ಅಲಂಕಾರ-ಶಬ್ದಾಲಂಕಾರಗಳು Alankara Shabdhalankara, Kannada Grammer, Kannada Vyakarana, Kannada Grammer Book Alankara In Kannada Grammar Pdf
ಅಲಂಕಾರ-ಶಬ್ದಾಲಂಕಾರಗಳು
ಶಬ್ದ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರವೆನ್ನುವರೆಂದು ಈ ಪೂರ್ವದಲ್ಲಿ ಉದಾಹರಣೆ ಸಮೇತ ವಿವರಿಸಲಾಗಿದೆ.
ಈ ಶಬ್ದಾಲಂಕಾರಗಳು ಎರಡುವಿಧ.
(ಅ) ಅನುಪ್ರಾಸ (೧) ವೃತ್ತ್ಯನುಪ್ರಾಸ
ಈ ಗಾದೆಗಳನ್ನು ನೋಡಿರಿ
(೧) ತುಪ್ಪದಮಾತಿಗೆಒಪ್ಪಿಕೊಂಡುತಿಪ್ಪೆಪಾಲಾದ
(೨) ತುಂಟನಾದವಮಂಟಪದಲ್ಲಿಕೂತರೂತಂಟೆಬಿಡಲಾರ ಇತ್ಯಾದಿ ಮಾತುಗಳಲ್ಲಿ ಒಂದೇ ಅಕ್ಷರ ಎರಡು ಮೂರು ಸಲ ಬಂದು ವಾಕ್ಯಗಳ ಸೊಬಗನ್ನು ಹೆಚ್ಚಿಸಿದೆ. ಹಾಗೆಯೇ ಈ ಕೆಳಗಿನ ಒಂದು ಪದ್ಯವನ್ನು ನೋಡಿ. “ಮುರಾರಿಶಂಬರಾರಿವಾಗ್ವರಾರಿನಿರ್ಜರಾರ್ಜಿತೇ ಧರಾಧರೇಶ್ವರಾತ್ಮಜೇಹರಪ್ರಿಯೇಜಯಾಂಬಿಕೆ ||” (-ವೃಷಭೇಂದ್ರ ವಿಜಯ) ಈ ಪದ್ಯದಲ್ಲಿ ರಕಾರವು ಹಲವಾರು ಸಲ ಪುನರುಕ್ತವಾಗಿ ಪದ್ಯದ ಸೌಂದರ‍್ಯವು ಶಬ್ದಗಳಿಂದ ಹೆಚ್ಚಿದೆ. ಇದಕ್ಕೆ ಸೂತ್ರವನ್ನು ಹೀಗೆ ಹೇಳಬಹುದು.
ವೃತ್ತ್ಯನುಪ್ರಾಸ:-“ಒಂದಾಗಲಿ, ಎರಡಾಗಲಿ ವ್ಯಂಜನಗಳು ಪುನಃಪುನಃ ಹೇಳಲ್ಪಟ್ಟಿದ್ದರೆ ಅದುವೃತ್ತ್ಯನುಪ್ರಾಸವೆನಿಸುವುದು.”
Alankara in Kannada Pdf
ಉದಾಹರಣೆಗೆ
:ಎಳೆಗಿಳಿಗಳಬಳಗಂಗಳಗಳನಿಳಿತಂದೆಳಸಿಬಳಸಿಸುಳಿದೊಳವುಗುತುಂನಳನಳಿಸಿಬೆಳೆದುಕಳಿಯದ|ಕಳವೆಯಕಣಿಶಂಗಳಂಕರಂಖಂಡಿಸುಗುಂ|| (-ರಾಜಶೇಖರ ವಿಳಾಸ)
ಅರ್ಥ:- ಎಳೆಯ ಗಿಳಿಗಳ ಸಮೂಹವು ಗಳಗಳನೆ ಇಳಿದು ಬಂದು ಬತ್ತದ ಹಾಲುಗಾಳನ್ನು ಬಯಸಿ ಸುತ್ತುತ್ತಾ, ಸುಳಿಯುತ್ತಾ ನಳನಳಿಸಿ ಬೆಳೆದುನಿಂತ ಬತ್ತದ ಎಳೆಗಾಳುಗಳ ಗೊನೆಗಳನ್ನು ಸೀಳುತ್ತಿದ್ದವು. ಇಲ್ಲಿ ಳ ಕಾರವು ಅನೇಕ ಸಲ ಪುನರುಕ್ತಿಗೊಂಡು ಪದ್ಯದ ಸೌಂದರ‍್ಯವು ಹೆಚ್ಚಿದೆ. ಆದ್ದರಿಂದ ಇದು ‘ವೃತ್ತ್ಯನುಪ್ರಾಸ’ ಅಲಂಕಾರವೆನಿಸಿದೆ.
(೨) ಛೇಕಾನುಪ್ರಾಸ
(i) “ಮಾಡಿಮಾಡಿ ಕೆಟ್ಟರು ಮನವಿಲ್ಲದೆ ನೀಡಿನೀಡಿ ಕೆಟ್ಟರು ನಿಜವಿಲ್ಲದೆ”(-ಬಸವಣ್ಣ)
(i) “ಹಾಡಿಹಾಡಿ ರಾಗ ಬಂತು ಉಗುಳಿ ಉಗುಳಿ ರೋಗ ಬಂತು”(-ಗಾದೆ)
ಮೇಲಿನ ಒಂದು ವಚನ ಮತ್ತು ಒಂದು ಗಾದೆ ಇವುಗಳಲ್ಲಿ ಬಂದಿರುವ ಎರಡೆರಡು ವ್ಯಂಜನಗಳಿಂದ ಕೂಡಿದ ಶಬ್ದಗಳ ಆವೃತ್ತಿಯು ಆ ಮಾತುಗಳ ಸೌಂದರ‍್ಯವನ್ನು ಹೆಚ್ಚಿಸಿದೆ. ಮಾಡಿ ಮಾಡಿ ಎಂಬಲ್ಲಿ ಮಕಾರ ಡಕಾರಗಳು ಸೇರಿದ ಶಬ್ದ ಎರಡು ಸಲ ಬಂದಿದೆ. ಅನಂತರ ನೀಡಿ ನೀಡಿ ಎಂಬ ಶಬ್ದ ಎರಡು ಸಲ ಬಂದಿದೆ. ಅದರಂತೆ ಗಾದೆಯಲ್ಲೂ ಎರಡೆರಡು ವ್ಯಂಜನಗಳನ್ನೊಳಗೊಂಡ ಶಬ್ದ ಜೊತೆ ಜೊತೆಯಾಗಿ ಬಂದಿವೆ. ಹೀಗೆ ಬಂದರೆ ಅದು ‘ಛೇಕಾನುಪ್ರಾಸ’ವೆನಿಸುವುದು. ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.
ಛೇಕಾನುಪ್ರಾಸ:-
“ಎರಡೆರಡುವ್ಯಂಜನಗಳಿಂದಕೂಡಿದಶಬ್ದವುಪುನಃಪುನಃ(ಆವೃತ್ತಿಯಾಗಿ) ಪದ್ಯದಲ್ಲಿಬಂದಿದ್ದರೆಅದುಛೇಕಾನುಪ್ರಾಸವೆನಿಸುವುದು.”
ಉದಾಹರಣೆಗೆ:-
ಸುತ್ತುಲುಂಪರಿವಪ್ರಚಾರದಿಂಪೂರದಿಂ|ದೊತ್ತಿರಿಸಿಬರ್ಪಬಲ್ದೆರೆಗಳಿಂನೊರೆಗಳಿಂ|ದೆತ್ತೆತ್ತಲೊಗೆವಸವ್ವಳೆಗಳಿಂಸುಳಿಗಳಿಂನಾನಾಪ್ರಕಾರದಿಂದೆ||ಒತ್ತಿಭೋರ್ಗರೆವರವದುರ್ಬಿನಿಂಪರ್ಬಿನಿಂ|ಹತ್ತೊಂದುಗೂಡಿವಿಸ್ತೀರ್ಣದಿಂಪೂರ್ಣದಿಂ|ತುತ್ತಿದುದುಸಕಲಲೋಕಂಗಳಂತಿಂಗಳಂಪೋತ್ತವಂಬೆರಗಾಗಲು|| (-ಚನ್ನಬಸವ ಪುರಾಣ)
