವನ್ನು ಸ್ಥಾಪಿಸಲಾಯಿತು.
  • ಸಮಾನತೆಯ ಆಶಯದ ತಳಹದಿಯ ಮೇಲೆ ಹೊಸ ಸಮಾಜವನ್ನು ನಿರ್ಮಿಸುವ ಆಧುನಿಕ ಕಾಲಘಟ್ಟದ ಪ್ರಯತ್ನಗಳಲ್ಲಿ ಫುಲೆ ದಂಪತಿಗಳ ಪ್ರಯತ್ನ ಮುಖ್ಯವಾದದ್ದು.
  • ಇವರ ಆಶಯಗಳಿಂದ ಪ್ರೇರಣೆ ಪಡೆದವರಲ್ಲಿ ಬಾಬಾಸಾಹೇಬ ಅಂಬೇಡ್ಕರ್‌ರು ಮುಖ್ಯರು

4. ಆಲಿಘರ್ ಚಳವಳಿಯ ಉದ್ದೇಶಗಳನ್ನು ವಿಶ್ಲೇಷಿಸಿ.(ಸರ್ ಸಯ್ಯದ್ ಅಹಮದ್ ಖಾನ್ ಕೊಡುಗೆಗಳು)

  • ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ ಮುಸ್ಲಿಂ ಸಮಾಜದಲ್ಲಿ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣಾ ಅಲೆಯು ಪ್ರಾರಂಭವಾಯಿತು.
  • ಬ್ರಿಟಿಷರ ವಿರೋಧಿ ಮನೋಧರ್ಮವು 1857ರ ಘಟನೆಯ ನಂತರ ಮುಸ್ಲಿಂ ಸಮುದಾಯದಲ್ಲಿ ವ್ಯಾಪಕವಾಗಿ ಬೆಳೆಯಲು ಆರಂಭಿಸಿತು.
  • ಇದರ ಪರಿಣಾಮವಾಗಿ ಇಂಗ್ಲಿಷ್ ಶಿಕ್ಷಣದಿಂದ ದೂರಾಗ ತೊಡಗಿ ಶಿಕ್ಷಣದ ಅರ್ಹತೆಯಿಂದ ದೊರೆಯಬಹುದಾದ ಅವಕಾಶಗಳನ್ನು ಕಳೆದುಕೊಂಡರು.
  • ಇಂತಹ ಸಂದರ್ಭವನ್ನು ಗ್ರಹಿಸಿದ ಸರ್ ಸಯ್ಯದ್ ಅಹಮದ್ ಖಾನ್‌ರು ಹೊಸ ಚಳವಳಿಯನ್ನು ರೂಪಿಸಲು ಯತ್ನಿಸಿದರು.
  • ಮಹಮದನ್ ಲಿಬರ್ಟಿ ಸೊಸೈಟಿಯು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳನ್ನು ಮಾಡತೊಡಗಿತು.
  • ಈ ಚರ್ಚೆಗಳಲ್ಲಿ ಉನ್ನತ ಮತ್ತು ಮಧ್ಯಮ ವರ್ಗದ ಮುಸ್ಲಿಮರು ಭಾಗವಹಿಸುವ ಮೂಲಕ ಇಂಗ್ಲಿಷ್ ಶಿಕ್ಷಣದ ಮಹತ್ವವನ್ನು ಅರಿಯತೊಡಗಿದರು.
  • ಸರ್ ಸಯ್ಯದ್ ಅಹಮದ್‌ ಖಾನ್‌ ಪ್ರಯತ್ನಗಳಿಂದ ಹೊಸ ವಿಚಾರಗಳ ಹುಡುಕಾಟದ ಪ್ರಯತ್ನವು ಆಲಿಘರ್ ಚಳವಳಿಯಾಗಿ ರೂಪುಗೊಂಡಿತು.

3. ರಾಮಕೃಷ್ಣ ಮಿಷನ್‌ನ ದೃಷ್ಟಿಕೋನವನ್ನು ವಿವರಿಸಿ,

  • ರಾಮಕೃಷ್ಣ ಮಿಷನ್‌ನನ್ನು ಸ್ಥಾಪಿಸಿದ ಉದ್ದೇಶವೆಂದರೆ ಸ್ವಾಮಿ ವಿವೇಕಾನಂದರ ಗುರುಗಳಾದ ರಾಮಕೃಷ್ಣ ಪರಮಹಂಸರ ಚಿಂತನೆ ಮತ್ತು ಆಶಯಗಳನ್ನು ಜನರಿಗೆ ತಲುಪಿಸುವುದು.
  • ರಾಮಕೃಷ್ಣ ಪರಮಹಂಸರು ಕಾಳಿಮಾತೆಯ ಆರಾಧಕರು ಮತ್ತು ಕಲ್ಕತ್ತಾದ ಕಾಳಿಮಂದಿರದಲ್ಲಿ ಅರ್ಚಕರಾಗಿದ್ದರು.
  • ಸನ್ಯಾಸ, ಧ್ಯಾನ ಮತ್ತು ಭಕ್ತಿಯ ಮೂಲಕ ಆಧ್ಯಾತ್ಮಿಕ ಮುಕ್ತಿಯನ್ನು ಪಡೆಯಬೇಕೆಂದು ತಮ್ಮ ಬದುಕಿನ ಉದಾಹರಣೆಯ ಮೂಲಕ ತೋರಿಸಿಕೊಟ್ಟರು.
  • ಎಲ್ಲ ಧರ್ಮಗಳ ಆಶಯವು ಇದೇ ಎಂದು ಭಾವಿಸಿದ್ದರು.
  • ದೇವರನ್ನು ಮತ್ತು ಮುಕ್ತಿಯನ್ನು ತಲುಪಲು ಅನೇಕ ಮಾರ್ಗಗಳಿವೆ ಎಂದು ನಂಬಿದ್ದರು. ಜತೆಗೆ ಮೂರ್ತಿಪೂಜೆ ಅವಶ್ಯಕವೆಂದರು

4. ಸ್ವಾಮಿ ವಿವೇಕಾನಂದರು ಯುವಶಕ್ತಿಯ ಪ್ರೇರಕರಾಗಿದ್ದರು. ಹೇಗೆ ಎಂಬುದನ್ನು ವಿವರಿಸಿ

  • ಜಾತಿವ್ಯವಸ್ಥೆ ಮತ್ತು ಅದರ ಶೋಷಣೆಯ ಮುಖಗಳು, ಬಡತನ, ಅನಕ್ಷರತೆ, ಆಜ್ಞಾನ ಮುಂತಾದ ಒಡಕುಗಳಿಂದ ತುಂಬಿದ ಭಾರತದ ಸಮಾಜಕ್ಕೆ ಹೊಸ ಶೋಷಣೆ ಮುಕ್ತ ರೂಪವನ್ನು ಕೊಡುವುದು
  • ಮೊದಲು ಜನರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಮತ್ತು ಆ ಮೂಲಕ ಅವರೇ ಸುಧಾರಣೆಯನ್ನು ಬಯಸುತ್ತಾರೆ.
  • ಶಾಸನ ರೂಪಿಸುವ ಸಂಸ್ಥೆಗಳು ರೂಪುಗೊಳ್ಳಬೇಕು ಮತ್ತು ಅವುಗಳ ಮುಖಾಂತರ ಸಮಾಜ ಸುಧಾರಣಾ ಕಾನೂನುಗಳು ಜಾರಿಗೊಳ್ಳಬೇಕು ಪಾಶ್ಚಿಮಾತ್ಯರ ಅಂಧಾನುಕರಣೆಯನ್ನು ಬಿಡಬೇಕೆಂದರು.
  • ಧರ್ಮದ ಕರ್ತವ್ಯವೆಂದರೆ ಕತ್ತಲಲ್ಲಿರುವವರಿಗೆ ಬೆಳಕನ್ನು ನೀಡಬೇಕು. ಇಲ್ಲದಿದ್ದರೆ ಅದು ಧರ್ಮವೇ ಅಲ್ಲ ಅಂದರು, ಯಾರ ಆತ್ಮ ಬಡವರಿಗಾಗಿ ಮಿಡಿಯುವುದೋ ಅವನೇ ಮಹಾತ್ಮ. ಇಲ್ಲದಿದ್ದರೆ ಅವನು ದುರಾತ್ಮ ಎಂದರು.
  • ತಮ್ಮ ಜೀವನದುದ್ದಕ್ಕೂ ಅವರು ಜಾತೀಯತೆಯನ್ನು, ಅಸ್ಪಶ್ಯತೆಯನ್ನು, ಜಾತಿಮೂಲದಿಂದ ಪ್ರೇರಣೆಗೊಂಡ ಶ್ರೇಷ್ಠತೆಯ ವ್ಯಸನವನ್ನು ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ವಿರೋಧಿಸಿದರು.

5. ಆನಿಬೆಸಂಟರ ಸುಧಾರಣಾ ಕ್ರಮಗಳಾವುವು?

  • ಐರಿಶ್‌ ಮಹಿಳೆ ಅನಿಬೆಸೆಂಟರು ಭಾರತಕ್ಕೆ ಬಂದ ನಂತರ ಥಿಯೋಸಾಫಿಕಲ್ ಸೊಸೈಟಿಯ ಚಳವಳಿಯು ಗಮನಾರ್ಹವಾಗಿ ಬೆಳೆಯತೊಡಗಿತು
  • ಇವರು ವೇದಾಂತ ಶಾಸ್ತ್ರದ ಬಗೆಗೆ ವಿಶೇಷ ಜ್ಞಾನವನ್ನು ಹೊಂದಿದ್ದರು.
  • ಐಹಿಕ ಸಂಪತ್ತಿನ ಮೇಲೆ ನಿಂತಿರುವ ಪಶ್ಚಿಮದ ಸಂಸ್ಕೃತಿಗಿಂತ ಆಧ್ಯಾತ್ಮಿಕ ಶಕ್ತಿಯ ಮೇಲೆ ನಿಂತಿರುವ ಭಾರತ ಸಂಸ್ಕೃತಿ ಶ್ರೇಷ್ಠವಾದದ್ದೆಂದು ಪ್ರತಿಪಾದಿಸಿದರು.
  • ಈ ಅರ್ಥದಲ್ಲಿ ಇವರ ಚಳವಳಿಯು ಹಿಂದೂ ಧರ್ಮದ ಪುನರುತ್ಥಾನ ಚಳವಳಿಯಾಗಿತ್ತು.
  • ಇವರು ಹಿಂದು ಮತ್ತು ಬೌದ್ಧ ಧರ್ಮಗಳ ತುಲನಾತ್ಮಕ ಅಧ್ಯಯನವನ್ನು ಮಾಡಿದ್ದರು. ಇವರ ಪ್ರಮುಖ ಸಾಧನೆಗಳೆಂದರೆ ‘ಭಗವದ್ಗೀತೆ’ಯನ್ನು ಇಂಗ್ಲಿಷಿಗೆ ಅನುವಾದ ಮಾಡಿದರು.
  • ಇದರಿಂದ ‘ಶ್ವೇತ ಸರಸ್ವತಿ’ ಎನಿಸಿಕೊಂಡರು. ಎಲ್ಲ ವರ್ಗಗಳಿಗೂ ಶಿಕ್ಷಣ ಸಿಗಬೇಕೆಂಬುದು ಅವರ ಆಶಯವಾಗಿತ್ತು.
  • ಸೆಂಟ್ರಲ್ ಒಂದೂ ಕಾಲೇಜನ್ನು ಬನಾರಸ್‌ನಲ್ಲಿ ಪ್ರಾರಂಭಿಸಿದರು.
  • ಸಮಕಾಲೀನ ಸಮಸ್ಯೆಗಳನ್ನು ಚರ್ಚೆ ಮತ್ತು ಸಂವಾದಕ್ಕೆ ಈಡು ಮಾಡಲು ‘ನ್ಯೂ ಇಂಡಿಯಾ’ ಮತ್ತು ‘ಕಾಮನ್ ವೀಲ್’ ಎಂಬ ಪತ್ರಿಕೆಗಳನ್ನು ಪ್ರಾರಂಭಿಸಿದರು. ‘ಹೋಮ್ ರೂಲ್‌ ಲೀಗ್’ನ್ನು ಪ್ರಾರಂಭಿಸಿದರು.

8. ನಾರಾಯಣಗುರು ಧರ್ಮಪರಿಪಾಲನಾ ಯೋಗಂ ಸಂಘಟನೆಯ ಕೊಡುಗೆಗಳನ್ನು ತಿಳಿಸಿ,

  • ಶ್ರೀ ನಾರಾಯಣಗುರು ಅವರು ಈ ಸುಧಾರಣಾ ಸಂಘಟನೆಯನ್ನು ಆರಂಭಿಸಿದರು • ಈ ಸಂಘಟನೆಯ ಪ್ರಮುಖ ಉದ್ದೇಶವೆಂದರೆ ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣ
  • ಮನುಷ್ಯ ಘನತೆಯಿಂದ ಬದುಕುವ ಸಮಾಜದ ನಿರ್ಮಾಣವೇ ಈ ಸಂಘಟನೆಯ ಉದ್ದೇಶವಾಗಿತ್ತು, ನಾರಾಯಣಗುರು ಅವರ ಪ್ರಮುಖ ಆಶಯ ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂಬುದು.
  • ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದು ಸಾರಿದರು.
  • ಕೆಳಸಮುದಾಯಗಳ ಪ್ರವೇಶ ನಿರಾಕರಿಸುತ್ತಿದ್ದ ದೇವಾಲಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದರು.

9. ಪೆರಿಯಾರ್ ಚಳವಳಿಯ ಮುಖ್ಯಾಂಶಗಳನ್ನು ಪಟ್ಟಿ ಮಾಡಿ.

  • ಇ.ವಿ. ರಾಮಸ್ವಾಮಿ ನಾಯ್ಕರ್ ಅವರ ನೇತೃತ್ವದಲ್ಲಿ ಆರಂಭಗೊಂಡ ‘ಆತ್ಮಗೌರವ • ಇವರನ್ನು ಜನರು ಪ್ರೀತಿಯಿಂದ ಪರಿಯಾ‌’ (ಹಿರಿಯರು) ಎಂದು ಕರೆದರು. ಚಳವಳಿ’
  • ಪೆರಿಯಾರ್ ತಮಿಳುನಾಡಿನ ಈರೋಡಿನಲ್ಲಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು.
  • ವರ್ಣಾಶ್ರಮ ಧರ್ಮದ ಪರವಾಗಿ ಕಾಂಗ್ರೆಸ್ ಇದೆ ಎಂದು ಅದಕ್ಕೆ ಪರ್ಯಾಯವಾದ ದ್ರಾವಿಡ ಚಳವಳಿಯೆಂಬ ಜನಾಂಗೀಯ ಪರಿಕಲ್ಪನೆ ಕೇಂದ್ರಿತ ಚಳವಳಿ ಯನ್ನು ರೂಪಿಸತೊಡಗಿದರು.
  • ಆರ್ಯ, ಬ್ರಾಹ್ಮಣ ಎನ್ನುವ ಜನಾಂಗೀಯ ಶ್ರೇಷ್ಠತೆಯನ್ನು ಸಾರುವ ಆಲೋಚನೆಗಳನ್ನು ಇಡಿಯಾಗಿ ತಿರಸ್ಕರಿಸಿದರು. ತಮಿಳುಭಾಷೆಯನ್ನು ದ್ರಾವಿಡರ ಭಾಷೆಯೆಂದರು. ಸಂಸ್ಕೃತ ಭಾಷೆ ಮತ್ತು ಸಾಹಿತ್ಯವನ್ನು ವಿರೋಧಿಸಿದರು.
  • ರಾಮಾಯಣ ಮಹಾಕಾವ್ಯದಲ್ಲಿ ಬರುವ ರಾವಣನನ್ನು ದ್ರಾವಿಡರ ನಾಯಕನೆಂದು ಬಿಂಬಿಸಿ, ರಾಮನನ್ನು ವೈದಿಕ ವರ್ಗದ ದೇವರೆಂದು ತಿರಸ್ಕರಿಸಿದರು.
  • ಬನಾರಸ್ಸಿನಲ್ಲಿ ಆದ ಕಹಿ ಅನುಭವಗಳಿಂದ ಮತ್ತಷ್ಟು ವ್ಯಗ್ರರಾದ ಪೆರಿಯಾರರು ಸಂಸ್ಕೃತ ಭಾಷೆ ಮತ್ತು ರಾಮಾಯಣದ ರಾಮ ಮತ್ತು ರಾವಣರನ್ನು ಸಾಂಸ್ಕೃತಿಕ ಸಂಕೇತಗಳನ್ನಾಗಿ ಪರಿವರ್ತಿಸಿ, ರಾವಣ ಪರಂಪರೆಯನ್ನು ವೈಭವೀಕರಿಸಿದರು.
  • ಜಾತಿ ಮತ್ತು ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆಯ ಆಶಯವನ್ನು ಎತ್ತಿಹಿಡಿದರು.

10, ಆರ್ಯ ಸಮಾಜದ ಉದ್ದೇಶಗಳು ಯಾವುವು?

  • ಎಲ್ಲ ಹಿಂದುಗಳು ರೂಪವಿಲ್ಲದ ಒಬ್ಬನೇ ದೇವರಲ್ಲಿ ನಂಬಿಕೆಯಿಡಬೇಕು, ಹುಟ್ಟಿನಿಂದ ಯಾರೂ ಶೂದ್ರರೂ ಅಲ್ಲ ಅಥವಾ ಬ್ರಾಹ್ಮಣರೂ ಅಲ್ಲವೆಂದು ಜಾತಿ ಆಧಾರವನ್ನು ತಿರಸ್ಕರಿಸಿರು
  • ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸುವುದು.
  • ಬಹುಪತ್ನಿತ್ವ ಮತ್ತು ಬಾಲ್ಯವಿವಾಹ ಪದ್ಧತಿಯನ್ನು ತಿರಸ್ಕರಿಸುವುದು,
  • ಸ್ತ್ರೀ ಮತ್ತು ಪುರುಷರು ಸಮಾನರು, ವೇದಗಳು ಮಾತ್ರ ಶ್ರೇಷ್ಠ ಪ್ರಾಚೀನ ಪವಿತ್ರ ಗ್ರಂಥಗಳನ್ನು ಅಧ್ಯಯನ ಮಾಡಬೇಕು ಮತ್ತು ಬೋಧಿಸಬೇಕು.

11. ದಯಾನಂದ ಸರಸ್ವತಿಯವರ ಸಾಧನೆಗಳನ್ನು ವಿವರಿಸಿ

  • ದಯಾನಂದ ಸರಸ್ವತಿಯವರು 1824ರಲ್ಲಿ ಗುಜರಾತಿನ ಕಾಥೇವಾಡದಲ್ಲಿ ಜನಿಸಿದರು. • ಇದರ ಆರಂಭಿಕ ಹೆಸರು ‘ಮೂಲಶಂಕರ’,
  • ಇವರ ತಂದೆ ಅಂಬಾಶಂಕರ ತಿವಾರಿ ಮತ್ತು ತಾಯಿ ಅಮೃತಾಬಾಯಿ.
  • ಇಂಗ್ಲಿಷ್ ವಿದ್ಯಾಭ್ಯಾಸದ ಕಡೆಗೆ ಆಸಕ್ತಿಯನ್ನು ತೋರದ ದಯಾನಂದರು ಸಂಸ್ಕೃತ ಶಿಕ್ಷಣವನ್ನು ಪಡೆದರು.
  • 21ನೇ ವಯಸ್ಸಿನಲ್ಲಿ ಮನೆಬಿಟ್ಟ ಇವರು ಮುಂದಿನ ಸುಮಾರು 15 ವರ್ಷಗಳ ಕಾಲ ದೇಶಾದ್ಯಂತ ಸಂಚರಿಸಿದರು. ದಯಾನಂದ ಸರಸ್ವತಿಯವರು ತಮ್ಮ ಆಲೋಚನಾ ಕ್ರಮವನ್ನು ‘ಸತ್ಯಾರ್ಥ ಪ್ರಕಾಶ’ ಎಂಬ ಗ್ರಂಥದಲ್ಲಿ ವ್ಯಕ್ತಪಡಿಸಿದ್ದಾರೆ.
  • ಅವರು ವೇದಗಳ ಅಧ್ಯಯನದಿಂದ ಕಂಡುಕೊಂಡ ಅಂಶವೆಂದರೆ ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿವೆ ಎಂಬುದಾಗಿದೆ.
  • ಈ ಹಿನ್ನೆಲೆಯಲ್ಲಿ ಅವರು ಘೋಷಿಸಿದ ವಾಕ್ಯ ‘ವೇದಗಳಿಗೆ ಮರಳಿ’ ಎಂಬುದಾಗಿತ್ತು.
  • ಆದ್ದರಿಂದ ಇವರು ಸುಧಾರಣಾವಾದಿಯೆಂಬುದಕ್ಕಿಂತ ಬದಲಿಗೆ ಮನರುತ್ಥಾನ ವಾದಿ ಎಂದೆನಿಸಿಕೊಂಡರು.
  • ಆರ್ಯಸಮಾಜದ ಕೇಂದ್ರ ಕಚೇರಿಯನ್ನು ಲಾಹೋರಿನಲ್ಲಿ ತೆರೆದರು.
  • ವೇದಗಳು ಮಾತ್ರ ಪ್ರಮಾಣೀಕೃತ ಎಂಬುದನ್ನು ಸಾರಿದರು.

12. ಯುವಬಂಗಾಳಿ ಚಳವಳಿಯನ್ನು ವಿವರಿಸಿ

  • ‘ಯುವಬಂಗಾಳಿ ಚಳವಳಿ, ಇದನ್ನು ಪ್ರಾರಂಭಿಸಿದವರು ಹೆನ್ರಿ ವಿವಿಯನ್ ಡಿರೇಜಿಯೋ
  • ಯುವಬಂಗಾಳಿ ಚಳವಳಿಯು ಪ್ರಕೃತಿ, ಮಾನವೀಯತೆ, ದೇವರು ಮುಂತಾದ ವಿಷಯಗಳನ್ನು ಕುರಿತು ಚರ್ಚೆ ಮತ್ತು ಸಂವಾದಗಳನ್ನು ನಡೆಸಿತು.
  • ಮೂಢನಂಬಿಕೆಗಳಿಂದ ತುಂಬಿದ್ದ ಸಾಮಾಜಿಕ ಮೌಡ್ಯಾಚಾರಗಳಲ್ಲೇ ಮುಳುಗಿದ್ದ ಸಮಾಜಕ್ಕೆ ಪರಿಹಾರವಿರುವುದು ಎಲ್ಲವನ್ನೂ ಎಲ್ಲರೂ ವೈಜ್ಞಾನಿಕವಾಗಿ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಂಡಾಗ ಮಾತ್ರ ಎಂದು ಡಿರೇಜಿಯೋ ಪ್ರಚುರಪಡಿಸುವ ಪ್ರಯತ್ನವನ್ನು ಮಾಡಿದರು.
  • ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿದ್ದು ಜಾತಿಪ್ರೇರಿತ ಶೋಷಣೆಯ ವಿರೋಧಿಯಾಗಿದ್ದರು.
  • ಸಂಪ್ರದಾಯಸ್ಥ ಕೌಟುಂಬಿಕ ಹಿನ್ನೆಲೆಯಿಂದ ಬಂದ ಅನೇಕ ವಿದ್ಯಾರ್ಥಿಗಳು ಇವರ ಪ್ರಭಾವಕ್ಕೆ ಒಳಗಾಗಿ ಚಳವಳಿಯನ್ನು ಬೆಳೆಸುವಲ್ಲಿ ಕೈಜೋಡಿಸಿದರು.

FAQ

1. ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು?

ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ರಾಜಾ ರಾಮಮೋಹನ್‌ ರಾಯರು

2. ಗುಲಾಮಗಿರಿ ಎನ್ನುವ ಗ್ರಂಥವನ್ನು ರಚಿಸಿದವರು ಯಾರು?

ಮಹಾತ್ಮ ಜ್ಯೋತಿಭಾ ಫುಲೆ

3. ದಯಾನಂದ ಸರಸ್ವತಿ ಅವರ ಗ್ರಂಥ ಯಾವುದು?

ದಯಾನಂದ ಸರಸ್ವತಿ ಅವರ ಗ್ರಂಥ ಸತ್ಯಾರ್ಥ ಪ್ರಕಾಶ

4. ರಾಜಾ ರಾಮಮೋಹನ್‌ ರಾಯರು ಆರಂಭಿಸಿದ ಪತ್ರಿಕೆ ಯಾವುದು?

ರಾಜಾ ರಾಮಮೋಹನ್‌ ರಾಯರು ಆರಂಭಿಸಿದ ಪತ್ರಿಕೆ ಸಂವಾದ ಕೌಮುದಿ

ಇತರೆ ವಿಷಯಗಳು:

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ವಿಜ್ಞಾನ ಎಲ್ಲಾ ಪಾಠಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh