rtgh

Letter Writing in Kannada and Kannada Letter Writing Format

Letter Writing in Kannada, ಕನ್ನಡ ಪತ್ರ ಲೇಖನ, Easy Letter Writing in Kannada, Letter Writing for Students, ಕನ್ನಡ Letter Writing for Exams letter writing in kannada official letter Patralekhana in Kannada types of letter writing in kannada letter writing in kannada for friend about trip

ಗೆಳೆಯನಿಗೆ ಪತ್ರ

ಗೆ,

ವಿಳಾಸ ;ರಿಪ್ಪನಪೇಟೆ

ಹೊಸನಗರ ತಾ||

ಶಿವಮೊಗ್ಗ ಡಿ||

ಜುಲೈ ೧೪ ೨೦೨೦

ಆತ್ಮೀಯ ಖುಷಿ

                    ನಿಮ್ಮ ಶಾಲೆಯಲ್ಲಿ ನೀವು ಅಗ್ರಸ್ಥಾನದಲ್ಲಿದ್ದೀರಿ ಮತ್ತು ನಿಮ್ಮ ಕನಸನ್ನು ಸಾಧಿಸಿದ್ದೀರಿ ಎಂದು ತಿಳಿದಾಗ ನನ್ನ       ಸಂತೋಷಕ್ಕೆ ಯಾವುದೇ ಮಿತಿಯಿಲ್ಲ . ನಿಮ್ಮನ್ನು ವೈಯಕ್ತಿಕವಾಗಿ ಅಭಿನಂದಿಸಲು ನಾನು ಅಲ್ಲಿದ್ದೇನೆ                                     ಎಂದು ನಾನು ತುಂಬಾ ಸಂತೋಷಪಟ್ಟಿದ್ದೇನೆ .                                                                                                            ಕಠಿಣ ಪರಿಶ್ರಮ , ಬುದ್ಧಿವಂತಿಕೆ ಮತ್ತು ಪರಿಶ್ರಮವು ಉತ್ತಮ ಫಲಿತಾಂಶವನ್ನು ತರುತ್ತದೆ ಎಂದು ಫಲಿತಾಂಶವು ಸಾಬೀತುಪಡಿಸಿದೆ                                                                                                                                                          ನನ್ನ ಇಚ್ .ಯ ಹೊರತಾಗಿಯೂ ಆಚರಣೆಯ ಪಾರ್ಟಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ನಾನು ಕ್ಷಮೆಯಾಚಿಸುತ್ತೇನೆ

            ಸದ್ಯದಲ್ಲೇ ನಿನ್ನನ್ನು ನೋಡುವ ಭರವಸೆ ಇದೆ  ದಯವಿಟ್ಟು ಪ್ರೋತ್ಸಾಹಿಸಿ ಮತ್ತು ನಿಮ್ಮ ಕಠಿಣ ಪರಿಶ್ರಮವನ್ನು       ಮುಂದುವರಿಸಿ . ನಿಮ್ಮ ಭವಿಷ್ಯವು ತುಂಬಾ ಉಜ್ವಲವಾಗಿದೆ . ನನ್ನ ಪೋಷಕರು ಮತ್ತು ಅಕ್ಕ ಸಾಕಷ್ಟು ಪ್ರೀತಿ ಮತ್ತು ಹೃತೂರ್ವಕ ಅಭಿನಂದನೆಗಳನ್ನು ಕಳುಹಿಸಿದ್ದಾರೆ   ಸಾಕಷ್ಟು ಪ್ರೀತಿ ಮತ್ತು ಶುಭಾಶಯಗಳೊಂದಿಗೆ

ನಿಮ್ಮ ಸ್ನೇಹಿತ 

ಮೋಹನ.

Letter Writing in Kannada and Kannada Letter Writing Format

Informal Letter in Kannada

ವ್ಯವಹಾರಿಕ ಪತ್ರ 

ಇಂದ

ತನುಜ ಎ ಎಂ

೧೦ ನೇ ತರಗತಿ

ಸರಕಾರಿ ಶಾಲೆ

ಗುಬ್ಬಿಹಳ್ಳಿ

ಬಿದನೂರು ತಾಲ್ಲೂಕು ,

ಚಿಕ್ಕಮಗಳೂರು ಜಿಲ್ಲೆ

ಇವರಿಗೆ ,

ಅಧ್ಯಕ್ಷರು ,

ಗ್ರಾಮ ಪಂಚಾಯಿತಿ

, ಗುಬ್ಬಿಹಳ್ಳಿ ,

ಕಡೂರು ತಾಲ್ಲೂಕು ,

ಚಿಕ್ಕಮಗಳೂರು ಜಿಲ್ಲೆ ,

ಮಾನ್ಯರೇ ,

   ವಿಷಯ :ನಮ್ಮ ಊರಿನ ಬೀದಿ ದೀಪಗಳನ್ನು ಸರಿಪಡಿಸುವಂತೆ ಕೋರಿ .                                                                                                     ಈ ಮೆಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ , ತಮ್ಮ ಗಮನಕ್ಕೆ ತರಬಯಸುವುದೇನೆಂದರೆ  ನಮ್ಮ ಊರಿನ ಬೀದಿ ದೀಪಗಳು ಕೆಲವು ದಿನಗಳಿಂದ ಕೆಟ್ಟುಹೋಗಿವೆ .                                                                                                ಇದರಿಂದ ರಸ್ತೆಯಲ್ಲಿ ರಾತ್ರಿ ಹೊತ್ತು ಮುದುಕರು , ಹೆಣ್ಣುಮಕ್ಕಳು ಹಾಗೂ ಮಕ್ಕಳು ಏಕಾಂಗಿಯಾಗಿ ಸಂಚರಿಸಲು ಭಯಪಡುವಂತಾಗಿದೆ .                                                                                                                                              ಹೀಗಾಗಿ , ಜನಪರ ಕಾಳಜಿ ಹೊಂದಿರುವ ತಾವು ಈ ಕೂಡಲೇ ನಮ್ಮ ಗ್ರಾಮದ ಬೀದಿ ದೀಪಗಳನ್ನು ಸರಿಪಡಿಸಿ ಜನರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ

ವಂದನೆಗಳೊಂದಿಗೆ

ತಮ್ಮ ವಿಶ್ವಾಸಿ

ತನುಜ

Formal Letter in Kannada

ಅಮ್ಮನಿಂದ ಮಗಳಿಗೆ ಪತ್ರ

೦೯/೦೮/೨೦೦೧

ಶಿಕಾರಿಪುರದಿಂದ

ಪ್ರೀತಿಯ ತೇಜಸ್ವಿನಿಗೆ ,

ನಾವು ಇಲ್ಲಿ ಆರೋಗ್ಯದಿಂದ ಇದ್ದೇವೆ . ನಿನ್ನೆ ದಿನ ನಿನ್ನ ಪತ್ರ ಬಂದು ತಲುಪಿತು , ನೀವು ಶಾಲೆಯಿಂದ ಪ್ರವಾಸಕ್ಕೆ ಹೋದ ವಿಚಾರ ತಿಳಿದು ಸಂತೋಷವಾಯಿತು ,                                                                                                   ನೀನು ಶ್ರವಣಬೆಳಗೊಳ ನೋಡಿದ ಬಗ್ಗೆ ತುಂಬಾ ಚೆನ್ನಾಗಿ ಬರೆದಿರುವೆ . ನೀನು ಕಳಿಸಿದ ಫೋಟೋಗಳನ್ನು ಮತ್ತು ನೀನು ಬರೆದ ಪತ್ರವನ್ನು ನೋಡಿದ ನಿನ್ನ ಅಪ್ಪ “ ನೋಡು , ನಮ್ಮ ಮಗಳು ಎಷ್ಟು ಚೆನ್ನಾಗಿ ಪತ್ರ ಬರೆದಿದ್ದಾಳೆ ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು                                                                                                                                                          . ನೀನು ಪತ್ರವನ್ನು ಬರೆಯುತ್ತಾ ಇರು . ನಿನ್ನ ಬರವಣಿಗೆ ಬಹಳಷ್ಟು ಸುಧಾರಿಸುತ್ತದೆ . ಆರೋಗ್ಯದ ಕಡೆ ಗಮನ ಕೊಡು , ಅಭ್ಯಾಸದತ್ತ ಒಲವು ಇರಲಿ , ವ್ಯರ್ಥವಾಗಿ ಸಮಯ ಕಳೆಯಬೇಡ . ಚೆನ್ನಾಗಿ ಊಟಮಾಡು , ಆಟ ಆಡು , ನಿದ್ರೆಮಾಡು , ಅದೇ ರೀತಿ ಚೆನ್ನಾಗಿ ಓದಿ ಕೀರ್ತಿ ಸಂಪಾದಿಸಬೇಕು . ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಇರುತ್ತದೆ ಎಂಬುದನ್ನು ನೆನಪಿಡು .                ನಿನಗೆ ಒಳ್ಳೆಯದಾಗಲಿ …. ಆಗಾಗ ಪತ್ರ ಬರೆಯುತ್ತಿರು .

ಶುಭಾಶೀರ್ವಾದಗಳೊಂದಿಗೆ ,                                                                                                                                                                                                                                                                                                   ನಿನ್ನ ಪ್ರೀತಿಯ ಅಮ್ಮ

ರಾಜೇಶ್ವರಿ

ಇವರಿಗೆ ,

ಕುಮಾರಿ ತೇಜಸ್ವಿನಿ

೬ ನೇ ತರಗತಿ

ಬನಶಂಕರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಕೆರೆಹಳ್ಳಿ ,

ಬೆಂಗಳೂರು – ೫೬೦ ೦೮೫ .

letter writing in kannada format ಕನ್ನಡ ಪತ್ರ ಲೇಖನ

ಗೆಳೆಯ/ಗೆಳತಿ ಗೆ ಪತ್ರ

ರಮಾ ಎಂ

ಮೈಸೂರು

೦೮/೦೬/೨೦೨೧

 ಪ್ರೀತಿಯ ಗೆಳತಿ/ಗೆಳೆಯ

ನಾನು ಇಲ್ಲಿ ಕ್ಷೇಮವಾಗಿದ್ದೆವೆ , ನೀವು ಕೂಡ ಕ್ಷೇಮ ಎಂದು ಭಾವಿಸಿದ್ದೇನೆ ನಿನ್ನ ಪತ್ರ ತಲುಪಿತು. ಓದಿ ಸಂತೋಷವಾಯಿತು. ಕಳೆದ ವಾರ ನಾವೆಲ್ಲ  ವಿದ್ದ್ಯಾರ್ಥಿಗಳು  ಸೇರಿ   ಶಿಕ್ಷಣಿಕ ಪ್ರವಾಸ ಕೈಗೊಂಡಿದ್ದೆವು  ಇತಿಹಾಸ ಪ್ರಸಿದ್ದವಾದ  ಐಹೊಳೆ , ಬಾದಾಮಿ , ಪಟ್ಟದಕಲ್ಲುಗಳಿಗೆ ಬೇಟಿ ಕೊಟ್ಟು   ಅಲ್ಲಿನ   ಶಿಲ್ಪಕಲೆಗಳನ್ನು ಕಣ್ತುಂಬಿಕೊಂಡೆವು  ಮತ್ತು ಇದರ ಕುರಿತಾದ ಮಾಹಿತಿಗಳನ್ನು ಉಪನ್ಯಾಸಕರಿಂದ    ತಿಳಿದುಕೊಂಡೆವು . ಈ ಪ್ರವಾಸವು ನನಗೆ  ತುಂಬಾ ಖಷಿಯನ್ನು  ಮತ್ತು ಜ್ಞಾನವನ್ನು ತಂದುಕೊಟ್ಟಿದೆ – ನಿನು ಕೂಡ ನಮ್ಮ ಜೋತೆ  ಬಂದಿದ್ದರೆ ಚೆನ್ನಾಗಿರುತ್ತಿತ್ತು

ನಾನು ಇಲ್ಲಿ ಚೆನ್ನಾಗಿ  ವ್ಯಾಸಂಗ ಮಾಡುತ್ತಿದ್ದೆನೆ  , ನೀನು ನಿನ್ನ ಒದಿನ ಕಡೆಗೆ ಹೆಚ್ಚಿನ   ಗಮನ ನೀಡು  ನಿನ್ನ ನೆನಪುಗಳೊಂದಿಗೆ

ನಿನ್ನ ಪೀತಿಯ ಗೆಳತಿ

ರಮಾ.ಎಂ

ಇವರಿಗೆ,

ರಮ್ಯಾ ಎ

೨ ನೆ ಮಹಡಿ

ಕುವೆಂಪು ನಗರ

ಬೆಂಗಳೂರು

ತರಗತಿ ಶಿಕ್ಷಕರಿಗೆ ಪತ್ರ

ಇಂದ,

ಮೋನಿಕ ಡಿ

10 ನೇ ತರಗತಿ

ಶಾಂತಾ ವಿದ್ಯಾನಿಕೇತನ

ಮೆರೆಸಂದ್ರ

ಗೆ,

೦೯/೦೭/೨೦೨೧

ತರಗತಿ ಶಿಕ್ಷಕರು

10 ನೇ ತರಗತಿ

ಶಾಂತಾ ವಿದ್ಯಾನಿಕೇತನ

ಮೆರೆಸಂದ್ರ

ಮಾನ್ಯರೇ ,

ವಿಷಯ:  ಎರಡು ದಿನ ರಜೆ ಕೋರಿ..,

ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ಮೊನಿಕ ಆದ ನಾನು ನಾಲ್ಕು ದಿನ ಶಾಲೆ ಗೆ ಹಾಜಾರಾಗುವುದಿಲ್ಲ  ಕಾರಣ ನಾನು ನಮ್ಮ ಕುಟುಂಬ ಜೊತೆ ಕೇದಾರ ದೇವಸ್ಥಾನಕ್ಕೆ ಹೋಗುತ್ತೇನೆ . ನೀವು ನನಗೆ ಎರಡು ದಿನಗಳ ಕಾಲ ರಜೆಯನ್ನು ನೀಡುವಂತೆ ಕೋರುತ್ತಿದೇನೆ

ಇಂತಿ ನಿಮ್ಮ ವಿಶ್ವಾಸಿ                                                                                                                                                                   ಮೋನಿಕ ಡಿ

FAQ :

ಔಪಚಾರಿಕ ಪತ್ರ ಎಂದರೇನು?

ವಾಣಿಜ್ಯ, ವ್ಯಾಪಾರ, ಅಧಿಕೃತ ಪತ್ರವ್ಯವಹಾರ, ಸಾರ್ವಜನಿಕ ಪ್ರಾತಿನಿಧ್ಯ, ಬ್ಯಾಂಕ್, ದೂರುಗಳು ಮತ್ತು ಇತರ ವ್ಯವಹಾರಗಳು, ವಹಿವಾಟುಗಳು ಮತ್ತು ಜನರೊಂದಿಗೆ ಸಂವಹನವನ್ನು ಔಪಚಾರಿಕ ಪತ್ರಗಳ ಮೂಲಕ ನಡೆಸಲಾಗುತ್ತದೆ.

ಅನೌಪಚಾರಿಕ ಪತ್ರ ಎಂದರೇನು?

ಕುಟುಂಬ, ಗೆಳೆಯರಿಗೆ, ಸಂಬಂಧಿಕರು ಅಥವಾ ಪರಿಚಯ ಇರುವವರಿಗೆ ಬರೆಯುವ ಪತ್ರವಾಗಿದೆ.

ಇನ್ನು ಹೆಚ್ಚಿನ ವಿಷಯಗಳನ್ನು ಓದಿ : 

Granthalaya Mahatva Prabandha

Personal Letter in Kannada

Gade Mathu In Kannada

Handbook for Letter Writing

3 thoughts on “Letter Writing in Kannada and Kannada Letter Writing Format

Leave a Reply

Your email address will not be published. Required fields are marked *