8ನೇ ತರಗತಿ ಭಾರತೀಯತೆ ಕನ್ನಡ ನೋಟ್ಸ್ | 8th Standard Bharatiyate Kannada Poem Notes

8ನೇ ತರಗತಿ ಭಾರತೀಯತೆ ಕನ್ನಡ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 8th Standard Bharatiyate Kannada Poem Notes Question Answer Summery in Kannada 2022, kseeb solutions for class 8 kannada poem 2

8th Class Bharatiyate Kannada Poem Notes

8th Standard Bharatiyate Kannada Poem Notes

ತರಗತಿ : 8ನೇ ತರಗತಿ

ಪದ್ಯದ ಹೆಸರು : ಭಾರತೀಯತೆ

ಕೃತಿಕಾರರ ಹೆಸರು : ಕೆ.ಎಸ್ . ನರಸಿಂಹಸ್ವಾಮಿ

ಕೃತಿಕಾರರ ಪರಿಚಯ

ಆಧುನಿಕ ಕಾವ್ಯ ಪ್ರಮುಖ ಕವಿಗಳಲ್ಲಿ ಒಬ್ಬರಾದ ಕೆ.ಎಸ್ . ನರಸಿಂಹಸ್ವಾಮಿ ಅವರು ೨೬-೦೧-೧೯೧೫ ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು . ಇವರ ಮೊದಲ ಕವನ ಸಂಕಲನ ಮೈಸೂರು ಮಲ್ಲಿಗೆ ೧೯೪೩ ರಲ್ಲಿ ಪ್ರಕಟವಾಯಿತು . ಇವರು ಶಿಲಾಲತೆ , ಐರಾವತ , ನವಪಲ್ಲವ , ಇರುವಂತಿಗೆ , ದೀಪದ ಮಲ್ಲಿ , ಮನೆಯಿಂದ ಮನೆಗೆ , ತೆರೆದ ಬಾರಾದ ಕವನ ಸಂಕಲನಗಳನ್ನು ರಚಿಸಿದ್ದಾರೆ . ೧೯೭೭ ರಲ್ಲಿ ಇವರ ತೆರೆದ ಬಾಗಿಲು ಎಂಬ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ . ೧೯೯೦ ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . ಇವರ ದುಂಡು ಮಲ್ಲಿಗೆ ಕವನ ಸಂಕಲನಕ್ಕೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ಲಭಿಸಿದೆ . ಇವರನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರೇಮಕವಿ ಎಂದೇ ಗುರುತಿಸಿದೆ . ೨೦೦೪ ರಲ್ಲಿ ದೈವಾಧೀನರಾದರು . ಪ್ರಸ್ತುತ ಭಾರತೀಯತೆ ಕವನವನ್ನು ಕೆ . ಎಸ್ . ನರಸಿಂಹಸ್ವಾಮಿ ಅವರ ನವಪಲ್ಲವ ಕವನ ಸಂಕಲನ ( ಪುಟ ೪೬೪ ) ದಿಂದ ಆರಿಸಿಕೊಂಡಿದೆ .

Kseeb Solutions For Class 8 Kannada Poem 2 Bharatiyate Notes

ಆಶಯ ಭಾವ

ಭಾರತೀಯತೆ ಕವನದಲ್ಲಿ ಕವಿ ಭಾರತೀಯರ ಏಕತೆಯನ್ನು ಕುರಿತು ಅಭಿಮಾನದಿಂದ ಹೇಳಿದ್ದಾರೆ . ಭಾರತ ದೇಶದ ಪ್ರಾಕೃತಿಕ ಸೌಂದರ್ಯ , ಜನರ ಜೀವನ ಶೈಲಿ , ಸಾಂಸ್ಕೃತಿಕ ಪರಂಪರೆ , ಭಿನ್ನತೆಯಲ್ಲಿ ಏಕತಾಭಾವ , ದೇಶಭಕ್ತಿ , ತ್ಯಾಗ , ಪರೋಪಕಾರಬುದ್ಧಿ ಮುಂತಾದ ಉತ್ಕೃಷ್ಟ ಗುಣಗಳನ್ನು ಕವಿ ಇಲ್ಲಿ ವಿಶಾದಿಕರಿಸಿದ್ದಾರೆ.

8ನೇ ತರಗತಿ ಭಾರತೀಯತೆ ಕನ್ನಡ ನೋಟ್ಸ್

ಪದಗಳ ಅರ್ಥ:

 1. ಹಿಮ-ಮಂಜು
 2. ಕರಾವಳಿ-ಸಮುದ್ರತೀರ
 3. ಪೆರ್ದೆರೆ-ದೊಡ್ಡ ಅಲೆ
 4. ಘೋಷ-ಗಟ್ಟಿಯಾಗಿ
 5. ಗಡಿ-ಸೀಮೆ
 6. ಯೋಧ-ಸೈನಿಕ
 7. ಕೊರಳು-ಧ್ವನಿ
 8. ತನು-ದೇಹ
 9. ತೆರು-ನೀಡು
 10. ಹುತಾತ್ಮ-ದೇಶಕ್ಕಾಗಿ ಪ್ರಾಣ ತೆತ್ತವ
 11. ಸ್ಮರಣೆ-ನೆನಪು
 12. ನೆರೆ-ಪಕ್ಕ
 13. ನೆರಳು-ಆಶ್ರಮ
 14. ಮೊಳಗು-ಅಬ್ಬರ
 15. ಬೆಳಕು-ಜ್ಞಾನ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

 1. ಪರ್ವತ ಹಿಮ ಯಾವ ಎತ್ತರಕ್ಕೆ ಎದ್ದು ನಿಂತಿದೆ?

ಪರ್ವತ ಹಿಮ ಆಕಾಶದ ಎತ್ತರಕ್ಕೆ ಎದ್ದು ನಿಂತಿದೆ.

2. ಪೆರ್ದೆರೆಗಳು ಯಾವುದಕ್ಕೆ ಮುತ್ತನಿಡುತ್ತಿವೆ?

ಪೆರ್ದೆರೆಗಳು ಕರಾವಳಿಗೆ ಮುತ್ತನಿಡುತ್ತಿವೆ.

3. ಹಸಿರು ದೀಪವನ್ನು ಎಲ್ಲಿ ಹಚ್ಚಲಾಗಿದೆ?

ಹಸಿರು ದೀಪವನ್ನು ಬಯಲ ತುಂಬಾ ಹಚ್ಚಲಾಗಿದೆ.

4. ಯಂತ್ರಘೋಷ ಏಳುತ್ತಿರುವ ಬಗೆ ಹೇಗೆ?

ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರಘೋಷ ಏಳುತ್ತಿದೆ.

5. ನಮ್ಮ ಧ್ವಜವನ್ನು ಎತ್ತಿ ಹಿಡಿದಿರುವವರು ಯಾರು?

ನಮ್ಮ ಧ್ವಜವನ್ನು ಎತ್ತಿ ಹಿಡಿದಿರುವವರು ನಮ್ಮ ಸೈನಿಕರು.

6. ನಮ್ಮ ಪಯಣ ಎತ್ತ ಸಾಗಿದೆ?

ನಮ್ಮ ಪಯಣ ಗುರಿಯ ಕಡೆಗೆ ಸಾಗಿದೆ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು/ನಾಲ್ಕು ವಾಕ್ಯದಲ್ಲಿ ಉತ್ತರಿಸಿ.

 1. ಕಣ್ಣು ಬೇರೆಯಾದರೂ ನೋಟ ಒಂದಾಗುವ ಸಂದರ್ಭವನ್ನು ತಿಳಿಸಿ.

ಕವಿಯು ಭಾರತದ ಪ್ರಾಕೃತಿಕ ಸೌಂದರ್ಯವನ್ನು ಕುರಿತು ಹೇಳುತ್ತಾ, ಭಾರತದ ಉತ್ತರಭಾಗದ ತುದಿಯ ಹಿಮಾಲಯ ಪರ್ವತ ಶ್ರೇಣಿಗಳು ಆಕಾಶದೆತ್ತರಕ್ಕೆ ನಿಂತಿದೆ. ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿ ತೀರ ಪ್ರದೇಶದಲ್ಲಿ ಕರಾವಳಿಗೆ ಮುತ್ತನಿಡುವ ದೊಡ್ಡ ದೊಡ್ಡ ಅಲೆಗಳ ಗಾಯನವಿದೆ ಭಾರತದ ಬಯಲು ಪ್ರದೇಶದಲ್ಲಿ ಸದಾಕಾಲ ಹರಿಯುವ ನದಿಗಳು ಕೃಷಿಗೆ ಸಹಾಯಕವಾಗಿ ಹಸಿರು ದೀಪದಂತೆ ತೋರುತ್ತಿದೆ. ಆಕಾಶದ ನೀಲಿಯಲ್ಲಿ ಹೊಗೆಯನ್ನು ಚೆಲ್ಲುತ್ತಾ ನಿಂತಿರುವ ಬೃಹತ್‌ ಕೈಗಾತಿಕೆಗಳಿದ್ದು, ನಮ್ಮ ದೇಶದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಕಣ್ಣುಗಳು ಬೇರೆಯಾದರೂ ನೋಟ ಒಂದೇ ಎಂದು ಹೇಳಿದ್ದಾರೆ.

2. ʼಭಾಷೆ ಬೇರೆಯಾದರೂ ಭಾವ ಒಂದುʼ-ಸಮರ್ಥಿಸಿ?

ನಮ್ಮ ದೇಶವನ್ನು ಶತ್ರುಗಳ ದಾಳಿಯಿಂದ ಕಾಪಾಡಲು ಗಡಿಭಾಗಗಳಲ್ಲಿ ಭೂಸೇನೆ, ಆಕಾಶದಲ್ಲಿ ವಾಯುಸೇನೆ, ಕಡಲಿನಲ್ಲಿ ನೌಕಾಸೇನೆಯ ಸೈನಿಕರು ಭಾರತದೇಶದ ತ್ರಿವರ್ಣ ಧ್ವಜವನ್ನು ಹಿಡಿದು ನಿಂತಿದ್ದಾರೆ. ಈ ಧ್ವಜದ ನೆರಳಿನಲ್ಲಿ ವಿವಿಧ ಧರ್ಮ, ಭಾಷೆಗಳ ಜನರು ಜೀವಿಸುತ್ತಿದ್ದಾರೆ. ನಮ್ಮೆಲ್ಲರ ಭಾಷೆಗಳು ಬೇರೆಯಾದರೂ, ನಾವೆಲ್ಲರೂ ಭಾರತೀಯರು ಎಂಬ ಭಾವನೆ ನಮ್ಮಲ್ಲಿದೆ ಎಂದು ಕವಿ ಹೇಳಿದ್ದಾರೆ.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯದಲ್ಲಿ ಉತ್ತರಿಸಿ.

 1. ನಾವು ಭಾರತೀಯರು ಎಂಬ ಅಭಿಮಾನದಿಂದ ಮಿಡಿಯುವ ಸನ್ನಿವೇಷವನ್ನು ವಿವರಿಸಿ.

ʼಭಾರತೀಯತೆʼ ಕವನದಲ್ಲಿ ಕವಿ ಭಾರತೀಯರ ಏಕತೆಯನ್ನು ಕುರಿತು ಅಭಿಮಾನದಿಂದ ಹೇಳಿದ್ದಾರೆ. ಭಾರತದೇಶದ ಆಕಾಶದೆತ್ತರದ ಪರ್ವತ ಪ್ರದೇಶಗಳಲ್ಲಿ ಕರಾವಳಿಯ ತೀರಗಳಲ್ಲಿ, ಬಯಲ ಪ್ರದೇಶಗಳಲ್ಲಿ ಕೋಟ್ಯಾಂತರ ಜನ ಭಾರತೀಯರು ವಾಸಿಸುತ್ತಿದ್ದು ಅವರೆಲ್ಲರ ಕಣ್ಣುಗಳು ಬೇರೆಯಾದರೂ ನೋಟವು ಒಂದೇ ಆಗಿರುತ್ತದೆ. ನಮ್ಮ ನಾಡಿನಲ್ಲಿ ಹಲವಾರು ಗಡಿ ಪ್ರದೇಶಗಳು ಎತ್ತರವಾದ ಬಾನು ಕಡಲುಗಳಿವೆ ಯೋಧರು ನಮ್ಮ ಧ್ವಜವನ್ನು ಅಲ್ಲಿ ಹಾರಿಸುತ್ತಿದ್ದಾರೆ. ನಮ್ಮ ತಾಯಿ ಭಾರತಾಂಬೆಯು ನಮ್ಮೆಲ್ಲರನ್ನು ಒಂದೇ ತೊಟ್ಟಿಲಿನಲ್ಲಿ ಪೊರೆಯುತ್ತಿದ್ದಾಳೆ. ಭಾರತೀಯರ ಭಾಷೆಗಳು ಬೇರೆ ಬೇರೆಯಾದರೂ ಭಾವನೆಗಳು ಒಂದೇ ಆಗಿದೆ. ಹಾಗೂ ತಾಯ್ನಾಡಿಗಾಗಿ ಪ್ರಾಣ ತ್ಯಾಗ ಮಾಡಿರುವ ಅನೇಕ ಹುತಾತ್ಮರು, ನಮ್ಮ ದೇಶದಲ್ಲಿ ಇದ್ದಾರೆ. ನಾವೂ ಕಷ್ಟದಲ್ಲಿದ್ದರೂ ಪರರ ಕಷ್ಟಗಳಿಗೆ ಮಿಡಿಯುವ ಸಂಸ್ಕೃತಿ ನಮ್ಮದಾಗಿದೆ. ಬಿರುಗಾಳಿಯೆಂಬ ಕಷ್ಟದಲ್ಲಿಯೂ ನಾವೂ ನಮ್ಮ ಗುರಿಯ ಬೆಳಕಿಗೆನೆಡೆಗೆ ಸಾಗುತ್ತದ್ದೇವೆ. ನಾವು ಯಾವುದೇ ರಾಜ್ಯದಲ್ಲಿದ್ದರೂ ನಾವು ಒಂದೇ ನಾವೆಲ್ಲರೂ ಭಾರತೀಯರು ಎಂದು ಕವಿ ಅಭಿಮಾನದಿಂದ ಹೇಳಿದ್ದಾರೆ.

ಈ) ಸಂದರ್ಭಾನುಸಾರ ವಿವರಿಸಿ.

 1. “ಕಣ್ಣು ಬೇರೆ , ನೋಟವೊಂದು”

ಆಯ್ಕೆ: ಪ್ರಸ್ತುತ ವಾಕ್ಯವನ್ನು ಕೆ. ಎಸ್.‌ ನರಸಿಂಹಸ್ವಾಮಿ ಅವರ ನವಪಲ್ಲವ ಕವನ ಸಂಕಲನದಿಂದ ಆಯ್ದ ʼ ಭಾರತೀಯತೆʼ ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಭಾರತ ದೇಶದ ಪರ್ವತದ ತಪ್ಪಲು ಪ್ರದೇಶಗಳಲ್ಲಿ, ಕರಾವಳಿ ಪ್ರದೇಶಗಳಲ್ಲಿ, ಹಸಿರಾದ ಬಯಲು ನಾಡಿನಲ್ಲಿ ನದಿ ತೀರಗಳಲ್ಲಿ, ನೀಲಿ ಹೊಗೆ ಕಾರುವ ಯಂತ್ರಘೋಷಗಳ ಬಳಿಯಲ್ಲಿ , ಈ ಎಲ್ಲಾಕಡೆ ವಾಸಿಸುವ ಕೋಟ್ಯಾಂತರ ಜನರ ಕಣ್ಣು ಬೇರೆ-ಬೇರೆಯವರು ನೋಟವು ಒಂದೇ ಆಗಿದೆ. ಎಂದು ಕವಿ ಸಂದರ್ಭದಲ್ಲಿ ಕವಿ ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ.

ಸ್ವಾರಸ್ಯ: ನಾವೆಲ್ಲರೂ ದೇಶದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೂ ನಾವೆಲ್ಲರೂ ಒಂದೇ ಎಂಬ ಐಕ್ಯತಾ
ಭಾವವೇ ಇಲ್ಲಿರುವ ಸ್ವಾರಸ್ಯವಾಗಿದೆ.

2. “ಭಾಷೆ ಬೇರೆ, ಭಾವವೊಂದು”

ಆಯ್ಕೆ: ಪ್ರಸ್ತುತ ವಾಕ್ಯವನ್ನು ಕೆ. ಎಸ್.‌ ನರಸಿಂಹಸ್ವಾಮಿ ಅವರ ನವಪಲ್ಲವ ಕವನ ಸಂಕಲನದಿಂದ ಆಯ್ದ ʼ ಭಾರತೀಯತೆʼ ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ನಮ್ಮ ನಾಡಿನಲ್ಲಿ ಹಲವಾರು ಗಡಿ ಪ್ರದೇಶಗಳಿದ್ದು ವಿಸ್ತಾರವಾದ ಬಾನು (ಆಕಾಶ) ಕಡಲುಗಳಿವೆ. ನಮ್ಮ ಯೋಧರು ನಮ್ಮ ನಾಡಿನ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿದ್ದಾರೆ. ನಾವೆಲ್ಲರೂ ವಾಸಿಸುತ್ತಿರುವ ನಮ್ಮ ದೇಶವಾದ ಭಾರತವು ನಮ್ಮೆಲ್ಲರನ್ನು ಪೊರೆದ ತೊಟ್ಟಿಲಾಗಿದೆ. ಯುಗ-ಯುಗಳಲ್ಲಿಯೂ ನಮ್ಮ ಕೊರಳಿನಿಂದ ಐಕ್ಯತೆಯ ಧ್ವನಿ ಮೂಡಿ ಬಂದಿದೆ. ಆದ್ದರಿಂದ ಅದ್ದರಿಂದ ನಮ್ಮ ಭಾಷೆಗಳು ಬೇರೆ ಬೇರೆಯಾದರೂ ಭಾವವು ಒಂದೇ ಎಂದು ಕವಿ ಹೇಳುವ ಸಂದರ್ಭದಲ್ಲಿ ಈ ವಾಕ್ಯವು ಬಂದಿದೆ.

ಸ್ವಾರಸ್ಯ : ನಮ್ಮ ನಾಡು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ನಾಡಾಗಿದೆ ಎಂಬುದೇ ಇಲ್ಲಿನ ಸ್ವಾರಸ್ಯವಾಗಿದೆ.

3. ” ಎಲ್ಲೆ ಇರಲಿ, ನಾವು ಒಂದು”

ಆಯ್ಕೆ: ಪ್ರಸ್ತುತ ವಾಕ್ಯವನ್ನು ಕೆ. ಎಸ್.‌ ನರಸಿಂಹಸ್ವಾಮಿ ಅವರ ನವಪಲ್ಲವ ಕವನ ಸಂಕಲನದಿಂದ ಆಯ್ದ ʼ ಭಾರತೀಯತೆʼ ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ನಮ್ಮಲ್ಲಿ ನಾಡಿಗಾಗಿ ಪ್ರಾಣತ್ಯಾಗ ಮಾಡಿರುವ ಅನೇಕ ಹುತಾತ್ಮರಿದ್ದಾರೆ. ನಮ್ಮ ಕಷ್ಟದಲ್ಲಿಯೂ ಪರರಿಗೆ ಮಿಡಿಯುವ ಸಂಸ್ಕೃತಿ ನಮ್ಮದು. ಬಿರುಗಾಳಿಯಂತಹ ಕಷ್ಟದಲ್ಲೂ ಕಷ್ಟಸಹಿಸಿ ನಮ್ಮ ಗುರಿಯೆಡೆಗೆ ಸಾಗುವ ಧೀರ ಪ್ರಯಾಣದಲ್ಲಿ ನಾವಿದ್ದೇವೆ. ನಾವು ಯಾವುದೇ ರಾಜ್ಯದಲ್ಲಿದ್ದರು ನಾವೆಲ್ಲರೂ ಒಂದೇ ಎಂದು ಕವಿ ಹೇಳುವ ಸಂದರ್ಭದಲ್ಲಿ ಈ ವಾಕ್ಯವು ಬಂದಿದೆ.

ಸ್ವಾರಸ್ಯ: ನಾವು ದೇಶದ ಯಾವುದೇ ಭಾಗದಲ್ಲಿ ವಾಸಿಸಿದರೂ ನಾವು ಭಾರತೀಯರೆಂಬ ಅರಿವು ಎಲ್ಲರಿಗೂ ಇರಬೇಕೆಂಬುದೇ ಇಲ್ಲಿನ ಸ್ವಾರಸ್ಯವಾಗಿದೆ.

ಉ) ಬಿಟ್ಟ ಸ್ಥಳ ತುಂಬಿರಿ.

 1. ಯಂತ್ರ ಘೋಷ ವೇಳುವಲ್ಲಿ.
 2. ಒಂದೇ ನೆಲದ ತೊಟ್ಟಿಲಲ್ಲಿ.
 3. ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ.
 4. ಎಲ್ಲೆ ಇರಲಿ ನಾವು ಒಂದು.
 5. ನಡೆವ ಧೀರ ಪಯಣದಲ್ಲಿ.

ತತ್ಸಮ – ತಬ್ಧವ

 1. ಆಕಾಶ- ಆಗಸ
 2. ಮೌನ-ಮೋನ
 3. ಗಾನ- ಗಾಯನ
 4. ಯಂತ್ರ-ಜಂತ್ರ
 5. ಯೋಧ-ಜೋಧ

ವ್ಯಾಕರಣಾಂಶಗಳು

 1. ಪಿರಿದಾದ +ತೆರೆ= ಪೆರ್ದೆರೆ. ಕರ್ಮಧಾರಯ ಸಮಾಸ
 2. ಬಿರುಸಾದ+ಗಾಳಿ= ಕರ್ಮಧಾರಯ ಸಮಾಸ
 3. ಪರ್ವತ=ರೂಢನಾಮ [ರೂಢನಾಮ]
 4. ಕರುಣೆ Xನಿಷ್ಕರುಣೆ [ವಿರುದ್ಧ ಪದ]

ಇತರೆ ವಿಷಯಗಳು :

8th Standard Kannada Text Book Pdf 2022

8th Standard Kannada Notes 2022

8th Notes App

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ  

ಕನ್ನಡ ದೀವಿಗೆ 8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ  ಮತ್ತು ನಾವು ನಿಮ್ಮನ್ನು ಶೀಘ್ರದಲ್ಲಿಯೇ ಸಂಪರ್ಕಿಸುತ್ತೇವೆ.

5 thoughts on “8ನೇ ತರಗತಿ ಭಾರತೀಯತೆ ಕನ್ನಡ ನೋಟ್ಸ್ | 8th Standard Bharatiyate Kannada Poem Notes

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh