10ನೇ ತರಗತಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಸಮಾಜ ನೋಟ್ಸ್,10th Class Social Science Chapter 3 Notes Question Answer Mcq in Kannada Medium Kseeb Solution For Class 10 Social Science Chapter 3 Notes in kannada 10th Bharatadalli British Alvikeya Parinamagalu Notes class 10th Social Science History Chapter 3 Notes
10th Social Science Questions Answers in Kannada Chapter 3
10th Class Social Science Chapter 3 Notes in Kannada
I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ,
1. ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವನು ವಾರನ್ ಹೇಸ್ಟಿಂಗ್ಸ್
2. ಸೂಪರಿಡೆಂಟೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು ಲಾರ್ಡ್ ಕಾರ್ನವಾಲೀಸ್
3. ಖಾಯಂ ಜಮೀನ್ದಾರಿ ಪದ್ಧತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ 1793 ರಲ್ಲಿ ಜಾರಿಗೆತರಲಾಯಿತು.
4. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ಧತಿ ರೈತವಾರಿ ಪದ್ಧತಿ
5, ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ್ ಅಧಿಕಾರಿ ವಾರನ್ ಹೇಸ್ಟಿಂಗ್ಸ್
6. ರೆಗ್ಯುಲೇಟಿಂಗ್ ಕಾಯ್ದೆ 1773 ರಲ್ಲಿ ಜಾರಿಗೆ ಬಂದಿತು.
II ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು?
ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಲಾರ್ಡ ಕಾರ್ನವಾಲೀಸ್.
2. ರೆಗ್ಯುಲೇಟಿಂಗ್ ಕಾಯ್ದೆಯನ್ನು ಯಾವಾಗ ಜಾರಿಗೊಳಿಸಲಾಯಿತು?
ರೆಗ್ಯುಲೇಟಿಂಗ್ ಕಾಯ್ದೆಯನ್ನು 1773ರಲ್ಲಿ ಜಾರಿಗೊಳಿಸಲಾಯಿತು.
3. ರೆಗ್ಯುಲೇಟಿಂಗ್ ಕಾಯ್ದೆಯ ಉದ್ದೇಶವೇನು?
ರೆಗ್ಯುಲೇಟಿಂಗ್ ಕಾಯ್ದೆಯ ಉದ್ದೇಶ ನಿಯಂತ್ರಣ ಹೇರುವುದು,
4. ಕಲ್ಕತ್ತಾದಲ್ಲಿ ಫೋರ್ಟ ವಿಲಿಯಂ ಕಾಲೇಜನ್ನು ಸ್ಥಾಪಿಸಿದವರು ಯಾರು?
ಕಲ್ಕತ್ತಾದಲ್ಲಿ ಫೋರ್ಟ ವಿಲಿಯಂ ಕಾಲೇಜನ್ನು ಸ್ಥಾಪಿಸಿದವರು ಲಾರ್ಡ್ ಕಾರ್ನವಾಲೀಸ್.
5. “ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ” ಎಂದು ಪ್ರತಿಪಾದಿಸಿದವರು ಯಾರು?
“ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ” ಎಂದು ಪ್ರತಿಪಾದಿಸಿದವರು ಲಾರ್ಡ ಕಾರ್ನವಾಲೀಸ್.
6. ದಿವಾನಿ ಆದಾಲತ್ ಮತ್ತು ಫೌಜದಾರಿ ಅದಾಲತ್‌ಗಳನ್ನು ಜಾರಿಗೆ ತಂದವರು ಯಾರು?
ದಿವಾನಿ ಆದಾಲತ್ ಮತ್ತು ಫೌಜದಾರಿ ಅದಾಲತ್‌ಗಳನ್ನು ಜಾರಿಗೆ ತಂದವರು ವಾರನ್ ಹೇಸ್ಟಿಂಗ್ಸ್
7. ದಿವಾನಿ ಅದಾಲತ್ ಎಂದರೇನು?
ದಿವಾನಿ ಆದಾಲತ್ ಎಂದರೆ ನಾಗರೀಕ ನ್ಯಾಯಾಲಯ,
8. ಫೌಜದಾರಿ ಆದಾಲತ್ ಎಂದರೇನು?
ಫೌಜದಾರಿ ಅದಾಲತ್ ಎಂದರೆ ಅಪರಾಧ ನ್ಯಾಯಾಲಯ.
9. ನಾಗರೀಕ ನ್ಯಾಯಾಲಯಗಳು ಯಾರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು?
ನಾಗರೀಕ ನ್ಯಾಯಾಲಯಗಳು ಯುರೋಪಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು
10. ಪ್ರಥಮತಃ ವ್ಯವಸ್ಥಿತವಾದ ಪೋಲಿಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದವನು ಯಾರು?
ಪ್ರಥಮತಃ ವ್ಯವಸ್ಥಿತವಾದ ಪೋಲಿಸ್ ವಿಭಾಗವನ್ನು ಆಸ್ಥಿತ್ವಕ್ಕೆ ತಂದವನು ಲಾರ್ಡ ಕಾರ್ನವಾಲೀಸ್.
11. ಸೂಪರಿಡೆಂಟೆಂಟ್ ಆಫ್ ಪೋಲಿಸ್ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದವನು ಯಾರು?
ಸೂಪರಿಡೆಂಟೆಂಟ್ ಆಫ್ ಪೋಲಿಸ್ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದವನು ಲಾರ್ಡ ಕಾರ್ನವಾಲೀಸ್.
12. ಕೊತ್ವಾಲರ ಕಾರ್ಯಗಳೇನು?
ಹಳ್ಳಿಗಳ ಮಟ್ಟದಲ್ಲಿ ಕಳ್ಳತನ,ಆಪರಾಧಗಳು,ದರೋಡೆಗಳ ನಿಯಂತ್ರಣ
13, 1902ರ ಪೋಲಿಸ್ ಕಮಿಷನ್ ಕಾಯ್ದೆಯ ಮಹತ್ವವೇನು?
1902ರ ಪೋಲಿಸ್ ಕಮಿಷನ್ ಕಾಯ್ದೆಯ ಮಹತ್ವ ವಿದ್ಯಾರ್ಹತೆಯನ್ನು ಪಡೆದವರನ್ನು ಅಧಿಕಾರಿ ಹುದ್ದೆಗೆ ನೇಮಿಸುವ ಅವಕಾಶವನ್ನು ಕಲ್ಪಿಸಿತು.
14. ಬ್ರಿಟಿಷರ ಕಾಲದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಯಾವುದು?
ಬ್ರಿಟಿಷರ ಕಾಲದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಸುಬೇದಾರ್ ಸ್ಥಾನ
15. ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲು ನೇಮಕವಾದ ಸಮಿತಿ ಯಾವುದು?
ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲು ನೇಮಕವಾದ ಸಮಿತಿ ಪೀಲ್ ಎಂಬುವವರ ನೇತೃತ್ವದ
16. ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಲಾರ್ಡ ಕಾರ್ನವಾಲೀಸ್
17. ಖಾಯಂ ಜಮೀನ್ದಾರಿ ಪದ್ಧತಿ ಎಂದರೇನು?
ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಪಡೆಯಲು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದ ಹೊಸ ಕಂದಾಯ ಪದ್ಧತಿಯನ್ನು ಖಾಯಂ ಜಮೀನ್ದಾರಿ ಪದ್ಧತಿ ಎನ್ನುವರು.
18. “ಭಾರತದ ರೈತರು ಸಾಲದಲ್ಲೇ ಹುಟ್ಟಿಸಾಲದಲ್ಲೇ ಬದುಕಿ,ಸಾಲದಲ್ಲೇ ಸತ್ತರು” ಎಂದವರು ಯಾರು?
“ಭಾರತದ ರೈತರು ಸಾಲದಲ್ಲೇ ಹುಟ್ಟಿಸಾಲದಲ್ಲೇ ಬದುಕಿ,ಸಾಲದಲ್ಲೇ ಸತ್ತರು” ಎಂದವರು ಚಾರ್ಲ ಮೆಟಕಾರ್ಫ್
19. ಭಾರತದ ರೈತರು ಸಾಲದಲ್ಲೇ ಹುಟ್ಟಿಸಾಲದಲ್ಲೇ ಬದುಕಿ,ಸಾಲದಲ್ಲೇ ಸಾಯಲು ಕಾರಣವೇನು?
ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ,ಸಾಲದಲ್ಲೇ ಸಾಯಲು ಕಾರಣ ಬ್ರಿಟಿಷ್ ಭೂಕಂದಾಯ ನೀತಿ
20. ಮಹಲ್ ಎಂದರೇನು?
ಮಹಲ್ ಎಂದರೆ ತಾಲ್ಲೂಕು.
21. ಮಹಲ್‌ವಾರಿ ಪದ್ಧತಿಯನ್ನು ಪ್ರಯೋಗಿಸಿದವರು ಯಾರು?
ಮಹಲ್ವಾರಿ ಪದ್ಧತಿಯನ್ನು ಪ್ರಯೋಗಿಸಿದವರು ಆರ್.ಎಂ.ಬರ್ಡ ಮತ್ತು ಜೇಮ್ಸ್ ಥಾಮ್ಸನ್
22. ರೈತವಾರಿ ಪದ್ಧತಿಯನ್ನು ಮೊದಲು ಜಾರಿಗೊಳಿಸಿದವನು ಯಾರು?
ರೈತವಾರಿ ಪದ್ಧತಿಯನ್ನು ಮೊದಲು ಜಾರಿಗೊಳಿಸಿದವನು ಅಲೆಕ್ಸಾಂಡರ್ ರೀಡ್.
23. ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಎಲ್ಲಿ ಜಾರಿಗೊಳಿಸಲಾಯಿತು?
ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಬಾರಮಲ್ ಪ್ರಾಂತ್ಯದಲ್ಲಿ ಜಾರಿಗೊಳಿಸಲಾಯಿತು.
24. ರೈತವಾರಿ ಪದ್ಧತಿಯನ್ನು ಮದರಾಸು ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದವನು ಯಾರು?
ರೈತವಾರಿ ಪದ್ಧತಿಯನ್ನು ಮದರಾಸು ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದವನು ಥಾಮಸ್ ಮನ್ರೋ
25. ಯಾವ ಪದ್ಧತಿಯಿಂದ ಗರಿಷ್ಠ ಪ್ರಮಾಣದ ರೈತರು ಸಾಲದ ಸುಳಿಗೆ ಸಿಲುಕಿದರು?
ರೈತವಾರಿ ಪದ್ಧತಿಯಿಂದ ಪದ್ಧತಿಯಿಂದ ಗರಿಷ್ಠ ಪ್ರಮಾಣದ ರೈತರು ಸಾಲದ ಸುಳಿಗೆ ಸಿಲುಕಿದರು.
26. ಆಧುನಿಕ ಶಿಕ್ಷಣ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ ಯಾರು?
ಆಧುನಿಕ ಶಿಕ್ಷಣ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ ವಾರನ್ ಹೇಸ್ಟಿಂಗ್ಸ್,
27. ಕಲ್ಕತ್ತಾ ಮದರಸಾವನ್ನು ಪ್ರಾರಂಭಿಸಿದವರು ಯಾರು?
ಕಲ್ಕತ್ತಾ ಮದರಸಾವನ್ನು ಪ್ರಾರಂಭಿಸಿದವರು ವಾರನ್ ಹೇಸ್ಟಿಂಗ್ಸ್,
28. ಬನಾರಸ್ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವರು ಯಾರು?
ಬನಾರಸ್ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವರು ಜೋನಾಥನ್ ಡಂಕನ್,
29. ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವರು ಯಾರು?
ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವರು ಚಾರ್ಲ್ಸ ಗ್ರಾಂಟ್,
30. ಗವರ್ನರ್ ಜನರಲ್‌ನ ಕಾರ್ಯಾಂಗ ಸಭೆಗೆ ಕಾನೂನು ಸದಸ್ಯನನ್ನಾಗಿ ಯಾರನ್ನು ನಮಕ ಮಾಡಲಾಯಿತು?
ಗವರ್ನರ್ ಜನರಲ್ ಕಾರ್ಯಾಂಗ ಸಭೆಗೆ ಕಾನೂನು ಸದಸ್ಯನನ್ನಾಗಿ ಮೆಕಾಲೆಯನ್ನು ನೇಮಕ ಮಾಡಲಾಯಿತು.
31. ಸಾರ್ವಜನಿಕ ಶಿಕ್ಷಣ ಸಮಿತಿಯ ಅಧ್ಯಕ್ಷರು ಯಾರು?
ಸಾರ್ವಜನಿಕ ಶಿಕ್ಷಣ ಸಮಿತಿಯ ಅಧ್ಯಕ್ಷರು ಮೆಕಾಲೆ,
32. ಆಧುನಿಕ ಭಾರತ ಶಿಕ್ಷಣ ವ್ಯವಸ್ಥೆಗೆ ತಳಹದಿ ಯಾವುದು?
ಆಧುನಿಕ ಭಾರತ ಶಿಕ್ಷಣ ವ್ಯವಸ್ಥೆಗೆ ತಳಹದಿ ಮೆಕಾಲೆ ವರದಿ
33. “ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ,ಅಭಿಪ್ರಾಯ,ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗುವ ಹೊಸ ಭಾರತೀಯ ವಿದ್ಯಾವಂತ ವರ್ಗದ ಸೃಷ್ಟಿ ಯಾರ ಯೋಜನೆ ಆಗಿತ್ತು?
“ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ, ಅಭಿಪ್ರಾಯ,ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗುವ” ಹೊಸ ಭಾರತೀಯ ವಿದ್ಯಾವಂತ ವರ್ಗದ ಸೃಷ್ಟಿ ಮೆಕಾಲೆ ಯೋಜನೆ ಆಗಿತ್ತು.
34. ಕಲ್ಕತ್ತಾ,ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದವನು ಯಾರು?
ಕಲ್ಕತ್ತಾ,ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದವನು ಲಾರ್ಡ ಡಾಲ್‌ಹೌಸಿ
35. ಲಾರ್ಡ ಡಾಲ್‌ಹೌಸಿಯು ಕಲ್ಕತ್ತಾ,ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿದವರು ಯಾರು?
ಲಾರ್ಡ ಡಾಲ್‌ಹೌಸಿಯು ಕಲ್ಕತ್ತಾ,ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿದವರು ಸರ್ ಚಾಲ್ಸ್ ವುಡ್ಸ್ ಆಯೋಗ.
36. ರೆಗ್ಯುಲೇಟಿಂಗ್ ಶಾಸನ ಯಾವಾಗ ಜಾರಿಗೆ ಬಂದಿತು?
ರೆಗ್ಯುಲೇಟಿಂಗ್ ಶಾಸನ 1773ರಲ್ಲಿ ಜಾರಿಗೆ ಬಂದಿತು.
37. ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು “ಅಪರಾಧ ತೆರಿಗೆ” ಎಂದು ತೀಕ್ಷವಾಗಿ ಟೀಕಿಸಿದವನು ಯಾರು?
ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು “ಆಪರಾಧ ತೆರಿಗೆ”ಎಂದು ತೀಕ್ಷವಾಗಿ ಟೀಕಿಸಿದವನು ಎಡ್ಮಂಡ್ ಬರ್ಕ್
38. ಯಾವ ಶಾಸನದ ಮೇರೆಗೆ ಕಲ್ಕತ್ತಾದಲ್ಲಿ ಸುಪ್ರೀಂಕೋರ್ಟನ್ನು ಸ್ಥಾಪನೆ ಮಾಡಲಾಯಿತು?
ರೆಗ್ಯುಲೇಟಿಂಗ್ ಶಾಸನದ ಮೇರೆಗೆ ಕಲ್ಕತ್ತಾದಲ್ಲಿ ಸುಪ್ರೀಂಕೋರ್ಟನ್ನು ಸ್ಥಾಪನೆ ಮಾಡಲಾಯಿತು.
39. ಪಿಟ್ಸ್ ಇಂಡಿಯಾ ಕಾಯ್ದೆ ಯಾವಾಗ ಜಾರಿಗೆ ಬಂತು?
ಪಿಟ್ಸ್ ಇಂಡಿಯಾ ಕಾಯ್ದೆ 1784 ರಲ್ಲಿ ಜಾರಿಗೆ ಬಂತು.
40. ನಿಯಂತ್ರಣ ಮಂಡಳಿಯ ಸ್ಥಾಪನೆಗೆ ಅವಕಾಶ ನೀಡಿದ ಕಾಯ್ದೆ ಯಾವುದು?
ನಿಯಂತ್ರಣ ಮಂಡಳಿಯ ಸ್ಥಾಪನೆಗೆ ಅವಕಾಶ ನೀಡಿದ ಕಾಯ್ದೆ ಪಿಟ್ಸ್ ಇಂಡಿಯಾ ಕಾಯ್ದೆ
41. ಭಾರತದಲ್ಲಿದ್ದ ಕಂಪೆನಿಯ ಆಧೀನದ ಪ್ರದೇಶಗಳಿಗೆ ಇಂಗ್ಲೆಂಡಿನ ಸರ್ಕಾರವೇ ಅಂತಿಮ ಸಾರ್ವಭೌಮ ಎಂದು ಘೋಷಣೆ ಮಾಡಿದ ಕಾಯ್ದೆ ಯಾವುದು?
ಭಾರತದಲ್ಲಿದ್ದ ಕಂಪೆನಿಯ ಅಧೀನದ ಪ್ರದೇಶಗಳಿಗೆ ಇಂಗ್ಲೆಂಡಿನ ಸರ್ಕಾರವೇ ಅಂತಿಮ ಸಾರ್ವಭೌಮಎಂದು ಘೋಷಣೆ ಮಾಡಿದ ಕಾಯ್ದೆ ಪಿಟ್ಸ್ ಇಂಡಿಯಾ ಕಾಯ್ದೆ
42. ಚರ್ಚಗಳಿಗೆ ಭಾರತಕ್ಕೆ ಪ್ರವೇಶ ಮಾಡಲು ಅಧಿಕೃತ ಅವಕಾಶವನ್ನು ನೀಡಿದ ಶಾಸನ ಯಾವುದು?
ಚರ್ಚ್‌ಗಳಿಗೆ ಭಾರತಕ್ಕೆ ಪ್ರವೇಶ ಮಾಡಲು ಅಧಿಕೃತ ಅವಕಾಶವನ್ನು ನೀಡಿದ ಶಾಸನ 1813ರ ಚಾರ್ಟರ್ ಕಾಯ್ದೆ
43. ಬಂಗಾಳದ ಗವರ್ನರ್ ಜನರಲ್ ನನ್ನು ಭಾರತದ ಗವರ್ನರ್ ಜನರಲ್ ಆಗಿ ನಾಮಕರಣ ಮಾಡಿದ ಶಾಸನ ಯಾವುದು?
ಬಂಗಾಳದ ಗವರ್ನರ್ ಜನರಲ್‌ನನ್ನು ಭಾರತದ ಗವರ್ನರ್ ಜನರಲ್ ಆಗಿ ನಾಮಕರಣ ಮಾಡಿದ ಶಾಸನ 1833ರ ಚಾರ್ಟರ್ ಕಾಯ್ದೆ
44. ಗವರ್ನರ್ ಜನರಲ್ ಪದನಾಮವನ್ನು ಬದಲಾಯಿಸಿ ವೈಸರಾಯ್ ಎಂಬ ಪದನಾಮ ನೀಡಿದ ಶಾಸನ ಯಾವುದು?
ಗವರ್ನರ್ ಜನರಲ್ ಪದನಾಮವನ್ನು ಬದಲಾಯಿಸಿ ವೈಸರಾಯ್ ಎಂಬ ಪದನಾಮ ನೀಡಿದ ಶಾಸನ ಭಾರತ ಸರ್ಕಾರದ ಕಾಯ್ದೆ-1858
45. ಭಾರತದ ಮೊದಲ ವೈಸರಾಯ್ ಯಾರು?
ಭಾರತದ ಮೊದಲ ವೈಸರಾಯ್ ಲಾರ್ಡ ಕ್ಯಾನಿಂಗ್
46. 1909 ಭಾರತೀಯ ಪರಿಷತ್ ಕಾಯ್ದೆಯ ಮತ್ತೊಂದು ಹೆಸರೇನು?
1909 ಭಾರತೀಯ ಪರಿಷತ್ ಕಾಯ್ದೆಯ ಮತ್ತೊಂದು ಹೆಸರು ಮಿಂಟೊ ಮಾರ್ಲೆ ಸುಧಾರಣಾ ಕಾಯ್ದೆ
47. ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದ ಶಾಸನ ಯಾವುದು?
ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದ ಶಾಸನ 1909 ಭಾರತೀಯ ಪರಿಷತ್ ಕಾಯ್ದೆ
48. 1919 ಭಾರತೀಯ ಪರಿಷತ್ ಕಾಯ್ದೆಯ ಮತ್ತೊಂದು ಹೆಸರೇನು?
1919 ಭಾರತೀಯ ಪರಿಷತ್ ಕಾಯ್ದೆಯ ಮತ್ತೊಂದು ಹೆಸರು ಮಾಂಟೆಗೂ-ಚೆಮ್ಸ್‌ಫರ್ಡ ಸುಧಾರಣಾ ಕಾಯ್ದೆ
49. ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಭಾಗವಹಿಸಲು ಪ್ರೇರೇಪಿಸಿದ ಹಿನ್ನಲೆಯಲ್ಲಿ ಜಾರಿಗೆ ತರಲಾದ ಶಾಸನ ಯಾವುದು?
1919 ಭಾರತೀಯ ಪರಿಷತ್ ಕಾಯ್ದೆ
50. “ಭಾರತೀಯರಿಗೆ ಹಂತ ಹಂತವಾಗಿ ಜವಾಬ್ದಾರಿ ಸರ್ಕಾರವನ್ನು ನೀಡುವುದೇ ಬ್ರಿಟಿಷ್ ಸರಕಾರದ ಗುರಿ”ಎಂದು ಘೋಷಿಸಿದವರು ಯಾರು?
ಮಾಂಟೆಗೋ
51. ಪ್ರಾಂತ್ಯಗಳಲ್ಲಿ ದ್ವಿ ಸರ್ಕಾರ ಪದ್ಧತಿಗೆ ಅವಕಾಶ ನೀಡಿದ ಶಾಸನ ಯಾವುದು?
1919 ಭಾರತೀಯ ಪರಿಷತ್ ಕಾಯ
52.ಭಾರತದ ಸಂವಿಧಾನ ರಚನೆಗೆ ಬುನಾದಿಯಾದ ಶಾಸನ ಯಾವುದು?
1935ರ ಭಾರತ ಸರ್ಕಾರದ ಕಾಯ್ದೆ
53.ಭಾರತೀಯ ರಿಸರ್ವ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಶಾಸನ ಯಾವುದು?
1935ರ ಭಾರತ ಸರ್ಕಾರದ ಕಾಯ್ದೆ
54. ಭಾರತದಲ್ಲಿ ಫೆಡರಲ್ ಕೋರ್ಟ ಸ್ಥಾಪನೆಗೆ ಅವಕಾಶ ನೀಡಿದ ಶಾಸನ ಯಾವುದು?
1935ರ ಭಾರತ ಸರ್ಕಾರದ ಕಾಯ್ದೆ
III ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ
1. ಈಸ್ಟ್ ಇಂಡಿಯಾ ಕಂಪನಿ ಮೂಲಕ ದೇಶದಲ್ಲಿ ಬ್ರಿಟಿಷರು ರೂಪಿಸಿದ ನ್ಯಾಯಾಂಗ ವ್ಯವಸ್ಥೆಯನ್ನು ವಿಶ್ಲೇಷಿಸಿರಿ.
- ವಾರನ್ ಹೇಸ್ಟಿಂಗ್ಸ್‌ನು ಜಾರಿಗೆ ತಂದ ಹೊಸ ಯೋಜನೆಯ ಪ್ರಕಾರ ಪ್ರತಿ ಜಿಲ್ಲೆಯು ಎರಡು ಬಗೆಯ ನ್ಯಾಯಾಲಯಗಳನ್ನು ಹೊಂದಿರಬೇಕಿತ್ತು.ಅವುಗಳೆಂದರೆ – ‘ದಿವಾನಿ ಅದಾಲತ್’ ಎಂಬ ನಾಗರೀಕ ನ್ಯಾಯಾಲಯಗಳು ಮತ್ತು ‘ಫೌಜದಾರಿ ಅದಾಲತ್’ ಎಂಬ ಆಪರಾಧ ನ್ಯಾಯಾಲಯಗಳು. • ಇಲ್ಲಿ ನಾಗರೀಕ ನ್ಯಾಯದಾನದ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂ ಶಾಸ್ತ್ರಗ್ರಂಥಗಳ ಪ್ರಕಾರ ಮತ್ತು ಮುಸ್ಲಿಮರಿಗೆ ಷರಿಯತ್ ಕಾನೂನುಗಳ ಪ್ರಕಾರ ನ್ಯಾಯದಾನ ನೀಡಲಾಗುತ್ತಿತ್ತು.
- ಅಪರಾಧ ಪ್ರಕರಣಗಳಿಗೆ ಬಂದಾಗ ಎಲ್ಲರಿಗೂ ಇಸ್ಲಾಂ ಕಾನೂನುಗಳ ಅನುಸಾರ ವಿಚಾರಣೆ ನಡೆಸಲಾಗುತ್ತಿತ್ತು. ಕ್ರಮೇಣ ಬ್ರಿಟಿಷ್ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಅಪರಾಧ ಕಾನೂನುಗಳಲ್ಲಿ ಬದಲಾವಣೆ ತರಲಾಯಿತು.
- ನಾಗರಿಕ ನ್ಯಾಯಾಲಯಗಳು ಯೂರೋಪಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅಪರಾಧ ನ್ಯಾಯಾಲಯಗಳು ‘ಕಾಜಿ’ಗಳ ಆಧೀನದಲ್ಲಿದ್ದರೂ ಯುರೋಪಿಯನ್ನರ ಮೇಲ್ವಿಚಾರಣೆಯಲ್ಲಿಯೇ ಕಾರ್ಯನಿರ್ವಹಿಸಬೇಕಾಗಿತ್ತು.
2. ಬ್ರಿಟಿಷ್ ಕಾಲದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ತಂದಂತಹ ಸುಧಾರಣೆಗಳಾವುವು?
- ಆಂತರಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊತ್ತಿರುವ ವರ್ಗವೆ ಪೊಲೀಸರು. ಲಾರ್ಡ್ ಕಾರ್ನ್‌ವಾಲೀಸನು ಪ್ರಥಮತಃ ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಆಸ್ತಿತ್ವಕ್ಕೆ ತಂದನು.
- ಇವನು ‘ಸೂಪರಿಡೆಂಟೆಂಟ್ ಆಫ್ ಪೊಲೀಸ್’ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದನು. • ಪ್ರತಿ ಜಿಲ್ಲೆಯನ್ನು ‘ತಾಣೆ’ಗಳನ್ನಾಗಿ ವಿಭಜಿಸಿ ಪ್ರತಿ ತಾಣೆಯನ್ನು ‘ಕೊತ್ವಾಲ’ರ ಆಧೀನದಲ್ಲೂ, ಹಳ್ಳಿಗಳು ‘ಚೌಕಿದಾರ’ರ ಆಧೀನದಲ್ಲೂ ಇರುವಂತೆ ಮಾಡಿದನು.
- ಕೊತ್ವಾಲರುಗಳು ಹಳ್ಳಿಗಳ ಮಟ್ಟದಲ್ಲಿ ಕಳ್ಳತನ, ಅಪರಾಧಗಳು, ದರೋಡೆಗಳ ನಿಯಂತ್ರಣದ ಜವಾಬ್ದಾರಿಯನ್ನು ಹೊತ್ತಿದ್ದರು.
- ಬ್ರಿಟಿಷ್ ಮ್ಯಾಜಿಸ್ಟ್ರೇಟ್‌ಗಳನ್ನು ನೇಮಕ ಮಾಡುವ ಪದ್ಧತಿ ಜಾರಿಗೊಂಡಿತು. ಪೊಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್‌ಗಳ ಆಧೀನಕ್ಕೊಳಪಟ್ಟರು.
3. ಖಾಯಂ ಜಮೀನ್ದಾರಿ ಪದ್ಧತಿಯು ರೈತರನ್ನು ‘ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸಾಯುವಂತೆ’ ಮಾಡಿತು. ಹೇಗೆ? ವಿಮರ್ಶಿಸಿ,
- ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಪಡೆಯಲು ಲಾರ್ಡ್ ಕಾರ್ನ್ ವಾಲೀಸನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಹೊಸ ಕಂದಾಯ ಪದ್ಧತಿಯನ್ನು ಜಾರಿಗೊಳಿಸಿದನು. ಇದನ್ನು ಖಾಯಂ ಜಮೀನ್ದಾರಿ ಪದ್ಧತಿ ಎಂದು ಕರೆಯಲಾಯಿತು.
- ಈ ಪದ್ಧತಿಯಲ್ಲಿ ಜಮೀನ್ದಾರನು ಭೂಮಾಲೀಕನಾದನು,
- ಈ ಹೊಸ ಯೋಜನೆಯ ಪ್ರಕಾರ ಜಮೀನ್ದಾರನು ಪ್ರತಿವರ್ಷವೂ ನಿರ್ದಿಷ್ಟ ದಿನಕ್ಕೆ ಮೊದಲೇ ಅವನು ಒಪ್ಪಿಕೊಂಡಿದ್ದ ಕಂದಾಯದ ಮೊತ್ತವನ್ನು ಸರಕಾರಕ್ಕೆ ಸಲ್ಲಿಸಬೇಕಿತ್ತು.
- ಭೂಮಾಲೀಕನಿಗೆ ಈ ಪದ್ಧತಿಯಿಂದ ಹೆಚ್ಚಿನ ಲಾಭವಾಯಿತು.
- ಏಕೆಂದರೆ ಸರಕಾರಕ್ಕೆ ಸಲ್ಲಿಬೇಕಾದ ಹಣದ ಮೊತ್ತಕ್ಕಿಂತ ಹೆಚ್ಚಿಗೆ ವಸೂಲು ಮಾಡಿದ ಹಣವನ್ನು ಅವನೇ ಇಟ್ಟುಕೊಳ್ಳಬಹುದಾಗಿತ್ತು.
- ಬರಗಾಲ (ಅನಾವೃಷ್ಟಿ) ಅಥವಾ ವಿಪರೀತ ಮಳೆ ಅತಿವೃಷ್ಟಿಯ ಕಾರಣದಿಂದ ಕಂದಾಯವನ್ನು ವಸೂಲಿ ಮಾಡಲು ಸಾಧ್ಯವಾಗದೆ ಸರಕಾರಕ್ಕೆ ಸಲ್ಲಿಸಬೇಕಾದ ಹಣದ ಮೊತ್ತವನ್ನು ಸಲ್ಲಿಸಲಾಗದಿದ್ದರೆ, ಬ್ರಿಟಿಷ್ ಸರಕಾರವೂ ಭೂಮಿಯ ಒಡೆತನವನ್ನು ಆವನಿಂದ ಕಸಿದುಕೊಳ್ಳುತ್ತಿತ್ತು.
- ಈ ಪದ್ಧತಿಯಿಂದ ಬ್ರಿಟಿಷರಿಗೆ ಮತ್ತು ಜಮೀನ್ದಾರರಿಗೆ ಲಾಭವಾಯಿತೇ ವಿನಃ ರೈತರಿಗಾಗಲಿಲ್ಲ.
- ರೈತರು, ರೈತ ಕೂಲಿಕಾರ್ಮಿಕರು ಜಮೀನ್ದಾರರ ಭೂಮಿಯಲ್ಲಿ ಕೆಲಸ ಮಾಡಲು ನಿರಂತರ ಅವಕಾಶಗಳೂ ಸಿಗದೆ ಬಹುಮುಖಿ ಶೋಷಣೆಗೆ ಒಳಗಾದರು ಆತಂತ್ರ ಸ್ಥಿತಿಯಲ್ಲೇ ಬದುಕನ್ನು ಕಳೆಯತೊಡಗಿದರು.
4. ರೈತವಾರಿ ಪದ್ಧತಿಯು ಒಳಗೊಂಡಿದ್ದ ಪ್ರಮುಖಾಂಶಗಳು ಯಾವುವು?
- ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಬಾರಮಹಲ್ ಪ್ರಾಂತ್ಯದಲ್ಲಿ ಅಲೆಕ್ಸಾಂಡರ್ ರೀಡ್ ಎನ್ನುವವನು ಜಾರಿಗೊಳಿಸಿದನು.
- ಈ ಪದ್ಧತಿಯನ್ನು ಥಾಮಸ್ ಮನ್ರೋ ಮದರಾಸು ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ನಂತರ ಜಾರಿಗೊಳಿಸಿದನು.
- ಈ ಪದ್ಧತಿಯ ಪ್ರಕಾರ ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕವನ್ನು ಕಲ್ಪಿಸಲಾಯಿತು.
- ಭೂಮಿ ಉಳುಮೆ ಮಾಡುತ್ತಿದ್ದವನನ್ನು ಆದರ ಮಾಲೀಕನೆಂದು ಸರ್ಕಾರ ಮಾನ್ಯಮಾಡಿತು.
- ಅವನೇ ನೇರವಾಗಿ ತಾನು ಕೃಷಿ ಭೂಮಿಯಲ್ಲಿ ಪಡೆದ ಉತ್ಪನ್ನದ ಶೇಕಡ 50ರಷ್ಟು ಭಾಗವನ್ನು ಕಂದಾಯದ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾಯಿತು.
- ಕಂದಾಯವನ್ನು 30 ವರ್ಷಗಳ ಅವಧಿಗೆ ಎಂದು ನಿರ್ಧರಿಸಲಾಯಿತು. ನಂತರ ಅದನ್ನು ಪರಾಮರ್ಶೆಗೂ ಒಳಪಡಿಸಬಹುದಾಗಿತ್ತು.
- ಸಣ್ಣ ರೈತರಿಗೆ ತಮ್ಮ ಅಧೀನದಲ್ಲಿದ್ದ ಭೂಮಿ ಮೇಲಿನ ಹಕ್ಕನ್ನು ನೀಡಿತ್ತಾದರೂ, ಭೂಕಂದಾಯ ಪದ್ಧತಿಯು ಹೆಚ್ಚಿನ ವಾರ್ಷಿಕ ಮೊತ್ತಕ್ಕೆ ನಿಗದಿಪಡಿಸಿದ್ದರಿಂದ ರೈತರು ಸಂಕಷ್ಟಗಳಿಗೆ ಒಳಗಾದರು. ಕಂದಾಯ ವಸೂಲು ಮಾಡುವ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಿದ್ದರು.
- ಬೆಳೆಗಳು ಸರಿಯಾಗಿ ಫಸಲು ನೀಡದ ಸಂದರ್ಭದಲ್ಲಿ ರೈತರು ಹಣದ ಲೇವಾದೇವಿಗಾರರಿಂದ ಸಾಲ ತೆಗೆದುಕೊಂಡು, ಮರುಪಾವತಿಸಲಾಗದೆ ಅವರಿಗಿದ್ದ ಸಣ್ಣ ಪುಟ್ಟ ಜಮೀನನ್ನು ಮಾರಾಟಮಾಡುವಂತಾಯಿತು.
5. ಬ್ರಿಟಿಷರ ಕಂದಾಯ ನೀತಿಗಳಿಂದ ಉಂಟಾದ ಪರಿಣಾಮಗಳಾವುವು?
- ನಿಜವಾದ ರೈತರನ್ನು ಶೋಷಿಸುವ ಹೊಸ ಸಾಮಾಜಿಕ ವರ್ಗವಾದ ಜಮೀಬ್ದಾರಿ ಸಮುದಾಯ ಸೃಷ್ಟಿಯಾಯಿತು.
- ಜಮೀನ್ದಾರರ ಶೋಷಣೆಗೆ ಒಳಗಾದ ರೈತರು ವಿವಿಧ ಬಗೆಯ ಸಂಕಷ್ಟಗಳಿಗೆ ಒಳಗಾದರು. ಕ್ರಮೇಣ ನಿರ್ಗತಿಕರಾದರು.
- ಭೂಮಿ ಮಾರಾಟದ ವಸ್ತುವಾಯಿತು. ಇದನ್ನು ಪರಭಾರೆ (ಬಾಡಿಣರಚಿರಜ) ಮಾಡಿ ಹಣವನ್ನು ಸಾಲವಾಗಿ ಪಡೆಯಬಹುದಾಗಿತ್ತು.
- ಅನೇಕ ಜಮೀನ್ದಾರರೂ ಕೂಡ ಕಂದಾಯವನ್ನು ಸಲ್ಲಿಸುವ ಸಲುವಾಗಿ ತಮ್ಮ ಜಮೀನನ್ನು ಪರಭಾರೆ ಮಾಡಿದರು.
- ಕೃಷಿ ಕ್ಷೇತ್ರವು ವಾಣಿಜ್ಯಕರಣಗೊಂಡು, ಇಂಗ್ಲೆಂಡಿನಲ್ಲಾದ ಕೈಗಾರಿಕಾಕರಣದಿಂದ ಅಲ್ಲಿನ ಕೈಗಾರಿಕೆಗಳಿಗೆ ಬೇಡಿದ ಕಚ್ಚಾವಸ್ತುಗಳನ್ನೇ ಬೆಳೆಯಬೇಕಾಯಿತು.
- ಹಣದ ಲೇವಾದೇವಿಗಾರರು ಬಲಿಷ್ಠರಾಗತೊಡಗಿದರು.
6. ಬ್ರಿಟಿಷ್ ಶಿಕ್ಷಣದಿಂದ ಉಂಟಾದ ಪರಿಣಾಮಗಳ ಪಟ್ಟಿ ಮಾಡಿ.
- ಭಾರತೀಯರು ಆಧುನಿಕತೆ, ಜಾತ್ಯತೀತತೆ, ಪ್ರಜಾಪ್ರಭುತ್ವ, ವೈಜ್ಞಾನಿಕ ಆಲೋಚನಾ ಕ್ರಮದ ಜೊತೆಗೆ ರಾಷ್ಟ್ರೀಯವಾದಿ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು.
- ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯ ರಚನೆಗಳಿಗೆ ಪ್ರೋತ್ಸಾಹ ದೊರೆಯಿತು. ಇದರಿಂದ ವಿದ್ಯಾವಂತ ವರ್ಗದ ಆಲೋಚನಾ ಕ್ರಮದಲ್ಲೂ ಏಕತೆಯ ಸ್ವರೂಪವನ್ನು ಕಾಣುತ್ತೇವೆ.
- ವೃತ್ತ ಪತ್ರಿಕೆಗಳು ಹುಟ್ಟಿ ಬೆಳೆಯತೊಡಗಿದವು.
- ಪತ್ರಿಕೆಗಳಲ್ಲಿ ಸರ್ಕಾರದ ನೀತಿಗಳನ್ನು ವಿಮರ್ಶಿಸುವ ಮೂಲಕ ಭಾರತೀಯರಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ವಿಮರ್ಶಾತ್ಮಕ ಅಭಿಪ್ರಾಯ ಬೆಳೆಯಲು ಸಾಧ್ಯವಾಯಿತು.
- ಹೊಸ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಹುಟ್ಟಿಕೊಂಡವು.
- ಜೆ.ಎಸ್.ಮಿಲ್, ರೂಸೋ, ಮಾಂಟೆಸ್ಕೊ ಮುಂತಾದವರ ಚಿಂತನೆಗಳು ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆಯನ್ನು ತಂದವು.
- ಜಗತ್ತಿನಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಗಳ ಪ್ರಭಾವ ಭಾರತೀಯರ ಮೇಲೂ ಆಯಿತು
7. ರೆಗ್ಯುಲೇಟಿಂಗ್ ಕಾಯ್ದೆ ಹೊಂದಿದ್ದ ನಿಬಂಧನೆಗಳಾವುವು?
- ಬಂಗಾಳದ ಪ್ರೆಸಿಡೆನ್ಸಿಯು ಉಳಿದ ಮುಂಬಯಿ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳ ಮೇಲೆ ಅಧಿಕಾರವನ್ನು ಪಡೆಯಿತು.
- ಬಂಗಾಳದ ಗವರ್ನರನು ಮೂರು ಪ್ರೆಸಿಡೆನ್ಸಿಗಳಿಗೆ ಗವರ್ನರ್ ಜನರಲ್ ಆದನು.
- ಗವರ್ನರ್ ಜನರಲ್ಲನಿಗೆ ಬಾಂಬೆ ಮತ್ತು ಮದರಾಸು ಪ್ರೆಸಿಡೆನ್ಸಿಗಳಿಗೆ ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಈ ಕಾನೂನು ನೀಡಿತು.
- ಬಂಗಾಳ ಸರ್ಕಾರದ ಮತ್ತು ಇಂಗ್ಲೆಂಡಿನ ನಿರ್ದೇಶಕ ಮಂಡಳಿಯ ಪೂರ್ವಾನುಮತಿಯಿಲ್ಲದೆ ಬಾಂಬೆ ಮತ್ತು ಮದರಾಸು ಸರ್ಕಾರಗಳು ಯಾರ ಮೇಲೂ ಯುದ್ಧ ಘೋಷಿಸುವಂತಿಲ್ಲ ಅಥವಾ ಶಾಂತಿ ಸಂಧಾನವನ್ನು ನಡೆಸುವಂತಿಲ್ಲ.
- ಕಲ್ಕತ್ತಾದಲ್ಲಿ ಈ ಕಾಯ್ದೆಯ ಮೇರೆಗೆ “ಸುಪ್ರೀಂಕೋರ್ಟ್” ಅನ್ನು ಸ್ಥಾಪಿಸಲಾಯಿತು.
8, 1858ರ ಭಾರತ ಸರ್ಕಾರದ ಕಾಯ್ದೆಯ ಪ್ರಮುಖ ಅಂಶಗಳು ಯಾವುವು?
- ಈಸ್ಟ್ ಇಂಡಿಯಾ ಕಂಪನಿಯ ಮಾನ್ಯತೆ ರದ್ದುಗೊಳಿಸಿ, ಭಾರತವನ್ನು ರಾಣಿಯವರ ಆಡಳಿತಕ್ಕೆ ವರ್ಗಾಯಿಸಲಾಯಿತು.
- ಗವರ್ನರ್ ಜನರಲ್ ಹುದ್ದೆಯ ಪದನಾಮವನ್ನು ಬದಲಾಯಿಸಿ “ವೈಸ್‌ರಾಯ್” ಎಂಬ ಪದನಾಮವನ್ನು ನೀಡಿದರು. ವೈಸರಾಯ್ ಆಗಿ “ಲಾರ್ಡ್ ಕ್ಯಾನಿಂಗ್” ನೇಮಕಗೊಂಡರು.
- “ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ” ಸ್ಥಾನವನ್ನು ಬ್ರಿಟಿಷ್ ಸರ್ಕಾರ ಸೃಷ್ಟಿಸಿತು.
- ಬ್ರಿಟಿಷ್ ಮಂತ್ರಿ ಮಂಡಲದ ಸದಸ್ಯರಾಗಿದ್ದ ಇವರು ಭಾರತದ ಆಡಳಿತವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದರು.
- ಇವರಿಗೆ ಸಹಾಯ ಮಾಡಲು 15 ಸದಸ್ಯರನ್ನೊಳಗೊಂಡ ಭಾರತ ಮಂಡಲಿ (ಕೌನ್ಸಿಲ್ ಆಫ್ಇಂಡಿಯಾ) ಅಸ್ತಿತ್ವಕ್ಕೆ ಬಂದಿತು
9. 1935ರ ಭಾರತ ಸರ್ಕಾರದ ಕಾಯ್ದೆ ‘ಭಾರತ ಸಂವಿಧಾನದ ಬುನಾದಿ’ ಸಮರ್ಥಿಸಿ.
- ಬ್ರಿಟಿಷ್ ಪ್ರಾಂತ್ಯಗಳ, ದೇಶಿಯ ಸಂಸ್ಥಾನಗಳು ಹಾಗೂ ಆಶ್ರಿತ ರಾಜರನ್ನೊಳಗೊಂಡ ಅಖಿಲ ಭಾರತ ಒಕ್ಕೂಟವನ್ನು ರಚಿಸಲು ಅವಕಾಶ ನೀಡಿತು.
- ಕೇಂದ್ರದಲ್ಲಿ “ದ್ವಿ ಸರಕಾರವನ್ನು ಸ್ಥಾಪಿಸಲಾಯಿತು.
- ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿತು.
- ಪ್ರಾಂತ್ಯಗಳಲ್ಲಿ “ದ್ವಿ ಸರಕಾರ” ಪದ್ಧತಿಯನ್ನು ರದ್ದುಗೊಳಿಸಿ, ಪ್ರಾಂತ್ಯಗಳಿಗೆ ಸ್ವಾಯತ್ತತೆ ನೀಡಲಾಯಿತು.
- ಭಾರತದಲ್ಲಿ “ಫೆಡರಲ್ ಕೋರ್ಟ್’ ಸ್ಥಾಪನೆಗೆ ಅವಕಾಶ ನೀಡಲಾಯಿತು
10. 1919ರ ಕಾಯ್ದೆಯ ಪ್ರಮುಖಾಂಶಗಳು ಯಾವುವು?
- ಕೇಂದ್ರದಲ್ಲಿ ದ್ವಿಸದನ ಶಾಸಕಾಂಗ ರಚನೆಗೆ ಅವಕಾಶ ನೀಡಲಾಯಿತು. ಅವುಗಳೆಂದರೆ, ಶಾಸಕಾಂಗ ಸಭೆ (ಕೆಳಮನೆ) ಮತ್ತು ರಾಜ್ಯಗಳ ಪರಿಷತ್ತು (ಮೇಲ್ಮನೆ) ರಚಿಸಲಾಯಿತು.
- ಪ್ರಾಂತ್ಯಗಳಲ್ಲಿ “ದ್ವಿಸರಕಾರ” ಪದ್ದತಿಗೆ ಅವಕಾಶ ನೀಡಲಾಯಿತು.
- ಭಾರತಕ್ಕೆ ಒಬ್ಬ ಹೈಕಮಿಷನರ್‌ರನ್ನು ನೇಮಕ ಮಾಡಲಾಯಿತು.
- ಸ್ವಯಂ ಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಭರವಸೆ ನೀಡಲಾಯಿತು.
- ಕೇಂದ್ರದ ಬಜೆಟ್‌ನಿಂದ ಪ್ರಾಂತ್ಯಗಳ ಬಜೆಟನ್ನು ಬೇರ್ಪಡಿಸಲಾಯಿತು.
- “ಪ್ರತ್ಯೇಕ ಚುನಾವಣಾ ಮತಗಟ್ಟೆ” ವ್ಯವಸ್ಥೆಯನ್ನು ಮುಸ್ಲಿಂ, ಸಿಖ್, ಅಂಗ್ಲ ಭಾರತೀಯರು ಮತ್ತು ಯುರೋಪಿಯನ್‌ರಿಗೆ ವಿಸ್ತರಿಸಲಾಯಿತು.
11. ಮಹಲ್ವಾರಿ ಪದ್ಧತಿಯನ್ನು ವಿವರಿಸಿ.
- ಉತ್ತರ ಪ್ರದೇಶ, ಮಧ್ಯಪ್ರದೇಶದ ಅನೇಕ ಭಾಗಗಳಲ್ಲಿ, ಪಂಜಾಬ್ ಮತ್ತು ದೆಹಲಿ ಪ್ರಾಂತ್ಯಗಳಲ್ಲಿ ಮಹಲ್ಲುಗಳೇ ಸಾಮೂಹಿಕ ಒಪ್ಪಂದಗಳನ್ನು ಮಾಡಿಕೊಂಡು, ಸರಕಾರಕ್ಕೆ ತೆರಿಗೆಯನ್ನು ಸಲ್ಲಿಸುವ ಪದ್ಧತಿಯನ್ನು ಜಾರಿಗೆ ತರಲಾಯಿತು.
- ಈ ಪದ್ಧತಿಯನ್ನು ಆರ್.ಎಂ. ಬರ್ಡ್ ಮತ್ತು ಜೇಮ್ಸ್ ಥಾನ್ಸನ್ ಪ್ರಯೋಗಿಸಿದರು.
- ‘ಮಹಲ್’ ಎಂದರೆ ತಾಲ್ಲೂಕು ಎಂದರ್ಥ.
- ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಈ ಪದ್ಧತಿಯ ಅನುಷ್ಠಾನದಲ್ಲಿ ವ್ಯತ್ಯಾಸಗಳಿದ್ದವು.
- ದೊಡ್ಡ ಮತ್ತು ಸಣ್ಣ ಪ್ರಮಾಣದ ಜಮೀನ್ದಾರರು ಈ ಪದ್ಧತಿಯ ಭಾಗವಾಗಿದ್ದರು. ಕಂಪನಿಯ ಸರ್ಕಾರದ ಅಧಿಕಾರಿಗಳು ಜಮೀನಿನಲ್ಲಿ ಆಗುವ ಉತ್ಪಾದನೆಗಿಂತಲೂ ಹೆಚ್ಚಿನ ಮೊತ್ತದ ವಾರ್ಷಿಕ ಪಾವತಿಗಳನ್ನು ನಿರ್ಧರಿಸಿದ್ದರಿಂದ ಆನೇಕ ಜಮೀನ್ದಾರರು ತಮ್ಮ ಭೂಮಾಲಿ ಕತ್ವವನ್ನು ಕಳೆದುಕೊಂಡರು.
- ಅವರನ್ನೇ ನೆಚ್ಚಿ ಬದುಕುತ್ತಿದ್ದ ಸಣ್ಣ ಕೃಷಿಕರು, ಕೃಷಿ ಕೂಲಿಕಾರರು ನಿರ್ಗತಿಕರಾದರು
12. ಬ್ರಿಟಿಷರು ಶಿಕ್ಷಣ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಯಾವುವು?
- ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿಯೆಂದರೆ ವಾರನ್
- ಅವನು ‘ಕಲ್ಕತ್ತಾ ಮದರಸಾ’ವನ್ನು ಪ್ರಾರಂಭಿಸಿದನು.
- ಜೊನಾಥನ್ ಡಂಕನ್ ಎಂಬ ಮತ್ತೊಬ್ಬ ಬ್ರಿಟಿಷ್ ವ್ಯಕ್ತಿಯು ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದನು.
- ಆದರೆ ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು ಚಾರ್ಲ್ಸ್ ಗ್ರಾಂಟ್,
- ವಿಲಿಯಂ ಬೆಂಟಿಂಕನು ಗವರ್ನರ್ ಜನರಲ್ ಆಗಿ ನೇಮಕಗೊಂಡ ನಂತರ ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ಮತ್ತಷ್ಟು ವಿಶೇಷ ಪ್ರೋತ್ಸಾಹ ದೊರೆಯಿತು.
- ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೇಮಕವಾದ ಸಮಿತಿಗೂ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಯಿತು.
- ಇಂಗ್ಲೀಷ್ ಶಿಕ್ಷಣ ಸಂಬಂಧಿಸಿದಂತೆ ಮೆಕಾಲೆಯು ಕೊಟ್ಟ ವರದಿಯ ಅಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾಯಿತು.
- ಗವರ್ನರ್ ಜನರಲ್ ಆದ ಲಾರ್ಡ್ ಡಾಲ್ ಹೌಸಿಯು ಕಲ್ಕತ್ತಾ, ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದನು.
13, 1813ರ ಚಾರ್ಟರ್ ಕಾಯ್ದೆಯು ಚಾರಿತ್ರಿಕವಾದದು.ಏಕೆ?
- ಈ ಕಾಯ್ದೆಯು ಈಸ್ಟ್ ಇಂಡಿಯಾ ಕಂಪನಿಗೆ ಮುಂದಿನ 20 ವರ್ಷಗಳು ಭಾರತದಲ್ಲಿರುವ ಅಧಿಕಾರವನ್ನು ನೀಡಿತು. ಈ ಕಾಯ್ದೆಯು ಜಾರಿಗೊಳ್ಳುವ ಪೂರ್ವದಲ್ಲಿ ಭಾರತದಲ್ಲಿ ವ್ಯಾಪಾರ ಮಾಡುವ ಅಧಿಕಾರವನ್ನು ಕಂಪನಿಗೆ ಮಾತ್ರವಲ್ಲದೆ ಇಚ್ಛೆಯುಳ್ಳವರೆಲ್ಲರಿಗೂ ನೀಡಬೇಕೆಂದು ದೊಡ್ಡ ಹೋರಾಟ ನಡೆಯಿತು.
- ಅನುಮತಿ ಮತ್ತು ಪರವಾನಿಗೆಯ ಹೊಸ ಕಾಲ ಆರಂಭವಾಯಿತು.
- ಇನ್ನು ಮುಂದೆ ಗವರ್ನರ್ ಜನರಲ್ ಮತ್ತು ಸೇನೆಯ ಮಹಾಮುಖ್ಯಸ್ಥರನ್ನು ನಿರ್ದೇಶಕ ಮಂಡಳಿಯು ನೇಮಿಸುವ ಅಧಿಕಾರವನ್ನು ಹೊಂದಿತು.
- ಚರ್ಚ್‌ಗಳಿಗೆ ಭಾರತಕ್ಕೆ ಪ್ರವೇಶಿಸುವ ಅಧಿಕೃತ ಅವಕಾಶವನ್ನು ನೀಡಲಾಯಿತು.
- ಭಾರತೀಯರಲ್ಲಿ ಹೊಸ ಜ್ಞಾನವನ್ನು ಪಸರಿಸುವ, ಅವರ ನೈತಿಕ ಮತ್ತು ಧಾರ್ಮಿಕ ಬದುಕನ್ನು ಎತ್ತರಿಸುವ ಜವಾಬ್ದಾರಿಯನ್ನು ಮಿಶನರಿ ಸಂಸ್ಥೆಗಳು ವಹಿಸಿಕೊಳ್ಳಬೇಕು ಎಂಬ ನಿರ್ದೇಶನವನ್ನು ನೀಡಲಾಯಿತು.
- ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ರೈಸ್ತ ಮಿಶನರಿಗಳು ಭಾರತಕ್ಕೆ ಬರತೊಡಗಿದರು.
- ಕ್ರೈಸ್ತ ಧರ್ಮದ ಪ್ರಚಾರ ಮತ್ತು ಇಂಗ್ಲಿಷ್ ವಿದ್ಯಾಭ್ಯಾಸದ ವಿಸ್ತರಣೆ ಹೆಚ್ಚಾಯಿತು.
14. 1909 ಭಾರತೀಯ ಪರಿಷತ್ ಕಾಯ್ದೆಯ ಪ್ರಮುಖ ಅಂಶಗಳು ಯಾವುವು?
- ಕೇಂದ್ರ ಶಾಸನ ಸಭೆಯ ಸದಸ್ಯರ ಸಂಖ್ಯೆಯನ್ನು 16 ರಿಂದ 60ಕ್ಕೆ ಹೆಚ್ಚಿಸಲಾಯಿತು.
- ಪ್ರಾಂತ್ಯಗಳಲ್ಲೂ ಶಾಸನ ಸಭೆಗಳ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಲಾಯಿತು.
- ಮೊದಲ ಬಾರಿಗೆ ಚುನಾವಣೆ ಮೂಲಕ ಶಾಸನ ಸಭೆಗೆ ಆಯ್ಕೆಯಾಗಲು ಅವಕಾಶ ನೀಡಲಾಯಿತು.
- ಮುಸ್ಲಿಂರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡುವ “ಪ್ರತ್ಯೇಕ ಚುನಾವಣಾ ಮತಗಟ್ಟೆ” ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
FAQ
ರೆಗ್ಯುಲೇಟಿಂಗ್ ಕಾಯ್ದೆಯನ್ನು 1773ರಲ್ಲಿ ಜಾರಿಗೊಳಿಸಲಾಯಿತು.
ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಲಾರ್ಡ ಕಾರ್ನವಾಲೀಸ್
ರೈತವಾರಿ ಪದ್ಧತಿಯನ್ನು ಮೊದಲು ಜಾರಿಗೊಳಿಸಿದವನು ಅಲೆಕ್ಸಾಂಡರ್ ರೀಡ್.
ಇತರೆ ವಿಷಯಗಳು:
10ನೇ ತರಗತಿ ವಿಜ್ಞಾನ ಎಲ್ಲಾ ಪಾಠಗಳ ನೋಟ್ಸ್
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf