Kannada Naadu Nudi Prabandha in Kannada | ಕನ್ನಡ ನಾಡು ನುಡಿ ಪ್ರಬಂಧ

Kannada Nadu Nudi Prabandha Samskruti Bagge Prabandha ಕನ್ನಡ ನಾಡು ನುಡಿ ಪ್ರಬಂಧ, Essay About Kannada Naadu Nudi Speech in Kannada Language

Kannada Naadu Nudi Essay in Kannada Language

ಪೀಠಿಕೆ :

ಭಾಷೆಯು ಸಂವಾಹನದ ವಾಹಕ. ಅದು ಇಲ್ಲದೆ ಯಾವುದೇ ಒಂದು ಪ್ರಾಣಿ ಸಂವಾಹಿಸಲು ಸಾಧ್ಯವಿಲ್ಲ. ಮಾನವ ಇತರೆ ಪ್ರಾಣಿಗಳಿಗಿಂತ ಭಿನ್ನ ರೀತಿಯ ಸಂವಾಹನದ ಮೂಲಕ ಮತ್ತೊಬ್ಬ ಮಾನವನೊಡನೆ ಸಂವಾಹಿಸಲು ವಿಶಿಷ್ಟವಾದ ಭಾಷೆಗಳನ್ನು ರೂಪಿಸಿಕೊಂಡಿದ್ದಾನೆ.

ಭಾಷೆ ಎಂಬುವುದು ಕೇವಲ ಸಂವಾಹನಕ್ಕೆ ಅವಶ್ಯವಾದ ಮಾಧ್ಯಮವೆ ಆದರೂ, ವ್ಯಕ್ತಿಯ ಭಾವನೆಗಳು ಹೊರ ಹೊಮ್ಮಲು ಇರುವ ವಾಹಕವೂ ಸಹ ಆಗಿದೆ.

ಇಂದು ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಿದ್ದಾರೆ. ನಮ್ಮ ‘ಕನ್ನಡ’ ಭಾಷೆಯು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ.

ಒಂದು ಬೌಗೋಳಿಕ ಎಲ್ಲೆಯೊಳಗೆ ಜನರು ಹೊಂದಿರುವ ಸಂಸ್ಕೃತಿ ಉಳಿಯ ಬೇಕೆಂದರೆ ಆ ಎಲ್ಲೆಯೊಳಗಿನ ಭಾಷೆ ಅಸ್ತಿತ್ವದಲ್ಲಿರಲೇಬೇಕು.

ಕನ್ನಡ ಭಾಷೆ ಇಂದು ಇಂಗ್ಲೀಷಿನ ವ್ಯಾಪಕ ಬಳಕೆಯಿಂದಾಗಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಈ ಪ್ರಬಂಧದಲ್ಲಿ ಕನ್ನಡ ನಾಡ ನುಡಿಯ ರಕ್ಷಣೆ, ಸವಾಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಯ ಬಗ್ಗೆ ಬರೆಯಲಾಗಿದೆ.

ಕನ್ನಡದ ಬಗ್ಗೆ ಹೇಳುವುದಾದರೆ, ಕನ್ನಡವು ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತಿಸಲ್ಪಟ್ಟಿರುವ ಮೂಲದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ.

Essay About Kannada Naadu Nudi Prabandha in Kannada

ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿತೆಂದು ಹೇಳಲಾಗುತ್ತದೆ.

ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಳೆಯದು. ಐದನೆಯ ಶತಮಾನದ  ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತು.

ಲಿಪಿಯ ಉಗಮದ   ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊದಮೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ.

ಕುಮುದೇಂದು ಮುನಿ ರಚಿಸಿದ ‘ಸಿರಿಭೂವಲಯ’ ಗ್ರಂಥದಲ್ಲಿ ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ ಎಂದು ಸಾಭೀತುಪಡಿಸಿದ್ದಾರೆ

ವಿಷಯ ಬೆಳವಣಿಗೆ

ನವೆಂಬರ್‌ 1, ಕನ್ನಡಿಗರಿಗೆಲ್ಲ ಸಂಭ್ರಮ ಮತ್ತು ಸಡಗರದ ದಿನ. ಹಾಗೆಯೇ ಕನ್ನಡ ನಾಡು-ನುಡಿಯ ಅಭಿವೃದ್ಧಿಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ದಿನವೂ ಆಗಿದೆ.

ಸರಿಸುಮಾರು ಎರಡೂವರೆ ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದ ಈ ಕನ್ನಡ ನಾಡನ್ನು ಶಾತವಾಹನ, ಗಂಗ, ಕದಂಬ, ಚಾಲುಕ್ಯ,

ರಾಷ್ಟ್ರಕೂಟ ಹೊಯ್ಸಳ ಮುಂತಾದ ರಾಜವಂಶದವರು ಆಳುವುದಲ್ಲದೆ ರಾಷ್ಟ್ರದ ಇತಿಹಾಸದಲ್ಲಿ ತಮ್ಮ ಕೀರ್ತಿಗಾಥೆಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ.

ಬೇಲೂರು-ಹಳೆಬೀಡು, ಬದಾಮಿ-ಪಟ್ಟದಕಲ್ಲು, ಐಹೊಳೆ ಹಂಪಿ ಮುಂತಾದ ಸ್ಥಳಗಳು ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆಗೆ ಸಾಕ್ಷಿಯಾಗಿವೆ. ಪ್ರಾಚೀನ ಕಾಲದಿಂದಲೂ ನಮ್ಮ ನಾಡು ಧರ್ಮ, ಸಾಹಿತ್ಯ, ಸಂಗೀತ, ನೃತ್ಯ, ಕಲೆ, ಕ್ರೀಡೆ, ಶಿಲ್ಪ ಮತ್ತು ವಾಸ್ತು ಶಿಲ್ಪಗಳಿಗೆ ಹೆಸರಾದುದು.

ಶೈವ, ವೈಷ್ಣವ, ಜೈನ, ಬೌದ್ಧ, ಲಿಂಗಾಯತ, ಇಸ್ಲಾಂ, ಕ್ರೈಸ್ತ ಮುಂತಾದ ಧರ್ಮಗಳಿಗೆ ಆಶ್ರಯ ನೀಡಿ ’ಸರ್ವಧರ್ಮಧೇನು ನಿವಹಕ್ಕಾಡುಂಬೊಲಂ’ ಎಂಬ ಕವಿವಾಣಿಗೆ ಅನ್ವರ್ಥಕವಾದುದು ಈ ಕನ್ನಡನಾಡು.

ಒಂದೊಮ್ಮೆ ಕಾವೇರಿಯಿಂದ ಗೋದಾವರಿಯ ತೀರದವರೆಗೆ ಹಬ್ಬಿದ ನಮ್ಮ ವಿಶಾಲವಾದ ಕನ್ನಡ ನಾಡು ವಸಾಹತುಶಾಹಿಯ ಆಡಳಿತದ ಪರಿಣಾಮವಾಗಿ ಹರಿದು ಹಂಚಿಹೋಗಿತ್ತು.

ಕನ್ನಡತ್ವ ಮತ್ತು ಕರ್ನಾಟಕತ್ವದ ಪ್ರಜ್ಞೆ ಮಾಯವಾಗಿದ್ದ ಆ ಸಂದರ್ಭದಲ್ಲಿ ಡೆಪ್ಯೂಟಿ ಚೆನ್ನಬಸಪ್ಪ,

ಆಲೂರ ವೆಂಕಟರಾಯರಂಥ ಅನೇಕ ಪುಣ್ಯಜೀವಿಗಳು ಆ ಪ್ರಜ್ಞೆಯನ್ನು ಮರುಸ್ಥಾಪಿಸಿ ಕನ್ನಡದ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿಸಿದರು. ಭಾರತದ ಸ್ವಾತಂತ್ರ್ಯ, ಕರ್ನಾಕದ ಏಕೀಕರಣ

ಇವೆರಡೂ ಏಕಕಾಲದಲ್ಲಿ ನಡೆದು ಸ್ವತಂತ್ರ ಭಾರತದಲ್ಲಿ 1956ರ ನವೆಂಬರ 1ರಂದು ನಮ್ಮ ಚೆಲುವ ಕನ್ನಡ ನಾಡು ಉದಿಸಿ ಕನ್ನಡಿಗರೆಲ್ಲ ಸಂಭ್ರಮಪಡುವಂತಾದದ್ದು ಇಂದು ಇತಿಹಾಸ.

ಕರ್ನಾಟಕದಷ್ಟೇ ಪ್ರಾಚೀನತೆ ಹಾಗು ಶ್ರೀಮಂತ ಪರಂಪರೆಯನ್ನು ಹೊಂದಿರುವಂತಹದ್ದು ನಮ್ಮ ತಾಯ್ನುಡಿ ಕನ್ನಡ. ದ್ರಾವಿಡ ಭಾಷೆಗಳಲ್ಲಿ ಮುಕುಟಪ್ರಾಯವಾಗಿರುವ ಕನ್ನಡವು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳ ಜೊತೆಗೆ ಶಾಸ್ತ್ರೀಯ ಸ್ಥಾನಮಾನ ಪಡೆದ ಮೃದು-ಮಧುರ ಭಾಷೆಯಾಗಿದೆ.

Kannada Naadu Nudi Bagge Prabandha

’ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’ ಎಂದು ಕವಿ ಬೆಟಗೇರಿ ಕೃಷ್ಣಶರ್ಮರು ಮನದುಂಬಿ ಹಾಡಿದ್ದಾರೆ.

ಪಂಪ-ರನ್ನರು, ಬಸವಾದಿ ಶರಣರು, ದಾಸಶ್ರೇಷ್ಠರು, ಹರಿಹರ, ರಾಘವಾಂಕ, ಕುಮಾರವ್ಯಾಸಾದಿ ಪ್ರಾಚೀನ ಕವಿಗಳು, ರಸ ಋಷಿಗಳು ಹಾಗು ಕುವೆಂಪು, ಬೇಂದ್ರೆ, ಕಣವಿ, ಶಿವರುದ್ರಪ್ಪನವರಂತಹ ಆಧುನಿಕ ಕವಿ ಸಾಹಿತಿಗಳು ಕನ್ನಡವನ್ನು ಸಮೃದ್ಧಗೊಳಿಸಿದ್ದಾರೆ.

ಈ ಅಖಂಡ ನುಡಿಕರ್ನಾಟಕದಲ್ಲಿ ’ನೃಪತುಂಗನೆ ಚಕ್ರವರ್ತಿ| ಪಂಪನಿಲ್ಲಿ ಮುಖ್ಯಮಂತ್ರಿ| ರನ್ನ ಜನ್ನ ನಾಗವರ್ಮ| ರಾಘವಾಂಕ ಹರಿಹರ| ಬಸವೇಶ್ವರ ನಾರಣಪ್ಪ| ಸರ್ವಜ್ಞ ಷಡಕ್ಷರ;|| ಸರಸ್ವತಿಯೆ ರಚಿಸಿದೊಂದು| ನಿತ್ಯ ಸಚಿವ ಮಂಡಲ| ತನಗೆ ರುಚಿರ ಕುಂಡಲ||’ ಎಂದು ಕುವೆಂಪು ಬಣ್ಣಿಸಿದ್ದಾರೆ. ಆದರೆ ಅದೇ ಕವಿಗಳು ಕನ್ನಡಕೆ ಹೋರಾಡು ಕನ್ನಡ ಕಂದ’ ಎಂದು ಕರೆ ಕೊಟ್ಟಿದ್ದರೂ ಇಂದು ’ಕನ್ನಡವ ಕಾಪಾಡು ಕನ್ನಡಿಗರಿಂದ’ ಎಂದು ಹೇಳುವಂತಹ ಸಂದರ್ಭ ಒದಗಿರುವುದು ದುರ್ದೈವವೆನ್ನದೆ ವಿಧಿಯಲ್ಲ.

ಕನ್ನಡ ನಾಡು ಚೆನ್ನ, ಕನ್ನಡ ನುಡಿ ಚೆನ್ನ. ಚೆಲ್ವಾದುದು ಕನ್ನಡಮೆನಿಪ್ಪಾ ನಮ್ಮ ನಾಡು, ಚೆಲ್ವಾದುದು ಕನ್ನಡಮೆನಿಪ್ಪಾ ನಮ್ಮ ನುಡಿ. ಚೆಲುವ ಕನ್ನಡವನ್ನು ಆ ತಾಯಿಯ ಮಕ್ಕಳಾದ ನಾವೇ ಉಳಿಸಬೇಕು, ಬೆಳೆಸಬೇಕು.

ನಮ್ಮ ತಾಯಿ ನಮ್ಮ ನಿರ್ಲಕ್ಷ್ಯದಿಂದ ಕೊರಗಿ ಸಾಯುವಂತಾಗಬಾರದು.

ಕನ್ನಡ ತಾಯಿ ಕರ್ನಾಟಕದಲ್ಲಿ ಕಳೆದು ಹೋಗದಂತೆ, ಕರ್ನಾಟಕ ಕರಗಿ ಹೋಗದಂತೆ ನೆಲ-ಜಲ, ಭಾಷೆ-ಸಂಸ್ಕೃತಿಗಳ ಉಳುವಿಗಾಗಿ ನಾವು ಶ್ರಮಿಸಬೇಕು.

ಕನ್ನಡ ತಾಯಿ ಬದುಕಿದರೆ ಕರ್ನಾಟಕದಲ್ಲಿಯೇ ಬದುಕಬೇಕು, ಬೆಳೆದರೆ ಕರ್ನಾಟಕದಲ್ಲಿಯೇ ಬೆಳೆಯಬೇಕು. ಅಂತಹ ಕನ್ನಡ ಪ್ರಜ್ಞೆ ಹಾಗು ಕರ್ನಾಟಕ ಪ್ರಜ್ಞೆಯನ್ನು ನಾವೆಲ್ಲ ಮೈಗೂಡಿಸಿಕೊಂಡು, ಬೆಳೆಯೋಣ, ಕನ್ನಡ ನಾಡು-ನುಡಿಯನ್ನು ಬೆಳೆಸೋಣ.

ಆದರೆ, ಅವರ ಗ್ರಂಥವನ್ನು ಜನ ಸಾಮಾನ್ಯರಿಗೆ ದೊರಕುವ ಹಾಗೆ ಸರ್ಕಾರ ಗಮನಹರಿಸಿಲ್ಲ. ಕನ್ನಡ ವೇದಗಳ ಕಾಲದಿಂದಲೂ ಬಳಕೆಯಲ್ಲಿದ್ದಿತು ಹಾಗೂ ಅದು ನಾಡ ರಕ್ಷಣೆಯ ಸಲುವಾಗಿ ಗುಪ್ತ ಭಾಷೆಯಾಗಿ ಬಳಕೆಯಾಗಿತ್ತೆಂದು ಕೆಲವು
ಶಾಸನಗಳಲ್ಲಿ ಉಲ್ಲೇಖವಾಗಿದೆ.

ಪ್ರಪಂಚದಲ್ಲಿ ಅದೆಷ್ಟೋ ಭಾಷೆಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಅಂತೆಯೆ ಕನ್ನಡವೂ ಸಹ ಇಂಗ್ಲೀಷ್ ವ್ಯಾಮೋಹಿ ಕನ್ನಡಿಗರಿಂದ ನಿರಾಕರಿಸಲ್ಪಡುತ್ತಿದೆ.

ಕನ್ನಡದ ರಕ್ಷಣೆ ಕೇವಲ ಹಳ್ಳಿಗರದು ಎಂಬ ಗೊಡ್ಡು ಮಾತು ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಓದಿದವರ ಹಾಗೂ ಓದುತ್ತಿರುವವರಿಂದ ಹೊರಹೊಮ್ಮುತ್ತಿದೆ.

ಕನ್ನಡವನ್ನು ಅನ್ನದ ಭಾಷೆಯಾಗಿಸಲು ಕೇವಲ ಕೆಲವೆ ಜನರು ಪ್ರಯತ್ನಿಸುತ್ತಿದ್ದಾರೆ.

ಕನ್ನಡದ ಪರ ಹೋರಾಟಗಾರರು ಎಂದು ಸೋಗು ಹಾಕಿರುವವರು ಕೇವಲ ಚಳುವಳಿಗಳನ್ನು ಮಾತ್ರ ಮಾಡಿಕೊಂಡು ಕನ್ನಡದ ಉಳಿವಿಗೆ ಮಾಡಬೇಕಾದ್ದನ್ನು ಮಾಡದೆ ವ್ಯರ್ಥವಾಗಿ ಇತರರ ಪ್ರಯತ್ನವನ್ನು ಹಾಳುಗೆಡವುತ್ತಿದ್ದಾರೆ.

೧೯೬೩ರ ಅಕ್ಟೋಬರ್ ೧೦ ರಂದು ಕರ್ನಾಟಕ ರಾಜ್ಯಭಾಷಾ ಅಧಿನಿಯಮವನ್ನು ಸರ್ಕಾರ ಜಾರಿ ಮಾಡಿತು. ಆದರೆ, ಸಮರ್ಪಕವಾಗಿ ಕನ್ನಡ ಇನ್ನೂ ಆಡಳಿತ ಭಾಷೆಯಾಗಿಲ್ಲ. ಬ್ರಿಟೀಷರು ಕನ್ನಡಕ್ಕೆ ನೀಡುತ್ತಿದ್ದ ಆಧ್ಯತೆಯನ್ನು ಇಂದಿನ ಸರ್ಕಾರ ನೀಡುತ್ತಿಲ್ಲ.

ವ್ಯವಹಾರಿಕವಾಗಿ ಕನ್ನಡವನ್ನು ಬಳಸುವುದನ್ನು ಜನರು ದಿನದಿಂದ ದಿನಕ್ಕೆ ಕಡಿಮೆ ಮಾಡುತ್ತಿದ್ದಾರೆ. ಉದ್ಯೋಗದ ಕಾರಣಗಳಿಗಾಗಿ, ಬಹುತೇಕ ಜನರು ಇಂಗ್ಲೀಷನ್ನೆ ಅನ್ನದ ಭಾಷೆಯಾಗಿಸಿಕೊಳ್ಳುತ್ತಿದ್ದಾರೆ.

ಇಂಗ್ಲೀಷ್ ಜಗತ್ತಿನ ಭಾಷೆಯಾಗಿದ್ದೇ ಇಂಗ್ಲೀಷ್ಗರ ಆಕ್ರಮಣಕಾರಿ ನೀತಿಯಿಂದ. ಮೊದಲು ಅಮೇರಿಕದಲ್ಲಿ ಇಂಗ್ಲೀಷ್ ಭಾಷೆಯೇ ಇರಲಿಲ್ಲ. ಕಾಲಾಂತರದಲ್ಲಿ ಬ್ರಿಟೀಷರ ಅಧಿಕಾರಶಾಹಿ ಹಾಗೂ ವಸಾಹತುಶಾಹಿ ನೀತಿಯಿಂದಾಗಿ ಇಂದು ಅಮೇರಿಕಾದಲ್ಲಿ ಇಂಗ್ಲೀಷ್ ಜನರ ನಾಡಿಯಾಗಿದೆ.

Kannada Nadu Nudi Prabandha Essay for Students

ಒಂದು ವೇಳೆ ಕನ್ನಡವನ್ನು ಬಳಸದೇ ಹೋದಲ್ಲಿ ಇಂಗ್ಲೀಷ್ ಭಾಷೆಯೆ ಭವಿಷ್ಯದಲ್ಲಿ ನಮ್ಮ ಭಾಷೆಯಾಗುವ ಮೂಲಕ ನಮ್ಮ ನಾಡು ಬ್ರಿಟನ್ ಅಥವಾ ಅಮೇರಿಕ ದೇಶಗಳ ರಾಜ್ಯಗಳ ಪಟ್ಟಿಯಲ್ಲಿ ಸೇರುವುದರಲ್ಲಿ ಯಾವ ಸಂಶಯ ಬೇಡ.

ಈ ನಾಡು ಇಂಗ್ಲೀಷ್ ಮಯವಾದರೆ, ಕನ್ನಡದಲ್ಲಿರುವ ಜನಪದ ಸಾಹಿತ್ಯಗಳನ್ನು ವಸ್ತುಸಂಗ್ರಹಾಲಯಗಳಲ್ಲಿ ನೋಡುವಂತಾಗುತ್ತದೆ.

ಈಗಾಗಲೆ, ಈ ರೀತಿಯ ಸಾಹಿತ್ಯಗಳು ಕಣ್ಮರೆಯಾಗುತ್ತಿದ್ದು ಪಾಪ್ ಗೀತೆಗಳು ಜನಪದದ ಸ್ಥಾನವನ್ನು ಆಕ್ರಮಿಸುತ್ತಿದೆ.

ನಾಡು ಉಳಿಯಬೇಕೆಂದರೆ ಭಾಷೆ ಉಳಿಯಬೇಕು. ಭಾಷೆ ಉಳಿಯಬೇಕೆಂದರೆ, ನಾವು ಪಡೆದುಕೊಂಡ ಜ್ಞಾನವನ್ನು ಕನ್ನಡಕ್ಕಾಗಿ ಮೀಸಲಿಡಬೇಕು. ನಮ್ಮ ಭಾಷೆ ಮೊದಲು ಕನ್ನಡವಾಗಿ ನಂತರ ಇತರೆ ಭಾಷೆಯಾಗಿರಬೇಕು.

ಕನ್ನಡದಲ್ಲಿ ಲಭ್ಯವಿರದ್ದನ್ನು ಲಭ್ಯವಾಗುವ ಹಾಗೆ ನಮ್ಮ ಕೌಶಲ್ಯ ಹಾಗೂ ಸಾಮರ್ಥ್ಯ ರೂಪುಗೊಳ್ಳಬೇಕು.

ಇದಕ್ಕಾಗಿ ಕನ್ನಡಿಗರಾದವರು ಅನಿವಾರ್ಯವಾಗಿ ಬೇರೆ ಭಾಷೆಯಲ್ಲಿ ಶಿಕ್ಷಣವನ್ನು ಪಡೆದರೂ ಸಾಮರ್ಥ್ಯವನ್ನು ಗಳಿಸಿದ ಮೇಲೆ ಕನ್ನಡದ ಬಳಕೆಯ ವಿಸ್ತರಣೆಗೆ ಅವಶ್ಯವಿರುವ ಕೆಲಸವನ್ನು ಮಾಡಬೇಕು.

ಉದಾ: ಒಬ್ಬ ವ್ಯಕ್ತಿ ಕಂಪ್ಯೂಟರ್ ಶಿಕ್ಷಣವನ್ನು ಇಂಗ್ಲೀಷ್ ಭಾಷೆಯಲ್ಲಿ ಪಡೆದು ಉದ್ಯೋಗಕ್ಕೆ ಸೇರುವುದು ಅನಿವಾರ್ಯವೇ ಆದರು, ಕನ್ನಡದಲ್ಲಿ ತಾನು ಇಂಗ್ಲೀಷ್ ಭಾಷೆಯಲ್ಲಿ ಪಡೆದ ಕಂಪ್ಯೂಟರ್ ಶಿಕ್ಷಣವನ್ನು ಕನ್ನಡದಲ್ಲೂ ಲಭ್ಯವಾಗುವ ಹಾಗೆ ಆತ
ಮಾಡಬೇಕು.

ಉಪಸಂಹಾರ :

ಇಂದು ವಿಜ್ಞಾನ, ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಹೆಚ್ಚು ಇಂಗ್ಲೀಷ್ ಭಾಷೆಯೆ ಬಳಕೆಯಾಗುತ್ತಿದೆ. ನಂತರದ ಸ್ಥಾನಗಳಲ್ಲಿ,

ಫ್ರೆಂಚ್, ಜರ್ಮನ್, ರಷ್ಯನ್ ಮತ್ತು ಇತರೆ ಭಾಷೆಗಳು ಬಳಸಲ್ಪಡುತ್ತಿದೆ. ನಮ್ಮ ಕನ್ನಡ ಉಳಿಯಬೇಕೆಂದರೆ ನಮ್ಮ ಪ್ರಯತ್ನವು ಸಹ
ಕನ್ನಡ ಮುಖಿಯಾಗಿರಬೇಕು.

ಸೈನಿಕರು ನಾಡ ರಕ್ಷಣೆಗೆ ದುಡಿದರೆ, ಆಯಾ ಭಾಷಿಕರು ಆಯಾ ಭಾಷೆಯನ್ನು ರಕ್ಷಿಸುವ ಸಲುವಾಗಿ ದುಡಿಯಬೇಕು. ‘ಭಾರತಕರ್ನಾಟಕ’ ದ ನಿವಾಸಿಯಾಗಿ ಮನಸ್ಸು ಇಂಗ್ಲೀಷ್ ಆಗಿರಬಾರದು. ಬದಲಾಗಿ ನಾಡ ನಿವಾಸಿಯಾಗಿ ‘ಕನ್ನಡ’ ದ ಮನಸ್ಸಾಗಿರಬೇಕು.

ಬೇರೆ ಭಾಷೆಗಳನ್ನು ಗೌರವಿಸಬೇಕು ಹಾಗು ನಮ್ಮನ್ನು ನಾವು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ, ಸಾಹಿತ್ಯಾತ್ಮಕವಾಗಿ, ಆಡಳಿತಾತ್ಮಕವಾಗಿ, ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಕನ್ನಡ ನಾಡನುಡಿಯ ಉಳಿವಿಗಾಗಿ ತೊಡಗಿಸಿಕೊಳ್ಳಬೇಕು.

ಕಣ್ಣಿಗೆ ಕಾಡಿಗೆ ಬೇಕು ಕಾಡಿಗೆ ಮರ-ಗಿಡ-ಬಳ್ಳಿ, ಪ್ರಾಣಿ-ಪಕ್ಷಿ ಬೇಕು

ಮರ-ಗಿಡ-ಬಳ್ಳಿ, ಪ್ರಾನಿ-ಪಕ್ಷಿಗಳಿಗೆ ನೀರು-ಗಾಳಿ-ಬೆಳಕು ಬೇಕು

ನೀರು-ಗಾಳಿ-ಕಾಡು-ನೆಲದ ರಕ್ಷಣೆಗೆ ಮಾನವನ ಪರಿಸರಾತ್ಮಕ ಬದುಕು ಬೇಕು

ನಮ್ಮ ಅಬಿವ್ಯಕ್ತಿ-ಸಾಂಸ್ಕೃತಿಕ-ಆಡಳಿತ-ಸಾಹಿತ್ಯ-ತಾಂತ್ರಿಕ-ಜ್ಞಾನ ಹೀಗೆ ಮುಂತಾದ
‘ಆತ್ಮಕ’ ವುಗಳಿಗೆ ಏನು ಬೇಕು?
‘ಕನ್ನಡ ನಾಡ ನುಡಿ’ ಎಂಬ ಆತ್ಮ ಬೇಕು.

ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿ ಬಗ್ಗೆ ಪ್ರಬಂಧ

FAQ :

ಆಧುನಿಕ ಕನ್ನಡ ಸಾಹಿತ್ಯದ ಪಿತಾಮಹ ಯಾರು?

ಆಧುನಿಕ ಕನ್ನಡ ಸಾಹಿತ್ಯದ ಪಿತಾಮಹ ಬಿ.ಎಂ ಶ್ರೀಕಂಠಯ್ಯ

ಕನ್ನಡ ಭಾಷೆ ಏಕೆ ವಿಶೇಷ ?

ಕನ್ನಡಕ್ಕೆ ಸಾವಿರ ವರ್ಷಗಳ ಅವಿಚ್ಛಿನ್ನ ಸಾಹಿತ್ಯ ಇತಿಹಾಸವಿದೆ . 
ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ನೀಡಲಾಗಿದೆ, ಯಾವುದೇ ದ್ರಾವಿಡ ಭಾಷೆಗೆ ಹೆಚ್ಚು ಮತ್ತು ಯಾವುದೇ ಭಾರತೀಯ ಭಾಷೆಗೆ ಎರಡನೇ ಅತ್ಯುನ್ನತ ಪ್ರಶಸ್ತಿಗಳು ಲಭಿಸಿದೆ.

ಇತರ ವಿಷಯಗಳು :

ಪುನೀತ್ ರಾಜ್ ಕುಮಾರ್ ಅವರ ಮಾಹಿತಿ

ಕನ್ನಡ ರಾಜ್ಯೋತ್ಸವದ ಬಗ್ಗೆ ಭಾಷಣ

ಬಾರಿಸು ಕನ್ನಡ ಡಿಂಡಿಮವ lyrics 

ಕನ್ನಡ ರಾಜ್ಯೋತ್ಸವದ ಬಗ್ಗೆ ಮಾಹಿತಿ

Kannada Rajyotsava Information In Kannada

Kannada Rajyotsava Songs

ಕನ್ನಡ ರಾಜ್ಯೋತ್ಸವ ಬಗ್ಗೆ ಪ್ರಬಂಧ

ಗ್ರಂಥಾಲಯದ ಮಹತ್ವ ಪ್ರಬಂಧ

ಕನ್ನಡ ಪತ್ರ ಲೇಖನ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಕನ್ನಡ ನಾಡು ನುಡಿ ಬಗ್ಗೆ ಪ್ರಬಂಧ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಕನ್ನಡ ನಾಡು ನುಡಿ ಬಗ್ಗೆ ಕನ್ನಡದಲ್ಲಿ ಪ್ರಬಂಧ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

10 thoughts on “Kannada Naadu Nudi Prabandha in Kannada | ಕನ್ನಡ ನಾಡು ನುಡಿ ಪ್ರಬಂಧ

Leave a Reply

Your email address will not be published. Required fields are marked *

rtgh