9ನೇ ತರಗತಿ ಕೆಲಸ ಮತ್ತು ಶಕ್ತಿ ವಿಜ್ಞಾನ ನೋಟ್ಸ್‌ | 9th Standard Science Chapter 11 Notes

9ನೇ ತರಗತಿ ಕೆಲಸ ಮತ್ತು ಶಕ್ತಿ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು,9th Standard Science Chapter 11 Notes Kelasa Mattu Shakti Question Answer in Kannada Kseeb Solutions For Class 9 Science Chapter 11 Notes in Kannada Class 9 Science Chapter 11 Notes in Kannada Pdf Mcq Question And Answer 2023

 

Kelasa Mattu Shakti Question Answer

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,

1. ಭೂಮಿಯ ಮೇಲಿರುವ 15 kg ತೂಕದ ಹೊರೆಯೊಂದನ್ನು ಕೂಲಿ ಮೇಲೆತ್ತುತ್ತಾನೆ. ಅದನ್ನು ಭೂಮಿಯಿಂದ 1.5m ಎತ್ತರದಲ್ಲಿ ತನ್ನ ತಲೆಯ ಮೇಲಿಟ್ಟುಕೊಳ್ಳುತ್ತಾನೆ. ಆ ಹೊರೆಯ ಮೇಲೆ ಆವನಿಂದಾದ ‘ಕೆಲಸ’ವನ್ನು ಲೆಕ್ಕಿಸಿ.

2. ಕೆಲಸ ನಡೆದಿದೆ ಎಂದು ಯಾವಾಗ ನಾವು ಹೇಳಬಹುದು?

‘ಕೆಲಸ’ ನಡೆದಿದೆ ಎಂದು ನಾವು ಹೇಳಲು

1) ಕಾಯದ ಮೇಲೆ ಬಲಪ್ರಯೋಗವಾಗಿರಬೇಕು.

2) ಕಾಯವು ಸ್ಥಾನವನ್ನು ಬದಲಾಯಿಸಿರಬೇಕು.

3. ಒಂದು ಕಾಯದ ಮೇಲೆ ಆದರ ಸ್ಥಾನಪಲ್ಲಟದ ದಿಕ್ಕಿನಲ್ಲಿ ಬಲಪ್ರಯೋಗವಾದಾಗ ನಡೆದ ಕೆಲಸದ ಉಕ್ತಿಯೊಂದನ್ನು ಬರೆಯಿರಿ.

ಈ ಕಾಯವೊಂದರ ಮೇಲೆ ಸ್ಥಿರ ಬಲ F ಪ್ರಯೋಗಿಸಲ್ಪಡಲಿ, S ನಿರ್ದಿಷ್ಟ ದೂರದವರೆಗೆ ಕಾಯವು ಬಲದ ದಿಕ್ಕಿನಲ್ಲಿ ಸ್ಥಳಾಂತರಗೊಂಡಿರಲಿ, W ಮಾಡಿದ ಕೆಲಸವಾಗಿರಲಿ, ಆದ್ದರಿಂದ ಮಾಡಿದ ಕೆಲಸವು ಬಲ ಮತ್ತು ಸ್ಥಾನಪಲ್ಲಟದ ಗುಣಲಬ್ಧವಾಗಿರುತ್ತದೆ ಎಂದು ವ್ಯಾಖ್ಯಾನಿಸುತ್ತೇವೆ.

ನಡೆದ ಕೆಲಸ ಬಲ X ಸ್ಥಾನಪಲ್ಲಟ

W=F X S

ಆದ್ದರಿಂದ ಕಾಯದ ಮೇಲೆ ಪ್ರಯೋಗವಾದ ಬಲದಿಂದಾದ ಕೆಲಸವು ಬಲದ ಪರಿಮಾಣ ಮತ್ತು ಬಲದ ದಿಕ್ಕಿನಲ್ಲಿ ಕಾಯವು ಚಲಿಸಿದ ದೂರಗಳ ಗುಣಲಬ್ಧಕ್ಕೆ ಸಮವಾಗಿರುತ್ತದೆ. ಈ ಕೆಲಸವು ಪರಿಮಾಣವನ್ನು ಮಾತ್ರ ಹೊಂದಿದೆ ಮತ್ತು ದಿಕ್ಕನ್ನು ಹೊಂದಿರುವುದಿಲ್ಲ.

4. ವ್ಯಾಖ್ಯಾನಿಸಿ:

1. ಕೆಲಸ : ಒಂದು ನ್ಯೂಟನ್ ಬಲವನ್ನು ಕಾಯವೊಂದರ ಮೇಲೆ ಪ್ರಯೋಗಿಸಿದಾಗ ಬಲದ ದಿಕ್ಕಿನಲ್ಲಿ ಕಾಯವು 1m ದೂರ ಕ್ರಮಿಸಿದಾಗ ಆಗುವ ಕೆಲಸವನ್ನು ಒಂದು ಜೂಲ್ ಕೆಲಸ ಎನ್ನುವರು.

5. ಒಂದು ಜೊತೆ ಎತ್ತುಗಳು ನೇಗಿಲ ಮೇಲೆ 140N ನಷ್ಟು ಬಲ ಪ್ರಯೋಗಿಸುತ್ತದೆ. ಉಳುಮ ಮಡದ ಭೂಮಿಯು 15m ಉದ್ದವಿದೆ, ಹಾಗಾದರೆ ಈ ಉದ್ದದ ಭೂ ಉಳುಮೆಯಲ್ಲಿ ನಡೆದ ಕೆಲಸ ಎಷ್ಟು?

ಪರಿಹಾರ :

ಒಂದು ಜೊತೆ ಎತ್ತುಗಳು ನೇಗಿಲ ಮೇಲೆ ಪ್ರಯೋಗಿಸಿದ ಬಲ, F = 140N

ಉಳುಮೆ ಮಾಡಬೇಕಾದ ಭೂಮಿಯ ಉದ್ದ S = 15m

ನಡೆದ ಕೆಲಸ, W = ?

ನಡೆದ ಕೆಲಸ= ಬಲ X ಸ್ಥಾನಪಲ್ಲಟ

W = F X S

= 140N x 15m =

2100 Nm ಅಥವಾ 2100J

6. ಶಕ್ತಿ ಎಂದರೇನು?

ಕೆಲಸ ಮಾಡಲು ಬೇಕಾಗುವ ಸಾಮರ್ಥ್ಯವನ್ನು ‘ಶಕ್ತಿ’ ಎನ್ನುವರು.

ಈ ಕೆಲಸ ಮಾಡಿದ ಕಾಯವು ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಮತ್ತು ಯಾವ ಕಾಯದ ಮೇಲೆ ಕೆಲಸ ಮಾಡಲ್ಪಟ್ಟಿದೆಯೋ ಆ ಕಾಯವು ಶಕ್ತಿಯನ್ನು ಪಡೆಯುತ್ತದೆ.

ಹೊಂದಿರುವ ಶಕ್ತಿಯನ್ನು ಆದರ ಕೆಲಸ ಮಾಡುವ ಸಾಮರ್ಥ್ಯದಿಂದ ಆಳೆಯಬಹುದು, ಆದ್ದರಿಂದ ಕೆಲಸದ ಏಕಮಾನವೂ ಶಕ್ತಿಯ ಏಕಮಾನವಾಗಿರುತ್ತದೆ, ಅಂದರೆ, ಜೂಲ್ (J)

1kJ= 1000J.

7. ಶಕ್ತಿಯನ್ನು ಹೊಂದಿರುವ ಕಾಯ ಹೇಗೆ ಕೆಲಸ ಮಾಡುತ್ತದೆ?

ಈ ಶಕ್ತಿಯನ್ನು ಹೊಂದಿರುವ ಕಾಯವು ಇನ್ನೊಂದು ಕಾಯದ ಮೇಲೆ ಬಲಪ್ರಯೋಗ ಮಾಡಬಲ್ಲದು. ಈ ಕ್ರಿಯೆ ನಡೆದಾಗ ಶಕ್ತಿಯು ಮೊದಲಿನ ಕಾಯದಿಂದ ನಂತರದ ಕಾಯಲ್ಲಿ ವರ್ಗಾವಣೆಯಾಗುತ್ತದೆ. ಎರಡನೆಯ ಕಾಯವು ಶಕ್ತಿಯನ್ನು ಪಡೆದಿರುವುದರಿಂದ ಅದು ಚಲಿಸುತ್ತದೆ ಮತ್ತು ಕೆಲಸ ನಡೆಯುತ್ತದೆ.

8. ಶಕ್ತಿಯ ರೂಪಗಳು ಯಾವುವು?

ಯಾಂತ್ರಿಕ ಶಕ್ತಿ (ಪ್ರಚ್ಛನ್ನ ಶಕ್ತಿ + ಚಲನಶಕ್ತಿ), ಉಷ್ಣಶಕ್ತಿ, ರಾಸಾಯನಿಕ ಶಕ್ತಿ, ವಿದ್ಯುಚ್ಛಕ್ತಿ ಮತ್ತು ಬೆಳಕಿನ ಶಕ್ತಿ, ಇತ್ಯಾದಿಗಳು ವಿಭಿನ್ನ ಬಗೆಯ ಶಕ್ತಿಯ ರೂಪಗಳಾಗಿವೆ.

9. ಚಲನ ಶಕ್ತಿ ಎಂದರೇನು?

ಚಲನೆಯಿಂದಾಗಿ `ಕಾಯಗಳು ಪಡೆದುಕೊಳ್ಳುವ ಶಕ್ತಿಗೆ ಚಲನಶಕ್ತಿ ಎನ್ನುತ್ತೇವೆ. ಜವ ಹಚ್ಚಿದಂತೆ ಕಾಯಗಳ ಚಲನಶಕ್ತಿ ಹೆಚ್ಚಾಗುತ್ತದೆ.

ಬೀಳುತ್ತಿರುವ ತೆಂಗಿನಕಾಯಿ, ವೇಗವಾಗಿ ಚಲಿಸುತ್ತಿರುವ ಕಾರು, ಉರುಳುತ್ತಿರುವ ಕಲ್ಲು, ಹಾರುತ್ತಿರುವ ವಿಮಾನ, ಹರಿಯುತ್ತಿರುವ ನೀರು, ಬೀಸುತ್ತಿರುವ ಗಾಳಿ, ಓಡುತ್ತಿರುವ ಓಟಗಾರ ಇತ್ಯಾದಿಗಳು ಚಲನಶಕ್ತಿಯನ್ನು ಹೊಂದಿರುತ್ತವೆ.

10. ಚಲಿಸುತ್ತಿರುವ ಕಾಯವು ತನ್ನ ಚಲನೆಯಿಂದಾಗಿ ಎಷ್ಟು ಶಕ್ತಿಯನ್ನು ಹೊಂದಿರುತ್ತದೆ?

ನಿರ್ದಿಷ್ಟ ವೇಗದಿಂದ ಚಲಿಸುತ್ತಿರುವ ಕಾಯದ ಚಲನ ಶಕ್ತಿಯು ಆ ವೇಗವನ್ನು ಪಡೆಯಲು ಆ ಕಾಯದ ಮೇಲೆ ಮಾಡಿದ ಕೆಲಸಕ್ಕೆ ಸಮವಾಗಿರುತ್ತದೆ ಎಂದು ಅರ್ಥೈಸಬಹುದು,

11. ಸಾಮರ್ಥ್ಯ ಎಂದರೇನು?

ಮಾಡಿದ ಕೆಲಸದ ದರವನ್ನು ಸಾಮರ್ಥ್ಯ ಎನ್ನುವರು. ಸಾಮರ್ಥ್ಯದ ಏಕಮಾನ ವ್ಯಾಟ್. ಇದನ್ನು W ಚಿಹ್ನೆಯಿಂದ ಸೂಚಿಸುತ್ತೇವೆ.

12. 1 ವ್ಯಾಟ್ ಸಾಮರ್ಥ್ಯವನ್ನು ವ್ಯಾಖ್ಯಾನಿಸಿ

1 ವ್ಯಾಟ್ ಎಂದರೆ, 1 ಸೆಕೆಂಡ್‌ನಲ್ಲಿ ಒಂದು ಕಾರಕ ಮಾಡಿದ ಕೆಲಸ 1 ಜೂಲ್ ಎಂದರ್ಥ.

9th Science Kelasa Mattu Shakti Question Answer

13. ಒಂದು ವಿದ್ಯುತ್ ದೀಪವು 10 ಸೆಕೆಂಡ್‌ಗಳಲ್ಲಿ 1000) ಪಟ್ಟು ವಿದ್ಯುತ್‌ ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತದೆ, ಹಾಗಾದರೆ ಅದರ ಸಾಮರ್ಥ್ಯವೆಷ್ಟು?

ಪರಿಹಾರ:

14. ಸರಾಸರಿ ಸಾಮರ್ಥ್ಯವನ್ನು ವ್ಯಾಖ್ಯಾನಿಸಿ

ಒಟ್ಟಾರ ಉಪಯೋಗಿಸಿದ ಶಕ್ತಿಯನ್ನು ಬಳಸಿದ ಕಾಲದೊಂದಿಗೆ ಭಾಗಿಸಿದಾಗ ಸರಾಸರಿ ಸಾಮರ್ಥ್ಯ ದೊರೆಯುತ್ತದೆ.

15. 60W ಇರುವ ಒಂದು ವಿದ್ಯುತ್‌ಬಲ್ಬನ್ನು ದಿನಕ್ಕೆ 8 ಘಂಟೆಗಳ ಕಾಲ ಉಪಯೋಗಿಸಲಾಗಿದೆ. ಒಂದು ದಿನದಲ್ಲಿ ಆ ಬಲ್ಪ್‌ ನಿಂದ ಉಪಯೋಗಿಸಲ್ಪಟ್ಟ ಶಕ್ತಿಯನ್ನು ಯೂನಿಟ್‌ಗಳಲ್ಲಿ ಕಂಡು ಹಿಡಿಯಿರಿ.

16. ಒಂದು ಬ್ಯಾಟರಿಯು ಬಲ್ಪ್‌ ನ್ನು ಹೊತ್ತಿಸುತ್ತದೆ. ಈ ಪ್ರಕ್ರಿಯೆಯಲ್ಲಿನ ಶಕ್ತಿಯ ಬದಲಾವಣೆಯನ್ನು ವಿವರಿಸಿ,

ಒಂದು ಬ್ಯಾಟರಿಯನ್ನು ಬಲ್ಬಗೆ ಸಂಪರ್ಕ ಕಲ್ಪಿಸಿದಾಗ, ಬ್ಯಾಟರಿಯ ರಾಸಾಯನಿಕ ಶಕ್ತಿಯು ವಿದ್ಯುತ್‌ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.

ಬಲ್ಪ್ ವಿದ್ಯುತ್ ಶಕ್ತಿಯನ್ನು ಪಡೆದಾಗ ವಿದ್ಯುತ್‌ ಶಕ್ತಿಯು ಬೆಳಕು ಮತ್ತು ಉಷ್ಣ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ರಾಸಾಯನಿಕ ಶಕ್ತಿ- ವಿದ್ಯುತ್‌ ಶಕ್ತಿ→ ಬೆಳಕು ಮತ್ತು ಉಷ್ಣ ಶಕ್ತಿ

17. ಒಂದು ಬಲವು 20kg ರಾಶಿಯುಳ್ಳ ಒಂದು ಕಾಯದ ವೇಗವನ್ನು 6ms ನಿಂದ 2ms ಗೆ ಬದಲಾಯಿಸುತ್ತದೆ. ಆ ಬಲದಿಂದ ಮಾಡಿದ ಕೆಲಸವನ್ನು ಕಂಡುಹಿಡಿಯಿರಿ.

ಪರಿಹಾರ:

ಈ ಋಣ ಚಿಹ್ನೆಯು ಕಾಯದ ಚಲನೆಗೆ ವಿರುದ್ಧ ದಿಕ್ಕಿನಲ್ಲಿ ಬಲ ಪ್ರಯೋಗವಾಗಿದೆ ಎಂಬುದನ್ನು ತಿಳಿಸುತ್ತದೆ.

18. 10kg ರಾಶಿಯು ಒಂದು ಮೇಜಿನ ಮೇಲೆ A ಬಿಂದುವಿನಲ್ಲಿದೆ, ಅದು B ಬಿಂದುವಿಗೆ ಚಲಿಸಿತು, A ಮತ್ತು B ನ್ನು ಸೇರಿಸುವ ರೇಖೆಯು ಅಡ್ಡ ರೇಖೆಯಾಗಿದ್ದರೆ, ಆ ಕಾಯದ ಮೇಲೆ ಗುರುತ್ವ ಬಲವು ಮಾಡಿದ ಕೆಲಸವೆಷ್ಟು? ನಿಮ್ಮ ಉತ್ತರವನ್ನು ವಿವರಿಸಿ.

ಗುರುತ್ವಾಕರ್ಷಣೆಯಿಂದಾದ ಮಾಡಿದ ಕೆಲಸವು ಒಂದು ಕಾಯದ ಲಂಬ ಎತ್ತರಗಳ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ.

W = mgh ( h= 0 )

W = mg x 0 = 0J

ಗುರುತ್ವ ಬಲದಿಂದ ಆ ಕಾಯದ ಮೇಲೆ ಮಾಡಿದ ಕೆಲಸ ಶೂನ್ಯವಾಗಿದೆ.

19. ಸ್ವತಂತ್ರವಾಗಿ ಬೀಳುತ್ತಿರುವ ಕಾಯವು ಮುಂದುವರಿದಂತೆಲ್ಲಾ ಅದರ ಪ್ರಚ್ಛನ್ನ ಪಕ್ಷಿಯು ಕಡಿಮೆಯಾಗುತ್ತದೆ. ಇದು ಶಕ್ತಿಯ ಸಂರಕ್ಷಣಾ ನಿಯಮವನ್ನು ಉಲ್ಲಂಘಿಸಿತೇ? ಏಕೆ?

ಒಂದು ಕಾಯದ ಚಲನಶಕ್ತಿ ಮತ್ತು ಪ್ರಚ್ಛನ್ನ ಶಕ್ತಿಗಳ ಮೊತ್ತವು ಅದರ ಯಾಂತ್ರಿಕ ಶಕ್ತಿಯಾಗಿರುತ್ತದೆ. ಒಂದು ಕಾಯವು ಸ್ವತಂತ್ರವಾಗಿ ಬೀಳುವಾಗ ಅದರ ಮಾರ್ಗದ ಒಂದು ಬಿಂದುವಿನಲ್ಲಿ ಪ್ರಚ್ಛನ್ನ ಶಕ್ತಿಯ ಕಡಿಮೆಯಾಗುವಿಕೆಯು ಆಷ್ಟೇ ಪ್ರಮಾಣದಲ್ಲಿ ಚಲನಶಕ್ತಿಯ ಹೆಚ್ಚಾಗುವಿಕೆಗೆ ಕಾರಣವಾಗುತ್ತದೆ. ಇಲ್ಲಿ ಗಾಳಿಯ ಪ್ರತಿರೋಧವನ್ನು ತಿರಸ್ಕರಿಸಲಾಗಿದೆ. ಆದ್ದರಿಂದ ಇಲ್ಲಿ ನಿರಂತರವಾಗಿ ಗುರುತ್ವ ಪ್ರಚ್ಛನ್ನ ಶಕ್ತಿಯು ಚಲನಶಕ್ತಿಯಾಗಿ ವರ್ಗಾವಣೆಯಾಗುತ್ತದೆ.

20. ನೀವು ಬೈಸಿಕಲ್ ತುಳಿಯುವಾಗ ಸಂಭವಿಸುವ ವಿವಿಧ ರೀತಿಯ ಶಕ್ತಿಯ ವರ್ಗಾವಳಿಗಳು ಯಾವುವು? ಬೈಸಿಕಲ್ ತುಳಿಯುವಾಗ ಸವಾರನ ಸ್ನಾಯು ಶಕ್ತಿಯು ಸವಾರನ ದೇಹದ ಉಷ್ಣ ಶಕ್ತಿ ಮತ್ತು ಬೈಸಿಕಲ್‌ನ ಚಲನ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.

ಸ್ನಾಯು ಶಕ್ತಿ → ಉಷ್ಣ ಶಕ್ತಿ ಮತ್ತು ಚಲನ ಶಕ್ತಿ,

21. ನಿಮ್ಮ ಎಲ್ಲಾ ವಿಫಲ ಯತ್ನಗಳಲ್ಲಿ ಬೃಹತ್ ಬಂಡೆಯೊಂದನ್ನು ತಳ್ಳುವಾಗ, ಶಕ್ತಿಯು ವರ್ಗಾವಣೆಗೊಂಡಿತು ನೀವು ಪ್ರಯೋಗಿಸಿದ ಶಕ್ತಿಯು ಎಲ್ಲಿಗೆ ಹೋಯಿತು?

ಎಲ್ಲಾ ವಿಫಲ ಯತ್ನಗಳಲ್ಲಿ ಬೃಹತ್‌ ಬಂಡೆಯೊಂದನ್ನು ತಳ್ಳುವಾಗ, ಸ್ಥಿರವಾದ ಬಂಡೆಗೆ ಯಾವುದೇ ಶಕ್ತಿಯ ವರ್ಗಾವಣೆ ಆಗುವುದಿಲ್ಲ.ಆದರೆ ಯಾವುದೇ ಶಕ್ತಿಯ ನಷ್ಟ ಕೂಡ ಆಗುವುದಿಲ್ಲ, ಏಕೆಂದರೆ ಬೃಹತ್ ಬಂಡೆಯೊಂದನ್ನು ತಳ್ಳಲು ಬಳಸಿದ ಸ್ನಾಯು ಶಕ್ತಿಯು ದೇಹದ ಉಷ್ಣ ಶಕ್ತಿಯಾಗಿ ವರ್ಗಾವಣೆಗೊಂಡು ನಮ್ಮ ದೇಹ ಬಿಸಿಯಾಗಲು ಕಾರಣವಾಗುತ್ತದೆ.

22. 40kg ರಾಶಿಯಿರುವ ಒಂದು ಕಾಯವನ್ನು ನೆಲದಿಂದ 5mm ಎತ್ತರಕೆ ಏರಿಸಲಾಗಿದೆ. ಆದರ ಪ್ರಚ್ಛನ್ನ ಶಕ್ತಿಯೆಷ್ಟು? ಆ ಕಾಯವನ್ನು ಸ್ವತಂತ್ರವಾಗಿ ಬೀಳುವಂತೆ ಮಾಡಿದಾಗ ಅರ್ಧ ಮಾರ್ಗದಲ್ಲಿ ಆದರ ಚಲನಶಕ್ತಿಯನ್ನು ಕಂಡುಹಿಡಿಯಿರಿ,

23.ಭೂಮಿಯನ್ನು ಸುತ್ತುತ್ತಿರುವ ಒಂದು ಉಪಗ್ರಹದ ಮೇಲೆ ಗುರುತ್ವಾಕರ್ಷದ ಬಲದಿಂದಾಗಿ ಮಾಡಿದ ಕೆಲಸವೆಷ್ಟು? ನಿಮ್ಮ ಉತ್ತರವನ್ನು ಸಮರ್ಥಿಸಿಕೊಳ್ಳಿ,

‘ಕೆಲಸ’ ನಡೆಯಲು ಸಾಧಿತವಾಗಬೇಕಾದ ಎರಡು ನಿಬಂಧನೆಗಳು

1) ಕಾಯದ ಮೇಲೆ ಬಲ ಪ್ರಯೋಗವಾಗಿರಬೇಕು.

2) ಕಾಯವು ಸ್ಥಾನವನ್ನು ಬದಲಾಯಿಸಿರಬೇಕು.

ಈ ಒಂದು ಕಾಯದ ಮೇಲೆ ವರ್ತಿಸುವ ಬಲವು ಆದರ ಸ್ಥಾನ ಪಲ್ಲಟಕ್ಕೆ ಲಂಬವಾಗಿದ್ದರೆ ಮಾಡಿದ ಕೆಲಸವು ಶೂನ್ಯವಾಗಿದೆ. ಭೂಮಿಯನ್ನು ಸುತ್ತುತ್ತಿರುವ ಒಂದು ಉಪಗ್ರಹದ ಮೇಲೆ ಗುರುತ್ವಾಕರ್ಷಣೆ ಬಲವು ಆದರ ಸ್ಥಾನ ಪಲ್ಲಟಕ್ಕೆ ಲಂಬವಾಗಿದೆ. ಆದುದರಿಂದ ಕೆಲಸವು ಶೂನ್ಯವಾಗಿದೆ.

24.ಒಂದು ಕಾಯದ ಮೇಲೆ ಯಾವುದೇ ಬಲ ವರ್ತಿಸದಿರುವಾಗ ಅಲ್ಲಿ ಸ್ಥಾನಪಲ್ಲಟವಿದೆಯೇ? ಯೋಚಿಸಿ, ಈ ಪ್ರಶ್ನೆಯನ್ನು ನಿಮ್ಮ ಸ್ನೇಹಿತರು ಮತ್ತು ಶಿಕ್ಷಕರ ಬಳಿ ಚರ್ಚಿಸಿ,

ಹೌದು ಇದೆ. ಏಕರೂಪ ಚಲನೆಯಲ್ಲಿ ಇರುವ ಕಾಯ ಕಾಯ ಏಕರೂಪ ಚಲನೆಯಲ್ಲಿ ಇರುವಾಗ ಕಾಯದ ಮೇಲೆ ವರ್ತಿಸುವ ಬಲ ಶೂನ್ಯವಾಗುತ್ತದೆ.ಆದರೆ ಕಾಯದ ಸ್ಥಾನ ಪಲ್ಲಟವಾಗುತ್ತದೆ. ಆದುದರಿಂದ ಒಂದು ಕಾಯದ ಮೇಲೆ ಯಾವುದೇ ಬಲ ವರ್ತಿಸದಿರುವಾಗ ಅಲ್ಲಿ ಸ್ಥಾನಪಲ್ಲಟವಿದೆ.

25.ಒಬ್ಬ ವ್ಯಕ್ತಿಯು ತನ್ನ ತಲೆಯ ಮೇಲೆ ಹುಲ್ಲಿನ ಹೊರೆಯನ್ನು 30 ನಿಮಿಹಗಳ ಕಾಲ ಹೊರುವುದರಿಂದ ಆಯಾಸಗೊಂಡಿರುತ್ತಾನೆ. ಆವನು ಕೆಲಸ ಮಾಡಿದ್ದಾನೆಯೇ? ಅಥವಾ ಇಲ್ಲವ? ನಿಮ್ಮ ಉತ್ತರವನ್ನು ಸಮರ್ಥಿಸಿ,

ಕೆಲಸ ಮಾಡಿಲ್ಲ.

‘ಕೆಲಸ’ ನಡೆಯಲು ಸಾಧಿತವಾಗಬೇಕಾದ ಎರಡು ನಿಬಂಧನೆಗಳು

1) ಕಾಯದ ಮೇಲೆ ಬಲ ಪ್ರಯೋಗವಾಗಿರಬೇಕು.

2) ಕಾಯವು ಸ್ಥಾನವನ್ನು ಬದಲಾಯಿಸಿರಬೇಕು,

ಒಬ್ಬ ವ್ಯಕ್ತಿಯು ತನ್ನ ತಲೆಯ ಮೇಲೆ ಹುಲ್ಲಿನ ಹೊರೆಯನ್ನು ಹೊತ್ತುಕೊಂಡಿರುವಾಗ ಹುಲ್ಲಿನ ಹೊರೆಯ ಸ್ಥಾನಪಲ್ಲಟವಿರುವುದಿಲ್ಲ.ವ್ಯಕ್ತಿಯು ತಲೆಯ ಮೇಲೆ ಇರುವ ಹುಲ್ಲಿನ ಹೊರೆಯ ಮೇಲೆ ಗುರುತ್ವ ಬಲ ವರ್ತಿಸುತ್ತಿದ್ದರೂ, ವ್ಯಕ್ತಿಯು ತನ್ನ ತಲೆಯ ಮೇಲೆ ಹುಲ್ಲಿನ ಹೊರೆಯ ಯಾವುದೇ ಬಲ ಹಾಕಿರುವುದಿಲ್ಲ. ಹಾಗಾಗಿ, ಮಾಡಿದ ಕೆಲಸವು ಶೂನ್ಯವಾಗಿದೆ.

26. .ಒಂದು ವಿದ್ಯುತ್ ಹೀಟರ್‌ನ ಮೇಲೆ 1500W ಎಂದು ನಮೂದಾಗಿದೆ, ಅದು 10 ಗಂಟೆಗಳಲ್ಲಿ ಎಷ್ಟು ಶಕ್ತಿಯನ್ನು ಬಳಸಿಕೊಳ್ಳುತ್ತದೆ?

27. ಒಂದು ಲೋಲಕದ ಗುಂಡನ್ನು ಒಂದು ಕಡೆಯಿಂದ ಎಳೆದು ಅಂದೋಲನಗೊಳಿಸಿದಾಗ ಶಕ್ತಿಯು ವರ್ಗಾವಣೆಗೊಳ್ಳುವುದನ್ನು ಚರ್ಚಿಸಿ, ಶಕ್ತಿ ಸಂರಕ್ಷಣಾ ನಿಯಮವನ್ನು ಸವರಿಸಿ, ಅಂತಿಮವಾಗಿ ಅದು ಏಳಿ ಸ್ಥಿರಸ್ಥಿತಿಗೆ ಬಂದಿತು? ಅಂತಿಮವಾಗಿ ಅದರ ಶಕ್ತಿ ಏನಾಯಿತು? ಅದು ಶಕ್ತಿ ಸಂರಕ್ಷಣಾ ನಿಯಮವನ್ನ ಉಲ್ಲಂಘಿಸಿತೇ?

ಶಕ್ತಿಯ ಸಂರಕ್ಷಣಾ ನಿಯಮದ ಪ್ರಕಾರ ಶಕ್ತಿಯನ್ನು ಸೃಷ್ಟಿಸಲು ಅಥವಾ ನಾಶಗೊಳಿಸಲು ಸಾಧ್ಯವಿಲ್ಲ. ಆದರೆ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ವರ್ಗಾಯಿಸಬಹುದು.

ಈ ಒಂದು ಲೋಲಕದ ಗುಂಡು ತನ್ನ ಸರಾಸರಿ ಸ್ಥಾನ ” ನಿಂದ A ಅಥವಾ B ಗೆ ಚಲಿಸಿದಾಗ, ತನ್ನ ಸರಾಸರಿ ಸ್ಥಾನ ಗಿಂತ 1) (A ಅಥವಾ B ಸ್ಥಾನ) ಎತ್ತರದಲ್ಲಿರುತ್ತದೆ. ಈ ಹಂತದಲ್ಲಿ ಲೋಲಕದ ಗುಂಡಿನ ಚಲನ ಶಕ್ತಿ ಸಂಪೂರ್ಣವಾಗಿ ಪ್ರಚ್ಛನ್ನ ಶಕ್ತಿಯಾಗಿ ಬದಲಾಗುತ್ತದೆ. ಚಲನ ಶಕ್ತಿ ಶೂನ್ಯವಾಗುತ್ತದೆ.

ಲೋಲಕದ ಗುಂಡು ನ ಕಡೆಗೆ ಚಲಿಸಿದಾಗ ಪ್ರಚ್ಛನ್ನ ಶಕ್ತಿ ಕಡಿಮೆಯಾಗುತ್ತದೆ, ಮತ್ತು ಚಲನ ಶಕ್ತಿ ಹೆಚ್ಚಾಗುತ್ತದೆ.

ಈ ಲೋಲಕದ ಗುಂಡು P ತಲುಪಿದಾಗ ಪ್ರಚ್ಛನ್ನ ಶಕ್ತಿ ಶೂನ್ಯವಾಗುತ್ತದೆ. ಲೋಲಕದ ಗುಂಡು ಚಲನ ಶಕ್ತಿ ಹೊಂದಿರುತ್ತದೆ. ಹೀಗೆ ಲೋಲಕದ ಆಂದೋಲನಗಳು ಪುನರಾವರ್ತನೆಯಾಗುತ್ತವೆ.

ಲೋಲಕದ ಗುಂಡು ಶಾಶ್ವತವಾಗಿ ಆಂದೋಲನ ಉಂಟು ಮಾಡುವುದಿಲ್ಲ. ಸ್ವಲ್ಪ ಸಮಯದ ನಂತರ ಸ್ಥಿರ ಸ್ಥಿತಿಗೆ ಬರುತ್ತದೆ, ಕಾರಣ ಗಾಳೆಯ ಪ್ರತಿರೋಧ ಉಂಟಾಗಿ ಘರ್ಷಣೆಯಿಂದ ಚಲನ ಶಕ್ತಿ ಕಳೆದುಕೊಂಡು ಲೋಲಕದ ಗುಂಡು, ಸ್ಥಿರ ಸ್ಥಿತಿಗೆ ಬರುತ್ತದೆ. ಈ ಶಕ್ತಿ ಸಂರಕ್ಷಣಾ ನಿಯಮ ಉಲ್ಲಂಘನೆ ಆಗಿಲ್ಲ.

28.ಸ್ವತಂತ್ರವಾಗಿ ಬೀಳುತ್ತಿರುವ ಒಂದು ಕಾಯವು ಅಂಮವಾಗಿ ನೆಲವನ್ನು ತಲುಪಿ ನಿಂತಿತು, ಆದರ ಚಲನಶಕ್ತಿ ಏನಾಗುತ್ತದೆ?

ಸ್ವತಂತ್ರವಾಗಿ ನೆಲದ ಕಡೆಗೆ ಬಿದ್ದ ಒಂದು ಕಾಯದ ಪ್ರಚ್ಛನ್ನ ಶಕ್ತಿ ಕಡಿಮೆಯಾಗುತ್ತದೆ ಮತ್ತು ಚಲನ ಶಕ್ತಿ ಹೆಚ್ಚಾಗುತ್ತದೆ. ಕಾಯವು ನೆಲವನ್ನು ಮುಟ್ಟಿದಾಗ ಎಲ್ಲಾ ಪ್ರಚ್ಛನ್ನ ಶಕ್ತಿಯು ಚಲನ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.

ಕಾಯವು ನೆಲವನ್ನು ಮುಟ್ಟಿದ ನಂತರ ಚಲನ ಶಕ್ತಿಯು ಉಷ್ಣ ಶಕ್ತಿ ಮತ್ತು ಶಬ್ದ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಕಾಯದ ಚಲನ ಶಕ್ತಿಯು ಭೂಮಿಯ ಸ್ವರೂಪವನ್ನು ಅವಲಂಬಿಸಿ ನೆಲವನ್ನು ವಿರೂಪಗೊಳಿಸಬಹುದು.

FAQ

1. ಶಕ್ತಿ ಎಂದರೇನು?

ಕೆಲಸ ಮಾಡಲು ಬೇಕಾಗುವ ಸಾಮರ್ಥ್ಯವನ್ನು ‘ಶಕ್ತಿ’ ಎನ್ನುವರು.

2. ಸಾಮರ್ಥ್ಯ ಎಂದರೇನು?

ಮಾಡಿದ ಕೆಲಸದ ದರವನ್ನು ಸಾಮರ್ಥ್ಯ ಎನ್ನುವರು. ಸಾಮರ್ಥ್ಯದ ಏಕಮಾನ ವ್ಯಾಟ್. ಇದನ್ನು W ಚಿಹ್ನೆಯಿಂದ ಸೂಚಿಸುತ್ತೇವೆ.

3. ಚಲನ ಶಕ್ತಿ ಎಂದರೇನು?

ಚಲನೆಯಿಂದಾಗಿ `ಕಾಯಗಳು ಪಡೆದುಕೊಳ್ಳುವ ಶಕ್ತಿಗೆ ಚಲನಶಕ್ತಿ ಎನ್ನುತ್ತೇವೆ.

ಇತರೆ ವಿಷಯಗಳು:

9ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh