9ನೇ ತರಗತಿ ವಿಜ್ಞಾನ ಶಬ್ಧ ನೋಟ್ಸ್‌ | 9th Standard Science Chapter 12 Notes in Kannada Medium

9ನೇ ತರಗತಿ ವಿಜ್ಞಾನ ಶಬ್ಧ ನೋಟ್ಸ್‌ ಪ್ರಶ್ನೋತ್ತರಗಳು, 9th Standard Science Chapter 12 Notes Question Answer Extract Mcq Pdf in Kannada Medium 2023 Kseeb Solutions For Class 9 Science Chapter 12 Notes 9th Standard Science Shabda Question Answer Class 9 Science Chapter 12 Pdf in Kannada

 

9th Standard Science Chapter 12 Notes in Kannada

1. ಶಬ್ದ ಎಂದರೇನು? ಅದು ಹೇಗೆ ಉತ್ಪತ್ತಿಯಾಗುತ್ತದೆ?

ವಸ್ತುಗಳ ಕಂಪನವನ್ನು ಶಬ್ದ ಎನ್ನುವರು. ವಸ್ತುವಿನ ಕಂಪನವು ಮಾಧ್ಯಮದ ಕಣಗಳನ್ನು ಕಂಪಿಸುವಂತೆ ಮಾಡಿದಾಗ, ಅವು ತನ್ನ ಪಕ್ಕದ ಕಣಗಳನ್ನು ಕಂಪಿಸುವಂತೆ ಮಾಡುತ್ತವೆ.

ಮಾಧ್ಯಮದ ಕಣಗಳು ತಾವಾಗಿಯೇ ಮುಂದಕ್ಕೆ ಚಲಿಸುವುದಿಲ್ಲ. ಆದರೆ ಕ್ಷೋಭೆ (disturbance) ಯನ್ನು ಮುಂದಕ್ಕೆ ಕೊಂಡೊಯ್ಯುತ್ತವೆ. ಆದುದರಿಂದ ಶಬ್ದವು ಮಾಧ್ಯಮದ ಮೂಲಕ ನಮ್ಮ ಕಿವಿಯನ್ನು ತಲುಪುತ್ತದೆ.

2. ಶಬ್ದದ ಆಕರದ ಹತ್ತಿರ ಗಾಳಿಯಲ್ಲಿ ಸಂಪೀಡನಗಳು ಮತ್ತು ವಿರಳನಗಳು ಹೇಗೆ ಉತ್ಪತ್ತಿಯಾಗುತ್ತವೆ ಎಂದು ಚಿತ್ರದ ಸಹಾಯದಿಂದ ವಿವರಿಸಿ.

ಶಬ್ದದ ಪ್ರಸಾರಕ್ಕೆ ಗಾಳಿಯು ಒಂದು ಸಾಮಾನ್ಯ ಮಾಧ್ಯಮವಾಗಿದೆ.

ಈ ಕಂಪಿಸುವ ವಸ್ತುವು ಮುಂದೆ ಚಲಿಸಿದಾಗ ಗಾಳಿಯನ್ನು ತಳ್ಳಿ, ಸಂಪೀಡಿಸಿ ಮುಂದೆ ಹೆಚ್ಚು ಒತ್ತಡವಿರುವ ಭಾಗವನ್ನುಂಟು ಮಾಡುತ್ತದೆ. ಈ ಭಾಗವನ್ನು ಸಂಪೀಡನ (compression, c) ಎನ್ನುತ್ತೇವೆ. ಕಂಪಿಸುವ ವಸ್ತುವು ಹಿಂದಕ್ಕೆ ಚಲಿಸಿದಾಗ, ಕಡಿಮೆ ಒತ್ತಡವಿರುವ ವಿರಳನ (rare faction. R) ವಲಯವನ್ನುಂಟು ಮಾಡುತ್ತದೆ.

ಕಂಪಿಸುವ ವಸ್ತುವು ವೇಗವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಿದಾಗ ಗಾಳಿಯಲ್ಲಿ ಸಂಪೀಡನ ಮತ್ತು ವಿಧಳನಗಳ ಸರಣಿಯು ಏರ್ಪಡುತ್ತದೆ. ಇದು ಹಬ್ಬದ ತರಂಗವನ್ನು ಮಾಧ್ಯಮದಲ್ಲಿ ಪ್ರಸಾರವಾಗುವಂತೆ ಮಾಡುತ್ತದೆ.

3. ಶಬ್ದದ ಪ್ರಸರಣೆಗೆ ಮಾಧ್ಯಮದ ಅವಶ್ಯಕತೆ ಇದೆ ಎಂಬುದನ್ನು ಒಂದು ಪ್ರಯೋಗದಿಂದ ತೋರಿಸಿ,

ಶಬ್ದವು ಒಂದು ಯಾಂತ್ರಿಕ ತರಂಗವಾಗಿದ್ದು, ಆದರೆ ಪ್ರಸರಣೆಗೆ ಭೌತ ಮಾಧ್ಯಮಗಳಾದ ಗಾಳಿ, ನೀರು, ಕಬ್ಬಿಣ ಇತ್ಯಾದಿಗಳ ಅವಶ್ಯಕತೆ ಇದೆ, ಶಬ್ದವು ನಿರ್ವಾತದಲ್ಲಿ ಚಲಿಸುವುದಿಲ್ಲ.

ಶಬ್ಧವು ನಿರ್ವಾತದಲ್ಲಿ ಚಲಿಸುವುದಿಲ್ಲ ಎಂದು ತೋರಿಸುವ ಪ್ರಯೋಗ:

ಒಂದು ವಿದ್ಯುತ್‌ ಕರೆಗಂಟೆ ಮತ್ತು ವಾಯುಬಂಧ ಗಾಜಿನ ಫಂಟಾ ಪಾತ್ರೆಯನ್ನು ತೆಗೆದುಕೊಳ್ಳುವುದು. ವಿದ್ಯುತ್‌ ಕರೆಗಂಟೆಯನ್ನು ವಾಯುಬಂಧ ಗಾಜಿನ ಘಂಟಾ ಪಾತ್ತೆಯೊಳಗೆ ಜೋಡಿಸಿ, ಫಂಟಾ ಪಾತ್ರೆಯನ್ನು ನಿರ್ವಾತರೇಚಕಕ್ಕೆ ಸಂಪರ್ಕಿಸುವುದು,

ಕರೆಗಂಟೆಯ ಸ್ವಿಚ್ಛನ್ನು ಒತ್ತಿದಾಗ ಅದರ ಶಬ್ದವು ನಮಗೆ ಕೇಳಿಸುತ್ತದೆ.

ನಿರ್ವಾತರೇಚಕದ ಸಹಾಯದಿಂದ ಪಾತ್ರೆಯೊಳಗಿನ ಗಾಳಿಯನ್ನು ಕ್ರಮೇಣವಾಗಿ ಹೊರತೆಗೆಯುತ್ತಾ ಹೋದರೆ ಕರೆಘಂಟೆ ಬಡಿಯುತ್ತಿದ್ದರೂ ನಾವು ಕೇಳುವ ಶಬ್ದವು ಅಸ್ಪಷ್ಟವಾಗುತ್ತಾ (ದುರ್ಬಲಗೊಳ್ಳುತ್ತಾ) ಹೋಗುತ್ತದೆ.

ಸ್ವಲ್ಪ ಸಮಯದ ನಂತರ ಘಂಟಾಪಾತ್ರೆಯೊಳಗೆ ಸ್ವಲ್ಪ ಗಾಳಿ ಇದ್ದರೆ,ಆತೀ ದುರ್ಬಲವಾದ ಶಬ್ದವು ಕೇಳಿಸುತ್ತದೆ. ಗಾಳಿಯನ್ನು ಸಂಪೂರ್ಣವಾಗಿ ಹೊರತೆಗೆದರೆ ಕರೆಗಂಟೆಯ ಧ್ವನಿ ಕೇಳಿಸುವುದಿಲ್ಲ.

ತೀರ್ಮಾನ: ನಿರ್ವಾತದಲ್ಲಿ ಶಬ್ದವು ಪ್ರಸಾರವಾಗುವುದಿಲ್ಲ. ಶಬ್ದದ ಪಸರಣೆಗೆ ಮಾಧ್ಯಮದ ಅವಶ್ಯಕತೆ ಇದ

4. ಶಬ್ದದ ತರಂಗವನ್ನು ನೀಳ ತರಂಗ ಎನ್ನಲು ಕಾರಣವೇನು?

ಒಂದು ಮಾಧ್ಯಮದಲ್ಲಿ ಶಬ್ಬವು ಸಂಪೀಡನಗಳು ಮತ್ತು ವಿರಳನಗಳ ಸರಣಿಯೊಂದಿಗೆ ಮಾಧ್ಯಮದ ಕಣಗಳ ಶೋಭೆಯು ಪ್ರಸಾರವಾಗುವ ದಿಕ್ಕಿಗೆ ಸಮಾಂತರ ದಿಕ್ಕಿನಲ್ಲಿ ಚಲಿಸುವ ತರಂಗಗಳನ್ನು ‘ನೀಳ ತರಂಗ’ಗಳೆಂದು ಕರೆಯುವರು.

ಶಬ್ದದ ತರಂಗಗಳಲ್ಲಿ ಮಾಧ್ಯಮದ ಕಣಗಳು ಶೋಭೆಯು ಪ್ರಸಾರವಾಗುವ ದಿಕ್ಕಿಗೆ ಸಮಾಂತರ ದಿಕ್ಕಿನಲ್ಲಿ ಚಲಿಸುತ್ತವೆ. ಈ ಕಣಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವುದಿಲ್ಲ. ಆದರೆ ಅವು ತಮ್ಮ ನಿಶ್ಚಲ ಸ್ಥಿತಿಯಿಂದ ಹಿಂದಕ್ಕೂ ಮುಂದಕ್ಕೂ ಆಂದೋಲನಗೊಳ್ಳುತ್ತವೆ. ಹೀಗೆ ಶಬ್ದದ ತರಂಗಗಳು ಪ್ರಸಾರವಾಗುತ್ತವೆ. ಆದ್ದರಿಂದ ಶಬ್ದದ ತರಂಗಗಳು ನೀಳತರಂಗಗಳಾಗಿವೆ.

5. ಕತ್ತಲ ಕೋಣೆಯೊಂದರಲ್ಲಿನ ಗುಂಪಿನಲ್ಲಿ ನಿಮ್ಮ ಸ್ನೇಹಿತನ ಶಬ್ದವನ್ನು ಗುರುತಿಸಲು ಶಬ್ದದ ಯಾವ ಗುಣಲಕ್ಷಣವು ನಿಮಗೆ ಸಹಾಯ ಮಾಡುತ್ತದೆ?

ಕತ್ತಲ ಕೋಣೆಯೊಂದರಲ್ಲಿನ ಗುಂಪಿನಲ್ಲಿ ನಮ್ಮ ಸ್ನೇಹಿತನ ಶಬ್ದವನ್ನು ಗುರುತಿಸಲು ಪಬ್ದದ ಸ್ಥಾಯಿ (pitch) ಮತ್ತು ಶಾರತ್ವ (loudness) ಗುಣಲಕ್ಷಣವು ನಮಗೆ ಸಹಾಯ ಮಾಡುತ್ತದೆ.

6. ಮಿಂಚು ಮತ್ತು ಗುಡುಗು ಏಕಕಾಲದಲ್ಲಿ ಸಂಭವಿಸಿದರೂ, ಮಿಂಚು ಕಾಣಿಸಿದ ಸ್ವಲ್ಪ ಸಮಯದ ನಂತರ ಗುಡುಗಿನ ಶಬ್ದ ಕೇಳಿಸುತ್ತದೆ. ಏಕೆ?

ಈ ಶಬ್ದದ ಜನವು ಬೆಳಕಿನ ಜವಕ್ಕಿಂತ ಕಡಿಮ ಇದೆ. ಆದುದರಿಂದ ಮಿಂಚು ಮತ್ತು ಗುಡುಗು ಏಕಕಾಲದಲ್ಲಿ ಸಂಭವಿಸಿದರೂ, ಮಿಂಚು ಕಾಣಿಸಿದ ಸ್ವಲ್ಪ ಸಮಯದ ನಂತರ ಗುಡುಗಿನ ಶಬ್ದ ಕೇಳಿಸುತ್ತದೆ.

7. ಒಬ್ಬ ಮನುಷ್ಯನ ಶ್ರವಣ ವ್ಯಾಪ್ತಿ 2017 ನಿಂದ 20KHz ಗಾಳಿಯಲ್ಲಿ ಈ ಎರಡು ಆವೃತ್ತಿಗಳಿಗನುಗುಣವಾಗಿ ಶಬ್ದ ತರಂಗಗಳ ತರಂಗದೂರಗಳೆಷ್ಟು?

8. ಇಬ್ಬರು ಮಕ್ಕಳು ಅಲ್ಯೂಮಿನಿಯಂ ಕಂಬಿಯ ಎರಡೂ ತುದಿಗಳಲ್ಲಿದ್ದಾರೆ. ಒಬ್ಬನು ಕಲ್ಲಿನಿಂದ ಒಂದು ತುದಿಯನ್ನು ಬಡಿದಿದ್ದಾನೆ. ಇನ್ನೊಬ್ಬನ ಕಿವಿಯನ್ನು ತಲುಪುವ ಶಬ್ದದ ತರಂಗಗಳು ಗಾಳಿಯಲ್ಲಿ ಮತ್ತು ಅಲ್ಯೂಮಿನಿಯಂ ಕಂಬಿಯಲ್ಲಿ ಚಲಿಸಲು ತೆಗೆದುಕೊಳ್ಳುವ ಕಾಲಗಳ ಅನುಪಾತ ಕಂಡು ಹಿಡಿಯಿರಿ.

9. ಶಬ್ದದ ಆಕರದ ಆವೃತ್ತಿ 100Hz ಇದು ಒಂದು ನಿಮಿಷದಲ್ಲಿ ಎಷ್ಟು ಬಾರಿ ಕಂಪಿಸುತ್ತದೆ?

ಪರಿಹಾರ :


10.ಶಬ್ದವು ಬೆಳಕಿನ ಪ್ರತಿಫಲನದ ನಿಯಮಗಳನ್ನೇ ಅನುಸರಿಸುತ್ತದೆಯೇ? ವಿವರಿಸಿ.

ಬೆಳಕಿನ ಪ್ರತಿಫಲನದಂತೆ ಶಬ್ದವು ಘನ ಅಥವಾ ದ್ರವದ ಮೆಲ್ಕೆಯಲ್ಲಿ ಪ್ರತಿಫಲಿಸುತ್ತದೆ. ಶಬ್ದವು ಬೆಳಕಿನ ಪ್ರತಿಫಲನದ ನಿಯಮಗಳನ್ನೇ ಅನುಸರಿಸುತ್ತದೆ.

ಈ ಶಬ್ದವು ಪತನವಾಗುವ ದಿಕ್ಕು ಮತ್ತು ಪ್ರತಿಫಲಿಸುವ ದಿಕ್ಕು ಇವು ಪ್ರತಿಫಲಿಸುವ ಮೇಲ್ಮಗೆ ಎಳೆದ ಲಂಬದೊಂದಿಗೆ

ಪತನಬಿಂದುವಿನಲ್ಲಿ ಸಮನಾದ ಕೋನಗಳನ್ನು ಉಂಟುಮಾಡುತ್ತವೆ ಮತ್ತು ಇವು ಮೂರು ಒಂದೇ ಸಮತಲದಲ್ಲಿರುತ್ತವೆ. ಈ ಶಬ್ದದ ತರಂಗಗಳ ಪ್ರತಿಫಲಿಸುವಿಕೆಗೆ ನುಣುಪಾದ ಅಥವಾ ಒರಟಾಗಿರಬಹುದಾದ ಬೃಹತ್ ಗಾತ್ರದ ತಡೆಯೊಂದರ ಆವಶ್ಯಕತೆ ಇದೆ.

11.ಒಂದು ದೂರದ ವಸ್ತುವಿನಿಂದ ಶಬ್ದವು ಪ್ರತಿಫಲಿಸಿದರೆ, ಪ್ರತಿಧ್ವನಿ ಉತ್ಪತ್ತಿಯಾಗುತ್ತದೆ. ಪ್ರತಿಫಲಿಸಿದ ಮೇಲ್ಮ, ಮತ್ತು ಶಬ್ದವು ಉತ್ಪತ್ತಿಯಾದ ಆಕರಗಳ ನಡುವಿನ ಅಂತರ ಸ್ಥಿರವಾಗಿದೆ ಎಂದು ಭಾವಿಸಿ, ಹೆಚ್ಚು ಉಷ್ಣಾಂಶವಿರುವ ದಿನದಂದು ನೀವು ಪ್ರತಿಧ್ವನಿಯನ್ನು ಕೇಳುವಿರಾ?

  • ಪ್ರತಿಧ್ವನಿ ಕೇಳಬೇಕಾದರೆ ಮೂಲಧ್ವನಿ ಮತ್ತು ಪ್ರತಿಧ್ವನಿಗಳ ನಡುವಿನ ಕಾಲಾಂತರವು 0.1 ಸೆಕೆಂಡ್ ಆಗಿರಬೇಕಾಗುತ್ತದೆ
  • ಶಬ್ದದ ಸಂವೇದನೆಯು ನಮ್ಮ ಮೆದುಳಿನಲ್ಲಿ 0.1 ಸೆಕೆಂಡ್‌ಗಳಷ್ಟು ಕಾಲ ಇರುತ್ತದೆ.
  • ಒಂದು ಮಾಧ್ಯಮದಲ್ಲಿ ಶಬ್ದದ ಜವವು ಮಾಧ್ಯಮದ ತಾಪವನ್ನು ಅವಲಂಬಿಸಿರುತ್ತದೆ.
  • ಯಾವುದೇ ಮಾಧ್ಯಮದಲ್ಲಿ ತಾಪವು ಹೆಚ್ಚಿದಂತೆಲ್ಲಾ ಶಬ್ದದ ಜವವು ಹೆಚ್ಚಾಗುತ್ತದೆ. * ಹೆಚ್ಚು ಉಷ್ಣಾಂಶವಿರುವ ದಿನದಂದು ತಾಪವು ಹೆಚ್ಚಿದಂತೆಲ್ಲಾ ಶಬ್ದದ ಜವವು ಹೆಚ್ಚಾಗುತ್ತದೆ. ಮೂಲಧ್ವನಿ ಮತ್ತು
  • ಪ್ರತಿಧ್ವನಿಗಳ ನಡುವಿನ ಕಾಲಾಂತರವು 0.1 ಸೆಕೆಂಡ್‌ಗಿಂತ ಕಡಿಮೆಯಾದರೆ ಪ್ರತಿಧ್ವನಿಯನ್ನು ಕೇಳುವುದಿಲ್ಲ.

12.ಶಬ್ದ ತರಂಗಗಳ ಪ್ರತಿಫಲನದ ಎರಡು ದೈನಂದಿನ ಅನ್ವಯಗಳನ್ನು ತಿಳಿಸಿ,

ಸ್ಟೆತೋಸ್ಕೋಪ್ ಎಂಬುದು ವೈದ್ಯಕೀಯ ಸಾಧನವಾಗಿದ್ದು ಅದನ್ನು ಸಾಮಾನ್ಯವಾಗಿ ಹೃದಯ ಅಥವಾ ಶ್ವಾಸಕೋಶದ ಶಬ್ದವನ್ನು ಕೇಳಲು ಉಪಯೋಗಿಸಲಾಗುತ್ತದೆ. ಸ್ಟೆತೋಸ್ಕೋಪ್‌ನಲ್ಲಿ ರೋಗಿಯ ಎದೆಬಡಿತವು ಗುಣಿತ ಪ್ರತಿಫಲನದಿಂದ ವೈದ್ಯರ ಕಿವಿಯನ್ನು ತಲುಪುತ್ತದೆ.

ಸಾಮಾನ್ಯವಾಗಿ ಸಂಗೀತ ಕಛೇರಿ ಭವನಗಳು, ಸಮ್ಮೇಳನ ಭವನಗಳು, ಮತ್ತು ಸಿನಿಮಾ ಭವನಗಳಲ್ಲಿ ಶಬ್ದವು ಪ್ರತಿಫಲನದ ನಂತರ ಎಲ್ಲಾ ಮೂಲೆಗಳಿಗೆ ತಲುಪುವಂತೆ ಮೇಲ್ಲಾವಣಿಯನ್ನು ವಕ್ತಾಕಾರದಲ್ಲಿ ಕಟ್ಟಲಾಗುತ್ತದೆ.

13.600m ಎತ್ತರವಿರುವ ಒಂದು ಗೋಪುರದ ಮೇಲಿನಿಂದ ಒಂದು ಕಲ್ಲನ್ನು ಅದರ ಕೆಳಭಾಗದಲ್ಲಿನ ಕೊಳದ ನೀರಿನಲ್ಲಿ ಹಾಕಿ, ನೀರು ಚಿಮ್ಮುವ ಶಬ್ದ (Splash) ಮೇಲ್ಬಾಗದ ತುದಿಯಲ್ಲಿ ಯಾವಾಗ ಕೇಳುತ್ತದೆ?


14.ಶಬ್ದದ ತರಂಗವು 339m/s ಜನದಲ್ಲಿ ಚಲಿಸುತ್ತದೆ. ಅದರ ತರಂಗ ದೂರ 1.5cm ಆದರೆ ಆವೃತ್ತಿ ಎಷ್ಟು?, ಅದು ಶ್ರವಣ ಶಬ್ದವೇ?,

15.ಅನುರಣನ ಎಂದರೇನು? ಅದನ್ನು ಹೇಗೆ ಕಡಿಮೆಗೊಳಿಸಬಹುದು?

ಸತತ ಪ್ರತಿಫಲನದಿಂದ ಉಂಟಾದ ಪುರಾವರ್ತಿತ ಶಬ್ದವನ್ನು ಅನುರಣನ ಎಂದು ಕರೆಯುತ್ತಾರೆ.

ಉದಾಹರಣೆಗೆ, ಒಂದು ದೊಡ್ಡ ಪಡಸಾಲೆಯಲ್ಲಿ ಉಂಟಾದ ಶಬ್ದವು ಆದರ ಗೋಡೆಗಳಿಂದ ಮೇಲಿಂದ ಮೇಲೆ ಪ್ರತಿಫಲನಗೊಂಡು ಕೇಳಲು ಸಾಧ್ಯವಾಗದಿರುವಷ್ಟರವರೆಗೆ ಕಡಿಮೆಯಾಗುತ್ತಾ ಮುಂದುವರೆಯುತ್ತದೆ. ಸತತ ಪ್ರತಿಫಲನದಿಂದ ಉಂಟಾದ ಈ ಪುರಾವರ್ತಿತ ಶಬ್ದವನ್ನು ಅನುರಣನೆ ಎನ್ನುವರು ಈ ಒಂದು ಸಭಾಂಗಣದಲ್ಲಿ ಅಥವಾ ಪಡಸಾಲೆಯಲ್ಲಿನ ಹೆಚ್ಚುವರಿ ಅನುರಣನೆಯು ಹೆಚ್ಚು ಅನಪೇಕ್ಷಿತವಾದುದು. ಆದುದರಿಂದ ಇಲ್ಲಿ ಅನುರಣನೆ ಕಡಿಮೆ ಮಾಡಲು ಸಭಾಂಗಣದ ಮೇಲ್ದವಣಿ ಮತ್ತು ಗೋಡೆಗಳನ್ನು ಸಾಮಾನ್ಯವಾಗಿಶಬ್ದ ಗ್ರಹಿಸುವ ವಸ್ತುಗಳಾದ ಸಂಕುಚಿತ ದೃಗ್ನಾರು ಹಲಗೆ |fibre board] ಒರಟಾದ ಪ್ಲಾಸ್ಟರ್‌ಗಳಿಂದ ಮುಚ್ಚಿರುತ್ತಾರೆ.

16.ಶಬ್ದದ ತಾರತ್ವ ಎಂದರೇನು? ಇದು ಯಾವ ಅಂಶಗಳ ಮೇಲೆ ಅವಲಂಬಿಸಿದೆ?

ಶಬ್ದದ ತಾರತ್ವ (loudness)ವು ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತದೆ.

ಶಬ್ದದ ತಾರತ್ವ (loudness)ವು ಪಾರದ (amplitude) ಮೇಲೆ ಅವಲಂಬಿಸಿದೆ.

ಶಬ್ದವು ಆಕರದಿಂದ ದೂರ ಹೋದಂತೆಲ್ಲಾ ಆದರ ಪಾರ ಮತ್ತು ತಾರಪ್ಪ ಕಡಿಮೆಯಾಗುತ್ತವೆ.

17.ಬಾವಲಿಗಳು ಶ್ರವಣಾತೀತ ತರಂಗಗಳನ್ನು ಉಪಯೋಗಿಸಿ ಹೇಗೆ ತಮ್ಮ ಆಹಾರ ಬೇಟೆಯನ್ನು ಹಿಡಿಯುತ್ತವೆ.?

ಬಾವಲಿಗಳು ಶ್ರವಣಾತೀತ ತರಂಗಗಳನ್ನು ಉತ್ಸರ್ಜಿಸಿ ಪ್ರತಿಫಲನಗಳ ಪತ್ತೆಯಿಂದ ರಾತ್ರಿ ವೇಳೆ ಹಾರುತ್ತ ತಮ್ಮ ಆಹಾರವನ್ನು ಹುಡುಕುತ್ತವೆ, ಹೆಚ್ಚು ಸ್ಥಾಯಿ (pitch) ಯುದ್ಧ ಶ್ರವಣಾತೀಶ ತರಂಗಗಳು ಅಡತಡೆ ಅಥವಾ ಬೇಟೆಯಿಂದ ಪ್ರತಿಫಲಿಸಿ, ಬಾವಲಿಗಳ ಕಿವಿಯನ್ನು ತಲುಪುತ್ತವೆ, ಪ್ರತಿಫಲನಗಳ ಸ್ವಭಾವವು ಬಾವಲಿಗೆ ಅಡತಡೆಯ ಆಥವಾ ಬೇಟೆಯ ಸ್ಥಾನ, ವಿಧಗಳನ್ನು ತಿಳಿಸುತ್ತದೆ.

18.ಸ್ವಚ್ಛಗೊಳಿಸುವಿಕೆಯಲ್ಲಿ ಶ್ರವಣಾತೀತ ತರಂಗಳನ್ನು ಹೇಗೆ ಉಪಯೋಗಿಸಲಾಗುವುದು?

ಶ್ರವಣಾತೀತ ಶಬ್ದವನ್ನು ಸಾಮಾನ್ಯವಾಗಿ ಸ್ವಚ್ಛಗೊಳಿಸುವ ಭಾಗದಲ್ಲಿ ತಲುಪಲಾಗದ ಸ್ಥಳಗಳನ್ನು ಸ್ವಚ್ಛಗೊಳಿಸಲು ಉಪಯೋಗಿಸಲಾಗುತ್ತದೆ.

ಉದಾಹರಣೆಗೆ, ಸುರಳಿಯಾಕಾರದ ಕೊಳವೆ, ನಿರ್ದಿಷ್ಟ ಆಕಾರವಿಲ್ಲದ ಭಾಗಗಳು, ವಿದ್ಯುತ್ ಘಟಕಗಳು ಇತ್ಯಾದಿ, ಸ್ವಚ್ಛಗೊಳಿಸಬೇಕಾದ ವಸ್ತುಗಳನ್ನು ದ್ರಾವಣದಲ್ಲಿಟ್ಟು ಅದರಲ್ಲಿ ಶ್ರವಣಾತೀತ ತರಂಗಗಳನ್ನು ಹಾಯಿಸಬೇಕು. ಈ ತರಂಗಗಳಿಗೆ ಹೆಚ್ಚು ಆವೃತ್ತಿ ಇರುವುದರಿಂದ ಆ ವಸ್ತುವಿನ ಭಾಗಕ್ಕೆ ಆಂಟಿರುವ ಧೂಳಿನ ಕಣಗಳು, ಗ್ರೀಸ್ ಮತ್ತು ಕೊಳೆಯನ್ನು ಬೇರ್ಪಡಿಸುತ್ತವೆ. ಈ ರೀತಿ ವಸ್ತುಗಳು ಸಂಪೂರ್ಣ ಸ್ವಚ್ಛಗೊಳ್ಳುತ್ತವೆ.

19.ಸೋನಾರ್‌ನ ಕಾರ್ಯ ವಿಧಾನ ಮತ್ತು ಅನ್ವಯಗಳನ್ನು ವಿವರಿಸಿ,

  • ಸೋನಾ‌ರ್ ಸಾಧನವು ಪ್ರೇಷಕ (tramsmitter) ಮತ್ತು ಪತ್ತೇಕಾರಿ (detector) ಎಂಬ ಎರಡು ಭಾಗಗಳನ್ನೊಳಗೊಂಡಿದೆ
  • ಪ್ರೇಷಕವು ಶ್ರವಣಾತೀತ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ಪ್ರಸರಿಸುತ್ತದೆ.
  • ಪ್ರವೇಶಾತೀತ ತರಂಗಗಳು ಯಾವುದಾದರೂ ವಸ್ತುವಿಗೆ ತಾಕುವವರೆಗೂ ನೀರಿನಲ್ಲಿ ಚಲಿಸಿ ಪ್ರತಿಫಲನಗೊಂಡು ಸೋನಾರ್‌ಗೆ ಹಿಂದಿರುಗುತ್ತವೆ.
  • ಪತ್ತೇಕಾರಿಯು ಪ್ರತಿಫಲನಗೊಂಡು ಬಂದ ಶ್ರವಣಾತೀತ ತರಂಗಗಳನ್ನು ಗ್ರಹಿಸಿ, ಅವುಗಳನ್ನು ವಿದ್ಯುತ್
  • ಸಂಜ್ಞೆಗಳಾಗಿ ಮಾರ್ಪಡಿಸುತ್ತದೆ ಮತ್ತು ಅರ್ಥೈಸುತ್ತದೆ.
  • ಸೋನಾ‌ ತಂತ್ರವನ್ನು ಸಮುದ್ರದ ಆಳ ಮತ್ತು ನೀರಿನಲ್ಲಿ ತಳದಲ್ಲಿರುವ ಬೆಟ್ಟ, ಕಣಿವೆಗಳು, ಜಲಾಂತರ್ಗಾಮಿ ನೌಕೆ, ಮಂಜುಗಡ್ಡೆ ಶಿಖರ, ಮುಳುಗಿದ ಹಡಗುಗಳು ಇತ್ಯಾದಿಗಳನ್ನು ಪತ್ತೆ ಹಚ್ಚಲು ಬಳಸುತ್ತಾರೆ.

20.ಶ್ರವಣಾತೀತ ತರಂಗಗಳನ್ನು ಉಪಯೋಗಿಸಿಕೊಂಡು ಲೋಹದ ಭಟ್ಟಿಯಲ್ಲಿನ ದೋಷಗಳನ್ನು ಹೇಗೆ ಕಂಡುಹಿಡಿಯಬಹುದು?

ಲೋಹದ ಅಚ್ಚುಗಳಲ್ಲಿನ ಬಿರುಕು ಮತ್ತು ನ್ಯೂನತೆಗಳನ್ನು ಪತ್ತೆ ಹಚ್ಚಲು ಪ್ರವಣಾತೀತ ಶಬ್ದಗಳನ್ನು ಬಳಸಲಾಗುತ್ತದೆ. ಈ ರೀತಿಯ ಲೋಪದ ಅಚ್ಚುಗಳನ್ನು ಸಾಮಾನ್ಯವಾಗಿ ಬೃಹತ್‌ ನಿರ್ಮಾಣದ ರಚನೆಗಳಾದ ಕಟ್ಟಡಗಳು, ಸಹುವೆಗಳು, ಯಂತ್ರಗಳು ಮತ್ತು ವೈಜ್ಞಾನಿಕ ಉಪಕರಣಗಳಲ್ಲಿ ಉಪಯೋಗಿಸಲಾಗುತ್ತದೆ. ಈ ಅಚ್ಚುಗಳಲ್ಲಿನ ಬಿರುಕುಗಳು ಮತ್ತು ರಂಧ್ರಗಳು ಹೊರಗಿನಿಂದ ಕಾಣುವುದಿಲ್ಲ, ಇವು ರಚನಾ ಶಕ್ತಿಯನ್ನು ಕುಂದಿಸುತ್ತವೆ. ಈ ಅಚ್ಚುಗಳ ಮೂಲಕ ಶ್ರವಣಾತೀತ ತರಂಗಗಳನ್ನು ಹಾಯಿಸಿ ಪತ್ತೆಕಾರಿ (detectors) ಸಹಾಯದಿಂದ ತರಂಗಗಳನ್ನು ಸ್ವೀಕರಿಸಲಾಗುತ್ತದೆ. ಆತೀ ಸಣ್ಣ ನ್ಯೂನತೆಯಿದ್ದರೂ, ಶ್ರವಣಾತೀತ ತರಂಗಗಳು ಪ್ರತಿಫಲಿಸುವುದರಿಂದ ಆ ಬಿರುಕು ಅಥವಾ ನ್ಯೂನತೆ ಇರುವಿಕೆ ಪತ್ತೆ ಹಚ್ಚುತ್ತವೆ.

ಲೋಹದ ಗಟ್ಟಿಯೊಳಗಿನ ದೋಷಯುಕ್ತ ಸ್ಥಳದಿಂದ ಶ್ರವಣಾತೀತ ತರಂಗಗಳು ಪ್ರತಿಫಲಿಸಿರುವುದು,

21.ಮಾನವನ ಕಿವಿಯು ಹೇಗೆ ಕಾರ್ಯನಿರ್ವಹಿಸುತ್ತದೆ?

  • ಹೊರ ಕಿವಿಯನ್ನು ಕಿವಿಯ ಹಾಲೆ (pinna) ಎಂದು ಕರೆಯುತ್ತಾರೆ.
  • ಈ ಕಿವಿಯ ಹಾಲೆಯು ಪರಿಸರದಲ್ಲಿನ ಶಬ್ದಗಳನ್ನು ಸಂಗ್ರಹಿಸುತ್ತದೆ. ಸಂಗ್ರಹಿಸಿದ ಶಬ್ದವು ಶ್ರವಣನಾಳದ ಮೂಲಕ ಹಾದು ಹೋಗುತ್ತದೆ.
  • ಶ್ರವಣ ನಾಳದ ಕೊನೆಯಲ್ಲಿನ ತೆಳುವಾದ ಪದರವನ್ನು ಕಿವಿಯ ತಮಟೆ ಅಥವಾ ಕಿವಿಯ ಮೊರೆ (Iympanic membrane) ಎಂದು ಕರೆಯುತ್ತಾರೆ,
  • ಈ ಮಾಧ್ಯಮದ ಸಂಪೀಡನವು ಕಿವಿಯ ತಮಟೆಯನ್ನು ತಲುಪಿದಾಗ ಆದರ ಹೊರ ಪದರದ ಮೇಲೆ ಒತ್ತಡ ಹೆಚ್ಚಾಗುತ್ತದೆ ಮತ್ತು ಕಿವಿಯ ತಮಟೆಯನ್ನು ಆಂತರಿಕವಾಗಿ ತಳ್ಳುತ್ತದೆ. ಹಾಗೆಯೇ ವಿರಳನಗಳು ಪ್ರವೇಶಿಸಿದಾಗ ಕಿವಿಯ ತಮಟೆಯನ್ನು ಬಾಹ್ಯವಾಗಿ ತಳ್ಳುತ್ತವೆ. ಈ ರೀತಿಯಾಗಿ ಕಿವಿಯ ತಮಟೆಯು ಕಂಪಿಸುತ್ತದೆ.
  • ಮಧ್ಯಕಿವಿಯಲ್ಲಿ ಈ ಕಂಪನಗಳು ಮೂರು ಮೂಳೆಗಳಿಂದ (ಸುತ್ತಿಗೆ, ಆಡಿಗಲ್ಲು ಮತ್ತು ರಿಕಾಪು) ವರ್ಧನೆಗೊಳ್ಳುತ್ತವೆ.
  • ಈ ಶಬ್ದದ ತರಂಗದಿಂದ ವರ್ಧನೆಗೊಳಿಸಿದ ಒತ್ತಡ ವ್ಯತ್ಯಾಸಗಳನ್ನು ಮಧ್ಯಕಿವಿಯು ಒಳಕಿವಿಗೆ ಕಳುಹಿಸುತ್ತದೆ. ಒಳಕಿವಿಯಲ್ಲಿ ಕಾಫಿಯಾದಿಂದ ಒತ್ತಡದ ವ್ಯತ್ಯಾಸಗಳು ವಿದ್ಯುತ್‌ ಸಂಕೇತಗಳಾಗಿ ಬದಲಾಗುತ್ತವೆ. ಈ ವಿದ್ಯುತ್ ಸಂಕೇತಗಳನ್ನು ಪ್ರವಣ ನರಗಳ ಮೂಲಕ ಮದುಳಿಗೆ ಕಳುಹಿಸಲಾಗುತ್ತದೆ. ಮೆದುಳು ಇವುಗಳನ್ನು ಶಬ್ದವಾಗಿ ಅರ್ಥೈಸುತ್ತದೆ.

FAQ

ಶಬ್ದ ಎಂದರೇನು? ಅದು ಹೇಗೆ ಉತ್ಪತ್ತಿಯಾಗುತ್ತದೆ?

ವಸ್ತುಗಳ ಕಂಪನವನ್ನು ಶಬ್ದ ಎನ್ನುವರು. ವಸ್ತುವಿನ ಕಂಪನವು ಮಾಧ್ಯಮದ ಕಣಗಳನ್ನು ಕಂಪಿಸುವಂತೆ ಮಾಡಿದಾಗ, ಅವು ತನ್ನ ಪಕ್ಕದ ಕಣಗಳನ್ನು ಕಂಪಿಸುವಂತೆ ಮಾಡುತ್ತವೆ.

ಅನುರಣನ ಎಂದರೇನು?

ಸತತ ಪ್ರತಿಫಲನದಿಂದ ಉಂಟಾದ ಪುರಾವರ್ತಿತ ಶಬ್ದವನ್ನು ಅನುರಣನ ಎಂದು ಕರೆಯುತ್ತಾರೆ.

ಇತರೆ ವಿಷಯಗಳು:

9ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh