ಕನ್ನಡ ವರ್ಣಮಾಲೆ ಅಕ್ಷರಗಳು, Kannada Varnamala, 49 letters in Kannada, Swaragalu Vyanjanagalu Yogavahagalu in Varnamaala. Alphabets in Kannada letters in kannada kannada varnamala chart kannada varnamala akshara varnamale definition in kannada swaragalu in kannada vyanjanagalu in kannada
Kannada Varnamale in Kannada
ಕನ್ನಡ ಭಾಷೆಯಲ್ಲಿರುವ ಮೂಲಾಕ್ಷರಗಳನ್ನು ಕನ್ನಡ ವರ್ಣಮಾಲೆ ಎಂದು ಕರೆಯುತ್ತಾರೆ
ಕನ್ನಡ ವರ್ಣಮಾಲೆಯಲ್ಲಿ ೪೯ ಅಕ್ಷರಗಳಿವೆ.
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ ಕ್ಷ ಙ್ಞ
ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಸ್ವರಗಳು -೧೩
ವ್ಯಂಜನಗಳು -೩೪
ಯೋಗವಾಹಗಳು-೦೨
ಸ್ವರಗಳು
Swaragalu : ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.
ಸ್ವರಗಳ ವಿಧ
ಸ್ವರಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ಹೃಸ್ವ ಸ್ವರಗಳು ಹಾಗೂ ದೀರ್ಘ ಸ್ವರಗಳು.
ಹೃಸ್ವ ಸ್ವರ : ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ಹೃಸ್ವ ಅಂದರೆ ಚಿಕ್ಕದು. ಒಂದು ಹ್ರಸ್ವ ಸ್ವರವನ್ನು ಉಳಿಯಲು (ಉಚ್ಚಾರ ಮಾಡಲು) ಬರಿ ಒಂದು ಮಾತ್ರೆಯಷ್ಟು( ಒಂದು ಸರತಿ ಕಣ್ಣು ಮಿಟುಕುವಷ್ಟು ) ಹೊತ್ತು ಬೇಕಾಗುವುದು. ಹೃಸ್ವ ಸ್ವರಗಳು : ಅ ಇ ಉ ಋ ಎ ಒ
ದೀರ್ಘ ಸ್ವರಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು.
ದೀರ್ಘಸ್ವರ/ಉದ್ದಸ್ವರ. : ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ದೀರ್ಘ ಅಂದರೆ ಉದ್ದದ್ದು ಎಂದು. ಒಂದು ದೀರ್ಘ ಸ್ವರವನ್ನು ಉಲಿಯಲು ಎರಡು ಮಾತ್ರೆಯಷ್ಟು(ಎರಡು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು) ಹೊತ್ತು ಬೇಕಾಗುವುದು. ದೀರ್ಘ ಸ್ವರಗಳು: ಆ ಈ ಊ ಏ ಐ ಓ ಔ
ಪ್ಲುತ ಸ್ವರ : ಮೂರು ಇಲ್ಲವೆ, ಅದಕ್ಕಿಂತ ಹೆಚ್ಚು ಮಾತ್ರೆಗಳ ಹೊತ್ತು ಉಳಿಯುವ ಸ್ವರ.
ವ್ಯಂಜನಗಳು Vyanjanagalu:
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ (೩೪) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು.
ಪ್ರಮುಖವಾಗಿ ವ್ಯಂಜನಗಳಲ್ಲಿ ಎರಡು ವಿಧ. ಅವು ಯಾವುವೆಂದರೆ
ವರ್ಗೀಯ ವ್ಯಂಜನಗಳು (೨೫ : ಕ,ಚ,ಟ,ತ,ಪ-ವರ್ಗಗಳು)
ಅವರ್ಗೀಯ ವ್ಯಂಜನಗಳು (೯-ಯ ಇಂದ ಳ ವರೆಗೆ)
ವರ್ಗೀಯ ವ್ಯಂಜನ
ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು (೨೫) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ,
ಕ-ವರ್ಗ, = ಕ, ಖ, ಗ, ಘ, ಙ.
ಚ-ವರ್ಗ, = ಚ, ಛ, ಜ, ಝ, ಞ.
ಟ-ವರ್ಗ ,= ಟ, ಠ, ಡ, ಢ, ಣ.
ತ-ವರ್ಗ, = ತ, ಥ, ದ, ಧ, ನ.
ಪ-ವರ್ಗ,= ಪ, ಫ, ಬ, ಭ, ಮ.
ಅವರ್ಗೀಯ ವ್ಯಂಜನ
ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ
ಅವು ಯಾವುವೆಂದರೆ : ಯ,ರ,ಲ,ವ,ಶ,ಷ,ಸ,ಹ,ಳ.
ಯೋಗವಾಹಗಳು | Yogavaahagalu :
ಸ್ವತಂತ್ರವಲ್ಲದ ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು ಯೋಗವಾಹಗಳೆಂದು ಕರೆಯುತ್ತಾರೆ
ಕನ್ನಡ ಒತ್ತಕ್ಷರಗಳು
ಕನ್ನಡ ಒತ್ತಕ್ಷರಗಳು (೩೪)ಮುವತ್ನಾಲ್ಕು. ಅವು ಯಾವುವೆಂದರೆ:
ಕ್ಕ ಖ್ಖ ಗ್ಗ ಘ್ಘ ಙ್ಙ
ಚ್ಚ ಛ್ಛ ಜ್ಜ ಝ್ಝ ಞ್ಞ
ಟ್ಟ ಠ್ಠ ಡ್ಡ ಢ್ಢ ಣ್ಣ
ತ್ತ ಥ್ಥ ದ್ದ ಧ್ಧ ನ್ನ
ಪ್ಪ ಫ್ಫ ಬ್ಬ ಭ್ಭ ಮ್ಮ
ಯ್ಯ ರ್ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ
Kannada Varnamale How Many Letters ?
answer : Kannada Varnamale Yalli 49
Skyculture Kannada Alphabet book “Kannada Varnamale
ಹಾಗೆ ನೀವು ಕನ್ನಡ ವರ್ಣಮಾಲೆ ಪುಸ್ತಕಗಳನ್ನು ನೀವು ಎಲ್ಲಿಂದ ಕರೆಯಿರಿ ಮಾಡಬಹುದು. Buy Now
FAQ :
ಕನ್ನಡ ಭಾಷೆಯಲ್ಲಿರುವ ಮೂಲಾಕ್ಷರಗಳನ್ನು ಕನ್ನಡ ವರ್ಣಮಾಲೆ ಎಂದು ಕರೆಯುತ್ತಾರೆ
ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.
ಇತರೆ ವಿಷಯಗಳು :
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಕನ್ನಡ ವರ್ಣಮಾಲೆ ಬಗ್ಗೆ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಕನ್ನಡ ವರ್ಣಮಾಲೆ ಬಗ್ಗೆ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