ಇದು ಜಲಪ್ರಳಯವಾದ ಒಂದು ಸಂದರ್ಭದ ವರ್ಣನೆ. ಪಾರ್ವತಿಯು ಈಶ್ವರನ ಕಣ್ಣನ್ನು ಹಿಂದಿನಿಂದ ಬಂದು ಮುಚ್ಚಿದಳು. ಈಶ್ವರನ ಆನಂದಾಶ್ರುಗಳು ಪಾರ್ವತಿಯ ಬೊಗಸೆಯಲ್ಲಿ ತುಂಬಿದವು. ಆ ಆನಂದಾಶ್ರುಗಳು ಪಾರ್ವತಿಯ ಹತ್ತು ಬೆರಳುಗಳಿಂದ ಹತ್ತು ನದಿಗಳಾಗಿ ಹರಿದು ಜಗತ್ತನ್ನೆಲ್ಲ ಆ ನೀರು ಆವರಿಸಿ ಜಲ ಪ್ರಳಯವಾಯಿತೆಂದು ಹೇಳುವ ಒಂದು ಭವ್ಯವರ್ಣನೆಯಿದು. ಇಲ್ಲಿ ಎರಡೆರಡು ವ್ಯಂಜನಗಳ ಆವೃತ್ತಿಯು ಹಲವಾರು ಕಡೆಗಳಲ್ಲಿ ಬಂದು ಪದ್ಯದ ಸೌಂದರ‍್ಯವನ್ನು ಹೆಚ್ಚಿಸಿವೆ. ಆದ್ದರಿಂದ ಇದು ಛೇಕಾನುಪ್ರಾಸ.
(ಆ) ಯಮಕಾಲಂಕಾರ :
ಮೂರುಅಥವಾಅದಕ್ಕಿಂತಹೆಚ್ಚಿನಅಕ್ಷರಗಳುಳ್ಳಪದವೋ, ಪದಭಾಗವೋಒಂದುಪದ್ಯದಆದಿ, ಮಧ್ಯ, ಅಂತ್ಯಸ್ಥಾನಗಳಲ್ಲಿಎಲ್ಲಿಯಾದರೂನಿಯತವಾಗಿಬಂದಿದ್ದರೆಅದುಯಮಕಾಲಂಕಾರವೆನಿಸುವುದು. ಉದಾ:-
ಬರಹೇಳ್ನಿಕುಂಭನಂಶುಂಭನಂಜಂಭನಂ|ಬರಹೇಳ್ಸಶಬಲನಂ, ಪ್ರಬಲನಂ, ಸುಬಲನಂ|ಬರಹೇಳ್ಪ್ರವೀರನಂ, ಘೋರನಂ, ಶೂರನಂ, ಬರಹೇಳ್ಮಹಾನಾಭನಂ||ಬರಹೇಳ್ನಿಶುಂಭನಂಕುಂಭನಂಲಂಬನಂ|ಬರಹೇಳ್ಸುವಿಪುಳನಂಚಪಳನಂಕಪಿಳನಂ|ಬರಹೇಳ್ಮುಹುಂಡನಂಮುಂಡನಂಹುಂಡಮುಖ್ಯರನೆನುತ್ತುರಿದೆದ್ದನು|| (-ಚೆನ್ನಬಸವಪುರಾಣ)
ಅಂಧಕಾಸುರನು ಶಿವನ ಮೇಲೆ ಯದ್ಧಕ್ಕೆ ಹೊರಟಾಗಿನ ಸಂದರ್ಭದ ಒಂದು ಪದ್ಯವಿದು. ಇಲ್ಲಿ ಆರೂ ಸಾಲುಗಳ ಆದಿಯಲ್ಲಿ ಬರಹೇಳ್ ಎಂಬ ನಾಲ್ಕು ವ್ಯಂಜನಗಳ ಶಬ್ದವೊಂದು ಕ್ರಮವಾಗಿ ಬರುವುದು. ಆದ್ದರಿಂದ ಇದು ಯಮಕಾಲಂಕಾರ ವಾಯಿತು. (ಯಮಕಾಲಂಕಾರಗಳಲ್ಲಿ ಹೀಗೆ ಒಂದೇ ಶಬ್ದ ಒಂದು ಗೊತ್ತಾದ ಕಡೆ ಬಂದಿದ್ದರೂ ಒಂದೊಂದು ಕಡೆಯಲ್ಲಿ ಒಂದೊಂದರ್ಥವಾಗುವಂತಹ ರೀತಿಯಲ್ಲೂ ಇರುವುದುಂಟು. ಪ್ರಕೃತ ಅಂಥ ಪದ್ಯದ ವಿವರಣೆ ಅನವಶ್ಯಕ.)
[1] ಏಕದ್ವಿಪ್ರಭೃತೀನಾಂತು ವ್ಯಂಜನಾನಾಂ ಯದಾ ಭವೇತ್ ಪುನರುಕ್ತಿರಸೌ ನಾಮ ವೃತ್ಯನುಪ್ರಾಸ ಇಷ್ಯತೇ. ಅರ್ಥ:- ಒಂದಕ್ಕರಮಾದೊಡಂ ಎರಡಕ್ಕರಮಾದೊಡಂ ಪಲವುಂ ವೇಳೆಯೊಳ್ ಬಳಸಿ ಬರುತ್ತಿರೆಯದು ವೃತ್ತ್ಯನುಪ್ರಾಸವೆನಿಪ್ಪುದು. (-ಅಪ್ರತಿಮವೀರ ಚರಿತೆ) [2] ಭವೇದವ್ಯವಧಾನೇನ ದ್ವಯೋರ್ವ್ಯಂಜನ ಯುಗ್ಮಯೋಃ | ಆವೃತ್ತಿರ‍್ಯತ್ರ ಸ ಬುಧೈಃ ಛೇಕಾನುಪ್ರಾಸ ಇಷ್ಯತೇ || ಅರ್ಥ:- ಒಂದು ಪದ್ಯದೊಳ್ ಎರಡೆರಡುಂ ಅಕ್ಕರಂ ಜತೆಜತೆಯಾಗಿ ಪಲವುಂ ಬಳಿಯೊಳ್ ಬರೆ, ಅದು ಛೇಕಾನುಪ್ರಾಸವೆನಿಪುದು. (-ಅಪ್ರತಿಮವೀರ ಚರಿತೆ) [3] ಯಮಕಂ ಪೌನರುಕ್ತೇತು ಸ್ವರವ್ಯಂಜನ ಯುಗ್ಮಯೋಃ ಅರ್ಥ:- ಸ್ವರಭೇದಮಿಲ್ಲದೆ, ಪಲವುಮಕ್ಕರಂಗಳ್, ಎರಡುಂ ಪಾದದೊಳಾದೊಡಂ, ಮಿತಿಯಾದ ತಾಣದೊಳ್ ಬಳಸಿಬರೆ ಅದು ಯಮಕಮೆನಿಪುದು. (-ಅಪ್ರತಿಮವೀರ ಚರಿತೆ) (ಈ ಅಲಂಕಾರವನ್ನು ಹೆಚ್ಚಿನ ತಿಳಿವಳಿಕೆಗಾಗಿ ಮಾತ್ರ ಕೊಟ್ಟಿದೆ. ಹೈಸ್ಕೂಲುಗಳಲ್ಲಿ ಓದುವ ಮಕ್ಕಳಿಗೆ ಛೇಕಾನುಪ್ರಾಸ ತಿಳಿದರೆ ಸಾಕು.)FAQ :
ಅಲಂಕಾರಿಕ ಮಾತುಗಳು ಅರ್ಥ ಚಮತ್ಕಾರಗಳನ್ನು ಒಳಗೊಂಡಿದ್ದರೆ, ಅವುಗಳಿಗೆ ‘ಅರ್ಥಾಲಂಕಾರ’ಗಳೆನ್ನುವರು.
ಎರಡೆರಡು ವ್ಯಂಜನಗಳಿಂದ ಕೂಡಿದ ಶಬ್ದವು ಪುನಃಪುನಃ(ಆವೃತ್ತಿಯಾಗಿ) ಪದ್ಯದಲ್ಲಿ ಬಂದಿದ್ದರೆ ಅದು ಛೇಕಾನುಪ್ರಾಸವೆನಿಸುವುದು.
ಶಬ್ದ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರವೆನ್ನುವರು.
Kannada Grammar Books ; Click Here
ಇತರೆ ವಿಷಯಗಳು :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಅಲಂಕಾರ-ಶಬ್ದಾಲಂಕಾರಗಳ ಬಗ್ಗೆ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಅಲಂಕಾರ-ಶಬ್ದಾಲಂಕಾರಗಳ ಬಗ್ಗೆ ಮಾಹಿತಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.