Dvirukti Padagalu in Kannada | ದ್ವಿರುಕ್ತಿ ಪದಗಳು

Dvirukti Padagalu in Kannada, ಕನ್ನಡ ದ್ವಿರುಕ್ತಿ ಪದಗಳು, Details of Dvirukthi Padagalu With Examples, Dvirukthigalu ದ್ವಿರುಕ್ತಿಗಳು, ದ್ವಿರುಕ್ತಿಗಳು ಕನ್ನಡ

ವ್ಯಾಕರಣ : ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು ಹಾಗೂ ಸಾರ್ವತ್ರೀಕರಣಗೊಳಿಸಲು ಇರುವ ಮಾರ್ಗದರ್ಶಿಯನ್ನು ವ್ಯಾಕರಣ ಎನ್ನುತ್ತಾರೆ.

ಕನ್ನಡ ವ್ಯಾಕರಣವು ಹಲವಾರು ವಿಷಯಗಳನ್ನು ಒಳಗೊಂಡಿದೆ

ದ್ವಿರುಕ್ತಿಗಳು

ಅನುಕರಣವ್ಯಯಗಳು

ನುಡಿಗಟ್ಟುಗಳು  ಇವುಗಳನ್ನು ಒಳಗೊಂಡಿದೆ,,,

ಜೋಡುನುಡಿ, ಅನುಕರಣಾವ್ಯಯ  ದ್ವಿರುಕ್ತಿ  ಮತ್ತು ನುಡಿಗಟ್ಟುಗಳು

Dvirukti Padagalu ದ್ವಿರುಕ್ತಿ :-

ದ್ವಿರುಕ್ತಿ ಪದದ ಶಬ್ದಶಃ ಅರ್ಥ ತಿಳಿದುಕೊಳ್ಳೋಣ. ಇಲ್ಲಿ ‘ದ್ವಿ’ ಅಂದರೆ ‘ಎರಡು‘, ‘ಉಕ್ತಿ‘ ಎಂದರೆ ‘ಮಾತು

ಒಂದು ಪದವನ್ನೋ ಅಥವಾ ಒಂದು ವಾಕ್ಯವನ್ನೋ ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಎರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುತ್ತಾರೆ.
ಉದಾಹರಣೆ:

ಓಡಿಓಡಿ,

ಬಿದ್ದುಬಿದ್ದು ,

ಮನೆಮನೆ

ದ್ವಿರುಕ್ತಿಯನ್ನು

ಸಂತೋಷ,

ಅವಸರ,

ಸಂಭ್ರಮ,

ಕೋಪ, ಅಥವಾ ಹತಾಶೆಯನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ.

20 Dvirukti Padagalu in Kannada

1 ಉತ್ಸಾಹ 

ಹೌದು , ಹೌದು ! ನಾನೇ ಗೆದ್ದೆ .
ನಿಲ್ಲು ,ನಿಲ್ಲು ! ನಾನೂ ಬರುತ್ತೇನೆ .
ಇಗೋ ! ನಾನೂ ಬಂದೆ, ನಾನೂ ಬಂದೆ

2. ಹೆಚ್ಚು 

ದೊಡ್ಡ ದೊಡ್ಡ ಕಾಯಿಗಳು ಬಿಟ್ಟಿವೆ .
ಹೆಚ್ಚು ಹೆಚ್ಚು ಜನರು ಸೇರಬೇಕು .

3. ಪ್ರತಿಯೊಂದು 

ಮನೆಮನೆಗಳನ್ನು ತಿರುಗಿದನು .
ಕೇರಿಕೇರಿಗಳನ್ನು ಅಲೆದನು .ಊರೂರು ತಿರುಗಿ ಬೇಸತ್ತನು

4. ಕೋಪ  :-

ಎಲೆಲಾ ! ಮೂರ್ಖ ! ನಿಲ್ಲು , ನಿಲ್ಲು , ಬಂದೆ .
ಎಲೆಲೆ ! ನಿನ್ನನ್ನು ಕೊಲ್ಲದೆ ಬಿಡುವೆನೆ ?
ಕಳ್ಳಾ ,ಕಳ್ಳಾ, , ನಿನಗಿದೆ ಶಿಕ್ಷೆ !

5. ಸಂಭ್ರಮ –

ಅಗೋ ! ಅಗೋ ! ಎಷ್ಟು ಚೆನ್ನಾಗಿದೆ !
ಬನ್ನಿ , ಬನ್ನಿ,, ಕುಳಿತುಕೊಳ್ಳಿ .
ಹತ್ತಿರ ಬಾ, ಹತ್ತಿರ ಬಾ
ಮೇಲೆ ಕೂಡಿರಿ! ಮೇಲೆ ಕೂಡಿರಿ

6. ಆಶ್ಚರ್ಯ 

ಅಬ್ಬಬ್ಬಾ! ಎಂಥಾ ರಮ್ಯ ನೋಟವಿದು !
ಅಹಹಾ! ರುಚಿಕರ ಊಟವಿದು !

7. ಆಕ್ಷೇಪಾರ್ಥ 

ಬೇಡ ಬೇಡ ,ಅವನಿಗೆ ಕೊಡಬೇಡ .
ನಡೆ ನಡೆ , ದೊಡ್ಡವರ ರೀತಿ ಅವನಿಗೇಕೆ?
ಎಲೆಲಾ! ನಿನ್ನಂಥವನು ಹೀಗೆ ನುಡಿಯಬಹುದೇ?

8. ಹರ್ಷ 

ಅಹಹಾ ,ನಾವೇ ಧನ್ಯರು !
ಅಮ್ಮಾ, , ಅಮ್ಮಾ, , ನಾನೇ ಈ ಚಿತ್ರ ಬರೆದವಳು .
ನಿಲ್ಲಿ ನಿಲ್ಲಿ! ನಾನೂ ನೋಡಲು ಬರುತ್ತೇನೆ .

9. ಒಪ್ಪಿಗೆಯ 

ಹೌದು ಹೌದು, ಯೋಗ್ಯನಿಗೇ ಸಂಭಾವನೆ ದೊರಕಿದೆ .
ಆಗಲಿ ಆಗಲಿ , ನೀವು ಬರುವುದು ಸಂತೋಷಕರ .
ಇರಲಿ ಇರಲಿ , ಉತ್ತಮನಾದವನೇ ಇರಲಿ .

10. ಅವಸರ

ಓಡು ಓಡು, ಬೇಗಬೇಗ ಓಡು .
ನಡೆ ನಡೆ , ಹೊತ್ತಾಯಿತು .
ಬಾ ಬಾ, ಬೇಗಬೇಗ ಬಾ .

11. ಅನುಕ್ರಮ 

ಗಿಡವು ಮೊದಮೊದಲು ಚಿಕ್ಕಚಿಕ್ಕ ಎಲೆಗಳನ್ನೂ, ಆಮೇಲೆ ದೊಡ್ಡ ದೊಡ್ಡ ಎಲೆಗಳನ್ನೂ ಬಿಡುತ್ತದೆ.
ಚಿಕ್ಕ ಚಿಕ್ಕ ಮಕ್ಕಳು ಮೊದಲು ಊಟ ಮಾಡಲಿ, ಆಮೇಲೆ ದೊಡ್ಡ ದೊಡ್ಡ ಮಕ್ಕಳು ಊಟ ಮಾಡಲಿ .
ದೊಡ್ಡ ದೊಡ್ಡ ವಿಚಾರಗಳನ್ನು ದೊಡ್ಡದೊಡ್ಡವರಿಂದಲೇ ಕೇಳಬೇಕು .

12. ಆದರ :-

ಅಣ್ಣಾ ಬಾ ಬಾ, ಮೊದಲು ಊಟ ಮಾಡು .
ಇತ್ತ ಬನ್ನಿ , ಇತ್ತ ಬನ್ನಿ, , ಮೇಲೆ ಕುಳಿತುಕೊಳ್ಳಿ .
ಭಾವ ಬಂದ, ಭಾವ ಬಂದ, ಕಾಲಿಗೆ ನೀರು ಕೊಡು

13. ಒಂದನ್ನು –

ಈ ನಾಣ್ಯದ ಚೀಲದಲ್ಲಿ ಒಂದೊಂದು ಕಾಸು ತೆಗೆದು ಒಬ್ಬೊಬ್ಬನಿಗೆ ಹಂಚು
ಈ ಹಣ್ಣುಗಳಲ್ಲಿ ಚಿಕ್ಕ ಚಿಕ್ಕದ್ದನ್ನು ಆರಿಸಿ ಬೇರೆ ಇಡು .
ದೊಡ್ಡ ದೊಡ್ಡ ಕಲ್ಲುಗಳನ್ನೇ ಎತ್ತಿ ತಾ .

ಅತಿ ಹೆಚ್ಚು , ಅತಿ ಕಡಿಮೆ ಎಂದು ಹೇಳಲೂ ಕೂಡ ದ್ವಿರುಕ್ತಿಯನ್ನು ಬಳಸುತ್ತಾರೆ.

ಉದಾಹರಣೆಗೆ,

ಪುಟ್ಟಪುಟ್ಟ ಮಕ್ಕಳು ಆಟವಾಡುತಿದ್ದವು.

ಊರೂರು ಅಲೆದರೂ ಅವನಿಗೆ ಕೆಲಸ ಸಿಗಲಿಲ್ಲ.

ಕೆಲವೊಂದು ದ್ವಿರುಕ್ತಿಗಳನ್ನು ವಿಶೇಷ ರೂಪದಲ್ಲಿ,

ಉದಾಹರಣೆಗೆ

ಮೊದಲು ಮೊದಲು‘ ಎಂದು ಹೇಳುವ ಬದಲು, ‘ಮೊಟ್ಟಮೊದಲು‘ ಎಂದು ಹೇಳುತ್ತಾರೆ.

ನಡುವೆ+ನಡುವೆ=ನಡುನಡುವೆ-ನಟ್ಟನಡುವೆ

ಬಯಲು+ಬಯಲು=ಬಟ್ಟಬಯಲು-ಬಚ್ಛಬಯಲು

ತುದಿ+ತುದಿ=ತುಟ್ಟತುದಿ-ತುತ್ತತುದಿ

ಕೊನೆಗೆ+ಕೊನೆಗೆ=ಕೊನೆಕೊನೆಗೆ

Dvirukti Padagalu in Kannada ಉದಾಹರಣೆಗಳು :

ಮತ್ತೆ ಮತ್ತೆ

ಈಗೀಗ

ದೊಡ್ಡ ದೊಡ್ಡ

ಹಿಂದೆ ಹಿಂದೆ

ಮುಂದೆ ಮುಂದೆ

ಒಳಒಳಗೆ

ಬೇಡ ಬೇಡ

ಸಣ್ಣ ಸಣ್ಣ

ಮನೆ ಮನೆ

ಬಟ್ಟಬಯಲು

ನಟ್ಟನಡುವೆ

ನಿಲ್ಲು ನಿಲ್ಲು

ದೂರ ದೂರ

ಇರಲಿ ಇರಲಿ

ತುತ್ತತುದಿ

ಬಿಸಿ ಬಿಸಿ

ಅಬ್ಬಬ್ಬಾ

ಅಗೋ ಅಗೋ

ನಡೆ ನಡೆ

ಬೇರೆ ಬೇರೆ

ಬಣ್ಣಬಣ್ಣದ

ಹೆಚ್ಹು ಹೆಚ್ಹು

ಹೌದು ಹೌದು

ಕಟ್ಟಕಡೆ

FAQ :

ವ್ಯಾಕರಣ ಎಂದರೇನು?

ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು ಹಾಗೂ ಸಾರ್ವತ್ರೀಕರಣಗೊಳಿಸಲು ಇರುವ ಮಾರ್ಗದರ್ಶಿಯನ್ನು ವ್ಯಾಕರಣ ಎನ್ನುತ್ತಾರೆ.

ದ್ವಿರುಕ್ತಿ ಎಂದರೇನು?

ಒಂದು ಪದವನ್ನೋ ಅಥವಾ ಒಂದು ವಾಕ್ಯವನ್ನೋ ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಎರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುತ್ತಾರೆ.

ಇನ್ನು ಹೆಚ್ಚಿನ ವಿಷಯಗಳನ್ನು ಓದಿ :

Kannada Nigantu

ವಿರುದ್ಧಾರ್ಥಕ ಪದಗಳು

ದೇಶ್ಯ-ಅನ್ಯದೇಶ್ಯಪದಗಳು

ತತ್ಸಮ ತದ್ಭವ

Kannada Grammar Book | ಕನ್ನಡ ಪುಸ್ತಕಗಳು ಇಲ್ಲಿಂದ ಖರೀದಿ ಮಾಡಬಹುದು

Kannada Vyakarana Mattu Rachane [kannada Grammar And Composition] Buy Books

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ದ್ವಿರುಕ್ತಿ ಪದಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ದ್ವಿರುಕ್ತಿ ಪದಗಳನ್ನು ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

1 thoughts on “Dvirukti Padagalu in Kannada | ದ್ವಿರುಕ್ತಿ ಪದಗಳು

Leave a Reply

Your email address will not be published. Required fields are marked *

rtgh