8th standard Kannadigara Tayi Question and Answer Poem Summary | ಕನ್ನಡಿಗರ ತಾಯಿ ಪದ್ಯ

8th Standard Kannadigara Tayi Question and Answer Poem Summary ಕನ್ನಡಿಗರ ತಾಯಿ

8th Class Kannadigara Tayi Question and Answer Poem Summary summary in kannada ಕನ್ನಡಿಗರ ತಾಯಿ ಪ್ರಶ್ನೆ ಉತ್ತರಗಳು, ಕನ್ನಡಿಗರ ತಾಯಿ ಪದ್ಯ ಸಾರಾಂಶ

ಪದ್ಯ ಭಾಗ

೧.ಕನ್ನಡಿಗರ ತಾಯಿ – ಎಂ.ಗೋವಿಂದ ಪೈ 

ಕೃತಿಕಾರರ ಪರಿಚಯ

ಕೃತಿಕಾರರ ಪರಿಚಯ
ರಾಷ್ಟ್ರ ಕವಿ  ಎಂ. ಗೋವಿಂದ ಪೈ ಅವರು ಕಾಸರಗೋಡು
ಜಿಲ್ಲೆಯ ಮಂಜೇಶ್ವರದಲ್ಲಿ 3/03/1883 ರಲ್ಲಿ ಜನಿಸಿದರು. ತಂದೆ ಸಾಹುಕಾರ
ತಿಮ್ಮಪೈ, ತಾಯಿ ದೇವಕಿಂಯಮ್ಮ. ಪ್ರಾಸ ಬಿಟ್ಟು ಪದ್ಯ ರಚಿಸಿದ ಮೊದಲ ಕವಿ
ಎಂಬ ಹೆಗ್ಗಳಿಕೆಗೂ ಪಾತ್ರರಾದವರು. ಸಂಶೋಧಕ, ವಿಮರ್ಶಕ,
ಅನುವಾದಕರಾಗಿಯೂ ಜನಪ್ರಿಯರಾದ ರಾಷ್ಟ್ರ ಗೋವಿಂದ ಪೈ ಅವರ
(‘ಸುವಾಸಿನಿ’) ಮೊದಲ ಕವಿತೆ 1900  ರಲ್ಲಿ ಸುವಾಸಿನಿ ಪತ್ರಿಕೆಯಲ್ಲಿ
ಪ್ರಕಟವಾಯಿತು. ಅವರ ಕವನ ಸಂಕಲನಗಳು ಇಂತಿವೆ. ಗಿಳಿವಿಂಡು,
ನಂದಾದೀಪ ಮೊದಲಾದವು. ನವೀನ ಚಂದ್ರಸೇನರ ಬಂಗಾಳಿ ಕೃಷ್ಣ
ಚರಿತೆಯ ಗದ್ಯಾನುವಾದ, ‘ಸಿಂಗಾಲ ಸುತ್ತ’ ಬೌದ್ಧ ಸೂತ್ರಗಳ ಕನ್ನಡ
ಅನುವಾದ. ಅಹಮ್ಮದ್ ಇಕ್ಬಾಲ್, ಉಮರ್ ಖಯ್ಯಾಂನ ರುಬಾಯಿಗಳನ್ನು
ಭಾಷಾಂತರಿಸಿದ್ದಾರೆ. ವೈಶಾಖ ಮತ್ತು ಗೊಲ್ಗೊಥಾ ಖಂಡಕಾವ್ಯಗಳನ್ನು
ಪ್ರಕಟಿಸಿದ್ದಾರೆ.
ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುವರಲ್ಲದೇ
ಚಿತ್ರಭಾನು, ಹೆಬ್ಬೆರಳು, ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ
ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮೊದಲಾದ ಕೃತಿಗಳನ್ನು
ರಚಿಸಿದ್ದಾರೆ. 1949ರಲ್ಲಿ ಮದ್ರಾಸ್ ಸರ್ಕಾರ ರಾಷ್ಟ್ರಕವಿ ಬಿರುದು ನೀಡಿ
ಗೌರವಿಸಿದೆ. ಇವರು ಕನ್ನಡದ ಮೊದಲ ರಾಷ್ಟ್ರಕವಿ  ಹೆಗ್ಗಳಿಕೆಗೆ
ಪಾತ್ರರಾದವರು.
ಪ್ರಸ್ತುತ ಪದ್ಯವನ್ನು ಎನ್. ಎಸ್. ರಘುನಾಥ್ ಅವರು
ಸಂಪಾದಿಸಿರುವ ಶತಮಾನದ ಮಕ್ಕಳ ಸಾಹಿತ್ಯ ಸಂಕಲನದಿಂದ  ಆರಿಸಿ
ಸಂಪಾದಿಸಿ ನಿಗದಿಪಡಿಸಿದೆ .

