ಸಣ್ಣ ಸಂಗತಿ ಪದ್ಯದ ಸಾರಾಂಶ ಹಾಗು ನೋಟ್ಸ್ । Sanna Sangati 8th Kannada Poem

Sanna Sangati 8th kannada Poem ಸಣ್ಣ ಸಂಗತಿ ಪದ್ಯದ ಸಾರಾಂಶ ಹಾಗು ನೋಟ್ಸ್

sana sangati padya, 8th standard kannada 2nd poem question answer, Sanna Sangati padya saramsha Kannada, sana sangati question answer kannada, sana sangati poem, kseeb solutions for class 8 kannada poem 2, sanna sangathi poem saramsha, sanna sangathi poem notes in kannada

ಸಣ್ಣ ಸಂಗತಿ ಪದ್ಯ ಭಾಗದ ಸಾರಾಂಶ, ಸಣ್ಣ ಸಂಗತಿ ಪದ್ಯದ ನೋಟ್ಸ್

ಪದ್ಯ ಭಾಗ

ಪದ್ಯ ಭಾಗ೨. ಸಣ್ಣ ಸಂಗತಿ – – ಕೆ.ಎಸ್. ನರಸಿಂಹಸ್ವಾಮಿ

ಕೃತಿಕಾರರ ಪರಿಚಯ

Sanna Sangati Kavi Parichay

ಕೃತಿಕಾರರ ಪರಿಚಯ

ಆಧುನಿಕ ಕಾವ್ಯ ಸಂದರ್ಭದ ಪ್ರಮುಖ ಕವಿಗಳಲ್ಲಿ
ಒಬ್ಬರಾದ ಕೆ.ಎಸ್. ನರಸಿಂಹಸ್ವಾಮಿ ಅವರು 26/01/1915
ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ  ತಾಲೂಕಿನ ಕಿಕ್ಕೇರಿಯಲ್ಲಿ
ಜನಿಸಿದರು. ಇವರ ಮೊದಲ ಕವನ ಸಂಕಲನ ಮೈಸೂರು
ಮಲ್ಲಿಗೆ ೧೯೪೩ರಲ್ಲಿ ಪ್ರಕಟವಾಯಿತು. ಇವರು ಶಿಲಾಲತೆ,
ಐರಾವತ, ನವಪಲ್ಲವ , ಇರುವಂತಿಗೆ, ದೀಪದ ಮಲ್ಲಿ, ಮನೆಯಿಂದ
ಮನೆಗೆ, ತೆರೆದ ಬಾಗಿಲು ಮೊದಲಾದ ಕವನ ಸಂಕಲನಗಳನ್ನು
ರಚಿಸಿದ್ದಾರೆ. 1977ರಲ್ಲಿ ಇವರ ತೆರೆದೆ ಬಾಗಿಲು ಎಂಬ ಕವನ
ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದುಂಡು ಮಲ್ಲಿಗೆ
ಕವನ ಸಂಕಲನಕ್ಕೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪಪ್ರಶಸ್ತಿ
ಲಭಿಸಿದೆ. ಇವರನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರೇಮಕವಿ
ಎಂದೇ ಗುರುತಿಸಿದೆ. 2004ರಲ್ಲಿ ದೈವಾಧೀನರಾದರು.

ಆಶಯ ಭಾವ 

ಸಣ್ಣ ಸಂಗತಿ ಕವನದಲ್ಲಿ ಕವಿ ತಾಯ ಪಕ್ಕದಲ್ಲಿ ಮಲಗಿರುವ ಮಗು ನಟ್ಟಿರುಳು ತನ್ನ ಹೊದಿಕೆಯನ್ನು ಕಿತ್ತೆಸೆದಾಗ,
ಮತ್ತೆ ಮತ್ತೆ ತಾಯಿಯ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುವ ಸಣ್ಣ ಸಂಗತಿಯೊಂದನ್ನು  ಪ್ರಕೃತಿಯ ನೀರು
ತುಂಬಿರುವ ಕರಿಮುಗಿಲು, ಆಕಾಶಕ್ಕೆ ಹುಣ್ಣಿಮೆಯ ಕಣ್ಣುತೆರದ, ಬಾನ ಬೀದಿಗೆ ತಾರೆ  ಬಂದಿವೆ, ಸೋನೆಯ ಶ್ರುತಿಗೆ
ಗಾಳಿಯೇ ಹಾಡುವ-ಮೊದಲಾದ ಪ್ರಾಕೃತಿಕ ಚೌಕಟ್ಟಿನೊಳಗಿನ ದೊಡ್ಡ ಘಟನೆಗಳೂಂದಿಗೆ ಹೋಲಿಸಿ ವರ್ಣಿಸಲಾಗಿದೆ.
ಈ ಸಣ್ಣಸಂಗತಿ ವಾಸ್ತವವಾಗಿ ಸದಾಕಾಲ ಕಾಪಾಡುವ ಕರುಣೆಯೊಂದರ ಸಂಕೇತವಾಗಿದೆ. ಹಗಲಿರುಳೆನ್ನದೆ ಸದಾ
ತನ್ನ ಮಗುವಿನ ಆರೈಕೆಯಲ್ಲಿ ತನ್ನ ತಾಯ್ತನದ ಸಾರ್ಥಕ್ಯ ಪಡೆಯುವ ತಾಯಿಯ ಹೃದಯದ ತುಡಿತ-ಮಿಡಿತಗಳ
ಗಹನವಾದ ತತ್ವದ ಸಂಕೇತವಾಗಿದೆ. ಹೆಣ್ಣಿನ ಜನ್ಮ ಸಾರ್ಥಕ್ಯವನ್ನು ಪಡೆಯುವುದು ಹಾಗೂ ಜೀವನ
ಪರಿಪೂರ್ಣಗೊಳ್ಳುವುದು ಆಕೆಯ ತಾಯ್ತನದಲ್ಲಿ. ಆ ಮಗುವಿನ ಆರೈಕೆ – ಪೋಷಣೆ, ಲಾಲನೆ – ಪಾಲನೆಗಳಲ್ಲಿಯೇ
ತನ್ನೆಲ್ಲ ಸುಖ ಸಂತೋಷಗಳನ್ನು ಕಾಣುತ್ತಾಳೆ. ಹಾಗೂ ತನ್ನ ನೋವು ಸಂಕಟಗಳನ್ನು ಮರೆಯುತ್ತಾಳೆ. ಹಗಲಿರುಳೆನ್ನದೆ
ತನ್ನ ಮಗುವಿನ ಸಂರಕ್ಷಣೆಯನ್ನು ಮಾಡುವ ತಾಯಿ ಹೃದಯದ ಮಿಡಿತವನ್ನು ಪ್ರಕೃತಿಯ ಸನ್ನಿವೇಶಗಳಿಗೆ
ಹೋಲಿಸಿರುವುದು ಸಹೃದಯರ ಮನದಲ್ಲಿ ಸದಾ ನಿಲ್ಲುತ್ತದೆ. ಪ್ರಕೃತ ‘ಸಣ್ಣ ಸಂಗತಿ’ ಈ ಕವನವನ್ನು ಕೆ.ಎಸ್.
ನರಸಿಂಹಸ್ವಾಮಿ ಅವರ ‘ಇರುವಂತಿಗೆ’ ಕವನಸಂಗ್ರಹದಿಂದ  ಆಯ್ಕೆ ಮಾಡಿಕೊಳ್ಳಲಾಗಿದೆ .

ಪದಗಳ ಅರ್ಥ

ಕರಿಮುಗಿಲು – ಕಪ್ಪಾದ ಮೋಡ;           ತಾರೆ – ನಕ್ಷತ್ರ;
ದೆಸೆ – ದಿಕ್ಕು;                                     ನಟ್ಟಿರುಳು – ನಡು ಇರುಳು,
ಸೋನೆ – ತುಂತುರು ಮಳೆ, ಜಿಡಿಮಳೆ;

sanna sangati 8th kannada poem question answer

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1. ಹುಣ್ಣಿಮೆಯ ಕಣ್ಣು ಎಲ್ಲಿ ತೆರೆದಿದೆ?
ಉತ್ತರ : ಮಧ್ಯ ರಾತ್ರಿಯಲ್ಲಿ ಕಪ್ಪು ಮೋಡಗಳ ನಡುವೆ ಹುಣಮೇಯ  ಕಣ್ಣು ತೆರೆದಿದೆ.

2. ಪುಟ್ಟ ಮಗುವು ತೊಟ್ಟಿಲಲ್ಲಿ ಹೇಗೆ ಮಲಗಿದೆ?
ಉತ್ತರ : ಪುಟ್ಟ ಮಗುವು ತೊಟ್ಟಿಲಲ್ಲಿ ನಿದ್ದೆಗಳಲ್ಲಿ, ಅರ್ಧಕಣ್ಣು ಮುಚ್ಚಿ ಹೊದಿಕೆಯನ್ನು ಒದ್ದು ಬರಿಮೈಲಿ
ಮಲಗಿದೆ.

3. ಮೂಲೆಯಲ್ಲಿ ಇರುವುದೇನು?
ಉತ್ತರ : ಮೂಲೆಯಲ್ಲಿ ಸಣ್ಣಗಿನ ದೀಪವಿದೆ.

4. ನಿದ್ದೆ ಎಚ್ಚರಗಳಲ್ಲಿ ಯಾವ ಕೈ ದುಡಿಯುತಿದೆ?
ಉತ್ತರ : ನಿದ್ದೆ ಎಚ್ಚರಗಳಲ್ಲಿ ಮಗುವನ್ನು ರಕ್ಷಿಸುವ/ತಾಯಿಯ ಕೈ ದುಡಿಯುತಿದೆ.

5. ಯಾವುದನ್ನು ಲೆಕ್ಕಿಸದೆ ಮಗು ಹೊದಿಕೆಯನ್ನು ಒದೆಯುತಿದೆ?
ಉತ್ತರ : ಪೊರೆವ ಕೈಯನ್ನು ಲೆಕ್ಕಿಸದೆ ಮಗು ಹೊದಿಕೆಯನ್ನು ಒದೆಯುತ್ತಿದೆ.

ಆ. ಕೊಟ್ಟಿರುವ  ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ  ಉತ್ತರಿಸಿ.

1. ತಾಯಿ ತನ್ನ ಮಗುವಿನ ಆರೈಕೆಯನ್ನು ಹೇಗೆ ಮಾಡುತ್ತಾಳೆ ವಿವರಿಸಿ.
ಉತ್ತರ : ತಾಯಿ ತನ್ನ ಮಗುವಿನ ಆರೈಕೆ – ಪೋಷಣೆ ಲಾಲನೆ-ಪಾಲನೆ ಮಾಡುತ್ತಾಳೆ, ನಿದ್ದೆಯಲ್ಲಿಯೂ
ಸಹ ಅವಳ ರಕ್ಷಿಸುವ ಕೈ ಮಗುವಿನ ಮೇಲೆಯೇ ಇರುತ್ತದೆ. ನಿದ್ದೆಯಲ್ಲಿಯೂ  ಆಕೆಗೆ ತನ್ನ ಮಗುವಿನ ಬಗ್ಗೆ
ಚಿಂತೆ, ನಿದ್ರೆಯಲ್ಲಿ ಹೊದಿಕೆಯನೆ ಹೊದ್ದು ಬರಿ ಮೈಲಿ ಮಲಗಿದಾಗಲೂ ಆಕೆ ಮಗುವಿಗೆ ಹೊದಿಕೆಯನ್ನು
ಹೊದಿಸುತ್ತಾಳೆ. ತಾಯಿಯ ಹೃದಯ ಸದಾಕಾಲ ತನ್ನ ಮಗುವಿಗಾಗಿ ಮಿಡಿಯುತ್ತಲೇ ಇರುತ್ತದೆ.

2. ಕವಿ ಯಾವ ಸಣ್ಣ ಸಂಗತಿಯನ್ನು ಈ ಕವನದಲ್ಲಿ  ವಿವರಿಸಿದ್ದಾರೆ?
ಉತ್ತರ : ಸಣ್ಣ ಸಂಗತಿ ಕವನದಲ್ಲಿ ಕವಿ ತಾಯ ಪಕ್ಕದಲ್ಲಿ ಮಲಗಿರುವ ಮಗು ನಟ್ಟಿರುಳು ತನ್ನ
ಹೊದಿಕೆಯನ್ನು ಕಿತ್ತೆಸೆದಾಗ, ಮತ್ತೆ ಮತ್ತೆ ತಾಯಿಯ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುವ ಸಣ್ಣ
ಸಂಗತಿಯೊಂದನ್ನು  ಪ್ರಕೃತಿಯ ನೀರು ತುಂಬಿರುವ ಕರಿಮುಗಿಲು, ಆಕಾಶಕ್ಕೆ ಹುಣ್ಣಿಮೆಯ ಕಣ್ಣುತೆರದ, ಬಾನ
ಬೀದಿಗೆ ತಾರೆ ಬಂದಿವೆ, ಸೋನೆಯ ಶ್ರುತಿಗೆ ಗಾಳಿಯೇ ಹಾಡುವ-ಮೊದಲಾದ ಪ್ರಾಕೃತಿಕ ಚೌಕಟ್ಟಿನೊಳಗಿನ
ದೊಡ್ಡ ಘಟನೆಗಳೊಂದಿಗೆ ಹೋಲಿಸಿ ಈ ಕವನದಲ್ಲಿ ವಿವರಿಸಲಾಗಿದೆ.

3. ಈ ಕವನದಲ್ಲಿ ಕವಿ ನೀಡಿರುವ ಪ್ರಾಕೃತಿಕ ಘಟನೆಗಳನ್ನು ತಿಳಿಸಿ.
ಉತ್ತರ : ಹಗಲಿರುಳೆನ್ನದೆ ತನ್ನ ಮಗುವಿನ ಸಂರಕ್ಷಣೆಯನ್ನು ಮಾಡುವ ತಾಯಿ ಹೃದಯದ ಮಿಡಿತವನ್ನು
ಪ್ರಕೃತಿಯ ಸನ್ನಿವೇಶಗಳಿಗೆ ಹೋಲಿಸಿರುವುದು ಸಹೃದಯರ  ಮನದಲ್ಲಿ ಸದಾ ನಿಲ್ಲುತ್ತದೆ. ಮಳೆ ಸುರಿಸಲು
ಸಿದ್ಧವಿರುವ ಕಪ್ಪು ಮೋಡಗಳ ನಡುವೆ ಹುಣ್ಣಿಮೆಯ ಚಂದ್ರ ಇಣುಕುವುದನ್ನು ತಾರೆಗಳು ಕೂಡ ನೋಡಿ
ಆನಂದಿಸುತ್ತಿವೆ. ಆಗಾಗ ಬೀಸುವ ತಂಗಾಳಿಗೆ ಸೋನೆ ಮಳೆಯ ಶೃತಿ ಸೇರಿಸಿ ಪ್ರಕೃತಿಯ ಸೊಬಗನ್ನು
ಮತ್ತಷು  ಹೆಚ್ಚಿಸಿದೆ ಎಂದು ಕವಿ ತಮ್ಮ ಸಣ್ಣ ಸಂಗತಿ ಕವನದಲ್ಲಿ ಪ್ರಾಕೃತಿಕ ಘಟನೆಗಳನ್ನು ತಿಳಿಸಿದ್ದಾರೆ.

ಇ. ಈ ಹೇಳಿಕೆಗಳನ್ನು ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ

1. “ತಾರೆ ಬಂದಿವೆ ಬಾನ ಬೀದಿಗೆ.”
ಆಯ್ಕೆ : ಈ ವಾಕ್ಯವನ್ನು ಕೆ.ಎಸ್. ನರಸಿಂಹಸ್ವಾಮಿ ಅವರು ಬರೆದಿರುವ ‘ಇರುವಂತಿಗೆ’ ಕವನಸಂಗ್ರಹದಿಂದ 
ಆಯ್ದ ‘ಸಣ್ಣ ಸಂಗತಿ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕಪ್ಪು ಮೋಡಗಳು ಮಳೆ ಸುರಿಸಲು ಸಿದ್ಧವಿರುವಾಗ ಹುಣ್ಣಿಮೆಯ ಚಂದ್ರ ಕರಿ ಮೋಡಗಳ
ನಡುವೆ ಇಣುಕುತ್ತಿರುವುದನ್ನು, ತಾರೆಗಳು ಕೂಡ ಆಕಾಶವೆಂಬ ನಡುವೆ ಇಣುಕುತ್ತಿರುವುದನ್ನು ವರ್ಣಿಸಿದ
ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಪ್ರಕೃತಿಯಲ್ಲಿನ ಸಣ್ಣ ಸಂಗತಿ ಎಷ್ಟೊಂದು ವಿಶಿಷ್ಟ, ಬಾನಿನಲ್ಲಿ ತಾರೆಗಳು ಕಾಣಿಸುವುದು ಸಣ್ಣ
ಸಂಗತಿ ಎನಿಸಿದರೂ ಪ್ರಕೃತಿಯ ಸುಂದರ ಚಿತ್ರಣವನ್ನು ಸ್ವರಸ್ಯಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.

2. “ತಾಯಿ ಕೈನೀಡಿ ಮತ್ತೆ ಹೊದಿಕೆಯನು ಸರಿಪಡಿಸುವಳು.”
ಆಯ್ಕೆ : ಈ ವಾಕ್ಯವನ್ನು ಕೆ.ಎಸ್. ನರಸಿಂಹಸ್ವಾಮಿ ಅವರು ಬರೆದಿರುವ ‘ಇರುವಂತಿಗೆ’ ಕವನಸಂಗ್ರಹದಿAದ
ಆಯ್ದ ‘ಸಣ್ಣ ಸಂಗತಿ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಮಗು ನಿದ್ದೆಯಲ್ಲಿ ಅದರಲ್ಲಿಯೂ ರಾತ್ರಿಯಲ್ಲಿ ಅರ್ಧಕಣ್ಣು ಬಿಟ್ಟು ನೋಡುತ್ತಾ ಮೈ ಮೇಲಿನ
ಹೊದಿಕೆಯನ್ನು ತಳ್ಳಿ ಹಾಕಿ ಬರಿಮೈಲಿ ಮಲಗಿರಲು ತಾಯಿ ಪುನಃ ಅದಕ್ಕೆ ಹೊದಿಕೆಯನ್ನು ಹೊದಿಸುತ್ತಾ
ಚಳಿಯಿಂದ ಆ ಮಗುವನ್ನು ರಕ್ಷಿಸುತ್ತಾಳೆ ಎಂದು ಕವಿ ವರ್ಣಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಸದಾಕಾಲ ಮಗುವಿನ ಲಾಲನೆ-ಪಾಲನೆಯಲ್ಲಿ ತನ್ನನ್ನು ತಾನು ಮರೆತು ನಿದ್ದೆ ಎಚ್ಚರದಲ್ಲಿ ತಾಯಿ
ಜೀವ ದುಡಿಯುತ್ತಿರುತ್ತದೆ ಎಂಬುದು ಸ್ವಾರಸ್ಯಕರವಾಗಿದೆ.

3. “ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ.”
ಆಯ್ಕೆ : ಈ ವಾಕ್ಯವನ್ನು ಕೆ.ಎಸ್. ನರಸಿಂಹಸ್ವಾಮಿ ಅವರು ಬರೆದಿರುವ ‘ಇರುವಂತಿಗೆ’ ಕವನಸಂಗ್ರಹದಿAದ
ಆಯ್ದ ‘ಸಣ್ಣ ಸಂಗತಿ’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ತಾಯಿಯ ದುಡಿಯುವ ಕೈಗಳು ಎಷ್ಟೇ ಕಾರ್ಯಗಳಲ್ಲಿ ಮಗ್ನವಾಗಿದ್ದರೂ ತನ್ನ ಕಂದನ
ಸದಾಕಾಲ ಯೋಚಿಸುತ್ತಿರುತ್ತಾಳೆ. ಎಂಬುದನ್ನು ಕವಿ ವಿವರಿಸುವ ಸಂದರ್ಭದಲ್ಲಿ ಈ ಸಾಲನ್ನುಹೇಳಿದ್ದಾರೆ.
ಸ್ವಾರಸ್ಯ : ತಾಯಿಗೆ ತನ್ನ ಮಗುವಿನ ಬಗ್ಗೆ ಇರುವ ಮಮತೆ, ವಾತ್ಸಲ್ಯಗಳು ಸ್ವಾರಸ್ಯಕರವಾಗಿ ಮೂಡಿ
ಬಂದಿª

ಈ. ಕೊಟ್ಟಿರುವ ಪ್ರಶ್ನೆಗೆ ಏಳೆಂಟು ವಾಕ್ಯಗಳಲ್ಲಿ ಉತ್ತರಿಸಿ

1. ಕವಿ ಯಾವ ಸಣ್ಣ ಸಂಗತಿಯೊAದನ್ನು ಪ್ರಕೃತಿಯ ಘಟನೆಗಳೊಂದಿಗೆ ಹೋಲಿಕೆ ಮಾಡಿದ್ದಾರೆಂಬುದನ್ನು ನಿಮ್ಮ
ಮಾತುಗಳಲ್ಲಿ ಬರೆಯಿರಿ.
ಉತ್ತರ : ಸಣ್ಣ ಸಂಗತಿ ಕವನದಲ್ಲಿ ಕವಿ ತಾಯ ಪಕ್ಕದಲ್ಲಿ ಮಲಗಿರುವ ಮಗು ನಟ್ಟಿರುಳು ತನ್ನ
ಹೊದಿಕೆಯನ್ನು ಕಿತ್ತೆಸೆದಾಗ, ಮತ್ತೆ ಮತ್ತೆ ತಾಯಿಯ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುವ ಸಣ್ಣ
ಸಂಗತಿಯೊಂದನ್ನು  ಪ್ರಕೃತಿಯ ನೀರು ತುಂಬಿರುವ ಕರಿಮುಗಿಲು, ಆಕಾಶಕ್ಕೆ ಹುಣ್ಣಿಮೆಯ ಕಣ್ಣುತೆರದ, ಬಾನ
ಬೀದಿಗೆ ತಾರೆ ಬಂದಿವೆ, ಸೋನೆಯ ಶ್ರುತಿಗೆ ಗಾಳಿಯೇ ಹಾಡುವ-ಮೊದಲಾದ ಪ್ರಾಕೃತಿಕ ಚೌಕಟ್ಟಿನೊಳಗಿನ
ದೊಡ್ಡ ಘಟನೆಗಳೂಂದಿಗೆ ಹೋಲಿಸಿ ವರ್ಣಿಸಲಾಗಿದೆ. ಈ ಸಣ್ಣಸಂಗತಿ ವಾಸ್ತವವಾಗಿ ಸದಾಕಾಲ ಕಾಪಾಡುವ
ಕರುಣೆಯೊಂದರ ಸಂಕೇತವಾಗಿದೆ. ಹಗಲಿರುಳೆನ್ನದೆ ಸದಾ ತನ್ನ ಮಗುವಿನ ಆರೈಕೆಯಲ್ಲಿ ತನ್ನ ತಾಯ್ತನದ
ಸಾರ್ಥಕ್ಯ ಪಡೆಯುವ ತಾಯಿಯ ಹೃದಯದ ತುಡಿತ-ಮಿಡಿತಗಳ ಗಹನವಾದ ತತ್ವದ ಸಂಕೇತವಾಗಿದೆ.
ಹೆಣ್ಣಿನ ಜನ್ಮ ಸಾರ್ಥಕ್ಯವನ್ನು ಪಡೆಯುವುದು ಹಾಗೂ ಜೀವನ ಪರಿಪೂರ್ಣಗೊಳ್ಳುವುದು ಆಕೆಯ
ತಾಯ್ತನದಲ್ಲಿ. ಆ ಮಗುವಿನ ಆರೈಕೆ – ಪೋಷಣೆ, ಲಾಲನೆ – ಪಾಲನೆಗಳಲ್ಲಿಯೇ ತನ್ನೆಲ್ಲ ಸುಖ
ಸಂತೋಷಗಳನ್ನು ಕಾಣುತ್ತಾಳೆ. ಹಾಗೂ ತನ್ನ ನೋವು ಸಂಕಟಗಳನ್ನು ಮರೆಯುತ್ತಾಳೆ. ಹಗಲಿರುಳೆನ್ನದೆ ತನ್ನ
ಮಗುವಿನ ಸಂರಕ್ಷಣೆಯನ್ನು ಮಾಡುವ ತಾಯಿ ಹೃದಯದ ಮಿಡಿತವನ್ನು ಪ್ರಕೃತಿಯ ಸನ್ನಿವೇಶಗಳಿಗೆ
ಹೋಲಿಸಿರುವುದು ಸಹೃದಯರ ಮನದಲ್ಲಿ ಸದಾ ನಿಲ್ಲುತ್ತದೆ

ಪಠ್ಯಾಧಾರಿತ ಚಟುವಟಿಕೆ

ಅ. ಕೊಟ್ಟಿರುವ ಪದ್ಯಭಾಗವನ್ನು ಕಂಠಪಾಠ ಮಾಡಿ

1. ಪುಟ್ಟ ಮಗುವೊಂದು ___ ___ ___ ___ ಮಗು ತಿರುಗಿ. (ನಾಲ್ಕು ಸಾಲು)

ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲಿ

ಕಣ್ಣರ್ಧ ಮುಚ್ಚಿ ಮಲಗಿದೆ, ಅದೂ ಬರಿಮೈಲಿ !

ನಿದ್ದೆಗಣ್ಣಿನಲೆ ಪಕ್ಕದ ತಾಯಿ ಕೈ ನೀಡಿ

ಮತ್ತೆ ಹೊದಿಕೆಯನು ಸರಿಪಡಿಸುವಳು. ಮಗು ತಿರುಗಿ

ಅಭ್ಯಾಸ ಚಟುವಟಿಕೆ

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

1. ಛಂದಸ್ಸು ಎಂದರೇನು?
ಉತ್ತರ : ಪದ್ಯಗಳನ್ನು ರಚಿಸುವಾಗ ನಿರ್ದಿಷ್ಟ ನಿಯಮಗಳನ್ನು ಅನುಸರಿಸಲಾಗುವುದು. ಅದೇ ಛಂದಸ್ಸು.
ಪದ್ಯವನ್ನು ರಚಿಸಲು ಬೇಕಾದ ನಿರ್ದಿಷ್ಟ ಪಾದಗಳ ಬಗ್ಗೆ ಮತ್ತು ಪ್ರತಿ ಪಾದದಲ್ಲಿ ಇರಬೇಕಾದ ಪ್ರಾಸ, ಯತಿ,
ಗಣಗಳ ಬಗ್ಗೆ ತಿಳಿಸುವ ಶಾಸ್ತ್ರವೇ  ಛಂದಸ್ಸು.

2. ಪ್ರಾಸ ಎಂದರೇನು? ಅದರ ವಿಧಗಳಾವುವು?
ಉತ್ತರ : ಪದ್ಯದ ಪ್ರತಿಯೊಂದು ಪಾದದ ಎರಡನೆಯ ಅಕ್ಷರದಲ್ಲಿ ಅಥವಾ ಪ್ರತಿಸಾಲಿನ ಕೊನೆಯ ಅಕ್ಷರದಲ್ಲಿ 
ಒಂದೇ ಜಾತಿಯ ವ್ಯಂಜನವಿದ್ದರೆ ಅದೇ ಪ್ರಾಸ.
ಪ್ರತಿಸಾಲಿನ ಎರಡನೆಯ ಅಕ್ಷರ ಪ್ರಾಸವಾಗಿದ್ದರೆ ಆದಿಪ್ರಾಸ.
ಅಂತ್ಯದಲ್ಲಿ ಬರುವ ಪ್ರಾಸವನ್ನು ಅಂತ್ಯಪ್ರಾಸ.
ಮಧ್ಯದಲ್ಲಿ ಬರುವ ಪ್ರಾಸವನ್ನು ಒಳಪ್ರಾಸ ಅಥವಾ ಮಧ್ಯಪ್ರಾಸ ಎಂತಲೂ ಕರೆಯುವರು.

3. ಗಣ ಎಂದರೇನು? ವಿವರಿಸಿ.
ಉತ್ತರ : ಗಣ ಎಂದರೆ ಗುಂಪು ಎಂದರ್ಥ. ಪದ್ಯದ ಪ್ರತಿಸಾಲಿನ ಅಕ್ಷರ ಅಥವಾ ಮಾತ್ರೆ ಅಥವಾ ಅಂಶಗಳ
ಗುಂಪೇ  ಗಣ.
ಮಾತ್ರೆಗಳ ಲೆಕ್ಕಾಚಾರದಿಂದ ಗುಂಪು ಮಾಡಿದರೆ ಮಾತ್ರಾಗಣ.
ಅಕ್ಷರಗಳ ಲೆಕ್ಕಾಚಾರದಿಂದ ಗುಂಪು ಮಾಡಿದರೆ ಅಕ್ಷರಗಣ .
ಅಂಶಗಳ ಆಧಾರದ ಮೇಲೆ ಗಣ ವಿಭಾಗ ಮಾಡಿದರೆ ಅಂಶಗಣ.

ಇತರ ವಿಷಯಗಳು

Books Pdf Download Notes App ಹಿಂದಕ್ಕೆ

Leave a Reply

Your email address will not be published. Required fields are marked *