rtgh

9th Kannada Moulvi Lesson Questions and Answers Notes | ಕನ್ನಡ ಮೌಲ್ವಿ ಪಾಠದ ಪ್ರಶ್ನೆ ಉತ್ತರಗಳು

9th Kannada Moulvi Lesson Questions and Answers Notes | ೯ನೇ ತರಗತಿ ಕನ್ನಡ ಪಠ್ಯಪುಸ್ತಕ  ಮೌಲ್ವಿ ಪಾಠದ ಪ್ರಶ್ನೆ ಉತ್ತರಗಳು

ಕನ್ನಡ ಮೌಲ್ವಿ ಪಾಠ 9ನೇ ತರಗತಿ, ಕೋಷನ್ ಆನ್ಸರ್ , ಕನ್ನಡ ಮೌಲ್ವಿ ಪಾಠದ ಸಾರಾಂಶ, ಕನ್ನಡ ಮೌಲ್ವಿ notes Pdf
9th class kannada moulvi lesson questions and answers pdf, moulvi textbook pdf, 9 th moulvi notes ,kannada moulvi pata full lesson pdf summary 9th standard kannada moulvi pata

ಇದರಲ್ಲಿ 9ನೇ ತರಗತಿ ಪ್ರಥಮ ಭಾಷೆ ಕನ್ನಡದ ಗದ್ಯಪಾಠದ ಮಾನ್ವಿ ಪಾಠದ ಸಾರಾಂಶ ಪ್ರಶ್ನೆ ಉತ್ತರಗಳು ನೋಟ್ಸನ್ನು ನೀವು  ಇಲ್ಲಿಂದ ಕಲಿಯಬಹುದು ಹಾಗೂ ನೀವು ಮೊಬೈಲ್ ಅಥವಾ ಕಂಪ್ಯೂಟರ್ನಿಂದ  ಇಲ್ಲಿ ಕೊಟ್ಟಿರುವ ಎಲ್ಲಾ ಪಾಠದ ಪ್ರಶ್ನೆ ಉತ್ತರಗಳನ್ನು ತಿಳಿದುಕೊಳ್ಳಬಹುದು.

ಗದ್ಯ ಭಾಗ

೧. ಕನ್ನಡ ಮೌಲ್ವಿ        – ಗೊರೂರು ರಾಮಸ್ವಾಮಿ ಅಯ್ಯಂಗಾರ್

ಕೃತಿಕಾರರ ಪರಿಚಯ

 ಕನ್ನಡದ ಪ್ರಸಿದ್ಧ ಲೇಖಕರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಹ ಒಬ್ಬರು . ಕ್ರಿ.ಶ. 1904 ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದರು . ಕನ್ನಡದ ನವೋದಯ

ಗದ್ಯದ ಪ್ರಮುಖ ಲೇಖಕರಾದ ಇವರು ರ್ಸಣ್ಣಕತೆ , ಪ್ರಬಂಧ , ಪ್ರವಾಸಕಥನ , ಕಾದಂಬರಿ ,  ಜೀವನಚರಿತ್ರೆ ಮುಂತಾದ ಸಾಹಿತ್ಯದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ,

ಗರುಡಗಂಬದ ದಾಸಯ್ಯ , ಮೆರವಣಿಗೆ , ಹೇಮಾವತಿ ತೀರದಲ್ಲಿ , ಪುನರ್ಜನ್ಯ , ನಮ್ಮ ಊರಿನ ರಸಿಕರು ಇವರ ಪ್ರಮುಖ ಕೃತಿಗಳು , ‘ ಅಮೆರಿಕದಲ್ಲಿ ಗೊರೂರು ‘ ಕೃತಿ ಪ್ರವಾಸಕಥನವಾಗಿದ್ದು , ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಗೌರವ ಡಿ ಲಿಟ್ ಪದವಿ ಲಭಿಸಿದೆ .

 ಪ್ರಕೃತ ಪಾಠವನ್ನು ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾಸಂಕಲನದಿಂದ ಆರಿಸಿ ಸಂಗ್ರಹಿಸಲಾಗಿದೆ .

kannada moulvi

ಆಶಯ ಭಾವ

ಬಹುಸಂಸ್ಕೃತಿಯ , ಸರ್ವಧರ್ಮ ಸಮನ್ವಯದ ಈ ನಾಡಿನಲ್ಲಿ ಹಿಂದೂ – ಮುಸ್ಲಿಂ ಐಕ್ಯ ಸಾರುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ , ಈ “ ಕನ್ನಡ ಮೌಲ್ವಿ ‘ ಪಾಠದಲ್ಲಿ ಮೌಲ್ವಿಯೊಬ್ಬರು ‘ ಕುರಾನ್ “ ಧರ್ಮಗ್ರಂಥದೊಡನೆ ಕುಮಾರವ್ಯಾಸ ಭಾರತ , ರಾಮಾಯಣ , ಭಗವದ್ಗೀತೆ ಗ್ರಂಥಗಳನ್ನು ಓದಿ ಗೌರವ ಕೊಡುತ್ತಾರೆ .

ಎಲ್ಲ ಧರ್ಮಗ್ರಂಥಗಳು ಮನುಷ್ಯ ಒಳ್ಳೆಯವನಾಗಿರಬೇಕು ಎಂಬ ಉದಾತ್ತ ತತ್ತ್ವವನ್ನು ಸಾರುತ್ತವೆ ಎಂಬುದನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜೊತೆ ಮಾತನಾಡುತ್ತಾ ತಿಳಿಸುತ್ತಾರೆ . ಆಗ ಗೊರೂರರಿಗೆ ಇವರು ಕೇವಲ ಮುಸಲ್ಮಾನ ಮೌಲ್ವಿಯಲ್ಲಿ ‘ ಕನ್ನಡದ ಮೌಲಿ’ಯೂ ಆಗಿದ್ದಾರೆ ಎಂಬ ಅಭಿಪ್ರಾಯ ಮೂಡಿತು .

ಗೊರೂರರು ಮತ್ತು ಮೌಲ್ವಿಗಳು ಪ್ರೀತಿಯಿಂದ ಅಪ್ಪಿಕೊಂಡು ಹಿಂದೂ – ಮುಸ್ಲಿಂರ ಪರಸ್ಪರ ಪ್ರೀತಿ , ಸಹಕಾರ , ಸಹಬಾಳ್ವೆಯ ದ್ಯೋತಕವಾಗುತ್ತಾರೆ . ಈ ಮೌಲ್ಯ ವೃದ್ಧಿಯ ಹಂಬಲವೇ ಈ ಕಥೆಯ ಆಶಯ ಭಾವವಾಗಿದೆ.

ಗದ್ಯದ ಸಾರಾಂಶ

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಪ್ರಯಾಣ ಮಾಡುತ್ತಿದ್ದ ಬಸ್ಸಿಗೆ ಒಬ್ಬ ಮುಸಲ್ಮಾನ ಹತ್ತಿದರು . ಈತನ ವಯಸ್ಸು ಸುಮಾರು 55-58 ಇರಬಹುದು , ಆಜಾನುಬಾಹುವಾಗಿ ಪಷ್ಟವಾಗಿ ಬೆಳೆದಿದ್ದ ಎತ್ತರದ ಕೆಂಪನೆಯ ಆಳು , ಮುಖದಲ್ಲಿ ಸಹ ಒಳ್ಳೆಯ ಕಳೆ ಇತ್ತು .

ಕಣ್ಣಿನ ದೃಷ್ಟಿ ತೀಕ್ಷ್ಯವಾಗಿತ್ತು . ಗಡ್ಡ ಪೂರ್ಣವಾಗಿ ಬೆಳ್ಳಗಾಗಿ ಶುದ್ಧಿಯಾಗಿ ಹತ್ತಿಯಂತೆ ಇತ್ತು . ಮಡಿ – ಮಡಿ ಇಸ್ತ್ರಿ ಮಾಡಿದ್ದ ಬಿಳಿಯ ಶರಾಯಿ ( ಕೋಟು ) ಇವುಗಳಿಂದ ಆತನನ್ನು ನೋಡುವವರಿಗೆ ಇವನೊಬ್ಬ ಮರ್ಯಾದಸ್ತ ಸಧೃಹಸ್ಥ ಎಂಬ ಭಾವನೆ ಉಂಟಾಗುತ್ತಿತ್ತು .

ಮತ್ತಷ್ಟು ಹೆಚ್ಚಾಗಿ ಅವನ ಕಡೆಗೆ ಆಕರ್ಷಿಸಿದ್ದು ಆ ಗೃಹಸ್ಥನ ಕೈಲಿದ್ದ ಒಂದು ದೊಡ್ಡ ಪುಸ್ತಕ . ಅದು ಕುಮಾರವ್ಯಾಸ ಭಾರತ , ಈ ಮುಸಲ್ಮಾನ ವ್ಯಕ್ತಿಯ ಕೈಯಲ್ಲಿದ್ದ ಕನ್ನಡ ಪುಸ್ತಕವನ್ನು ನೋಡಿದ ಲೇಖಕರಿಗೆ ಅವರ ಬಾಲ್ಯ ಜೀವನದ ಘಟನೆಗಳು ನೆನಪಿಗೆ ಬಂದವು .

ಅವರ ಹಳ್ಳಿಯಲ್ಲಿಯೇ ಒಬ್ಬ ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಅತ್ಯುತ್ಕೃಷ್ಟವಾಗಿ ಅಭಿನಯಿಸುತ್ತಿದ್ದನು . ರಂಗಸ್ಥಳದಲ್ಲಿ ಬಂದು ನಂತರ ಅವನ ವೇಷವನ್ನು , ವಾಕ್ ಶುದ್ಧಿಯನ್ನು ನೋಡಿ ವೈದಿಕ ಮನೆತನದ ವೃದ್ಧ ಸ್ತ್ರೀಯರೂ ಸಹ ಮೈ ಮರೆತು “ ಕೃಷ್ಣ ಪರಮಾತ್ಮ ಶಾಪಾಡಪ್ಪ ” ಎಂದು ಕೈ ಮುಗಿದು ಬಿಡುತ್ತಿದ್ದರು .

ಆನಂತರ ಲೇಖಕರು “ ಕೃಷ್ಣ ಪರಮಾತ್ಮನಲ್ಲಿ ಬಂದ ಇವ ಹೊಸಕೇರಿಯ ಹುಸೇನ್ ಸಾಬಿ ” ಎಂದರೂ ಸಹ ಆ ವೃದ್ಧೆಯರು “ ಹುಸೇನ್ ಸಾಬಿಯಂತೆ ಹುಸೇನ್ ಸಾಬಿ . ನಾವು ಕೈ ಮುಗಿದಿರುವುದು ತಲುಪುವುದು ಶ್ರೀ ಕೃಷ್ಣನಿಗೆ , ಇವನು ಯಾರಾದರೇನು ? ” ಎನ್ನುತ್ತಿದ್ದರು .

ಕೊನೆಗೆ ಆ ಸಾಹೇಬನಿಗೆ “ ಹುಸೇನ್ ಕೃಷ್ಣ ” ಎಂದೇ ಹೆಸರಾಗಿತ್ತು . ಲೇಖಕರು ಮುಸಲ್ಮಾನ ವ್ಯಕ್ತಿಯ ಕೈಯಲ್ಲಿದ್ದ ಕುಮಾರವ್ಯಾಸ ಪುಸ್ತಕವನ್ನು ನೋಡಿ ಅವರ ಬಗ್ಗೆ ಗೌರವ ಉಂಟಾಯಿತು . ಕುಳಿತಿದ್ದ ಉಳಿದ ಎಲ್ಲರಿಗಿಂತ ಹೆಚ್ಚು ಪ್ರಿಯರಾಗಿ ತೋರಿದರು .

ಇವರನ್ನು ಹೇಗಾದರೂ ಮಾಡಿ ಮಾತನಾಡಿಸಲೇಬೇಕು ಎಂದು

“ ನಿಮಗೆ ಕನ್ನಡ ಬರುತ್ತದೆಯೇ ? ” ಎಂದು ಕೇಳಿದರು .

ಇದಕ್ಕೆ ಆತ “ ಹೌದು , ನಾನು ಕನ್ನಡ ಕಲಿತದ್ದು ಮೂರನೇ ತರಗತಿವರೆಗೆ , ಆದರೆ  ಮಾದರಿ ಪಾಠ ಅದರಿಂದಲೇ ಮೂವತ್ತು ವರ್ಷ ನಿಭಾಯಿಸಿಬಿಟ್ಟೆ ,

ನೆನ್ನೆ ನನಗೆ ನಿವೃತ್ತಿ ಆಯಿತು ” ಎಂದರು . ಲೇಖಕರು “ ಯಾವ ಕೆಲಸದಿಂದ ನಿವೃತ್ತರಾದಿರಿ ” ಎಂದು ಕೇಳಿದರು .

ಆತ “ ಪ್ರೈಮರಿ ಶಾಲಾ ಉಪಾಧ್ಯಾಯ ವೃತ್ತಿಯಿಂದ ” ಎಂದರು . ಮತ್ತೆ ಲೇಖಕರು “ ಹಾಗಾದರೆ ನಿಮಗೆ ಉರ್ದು ಬರುವುದಿಲ್ಲವೇ ? ಎಂದಾಗ ಮುಸಲ್ಮಾನ ವ್ಯಕ್ತಿಯು “ ಕಲಿತಿದ್ದು ಉರ್ದು , ಕಲಿಸಿದ್ದು ಕನ್ನಡ ” ಎಂದರು .

ಕನ್ನಡ ಮೌಲ್ವಿಯವರ ಊರಿನಲ್ಲಿ ಉರ್ದು ಶಾಲೆ ಇರಲಿಲ್ಲ . ಅವರ ತಂದೆಯವರಿಗೂ ಉರ್ದು ಓದಲೂ ಬರೆಯಲೂ ಬರುತ್ತಿರಲಿಲ್ಲ . ಆರು ಮೈಲಿ ದೂರದ ಹಳ್ಳಿಯಲ್ಲಿ ಒಂದು ಉರ್ದು ಶಾಲೆಯಲ್ಲಿ ಇತ್ತು

ಇಲ್ಲಿಯ ಉಪಾಧ್ಯಾಯರು ವಾರದಲ್ಲಿ ಎರಡು ದಿನ ಕನ್ನಡ ಮೌಲ್ವಿಯವರ ಮನೆಗೆ ಬಂದು ಉರ್ದು ಕಲಿಸುತ್ತಿದ್ದರು . ಉಪಾಧ್ಯಾಯರು ಬುದ್ಧಿವಂತರು . ಮೌಲ್ವಿಯವರು ಉರ್ದುವನ್ನು ಬೇಗ ಬೇಗ ಕಲಿತರು .

ಲೇಖಕರು “ ಭಾರತದ ಕಥೆ ನಿಮಗೆ ಪೂರ್ತಿ ಒಪ್ಪುತ್ತದೆಯೇ ? ನಿಮ್ಮ ಧರ್ಮ ನಂಬಿಕೆಗೆ ವಿರೋಧವಾದುದು ಅದರಲ್ಲಿ ಏನೂ ಇಲ್ಲವೇ ? ” ಎಂದು ಕೇಳಿದರು ಸಾಹೇಬರು “ ಇದು ಧರ್ಮದ ಕಥೆ , ಎಲ್ಲ ಮತಗಳನ್ನೂ ವ್ಯಾಸಂಗ   ಮಾಡಬೇಕು .

ಎಲ್ಲ ಮತಗಳೂ ಇರಬೇಕು . ಇಲ್ಲದಿದ್ದರೆ ಜಗತ್ತು ರಸಹೀನವಾಗುತ್ತದೆ . ಉದ್ಯಾನದಲ್ಲಿ ನಾನಾ ಬಗೆಯ ಹೂಗಳಿರಬೇಕು . ಒಂದೇ ಬಗೆಯ ಹೊ ಎಲ್ಲೆಲ್ಲಿಯೂ ಇದ್ದರೆ ಸ್ವಾರಸ್ಯವಿಲ್ಲ .

ಎಲ್ಲ ಮತಗಳಲ್ಲಿಯೂ ಉದಾತ್ತ ತತ್ತ್ವಗಳಿವೆ , ನಾನು ಮಹಾಭಾರತ , ರಾಮಾಯಣ , ಭಗವದ್ಗೀತೆ , ಕುರಾನ್ ಎಲ್ಲವನ್ನೂ ಓದಿದ್ದೇನೆ . ಎಲ್ಲ ಹೇಳುವುದು ಒಂದೇ ಮನುಷ್ಯ ಒಳ್ಳೆಯವನಾಗಿರಬೇಕು ಎಂದು ” ಎಂದರು

,ನೀವು ಕನ್ನಡ ಪಾಠ ಚೆನ್ನಾಗಿ ಮಾಡುತ್ತೀರಾ ಎಂದು ಲೇಖಕರು ಕೇಳಿದಾಗ ಸಾಹೇಬರು ತೃಪ್ತಿಯಿಂದಲೇ “ ನನ್ನ ಸಮಾನ ಪಾಠ ಮಾಡುವವರು ಯಾರೂ ಇಲ್ಲವೆಂದು ಪ್ರಶಸ್ತಿಯನ್ನು ಎಲ್ಲರಿಂದಲೂ ಪಡೆದಿದ್ದೇನೆ .

ಪ್ರೈಮರಿ ಶಿಕ್ಷಕರ ಸಮ್ಮೇಳನದಲ್ಲಿ ಒಂದು ಮಾಡಲು ಕೊಟ್ಟರು . ಹುಡುಗರು ಎಷ್ಟು ಆಸಕ್ತಿಯಿಂದ ಕೇಳುತ್ತಿದ್ದರೋ ಉಪಾಧ್ಯಾಯರು ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದರು ” ಎಂದು ಹೇಳಿದರು .

ಅಷ್ಟೆ ಅಲ್ಲದೇ ಕನ್ನಡ ಭಾಷಣವನ್ನು ಸಹ ಚನ್ನಾಗಿ ಮಾಡುತ್ತೇನೆ ಎಂದರು . ಮತ್ತೆ ಲೇಖಕರು ಕನ್ನಡ ಪುಸ್ತಕಗಳನ್ನು ಓದಿದ್ದಿರ ? ಎಂದು ಕೇಳಿದಾಗ ಸಾಹೇಬರು “ ಹೌದು ಓದಿದ್ದೇನೆ .

ಡಿವಿಜಿ ಅವರ ಉಮರನ ಒಸಗೆ ಪೂರ್ತಿ ಬಾಯಿಗೆ ಬರುವಂತೆ ಓದಿದ್ದೇನೆ . ತುಂಬಾ ಒಳ್ಳೆಯ ಪುಸ್ತಕ ” ಎಂದು ಹೇಳಿ ಸ್ವಲ್ಪ ಮೌನವಾಗಿದ್ದು ಲೇಖಕರಿಗೆ ನಿಮ್ಮ ಊರು ಯಾವುದು ? ‘ ಎಂದು ಕೇಳಿದರು ಇದಕ್ಕೆ ಲೇಖಕರು “ ಹಾಸನದ ಹತ್ತಿರದ ಒಂದು ಹಳ್ಳಿ ” ಎಂದರು . ಸಾಹೇಬರು “ ನಾನು ಹಾಸನಕ್ಕೆ ಹೋಗಿದ್ದೇನೆ , ಯಾವ ಹಳ್ಳಿ ? ” ಎಂದರು .

ಲೇಖಕರು “ ಗೊರೂರು ” ಎಂದರು . “ ನಾನೂ ಗೊರೂರಿಗೂ ಹೋಗಿದ್ದೇನೆ . ಆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇದ್ದರಲ್ಲ . ಅವರು ತುಂಬಾ ಚೆನ್ನಾಗಿ ಕಥೆಗಳನ್ನು ಬರೆಯುತ್ತಾರೆ .

ಎಂದಾಗ ಲೇಖಕರು “ ಗೊರೂರಿಗೆ ಹೋಗಿದ್ದಾಗ ಅವರನ್ನು ಸಂಧಿಸಿದ್ದೀರಾ ? ” ಎಂದು ಕೇಳಿದರು ಸಾಹೇಬರು “ ಇಲ್ಲಿ ಆ ವೇಳೆಗೆ ನಾನು ಅವರ ಪುಸ್ತಕಗಳನ್ನು ನೋಡಿರಲಿಲ್ಲ .

ಈಚೆಗೆ ಓದಿದೆ , ನೋಡಬೇಕಾದ ಮನುಷ್ಯರು ” ಎಂದರು . ಲೇಖಕರು “ ಅವರು ನಿಮ್ಮೆದುರಿನಲ್ಲಿ ಈಗ ಬಂದರೆ ಏನು ಮಾಡುತ್ತೀರಿ ? ” ಎಂದು ಕೇಳಿದರು . ಸಾಹೇಬರು “ ಮಾಡುವುದೇನು ? ಅತ್ಯಂತ ಸಂತೋಷದಿಂದ ಆಲಿಂಗನ ಮಾಡಿಕೊಳ್ಳುತ್ತೇನೆ ” ಎಂದರು . ಆಗ ಲೇಖಕರು “ ನಾನೇ ಆ ಪ್ರಾಣಿ * ಎಂದರು .

ಲೇಖಕರು ಮತ್ತು ಸಾಹೇಬರು ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡರು . ಈ ದಿನ ಸುದಿನ ಎಂದು ಲೇಖಕರು ಭಾವಿಸಿದರು , ಲೇಖಕರಿಗೆ ಆ ಸಾಹೇಬರು ಅನೇಕ ಶತಮಾನಗಳಿಂದ ಜನ್ಮ ಜನ್ಮಗಳಲ್ಲಿ ಮಿತ್ರರಾಗಿದ್ದರು ಎಂದು ಭಾಸವಾಯಿತು . ಸಾಹೇಬರು ಮುಂದಿನ ಬಸ್ ನಿಲ್ದಾಣದಲ್ಲಿ ಇಳಿದು ಹೊರಟು ಹೋದರು .

ಪದಗಳ ಅರ್ಥ

ಅನಿರ್ವಚನೀಯ :: ಮಾತಲ್ಲಿ ವರ್ಣಿಸಲು ಸಾಧ್ಯವಾಗದ ;

ಉದಾತ್ತ:: ಉನ್ನತ ;

ಮೌಲ್ವಿ::  ಮುಸ್ಲಿಂ ಗುರು

ರಸಹೀನ :: ಸತ್ವಹೀನ

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ .

I ಮಲ್ಲಿ ಹಿಡಿದಿದ್ದ ಕನ್ನಡದ ಪುಸ್ತಕ ಯಾವುದು ?

ಉತ್ತರ : ಮೌಲ್ವಿ ಹಿಡಿದಿದ್ದ ಕನ್ನಡದ ಪುಸಕ್ತಕುಮಾರವ್ಯಾಸ ಭಾರತ ‘ 

 2. ಯಕ್ಷಗಾನದ ಪಾತ್ರಧಾರಿ ಸಾಹೇಬನು ಏನೆಂದು ಹೆಸರಾಗಿದ್ದನು ?

ಉತ್ತರ : ಯಕ್ಷಗಾನದ ಪಾತ್ರಧಾರಿ ಸಾಹೇಬನುಹುಸೇನ್ ಕೃಷ್ಣ ಎಂದು ಹೆಸರಾಗಿದ್ದನು .

3 , ಕನ್ನಡ ಮೌಲ್ವಿಯ ವೃತ್ತಿ ಯಾವುದು ?

ಉತ್ತರ : ಕನ್ನಡ ಮೌಲ್ವಿಯ ವೃತ್ತಿಪ್ರೈಮರಿ ಶಾಲಾ ಉಪಾಧ್ಯಾಯ ವೃತ್ತಿ “ .

4 , ಡಿ.ವಿ.ಜಿ.ಯವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತಿತ್ತು ?

ಉತ್ತರ : ಡಿ.ವಿ.ಜಿ.ಯವರ ಉಮರನ ಒಸಗೆ ”  ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತಿತ್ತು .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ ,

1 , ಕನ್ನಡ ಮೌಲ್ವಿಯ ವೇಷಭೂಷಣ ಹೇಗಿತ್ತು ?

ಉತ್ತರ : ಲೇಖಕರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಒಬ್ಬ ಮುಸಲ್ಮಾನ ಹತ್ತಿದನು . ಈತನ ವಯಸ್ಸು ಸುಮಾರು  – 58 ಇರಬಹುದು . ಆಜಾನುಬಾಹುವಾಗಿ ಮುಷ್ಟವಾಗಿ ಬೆಳೆದಿದ್ದ ಎತ್ತರದ ಕೆಂಪನೆಯ ಆಳು , ಮುಖದಲ್ಲಿ ಸಹ ಒಳ್ಳೆಯ ಕಳೆ ಇತ್ತು .

ದೃಷ್ಟಿ ತೀಕ್ಷ್ಯವಾಗಿತ್ತು . ಗಡ್ಡ ಪೂರ್ಣವಾಗಿ ಬೆಳಗ್ಗಾಗಿ ಶುದ್ಧಿ ಮಾಡಿದ ಹತ್ತಿಯ ತುಪ್ಪಳದಂತೆ ತೋರುತ್ತಿತ್ತು . ವಿಶಾಲವಾದ ಹಣೆ , ಗಂಭೀರವಾದ ಮುಖ , ಮಡಿ – ಮಡಿ ಆಸ್ತಿ ಮಾಡಿದ್ದ ಬಿಳಿಯ ಶರಾಯಿ ( ಕೋಟು ) ಇವುಗಳಿಂದ ಆತನನ್ನು ನೋಡುವವರಿಗೆ ಇವನೊಬ್ಬ ಮರ್ಯಾದಸ್ತ ಸದ್ಮಹಸ್ಥ ಎಂಬ ಭಾವನೆ ಉಂಟಾಗುತ್ತಿತ್ತು .

ಈ ರೀತಿ ಕನ್ನಡ ಮೌಲ್ವಿಯ ವೇಷಭೂಷಣ ಇತ್ತು .

2 ಮೌಲ್ವಿಯ ವಿದ್ಯಾಭ್ಯಾಸ ಹೇಗಾಯಿತು ?

ಉತ್ತರ : ಮೌಲ್ವಿಯವರು ಕನ್ನಡ ಕಲಿತದ್ದು ಮೂರನೇ ತರಗತಿಯವರೆಗೆ ಕಲಿಸಿದ್ದು ಮೂವತ್ತು ವರ್ಷದವರೆಗೆ ಮೌಲ್ವಿಯವರ ಊರಿನಲ್ಲಿ ಉರ್ದು ಶಾಲೆ ಇರಲಿಲ್ಲ . ಅವರ ತಂದೆಯವರೆಗೂ ಉರ್ದು ಓದಲೂ ಬರೆಯಲೂ ಬರುತ್ತಿರಲಿಲ್ಲ .

ಆರು ಮೈಲಿ ದೂರದ ಹಳ್ಳಿಯಲ್ಲಿ ಒಂದು ಉರ್ದು ಶಾಲೆ ಇತ್ತು . ಅಲ್ಲಿಯ ಉಪಾಧ್ಯಾಯರು ವಾರದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನ ಮನೆಗೆ ಬಂದು ಮೌಲ್ವಿಯವರಿಗೆ ಉರ್ದು ಪಾಠವನ್ನು ಹೇಳಿಕೊಡುತ್ತಿದ್ದರು . ಮೌಲ್ವಿಯವರು ಉರ್ದುವನ್ನು ಬೇಗ ಕಲಿತರು .

3 ಹುಸೇನ್ ಕೃಷ್ಣನ ಅಭಿನಯದ ಬಗ್ಗೆ ತಿಳಿಸಿ .

ಉತ್ತರ : ಗೊರೂರು ಬಾಲ್ಯದಲ್ಲಿದ್ದಾಗ ಅವರ ಹಳ್ಳಿಯಲ್ಲಿ ಒಬ್ಬ ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಅತ್ಯುತ್ಕೃಷ್ಟವಾಗಿ ಅಭಿನಯಿಸುತ್ತಿದ್ದನು .

ರಂಗಸ್ಥಳದಲ್ಲಿ ಬಂದು ನಂತರ ಅವನ ವೇಷವನ್ನು , ವಾಕ್ ಶುದ್ಧಿಯನ್ನು ನೋಡಿ ವೈದಿಕ ಮನೆತನದ ವೃದ್ಧ ಸ್ತ್ರೀಯರೂ ಸಹ ಮೈ ಮರೆತು “ ಕೃಷ್ಣ ಪರಮಾತ್ಮ ಕಾಪಾಡಪ್ಪ ” ಎಂದು ಕೈ ಮುಗಿದು ಬಿಡುತ್ತಿದ್ದರು .

ಅಷ್ಟು ಚೆನ್ನಾಗಿ ಹುಸೇನ್‌ನ ಅಭಿನಯ ಇರುತ್ತಿತ್ತು . ಆನಂತರ ಗೊರೂರರು “ ಕೃಷ್ಣ ಪರಮಾತ್ಮನಲ್ಲಿ ಬಂದ ಇವನು ಹೊಸಕೇರಿಯ ಹುಸೇನ್ ಸಾಬಿ ” ಎಂದರು ಆರಿನ ಜನರು ನಂಬುತ್ತಿರಲಿಲ್ಲ , ಹೀಗೆ ಹುಸೇನ್ ಕೃಷ್ಣನ ಅಭಿನಯ ಇತ್ತು ..

ಇ ) ಕೊಟ್ಟಿರುವ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ

1) ಗೊರೂರು ಹಾಗೂ ಮೌಲ್ವಿಯ ನಡುವೆ ನಡೆದ ಸಂಭಾಷಣೆಯನ್ನು ಸಂಕ್ಷೇಪಿಸಿ ಬರೆಯಿರಿ ,

ಉತ್ತರ : ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಒಬ್ಬ ಮುಸಲ್ಮಾನ ವ್ಯಕ್ತಿ ಒಬ್ಬರು ಹತ್ತಿದರು . ಅವರ ಕೈಯಲ್ಲಿ ಕುಮಾರವ್ಯಾಸ ಭಾರತ ಪುಸ್ತಕ ಇರುವುದನ್ನು ನೋಡಿದ ಲೇಖಕರಿಗೆ ಕುತೂಹಲ ಮೂಡುತ್ತದೆ .

ಸಾಹೇಬರ ಬಳಿ ಬಂದು ಹೇಗಾದರೂ ಮಾಡಿ ಅವರನ್ನು ಮಾತನಾಡಿಸಬೇಕೆಂದು “ ನಿಮಗೆ ಕನ್ನಡ ಬರುತ್ತದೆಯೇ ? ಎಂದು ಕೇಳಿದರು . ಅವರು “ ನಾನು ಕನ್ನಡ ಕಲಿತದ್ದು ಮೂರನೇ ತರಗತಿಯವರೆಗೆ , ಆದರೆ ಅದರಿಂದಲೇ ನಾನು ಮೂವತ್ತು ವರ್ಷ ನಿಭಾಯಿಸಿಬಿಟ್ಟೆ ನಿನ್ನೆ ನನಗೆ ನಿವೃತ್ತಿ ಆಯಿತು , ” ಎಂದರು

ಲೇಖಕರು ” ಯಾವ ಕೆಲಸದಿಂದ ನಿವೃತ್ತರಾದಿರಿ ” ಎಂದು ಕೇಳಿದರು . ಆತ “ ಪ್ರೇಮರಿ ಶಾಲಾ ಉಪಾಧ್ಯಾಯ ವೃತ್ತಿಯಿಂದ ” ಎಂದರು . “ ನಾನು ಕಲಿತದ್ದು ಉರ್ದು , ಕಲಿಸಿದ್ದು ಕನ್ನಡ ” ಎಂದರು .

ಲೇಖಕರು ಅವರನ್ನು ನಿಮಗೆ ಭಾರತದ ಕಥೆ ಪೂರ್ತಿ ಒಪ್ಪುತ್ತದೆಯೇ ? ಎಂದು ಕೇಳಿದಾಗ ಸಾಹೇಬರು ಭಾರತದ ಕಥೆ ಧರ್ಮದ ಕಥೆ . ಎಲ್ಲ ಮತಗಳನ್ನು ವ್ಯಾಸಂಗ ಮಾಡಬೇಕು ,

ಲೇಖಕರು ಸಾಹೇಬರನ್ನು ಕನ್ನಡ ಪಾಠವನ್ನು ಚೆನ್ನಾಗಿ ಮಾಡುತ್ತಿರಾ ಎಂದಾಗ ಸಾಹೇಬರು ನನ್ನ ಸಮಾನ ಪಾಠಮಾಡುವವರು ಯಾರು ಇಲ್ಲ ಎಂದು ಪ್ರಶಸ್ತಿಯನ್ನು ಎಲ್ಲರಿಂದಲೂ ಪಡೆದಿದ್ದೇನೆ ಎಂದರು .

ಲೇಖಕರು ಕನ್ನಡ ಪುಸ್ತಕವನ್ನು ಓದುವುದರ ಬಗ್ಗೆ ಕೇಳಿದಾಗ ಸಾಹೇಬರು ಮಲಗುವ ಮುಂಚೆ ಎರಡು ಗಂಟೆಯಾದರೂ ಓದಬೇಕು , ಡಿ.ವಿ.ಜಿ ಯವರ ಉಮರನ ಒಸಗೆ ಪೂರ್ತಿ ಬಾಯಿಗೆ ಬರುತ್ತದೆ .

ತುಂಬಾ ಚನ್ನಾಗಿ ಬರೆದಿದ್ದಾರೆ ನಂತರ “ ನಿಮ್ಮ ಊರು ಯಾವುದು ? ” ಎಂದು ಕೇಳಿದರು , “ ಹಾಸನದ ಹತ್ತಿರದ ಒಂದು ಹಳ್ಳಿ ” ಎಂದೆ . ಸಾಹೇಬರು “ ನಾನು ಹಾಸನಕ್ಕೆ ಹೋಗಿದ್ದೇನೆ , ಯಾವ ಹಳ್ಳಿ ? ” ಎಂದರು .

ಆಗ ಲೇಖಕರು “ ಗೊರೂರು ” ಎಂದರು “ ನಾನೂ ಗೊರೂರಿಗೂ ಹೋಗಿದ್ದೇನೆ . ಆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇದ್ದಾರಲ್ಲ ಅವರು ತುಂಬಾ ಚೆನ್ನಾಗಿ ಕತೆ ಬರೆಯುತ್ತಾರೆ ” ಎಂದರು . ಗೊರೂರರು “ ಗೊರೂರಿಗೆ ಹೋಗಿದ್ದಾಗ ಅವರನ್ನು ಸಂಧಿಸಿದ್ದೀರಾ ? ” ಎಂದರು . ಸಾಹೇಬರು “ ಇಲ್ಲ ಆ  ವೇಳೆಗೆ ನಾನು ಅವರ ಪುಸ್ತಕಗಳನ್ನು ನೋಡಿರಲಿಲ್ಲ .

ಈಚೆಗೆ ಓದಿದೆ . ನೋಡಬೇಕಾದ ಮನುಷ್ಯರು ” ಎಂದರು . ಲೇಖಕರು “ ಅವರು ನಿಮ್ಮೆದುರಿನಲ್ಲಿ ಈಗ ಬಂದರೆ ಏನು ಮಾಡುತ್ತೀರಿ ? ” ಎಂದು ಕೇಳಿದೆ . ಸಾಹೇಬರು “ ಮಾಡುವುದೇನು ? ಅತ್ಯಂತ ಸಂತೋಷದಿಂದ ಆಲಿಂಗನ ಮಾಡಿಕೊಳ್ಳುತ್ತೇನೆ ” ಎಂದರು .

ಲೇಖಕರು ‘ ನಾನೇ ಆ ಪ್ರಾಣಿ ” ಎಂದಾಗ ಸಾಹೇಬರು ಆಲಂಗಿಸಿಕೊಂಡರು , ಲೇಖಕರಿಗೆ ಸಾಹೇಬರು ಜನ್ಮ ಜನ್ಮಗಳಲ್ಲಿ ಮಿತ್ರರಾಗಿದ್ದವರು ಎಂಬ ಭಾವನೆ ಉಂಟಾಯಿತು .

Kannada Moulvi Lesson 9th class Notes

ಈ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ .

1)  “ ನಿಮಗೆ ಕನ್ನಡ ಬರುತ್ತದೆಯೇ ?

  ಆಯ್ಕೆ : ಈ ವಾಕ್ಯವನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದಿರುವ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾಸಂಕಲನದಿಂದ ಆಯ್ದ ‘ ಕನ್ನಡ ಮೌಲ್ವಿ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .

 ಸಂದರ್ಭ : ಲೇಖಕರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಮುಸಲ್ಮಾನ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದರು . ಅವರ ಕೈಯಲ್ಲಿ ಕುಮಾರ ವ್ಯಾಸ ಭಾರತ ಪುಸ್ತಕ ಇರುವುದನ್ನು ನೋಡಿ ಕುತೂಹಲದಿಂದ ಅವರನ್ನು ಮಾತನಾಡಿಸಲೇಬೇಕು ಎಂದು ಅವರ ಬಳಿ ಬಂದು ಮಾತನಾಡುವ ಸಂದರ್ಭದಲ್ಲಿ ಈ ರೀತಿ ಪ್ರಶ್ನಿಸಿದ್ದಾರೆ ,

    ಸ್ವಾರಸ್ಯ : ಮುಸಲ್ಮಾನ ವ್ಯಕ್ತಿಯ ಕೈಯಲ್ಲಿ ಕುಮಾರವ್ಯಾಸ ಭಾರತ ಮಸ್ತಕ ಇರುವುದನ್ನು ನೋಡಿದ ಲೇಖಕರಿಗೆ ಕುತೂಹಲ , ಆಶ್ಚರ್ಯವಾಗುವುದು ಸ್ವಾರಸ್ಯಕರವಾಗಿದೆ

2) “ ನಾನು ಕಲಿತಿದ್ದು ಉರ್ದು , ಕಲಿಸಿದ್ದು ಕನ್ನಡ

           ಆಯ್ಕೆ : ಈ ವಾಕ್ಯವನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದಿರುವ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾಸಂಕಲನದಿಂದ ಆಯ್ದ ‘ ಕನ್ನಡ ಮೌಲ್ವಿ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ ,

 ಸಂದರ್ಭ : ಲೇಖಕರು ಕನ್ನಡ ಮೌಲ್ವಿಯವರಿಗೆ “ ನಿಮಗೆ ಕನ್ನಡ ಬರುತ್ತದೆಯೇ ? ಎಂದು ಪ್ರಶ್ನಿಸಿದಾಗ “ ನಾನು ಮೂರನೆ ತರಗತಿಯವರೆಗೆ ಮಾತ್ರ ಕನ್ನಡ ಕಲಿದಿದ್ದು , ಆದರೆ ಮೂವತ್ತು ವರ್ಷ ನಿಭಾಯಿಸಿಬಿಟ್ಟೆ ,

ನಿನ್ನೆ ಕನ್ನಡ ಉಪಾಧ್ಯಾಯ ವೃತ್ತಿಯಿಂದ ನಿವೃತ್ತಿ ಆಯಿತು ” ಎಂದರು . ಆಗ ಲೇಖಕರು ನಿಮಗೆ ಉರ್ದು ಬರುವುದಿಲ್ಲವೇ ? ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಮೌಲ್ವಿಯವರು ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : ಭಾಷೆ ಕಲಿಯುವುದಕ್ಕೆ ಯಾವುದೇ ಧರ್ಮ , ಜಾತಿ , ಪ್ರದೇಶ ಪಡಿಸಲಾರದು . ಮೌಲ್ವಿಯವರು ಕನ್ನಡ ಕಲಿತು , ಕಲಿಸಿರುವುದು ಸ್ವಾರಸ್ಯಕರವಾಗಿದೆ .

3) “ ನನ್ನ ಸಮಾನ ಪಾಠ ಮಾಡುವವರು ಯಾರೂ ಇಲ್ಲ

  ಆಯ್ಕೆ : ಈ ವಾಕ್ಯವನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದಿರುವ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾಸಂಕಲನದಿಂದ ಆಯ್ದ ‘ ಕನ್ನಡ ಮೌಲ್ವಿ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಮೌಲ್ವಿಯವರನ್ನು ಕನ್ನಡದ ಉಪಾಧ್ಯಾಯರಾಗಿ ನಿವೃತ್ತರಾಗಿರುವುದಾಗಿ ಹೇಳಿದಾಗ “ ನೀವು ಕನ್ನಡ ಪಾಠವನ್ನು ಚೆನ್ನಾಗಿ ಮಾಡುತ್ತೀರಾ ” ಎಂದು ಕೇಳಿದರು .

ಆಗ ಸಾಹೇಬರು ತೃಪ್ತಿಯಿಂದಲೇ “ ನನ್ನ ಸಮಾನ ಪಾಠ ಮಾಡುವವರು ಯಾರೂ ಇಲ್ಲವೆಂದು ಪ್ರಶಸ್ತಿಯನ್ನು ಎಲ್ಲರಿಂದಲ್ಲೂ ಪಡೆದಿದ್ದೇನೆ ” ಎಂದು ಹೇಳುವ ಸಂದರ್ಭದಲ್ಲಿ ಮೌಲ್ವಿಯವರು ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : ಕನ್ನಡ ಮೌಲ್ವಿಯವರಿಗೆ ಕನ್ನಡ ಭಾಷೆಯ ಮೇಲೆ ಇದ್ದ ಪ್ರಭುತ್ವ , ಪಾಂಡಿತ್ಯ ಆಸಕ್ತಿ ಆಂಶಗಳು ಸ್ವಾರಸ್ಯಕರವಾಗಿವೆ .

4) “ ಅವರು ನಿಮ್ಮೆದುರಿಗೆ ಬಂದರೆ ಏನು ಮಾಡುತ್ತೀ ? ”

ಆಯ್ಕೆ : ಈ ವಾಕ್ಯವನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದಿರುವ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾಸಂಕಲನದಿಂದ ಆಯ್ದ ‘ ಕನ್ನಡ ಮೌಲ್ವಿ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .

     ಸಂದರ್ಭ : ಲೇಖಕರು ‘ ನನ್ನ ಊರು ಗೊರೂರು ‘ ಎಂದಾಗ ಕನ್ನಡ ಮೌಲ್ವಿಯವರು “ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇದಾರಲ್ಲ ಅವರು ಬಹಳ ಚೆನ್ನಾಗಿ ಕಥೆಗಳನ್ನು ಬರೆಯುತ್ತಾರೆ ” ಎಂದರು ಲೇಖಕರು ಅವರನ್ನು ಸಂಧಿಸಿದ್ದೀರಾ ಎಂದಾಗ ಸಾಹೇಬರು ಇಲ್ಲ ಆ ಸಮಯದಲ್ಲಿ ತಾನು ಅವರ ಪುಸಕ್ತಗಳನ್ನು ಓದಿರಲಿಲ್ಲ ಎಂದರು .

ಈ ಸಂದರ್ಭದಲ್ಲಿ ಲೇಖಕರು ಈ ರೀತಿ ಪ್ರಶ್ನಿಸುತ್ತಾರೆ .

           ಸ್ವಾರಸ್ಯ : ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬಳಿ ಕನ್ನಡ ಮೌಲ್ವಿಯವರು ಅವರ ಬಗ್ಗೆಯೇ ವಿಚಾರಿಸುವ ತಮಾಷೆಯು ಸ್ವಾರಸ್ಯಕರವಾಗಿದೆ

5). “ ನಾನೇ ಆ ಪ್ರಾಣ “

  ಆಯ್ಕೆ : ಈ ವಾಕ್ಯವನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದಿರುವ ‘ ಕನ್ಯಾಕುಮಾರಿ ಮತ್ತು ಇತರ ಕಥೆಗಳು ‘ ಕಥಾಸಂಕಲನದಿಂದ ಆಯ್ದ ‘ ಕನ್ನಡ ಮೌಲ್ವಿ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಕನ್ನಡ ಮೌಲ್ವಿಯವರು ಲೇಖಕರಿಗೆ “ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇದಾರಲ್ಲ ಅವರು ಬಹಳ ಚೆನ್ನಾಗಿ ಕಥೆಗಳನ್ನು ಬರೆಯುತ್ತಾರೆ . ನೋಡುವಂತಹ ವ್ಯಕ್ತಿ ” ಎಂದು ಹೇಳುತ್ತಾರೆ .

ಗೊರೂರರು “ ಅವರು ನಿಮ್ಮೆದುರಿನಲ್ಲಿ ಬಂದರೆ ಏನು ಮಾಡುತ್ತೀರಿ ? ಎಂದರು . ಸಾಹೇಬರು “ ಮಾಡುವುದೇನು ? ಅತ್ಯಂತ ಸಂತೋಷದಿಂದ ಆಲಿಂಗನ ಮಾಡಿಕೊಳ್ಳುತ್ತೇನೆ ” ಎಂದರು . ಆ ಸಂದರ್ಭ ಲೇಖಕರು ಈ ಮಾತನ್ನು ಹೇಳುತ್ತಾರೆ

. ಸ್ವಾರಸ್ಯ : ಗೊರೂರು ಅಯ್ಯಂಗಾರ್ ಅವರು ದೊಡ್ಡ ಲೇಖಕರಾಗಿದ್ದರು ಸಹ ಸ್ವಲ್ಪವೂ ಬೇಜಾರು ಮಾಡಿಕೊಳ್ಳದೇ ತಮಾಷೆಯಾಗಿ ಮಾತನಾಡಿರುವುದು ಸ್ವಾರಸ್ಯಕರವಾಗಿದೆ

ಭಾಷಾ ಚಟುವಟಿಕೆ

1} ಆಗಮಸಂಧಿ ಎಂದರೇನು ? 

ಉತ್ತರ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾದಾಗ ಪೂರ್ವಪದದ ಕೊನೆಯ ಸ್ವರ ಹಾಗೂ ಉತ್ತರ ಪದದ ಮೊದಲ ಸ್ವರಗಳ ಮಧ್ಯದಲ್ಲಿ ‘ ಯ್ ‘ ಕಾರವನ್ನು ಅಥವಾ ‘ ವ ‘ ಕಾರವನ್ನು ಹೊಸದಾಗಿ ಸೇರಿಸಿ ಹೇಳಿದರೆ ಅದು ಆಗಮಸಂಧಿ ,

ಉದಾ : ಹಳ್ಳಿ ಅಲ್ಲಿ = ಹಳ್ಳಿಯಲ್ಲಿ

ಭಾವನೆ + ಉಂಟಾಯಿತು = ಭಾವನೆಯುಂಟಾಯಿತು

ಗುರು+  ಅನ್ನು            = ಗುರುವನ್ನು

ಸ್ವಾರಸ್ಯ +  ಇಲ್ಲ               = ಸ್ವಾರಸ್ಯವಿಲ್ಲ .

 2} ಆದೇಶಸಂಧಿ ಎಂದರೇನು ? ಉದಾಹರಣೆ ಕೊಡಿ .

ಉತ್ತರ : ಉತ್ತರ ಪದದ ಆದಿಯಲ್ಲಿರುವ ಕತಪ ವ್ಯಂಜನಗಳಿಗೆ ಕ್ರಮವಾಗಿ ಗ , ದ , ಬ ವ್ಯಂಜನಗಳು ಆದೇಶವಾಗುವುವು . ಇದನ್ನು ಆದೇಶಸಂಧಿ ಎನ್ನುವರು .

ಕೆಲವೊಮ್ಮೆ ಉತ್ತರ ಪದದ ಆದಿಯ ಪ್ , ಬ್ , ಮ್ ವ್ಯಂಜನಗಳಿಗೆ ‘ ವ ‘ ಕಾರವು ಆದೇಶವಾಗುವುದು .

ತುದಿ + ಕಾಲಲ್ಲಿ ( ಕ್ > ಗ್ ) = ತುದಿಗಾಲಲ್ಲಿ .

ಹುಲಿ + ತೊಗಲು ( ತ್ > ದ್ ) = ಹುಲಿದೊಗಲು

‌  ಕಣ್ + ಪನಿ        ( ಪ್ > ಬ್ ) = ಕಂಬನಿ

ನೀರ್ + ಪನಿ        ( ಪ್ > ವ್ ) = ನೀರ್ವನಿ

ಕಡು+ ಬೆಳ್ಪು‌      (ಬ್ > ವ್ ) = ಕಡುವೆಳ್ಪು‌

ಮೇಲ್ + ಮಾತು    ( ಮ್ > ವ್ ) = ಮೆಲ್ವಾತು

3} ಕೊಟ್ಟಿರುವ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ ,

ಪಾತ್ರವನ್ನು, ಶುದ್ಧಿಯನ್ನು , ಚಳಿಗಾಲ , ಪಡೆದಿದ್ದೇನೆ , ಬೆಮರ್ವನಿ

ಪಾತ್ರ                  +         ಅನ್ನು    = ಪಾತ್ರವನ್ನು ವಕಾರಾಗಮಸಂಧಿ
ಶುದ್ಧಿ                  +         ಅನ್ನು    = ಶುದ್ಧಿಯನ್ನು ಯಕಾರಾಗಮಸಂಧಿ
ಚಳಿ                    +         ಕಾಲ      = ಚಳಿಗಾಲ ಆದೇಶಸಂಧಿ
ಪಡೆದು               +         ಇದ್ದೇನೆ  = ಪಡೆದಿದ್ದೇನೆ ಲೋಪಸಂಧಿ
ಬೆಮರ್               +          ಪನಿ      = ಬೆಮರ್ವನಿ ಆದೇಶಸಂಧಿ

4. ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ .

1 , ಅಂಧಕಾರ     =  ಜ್ಞಾನದ ಬಲದಿಂದ ಆಂಧಕಾರವು ದೂರಾಗುತ್ತದೆ

2 , ಹದಿನಾರಾಣೆ  =  ಹಿಂದಿನ ಕಾಲದಲ್ಲಿ ಹದಿನಾರಾಣೆಯು ಚಲಾವಣೆಯಲ್ಲಿತ್ತು ,

3 , ನಿಭಾಯಿಸು   =   ಜೀವನದಲ್ಲಿ ಏನೇ ಬಂದರೂ ಧೈರ್ಯದಿಂದ ನಿಭಾಯಿಸಬೇಕು .

4 , ಮುಸುಕಿರುವ =   ಮಳೆಗಾಲದಲ್ಲಿ ಹೆಚ್ಚು ಮುಸುಕಿರುವ ವಾತಾವರಣವನ್ನು ಕಾಣುತ್ತೇವೆ

9th standard kannada moulvi pata Lesson 9th class Notes | ಕನ್ನಡ ಮೌಲ್ವಿ ಪಾಠದ ಪ್ರಶ್ನೆ ಉತ್ತರಗಳು 

9th standard kannada moulvi pata textbook pdf

ಇತರ ವಿಷಯಗಳು

Books Pdf Download Notes App ಹಿಂದಕ್ಕೆ

4 thoughts on “9th Kannada Moulvi Lesson Questions and Answers Notes | ಕನ್ನಡ ಮೌಲ್ವಿ ಪಾಠದ ಪ್ರಶ್ನೆ ಉತ್ತರಗಳು

    • ಯಶವಂತ says:

      ನನ್ನ ಮಾತನ್ನು ಯಾವಾಗ ಬರುತ್ತೇನೆ ಯಾವ ನೆನಪಿರಬಹುದು

Leave a Reply

Your email address will not be published. Required fields are marked *