ಆಶಯ ಭಾವ

ಇದು ಕರ್ನಾಟಕ ಏಕೀಕರಣದ ಪೂರ್ವದಲ್ಲಿ ಕನ್ನಡತಾಯಿಯನ್ನು ಸ್ತುತಿಸಿ ಬರೆದ ಕವನ. ಕನ್ನಡತಾಯಿ ತನ್ನ
ಮುಖವನ್ನು ತೋರುವ ಮೂಲಕ ಕನ್ನಡದ ಮಕ್ಕಳನ್ನು ಒಂದಾಗಿಸಬೇಕು ಎನ್ನುವುದು ಪದ್ಯದ ಮುಖ್ಯ ಆಶಯ.
ಕನ್ನಡನಾಡಿನಲ್ಲಿ ಎಲ್ಲಾ ಸಂಪತ್ತು ಇದೆ. ತಾಯಿಯ ಮುಖ ಕಂಡಾಗ ಅದೆಲ್ಲವೂ ಗೋಚರವಾಗುತ್ತದೆ. ಹೀಗೆ

ಗೋಚರಿಸಿದಾಗ ಮಾತ್ರ ಕನ್ನಡ ತಾಯಿಯ ಕೀರ್ತಿ, ಕನ್ನಡವೇ ಉಸಿರಾಗಬೇಕು. ಕನ್ನಡ ನಾಡು ನುಡಿಯ  ಶ್ರೇಷ್ಠತೆ,
ಭವ್ಯಪರಂಪರೆ, ಇತಿಹಾಸ, ಪ್ರಾಕೃತಿಕ, ಸಾಹಿತ್ಯಿಕ, ವಾಸ್ತುಶಿಲ್ಪಗಳ ಭವ್ಯತೆಯಿಂದ ಜಗತ್ತಿನೆಲ್ಲಡೆ ಹರಡಬೇಕೆಂಬುದು
ಕವಿಯ ಆಶಯವಾಗಿದೆ.

ಪದಗಳ ಅರ್ಥ

ಆಳ್ವೆ – ಆಳುವೆ     ; ಒಸಗೆ- ಸಂತೋಷ,   ಶುಭವರ‍್ತೆ ;      ಕಾರಕಳ – ಕಾರ್ಕಳ  ( ಉಡುಪಿ ಜಿಲ್ಲೆಯ ಒಂದು ತಾಲೂಕುಕೇಂದ್ರ);

ಕೆನೆ – ಸಾರ, ತಿರುಳು ;     ತಾಳ್ವೆ – ಸಹಿಸುವೆ ;        ತೃಷೆ – ಬಾಯಾರಿಕೆ ;       ದಿವಂ – ಆಕಾಶ ; ನಗಾಳಿ -ಪರ್ವತಗಳ ಸಮೂಹ;

ಬಿಳಿಯ ಕೊಳ – ಬೆಳಗೊಳ,     ಶ್ರವಣಬೆಳಗೊಳ;         ಬೇಲನಾಡು – ಬೇಲೂರು; ಮೊಗ -ಮುಖ;

 ಲತೆ – ಬಳ್ಳಿ ;        ಶರ್ವ – ನೃಪತುಂಗನ ಮತ್ತೊಂದು ಹೆಸರು ;      ಸುರಭಿ – ಸುಗಂಧ, ಸುವಾಸನೆ;

ಅಭ್ಯಾಸ

1. ನಮ್ಮನ್ನು ಆಳುವವಳು ಯಾರು?
ಉತ್ತರ : ನಮ್ಮನ್ನು ಆಳುವವಳು ಕನ್ನಡ ತಾಯಿ.

2. ಲತೆ  ಯಾವುದನೆಲ್ಲಾ ನೀಡುತ್ತದೆ?
ಉತ್ತರ : ಲತೆಯು ಪತ್ರ, ಪುಷ್ಪಗಳನ್ನು ನೀಡುತ್ತದೆ.

3. ಕನ್ನಡ ತಾಯಿಯ ಬಸಿರ ಹೊನ್ನಗನಿ ಯಾರು?
ಉತ್ತರ : ಕನ್ನಡ ತಾಯಿಯ ಬಸಿರ ಹೊನ್ನಗನಿ ವಿದ್ಯಾರಣ್ಯರು.

4. ಕನ್ನಡ ತಾಯಿಯ ಹಾಡನ್ನು ಯಾವುದರಿಂದ ಉಕ್ಕಿಸಬೇಕು?
ಉತ್ತರ : ಕನ್ನಡ ತಾಯಿಯ ಹಾಡನ್ನು ಹೊಸತು ಕಿನ್ನರಿಯಿಂದ ಉಕ್ಕಿಸಬೇಕು.

5. ಕನ್ನಡಿಗರ ಪಾಡು ಏನು?
ಉತ್ತರ : ಮೃಗದ ಸೇಡು ಕನ್ನಡಿಗರ ಪಾಡು.

8ನೇ ತರಗತಿ ಕನ್ನಡಿಗರ ತಾಯಿ ಪ್ರಶ್ನೆ ಉತ್ತರಗಳು

ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಕನ್ನಡ ನಾಡಿನ ಪ್ರಕೃತಿ ವೈಶಿಷ್ಟ್ಯವೇನು ?
ಉತ್ತರ : ಕನ್ನಡ ನಾಡಿನಲ್ಲಿ ವಿಧವಿಧವಾದ ಹಣ್ಣು ಕಾಯಿಗಳನ್ನು ನೀಡುವ ಮರ, ಗಿಡಗಳಿವೆ. ತರತರವಾದ
ಹೂವು, ಪತ್ರೆಗಳನ್ನು ನೀಡುವ ಲತೆಗಳಿವೆ. ತೆನೆಯ ಸಾರದಿಂದ ಕೂಡಿದ ಗಾಳಿ ಬೀಸುತ್ತದೆ. ಪಕ್ಷಿ, ಪ್ರಾಣಿ,
ಹಾವುಗಳ ಸಮೂಹವಿದೆ. ನದಿ, ನಗರ ಪರ್ವತಗಳ ಸಾಲು ಇದೆ. ಇಲ್ಲಿ ಇಲ್ಲದ ಸೌಂದರ್ಯ ಎಲ್ಲೂ ಇಲ್ಲ.
ಜೇನು ಸುರಿವ ಹಾಲು ಹರಿಯುವ ಸ್ವರ್ಗ ಭೂಮಿ ನಮ್ಮ ಕನ್ನಡ ನಾಡು ಎಂದು ಕನ್ನಡ ನಾಡಿನ ಪ್ರಕೃತಿಯ
ವೈಶಿಷ್ಟವನ್ನು ವರ್ಣಿಸಿದ್ದಾರೆ.

2. ಕನ್ನಡದ ಕವಿಶ್ರೇಷ್ಠರ ಹಿರಿಮೆಯೇನು?
ಉತ್ತರ : ಕನ್ನಡದ ಆದಿ ಕವಿ ಪಂಪ, ಕವಿ ಚಕ್ರವರ್ತಿ ರನ್ನ, ಕವಿಲಕ್ಷ್ಮೀಶ ಶ, ಕವಿರತ್ನ, ಜನ್ನ, ಷಡಕ್ಷರಿ, ಮುದ್ದಣ
ಮೊದಲಾದವರು ಮಹಾಕಾವ್ಯಗಳನ್ನು ರಚಿಸಿದ್ದಾರೆ. ದಾಸ ಶ್ರೇಷ್ಠರಾದ ಪುರಂದರದಾಸರು, ಕನಕದಾಸರು,
ಮೊದಲಾದವರು ಭಕ್ತಿ ಪ್ರಧಾನವಾದ ಕೀರ್ತನೆಗಳನ್ನು ರಚಿಸಿ, ದಾಸ ಸಾಹಿತ್ಯವನ್ನು ಬೆಳೆಸಿದವರು. ವಿದ್ಯಾರಣ್ಯ
ಗುರುಗಳು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಿ ನಿಂತರು. ಹೀಗೆ ಕನ್ನಡ ನಾಡಿನ
ಕವಿಶ್ರೇಷ್ಠರ ಹಿರಿಮೆಯಾಗಿದೆ.

3. ಕನ್ನಡದ ಹೆಸರನ್ನು ಹೇಗೆ ಹಬ್ಬಿಸಬೇಕೆಂದು ಕವಿ ಆಶಿಸುತ್ತಾರೆ?
ಉತ್ತರ : ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ ಮೃಗದ ಸೇಡು ನಮ್ಮ ಪಾಡು ಪರರ
ನುಡಿಗೆ ಮಿಡುಕುವ! ಅಂದರೆ ಸಂಕೋಚದ ಸ್ವಭಾವದ ಕಸ್ತೂರಿ ಮೃಗವು ಅಂತರಂಗದ  ಕಂಪನು ಅರಿಯದೆ
ಹೊರಗೆ ಹುಡುಕುವಂತೆ ಕನ್ನಡಿಗರು ತಮ್ಮ ನುಡಿಯ ಸೊಬಗನ್ನು ಅಂದ, ಚಂದವನ್ನು ಅರಿಯದೆ ಅನ್ಯ
ಭಾಷೆಗೆ ಮನಸೋಲುತ್ತಿರುವರು. ಕನ್ನಡ ಕಸ್ತೂರಿಯನ್ನ ಹೊಸತುಸಿರಿಂ ತೀಡದನ್ನ ಸುರಭಿ ಎಲ್ಲಿ? ನೀನದನ್ನ
ನವಶಕ್ತಿಯಿನೆಬ್ಬಿಸು- ಹೊಸ ಸುಗಂಧದೊಸಗೆಯೆಂದ  ಜಗದಿ ಹೆಸರ ಹಬ್ಬಿಸು| ಕನ್ನಡವು ಸರಳವು, ¸ಸುಭವು,
ಸುಂದರವಾದ ಭಾಷೆಯಾಗಿದೆ  ಇದನ್ನು ಹೆಚ್ಚು ಹೆಚ್ಚು ಸಂಶೋಧನೆಗಳಿಂದ  ಶ್ರೀಮಂತ ಭಾಷೆಯಾಗಿ  ಮಾಡಿ,
ಕನ್ನಡ ನುಡಿಗೆ ನವಶಕ್ತಿಯನ್ನು ತುಂಬಿಸಬೇಕು. ಈ ಮೂಲಕ ಕನ್ನಡದ ಹೆಸರನ್ನು ಜಗದದಲ್ಲಿ ಹಬ್ಬಿಸಬೇಕು
ಎಂದು ಕವಿ ಹೇಳಿದ್ದಾರೆ

ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ

1. ಕನ್ನಡ ತಾಯಿಯನ್ನು ಮರೆಯಲು ಸಾಧ್ಯವಿಲ್ಲ ಏಕೆ?
ಉತ್ತರ : ಕನ್ನಡತಾಯಿ ತನ್ನ ಮುಖವನ್ನು ತೋರುವ ಮೂಲಕ ಕನ್ನಡದ ಮಕ್ಕಳನ್ನು ಒಂದಾಗಿಸಬೇಕು
ಎನ್ನುವುದು ಪದ್ಯದ ಮುಖ್ಯ ಆಶಯ. ನಮ್ಮ ತಪ್ಪನೆನಿತೊ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ, ನೀನೆ ಕಣಾ ನಮ್ಮ
ಬಾಳ್ವೆ, ನಿನ್ನ ಮರೆಯಲಮ್ಮೆವು! ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು. ನಮ್ಮ ಕನ್ನಡ ತಾಯಿ
ನಾವು ಮಾಡುವ ತಪ್ಪುಗಳನ್ನು ಕ್ಷಮಿಸಿ ನಮ್ಮನ್ನು ಮಕ್ಕಳಂತೆ ಕಾಪಾಡುತ್ತಾಳೆ. ನಮ್ಮ ಬದುಕು ಕನ್ನಡ ತಾಯಿ.
ನಮ್ಮ ನುಡಿ ಕನ್ನಡ ತಾಯಿ, ನಮ್ಮ ತನು ಕನ್ನಡ ತಾಯಿ, ನಮ್ಮ ಮನ ಕನ್ನಡ ತಾಯಿ ಆದ್ದರಿಂದ ಕನ್ನಡ
ತಾಯಿಯನ್ನು ಮರೆಯಲು ಸಾಧ್ಯವಿಲ್ಲ.

2. ಕವಿ ಕನ್ನಡ ತಾಯಿಯಲ್ಲಿ ಏನೆಂದು ಕೋರುತ್ತಾರೆ?
ಉತ್ತರ : ನಮ್ಮೆದೆಯಂ ತಾಯೆ ಬಲಿಸು, ಎಲ್ಲರ  ಬಾಯಲ್ಲಿ ನೆಲಸು, ನಮ್ಮ ಮನಮನೊಂದೆ ಕಲಸು!
ಇದನೊಂದನೆ ಕೋರುವೆ! ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ? ಅಂದರೆ ಕನ್ನಡಿಗರ
ಹೃದಯ ಶ್ರೀಮಂತಿಕೆ ಹೆಚ್ಚುವಂತೆ, ನಾವು ಎಲ್ಲರೂ ಒಂದೇ ಎನ್ನವ ಭಾವನೆಯನ್ನು ಮೂಡಿಸುವಂತೆ, ಕನ್ನಡ
ಭಾಷೆಗೆ ಹೊಸ ಶಕ್ತಿ ತುಂಬಿಸುವಂತೆ , ಕನ್ನಡದ ಹೆಸರನ್ನು ಜಗದಲ್ಲಿ ಹಬ್ಬಿಸು ಸಾಮರ್ಥ್ಯವನ್ನು ಕೊಡು
ಎಂದು ಕವಿಗಳು ಕೋರುತ್ತಾರೆ.

3. ಗೋವಿಂದ ಪೈ ಅವರ ಪ್ರಮುಖ ಕೃತಿಗಳಾವುವು?
ಉತ್ತರ : ಗಿಳಿವಿಂಡು, ನಂದಾದೀಪ ಮೊದಲಾದವು. ನವೀನ ಚಂದ್ರಸೇನರ ಬಂಗಾಳಿ ಕೃಷ್ಣ ಚರಿತೆಯ
ಗದ್ಯಾನುವಾದ.‘ಸಿಂಗಾಲ ಸುತ್ತ’ ಬೌದ್ಧ ಸೂತ್ರಗಳ ಕನ್ನಡ ಅನುವಾದ. ಅಹಮ್ಮದ್ ಇಕ್ಬಾಲ್, ಉಮರ್
ಖಯ್ಯಾಂನ ರುಬಾಯಿಗಳನ್ನು ಭಾಷಾಂತರಿಸಿದ್ದಾರೆ. ವೈಶಾಖ ಮತ್ತು ಗೊಲ್ಗೊಥಾ ಖಂಡಕಾವ್ಯಗಳನ್ನು
ಪ್ರಕಟಿಸಿದ್ದಾರೆ. ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುವರಲ್ಲದೇ ಚಿತ್ರಭಾನು, ಹೆಬ್ಬೆರಳು,
ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮೊದಲಾದ
ಕೃತಿಗಳನ್ನು ರಚಿಸಿದ್ದಾರೆ.

ಈ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ

1. ಕನ್ನಡಿಗರ ತಾಯಿ ಮೊಗ ತೋರಬೇಕೆಂದು ಕವಿ ಏಕೆ ಬಯಸುತ್ತಾರೆ?
ಉತ್ತರ : ಇದು ಕರ್ನಾಟಕ ಏಕೀಕರಣದ ಪೂರ್ವದಲ್ಲಿ ಕನ್ನಡತಾಯಿಯನ್ನು ಸ್ತುತಿಸಿ ಬರೆದ ಕವನ.
ಕನ್ನಡತಾಯಿ ತನ್ನ ಮುಖವನ್ನು ತೋರುವ ಮೂಲಕ ಕನ್ನಡದ ಮಕ್ಕಳನ್ನು ಒಂದಾಗಿಸಬೇಕು ಎನ್ನುವುದು
ಪದ್ಯದ ಮುಖ್ಯ ಆಶಯ. ನಮ್ಮ ತಪ್ಪನೆನಿತೊ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ, ನೀನೆ ಕಣಾ ನಮ್ಮ ಬಾಳ್ವೆ, ನಿನ್ನ
ಮರೆಯಲಮ್ಮೆವು! ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು. ನಮ್ಮ ಕನ್ನಡ ತಾಯಿ ನಾವು ಮಾಡುವ
ತಪ್ಪುಗಳನ್ನು ಕ್ಷಮಿಸಿ ನಮ್ಮನ್ನು ಮಕ್ಕಳಂತೆ ಕಾಪಾಡುತ್ತಾಳೆ. ನಮ್ಮ ಬದುಕು ಕನ್ನಡ ತಾಯಿ. ನಮ್ಮ ನುಡಿ
ಕನ್ನಡ ತಾಯಿ, ನಮ್ಮ ತನು ಕನ್ನಡ ತಾಯಿ, ನಮ್ಮ ಮನ ಕನ್ನಡ ತಾಯಿ ಆದ್ದರಿಂದ ಕನ್ನಡ ತಾಯಿಯನ್ನು
ಮರೆಯಲು ಸಾಧ್ಯವಿಲ್ಲ. ಕನ್ನಡನಾಡಿನಲ್ಲಿ ಎಲ್ಲಾ ಸಂಪತ್ತು ಇದೆ. ನಮ್ಮ ನಾಡಿನಲ್ಲಿ ವೈವಿಧ್ಯಮಯ
ಗಿಡಮರಬಳ್ಳಿಗಳ, ನದಿನಗರ ಬೆಟ್ಟಗಳ, ಪ್ರಾಣಿಪಕ್ಷಿಗಳ ಸಂಪತ್ತಿದೆ. ತಾಯಿಯ ಮುಖ ಕಂಡಾಗ ಅದೆಲ್ಲವೂ
ಗೋಚರವಾಗುತ್ತದೆ.

2. ಕನ್ನಡ ನಾಡಿನ ಕವಿ ಹಾಗೂ ಕಲೆಯ ಮಹತ್ವವೇನು? ವಿವರಿಸಿ
ಉತ್ತರ : ಕನ್ನಡದ ಆದಿ ಕವಿ ಪಂಪ, ಕವಿ ಚಕ್ರವರ್ತಿ ರನ್ನ, ಕವಿ ಲಕ್ಷ್ಮೀಶ , ಕವಿರತ್ನ, ಜನ್ನ, ಷಡಕ್ಷರಿ,
ಮುದ್ದಣ ಮೊದಲಾದವರು ಮಹಾಕಾವ್ಯಗಳನ್ನು ರಚಿಸಿದ್ದಾರೆ. ದಾಸ ಶ್ರೇಷ್ಠರಾದ ಪುರಂದರದಾಸರು,
ಕನಕದಾಸರು, ಮೊದಲಾದವರು ಭಕ್ತಿ ಪ್ರಧಾನವಾದ ಕೀರ್ತನೆಗಳನ್ನು ರಚಿಸಿ, ದಾಸ ಸಾಹಿತ್ಯವನ್ನು
ಬೆಳೆಸಿದವರು. ವಿದ್ಯಾರಣ್ಯ ಗುರುಗಳು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಿ ನಿಂತರು.
ಹೀಗೆ ಕನ್ನಡ ನಾಡಿನ ಕವಿಶ್ರೇಷ್ಠರ ಹಿರಿಮೆಯಾಗಿದೆ. ಹಳೆಬೀಡು, ಬೇಲೂರಿನ ಶಿಲ್ಪ ಕಲಾ ಸೌಂದರ್ಯ
ಜಗದ್ವಿಖ್ಯಾತವಾದುದು. ಶ್ರವಣಬೆಳೆಗೊಳದ ಕಾರ್ಕಳದ ಬಾಹುಬಲಿಯ ಮೂರ್ತಿಗಳು ಸುಂದರವಾಗಿದೆ.
ಕನ್ನಡ ನಾಡಿನ ಇತಿಹಾಸದ ಹಿನ್ನೆಲೆಯ ಕಥೆಯನ್ನು ಸವಿಯಾದ ಹಾಲಿನಂತಿರುವ ಮಾತುಗಳಿಂದ
ವರ್ಣಿಸುತ್ತದೆ. ಎಂದು ಕವಿಗಳು ಕನ್ನಡ ನಾಡಿನ ಕವಿ ಹಾಗೂ ಕಲೆಯ ಮಹತ್ವವನ್ನು ಕುರಿತು ಬಹು ಸ್ವಾರಸ್ಯ
ಪೂರ್ಣವಾಗಿ ವರ್ಣಿಸುತ್ತಾರೇ .

ಉ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಖಗ ಮೃಗೋರಗಾಳಿಯೋ”
ಆಯ್ಕೆ : ಈ ವಾಕ್ಯವನ್ನು ಶ್ರೀ ಎನ್. ಎಸ್. ರಘುನಾಥ್ ಅವರು ಸಂಪಾದಿಸಿರುವ ‘ಶತಮಾನದ ಮಕ್ಕಳ
ಸಾಹಿತ್ಯ’ ಎಂಬ ಸಂಕಲನದಿಂದ ಆಯ್ದು ಶ್ರೀ ಎಂ ಗೋವಿಂದ ಪೈ’ ಅವರು ರಚಿಸಿರುವ ‘ಕನ್ನಡಿಗರ ತಾಯಿ’
ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕನ್ನಡ ನಾಡಿನ ಕವಿಗಳು ನಮ್ಮ ಕನ್ನಡ ನಾಡಿನ ಪ್ರಕೃತಿಯ ಸೌಂದರ್ಯವನ್ನು ಕುರಿತು
ವರ್ಣಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ನಮ್ಮ ಕನ್ನಡ ನಾಡಿನಲ್ಲಿ ಸಸ್ಯ ಸಂಪತ್ತು, ಪ್ರಾಣಿಪಕ್ಷಿಗಳ ಸಂಪತ್ತು ತುಂಬಾ ಹೇರಳವಾಗಿ ಇದೆ
ಎಂಬುದು ಈ ಮಾತಿನ ಮೂಲಕ ಬಹು ಸ್ವಾರಸ್ಯ  ಪೂರ್ಣವಾಗಿ ಮೂಡಿ ಬಂದಿದೆ.

2. “ನಿನ್ನ ಕಲ್ಲೆ ನುಡಿವುದಲ್ಲ !”
ಆಯ್ಕೆ : ಈ ವಾಕ್ಯವನ್ನು ಶ್ರೀ ಎನ್. ಎಸ್. ರಘುನಾಥ್ ಅವರು ಸಂಪಾದಿಸಿರುವ ‘ಶತಮಾನದ ಮಕ್ಕಳ
ಸಾಹಿತ್ಯ’ ಎಂಬ ಸಂಕಲನದಿಂದ  ಆಯ್ದು ಶ್ರೀ ಎಂ ಗೋವಿಂದ ಪೈ’ ಅವರು ರಚಿಸಿರುವ ‘ಕನ್ನಡಿಗರ ತಾಯಿ’
ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕನ್ನಡ ನಾಡಿನ ಶಿಲ್ಪಕಲಾ ಸೌಂದರ್ಯದ ವೈಭವವನ್ನು, ಸೌಂದರ್ಯವನ್ನು ಕುರಿತು ವರ್ಣಿಸುವ
ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ನಮ್ಮ ಕನ್ನಡ ನಾಡಿನಲ್ಲಿ ಶಿಲ್ಪ ಕಲಾಕೃತಿಗಳು ಕನ್ನಡ ನಾಡಿನ ಭವ್ಯ ಇತಿಹಾಸದ ಹಿನ್ನೆಲೆಯ
ಕತೆಯನ್ನುಹೇಳುವುದರ  ಮೂಲಕ ಬಹು ಸ್ವಾರಸ್ಯ  ಪೂರ್ಣವಾಗಿ ಮೂಡಿ ಬಂದಿದೆ.

3. “ನಮ್ಮ ಮನಮನೊಂದೆ ಕಲಸು!”
ಆಯ್ಕೆ : ಈ ವಾಕ್ಯವನ್ನು ಶ್ರೀ ಎನ್. ಎಸ್. ರಘುನಾಥ್ ಅವರು ಸಂಪಾದಿಸಿರುವ ‘ಶತಮಾನದ ಮಕ್ಕಳ
ಸಾಹಿತ್ಯ’ ಎಂಬ ಸಂಕಲನದಿಂದ  ಆಯ್ದು ಶ್ರೀ ಎಂ ಗೋವಿಂದ ಪೈ’ ಅವರು ರಚಿಸಿರುವ ‘ಕನ್ನಡಿಗರ ತಾಯಿ’
ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕನ್ನಡಿಗರ ಹೃದಯ ಶ್ರೀಮಂತಿಕೆ ಹೆಚ್ಚುವಂತೆ, ನಾವು ಎಲ್ಲರೂ  ಒಂದೇ ಎನ್ನವ ಭಾವನೆಯನ್ನು
ಮೂಡಿಸುವಂತೆ, ಕನ್ನಡ ಭಾಷೆಗೆ ಹೊಸ ಶಕ್ತಿ ತುಂಬಿಸುವಂತೆ , ಎಂದು ಕವಿ ಕೋರುವ ಸಂದರ್ಭದಲ್ಲಿ ಈ
ಮಾತು ಬಂದಿದೆ.
ಸ್ವಾರಸ್ಯ : ಕನ್ನಡ ನಾಡು ಏಕೀಕರಣವಾಗಿ ನಾವೆಲ್ಲರೂ ಒಂದಾಗಿ ಬಾಳಬೇಕು ಎಂಬ ಕನ್ನಡಿಗರ, ಕವಿಯ
ಮನೋಭಾವನೆಯು ಸ್ವಾರಸ್ಯಕರವಾಗಿದೆ .

ಅ. ಕೊಟ್ಟಿರುವ ಪದ್ಯಭಾಗವನ್ನು ಕಂಠಪಾಠ ಮಾಡಿ

1. ಜೈನರಾದ ___ ___ ____ ___ ___ ___ ____ವಿದ್ಯಾರಣ್ಯರ! (ಏಳು ಸಾಲು)
ಜೈನರಾದ ಪೂಜ್ಯಪಾದ ಕೊಂಡಕುAದವರ್ಯರ,
ಮಧ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,
ಶರ್ವ ಪಂಪ ರನ್ನರ,
ಲಕ್ಷ್ಮೀಪತಿ  ಜನ್ನರ,
ಷಡಕ್ಷರಿ ಮುದ್ದಣ್ಣರ,
ಪುರಂದರ ವರೇಣ್ಯರ,
ತಾಯೆ, ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!

ಊ. ಹೊಂದಿಸಿ ಬರೆಯಿರಿ.

ಅ                                           
1. ಬೇಲನಾಡು                       ಬಾಹುಬಲಿ

2. ಶರ್ವ                                ಖಂಡಕಾವ್ಯ

3. ಗೊಲ್ಗೊಥಾ                       ಕವನಸಂಕಲನ

4. ಗಿಳಿವಿಂಡು                        ಹಳೆಬೀಡು

                                              ಬೇಲೂರು

                                             ನೃಪತುಂಗ

ಸರಿ ಉತ್ತರಗಳು

1. ಬೇಲೂರು
2. ನೃಪತುಂಗ

3. ಖಂಡಕಾವ್ಯ
4. ಕವನ ಸಂಕಲನ

ಋ. ಬಿಟ್ಟ ಸ್ಥಳ ತುಂಬಿ

1. ಹರಸು ತಾಯೆ _____ ಕಾಯೆ
2. ಹಾಲು ಹರಿವ ______ ಭೂಮಿಗಿಳಿದುದೆ?
3. ಜೈನರಾದ ಪೂಜ್ಯಪಾದ _______
4. ________ ಸೇಡು ನಮ್ಮ ಪಾಡು.
1. ಸುತರ.             2. ದಿವಂ            3. ಕೊಂಡುಕುಂದವರ್ಯರ         4. ಮೃಗದ 

8th standard kannada notes kannadigara tayi question and answer in kannada kannadigara tayi pdf

8th standard kannada kannadigara tayi poems summary pdf download

ಇತರ ವಿಷಯಗಳು

Books Pdf Download Notes App ಹಿಂದಕ್ಕೆ

2 thoughts on “8th standard Kannadigara Tayi Question and Answer Poem Summary | ಕನ್ನಡಿಗರ ತಾಯಿ ಪದ್ಯ

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh