10ನೇ ತರಗತಿ ಅಧ್ಯಾಯ-8 ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ ವಿಜ್ಞಾನ ನೋಟ್ಸ್ | 10th Standard Science Chapter 8 Notes

10ನೇ ತರಗತಿ ಅಧ್ಯಾಯ-8 ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ ವಿಜ್ಞಾನ ನೋಟ್ಸ್‌, 10th Standard Science Chapter 8 Notes Question Answer Pdf Download Kseeb Solution FOR Class 10 Chapter 8 Notes in Kannada Medium class 10 science chapter 8 question answer how do organisms reproduce class 10 questions and answers

 

Contents

10th Class Science Chapter 8 Notes in Kannada

how do organisms reproduce class 10 questions and answers

Jeevigalu Hege Santanotpatti Nadesuttave in Kannada

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1.ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಡಿಎನ್ ಎ ಸ್ವಪ್ರತೀಕರಣದ ಮಹತ್ವವೇನು?

ಡಿಎನ್ ಎ ಯು ಜೀವಕೋಶದ ಕೋಶಕೇಂದ್ರದಲ್ಲಿರುವ ವರ್ಣತಂತುಗಳಲ್ಲಿ ಕಂಡುಬರುವ ಅನುವಂಶೀಯ ವಸ್ತುವಾಗಿದೆ.ಇದು ಪ್ರೋಟೀನ್ ಉತ್ಪಾದನೆಯ ಕೇಂದ್ರವಾಗಿದೆ.ನಿರ್ದಿಷ್ಟ ಪ್ರೊಟೀನ್ ಉತ್ಪಾದನೆಗೆ ಬೇಕಾದ ಮಾಹಿತಿಯನ್ನು ನೀಡಿ ಅವಗಳ ಉತ್ಪಾದನೆ ಮಾಡುತ್ತದೆ. ಪ್ರೋಟೀನ್ ಗಳು ಒಬ್ಬ ವ್ಯಕ್ತಿಯ ದೇಹರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತಂದೆ ತಾಯಿಗಳಲ್ಲಿರುವ ಗುಣಲಕ್ಷಣಗಳು ಮುಂದಿನ ಪೀಳಿಗೆಗೆ ವರ್ಗಾವಣೆಗೊಳ್ಳಲು ಸ್ವಪ್ರತೀಕರಣವು ಸಹಾಯ ಮಾಡುತ್ತದೆ.

2.ಭಿನ್ನತೆಯು ಒಂದು ಪ್ರಭೇದಕ್ಕೆ ಉಪಯುಕ್ತ ಆದರೆ ಒಂದು ಜೀವಿಗೆ ಅಗತ್ಯವಿಲ್ಲ,ಏಕೆ ?

ಭಿನ್ನತೆಯು ಒಂದು ಪ್ರಭೇದಕ್ಕೆ ಉಪಯುಕ್ತ ಆದರೆ ಒಂದು ಜೀವಿಗೆ ಅಗತ್ಯವಿಲ್ಲ ಏಕೆಂದರೆ ಕೆಲವೊಮ್ಮೆ ಪರಿಸರದಲ್ಲಿ ಉಂಟಾಗುವ ಧಿಡೀರ್ ಬದಲಾವಣೆಗಳು ಒಂದು ಪ್ರಭೇದದ ಜೀವಿಗಳಿಗೆ ಬದುಕಲು ಅನಾನುಕೂಲವಾಗಿ ಪರಿಣಮಿಸುತ್ತದೆ, ಉದಾಹರಣರಗೆ ಜಲಪರಿಸರ ವ್ಯವಸ್ಥೆಯಲ್ಲಿ ನೀರಿನ ತಾಪದಲ್ಲಿ ಒಮ್ಮೆಲೇ ಏರಿಕೆ ಕಂಡುಬಂದರೆ ಅಲ್ಲಿ ವಾಸಿಸುವ ಬಹುತೇಕ ಬ್ಯಾಕ್ಟಿರಿಯಾಗಳು ಸಾಯುತ್ತವೆ.ಆದರೆ ಕೆಲವು ಬ್ಯಾಕ್ಟಿರಿಯಾಗಳು (ಭಿನ್ನತೆಯುಳ್ಳ) ತಾಪದಲ್ಲಿನ ಹೆಚ್ಚಳ ಸಹಿಸಿಕೊಂಡು ಬದುಕುಳಿಯುತ್ತವೆ. ಒಂದು ವೇಳೆ ಈ ಬ್ಯಾಕ್ಟಿರಿಯಾಗಳೂ ಬದುಕುಳಿಯದಿದ್ದರೆ ಅವುಗಳ ಪ್ರಭೇದವೇ ನಾಶವಾಗಿ ಬಿಡುತ್ತದೆ.

3. ದ್ವಿ ವಿದಳನವು ಬಹುವಿದಳನದಿಂದ ಹೇಗೆ ಭಿನ್ನವಾಗಿದೆ.

ದ್ವಿ ವಿದಳನದಲ್ಲಿ ಒಂದು ಜೀವಕೋಶವು ಎರಡು ಮರಿ ಜೀವಕೋಶಗಳಾಗಿ ವಿಭಜನೆ ಹೊಂದುತ್ತವೆ,ಆದರೆ ಬಹು ವಿದಳನದಲ್ಲಿ ಒಂದು ಜೀವಕೋಶವು ಅನೇಕ ಮರಿಜೀವಕೋಶಗಳಾಗಿ ವಿಭಜನೆ ಹೊಂದುತ್ತವೆ.

4.ಒಂದು ವೇಳೆ ಬೀಜಕಗಳ ಮೂಲಕ ಒಂದು ಜೇವಿಯು ಸಂತಾನೋತ್ಪತ್ತಿ ನಡೆಸಿದರೆ ಅದಕ್ಕಾಗುವ ಪ್ರಯೋಜನವೇನು ?

ಬೀಜಕಗಳು ಗಾಳಿಯ ಮೂಲಕ ಸುಲಭವಾಗಿ ಬೇರೆ ಬೇರೆ ಸ್ಥಳಗಳಿಗೆ ತಲುಪುತ್ತವೆ. ಹವಾಮಾನ ವೈಪರೀತ್ಯ ದಂತಹ ಕಠಿಣ ಪರಿಸ್ಥಿತಿಗಳಲ್ಲಿ ಕೂಡಾ ಬೀಜಕಗಳು ಬದುಕುಳಿಯಬಲ್ಲವು.

5. ಹೆಚ್ಚು ಸಂಕೀರ್ಣ ಜೀವಿಗಳು ಪುನರುತ್ಪಾದನೆಯ ಮೂಲಕ ಹೊಸ ಜೀವಿಗಳನ್ನು ಏಕೆ ಸೃಷ್ಟಿಸಲಾರವು ಎಂಬುದಕ್ಕೆ ನೀವು ಕಾರಣಗಳನ್ನು ಯೋಚಿಸುವಿರಾ?

ಸರಳ ಜೀವಿಯಾದ ಹೈಡ್ರಾ ತನ್ನ ದೇಹದ ಒಂದು ಭಾಗದಿಂದ ಇನ್ನೊಂದು ಹೈಡ್ರಾವನ್ನು ಪುನರುತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿದೆ. ಏಕೆಂದರೆ ಅವುಗಳ ಪ್ರತಿಯೊಂದು ಜೀವಕೋಶವು ಈ ಸಾಮರ್ಥ್ಯವನ್ನು ಪಡೆದಿದೆ.ಆದರೆ ಸಂಕೀರ್ಣ ಜೀವಿಗಳ ದೇಹ ಅಂಗ ರಚನಾ ವ್ಯವಸ್ಥೆಯನ್ನು ಹೊಂದಿದ್ದು ಕೇವಲ ಚರ್ಮ,ಸ್ನಾಯು,ರಕ್ತ ಮುಂತಾದುವುಗಳನ್ನು ಮಾತ್ರ ಪುನರುತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿವೆ.

6.ಕೆಲವು ವಿಧದ ಸಸ್ಯಗಳನ್ನು ಬೆಳೆಸಲು ಕಾಯಜ ಸಂತಾನೋತ್ಪತ್ತಿ ಏಕೆ ರೂಢಿಯಲ್ಲಿದೆ ?

ಕಾಯಜ ರೀತಿಯ ಸಂತಾನೋತ್ಪತ್ತಿಯಲ್ಲಿ ಸಸ್ಯದ ಎಲೆ,ಕಾಂಡ ಅಥವಾ ಬೇರುಗಳನ್ನು ಬಳಸಿ ಸಂತಾನೋತ್ಪತ್ತಿ ನಡೆಸಲಾಗುತ್ತದೆ. ಈ ಪದ್ಧತಿಯು ಬಾಳೆ,ಗುಲಾಬಿ ಮತ್ತು ಮಲ್ಲಿಗೆಯಂತಹ ಕೆಲವು ಸಸ್ಯಗಳ ಸಂತಾನೋತ್ಪತ್ತಿಗೆ ಬಳಸಲಾಗುತ್ತಿದೆ. ಇತ್ತೀಚಿಗೆ ಈ ಪದ್ಧತಿಯ ಮೂಲಕ ಕಬ್ಬು,ದ್ರಾಕ್ಷಿ ಬೆಳೆಗಳನ್ನು ಕೂಡಾ ಬೆಳೆಸಲಾಗುತ್ತಿದೆ. ಬೀಜಗಳು ಉತ್ಪತ್ತಿಯಾಗದ ಸಸ್ಯಗಳಿಗೆ ಈ ಪದ್ಧತಿಯು ಸಹಕಾರಿಯಾಗಿದೆ.

7.ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಡಿಎನ್ ಎ ಸ್ವಪ್ರತೀಕರಣವು ಏಕೆ ಒಂದು ಅತ್ಯಗತ್ಯ ಭಾಗವಾಗಿದೆ?

ಡಿಎನ್ ಎ ಯು ಜೀವಕೋಶದ ಕೋಶಕೇಂದ್ರದಲ್ಲಿರುವ ವರ್ಣತಂತುಗಳಲ್ಲಿ ಕಂಡುಬರುವ ಅನುವಂಶೀಯ ವಸ್ತುವಾಗಿದೆ.ಇದು ಪ್ರೋಟೀನ್ ಉತ್ಪಾದನೆಯ ಕೇಂದ್ರವಾಗಿದೆ.ನಿರ್ದಿಷ್ಟ ಪ್ರೊಟೀನ್ ಉತ್ಪಾದನೆಗೆ ಬೇಕಾದ ಮಾಹಿತಿಯನ್ನು ನೀಡಿ ಅವುಗಳ ಉತ್ಪಾದನೆ ಮಾಡುತ್ತದೆ. ಪ್ರೋಟೀನ್ ಗಳು ಒಬ್ಬ ವ್ಯಕ್ತಿಯ ದೇಹರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತಂದೆ ತಾಯಿಗಳಲ್ಲಿರುವ ಗುಣಲಕ್ಷಣಗಳು ಮುಂದಿನ ಪೀಳಿಗೆಗೆ ವರ್ಗಾವಣೆಗೊಳ್ಳಲು ಸ್ವಪ್ರತೀಕರಣವು ಸಹಾಯ ಮಾಡುತ್ತದೆ.

8. ಪರಾಗಸ್ಪರ್ಶ ಪ್ರಕ್ರಿಯೆಯು ನಿಶೇಚನಕ್ಕಿಂತ ಹೇಗೆ ಭಿನ್ನವಾಗಿದೆ?

ಪರಾಗಸ್ಪರ್ಶ ಕ್ರಿಯೆಯು ಹೂವಿನ ಕೇಸರವನ್ನು ಶಲಾಕೆಗೆ ವರ್ಗಾಯಿಸುವ ವಿಧಾನವಾಗಿದೆ ಇದು ಗಾಳಿ,ನೀರು,ಕೀಟಗಳು,ಹಕ್ಕಿಗಳ ಮೂಲಕ ನಡೆಯುತ್ತದೆ. ನಿಶೇಚನವು ಗಂಡು ಲಿಂಗಾಣು ಮತ್ತು ಹೆಣ್ಣು ಲಿಂಗಾಣುಗಳ ಸಂಯೋಜನೆಯಾಗಿದೆ.ಇದು ಅಂಡಾಶಯದಲ್ಲಿ ನಡೆಯುತ್ತದೆ.

9. ವೀರ್ಯ ಕೋಶಿಕೆ ಮತ್ತು ಪ್ರೋಸ್ಟೇಟ್ ಗ್ರಂಥಿಗಳ ಕಾರ್ಯವೇನು ?

ವೀರ್ಯ ಕೋಶಿಕೆ ಮತ್ತು ಪ್ರೋಸ್ಟೇಟ್ ಗ್ರಂಥಿಗಳ ಸ್ರವಿಕೆಯು ವೀರ್ಯಾಣುಗಳ ಚಲನೆಗೆ ಬೇಕಾಗುವ ದ್ರವ ಮಾಧ್ಯಮವನ್ನು ಒದಗಿಸುತ್ತವೆ. ಅಲ್ಲದೆ ಈ ಸ್ರವಿಕೆಯಲ್ಲಿ ಕೆಲವೊಂದು ಪೋಷಕಾಂಶಗಳಾದ ಪ್ರಕ್ಟೋಸ್‌ಕ್ಯಾಲ್ಸಿಯಂ ಮತ್ತು ಕಿಣ್ವಗಳಿರುತ್ತವೆ.

10.ಪ್ರೌಢಾವಸ್ಥೆಯ ಸಮಯದಲ್ಲಿ ಹುಡುಗಿಯರಲ್ಲಿ ಕಂಡುಬರುವ ಬದಲಾವಣೆಗಳೇನು ?

  • ದೇಹದ ಕೆಲವು ಭಾಗಗಳಲ್ಲಿ ಕೂದಲುಗಳು ಬೆಳೆಯುತ್ತವೆ.(ಕಂಕುಳಲ್ಲಿ,ಕೈ ಕಾಲುಗಳಲ್ಲಿ)
  • ಗರ್ಭಕೋಶ ಮತ್ತು ಅಂಡಾಶಯದ ಗಾತ್ರದಲ್ಲಿ ಹೆಚ್ಚಳವಾಗುತ್ತದೆ.
  • ಋತುಚಕ್ರದ ಪ್ರಾರಂಭ
  • ಚರ್ಮದಲ್ಲಿನ ತೈಲದ ಅಂಶ ಅಧಿಕವಾಗಿ ಮೊಡವೆಗಳು ಉತ್ಪತ್ತಿಯಾಗುತ್ತವೆ.
  • ಸ್ತನಗಳು ಗಾತ್ರದಲ್ಲಿ ದೊಡ್ಡದಾಗುತ್ತವೆ

11,ತಾಯಿಯ ದೇಹದೊಳಗೆ ಭೂಣವು ಹೇಗೆ ಪೋಷಣೆಯನ್ನು ಪಡೆಯುತ್ತದೆ ?

ಭೂಣವು ತಾಯಿಯ ದೇಹದಲ್ಲಿ ಸುಮಾರು ಒಂಬತ್ತು ತಿಂಗಳುಗಳ ಕಾಲ ಬೆಳೆಯುತ್ತದೆ.ಗರ್ಭಕೋಶದೊಳಗೆ ಭೂಣವನ್ನು ಆವರಿಸಿರುವ ಹೊರ ಅಂಗಾಂಶವು ಬೆರಳಿನಾಕಾರದ ವಿಘ್ನಗಳೆಂಬ ರಚನೆಗಳನ್ನು ಉತ್ಪತ್ತಿ ಮಾಡುತ್ತವೆ.ಇವು ಆಮ್ಲಜನಕ ಮತ್ತು ಇತರ ಪೋಷಕಾಂಶಗಳ ವಿನಿಮಯಕ್ಕೆ ಬೇಕಾಗುವ ವಿಶಾಲವಾದ ಸ್ಥಳಾವಕಾಶವನ್ನು ಕೊಡುತ್ತದೆ.ಭೂಣವು ಪ್ಲಾಸೆಂಟಾದ ಮೂಲಕ ತಾಯಿಯ ರಕ್ತದಿಂದ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪಡೆಯುತ್ತದೆ.

12:ಒಬ್ಬ ಮಹಿಳೆಯು ಕಾಪರ್ ಟಿ ಯನ್ನು ಬಳಸುತ್ತಿದ್ದರೆ ಅದು ಲೈಂಗಿಕ ಸಂಪರ್ಕದ ಮೂಲಕ ಹರಡುವ ರೋಗಗಳಿಂದ ಅವಳನ್ನು ರಕ್ಷಿಸಲು ನೆರವಾಗುತ್ತದೆಯೇ?

ಇಲ್ಲ.ಕಾಪರ್ -ಟಿಯು ಕೇವಲ ಗರ್ಭಧಾರಣೆ ಆಗುವುದನ್ನು ತಡೆಯುತ್ತದೆ.ಇದು ವೀರ್ಯದ ಚಲನೆಯನ್ನು ತಡೆಯುವುದಿಲ್ಲ,

ಅಭ್ಯಾಸದ ಪ್ರಶೋತ್ತರಗಳು

1. ಮೊಗ್ಗುವಿಕೆಯ ಮೂಲಕ ಅಲೈಂಗಿಕ ಸಂತಾನೋತ್ಪತ್ತಿ ನಡೆಸುವ ಜೀವಿ,

ಬಿ) ಯೀಸ್ಟ್

2. ಈ ಕೆಳಗಿನವುಗಳಲ್ಲಿ ಯಾವುದು ಮನುಷ್ಯರಲ್ಲಿ ಹೆಣ್ಣು ಸಂತಾನೋತ್ಪತ್ತಿವ್ಯೂಹದ ಭಾಗವಲ್ಲ.

ಸಿ) ವೀರ್ಯನಾಳ

3, ಪರಾಗಕೋಶವು ಈ ಕೆಳಗಿನವುಗಳನ್ನು ಹೊಂದಿದೆ.

ಡಿ) ಪರಾಗರೇಣುಗಳು

4.ಅಲೈಂಗಿಕ ಸಂತಾನೋತ್ಪತ್ತಿಗಿಂತ ಲೈಂಗಿಕ ಸಂತಾನೋತ್ಪತ್ತಿಗಿರುವ ಅನುಕೂಲಗಳೇನು ?

“ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಬಿನ್ನತೆಗಳು ಹೆಚ್ಚು ಉತ್ಪತ್ತಿಯಾಗುವ ಕಾರಣ ಪ್ರಭೇದಗಳ ಉಳಿವಿಗೆ ಸಹಾಯವಾಗಿದೆ. * ತಂದೆತಾಯಿಯರ ಗುಣಲಕ್ಷಣಗಳು ಮರಿಜೀವಿಗಳಲ್ಲಿ ಕಾಣಿಸುತ್ತವೆ.

5.ಮನುಷ್ಯರಲ್ಲಿ ವೃಷಣಗಳು ಯಾವ ಕಾರ್ಯಗಳನ್ನು ನಿರ್ವಹಿಸುತ್ತವೆ?

ವೃಷಣಗಳ ಕಾರ್ಯ :

  • ವೀರ್ಯದ ಉತ್ಪತ್ತಿ
  • ಟೆಸ್ಟೋಸ್ಟೀರಾನ್ ಹಾರ್ಮೋನಿನ ಉತ್ಪತ್ತಿ,

6. ಋತು ಚಕ್ರವು ಏಕೆ ಉಂಟಾಗುತ್ತದೆ?

ಅಂಡಾಶಯವು ಪ್ರತಿ ತಿಂಗಳು ಒಂದು ಅಂಡವನ್ನು ಬಿಡುಗಡೆಗೊಳಿಸುವುದರಿಂದ ಗರ್ಭಕೋಶವು ಫಲಿತ ಅಂಡಾಣುವನ್ನು ಬರಮಾಡಿಕೊಳ್ಳಲು ಪ್ರತೀ ತಿಂಗಳು ತನ್ನನ್ನು ತಾನೇ ಸಜ್ಜುಗೊಳಿಸುತ್ತದೆ. ಹೀಗೆ ಅದರ ಒಳರಿಯು ದಪ್ಪವಾಗಿ ಸ್ಪಂಜಿನಂತಾಗುತ್ತದೆ. ಅಂಡವು ಫಲಿತಗೊಳ್ಳದಿದ್ದರೆ ಈ ಒಳರಿಯ ಅಗತ್ಯವಿರುವುದಿಲ್ಲ.ಆದ್ದರಿಂದ ಈ ಒಳಜ್ಞರಿಯು ನಿಧಾನವಾಗಿ ಬಿರುಕು ಬಿಟ್ಟು ರಕ್ತ ಮತ್ತು ಲೋಳೆಯ ರೂಪದಲ್ಲಿ ಯೋನಿಯಿಂದ ಹೊರಬರುತ್ತದೆ. ಈ ರೀತಿಯಾಗಿ ಋತುಚಕ್ರವು ಉಂಟಾಗುತ್ತದೆ.

7. ಒಂದು ಹೂವಿನ ಸೀಳಛೇದ ನೋಟದ ಚಿತ್ರ ಬರೆದು ಭಾಗಗಳನ್ನು ಗುರುತಿಸಿ,

how do organisms reproduce class 10 questions and answers

8. ಗರ್ಭನಿರೋಧಕತೆಯ ವಿವಿಧ ವಿಧಾನಗಳು ಯಾವುವು ?

ಗರ್ಭನಿರೋಧಕತೆ ವಿಧಾನಗಳಲ್ಲಿ ಅನೇಕ ವಿಧಗಳಿವೆ. ವೀರ್ಯಾಣುವು ಅಂಡಾಣುವನ್ನು ತಲುಪದಂತೆ ಯಾಂತ್ರಿಕ ತಡೆಯನ್ನು ಉಂಟುಮಾಡುವುದು ಒಂದು ವಿಧ,ಶಿಶ್ನದ ಮೇಲೆ ಕಾಂಡೂಮ್ ಧರಿಸುವುದು ಅಥವಾ ಯೋನಿಯೊಳಗೆ ಚೀಲ ಧರಿಸುವುದು ಗರ್ಭನಿರೋಧಕ ಸಾಧನಗಳಾದ ವಂಕಿ ಅಥವಾ ಕಾಪರ್ ಟಿ ಯನ್ನು ಹಾಕಿಕೊಳ್ಳುವುದು,

ಇನ್ನೊಂದು ವಿಧದ ಗರ್ಭನಿರೋಧಕ ವಿದಾನವೆಂದರೆ ದೇಹದ ಹಾರ್ಮೋನ್ ಗಳ ಸಮತೋಲನವನ್ನು ಬದಲಾಯಿಸುವುದು.ಈ ಔಷಧವನ್ನು ಮಾತ್ರೆಯ ರೂಪದಲ್ಲಿ ಬಾಯಿಯ ಮೂಲಕ ತೆಗೆದುಕೊಳ್ಳಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ಕೂಡಾ ಗರ್ಭಧಾರಣೆಯನ್ನು ತಡೆಗಟ್ಟಬಹುದು.

9.ಏಕಕೋಶಜೀವಿಗಳು ಮತ್ತು ಬಹುಕೋಶಜೀವಿಗಳಲ್ಲಿನ ಸಂತಾನೋತ್ಪತ್ತಿ ವಿಧಾನಗಳು ಹೇಗೆ ಭಿನ್ನವಾಗಿವೆ?

ಏಕಕೋಶಜೀವಿಗಳಲ್ಲಿ ಇಡೀ ಜೀವಕೋಶವೇ ವಿಭಜನೆಗೆ ಒಳಪಡುತ್ತದೆ.ಇವುಗಳು ವಿದಳನ,ತುಂಡರಿಕೆ,ಮೊಗ್ಗುವಿಕೆ ಮೊದಲಾದ ಅಲೈಂಗಿಕ ವಿಧಾನಗಳ ಮೂಲಕ ಸಂತಾನೋತ್ಪತ್ತಿ ನಡೆಸುತ್ತವೆ. ಆದರೆ ಬಹುಕೋಶೀಯ ಜೀವಿಗಳು ಅಲೈಂಗಿಕವಾಗಿ ಕಾಯಜ ರೀತಿಯಲ್ಲಿ ಮತ್ತು ಬೀಜಕಗಳ ಮೂಲಕ ಸಂತಾನೋತ್ಪತ್ತಿ ನಡೆಸುತ್ತವೆ.ಸಂಕೀರ್ಣ ಜೀವಿಗಳು ಲೈಂಗಿಕವಾಗಿ ಸಂತಾನೋತ್ಪತ್ತಿ ನಡೆಸುತ್ತವೆ.

10.ಪ್ರಭೇದಗಳ ಜೀವಿಸಮುದಾಯಗಳಿಗೆ ಸ್ಥಿರತೆಯನ್ನು ಒದಗಿಸಲು ಸಂತಾನೋತ್ಪತ್ತಿಯು ಹೇಗೆ ಸಹಾಯಕವಾಗಿದೆ?

ಸಂತಾನೋತ್ಪತ್ತಿಯು ಜೀವಿಪ್ರಭೇದಗಳ ಮುಂದುವರಿಕೆಗೆ ಸಹಾಯವಾಗಿದೆ. ತಮ್ಮನ್ನೇ ಹೋಲುವ ಸಂತತಿಗಳನ್ನು ಉತ್ಪತ್ತಿ ಮಾಡುವ ಮೂಲಕ ಜೀವಿಸಮುದಾಯಕ್ಕೆ ಸ್ಥಿರತೆಯನ್ನು ಕೊಡುತ್ತವೆ. ಆದ್ದರಿಂದಲೇ ಒಂದು ಬೆಕ್ಕು ತನ್ನನ್ನು ಹೋಲುವ ಚಿಕ್ಕಿನ ಮರಿಗೆ ನಾಯಿ ತನ್ನನ್ನು ಹೋಲುವ ನಾಯಿ ಮರಿಗೆ ಜನ್ಮ ನೀಡುತ್ತದೆ.ಮತ್ತು ಅವುಗಳ ಪ್ರಭೇದಗಳಿಗೆ ಸ್ಥಿರತೆಯನ್ನು ಒದಗಿಸುತ್ತವೆ.

11.ಗರ್ಭನಿರೋಧಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಇರಬಹುದಾದ ಕಾರಣಗಳೇನು ?

ಗರ್ಭನಿರೋಧಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಇರಬಹುದಾದ ಕಾರಣಗಳು :

  • ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು.
  • ಜನಸಂಖ್ಯಾ ಸ್ಫೋಟವನ್ನು ಕಡಿಮೆ ಮಾಡಲು.
  • ಲೈಂಗಿಕವಾಗಿ ಹರಡುವ ರೋಗಗಳಿಂದ ರಕ್ಷಿಸಿಕೊಳ್ಳಲು.

FAQ

1. ಮೊಗ್ಗುವಿಕೆಯ ಮೂಲಕ ಅಲೈಂಗಿಕ ಸಂತಾನೋತ್ಪತ್ತಿ ನಡೆಸುವ ಜೀವಿ ಯಾವುದು?

ಯೀಸ್ಟ್

2.ಮನುಷ್ಯರಲ್ಲಿ ವೃಷಣಗಳು ಯಾವ ಕಾರ್ಯಗಳನ್ನು ನಿರ್ವಹಿಸುತ್ತವೆ?

ವೀರ್ಯದ ಉತ್ಪತ್ತಿ

ಇತರೆ ವಿಷಯಗಳು:

10th Standard Science 1st Lesson Notes

10th Standard Science Chapter 2 Notes

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

10ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *