ಸಮಾಸಗಳು | Samasagalu in Kannada

ಸಮಾಸಗಳು ಕನ್ನಡ, Samasagalu in Kannada, Samasagalu Kannada Grammar, Kannada Samasagalu in Kannada, ಸಮಾಸಗಳು, Types of Samasaglu in Kannada Kannada Vyakarana Samasagalu Samasagalu Endarenu Samasagalu in Kannada Pdf ಕನ್ನಡ ಸಮಾಸಗಳು

ಸಮಾಸ ಪದಗಳು ಕನ್ನಡ

ಈ ಲೇಖನದಲ್ಲಿ ನೀವು ಸಮಾಸಗಳು ಹಾಗು ಸಮಾಸಗಳ ಎಂಟು ವಿಧಗಳಾದ,ತತ್ಪುರುಷ ಸಮಾಸ, ಕರ್ಮಧಾರೆಯ ಸಮಾಸ, ಅಂಶಿ ಸಮಾಸ, ದ್ವಿಗು ಸಮಾಸ, ದ್ವಂದ್ವ ಸಮಾಸ, ಬಹುವ್ರೀಹಿ ಸಮಾಸ, ಕ್ರಿಯಾ ಸಮಾಸ, ಗಮಕ ಸಮಾಸಗಳ ಬಗ್ಗೆ ಮಾಹಿತಿಯನ್ನು ಪಡೆಯುವಿರಿ

ಸಮಾಸ

ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವುದನ್ನು ಸಮಾಸಗಳು ಎನ್ನುತ್ತಾರೆ.

ಸಮಾಸಗಳು ವಿಧಗಳು :

ಸಮಾಸದಲ್ಲಿ ಎಂಟು ವಿಧಗಳಿವೆ

ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ಅಂಶಿ ಸಮಾಸ
ದ್ವಿಗು ಸಮಾಸ
ದ್ವಂದ್ವ ಸಮಾಸ
ಬಹುವ್ರೀಹಿ ಸಮಾಸ
ಕ್ರಿಯಾ ಸಮಾಸ
ಗಮಕ ಸಮಾಸ

೧. ತತ್ಪುರುಷ ಸಮಾಸ

ಎರಡು ನಾಮಪದಗಳು ಸೇರಿ ಸಮಾಸ ಪದವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ ‘ತತ್ಪುರುಷ ಸಮಾಸ’ ಎನ್ನುತ್ತಾರೆ.

ಉದಾ:-

ಸಂಜೆಯ + ಕೆಂಪು = ಸಂಜೆಗೆಂಪು

ತಲೆಯಲ್ಲಿ + ನೋವು= ತಲೆನೋವು

ಮರದ + ಕಾಲು = ಮರಗಾಲು

ಬೆಟ್ಟದ + ತಾವರೆ = ಬೆಟ್ಟದಾವರೆ

ಕಣ್ಣಿನಿಂದ + ಕುರುಡ = ಕಣ್ಣುರುಡ

ತೇರಿಗೆ + ಮರ = ತೇರುಮರ

ಕಲ್ಲಿನ + ಹಾಸಿಗೆ = ಕಲ್ಲು ಹಾಸಿಗೆ

ಕಾಲಿನ + ಬಳೆ = ಕಾಲುಬಳೆ

ಸಂಜೆಯ + ಕೆಂಪು = ಸಂಜೆಗೆಂಪು

ಬೆಟ್ಟದ + ತಾವರೆ = ಬೆಟ್ಟದಾವರೆ

ಕಣ್ಣಿನಲ್ಲಿ + ಉರಿ = ಕಣ್ಣುರಿ

ಹಗಲಿನಲ್ಲಿ + ಕನಸು = ಹಗಲುಗನಸು

ಉತ್ತಮದಲ್ಲಿ + ಉತ್ತಮ = ಉತ್ತಮೋತ್ತಮ

ದೇವರ + ಮಂದಿರ = ದೇವಮಂದಿರ

ಕವಿಗಳಿಂದ + ವಂದಿತ = ಕವಿವಂದಿತ

ಪುರುಷರಲ್ಲಿ + ಉತ್ತಮ = ಪುರುಷೋತ್ತಮ

ಹಗಲಿನಲ್ಲಿ + ಕನಸು = ಹಗಲುಗನಸು

೨. ಕರ್ಮಧಾರೆಯ ಸಮಾಸ

ವಿಶೇಷಣ ಮತ್ತು ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸವು ‘ಕರ್ಮಧಾರೆಯ ಸಮಾಸ’ ವೆನಿಸುವುದು.

ಉದಾ:-

ಕೆಂಪಾದ + ತಾವರೆ = ಕೆಂದಾವರೆ

ಕರಿದು + ಮೋಡ = ಕಾರ್ಮೋಡ

ಕೆಚ್ಚನೆ + ಪವಳ = ಕೆಂಬವಳ

ಮುಖವು + ಕಮಲದಂತೆ = ಕಮಲಮುಖ

ನಳನೆಯ + ರಾಜ = ನಳರಾಜ

ಹಿರಿದು + ಜೇನು = ಹೆಚ್ಚೇನು

ಇಪಾದ + ಸ್ವರ = ಇಂಚರ

ಇನಿದು + ಮಾವು = ಇಮ್ಮಾವು

ಹಿರಿದು + ಮರ = ಹೆಮ್ಮರ

ಬಿಳಿಯ + ಮುಗಿಲು = ಬೆಳ್ಮುಗಿಲು

ಹಿರಿದು + ಬಾಗಿಲು = ಹೆಬ್ಬಾಗಿಲು

ಮೇಲಿನ ಉದಾಹರಣೆಗಳಲ್ಲಿ ‘ಹಿರಿದು’ ಮತ್ತು ‘ಬಿಳಿಯ’ ವಿಶೇಷಣಗಳಾಗಿವೆ. ‘ಮರ’, ‘ಮುಗಿಲು’ ಮತ್ತು ‘ಬಾಗಿಲು’ ವಿಶೇಷ್ಯಗಳಾಗಿವೆ.

೩. ಅಂಶಿ ಸಮಾಸ

ಪೂರ್ವ ಮತ್ತು ಉತ್ತರ ಪದಗಳು ಅಂಶ ಮತ್ತು ಅಂಶಿ ಭಾವದಿಂದ ಸೇರಿದ್ದರೆ, ಅದನ್ನು ಅಂಶಿ ಸಮಾಸ ಎನ್ನುವರು.

ಉದಾ :-

ನಾಲಿಗೆಯ + ತುದಿ = ತುದಿನಾಲಿಗೆ

ತುಟಿಯ + ಕೆಳಗೆ = ಕೆಳದುಟಿ

ಮೈಯ + ಒಳಗೆ = ಒಳಮೈ

ಮೇಲಿನ ಉದಾಹರಣೆಯಲ್ಲಿ ನಾಲಗೆಯ ಒಂದು ಭಾಗವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ಇನ್ನೊಂದು ಉದಾಹರಣೆಯಲ್ಲಿ ತುಟಿಯ ಭಾಗವನ್ನು ಹೇಳಲಾಗಿದೆ. ಇಲ್ಲಿ ತುದಿ ಹಾಗೂ ಕೆಳಗೆ ಎಂಬುದು ‘ಅಂಶ’ ಗಳಾದರೆ, ನಾಲಗೆ ಮತ್ತು ತುಟಿ ‘ಅಂಶಿ’ ಗಳಾಗಿವೆ.

೪. ದ್ವಿಗು ಸಮಾಸ

ಪೂರ್ವಪದವು ಸಂಖ್ಯಾ ಸೂಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ‘ದ್ವಿಗು ಸಮಾಸ’.

ಉದಾ:-

ಒಂದು + ಕಟ್ಟು = ಒಗ್ಗಟ್ಟು

ಎರಡು + ಮಡಿ = ಇಮ್ಮಡಿ

೫. ದ್ವಂದ್ವ ಸಮಾಸ

ಎರಡು ಅಥವಾ ಅನೇಕ ನಾಮ ಪದಗಳು ಸೇರಿ ಸಮಾಸವಾದಾಗ ಎಲ್ಲಾ ಪದಗಳ ಅರ್ಥಗಳು ಪ್ರಧಾನವಾಗಿದ್ದರೆ ಆ ಸಮಾಸಕ್ಕೆ ‘ದ್ವಂದ್ವ ಸಮಾಸ’ ಎಂದು ಹೆಸರು.

ಉದಾ:-

ಗಿಡವೂ + ಮರವೂ = ಗಿಡಮರ

ಕಸವೂ + ಕಡ್ಡಿಯೂ = ಕಸಕಡ್ಡಿ

ರಾಮನು + ಲಕ್ಷ್ಮಣನೂ = ರಾಮಲಕ್ಷ್ಮಣ

೬. ಬಹುವ್ರೀಹಿ ಸಮಾಸ

ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗುಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುತ್ತಾರೆ.

ಉದಾ:-

ಕೆಂಪಾದ + ಕಣ್ಣು ಉಳ್ಳವ = ಕೆಂಗಣ್ಣ

ಚಕ್ರವನ್ನು + ಪಾಣಿಯಲ್ಲಿ ಉಳ್ಳವನು = ಚಕ್ರಪಾಣಿ

ಕರಿಯನ್ನು + ಮುಖವಾಗಿ ಉಳ್ಳವನು = ಕರಿಮುಖ

೭. ಕ್ರಿಯಾ ಸಮಾಸ

ಸಮಾಸದಲ್ಲಿ ಉತ್ತರ ಪದವು ಕ್ರಿಯಾ ಸೂಚಕವಾಗಿದ್ದರೆ ಅದು ಕ್ರಿಯಾ ಸಮಾಸವಾಗುತ್ತದೆ.

ಉದಾ:-

ಮುದ್ದನ್ನು + ಮಾಡು = ಮುದ್ದುಮಾಡು

ಕಣ್ಣನ್ನು + ತೆರೆ = ಕಣ್ದೆರೆ

ಮೈಯನ್ನು + ತಡವಿ = ಮೈದಡವಿ

೮. ಗಮಕ ಸಮಾಸ

ಪೂರ್ವ ಪದವು ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರ ಪದವು ನಾಮ ಪದವಾಗಿದ್ದರೆ ಅದನ್ನು ಗಮಕ ಸಮಾಸವೆನ್ನುತ್ತಾರೆ

ಉದಾ:-

ಇವನು + ಮುದುಕ = ಈ ಮುದುಕ

ಅವು + ಪ್ರಾಣಿಗಳು = ಆ ಪ್ರಾಣಿಗಳು

ಮಾಡಿದುದು + ಅಡುಗೆ = ಮಾಡಿದಡುಗೆ

ಬಾಡಿದುದು + ಹೂವು = ಬಾಡಿದ ಹೂವು

ಉಡುವುದು + ದಾರ = ಉಡುದಾರ

FAQ :

ಸಮಾಸಗಳು ಎಂದರೇನು?

ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವುದನ್ನು ಸಮಾಸಗಳು ಎನ್ನುತ್ತಾರೆ.

ತತ್ಪುರುಷ ಸಮಾಸವನ್ನು ವ್ಯಾಖ್ಯಾನಿಸಿ.

ಎರಡು ನಾಮಪದಗಳು ಸೇರಿ ಸಮಾಸ ಪದವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ ‘ತತ್ಪುರುಷ ಸಮಾಸ’ ಎನ್ನುತ್ತಾರೆ.

ಇತರ ವಿಷಯಗಳು :

 ಕನ್ನಡ ವರ್ಣಮಾಲೆ

 ಕನ್ನಡ ಸ್ವರಗಳು

 ದ್ವಿರುಕ್ತಿ ಪದಗಳು

 ಪತ್ರ ಬರೆಯುವುದು

 ವಿರುದ್ಧಾರ್ಥಕ ಪದಗಳು

 ದೇಶ್ಯ-ಅನ್ಯದೇಶ್ಯಗಳು ಪದಗಳು

 ಸಮಾನಾರ್ಥಕ ಪದಗಳು

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ  ಸಮಾಸಗಳ ಬಗ್ಗೆ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಸಮಾಸಗಳು, ಅವುಗಳ ವಿಧಗಳ ಮಾಹಿತಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Reply

Your email address will not be published. Required fields are marked *

rtgh