10ನೇ ತರಗತಿ ಅಧ್ಯಾಯ-27 ಸಮಾಜ ವಿಜ್ಞಾನ ಭಾರತದ ಸಾರಿಗೆ ಹಾಗೂ ಸಂಪರ್ಕ ನೋಟ್ಸ್‌ | 10th Class Social Science Chapter 27 Notes in Kannada

10ನೇ ತರಗತಿ ಅಧ್ಯಾಯ-27 ಸಮಾಜ ವಿಜ್ಞಾನ ಭಾರತದ ಸಾರಿಗೆ ಹಾಗೂ ಸಂಪರ್ಕ ನೋಟ್ಸ್‌,10th Class Social Science Chapter 27 Notes Question Answer in Kannada 2024 Kseeb Solution For Class 10 Social Science Chapter 27 Notes in Kannada Medium Sslc Bharatada Sarige Hagu Samparka Social Science Notes

 

10th Class Social Science Chapter 27 Notes

Class 10 Social Science Chapter 27 Notes Mcq Pdf

I. ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ

1.ಸಾರಿಗೆ ಎಂದರೇನು?

ಸರಕು, ಸೇವೆ ಮತ್ತು ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದನ್ನು ‘ಸಾರಿಗೆ’ ಎನ್ನುವರು

2. ರಸ್ತೆಗಳ ಪ್ರಕಾರಗಳನ್ನು ತಿಳಿಸಿ

ಪಕ್ಕಾ ರಸ್ತೆಗಳು

ಕಚ್ಚಾ ರಸ್ತೆಗಳು

3. ಪಕ್ಕಾ ರಸ್ತೆಗಳು ಎಂದರೇನು?

ಸಿಮೆಂಟ್ ಕಾಂಕ್ರೀಟ್ ಅಥವಾ ಡಾಂಬರಿನಿಂದ ನಿರ್ಮಿಸಲ್ಪಟ್ಟ ರಸ್ತೆಗಳನ್ನು ಪಕ್ಕಾ ರಸ್ತೆಗಳು ಎನ್ನುವರು

4. ಕಚ್ಚಾ ರಸ್ತೆಗಳು ಎಂದರೇನು?

ಇವು ಜಲ್ಲಿ ಮತ್ತು ಮಣ್ಣುಗಳಿಂದ ನಿರ್ಮಿಸಿದ ರಸ್ತೆಗಳನ್ನು ಕಚ್ಚಾ ರಸ್ತೆಗಳು ಎನ್ನುವರು

5. ‘ಗ್ರಾಮಸಡಕ್‌ ಯೋಜನೆ’ಯ ಉದ್ದೇಶವೇನು?

ಕಚ್ಚಾ ರಸ್ತೆಗಳನ್ನು ಸುಧಾರಣೆ ಮಾಡುವುದು

6. ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣಾ ಕಾರ್ಯವು ಯಾರಿಗೆ ಸೇರಿರುತ್ತದೆ?

“ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿರುತ್ತದೆ.

7. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯು ಯಾವ ಇಲಾಖೆಗೆ ಸಂಬಂಧಿಸಿದೆ?

ಕೇಂದ್ರ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದೆ.

8. ರಾಜ್ಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯು ಯಾರಿಗೆ ಸೇರಿದೆ?

ಲೋಕೋಪಯೋಗಿ ಇಲಾಖೆಗೆ ಸೇರಿದೆ

9. ಜಿಲ್ಲಾ ರಸ್ತೆಗಳ ನಿರ್ವಹಣೆಯು ಯಾರಿಗೆ ಸೇರಿದೆ?

ಜಿಲ್ಲಾ ಪಂಚಾಯತ್‌ಗೆ ಸೇರಿರುತ್ತದೆ.

10. ಗಡಿ ರಸ್ತೆಗಳು ಎಂದರೇನು?

ದೇಶದ ಗಡಿಪ್ರದೇಶದಲ್ಲಿ ರಕ್ಷಣಾಪಡೆಯ ಬಳಕೆಗಾಗಿಯೇ ನಿರ್ಮಿಸಿದ ರಸ್ತೆಗಳಿಗೆ ‘ಗಡಿ ರಸ್ತೆಗಳು’ ಎನ್ನುವರು.

11. ಗಡಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯು ಯಾರಿಗೆ ಸೇರಿದೆ?

ಗಡಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯು ‘ಗಡಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ’ಕ್ಕೆ ಸೇರಿರುತ್ತದೆ.

12. ಬ್ರಿಟಿಷರ ಕಾಲದಲ್ಲಿ ರೈಲು ಮಾರ್ಗಗಳ ನಿರ್ಮಾಣದ ಉದ್ದೇಶವೇನಾಗಿತ್ತು?

ಕ್ಷಾಮ ಪೀಡಿತ ಭಾಗಗಳಿಗೆ ಆಹಾರ ಧಾನ್ಯ ಮತ್ತು ಮೇವುಗಳನ್ನು ಮತ್ತು ಸೈನ್ಯವನ್ನು ಸ್ಥಳದಿಂದ ಸ್ಥಳಕ್ಕೆ ಒಯ್ಯುವುದು ರೈಲು ಮಾರ್ಗಗಳ ನಿರ್ಮಾಣದ ಉದ್ದೇಶವಾಗಿತ್ತು

13. ಭಾರತದ ಪ್ರಥಮ ರೈಲು ಮಾರ್ಗವು ಯಾವಾಗ ಮತ್ತು ಯಾವ ಸ್ಥಳಗಳ ನಡುವೆ ನಿರ್ಮಾಣಗೊಂಡಿತು?

ಭಾರತದ ಪ್ರಥಮ ರೈಲು ಮಾರ್ಗವು 1853ರಲ್ಲಿ ಬಾಂಬೆ ಮತ್ತು ಥಾಣೆಗಳ ನಡುವೆ ನಿರ್ಮಾಣಗೊಂಡಿತು

14. ಭಾರತದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆ ಯಾವುದು?

ರೈಲು ಸಾರಿಗೆಯು ಭಾರತದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆ.

15. ಭಾರತದ ಹೊಸ ಭೂಸಾರಿಗೆ ವಿಧಾನ ಯಾವುದು?

ಭಾರತದ ಹೊಸ ಭೂಸಾರಿಗೆ ವಿಧಾನಿಕೊಳವೆ ಮಾರ್ಗಗಳು

16. ಬಂದರು ಎಂದರೇನು?

ಸರಕು ತುಂಬಲು ಮತ್ತು ಇಳಿಸುವುದಕ್ಕಾಗಿ ಹಡಗು ತಂಗುವ ಸ್ಥಳವೇ ಬಂದರು.

17. ಗುಜರಾತಿನ ಕಛ ಬಾರಿಯ ಶಿರೋಭಾಗದ ಬಂದರು ಯಾವುದು?

ಕಾಂಡ್ಲ

18. “ಭಾರತದ ಹೆಬ್ಬಾಗಿಲು” ಎಂದು ಯಾವ ಬಂದರನ್ನು ಕರೆಯಲಾಗಿದೆ?

ಮುಂಬಯಿ

19. ಜವಹರಲಾಲ್‌ ನೆಹರು ಬಂದರಿನ ಹಿಂದಿನ ಹೆಸರೇನು?

‘ನವಾಶೇವ ಬಂದರು’

20. ಮುಂಬಯಿ ಬಂದರಿನ ಒತ್ತಡವನ್ನು ಕುಗ್ಗಿಸಲು ಯಾವ ಬಂದರು ನಿರ್ಮಾಣಗೊಂಡಿದೆ?

ಜಪಹರಲಾಲ್ ನೆಹರು ಬಂದರು.

21. ‘ಕರ್ನಾಟಕದ ಹೆಬ್ಬಾಗಿಲು’ ಎಂದು ಯಾವುದನ್ನು ಕರೆಯಲಾಗಿದೆ?

ನವ ಮಂಗಳೂರು

22, ‘ಅರಬ್ಬಿ ಸಮುದ್ರದ ರಾಣಿ’ ಎಂದು ಕರೆಯಲಾಗಿದೆ?

ಕೊಚ್ಚಿ

23. ಭಾರತದ ಅತಿ ಹಳೆಯ ಬಂದರು ಯಾವುದು?

ಚಿನ್ನೈ

24. ಚೆನ್ನೈ ಬಂದರಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಯಾವ ಬಂದರನ್ನು ನಿರ್ಮಿಸಲಾಗಿದೆ?

ಎನ್ನೋರ್

25. ಭೂಭಾಗದಿಂದ ಸುತ್ತುವರಿದ ಆಳವಾದ ಮತ್ತು ಸಂರಕ್ಷಿತ ಬಂದರು ಯಾವುದು?

ವಿಶಾಖಪಟ್ಟಣ

26. ಒಡಿಶಾದ ಮಹಾನದಿ ಮುಖ ಭಾಗದಲ್ಲಿರುವ ಬಂದರು ಯಾವುದು?

27. ಹೂಗ್ಲಿ ಮತ್ತು ಹಾಲ್ಲಿ ನದಿಗಳ ಸಂಗಮ ಸ್ಥಳದಲ್ಲಿ ನೆಲೆಸಿದ ಬಂದರು ಯಾವುದು?

ಹಾಲ್ಡಿಯಾ

28, ಭಾರತದ ಎರಡನೇ ದೊಡ್ಡ ಬಂದರು ಯಾವುದು?

ಕೋಲ್ಕತ್ತಾ

29. ಕೋಲ್ಕತ್ತಾ ಬಂದರಿನಲ್ಲಿ ಹೂಳು ತೆಗೆಯುವ ಕಾರ್ಯ ಅವಶ್ಯಕವಾಗಿದೆ.ಏಕೆ?

ನದಿಯಿಂದ ಆಗಾಗ್ಗೆ ತುಂಬಿಕೊಳ್ಳುವುದರಿಂದ ಹಡಗು ಸಂಚಾರಕ್ಕೆ ತೊಂದರೆಯಾಗುವುದು, ಹೀಗಾಗಿ ಹೂಳು ತೆಗೆಯುವ ಕಾರ್ಯ ಅವಶ್ಯ

30. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?

ದೆಹಲಿ

31. ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?

ಮುಂಬಯಿ

32. ನೇತಾಜಿ ಸುಭಾಷ್ ಚಂದ್ರಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?

ಕೋಲ್ಕತ್ತಾ

33. ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?

ಹೈದರಾಬಾದ್

34. ಸಂಪರ್ಕ ಮಾಧ್ಯಮ ಎಂದರೇನು?

ಒಬ್ಬರಿಂದ ಮತ್ತೊಬ್ಬರಿಗೆ ಅಥವಾ ಸ್ಥಳದಿಂದ ಸ್ಥಳಕ್ಕೆ ಸಮಾಚಾರವನ್ನು ವಿನಿಮಯ ಮಾಡಿಕೊಳ್ಳುವುದನ್ನು ಸಂಪರ್ಕ ಮಾಧ್ಯಮ ಎನ್ನುವರು

35. ರೇಡಿಯೋವನ್ನು “ಆಲ್ ಇಂಡಿಯಾ ರೇಡಿಯೊ” ಎಂದು ಯಾವಾಗ ಕರೆಯಲಾಯಿತು?

1936

36. ಭಾರತದ ಅತ್ಯಂತ ಹಳೆಯದೂ ಮತ್ತು ಈಗಲೂ ಅಸ್ತಿತ್ವ ಕಾಯ್ದುಕೊಂಡಿರುವ ವೃತ್ತಪತ್ರಿಕೆ ಯಾವುದು?

ಬಾಂಬೆ ಸಮಾಚಾರ

37. ಇಂದು ಒಳನಾಡಿನ ಜಲಸಾರಿಗೆ ಮಹತ್ವವು ಕಡಿಮೆಯಾಗಿದೆ.ಏಕೆ?

ಇಂದು ರಸ್ತೆ ಮತ್ತು ರೈಲುಸಾರಿಗೆಗಳ ಪ್ರಗತಿಯಿಂದಾಗಿ ಅದರ ಮಹತ್ವವು ಕಡಿಮೆಯಾಗಿದೆ

38. ಭೌಗೋಳಿಕ ಮಾಹಿತಿ ವ್ಯವಸ್ಥೆ ಎಂದರೇನು?

ಭೌಗೋಳಿಕ ಮಾಹಿತಿ ವ್ಯವಸ್ಥೆಯು ಪೃಥ್ವಿಯ ಮೇಲ್ಬಾಗದ ವಿವರಣಾ ಸ್ಥಳಗಳ ಮಾಹಿತಿ ಸಂಗ್ರಹಿಸುವ ಮತ್ತು ತಿಳಿಸುವ ಒಂದು ಕಂಪ್ಯೂಟರ್ ವ್ಯವಸ್ಥೆಯಾಗಿದೆ

10th Class Social Science Chapter 27 Question Answer

II. ಗುಂಪುಗಳಲ್ಲಿ ಚರ್ಚಿಸಿ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ,

1. ಸಾರಿಗೆ ಮತ್ತು ಸಂಪರ್ಕ ಮಾಧ್ಯಮ ಎಂದರೇನು?

ಒಬ್ಬರಿಂದ ಮತ್ತೊಬ್ಬರಿಗೆ ಅಥವಾ ಸ್ಥಳದಿಂದ ಸ್ಥಳಕ್ಕೆ ಸಮಾಚಾರವನ್ನು ವಿನಿಮಯ ಮಾಡಿಕೊಳ್ಳುವುದನ್ನು ಸಂಪರ್ಕ ಮಾಧ್ಯಮ ಎನ್ನುವರು

ಸರಕು, ಸೇವೆ ಮತ್ತು ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದನ್ನು ‘ಸಾರಿಗೆ’ ಎನ್ನುವರು

2. ಸುವರ್ಣ ಚತುಸ್ಕೋನ ಮತ್ತು ಸೂಪರ್ ಹೆದ್ದಾರಿಗಳನ್ನು ಕುರಿತು ವಿವರಿಸಿ

 • ಇದೊಂದು ನಾಲ್ಕರಿಂದ ಆರು ಪಥಗಳ ಉತ್ತಮ ರಸ್ತೆಗಳ ರಚನಾ ಯೋಜನೆ.
 • ಇದು 1999ರಲ್ಲಿ ಆರಂಭವಾಯಿತು.
 • ಈ ಹೆದ್ದಾರಿ ಜಾಲವು ದೇಶದ ಪ್ರಮುಖ ನಗರ,ಸಾಂಸ್ಕೃತಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ.
 • ಸೂಪರ್ ಹೆದ್ದಾರಿಯನ್ನು ಎರಡು ಭಾಗಳಾಗಿ ವಿಂಗಡಿಸಲಾಗಿದೆ:
 • ಎ) ಉತ್ತರ-ದಕ್ಷಿಣ ಕಾರಿಡಾರ್: ಇದು ಶ್ರೀನಗರದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸಿದೆ.
 • ಬಿ) ಪೂರ್ವ-ಪಶ್ಚಿಮ ಕಾರಿಡಾರ್:- ಇದು ಅಸ್ಸಾಂನ ಸಿಲ್ದಾರ್‌ನಿಂದ ಗುಜರಾತ್‌ನ ಷೋರ್‌ ಬಂದರಿನವರೆಗೆ ಹಬ್ಬಿದೆ.
 • ಇವು ಅನೇಕ ಪ್ರಮುಖ ನಗರ, ಕೈಗಾರಿಕಾ ಕೇಂದ್ರಗಳು ಮತ್ತು ಬಂದರುಗಳನ್ನು ಸಂಪರ್ಕಿಸುತ್ತವೆ.

3. ಭಾರತದ ರೈಲು ಸಾರಿಗೆಯನ್ನು ಕುರಿತು ವಿವರಿಸಿ,

 • ರೈಲು ಮಾರ್ಗಗಳು ಭಾರತದ ಮತ್ತೊಂದು ಪ್ರಮುಖ ಭೂಸಾರಿಗೆ ಮಾಧ್ಯಮ,
 • ಅವು ಭಾರವಾದ ಸರಕು ಮತ್ತು ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ದೂರದ ಸ್ಥಳಗಳಿಗೆ ಸಾಗಿಸಲು ಹೆಚ್ಚು ಉಪಯುಕ್ತವಾದವು.
 • ಅವು ಕೃಷಿ, ಕೈಗಾರಿಕೆ ಮತ್ತು ಭಾರತದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
 • ಅಲ್ಲದೆ ದೇಶದ ವ್ಯಾಪಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೂ ನೆರವಾಗುವುದು
 • ರೈಲು ಸಾರಿಗೆಯು ಭಾರತದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆ.
 • ಸಮರ್ಥನೀಯ ಅಡಳಿತ ವ್ಯವಸ್ಥೆಗಾಗಿ ಭಾರತೀಯ ರೈಲ್ವೆಯನ್ನು 16 ವಲಯಗಳನ್ನಾಗಿ ವಿಂಗಡಿಸಲಾಗಿದೆ.

4. ಭಾರತದಲ್ಲಿ ರಸ್ತೆಮಾರ್ಗಗಳ ಪ್ರಾಮುಖ್ಯತೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿ,

 • ರಸ್ತೆಗಳನ್ನು ಅರಣ್ಯ ಮತ್ತು ಗುಡ್ಡಗಾಡುಗಳಲ್ಲಿಯೂ ನಿರ್ಮಿಸಬಹುದು.
 • ಅವು ಬಹುದೂರದ ಅಥವಾ ಎಲ್ಲೋ ಇರುವ ಸ್ಥಳಗಳನ್ನು ಪಟ್ಟಣ ಮತ್ತು ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತವೆ. ಮನೆಮನೆಗೆ ಸೇವೆ ಕಲ್ಪಿಸುತ್ತವೆ.
 • ರೈಲು ಸಂಚಾರ, ಬಂದರು ಮತ್ತು ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತವೆ.
 • ಅವು ಪ್ರವಾಸೋದ್ಯಮ, ವ್ಯಾಪಾರ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾಭಿವೃದ್ಧಿಗೆ ಹೆಚ್ಚು ನೆರವಾಗುತ್ತವೆ. ಉದ್ಯೋಗಾವಕಾಶ ಕಲ್ಪಿಸುತ್ತವೆ.
 • ರಕ್ಷಣಾ ಇಲಾಖೆಯಲ್ಲಿ, ಅದರಲ್ಲೂ ಗಡಿಪ್ರದೇಶಗಳಲ್ಲಿ ರಸ್ತೆಗಳು ಹೆಚ್ಚು ಉಪಯುಕ್ತ.

5. ಭಾರತದ ವಾಯು ಸಾರಿಗೆ ಕುರಿತು ವಿವರಿಸಿ

 • ಇದು ಅತ್ಯಂತ ವೇಗಯುತ ಸಾರಿಗೆ ಮಾಧ್ಯಮ.
 • ಪ್ರಯಾಣಿಕರು ಮತ್ತು ಟಪಾಲು ಸಾಗಿಸಲು ಬಹಳ ಸಮರ್ಪಕವಾದ ಸಾರಿಗೆ ಸೌಲಭ್ಯ
 • ಸಮರ, ಪ್ರವಾಹ, ಭೂಕಂಪಗಳಂತಹ ತುರ್ತುಪರಿಸ್ಥಿತಿಗೆ ಇದು ಬಹುಉಪಯುಕ್ತ.
 • ಭಾರತವು ವಿಶಾಲವಾದ ದೇಶವಾಗಿದ್ದು ವಾಯುಸಾರಿಗೆ ಅಭಿವೃದ್ಧಿಗೆ ಅಗತ್ಯವಾದ ಎಲ್ಲಾ ಪೂರಕ ಅಂಶಗಳನ್ನು ಹೊಂದಿದೆ
 • ಇಂದು ಭಾರತದಲ್ಲಿ ಎರಡು ಪ್ರಮುಖ ವಾಯು ಸಂಚಾರ ಸಂಸ್ಥೆಗಳಿವೆ.
 • ಅವುಗಳೆಂದರೆ : ಏರ್ ಇಂಡಿಯಾ ನ್ಯಾಷನಲ್, ಇದು ಭಾರತ ಮತ್ತು ಪ್ರಪಂಚದ ಅನೇಕ ದೇಶಗಳೊಂದಿಗೆ ವಾಯು ಸಂಚಾರ ಸೌಲಭ್ಯ ಕಲ್ಪಿಸುತ್ತದೆ.
 • ಇಂಡಿಯನ್ ಏರ್ ಲೈನ್ಸ್: ಇದು ದೇಶದೊಳಗೆ ವಾಯುಸಂಚಾರ ಕಲ್ಪಿಸುವುದರ ಜೊತೆಗೆ ನೆರೆಹೊರೆ ದೇಶಗಳಿಗೂ ಸಂಪರ್ಕ ಕಲ್ಪಿಸುವುದು

6. ಭಾರತದ ವಿವಿಧ ಸಂಪರ್ಕ ಮಾಧ್ಯಮಗಳನ್ನು ತಿಳಿಸಿ

 • ವೈಯಕ್ತಿಕ ಸಂಪರ್ಕ ಮಾಧ್ಯಮ ಮತ್ತು ಅಂಚೆ, ಟೆಲಿಗ್ರಾಫ್, ಟೆಲಿಫೋನ್, ಫ್ಯಾಕ್ಸ್, ಈ-ಮೇಲ್, ಅಂತರ್ಜಾಲ, ಸೆಮಿನಾರ್ ಇತ್ಯಾದಿಗಳು ವೈಯಕ್ತಿಕ ಮಾಧ್ಯಮಗಳಾಗಿವೆ.
 • ಸಮುದಾಯ ಸಂಪರ್ಕ ಮಾಧ್ಯಮ ವೃತ್ತಪತ್ರಿಕೆ ಮತ್ತು ನಿಯತಕಾಲಿಕೆಗಳು, ಆಕಾಶವಾಣಿ, ದೂರದರ್ಶನ, ಪುಸ್ತಕಗಳು ಸಮುದಾಯ ಸಂಪರ್ಕಮಾಧ್ಯಮಗಳು.

7. ಸಾರಿಗೆಯ ಮಹತ್ವವನ್ನು ವಿವರಿಸಿ,

 • ಸಮರ್ಥನೀಯ ಮತ್ತು ಸುಲಭ ದರದ ಸಾರಿಗೆ ಸೌಲಭ್ಯವು ಸಂಪನ್ಮೂಲಗಳು ಮತ್ತು ಕೃಷಿಯ ಅಭಿವೃದ್ಧಿಗೆ ನೆರವಾಗುತ್ತದೆ.
 • ಇದು ಕೈಗಾರಿಕಾ ಪ್ರಗತಿಗೆ ಉತ್ತೇಜನ
 • ಮಾರುಕಟ್ಟೆಯ ವಿಸ್ತರಣೆ
 • ದೇಶೀಯ ಮತ್ತು ವಿದೇಶೀ ವ್ಯಾಪಾರದ ವೃದ್ಧಿ
 • ಉದ್ಯೋಗ ಸೃಷ್ಟಿ
 • ಜನರ ಆದಾಯ ಮತ್ತು ಜೀವನ ಮಟ್ಟದ ಸುಧಾರಣೆ
 • ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಮತ್ತು ರಕ್ಷಣಾ ಪಡೆಗೂ ನೆರವಾಗುತ್ತದೆ

8. ಸಾರಿಗೆ ವಿಧಗಳನ್ನು ತಿಳಿಸಿ

ಭೂಸಾರಿಗೆ:

i) ರಸ್ತೆ ಸಾರಿಗೆ

ii) ರೈಲು ಸಾರಿಗೆ

iii) ಕೊಳವೆ ಮಾರ್ಗಗಳು

ಜಲಸಾರಿಗೆ:

i) ಒಳನಾಡಿನ ಜಲ ಸಾರಿಗೆ

ii) ಸಾಗರ ಜಲ ಸಾರಿಗೆ

ವಾಯುಸಾರಿಗೆ:

i) ರಾಷ್ಟ್ರೀಯ ವಾಯು ಸಾರಿಗೆ

ii) ಅಂತಾರಾಷ್ಟ್ರೀಯ ವಾಯು ಸಾರಿಗೆ

9, ನಿರ್ಮಾಣ ಮತ್ತು ನಿರ್ವಹಣೆಗಳನ್ನು ಆಧರಿಸಿ ರಸ್ತೆಗಳನ್ನು ಐದು ಪ್ರಕಾರಗಳನ್ನು ತಿಳಿಸಿ

 • ಸುವರ್ಣ ಚತುಸ್ಕೋನ ಮತ್ತು ಸೂಪರ್ ಹೆದ್ದಾರಿಗಳು
 • ಜಿಲ್ಲಾ ರಸ್ತೆಗಳು
 • ರಾಷ್ಟ್ರೀಯ ಹೆದ್ದಾರಿಗಳು
 • ಗ್ರಾಮೀಣ ರಸ್ತೆಗಳು
 • ರಾಜ್ಯ ಹೆದ್ದಾರಿಗಳು

10. ರೈಲು ಸಾರಿಗೆಯ ಮಹತ್ವವನ್ನು ತಿಳಿಸಿ

 • ರೈಲು ಮಾರ್ಗಗಳು ಭಾರತದ ಮತ್ತೊಂದು ಪ್ರಮುಖ ಭೂಸಾರಿಗೆ ಮಾಧ್ಯಮ,
 • ಅವು ಭಾರವಾದ ಸರಕು ಮತ್ತು ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ದೂರದ ಸ್ಥಳಗಳಿಗೆ ಸಾಗಿಸಲು ಹೆಚ್ಚು ಉಪಯುಕ್ತವಾದವು.
 • ಅವು ಕೃಷಿ, ಕೈಗಾರಿಕೆ ಮತ್ತು ಭಾರತದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
 • ಅಲ್ಲದೆ ದೇಶದ ವ್ಯಾಪಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೂ ನೆರವಾಗುವುದು

11. ಕೊಳವೆ ಮಾರ್ಗಗಳನ್ನು ವಿವರಿಸಿ.

ಇದು ಹೊಸ ಭೂಸಾರಿಗೆ ವಿಧಾನ, ಕೊಳವೆ ಮಾರ್ಗಗಳನ್ನು ನೆಲದೊಳಗೆ ಹಾಸಲಾಗಿರುತ್ತದೆ.

ವಿಶೇಷವಾಗಿ ಕಚ್ಚಾ ತೈಲವನ್ನು ತೈಲ ಶುದ್ದೀಕರಣ ಕೇಂದ್ರಗಳಿಗೆ, ನೈಸರ್ಗಿಕಾನಿಲ ಹಾಗೂ ಹೆಸರು ರೂಪದಲ್ಲಿ ಖನಿಜಗಳನ್ನು ಸಾಗಿಸಲು ಕೊಳವೆ ಮಾರ್ಗಗಳನ್ನು ಬಳಸಲಾಗುವುದು,

12. ಪಶ್ಚಿಮ ಮತ್ತು ಪೂರ್ವ ತೀರದ ಪ್ರಮುಖ ಬಂದರುಗಳು ಯಾವುವು?

ಪಶ್ಚಿಮ ತೀರದ ಪ್ರಮುಖ ಬಂದರುಗಳು:

• ಮುಂಬ

• ಜವಹರಲಾಲ್ ನೆಹರು ಬಂದರು

• ಮರ್ಮಗೋವ

ನವ ಮಂಗಳೂರು

ಪೂರ್ವ ತೀರದ ಪ್ರಮುಖ ಬಂದರುಗಳು:

 • ತುತಕುಡಿ
 • ಚೆನ್ನೈ
 • ವಿಶಾಖಪಟ್ಟಣ
 • ಪಾರಾದೀಪ್
 • ಕೊಲ್ಕತ

13. ಭಾರತದ ಆರು ವಿಮಾನ ನಿಲ್ದಾಣಗಳನ್ನು ಹೆಸರಿಸಿ

 • ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿ.
 • ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ,
 • ನೇತಾಜಿ ಸುಭಾಷ್‌ ಚಂದ್ರಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ,
 • ಕೊಲ್ಕತ ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ,
 • ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು,
 • ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್

14. ಸಂಪರ್ಕ ಮಾಧ್ಯಮ ಎಂದರೇನು? ಅದರ ಪ್ರಾಮುಖ್ಯತೆಯಯನ್ನು ತಿಳಿಸಿ

 • ಒಬ್ಬರಿಂದ ಮತ್ತೊಬ್ಬರಿಗೆ ಅಥವಾ ಸ್ಥಳದಿಂದ ಸ್ಥಳಕ್ಕೆ ಸಮಾಚಾರವನ್ನು ವಿನಿಮಯ ಮಾಡಿಕೊಳ್ಳುವುದನ್ನು ಸಂಪರ್ಕ ಮಾಧ್ಯಮ ಎನ್ನುವರು
 • ಸರ್ಕಾರದ ನೀತಿ ನಿಯಮ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಸಂಪರ್ಕ ಮಾಧ್ಯಮ ನೆರವಾಗುವುದು.
 • ಇದು ನೈಸರ್ಗಿಕ ವಿಪತ್ತು ಮತ್ತು ವಿನಾಶಗಳು, ಹವಾಗುಣ ಮುನ್ಸೂಚನೆಗಳನ್ನು ನಾವು ತಿಳಿಯಲು ಸಹಾಯವಾಗುವುದು.
 • ವ್ಯಾಪಾರ ವಾಣಿಜ್ಯ, ಕೈಗಾರಿಕೆ, ಕೃಷಿ ಇತ್ಯಾದಿಗಳ ಅಭಿವೃದ್ಧಿಗೂ ನೆರವಾಗುವುದು.
 • ಮನರಂಜನೆ, ಪ್ರಪಂಚದ ದಿನನಿತ್ಯದ ಮಾಹಿತಿಗಳನ್ನು ಪೂರೈಸುತ್ತದೆ.
 • ಅಲ್ಲದೆ ದೇಶದ ಏಕತೆ ಮತ್ತು ಸಮಗ್ರತೆ ನಿರ್ವಹಣೆಗೂ ನೆರವಾಗುತ್ತದೆ

FAQ

1.ಸಾರಿಗೆ ಎಂದರೇನು?

ಸರಕು, ಸೇವೆ ಮತ್ತು ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದನ್ನು ‘ಸಾರಿಗೆ’ ಎನ್ನುವರು

2. ಜಿಲ್ಲಾ ರಸ್ತೆಗಳ ನಿರ್ವಹಣೆಯು ಯಾರಿಗೆ ಸೇರಿದೆ?

ಜಿಲ್ಲಾ ಪಂಚಾಯತ್‌ಗೆ ಸೇರಿರುತ್ತದೆ.

ಇತರೆ ವಿಷಯಗಳು:

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ವಿಜ್ಞಾನ ಎಲ್ಲಾ ಪಾಠಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh