9ನೇ ತರಗತಿ ಗುರುತ್ವ ವಿಜ್ಞಾನ ನೋಟ್ಸ್‌ | 9th Standard Science Chapter 10 Notes in Kannada Medium

9ನೇ ತರಗತಿ ಗುರುತ್ವ ವಿಜ್ಞಾನ ನೋಟ್ಸ್‌ ಪ್ರಶ್ನೋತ್ತರ, 9th Standard Science Chapter 10 Notes Question Answer Extract Mcq Pdf in Kannada Medium 2023 Kseeb Solutions For Class 9 Science Chapter 10 Notes in Kannada Gurutva Question answer in Kannada Notes Pdf

 

9th Standard Science Chapter 10 Notes

ಆತ್ಮೀಯ ವಿದ್ಯಾರ್ಥಿಗಳೇ…. ಈ ಪೋಸ್ಟ್ ನಲ್ಲಿ ನಾವು 9ನೇ ತರಗತಿ ವಿದ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು 9ನೇ ತರಗತಿ ಗುರುತ್ವ ವಿಜ್ಞಾನ ನೋಟ್ಸ್ ನ್ನು ನೀಡಿರುತ್ತೇವೆ, ಈ ಪಾಠದ ಎಲ್ಲಾ ಪ್ರಶ್ನೋತ್ತರಗಳನ್ನು ಅತೀ ಶಿಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು ಈ ಪಾಠದ ಎಲ್ಲಾ ಪ್ರಶ್ನೋತ್ತರಗಳನ್ನು ವೀಕ್ಷಿಸಬಹುದು ಹಾಗೂ ಡೌನ್ಲೋಡ್‌ ಮಾಡಬಹುದು,

9th Class Science Chapter 10 Notes in Kannada

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ವಿಶ್ವವ್ಯಾಪ್ತಿ ಗುತುತ್ವ ನಿಯಮವನ್ನು ನಿರೂಪಿಸಿ.

ಗುರುತ್ವ ನಿಯಮದ ಪ್ರಕಾರ, ಎರಡು ವಸ್ತುಗಳ ನಡುವಿನ ಆಕರ್ಷಣಾ ಬಲವು ಆ ವಸ್ತುಗಳ ರಾಶಿಗಳ ಗುಣಲಬ್ದಕ್ಕೆ ನೇರ ಅನುಪಾತದಲ್ಲಿಯೂ ಮತ್ತು ಅವುಗಳ ನಡುವಿನ ದೂರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿಯು ಇರುತ್ತದೆ.M ಮತ್ತು m ಎರಡು ವಸ್ತುಗಳ ರಾಶಿ ಎಂದಾದರೆ ಅವುಗಳ ನಡುವಿನ ಅಂತರ 5 ಎಂದಾದರೆ ಆ ಎರಡು ವಸ್ತುಗಳ ನಡುವಿನ ಆಕರ್ಷಣ ಬಲವು.

F = G M.m / d²

ಇಲ್ಲಿ G ಎಂಬುದು ವಿಶ್ವವ್ಯಾಪಿ ಗುರುತ್ವ ಸ್ಥಿರಾಂಕವಾಗಿದ್ದು ಇದರ ಬೆಲೆ G=6.673X10- ¹¹ Nm ²kg ²

ಪ್ರಶ್ನೆಗಳು

1. ಸ್ವತಂತ್ರ ಪಿತನ ಎಂದರೇನು ?

ಎತ್ತರದಿಂದ ವಸ್ತುಗಳು ಕೆಳಗೆ ಬೀಳುವಾಗ ಭೂಮಿಯ ಗುರುತ್ವಾಕರ್ಷಣೆ ಬಲದಿಂದ ಅವು ಭೂಮಿಯ ಕಡೆಗೆ ಸ್ವತಂತ್ರವಾಗಿ ಬೀಳುತ್ತವೋ ಅದನ್ನು ಸ್ವತಂತ್ರ ಪತನ ಎನ್ನುವರು .

2. ಗುರುತ್ವ ವೇಗೋತ್ಕರ್ಷ ಎಂದರೇನು ? ಎತ್ತರದಿಂದ ಕೆಳಗೆ ಬೀಳುವ ಯಾವುದೇ ವಸ್ತುವು ಭೂಮಿಯ ಗುರುತ್ವಾಕರ್ಷಣ ಬಲದಿಂದ ವೇಗದ ಪರಿಮಾಣದಲ್ಲಿ ಬದಲಾವಣೆ ಹೊಂದಿ ವೇಗೋತ್ತರ್ಷವನ್ನು ಪಡೆಯತ್ತವೆ . ಈ ವೇಗೋತ್ಕರ್ಷವನ್ನು ಗುರುತ್ವ ವೇಗೋತ್ಕರ್ಷ ಎನ್ನುವರು . ಇದನ್ನು D ನಿಂದ ಗುರುತಿಸಲಾಗುತ್ತದೆ.

3.ಒಂದು ವಸ್ತುವಿನ ರಾಶಿ ಮತ್ತು ಅದರ ತೂಕ , ಇವುಗಳ ನಡುವಿವನ ವ್ಯತ್ಯಾಸವೇನು ?

ರಾಶಿ :

 • ಒಂದು ವಸ್ತುವಿನಲ್ಲಿರುವ ದ್ರವ್ಯದ ಪರಿಮಾಣವನ್ನು ರಾಶಿ ಎನ್ನುವರು .
 • ರಾಶಿಯು ವಸ್ತುವಿನ ಜಡತ್ವದ ಅಳತೆಯಾಗಿದೆ .
 • ರಾಶಿಯು ಸ್ಥಿರವಾಗಿರುತ್ತದೆ .
 • ರಾಶಿಗೆ ಪರಿಮಾಣ ಮಾತ್ರ ಇರುತ್ತದೆ .
 • ರಾಶಿಯ ಏಕಮಾನ kg

ತೂಕ :

 • ಒಂದು ವಸ್ತುವಿನ ಮೇಲೆ ಭೂಮಿಯ ಆಕರ್ಷಣಾ ಬಲವನ್ನು ಆ ವಸ್ತುವಿನ ತೂಕ ಎನ್ನುವರು .
 • ಒಂದು ವಸ್ತುವಿನ ತೂಕವು ಭೂಮಿಯ ಗುರುತ್ವ ಬಲದ ಅಳತೆಯಾಗಿದೆ .
 • ತೂಕವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ .
 • ತೂಕಕ್ಕೆ ಪರಿಮಾಣ ಮತ್ತು ದಿಕ್ಕು ಎರಡೂ ಇದೆ .
 • ತೂಕದ ಏಕಮಾನ

2. ಚಂದ್ರನ ಮೇಲೆ ಒಂದು ವಸ್ತುವಿನ ತೂಕವು ಭೂಮಿಯ ಮೇಲೆ ಅದರ ತೂಕದ 1/6ರಷ್ಟು ಇರುತ್ತದೆ. ಏಕೆ?

ಭೂಮಿಯ ಮೆಲೆ ಒಂದು ವಸ್ತುವಿನ ತೂಕವು, ಭೂಮಿಯು ಆಕರ್ಷಿಸುವ ಬಲವಾಗಿರುತ್ತದೆ. ಹಾಗೆಯೇ ಚಂದ್ರನ ಮೇಲೆ ಒಂದು ವಸ್ತುವಿನ ತೂಕವು ಆ ವಸ್ತುವನ್ನು ಚಂದ್ರನು ಆಕರ್ಷಿಸುವ ಬಲವಾಗಿದೆ. ಆಕರ್ಷಣಾ ಬಲವು ವಸ್ತುವಿಗೆ ರಾಶಿಗೆ ನೇರ ಅನುಪಾತದಲ್ಲಿರುತ್ತದೆ. ಹೆಚ್ಚಿನ ರಾಶಿಯನ್ನು ಹೊಂದಿರುವ ವಸ್ತುವು ಹೆಚ್ಚಿನ ಆಕರ್ಷಣ ಬಲವನ್ನು ಉಂಟುಮಾಡುತ್ತದೆ. ಚಂದ್ರನ ರಾಶಿಯು ಭೂಮಿಯ ರಾಶಿಯ 1/6 ರಷ್ಟು ಇರುವುದರಿಂದ ಚಂದ್ರನ ಮೇಲೆ ಒಂದು ವಸ್ತುವಿನ ತೂಕವು ಭೂಮಿಯ ಮೇಲೆ ಅದರ ತೂಕದ 1/6 ರಷ್ಟು ಇರುತ್ತದೆ.

3. ಒಂದು ತೆಳುವಾದ ಮತ್ತು ಬಲಿಷ್ಟವಾದ ದಾರದಿಂದ ಮಾಡಲ್ಪಟ್ಟ ಒಂದು ಶಾಲಾ ಬ್ಯಾಗ್‌ ನ ಪಟ್ಟಿಯನ್ನು ಹಿಡಿದುಕೊಳ್ಳುವುದು ಕಷ್ಟಕರ ಏಕೆ?

ಏಕೆಂದರೆ, ಕಡಿಮೆ ವಿತ್ತೀರ್ಣದ ಮೇಲೆ ವರ್ತಿಸುವ ಬಲವು ಹೆಚ್ಚಿನ ಒತ್ತಡವನ್ನು ಹಾಕುತ್ತದೆ.ಶಾಲಾ ಬ್ಯಾಗ್‌ ನ ಪಟ್ಟಿಯು ತೆಳುವಾಗಿರುವುದರಿಂದ ಅದರ ವಿಸ್ತೀರ್ಣ ಕಡಿಮೆ ಇದ್ದು ಭುಜದ ಮೇಲೆ ಹೆಚ್ಚು ಒತ್ತಡವನ್ನು ಉಂಟುಮಾಡಿ ಹಿಡಿದುಕೊಳ್ಳಲು ಕಷ್ಟಕರವಾಗುತ್ತದೆ.

4. ಪ್ಲವನತೆ ಎಂದರೇನು?

ನೀರಿನಲ್ಲಿ ಮುಳುಗಿರುವ ವಸ್ತುವಿನ ಮೇಲೆ ವರ್ತಿಸುವ ಮೇಲ್ಮಖ ಬಲವನ್ನು ಪ್ಲವನತೆ ಅಥವಾ ಪ್ಲವನತಾ ಬಲ ಎನ್ನುವರು.

5. ನೀರಿನ ಮೇಲಿಟ್ಟ ವಸ್ತುವೊಂದು ತೇಲಲು ಅಥವಾ ಮುಳುಗಲು ಕಾರಣವೇನು?

ನೀರಿನ ಮೇಲಿಟ್ಟ ವಸ್ತುವಿನ ಸಾಂದ್ರತೆಯು ನೀರಿನ ಸಾಂದ್ರತೆಗಿಂತ ಹೆಚ್ಚಾಗಿದ್ದರೆ, ಆ ವಸ್ತುವಿನ ಮೇಲೆ ನೀರಿನ ಮೇಲ್ಮುಖ ತಳ್ಳುವಿಕೆಯು ಅದರ ತೂಕಕ್ಕಿಂತ ಕಡಿಮೆ ಆಗುವುದರಿಂದ ವಸ್ತು ಮುಳುಗುತ್ತದೆ.

ನೀರಿನ ಮೇಲಿಟ್ಟ ವಸ್ತುವಿನ ಸಾಂದ್ರತೆಯು ನೀರಿನ ಸಾಂದ್ರತೆಗಿಂತ ಕಡಿಮೆ ಇದ್ದರೆ, ನೀರಿನ ಮೇಲ್ಮುಖ ತಳ್ಳುವಿಕೆಯು ಅದರ ತೂಕಕ್ಕಿಂತ ಹೆಚ್ಚಾಗಿ ವಸ್ತುವು ತೇಲುತ್ತದೆ.

6. ಒಂದು ರಾಶಿ ತೂಗು ಯಂತ್ರದ ಮೇಲೆ ನಿಮ್ಮ ರಾಶಿ 42 ಕಗ ಇರುವುದನ್ನು ಕಾಣುವಿರಿ. ನಿಮ್ಮ ರಾಶಿ 42 kg ಗಿಂತ ಹೆಚ್ಚು ಅಥವಾ ಕಡಿಮೆ ಇದೆಯೇ?

ನಮ್ಮ ರಾಶಿಯನ್ನು ತೂಗು ಯಂತ್ರದಲ್ಲಿ ತೂಗುವಾಗ, ವಸ್ತುವಿನ ಮೇಲೆ ಪ್ಮವನತಾ ಬಲವು ವರ್ತಿಸುವುದರಿಂದ ನಮ್ಮ ರಾಶಿಗಿಂತ ಕಡಿಮೆ ರಾಶಿಯನ್ನು ತೋರಿಸುತ್ತದೆ.

7. ನಿಮ್ಮ ಬಳಿ ತಕ್ಕಡಿಯಲ್ಲಿ ತೂಗಿದ 100kg ರಾಶಿಯಿರುವ ಒಂದು ಹತ್ತಿಯ ಚೀಲ ಮತ್ತು ಒಂದು ಕಬ್ಬಿಣದ ತುಂಡಿದೆ. ವಾಸ್ತವವಾಗಿ ಒಂದು ಇನ್ನೊಂದಕ್ಕಿಂತ ಭಾರವಾಗಿದೆ, ಅವುಗಳಲ್ಲಿ ಯಾವುದು ಭಾರವಾಗಿದೆ ಮತ್ತು ಏಕೆ ಎಂಬುದನ್ನು ಹೇಳುತವಿರಾ?

ಹತ್ತಿಯ ಚೀಲವು ಕಬ್ಬಿಣದ ತುಂಡಿಗಿಂತ ಭಾರವಾಗಿದೆ. ಹತ್ತಿಯ ಚೀಲದ ವಿಸ್ತೀರ್ಣ ವು ಹೆಚ್ಚಾಗಿರುವುದರಿಂದ ಹೆಚ್ಚು ಪ್ಲವನತಾ ಬಲವು ವರ್ತಿಸುತ್ತದೆ. ಅದ್ದರಿಂದ ಹತ್ತಿ ಚೀಲದ ರಾಶಿಯು ನೈಜ ರಾಶಿಗಿಂತ ಕಡಿಮೆ ಆಗುವ ಹಾಗೆ ಮಾಡುತ್ತದೆ. ಈ ಕಾರಣದಿಂದ ಹತ್ತಿಯ ಚೀಲದ ರಾಶಿ ಹಾಗೂ ಕಬ್ಬಿಣದ ತುಂಡಿನ ರಾಶಿಯು ಒಂದೇ ಸಮನಾಗಿರುವಂತೆ ಕಂಡರೂ ಹತ್ತಿ ಚೀಲದ ರಾಶಿಯೇ ಹೆಚ್ಚಗಿರುತ್ತದೆ.

ಅಭ್ಯಾಸಗಳು

1. ಎರಡು ವಸ್ತುಗಳು ನಡುವಿನ ದೂರವನ್ನು ಅರ್ಧದಷ್ಟು ಕಡಿಮೆಗೊಳಿಸಿದಾಗ ಅವುಗಳ ನಡುವಿನ ಗುರುತ್ವ ಬಲವು ಹೇಗೆ ಬದಲಾಗುತ್ತದೆ?

ಆದ್ದರಿಂದ ದೂರವನ್ನು ಅರ್ಧದಷ್ಟು ಕಡಿಮೆಗೊಆಸಿದಾಗ ಮೊದಅಗಿಂತ ನಾಲ್ಕು ಪಟ್ಟು ಹೆಚ್ಚಾಗುತ್ತದೆ .

2 ಗುರುತ್ವ ಬಲವು ಎಲ್ಲಾ ವಸ್ತುಗಳ ಮೇಲೆ ಅವುಗಳ ರಾಶಿಗಳಿಗೆ ಸಮಾನುಪಾತದಲ್ಲಿ ವರ್ತಿಸುತ್ತದೆ . ಹಾಗಿದ್ದರೆ , ಭಾರವಾದ ರಾಶಿಯ ವಸ್ತುವು ಹಗುರವಾದ ವಸ್ತುವಿಗಿಂತ ಬೇಗನೆ ಬೀಳುವುದಿಲ್ಲವೇಕೆ ?

ನಿರ್ವಾತದಲ್ಲಿನ ಮುಕ್ತ ಪತನದಲ್ಲಿ ವಸ್ತುವು ವೇಗೋತ್ಕರ್ಷವನ್ನು ಅನುಭವಿಸುತ್ತವೆ . ಇದನ್ನು ಗುರುತ್ವ ವೇಗೋತ್ಕರ್ಷ ಎನ್ನುವರು . ವಸ್ತುವು ಅನುಭವಿಸುವ ವೇಗೋತ್ಕರ್ಷವು ಅದರ ರಾಶಿಯನ್ನು ಅವಲಂಬಿಸದೇ ಇರುವುದರಿಂದ ಭಾರವಾದ ರಾಶಿಯ ವಸ್ತುವು ಹಗುರವಾದ ವಸ್ತುವಿಗಿಂತ ಬೇಗನೆ ಬೀಳುವುದಿಲ್ಲ .

3. ಭೂಮಿ ಮತ್ತು ಚಂದ್ರ ಒಂದನ್ನೊಂದು ಗುರುತ್ವ ಬಲದಿಂದ ಆಕರ್ಷಿಸುತ್ತವೆ . ಚಂದ್ರನು ಭೂಮಿಯನ್ನು ಆಕರ್ಷಿಸುವ ಬಲಕ್ಕಿಂತ ಹೆಚ್ಚಾಗಿರುವ ಅಥವಾ ಕಡಿಮೆ ಇರುವ ಅಥವಾ ಅಷ್ಟೆ ಇರುವ ಬಲದಿಂದ ಭೂಮಿಯು ಚಂದ್ರನನ್ನು ಆಕರ್ಷಿಸುತ್ತದೆಯೇ ? ಏಕೆ ?

ವಿಶ್ವ ಗುರುತ್ವ ನಿಯಮದ ಪ್ರಕಾರ , ಎರಡು ವಸ್ತುಗಳ ನಡುವೆ ಸಮವಾದ ಆಕರ್ಷಣಾ ಬಲವಿದ್ದು ಅದು ವಿರುದ್ಧ ದಿಕ್ಕಿನಲ್ಲಿರುತ್ತದೆ . ಆದ್ದರಿಂದ ಭೂಮಿಯು ಚಂದ್ರನನ್ನು ಆಕರ್ಷಿಸಿದ ಬಲ ಹಾಗೂ ಚಂದ್ರನು ಭೂಮಿಯನ್ನು ಆಕರ್ಷಿಸಿನದ ಬಲವು ಒಂದೇ ಸಮವಾಗಿರುತ್ತದೆ .

5. ಒಂದು ವೇಳೆ ಚಂದ್ರ , ಭೂಮಿಯನ್ನು ಆಕರ್ಷಿಸಿದ್ದೇ ಆದರೆ , ಭೂಮಿಯು ಚಂದ್ರನ ಕಡೆಗೆ ಚಲಿಸುವುದಿಲ್ಲವೇಕೆ ?

ಚಲನೆಯ ಎರಡನೆ ನಿಯಮದ ಪ್ರಕಾರ , ಒಂದು ನಿರ್ದಿಷ್ಟ ಬಲಕ್ಕೆ ಒಂದು ವಸ್ತುವಿನ ವೇಗೋತ್ಕರ್ಷವು ಅದರ ರಾಶಿಗೆ ವಿಲೋಮಾನುಪತದಲ್ಲಿರುತ್ತದೆ . ಭೂಮಿಯ ರಾಶಿಗೆ ಹೋಅಸಿದಾಗ ಚಂದ್ರನ ರಾಶಿಯು ಕಡಿಮೆ ಇರುವುದರಿಂದ ಭೂಮಿಯ ವೇಗೋತ್ಕರ್ಷದ ದರವು ಚಂದ್ರನ ವೇಗೋತ್ಕರ್ಷದ ದರಕ್ಕಿಂತ ಕಡಿಮೆ ಇರುತ್ತದೆ . ಆದ್ದರಿಂದ ಭೂಮಿಯು ಚಂದ್ರನ ಕಡೆಗೆ ಚಲಿಸುವುದಿಲ್ಲ .

6. ಕೆಳಗಿನ ಸಂದರ್ಭಗಳಲ್ಲಿ ಎರಡು ವಸ್ತುಗಳ ನಡುವಿನ ಬಲವು ಏನಾಗುತ್ತದೆ ?

( i ) ಒಂದು ವಸ್ತುವಿನ ರಾಶಿಯು ಇನ್ನೊಂದರ ಎರಡರಷ್ಟಾದಾಗ ,

( ii ) ಎರಡು ವಸ್ತುಗಳ ನಡುವಿನ ದೂರವು ಎರಡರಷ್ಟು ಮತ್ತು ಮೂರರಷ್ಟಾದಾಗ

( iii ) ಎರಡು ವಸ್ತುಗಳ ರಾಶಿಗಳು ಎರಡರಷ್ಟಾದಾಗ.ಅವುಗಳ ನಡುವಿನ ಬಲವು ಏನಾಗುತ್ತದೆ .

ಆಕರ್ಷಣಾ ಬಲವು ವಸ್ತುಗಳ ರಾಶಿಗೆ ನೇರ ಅನುಪಾತದಲ್ಲಿರುವುದರಿಂದ , ರಾಶಿ ಎರಡರಷ್ಟಾದರೆ ಬಲವು ಸಹ ಎರಡರಷ್ಟಾಗುತ್ತದೆ .

ದೂರವು ಎರಡಾದರೆ ಬಲವು , ಅದರ ಬೆಲೆಯ 1 / 4 ರಷ್ಟು ಆಗುತ್ತದೆ . ಅದೇ ರೀತಿ ದೂರ ವು ಮೂರರಷ್ಟಾದರೆ ಬಲವು ಅದರ ಬೆಲೆಯ 1 / 9 ರಷ್ಟಾಗುತ್ತದೆ .

ಆಕರ್ಷಣಾ ಬಲವು ವಸ್ತುಗಳ ರಾಶಿಯ ಗುಣಲಬ್ದಕ್ಕೆ ನೇರ ಅನುಪಾತದಲ್ಲಿರುವುದರಿಂದ , ಅದರ ಬೆಲೆಯು 4 ರಷ್ಟು ಹೆಚ್ಚಾಗುತ್ತದೆ .

7. ವಿಶ್ವವ್ಯಾಪಿ ಗುರುತ್ವ ನಿಯಮದ ಪ್ರಾಮುಖ್ಯತೆ ಏನು?

ವಿಶ್ವ ಗುರುತ್ವ ನಿಯಮದಿಂದ ವಿಶ್ವದ ಎಲ್ಲಾ ವಸ್ತುಗಳು ಮತ್ತೊಂದು ವಸ್ತುವನ್ನು ಅಕರ್ಷಿಸುತ್ತವೆ. ಎಂದು ನಿರೂಪಿಸಲಾಯಿತು.

8. ಸ್ವತಂತ್ರ ಪತನದ ಬೀಳುವಿಕೆಯ ವೇಗೋತ್ಕರ್ಷವೆಂದರೇನು?

ಎತ್ತರದಿಂದ ವಸ್ತುಗಳು ಕೆಳಗೆ ಬೀಳುವಾಗ ಭೂಮಿಯ ಗುರುತ್ವಾಕರ್ಷಣೆ ಬಲದಿಂದ ಅವು ಭೂಮಿಯ ಕಡೆಗೆ ಸ್ವತಂತ್ರವಾಗಿ ಬೀಳುತ್ತವೋ ಅದನ್ನು ಮುಕ್ತ ಪತನ ಎನ್ನುವರು. ಮುಕ್ತ ಪತನದಲ್ಲಿ ವಸ್ತುವಿನ ವೇಗೋತ್ಕರ್ಷವು 9.8m\s-2 ಇದ್ದು ಇದು ಎಲ್ಲಾ ವಸ್ತುವು ಸ್ಥಿರವಾಗಿರುತ್ತದೆ.

9. ಭೂಮಿ ಮತ್ತು ವಸ್ತುವೊಂದರ ನಡುವಿನ ಗುರುತ್ವ ಬಲವನ್ನು ಏನೆಂದು ಕರೆಯುತ್ತೆವೆ?

ಆ ವಸ್ತುವಿನ ತೂಕ ಎನ್ನುವರು.

10. ಅಮಿತ್‌ ನು ಅವನ ಸ್ನೇಹಿತನೊಬ್ಬನ ಸಲಹೆಯಂತೆ ಧ್ರುವಗಳ ಹತ್ತಿರ ಸ್ವಲ್ಪ ಚಿನ್ನವನ್ನು ಖರೀದಿಸಿದನು. ಅದನ್ನು ಸಮಭಾಜಕ ಬಳಿ ಅವನ ಸ್ನೇಹಿತನನ್ನು ಭೆಟಿಯಾದಾಗ ಆತನಿಗೆ ಹಸ್ತಾಂತರಿಸುತ್ತಾನೆ. ಖರೀದಿಸಿದ ಚಿನ್ನದ ತೂಕವನ್ನು ಅವನ ಸ್ನೇಹಿತನು ಒಪ್ಪುತ್ತಾನೆಯೇ? ಇಲ್ಲದಿದ್ದರೆ ಎಕೆ|

(ಸುಳಿವು: ಭೂಮಿಯ ಧ್ರುವಗಳ್ಲಲಿ g ಯ ಬೆಲೆಯ ಸಮಭಾಜಕಕ್ಕಿಂತ ಹೆಚ್ಚಾಗಿರುತ್ತದೆ.)

ಭೂಮಿಯ ಮೇಲೆ ವಸ್ತುವಿನ ತೂಕ w=m.g

ಭೂಮಿಯ ಗುರುತ್ವವೇಗೋತ್ಕರ್ಷವು ಧ್ರುವಗಳಿಗಿಂತ ಭೂಮಿಯ ಮಧ್ಯ ಭಾಗದಲ್ಲಿ ಕಡಿಮೆ ಇರುವುದರಿಂದ ಸಮಭಾಜಕದ ಬಳಿ ಚಿನ್ನದ ತೂಕವು ಧ್ರುವದಲ್ಲಿರುವುದಕ್ಕಿಂತ ಕಡಿಮೆ ಇರುತ್ತದೆ. ಆದ್ದರಿಂದ ಅಮಿತ್‌ ನ ಸ್ನೇಹಿತನು ಚಿನ್ನದ ತೂಕವನ್ನು ಒಪ್ಪುವುದಿಲ್ಲ.

11. ಕಾಗದದ ಹಾಳೆಯು ಅದನ್ನು ಚೆಂಡಿನಾಕಾರದಲ್ಲಿ ಸುತ್ತಿ ಬೀಳಿಸಿದ್ದಕ್ಕಿಂತ ನಿಧಾನವಾಗಿ ಬೀಳುತ್ತದೆ. ಏಕೆ?

ಕಾಗದದ ಹಾಳೆಯನ್ನು ಚೆಂಡಿನಾಕಾರದಲ್ಲಿ ಸುತ್ತಿದಾಗ ಅದರ ಸಾಂದ್ರತೆಯು ಹೆಚ್ಚಾಗಿ ಗಾಳಿಯ ಕಣಗಳು ಒಡ್ಡುವ ರೋಧವು ಕಡಿಮೆಯಾಗುತ್ತದೆ. ಅದ್ದರಿಂದ ಹಾಳೆಗಿಂತ ಬೇಗನೆ ಕೆಳಗೆ ಬೀಳತ್ತದೆ.

12. ಚಂದ್ರನ ಮೇಲಿನ ಗುರುತ್ವ ಬಲವು ಭೂಮಿಯ ಮೇಲಿನ ಗುತುತ್ವ ಬಲದ 1/6ರಷ್ಟು ಶಕ್ತಿಯುತವಾಗಿರುತ್ತದೆ. ನ್ಯೂಟನ್‌ ಗಳಲ್ಲಿ ಚಂದ್ರ ಮತ್ತು ಭೂಮಿಯ ಮೇಲೆ 10Kg ಇರುವ ವಸ್ತುವೊಂದರ ತೂಕವೇನು?

ಚಂದ್ರನ ಮೇಲೆ ವಸ್ತುವಿನ ತೂಕ = 1/6 Xಭೂಮಿಯ ಮೇಲೆ ಅದರ ತೂಕ

ಭೂಮಿಯ ಮೇಲೆ ವಸ್ತುವಿನ ತೂಕ ,W = m.g

m = 10kg

ಗುರುತ್ವ ವೇಗೋತ್ಕರ್ಷ , g = 9.8 m / s2

W = 10 × 9.8=98N

ಆದ್ದರಿಂದ ಚಂದ್ರನ ಮೇಲೆ ವಸ್ತುವಿನ ತೂಕ = 1 / 6 X98 = 16.3N

13. ಒಂದು ಚೆಂಡನ್ನು 49 m / s ವೇಗದೊಂದಿಗೆ ಲಂಬವಾಗಿ ಮೇಲಕ್ಕೆ ಎಸೆಯಲಾಗಿದೆ . ಹಾಗಾದರೆ ,

( i ) ಅದು ತಲುಪುವ ಗರಿಷ್ಟ ಎತ್ತರ

( ii ) ಅದು ಭೂಮಿಯ ಮೇಲ್ಮೀಗೆ ಹಿಂದಿರುಗಳು ತೆಗೆದುಕೊಳ್ಳುವ ಒಟ್ಟು ಕಾಲವನ್ನು ಕಂಡು ಹಿಡಿಯಿರಿ

ಆರಂಭಿಕ ವೇಗ , U = 49 ms – ¹

ನಂತರದ ವೇಗV = 0 ms – ¹

ಗುರುತ್ವ ವೇಗೋತ್ಕರ್ಷ , ! = -9.8 ms2 ( ಮೇಲ್ಮುಖ ಚಲನೆ )

V² = U² + 2gs

0² = ( 49 ) ² + 2 . ( – 9.8 ) .s

-( 49 ) ² = -2x ( 9.8 ) ²x s

S = 49×49 / 2×9.8

S = 122.5 m

ಆ ಚೆಂಡು 122.5 ಮೀಟರ್ ದೂರ ಚಲಿಸಲು t ಸಮಯ ತೆಗೆದುಕೊಂಡರೆ ಸೂತ್ರದ ಪ್ರಕಾರ ,

ತೆಗೆದುಕೊಂಡ ಕಾಲ , V = U + gt

0 = 49+ ( -9.8 ) t

9.8 t = 49

t = 49 / 9.8 = 5S

ಆದರೆ , ಚೆಂಡು ಮೇಲೇರಲು ತೆಗೆದುಕೊಂಡ ಕಾಲ = ಕೆಳಗಿಆಯಲು ತೆಗೆದುಕೊಂಡ ಕಾಲ ಆದ್ದರಿಂದ , ಭೂಮಿಯ ಮೇಲ್ಕೆಗೆ ಹಿಂದಿರುಗಲು ತೆಗೆದುಕೊಂಡ ಒಟ್ಟು ಕಾಲ

ಆದ್ದರಿಂದ , ಭೂಮಿಯ ಮೇಲ್ಕೆಗೆ ಹಿಂದಿರುಗಲು ತೆಗೆದುಕೊಂಡ ಒಟ್ಟು ಕಾಲ = 5 + 5 = 10 S

14. 19.6 ಟ ಎತ್ತರವಿರುವ ಒಂದು ಗೋಪುರದ ಮೇಅನಿಂದ ಒಂದು ಕಲ್ಲನ್ನು ಬಿಡಲಾಗಿದೆ . ಹಾಗಾದರೆ ಅದು ಭೂಮಿಯನ್ನು ತಲುಪುದಕ್ಕಿಂತ ಸ್ವಲ್ಪ ಮೊದಲು ಅದರ ಅಂತಿಮ ವೇಗವೆಷ್ಟು ?

15. ಒಂದು ಕಲ್ಲನ್ನು ಅದರ ಆರಂಭಿಕ ವೇಗ 40m/s ಇರುವಂತೆ ಲಂಬವಾಗಿ ಮೇಲಕ್ಕೆ ಎಸೆಯಲಾಗಿದೆ. gಯ ಬೆಲೆಯು = 10m/s ಎಂದು ಭಾವಿಸಿ. ಅದು ತಲುಪುವ ಗರಿಷ್ಟ ಎತ್ತರವನ್ನು ಕಂಡುಹಿಡಿಯಿರಿ ಅದರ ನಿವ್ವಳ ಸ್ಥಾನಪಲ್ಲಟ ಮತ್ತು ಚಲಿಸಿದ ಒಟ್ಟು ದೂರಗಳನ್ನು ಕಂಡುಹಿಡಿಯಿರಿ.

U=40m\s

V=0m/s

g=(-10) ms – 2

V² – U² = 2gs

02-40² 2 × ( -10 ) x s

S = 40 × 40 / 20

S = 80m ಕಲ್ಲು ಚಲಿಸಿದ ಒಟ್ಟು ದೂರ = 80 + 80 = 160m

ಮೇಲ್ಮುಖ ಹಾಗೂ ಇಆಮುಖ ಚಲನೆಯಿಂದ ಕಣ್ಣಿನ ಸ್ಥಾನಪಲ್ಲಟ = 80 + ( – 80 ) = 0

16. ಭೂಮಿಯ ರಾಶಿ = 6 x 1024kg ಮತ್ತು ಸೂರ್ಯನ ರಾಶಿ 2 x 1030kg ಇದ್ದರೆ , (ಅವುಗಳ ನಡುವಿನ ಗುರುತ್ವ ಬಲವನ್ನು ಲೆಕ್ಕಿಸಿ , ಅವುಗಳ ನಡುವಿನ ಸರಾಸರಿ ದೂರ 1.5 x 1011m )

Msun = 2 x 1030 kg

Mearth 6x 1024 kg

G = 6.7 x 10-11 Nm² kg – 2

R = 1.5x 1011 m F = 6.7 × 10-11 × 2 × 1030 × 6 × 1024 / ( 1.5 × 1011 ) ²

F = 3.57x 1022 N

17. 100m ಎತ್ತರವಿರುವ ಒಂದು ಗೋಪುರದ ಮೇಲಿನಿಂದ ಒಂದು ಕಲ್ಲನ್ನು ಬಿಡಲಾಗಿದೆ. ಮತ್ತು ಅದೇ ಸಮಯದಲ್ಲಿ ಮತ್ತೊಂದು ಕ್ಲಲನ್ನು 25m/ ವೇಗದಲ್ಲಿ ಲಂಬವಾಗಿ ಮೆಲಕ್ಕೆ ಎಸೆಯಲಾಗಿದೆ. ಆ ಎರಡೂ ಕಲ್ಲುಗಳು ಯಾವಾಗ ಮತ್ತು ಎಲ್ಲಿ ಸಂಧಿಸುತ್ತದೆ. ಎನ್ನುವುದನ್ನು ಲೆಕ್ಕಿಸಿ.

ಎರಡು ಕಲ್ಲುಗಳು ಸಂಧಿಸಿದ ಸಮಯವನು t ಎಂದುಕೊಳ್ಳೋಣ.

ಸಮಯದಲ್ಲಿ ಗೋಪುರದ ಮೇಲಿಂದ ಬಿಡಲಾದ ಕಲ್ಲಿನ ಸ್ಥಾನಪಲ್ಲಟ S ಅದರೆ,

ಆದ್ದರಿಂದ ಎರಡು ಕಲ್ಲುಗಳು ಸಂಧಿಸಿದ ಸ್ಥಾನ = (100-78.4)20.6m

ನೆಲದಿಂದ 20.6m ಎತ್ತರದಲ್ಲಿ ಸಂಧಿಸಿದೆ.

18. ಒಂದು ಚೆಂಡನ್ನು ಲಂಬವಾಗಿ ಮೆಲಕ್ಕೆ ಎಸೆದಾಗ ಅದು 6 ಸೆಕೆಂಡುಗಳ ನಂತರ ಹಿಂದಿರುಗುತ್ತದೆ. ಹಾಗಾದರೆ

 1. ಅದನ್ನು ಮೇಲಕ್ಕೆ ಎಸೆಯುವಾಗ ಇದ್ದ ಅದರ ವೇಗ ]
 2. ಅದು ತಲುಪುವ ಗರಿಷ್ಟ ಎತ್ತರ ಮತ್ತು
 3. 4 ಸೆಕೆಂಡುಗಳ ನಂತರ ಅದರ ಸ್ಥಾನಗಳನ್ನು ಕಂಡು ಹಿಡಿಯಿರಿ

ಒಂದು ಚೆಂಡನ್ನು ಮೇಲಕ್ಕೆ ಹೋಗಿ ಕೆಳಗೆ ಬರಲು ತೆಗೆದುಕೊಂಡ ಒಟ್ಟು ಸಮಯ 6 ಸೆಕೆಂಡುಗಳು. ಮೇಲೆರಲು ಹಾಗು ಕೆಳಗೆ ಬರಲು ಸಮಾನಾದ ಕಾಲವನ್ನು ತೆಗೆದುಕೊಂಡರೆ ಅ ಚೆಂಡು ಮೆಲೆರಲು ತೆಗೆದುಕೊಂಡ ಕಾಲ = 3 ಸೆಕೆಂಡುಗಳು

h= 44.1m

ಚೆಂಡು 3 ಸೆಕೆಂಡುಗಳ ನಂತರದ ಗರಿಷ್ಟ ಎತ್ತರಕ್ಕೆ ತಲುಪುತ್ತದೆ. ಆ ನಂತರಗ ಅದು ಕೆಳಗೆ ಬೀಳಲು ಪ್ರಾರಂಭಿಸುತ್ತದೆ.

19. ನೀರಿನಲ್ಲಿ ಮುಳುಗಿಸಿದ ವಸ್ತುವೊಂದರ ಮೇಲೆ ಪ್ಲವನತಾ ಬಲವು ಯಾವ ದಿಕ್ಕಿನಲ್ಲಿ ವರ್ತಿಸುತ್ತದೆ?

ಮೇಲ್ಮುಖ ದಿಕ್ಕಿನಲ್ಲಿರುತ್ತದೆ.

20. ಪ್ಲಾಸ್ಟಿಕ್‌ನ ಪಟ್ಟಿಯೊಂದನ್ನು ನೀರಿನ ತಳದಿಂದ ಬಿಟ್ಟಾಗ ಅದು ನೀರಿನ ಮೇಲ್ಮೈಗೆ ಬರಲು ಕಾರಣವೇನು?

ನೀರಿನಲ್ಲಿ ಮುಳುಗುತ್ತಿರುವ ಪ್ಲಾಸ್ಟಿಕ್ ಪಟ್ಟಿಯ ಮೇಲೆ ಎರಡು ರೀತೀಯ ಬಲವು ವರ್ತಿಸುತ್ತದೆ. ಒಂದು ಕೆಳಮುಖವಾದ ಗುರುತ್ವಾಕರ್ಷಣಾ ಬಲ ಮತ್ತೊಂದು ಮೇಲ್ಮುಖವಾದ ಪ್ಲವನತಾ ಬಲ.ಮೇಲ್ಮುಖವಾದ ಪ್ಲವನತಾ ಬಲವು ಹೆಚ್ಚಾಗುವುದರಿಂದ ಪ್ಲಾಸ್ಟಿಕ್‌ ಪಟ್ಟಿಯು ಮೇಲಕ್ಕೆ ಬರುತ್ತದೆ.

21. 50g ವಸ್ತುವೊಂದರ ಘನಫಲ 20cm3 ನೀರಿನ ಸಾಂದ್ರತೆಯ 1gm-3 ಆದಾಗ ಆ ವಸ್ತುವು ತೇಲುತ್ತದೆಯೇ ಅಥವಾ ಮುಳುಗುತ್ತದೆಯೇ?

ನೀರಿನ ಮೇಲಿಟ್ಟ ವಸ್ತುವಿನ ಸಾಂದ್ರತೆಯು ನೀರಿನ ಸಾಂದ್ರತೆಗಿಂತ ಹೆಚ್ಚಾಗಿರುತ್ತದೆ, ಆ ವಸ್ತುವಿನ ಮೇಲೆ ನೀರಿನ ಮೇಲ್ಮಖ ತಳ್ಳುವಿಕೆಯು ಅದರ ತೂಕಕ್ಕಿಂತ ಕಡಿಮೆ ಆಗುವುದರಿಂದ ವಸ್ತು ಮುಳುಗುತ್ತದೆ.

ನೀರಿನ ಮೇಲಿರುವ ವಸ್ತುವ ಸಾಂದ್ರತೆಯು ನೀರಿನ ಸಾಂದ್ರತೆಗಿಂತ ಕಡಿಮೆ ಇದ್ದರೆ , ನೀರಿನ ಮೇಲ್ಮುಖ ತಳ್ಳುವಿಕೆಯು ಅದರ ತೂಕಕ್ಕಿಂತ ಹೆಚ್ಚಾಗಿ ವಸ್ತುವು ತೇಲುತ್ತದೆ .

ಒಂದು ವಸ್ತುವಿನ ಸಾಂದ್ರತೆ = ವಸ್ತುವಿನ ರಾಶಿ / ವಸ್ತುವಿನ ಗಾತ್ರ

50/20 =

= 2.5 g / cm³

ವಸ್ತುವಿನ ಸಾಂದ್ರತೆಯು ನೀರಿನ ಸಾಂದ್ರತೆಗಿಂತ ಹೆಚ್ಚಾಗಿರುವುದರಿಂದ ವಸ್ತುವು ನೀರಿನಲ್ಲಿ ಮುಳುಗುತ್ತದೆ .

22. 500g ಮುಚ್ಚಿದ ಪೊಟ್ಟಣವೊಂದರ ಘನಫಲ 350 cm – 3 . ಆ ಪೊಟ್ಟಣದ ಸಾಂದ್ರತೆಯು 1g cm – 3 ಆದಾಗ ನೀರಿನ ಮೇಲೆ ಅದು ತೇಲುತ್ತದೆಯೇ ಅಥವಾ ಮುಳುಗುತ್ತದಯೇ ? ಈ ಪೊಟ್ಟಣದಿಂದ ಪಲ್ಲಟಗೊಂಡ ನೀರಿನ ರಾಶಿಯೆಷ್ಟು ?

ಒಂದು ವಸ್ತುವಿನ ಸಾಂದ್ರತೆ = ವಸ್ತುವಿನ ರಾಶಿ / ವಸ್ತುವಿನ ಗಾತ್ರ

= 500 / 350

= 1.428 g / cm³

ವಸ್ತುವಿನ ಸಾಂದ್ರತೆಯು ನೀರಿನ ಸಾಂದ್ರತೆಗಿಂತ ಹೆಚ್ಚಾಗಿರುವುದರಿಂದ ವಸ್ತುವು ನೀರಿನಲ್ಲಿ ಮುಳುಗುತ್ತದೆ.ಪಟ್ಟಣದಿಂದ ಪಲ್ಲಟಗೊಂಡ ನೀರಿನ ರಾಶಿಯು ಪೊಟ್ಟಣದ ಗಾಾತ್ರದಷ್ಟಿರುತ್ತದೆ . ಅಂದರೆ , 350 g

FAQ

ನೀರಿನ ಮೇಲಿಟ್ಟ ವಸ್ತುವೊಂದು ತೇಲಲು ಅಥವಾ ಮುಳುಗಲು ಕಾರಣವೇನು?

ವಸ್ತುವಿನ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆ ಇರುತ್ತದೆ,

ಗುರುತ್ವ ವೇಗೋತ್ಕರ್ಷ ಎಂದರೇನು?

ಸ್ವತಂತ್ರ ಪತನಕ್ಕೆ ಒಳಪಟ್ಟ ವಸ್ತುವು ಭೂಮಿಯ ಗುರುತ್ವಾಬಲದಿಂದ ಭೂಮಿಯ ಕಡೆ ಚಲಿಸುವ ಕ್ರಿಯೆ.

ಇತರೆ ವಿಷಯಗಳು:

9ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಎಲ್ಲಾ ವಿಷಯಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *