8th Standard Maggada Saheba Kannada | ಮಗ್ಗದ ಸಾಹೇಬ ಪಾಠ ನೋಟ್ಸ್

Contents

Maggada Saheba Kannada Lesson | ಮಗ್ಗದ ಸಾಹೇಬ ಪಾಠ ಹಾಗೂ ನೋಟ್ಸ್

8th Standard Maggada Saheba Kannada Lesson, ಮಗ್ಗದ ಸಾಹೇಬ ಪಾಠ ನೋಟ್ಸ್, Kannada Deevige

8th Standard Maggada Saheba Kannada

ಮಗ್ಗದ ಸಾಹೇಬ ವಿಡಿಯೋ ಪಾಠ

8th Class Kannada Samveda DD Chandana

8th Class Kannada Samveda |Maggada Saheba Kannada Lesson | DD Chandana

ಮಗ್ಗದ ಸಾಹೇಬ ಪಾಠ 8ನೇ ತರಗತಿ

#ಮಗ್ಗದ ಸಾಹೇಬ – #8th class – #1st language – Kannada lesson Explanation in Kannada Part – 1

#ಮಗ್ಗದ ಸಾಹೇಬ – 8th class. #1st language – Kannada | Explanation in Kannada Lesson Part -2

ಮಗ್ಗದ ಸಾಹೇಬ ಪಾಠ ಹಾಗೂ ನೋಟ್ಸ್

ಗದ್ಯ ಭಾಗ

1. ಮಗ್ಗದ ಸಾಹೇಬ – ಬಾಗಲೋಡಿ ದೇವರಾಯ

ಕೃತಿಕಾರರ ಪರಿಚಯ

ಬಾಗಲೋಡಿ ದೇವರಾಯ ಅವರು (1927) ದಕ್ಷಿಣ ಕನ್ನಡ ಜಿಲ್ಲೆಯ
ಬಾಗಲೋಡಿಯವರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲಿಷ್
ಪ್ರಾಧ್ಯಾಪಕರಾಗಿದ್ದರು. ಆ ಕಾಲಕ್ಕೆ ಐ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ
ಹೊಂದಿ ವಿದೇಶಿ ಸೇವೆಗೆ ಆಯ್ಕೆಯಾದರು. ಮಾಸ್ತಿ ಹಾಗೂ ಇವರೂ
ಸಮಕಾಲೀನರು. ಅದಲ್ಲದೆ ಸಣ್ಣಕತೆಗಳನ್ನು ಬರೆದವರು. ಅವರು
ರಾಯಭಾರಿಯಾಗಿ ಇಟಲಿ, ನೇಪಾಳ, ನೈಜೀರಿಯಾ, ಫಿಲಿಫೈನ್ಸ್,
ನ್ಯೂಜಿಲ್ಯಾಂಡ್, ಬಲ್ಗೇರಿಯಾ ಮೊದಲಾದ ದೇಶಗಳಲ್ಲಿ
ಕಾರ್ಯನಿರ್ವಹಿಸಿದರು. ಅವರ ಕಥಾಸಂಗ್ರಹಗಳೆದರೆ ಹುಚ್ಚು ಮುನಸೀಫ
ಮತ್ತು ಇತರ ಕತೆಗಳು, ಆರಾಧನಾ, ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು.
ಬಾಗಲೋಡಿ ದೇವರಾಯ ಅವರು ಒಟ್ಟು 26 ಕತೆಗಳನ್ನು ಬರೆದಿದ್ದಾರೆ.
ಇವರು 1985 ರಲ್ಲಿ ನಿಧನರಾದರು.
ಪ್ರಕೃತ ಮಗ್ಗದ ಸಾಹೇಬ ಕಥೆಯನ್ನು ಬಾಗಲೋಡಿ ದೇವರಾಯ
ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ (ಪುಟ 185-189 )
ಆಯ್ದ ಕಥೆಯನ್ನು ಸಂಪಾದಿಸಿ ನಿಗದಿಪಡಿಸಿದೆ.

ಆಶಯ ಭಾವ

ಪ್ರಕೃತ ಗದ್ಯಭಾಗ ಧಾರ್ಮಿಕ ಸಹಿಷ್ಣುತೆ, ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶ, ಶಾಲೆಗಳಲ್ಲಿ
ಔದ್ಯೋಗಿಕ ಶಿಕ್ಷಣ, ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವುದು,ಸ್ವಯಂಉದ್ಯೋಗಕ್ಕೆ ಪ್ರೇರಣೆ ಮೊದಲಾದ
ಮಹತ್ವದ ಅಂಶಗಳನ್ನು ಒಳಗೊಂಡಿದೆ. ತಂದೆ ಮಗನಿಗಿದ್ದ ಮಗ್ಗದ ಬಗೆಗಿನ ಒಲವಿಗೆ ವಿರೋಧ ವ್ಯಕ್ತಪಡಿಸಿದರು.
ಇದರಿಂದ ಮನನೊಂದ ಮಗ ತನ್ನ ಮಾರ್ಗವನ್ನು ಸ್ವತಂತ್ರವಾಗಿ ಕಂಡುಕೊಂಡ ಆಶಯವನ್ನು ಹೊಂದಿದೆ ಈ
ಪಠ್ಯಭಾಗ.
ಮಗ್ಗದ ಸಾಹೇಬ ಅಂದರೆ ಅಬ್ದುಲ್ ರಹೀಮ್ ಸಾಹೇಬ್. ಅವನು ಮಗ್ಗವನ್ನು ಮುಟ್ಟದೆ ಇಪ್ಪತ್ತು ವರ್ಷಕ್ಕೂ
ಹೆಚ್ಚಾಗಿದ್ದರೂ ಸಹ ಊರಿನ ಜನರು ಅವನನ್ನು ಮಗ್ಗದ ಸಾಹೇಬನೆಂದೇ ಕರೆಯುತ್ತಿದ್ದರು. ಅವರ ಪೂರ್ವಜರು
ಸಾಹೇಬ್ ಬಹಾದ್ದೂರ್ ಮಗ್ಗದ ಹುಸೇನ್ ಸಾಹೇಬರು ಜನಪ್ರಿಯ ಮತ್ತು ಧನವಂತ ವ್ಯಕ್ತಿಯಾಗಿದ್ದರು. ಅವರು
ಮಸೀದಿ ಮಾತ್ರವಲ್ಲ; ದೇವಸ್ಥಾನವನ್ನೂ ಕಟ್ಟಿಸಿದ್ದರು. ಇಂದಿಗೂ ಈ ದೇವಸ್ಥಾನದಲ್ಲಿ ರಥೋತ್ಸವದ ಸಮಯದಲ್ಲಿ
ಅವರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದವನ್ನು ಪಡೆಯುವ ಹಕ್ಕಿದೆ.

 

ಇಂತಹ ಸಂಪ್ರದಾಯ ಪದ್ಧತಿಗಳು ಇಂದಿಗೂ ಕರ್ಣಾಟಕದಲ್ಲಿ ನಡೆಯುತ್ತಿವೆ. ಇದರಿಂದ ಪೂರ್ವಜರಲ್ಲಿ
ಎಂತಹ ಘನತೆ, ಸದಾಚಾರ, ಸದ್ಭಾವನೆಗಳು  ಇದ್ದವು ಎಂದು ತಿಳಿಯುವುದು. ಉದಾಹರಣೆಗೆ ಲೇಖಕರ ಹುಟ್ಟೂರಿನ
ಪಕ್ಕದಲ್ಲಿ ಮುಸಲ್ಮಾನರ ವಸತಿ ಇತ್ತು. ಅದರೊಳಗೆ ಒಂದು ಪವಿತ್ರ ಸ್ಥಾನವಿದೆ. ಅಲ್ಲಿ ‘ಉರ್ಸ್’ ಎಂಬ ಮುಸಲ್ಮಾನರ
ಧಾರ್ಮಿಕ ಉತ್ಸವದ ಕಾಲದಲ್ಲಿ ಲೇಖಕರ ಮನೆತನದ ಒಬ್ಬ ಪ್ರತಿನಿಧಿ ಇದ್ದೇ ಇರಬೇಕೆಂಬ ಸಂಪ್ರದಾಯ ಇತ್ತು.
ಹಾಗೆಯೇ ಗಣೇಶಚತುರ್ಥಿ, ಕೃಷ್ಣಾಷ್ಟಮಿಗಳ ಮರುದಿನ ಮುಸಲ್ಮಾನ ಸಮಾಜದ ಪ್ರತಿಷ್ಠಿತ ಮುಖ್ಯಸ್ಥರು
ಲೇಖಕರ ಮನೆಗೆ ಬರುವುದು, ಕುಶಲೋಪಚಾರ ಮಾತನಾಡುವುದನ್ನು ಮಾಡುತ್ತಿದ್ದರು ಲೇಖಕರು ಅವರಿಗೆ
ಮೋದಕ, ಉಂಡೆ, ಚಕ್ಕುಲಿ ಇತ್ಯಾದಿ ಹಬ್ಬದ ಭಕ್ಶ್ಯ -ಭೋಜ್ಯಗಳನ್ನು ವಿತರಣೆ ಮಾಡುವ ಸಂಪ್ರದಾಯವಿತ್ತು. ಒಂದು
ಬಾರಿ ಲೇಖಕರ ತಾಯಿ ಕಾಯಿಲೆ ಬಿದ್ದ ಕಾರಣ ತಂದೆಯವರು ಅಂಗಡಿಯಿಂದ  ಲಡ್ಡುಗಳನ್ನು ಕೊಂಡು ಕೊಟ್ಟುದಕ್ಕೆ
ಅವರಿಗೆ ಬಹಳ ಸಿಟ್ಟು ಬಂತು. ‘ರಾಯರೆ, ಅಂಗಡಿಯಿಂದ  ತೆಗೆದುಕೊಳ್ಳಲು ನಮ್ಮಲ್ಲಿ ಹಣವಿಲ್ಲವೆ? ಮನೆಯಲ್ಲಿ
ಕಾಯಿಲೆಯಿದ್ದರೆ ಒಂದು ತುಂಡು ಬೆಲ್ಲವನ್ನೋ ಕಲ್ಲುಸಕ್ಕರೆ ಹರಳನ್ನೋ ಕೊಡಿ. ನಿಮ್ಮ ಹಬ್ಬದ ಪೂಜೆಯ
ಪ್ರಸಾದವನ್ನು ನಾವು ತೆಗೆದುಕೊಳ್ಳುವುದು ತಲತಲಾಂತರದಿಂದ ಬಂದ ಹಳೆಯ ಸಂಪ್ರದಾಯ. ಅಂಗಡಿಯ
ಮಿಠಾಯಿಯನ್ನು ಪ್ರಸಾದವೆಂದು ಕೊಡುವುದು ಸರಿಯೇ?’ ಎಂದು ಕೇಳಿಯೇ ಬಿಟ್ಟಿದ್ದರು.
ಅದು ಹೇಗೇ ಇರಲಿ. ಈಗ ಅಬ್ದುಲ್ ರಹೀಮನಿಗೆ ‘ಮಗ್ಗದ ಸಾಹೇಬ’ ಎಂದು ಹೇಳಿದರೆ ಬಹು ಸಿಟ್ಟು
ಬರುತ್ತಿತ್ತು. “ಅನಿಷ್ಟ ಮಗ್ಗದ ಹೆಸರೆತ್ತಬೇಡಿ”-“ಮಗ್ಗವಲ್ಲ ಕೊರಳಿಗೆ ಹಗ್ಗ!” ಎಂಬುದು ಆತನ ನಿರಾಶೆ, ರೋಷಗಳ
ಉದ್ಗಾರವಾಗಿತ್ತು. ಏಕೆಂದರೆ ಅಬ್ದುಲ್ ರಹೀಮನ ಅಜ್ಜನ ಕಾಲದಲ್ಲಿ ಬ್ರಿಟಿಷರು ಅಗ್ಗದ ವಿಲಾಯತಿ ಮಿಲ್ಲಿನ
ಬಟ್ಟೆಗಳನ್ನು ನಮ್ಮ ದೇಶದಲ್ಲಿ ಹೇರಿಬಿಟ್ಟರು. ಒಂದು ವರ್ಷದೊಳಗೇ ಕಳೇಬರಗಳಾಗಿ ಹರಕು ಚಿಂದಿಯಾಗುವುವು.
ಬಣ್ಣವೋ ಒಂದೇ ತಿಂಗಳಲ್ಲಿ ವಿವರ್ಣವಾಗಿ ಎರಡೇ ತಿಂಗಳಲ್ಲಿ ಮಾಯವಾಗುವುದು. ಆದರೇನು? ಬಹು ಅಗ್ಗ.
ಜನರಿಗೆ ಬೇಕಾದುದು ಅಗ್ಗದ ವಸ್ತು. ಗುಣವನ್ನು ಯಾರು ಕೇಳುತ್ತಾರೆ? ಅಗ್ಗದ ಮಾಲಿನದೇ ಆಧಿಪತ್ಯವಾಯಿತು.
ಮಗ್ಗದವರು ಭಿಕಾರಿಗಳಾದರು. ಅವರ ಅನ್ನಕ್ಕೆ ಸಂಚಕಾರವಾಯಿತು.
ಅಬ್ದುಲ್ ರಹೀಮನ ಪೂರ್ವಜನರು ಕಟ್ಟಿಸಿದ ಭವ್ಯವಾದ ಬಂಗಲೆ ಇತ್ತು. ಊಟಕ್ಕೆ ಇದೆಯೋ? ಇಲ್ಲವೋ
ಎಂಬ ಸ್ಥಿತಿ ಉಂಟಾಯಿತು. ಆದರೆ ಅಬ್ದುಲ್ ರಹೀಮನಿಗೆ ಒಂದು ಹಠವಿತ್ತು. ಅವನ ಮೂರು ಜನ ಗಂಡು
ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಸರ್ಕಾರಿ ನೌಕರನ್ನಾಗಿ ಮಾಡಬೇಕು ಎಂದು ಹಠ ಹಿಡಿದು ತನ್ನ ಮೊದಲೆರಡು
ಮಕ್ಕಳು ಸರ್ಕಾರಿ ನೌಕರರಾಗಿ ತಂದೆಯ ಆಸೆಯನ್ನು ಈಡೇರಿಸಿದರು. ಆದರೆ ಕೊನೆ ಮಗ ಕರೀಮ್‌ನಿಗೆ ಮಗ್ಗದ
ಅಪಾರವಾದ ಆಸಕ್ತಿ ಇತ್ತು. ಮನೆಯಲ್ಲಿ ಅಬ್ದುಲ್ ರಹೀಮನು ತನ್ನ ಮಗನನ್ನು ಮಗ್ಗ ಮುಟ್ಟಲು ಬಿಡುತ್ತಿರಲಿಲ್ಲ
ಆದರೆ ಶಾಲೆಯಲ್ಲಿ ನವೀನ ಶಿಕ್ಷಣದ ಪ್ರೇರಣೆಯಿಂದ ಶಾಲೆಯಲ್ಲಿ ಮಕ್ಕಳಿಗೆ ಮಗ್ಗವನ್ನು ಕಲಿಸುತ್ತಿದ್ದರು ಇದರಿಂದ
ಅಬ್ದುಲ್ ರಹೀಮನು ಶಿಕ್ಷಕರೊಂದಿಗೆ ಜಗಳವಾಡುತ್ತಿದ್ದನು.
ಕರೀಮನು ಶಾಲೆಯಲ್ಲಿ ಮಗ್ಗವನ್ನು ಬಹುಬೇಗನೇ ಕಲಿತು ಮಗ್ಗದಲ್ಲಿ ಒಂದು ಪರಿವರ್ತನೆಯನ್ನು ತನ್ನದೇ
ಬುದ್ಧಿವಂತಿಕೆ ಹಾಗೂ ಕೌಶಲದಿಂದ ಮಾಡಿಬಿಟ್ಟಿದ್ದ. ಅದನ್ನು ಶಂಕರಪ್ಪ ಅವರು ಸ್ವಾಭಾವಿಕವಾಗಿಯೇ ಪ್ರಶಂಸೆ ಮಾಡಿ
ಮೇಲಧಿಕಾರಿಗಳಿಗೆ ವರದಿ ಮಾಡಿದ್ದರು. ಅದರ ಫಲಸ್ವರೂಪವಾಗಿ ಸರಕಾರದಿಂದ ಹುಡುಗ ಕರೀಮ್‌ನಿಗೆ ಒಂದು
ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ಬಂದುಬಿಟ್ಟವು. ಇದರಿಂದ ಕರೀಮನ ಉತ್ಸಾಹ
ಆಕಾಶಕ್ಕೇರಿತು.
ಒಂದು ದಿನ ಶಾಲೆಯ ವಾರ್ಷಿಕೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿಗಳ ಒಂದು ನಾಟಕವಿತ್ತು.
ಅದರಲ್ಲಿ ಕರೀಮನದು ಸ್ತ್ರೀಪಾತ್ರ . ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ ಸರವನ್ನು
ಅಲಂಕಾರಕ್ಕೆAದು ಎರವಲು ತೆಗೆದುಕೊಂಡ. ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ. ಎಲ್ಲೋ ಮಾಯವಾಗಿ
ಹೋದನು. ಈ ವಿಷಯ ತನ್ನ ತಂದೆಗೆ ಗೊತ್ತಾಯಿತು. “ಹಾಳಾಗಿ ಹೋಗಲಿ! ಹಠಮಾರಿ. ತಂದೆಯ ಮಾತನು

 

ಕೇಳದವನೂ ಅಂತ ತಿಳಿದಿದ್ದೆ, ಈಗ ಕಳ್ಳನೆಂದೂ ತಿಳಿಯಿತು. ನನಗೆ ಇಬ್ಬರೇ ಗಂಡು ಮಕ್ಕಳು ; ಕಳ್ಳನಾದವನು,
ಮನೆಬಿಟ್ಟು ಓಡಿಹೋದವನು ಮಗನೇ ಅಲ್ಲ” ಎಂದು ಆಣೆ ಹಾಕಿದನು.
ಇದಾದ ಕೆಲವು ವರ್ಷಗಳು ಕಳೆದ ಮೇಲೆ ಕರೀಮನು ಮನೆಗೆ ಬಂದು ಬಾಗಿಲು ತಟ್ಟಿದಾಗ ಅಬ್ದುಲ್
ರಹೀಮನು ಬಾಗಿಲು ತೆರೆದು ನೋಡಿ, ಮನೆಯ ಒಳಗೆ ಬಿಟ್ಟುಕೊಳ್ಳಲಿಲ್ಲ. ಕರೀಮನು ಎಷ್ಟು ಬೇಡಿಕೊಂಡರು
ಅಬ್ದುಲ್ ರಹೀಮನ ಮನಸ್ಸು ಕರಗಲಿಲ್ಲ.
ಕರೀಮನು ವಿಧಿಯಿಲ್ಲದೇ ತನ್ನ ಗುರುಗಳಾದ ಶಂಕಪ್ಪನವರು ಮನೆಗೆ ಹೋಗಿ ವಿಷಯ ತಿಳಿಸಿದನು. ಶಂಕರಪ್ಪ
ಮೇಷ್ಟುç ಬಂದು ಹೇಳಿದರು ಸಹ ಅಬ್ದುಲ್ ರಹೀನು ತನ್ನ ಮಗ ಕರೀಮನನ್ನು ಮನೆಯ ಒಳಗೆ ಸೇರಿಸಲಿಲ್ಲ .
ಕರೀಮ್‌ನು ಸಣ್ಣಪ್ರಾಯದಲ್ಲೇ ಮಗ್ಗದ ಸಹಕಾರಿ ಸಂಘವೊಂದನ್ನು ಸ್ಥಾಪಿಸಿ ಅವನೀಗ ಅದರ ಅಧ್ಯಕ್ಷನಾಗಿದ್ದಾನೆ.
ಸಾಕಷ್ಟು ಯಶಸ್ವಿಯೂ ಧನವಂತನೂ ಆಗಿದ್ದಾನೆ. ಅದೂ ಅಲ್ಲದೆ ಮಗ್ಗದ ಯಂತ್ರದ ಪ್ರಯೋಗದಲ್ಲಿ ಹೊಸ ಹೊಸ
ಸುಧಾರಣೆಗಳನ್ನೂ ಪರಿವರ್ತನೆಗಳನ್ನೂ ತಂದು ಹೆಸರು ಮಾಡಿದ್ದಾನೆ. ಆದರೆ ಈ ವಿಷಯದ ಲವಲೇಶವೂ ತಂದೆಗೆ
ತಿಳಿಯದು.
ಕೆಲವು ವರ್ಷಗಳ ಅನಂತರ ಅಬ್ದುಲ್ ರಹೀಮ್ ಹಾಸಿಗೆಯಲ್ಲಿ ಒರಗಿದ್ದಾನೆ. ಅನಾರೋಗ್ಯದಿಂದ ನರಳುತ್ತಾ
ಇದ್ದಾನೆ. ಎಲುಬಿನ ಹಂದರವಾಗಿದ್ದಾನೆ. ಕಣ್ಣೂ ಸರಿಯಾಗಿ ಕಾಣಿಸುತ್ತಿಲ್ಲ; ಕಿವಿಯೂ ಸರಿಯಾಗಿ ಕೇಳುತ್ತಿಲ್ಲ. ಶಂಕರಪ್ಪ
ಅವರು ಬಾಗಿಲು ತಟ್ಟಿದರು. ಒಳಗೆ ಬಂದರು. ಕೈಯಲ್ಲಿ ಒಂದು ವಾರ್ತಾಪತ್ರಿಕೆ. ‘ರಹೀಮ್ ಸಾಹೇಬರೇ, ಈ ಪತ್ರಿಕೆ
ನೋಡಿದಿರಾ? ಈ ಭಾವಚಿತ್ರ ನೋಡಿ?’ ಮುದುಕ ಕಣ್ಣಿನ ಹತ್ತಿರ ತಂದ. ಆದರೆ ಪಾಪ! ಕಣ್ಣು ಮಂಜಾಗಿವೆ. ಏನೂ
ತೋರದು. ಅವನ ಹೆಂಡತಿ ಬಂದು ವಾರ್ತಾಪತ್ರಿಕೆ ತೆಗೆದುಕೊಂಡು, ಕರೀಮನ ಭಾವಚಿತ್ರವನ್ನು ನೋಡಿ ಸಂತೋಷ
ಪಡುತ್ತಾಳೆ. ಏಕೆಂದರೆ ಕರೀಮ್‌ನಿಗೆ ರಾಷ್ಟ್ರಪತಿ  ಅವರು ಪದ್ಮಭೂಷಣ ಬಿರುದನ್ನು ಕೊಟ್ಟಿರುವ ಭಾವಚಿತ್ರಅದು.
“ಪದ್ಮಭೂಷಣ ಅಂದರೆ ಸಾಹೇಬ್ ಬಹಾದ್ದೂರ್‌ಗಿಂತಲೂ ಮೇಲಿನ ಬಿರುದು. ಖಾನ್ ಸಾಹೇಬ್, ಖಾನ್
ಬಹಾದ್ದೂರ್, ದಿವಾನ್ ಬಹಾದ್ದೂರ್ ಇವೆಲ್ಲದರಿಂದಲೂ ಮೇಲೆ, ದೊಡ್ಡ ಬಿರುದು!” ಎಂದು ಅಬ್ದುಲ್ ರಹೀಮನಿಗೆ
ತಿಳಿದ ಮೇಲೆ ಕರೀಮ್ ನನ್ನ ಕರೀಮ್! ಸಾಹೇಬ್ ಬಹಾದ್ದೂರ್‌ಗಿಂತಲೂ ಮೇಲಾದನೇ? ದೇವರು ದೊಡ್ಡವನು.
ದೇವರು ದಯಾಳು. ನನ್ನ ಬಾಯಿಯಿಂದ ಬಿದ್ದ ಕೆಟ್ಟ ಮಾತನ್ನು ದೇವರು ಕಿವಿಗೆ ಹಾಕಿಕೊಳ್ಳಲಿಲ್ಲ. ನನ್ನ ಕರೀಮ್
ಮಗ್ಗದ ಹುಸೇನ್ ಸಾಹೇಬರ ಹೆಸರಿಗೆ ಕೀರ್ತಿ ತಂದ” ಎಂದು ಕೆಮ್ಮುತ್ತ ಕೆಮ್ಮುತ್ತ ಬಿಕ್ಕಿಬಿಕ್ಕಿ ಅಳತೊಡಗಿದ
ಭಾವುಕನಾಗುತ್ತಾನೆ.

ಪದಗಳ ಅರ್ಥ

ಅಭೀಷ್ಟ – ಬಯಸಿದ್ದು ;              ಆಚ್ಛಾದಿತ – ಮುಚ್ಚಲ್ಪಟ್ಟ ;       ಆಧಿಪತ್ಯ – ಯಜಮಾನಿಕೆ;
ಕಳೇಬರ – ಮೃತ ದೇಹ/ಶರೀರ ;     ಗಣಿಸದೆ – ಲೆಕ್ಕಿಸದೆ;                   ಗೌಪ್ಯ – ಗುಟ್ಟು, ರಹಸ್ಯ;
ಚಿಂದಿ – ಚೂರು ;                         ಪರಿವರ್ತನೆ – ಬದಲಾವಣೆ;         ಪ್ರಶಂಸೆ – ಹೊಗಳಿಕೆ ;
ಭಿಕಾರಿ – ನಿರ್ಗತಿಕ ;                   ವಿಲಾಯತಿ – ವಿದೇಶ, ಅನ್ಯದೇಶ;

Maggada Saheba Question and Answer

Maggada Saheba Question and Answer Kannada Deevige 8th Standard Kannada Notes Download

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1. ರಹೀಮ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು?
ಉತ್ತರ : ರಹೀಮ ಮಗ್ಗವನ್ನು ಮುಟ್ಟದೆ ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿತ್ತು.

2. ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು?
ಉತ್ತರ :ರಥೋತ್ಸವ ಸಮಯದಲ್ಲಿ  ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿ ಎಲ್ಲರಿಗಿಂತ
ಮುಂದಾಗಿ ಪ್ರಸಾದ ಪಡೆಯುವ ಹಕ್ಕಿತ್ತು.

3. ಅಬ್ದುಲ್ ರಹೀಮನ ಹಠವೇನು?
ಉತ್ತರ : ತನ್ನ ಮೂವರು ಗಂಡುಮಕ್ಕಳಿಗೆ ಒಂದಿಷ್ಟಾದರೂ ವಿದ್ಯಾಬ್ಯಾಸ ಕೊಡಿಸಿ ಸರ್ಕಾರಿ ನೌಕರರನ್ನಾಗಿ
ಮಾಡಬೇಕೆಂಬುದು ಅಬ್ದುಲ್ ರಹೀಮನ ಹಠವಾಗಿತ್ತು.

4. ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ನೆರವೇರಿಸಿದ ಬಗೆ ಹೇಗೆ?
ಉತ್ತರ : ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ಒಬ್ಬ ಸರಕಾರಿ ಕಛೇರಿಯಲ್ಲಿ ಗುಮಾಸ್ತನಾಗಿ,
ಮತ್ತೊಬ್ಬ ಪೋಸ್ಟ್ಮಾಸ್ಟ್ರ್ ಆಗಿ ನೆರವೇರಿಸಿದರು.

5. ರಹೀಮ ಮಗನನ್ನು ಶಾಲೆಯಿಂದ ಬಿಡಿಸಿದ್ದೇಕೆ?
ಉತ್ತರ : ರಹೀಮ ಮಗ್ಗದ ಹುಚ್ಚನ್ನು  ಬಿಡಿಸಲು ಮಗನನ್ನು ಶಾಲೆಯಿಂದ ಬಿಡಿಸಿದನು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಹುಸೇನ್ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿ.
ಉತ್ತರ : ಹುಸೇನ್ ಸಾಹೇಬರು ಅಬ್ದುಲ್ ರಹೀಮ್ ಸಾಹೇಬರ ಪೂರ್ವಜರಾಗಿದ್ದು ಜನಪ್ರಿಯ ಹಾಗೂ
ಧನವಂತ ವ್ಯಕ್ತಿಯಾಗಿದ್ದರು. ಇವರು ಮಸೀದಿ ಮಾತ್ರವಲ್ಲ, ದೇವಸ್ಥಾನವನ್ನು ಕಟ್ಟಿಸಿದ್ದರು. ಇಂದಿಗೂ ಈ
ದೇವಸ್ಥಾನದಲ್ಲಿ ರಥೋತ್ಸವದ ಸಮಯದಲ್ಲಿ ಅವರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ
ಮುಂದಾಗಿ ಪ್ರಸಾದವನ್ನು ಪಡೆಯುವ ಹಕ್ಕನ್ನು ಪಡೆದಿದ್ದಾರೆ.

2. ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು?
ಉತ್ತರ : ಲೇಖಕರ ಹುಟ್ಟೂರಿನ ಪಕ್ಕದಲ್ಲಿ ಮುಸಲ್ಮಾನರ ವಸತಿ ಇತ್ತು. ಅದರೊಳಗೆ ಒಂದು ಪವಿತ್ರ
ಸ್ಥಾನವಿದೆ. ಅಲ್ಲಿ ‘ಉರ್ಸ್’ ಎಂಬ ಮುಸಲ್ಮಾನಧಾರ್ಮಿಕ ಉತ್ಸವದ ಕಾಲದಲ್ಲಿ ಲೇಖಕರ ಮನೆತನದ ಒಬ್ಬ
ಪ್ರತಿನಿಧಿ ಇದ್ದೇ ಇರಬೇಕೆಂಬ ಸಂಪ್ರದಾಯ ಇತ್ತು.

3. ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು?
ಉತ್ತರ : ಲೇಖಕರ ತಾಯಿ ಕಾಯಿಲೆ ಬಿದ್ದ ಕಾರಣ ತಂದೆಯವರು ಅಂಗಡಿಯಿAದ ಲಡ್ಡುಗಳನ್ನು ಕೊಂಡು
ಕೊಟ್ಟುದಕ್ಕೆ ಅತಿಥಿಗಳಿಗೆ ಬಹಳ ಸಿಟ್ಟು ಬಂತು. ‘ರಾಯರೆ, ಅಂಗಡಿಯಿಂದ  ತೆಗೆದುಕೊಳ್ಳಲು ನಮ್ಮಲ್ಲಿ
ಹಣವಿಲ್ಲವೆ? ಮನೆಯಲ್ಲಿ ಕಾಯಿಲೆಯಿದ್ದರೆ ಒಂದು ತುಂಡು ಬೆಲ್ಲವನ್ನೋ ಕಲ್ಲುಸಕ್ಕರೆ ಹರಳನ್ನೋ ಕೊಡಿ.
ನಿಮ್ಮ ಹಬ್ಬದ ಪೂಜೆಯ ಪ್ರಸಾದವನ್ನು ನಾವು ತೆಗೆದುಕೊಳ್ಳುವುದು ತಲತಲಾಂತರದಿಂದ ಬಂದ ಹಳೆಯ
ಸಂಪ್ರದಾಯ. ಅಂಗಡಿಯ ಮಿಠಾಯಿಯನ್ನು ಪ್ರಸಾದವೆಂದು ಕೊಡುವುದು ಸರಿಯೇ?’ ಎಂದು ಆಕ್ಷೇಪ
ಮಾಡಿದರು.

4. ಕರೀಮನಿಗೆ ಶಾಲೆಯಲ್ಲಿ ಮಗ್ಗ ಕಲಿತುದರಿಂದ ಆದ ಪ್ರಯೊಜನವೇನು?
ಉತ್ತರ : ಕರೀಮನು ಶಾಲೆಯಲ್ಲಿ ಮಗ್ಗವನ್ನು ಬಹುಬೇಗನೇ ಕಲಿತು ಮಗ್ಗದಲ್ಲಿ ಒಂದು ಪರಿವರ್ತನೆಯನ್ನು
ತನ್ನದೇ ಬುದ್ಧಿವಂತಿಕೆ ಹಾಗೂ ಕೌಶಲದಿಂದ ಮಾಡಿಬಿಟ್ಟಿದ್ದ. ಅದನ್ನು ಶಂಕರಪ್ಪ ಅವರು ಸ್ವಾಭಾವಿಕವಾಗಿಯೇ
ಪ್ರಶಂಸೆ ಮಾಡಿ ಮೇಲಧಿಕಾರಿಗಳಿಗೆ ವರದಿ ಮಾಡಿದ್ದರು. ಅದರ ಫಲಸ್ವರೂಪವಾಗಿ ಸರಕಾರದಿಂದ ಹುಡುಗ
ಕರೀಮ್‌ನಿಗೆ ಒಂದು ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ಬಂದುಬಿಟ್ಟವು.
ಇದರಿAದ ಕರೀಮನ ಉತ್ಸಾಹ ಆಕಾಶಕ್ಕೇರಿತು. ಅಲ್ಲದೆ ಸಾಕಷ್ಟು ಪ್ರಶಂಸೆಯನ್ನು ಪಡೆದಿದ್ದನು.

5. ಶಾಲಾ ವಾರ್ಷಿಕೋತ್ಸವದಂದು ಕರೀಮ ಮಾಡಿದ ಕೆಲಸವೇನು?
ಉತ್ತರ : ಒಂದು ದಿನ ಶಾಲೆಯ ವಾರ್ಷಿಕೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿಗಳ ಒಂದು
ನಾಟಕವಿತ್ತು. ಅದರಲ್ಲಿ ಕರೀಮನು ಸ್ತ್ರೀ ಪಾತ್ರವನ್ನು ಮಾಡಿರುತ್ತಾನೆ. ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ
ಹಳೆಕಾಲದ ಚಿನ್ನದ ಸರವನ್ನು ಅಲಂಕಾರಕ್ಕೆಂದು ಎರವಲು ತೆಗೆದುಕೊಂಡು ಹೋಗಿದ್ದನು. ನಾಟಕ ಮುಗಿಸಿದ
ಮೇಲೆ ಮನೆಗೆ ಬರಲಿಲ್ಲ. ಎಲ್ಲೋ ಮಾಯವಾಗಿ ಹೋದನು .

Maggada Saheba 8th Standard Kannada Notes

ಇ.ಕೊಟ್ಟಿರುವ  ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ.

1. ನವೀನ ಶಿಕ್ಷಣದ ವೈಶಿಷ್ಟ್ಯತೆ ?
ಉತ್ತರ : ನವೀನ ಶಿಕ್ಷಣವು ಮಹಾತ್ಮಾಗಾಂಧೀಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ
ಪ್ರಾರಂಭವಾಯಿತು. ಈ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು
ಕೊಡುವುದು, ಅವರಲ್ಲಿ ಹಸ್ತಕೌಶಲ್ಯವನ್ನು, ದೇಹಶ್ರಮದಲ್ಲಿ ಗೌರವ ಭಾವವನ್ನು ಉಂಟು ಮಾಡುವುದು
ಒಂದು ಭಾಗವಾಗಿತ್ತು. ಕೆಲವರಿಗೆ ಬಡಗಿಯ ಕೆಲಸ, ಕೆಲವರಿಗೆ ಬೆತ್ತದ ಕುರ್ಚಿ ಕೆಲಸ ಇತ್ಯಾದಿ
ಸಾಮಗ್ರಿಗಳನ್ನು ಮಾಡುವ, ಕೆಲವರಿಗೆ ಕೃಷಿ, ಕೆಲವರಿಗೆ ಮಗ್ಗದ ಕೆಲಸವನ್ನುಕಲಿಸಲಾಗುತ್ತಿತ್ತು .

2. ಶಂಕರಪ್ಪ ಅವರು  ರಹೀಮನ ಬಳಿಗೆ ಸಂಧಾನಕ್ಕೆ ಬಂಡ  ಪ್ರಸಂಗ ತಿಳಿಸಿ .
ಉತ್ತರ : ಕರೀಮನು ವಾರ್ಷಿಕೋತ್ಸದ ನಂತರ ಮನೆಗೆ ಬರದೇ ಹೊರಟು ಹೋಗಿದ್ದನು. ಇದಾದ ಕೆಲವು
ವರ್ಷಗಳ ನಂತರ ಬೆಳೆದು ಯುವಕನಾಗಿದ್ದ ಕರೀಮನು ಅಮ್ಮನ ಸರವನ್ನು ಅದರೊಡನೆ ಹತ್ತು ಸಾವಿರ
ರೂಪಾಯಿಗಳನ್ನು ತಂದಿದ್ದನು. ಕರೀಮನು ಮನೆಗೆ ಬಂದು ಬಾಗಿಲು ತಟ್ಟಿದಾಗ ಅಬ್ದುಲ್ ರಹೀಮನು
ಬಾಗಿಲು ತೆರೆದು ನೋಡಿ, ಮನೆಯ ಒಳಗೆ ಬಿಟ್ಟುಕೊಳ್ಳಲಿಲ್ಲ. ಕರೀಮನು ಎಷ್ಟು ಬೇಡಿಕೊಂಡರು ಅಬ್ದುಲ್
ರಹೀಮನ ಮನಸ್ಸು ಕರಗಲಿಲ್ಲ . ಆಗ ನಿವೃತ್ತರಾಗಿದ್ದ ಶಂಕರಪ್ಪ ಗುರುಗಳು  ಮನೆಗೆ ಹೋಗಿ, ‘ಸಂಧಾನ
ಮಾಡಿಸಿರಿ’ ಎಂದು ನಿವೇದಿಸಿದನು. ಶಂಕರಪ್ಪನವರು ಬಾಗಿಲು ಬಡಿದು ಒಂದು ಗೋಗರೆದನು ,
ನಿವೇದಿಸಿದರು,ತರ್ಕಿಸಿದರು , ಚರ್ಚಿಸಿದರು, ಆದರೆ ಎಲ್ಲವೂ ನಿಷ್ಪಲವಾಯಿತು .

8th Standard Kannada Notes Pdf

ಈ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಕರೀಮ ಧನವಂತನಾದ ಬಗೆ ಹೇಗೆ? ವಿವರಿಸಿ.
ಉತ್ತರ : ಕರೀಮನು ಶಾಲಾ ವಾರ್ಷಿಕೋತ್ಸವದ ದಿನ ತನ್ನ ತಾಯಿಯ ಚಿನ್ನದ ಸರದೊಂದಿಗೆ ಮನೆ ಬಿಟ್ಟು
ಎಲ್ಲೋ ಹೋದವನು. ಧನವಂತ ವ್ಯಕ್ತಿಯಾಗಿದ್ದನು. ಕರೀಮ ಸಣ್ಣ ಪ್ರಾಯದಲ್ಲೇ ಮಗ್ಗದ ಸಹಕಾರಿ
ಸಂಘವೊಂದನ್ನು ಸ್ಥಾಪಿಸಿ, ಅದರ ಅಧ್ಯಕ್ಷನಾಗಿದ್ದನು. ಮಗ್ಗದ ಯಂತ್ರದ ಪ್ರಯೋಗದಲ್ಲಿ ಹೊಸಹೊಸ
ಸುಧಾರಣೆ  ಪರಿವರ್ತನೆಗಳನ್ನು ತಂದು ಹೆಸರು ಮಾಡಿದ್ದನು. ಇದರಿಂದಾಗಿ ಆತನು ಸಾಕಷ್ಟು ಧನವಂತನೂ,
ಯಶಸ್ವಿಯೂ ಆಗಿ ಪ್ರಖ್ಯಾತನಾಗಿದ್ದನು. ಕೊನೆಗೆ ಸಣ್ಣ ಪ್ರಯತ್ನದಲ್ಲಿ  ಭಾರತ ಸರ್ಕಾರದಿಂದ
“ಪದ್ಮಭೂಷಣ” ಪ್ರಶಸ್ತಿಗೂ ಪಾತ್ರನಾದನು.

2. ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣವೇನು?
ಉತ್ತರ : ಮಗ್ಗದ ಸಾಹೇಬ ಅಂದರೆ ಅಬ್ದುಲ್ ರಹೀಮ್ ಸಾಹೇಬ್. ಅವನು ಮಗ್ಗವನ್ನು ಮುಟ್ಟದೆ
ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿದ್ದರೂ ಸಹ ಊರಿನ ಜನರು ಅವನನ್ನು ಮಗ್ಗದ ಸಾಹೇಬನೆಂದೇ
ಕರೆಯುತ್ತಿದ್ದರು. ಇದರಿಂದ ಅಬ್ದಲ್ ರಹೀಮ್‌ನಿಗೆ ಬಹು ಸಿಟ್ಟು ಬರುತ್ತಿತ್ತು. “ಅನಿಷ್ಟ ಮಗ್ಗದ ಅಜ್ಜನ
ಕಾಲದಲ್ಲಿ ಬ್ರಿಟಿಷರು ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು ನಮ್ಮ ದೇಶದಲ್ಲಿ ಹೇರಿಬಿಟ್ಟರು. ಒಂದು
ವರ್ಷದೊಳಗೇ ಕಳೇಬರಗಳಾಗಿ ಹರಕು ಚಿಂದಿಯಾಗುವುವು. ಬಣ್ಣವೋ ಒಂದೇ ತಿಂಗಳಲ್ಲಿ ವಿವರ್ಣವಾಗಿ
ಎರಡೇ ತಿಂಗಳಲ್ಲಿ ಮಾಯವಾಗುವುದು. ಆದರೇನು? ಬಹು ಅಗ್ಗ. ಜನರಿಗೆ ಬೇಕಾದುದು ಅಗ್ಗದ ವಸ್ತು.
ಗುಣವನ್ನು ಯಾರು ಕೇಳುತ್ತಾರೆ? ಅಗ್ಗದ ಮಾಲಿನದೇ ಆಧಿಪತ್ಯವಾಯಿತು. ಮಗ್ಗದವರು ಭಿಕಾರಿಗಳಾದರು.
ಅವರ ಅನ್ನಕ್ಕೆ ಸಂಚಕಾರವಾಯಿತು. ಅದರಿಂದ ದ್ವೇಷ ಉಂಟಾಯಿತು

ಉ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಮಗ್ಗವಲ್ಲ ಕೊರಳಿಗೆ ಹಗ್ಗ!”
ಆಯ್ಕೆ : ಈ ವಾಕ್ಯವನ್ನು ಭಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿAದ
ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಮಗ್ಗದ ಸಾಹೇಬ ಅಂದರೆ ಅಬ್ದುಲ್ ರಹೀಮ್ ಸಾಹೇಬ್. ಅವನು ಮಗ್ಗವನ್ನು ಮುಟ್ಟದೆ
ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿದ್ದರೂ ಸಹ ಊರಿನ ಜನರು ಅವನನ್ನು ಮಗ್ಗದ ಸಾಹೇಬನೆಂದೇ
ಕರೆಯುತ್ತಿದ್ದರು. ಇದರಿಂದ ಅಬ್ದಲ್ ರಹೀಮ್‌ನಿಗೆ ಬಹು ಸಿಟ್ಟು ಬರುತ್ತಿತ್ತು. ಆ ಸಂದರ್ಭದಲ್ಲಿ “ಅನಿಷ್ಟ
ಮಗ್ಗದ ಹೆಸರೆತ್ತಬೇಡಿ”-“ಮಗ್ಗವಲ್ಲ ಕೊರಳಿಗೆ ಹಗ್ಗ!” ಎಂದು ಲೇಖಕರು ಹೇಳಿದ್ದಾರೆ
ಸ್ವಾರಸ್ಯ : ಮಗ್ಗದ ಕೆಲಸ ನಿಂತು ಹೋಗಿ, ಸಂಪಾದನೆಯಾಗದೆ ಊಟಕ್ಕೂ ಕಷ್ಟ ಪಡಬೇಕಾದ ಸ್ಥಿತಿ ಬಂದು,
ಅನ್ನ ಸಂಪಾದಿಸಿ ಕೊಡುತ್ತಿದ್ದ ಮಗ್ಗ ಈಗ ಸಾಯುವ ಸ್ಥಿತಿಯನ್ನು ತಂದಿರುವುದು   ಸ್ವಾರಸ್ಯಕರವಾಗಿದೆ .

2. “ಕಳ್ಳನಾದವನು, ಮನೆ ಬಿಟ್ಟು  ಓಡಿ ಹೋದವನು ಮಗನೇ ಅಲ್ಲ”
ಆಯ್ಕೆ : ಈ ವಾಕ್ಯವನ್ನು ಭಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿAದ
ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕರೀಮನು ನಾಟಕದ ಸ್ತ್ರೀ ಪಾತ್ರಕ್ಕಾಗಿ ತನ್ನ ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ
ಸರವನ್ನು ಅಲಂಕಾರಕ್ಕೆAದು ಎರವಲು ತೆಗೆದುಕೊಂಡು ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ. ಎಲ್ಲೋ
ಮಾಯವಾಗಿ ಹೋದನು. ಈ ವಿಷಯ ಅಬ್ದುಲ್ ರಹೀಮ್‌ನಿಗೆ ಗೊತ್ತಾಯಿತು. ಆ ಸಂದರ್ಭದಲ್ಲಿ “ಹಾಳಾಗಿ
ಹೋಗಲಿ! ಹಠಮಾರಿ. ತಂದೆಯ ಮಾತನ್ನು ಕೇಳದವನೂ ಅಂತ ತಿಳಿದಿದ್ದೆ, ಈಗ ಕಳ್ಳನೆಂದೂ ತಿಳಿಯಿತು. ನನಗೆ
ಇಬ್ಬರೇ ಗಂಡು ಮಕ್ಕಳು ; ಕಳ್ಳನಾದವನು, ಮನೆಬಿಟ್ಟು ಓಡಿಹೋದವನು ಮಗನೇ ಅಲ್ಲ” ಎಂದು ಆಣೆ
ಹಾಕಿದನು.
ಸ್ವಾರಸ್ಯ : ಕರೀಮ್‌ನು ತನ್ನ ತಾಯಿಯ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿ, ನಮ್ಮ
ಮನೆತನಕ್ಕೆ ಕೆಟ್ಟ ಹೆಸರು ತಂದಿದ್ದಾನೆ ಇಂತವನು ಮಗನೇ ಅಲ್ಲ ಎಂದು ಹೇಳುವ ಮಾತು ಸ್ವಾರಸ್ಯಕರವಾಗಿ
ಮೂಡಿ ಬಂದಿದೆ.

3. “ನಿಮ್ಮ ಹಳೆಯ ಶಿಷ್ಯನಿಗೆ ಇದೊಂದು ಉಪಕಾರ ಮಾಡಿ”
ಆಯ್ಕೆ : ಈ ವಾಕ್ಯವನ್ನು ಭಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿAದ
ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕರೀಮನು ಮನೆಗೆ ಬಂದು ಬಾಗಿಲು ತಟ್ಟಿದಾಗ ಅಬ್ದುಲ್ ರಹೀಮನು ಬಾಗಿಲು ತೆರೆದು
ನೋಡಿ, ಮನೆಯ ಒಳಗೆ ಬಿಟ್ಟುಕೊಳ್ಳಲಿಲ್ಲ. ಕರೀಮನು ಎಷ್ಟು ಬೇಡಿಕೊಂಡರು ಅಬ್ದುಲ್ ರಹೀಮನ ಮನಸ್ಸು
ಕರಗಲಿಲ್ಲ. ಕರೀಮನು ವಿಧಿಯಿಲ್ಲದೇ ತನ್ನ ಗುರುಗಳಾದ ಶಂಕಪ್ಪನವರು ಮನೆಗೆ ಹೋಗಿ ವಿಷಯ
ತಿಳಿಸಿದನು. ಆ ಸಂದರ್ಭದಲ್ಲಿ  ಕರೀಮ್‌ನು ಈ ಮಾತನ್ನು ಹೇಳಿದ್ದಾನೆ.
ಸ್ವಾರಸ್ಯ : ಕರೀಮ್‌ನು ಶಂಕರಪ್ಪನವರಲ್ಲಿ ಬಹಳ ಭಕ್ತಿ ಹಾಗೂ ಗೌರವ, ಮಗ್ಗದ ಬಗ್ಗೆ ಅಪಾರವಾದ ಆಸಕ್ತಿ
ಇದ್ದ ಇವನಿಗೆ ಉತ್ತೇಜಿಸಿ ಪ್ರೋತ್ಸಾಹಿಸಿದ್ದರು. ಆದ್ದರಿಂದ ಶಂಕರಪ್ಪ ಮೇಷ್ಟು ಬಗ್ಗೆ ಬಹಳ ವಿಶ್ವಾಸವಿರುವದು ¸ ಸ್ವಾರಸ್ಯಕರವಾಗಿದೆ .

4 :“ದೇವರು ದೊಡ್ಡವನು ದೇವರು ದಯಾಳು”
ಆಯ್ಕೆ : ಈ ವಾಕ್ಯವನ್ನು ಭಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ

ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ

 

ಸಂದರ್ಭ : ‘ಪದ್ಮಭೂಷಣ’ ಅಂದರೆ ಸಾಹೇಬ್ ಬಹಾದ್ದೂರ್‌ಗಿಂತಲೂ ಮೇಲಿನ ಬಿರುದು. ಖಾನ್
ಸಾಹೇಬ್, ಖಾನ್ ಬಹಾದ್ದೂರ್, ದಿವಾನ್ ಬಹಾದ್ದೂರ್ ಇವೆಲ್ಲದರಿಂದಲೂ ಮೇಲೆ, ದೊಡ್ಡ ಬಿರುದು!”
ಎಂದು ಅಬ್ದುಲ್ ರಹೀಮನಿಗೆ ತಿಳಿದ ಮೇಲೆ ಕರೀಮ್ ನನ್ನ ಕರೀಮ್! ಸಾಹೇಬ್ ಬಹಾದ್ದೂರ್‌ಗಿಂತಲೂ
ಮೇಲಾದನೇ? ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ದೇವರ ಬಗ್ಗೆ ಇದ್ದ ನಂಬಿಕೆ, ತಂದೆಗೆ ಮಗನ ಬಗಗಿದ್ದ ಪ್ರೀತಿ – ವಾತ್ಸಲ್ಯವು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ.

ಊ. ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.

1. ಅಬ್ದುಲ್ ರಹೀಮನಿಗೆ ______ ಎಂದು ಹೇಳಿದರೆ  ಬಹು ಸಿಟ್ಟು ಬರುತ್ತಿತ್ತು.
2. ಮನೆಯಲ್ಲಿ ______ ಇದೆಯೋ ಇಲ್ಲವೋ ಎಂಬಂತಾಗಿದೆ
3. ಹುಡುಗನ ______ ಆಕಾಶಕ್ಕೇರಿತು.
4. ಶಂಕರಪ್ಪ ಅವರು ______ ಹಿಂತೆರಳಿದರು.
5. ನನಗೆ ಎರಡೇ ಮಕ್ಕಳು, ______ ಪರಿಚಯ ನನಗಿಲ್ಲ.

ಸರಿ ಉತ್ತರಗಳು.
1. ಮಗ್ಗದ ಸಾಹೇಬ
2. ಊಟಕ್ಕೆ
3. ಉತ್ಸಾಹ
4. ಮುಖಬಾಡಿಸಿಕೊಂಡು
5. ಕಳ್ಳರ

ಅಭ್ಯಾಸ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

1. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ? ಅವುಗಳನ್ನು ಹೇಗೆ ವರ್ಗೀಕರಿಸುವಿರಿ? ವಿವರಿಸಿ.
ಉತ್ತರ : ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳೆಂದರೆ ೪೯. ಅವುಗಳನ್ನು ಈಕೆಳಕಂಡಂತೆ
ವರ್ಗೀಕರಿಸಬಹುದು.
ಪ್ರಧಾನವಾಗಿ – ‘ಸ್ವರ, ವ್ಯಂಜನ ಮತ್ತು ಯೋಗವಾಹಕ’ ಎಂಬ ಮೂರು ಭಾಗಳಾಗಿ ವರ್ಗೀಕರಿಸಬಹುದು.

2. ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವ ಹಾಗೂ ದೀರ್ಘ ಸ್ವರಗಳನ್ನು ಬರೆಯಿರಿ.
ಉತ್ತರ : ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳೆಂದರೆ  – ಅ, ಇ, ಉ, ಋ, ಎ, ಒ
ಧೀರ್ಘಸ್ವರಗಳೆಂದರೆ: ಆ, ಈ, ಊ, ಏ, ಐ, ಓ, ಔ

3. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳನ್ನು ಬರೆಯಿರಿ.
ಉತ್ತರ : ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳೆಂದರೆ – ಖ್, ಘ, ಛ, ಝ, ಠ, ಢ, ಥ,
ಧ, ಫ, ಭ

4. ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ಅಕ್ಷರಗಳನ್ನು ತಿಳಿಸಿ.
ಉತ್ತರ : ‘ಕ’ ವರ್ಗ – ಕ, ಖ, ಗ, ಘ, ಙ
‘ಚ’   ವರ್ಗ – ಚ,  ಛ , ಜ,  ಝ , ಞ
‘ಟ’  ವರ್ಗ – ಟ,  ಠ,  ಡ,  ಢ,  ಣ
‘ತ’  ವರ್ಗ – ತ,  ಥ,  ದ,  ಧ,  ನ
‘ಪ’  ವರ್ಗ – ಪ,  ಫ,  ಬ,  ಭ,  ಮ

5. ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಗಳನ್ನು ಪಟ್ಟಿಮಾಡಿ.
ಉತ್ತರ : ಙ,  ಞ,  ಣ್ , ನ್,  ಮ್

 

ಆ. ಕೊಟ್ಟಿರುವ ಪದಗಳಲ್ಲಿರುವ ಸ್ವರಾಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ. 

ಅಬ್ದುಲ್  ( ಅ )       ಅವನು    ( ಅ )            ಇಪ್ಪತ್ತು  ( ಇ )
ಆದರೂ   ಆ )        ಅವನನ್ನು  ( ಅ )        ಇತ್ಯಾದಿ     ( ಇ )
ಇರಲಿ  ( ಇ )            ಏಕೆಂದರೆ  ( ಏ )        ಓಡಿಹೋದ   ( ಓ)
ಈಗ  ( ಈ )                ಏನೂ    ( ಏ )

ಇ. ಕೊಟ್ಟಿರುವ ಪದಗಳಲ್ಲಿರುವ ಮಹಾಪ್ರಾಣಾಕ್ಷರಗಳನ್ನು ಬರೆಯಿರಿ.

ಧನವಂತ  ( ಧ )      ರಥ   ( ಥ )                  ಘನತೆ     ( ಘ )
ಧರ್ಮ  ( ಧ )          ಮುಖ್ಯ  ( ಖ್ಯ )             ಭಕ್ಶ್ಯ     ( ಭ )
ಹಠ  ( ಠ )               ಪಾಠ   ( ಠ )                 ಹಸನ್ಮುಖ   ( ಖ )
ಫಲ  ( ಫ )

ಈ. ಕೊಟ್ಟಿರುವ ಪದಗಳಲ್ಲಿರುವ ಅವರ್ಗೀಯ ವ್ಯಂಜನಗಳನ್ನು ಬರೆಯಿರಿ.

ಅವನ    ( ವ )              ಇಂತಹ   ( ಹ  )
ಅದರ    ( ರ )                ಒಳಗೆ  ( ಳ )
ಕುಶಲ   (  ಶ )              ಹಬ್ಬ    ( ಹ )
ಬಹಳ    (  ಳ )              ತಲ    ( ಲ )
ಸಮಯ   ( ಸ, ಯ)       ಕಾಲ    ( ಲ )

8th standard 1st language maggada saheba Question and Answer Video

ಮಗ್ಗದ ಸಾಹೇಬ ಪ್ರಶ್ನೆ ಉತ್ತರ ಕನ್ನಡ

 

2 thoughts on “8th Standard Maggada Saheba Kannada | ಮಗ್ಗದ ಸಾಹೇಬ ಪಾಠ ನೋಟ್ಸ್

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh