Kannada Rajyotsava Songs Mp3 Songs for Dance Lyrics in Kannada

ಕನ್ನಡ ರಾಜ್ಯೋತ್ಸವದ ಹಾಡುಗಳು, Kannada Rajyotsava Songs Mp3 Songs for Dance Lyrics in Kannada, Kannada Rajyotsava Songs List Download Mp3 Songs Kannada Naadu Songs Best Kannada Rajyotsava Songs

ಕನ್ನಡ ರಾಜ್ಯೋತ್ಸವದ ಹಾಡುಗಳು

ನಾವಾಡುವ ನುಡಿಯೇ ಕನ್ನಡ ನುಡಿ,

ಚಿನ್ನದ ನುಡಿ, ಸಿರಿಗನ್ನಡ ನುಡಿ

ನಾವಿರುವ ತಾಣವೇ ಗಂಧದ ಗುಡಿ,

ಅಂದದ ಗುಡಿ, ಚೆಂದದ ಗುಡಿ

ನಾವಾಡುವ ನುಡಿಯೇ ಕನ್ನಡ ನುಡಿ,

ನಾವಿರುವ ತಾಣವೇ ಗಂಧದ ಗುಡಿ

ಅಂದದ ಗುಡಿ ಗಂಧದ ಗುಡಿ

ಚಂದದ ಗುಡಿ ಶ್ರೀಗಂಧದ ಗುಡಿ

ಅಹಹ ಅಹಹ ಅಹಹ ಅಹಹ ಅಹಹ ಅಹಹ ॥

ಹಸುರಿನ ಬನಸಿರಿಗೇ ಒಲಿದು

ಸೌಂದರ್ಯ ಸರಸ್ವತಿ ಧರೆಗಿಳಿದು

ಅಹಹ ಒಹೊಹೊ ಅಹಹ ಒಹೊಹೊ

ಹರಿಯುವ ನದಿಯಲಿ ಈಜಾಡಿ

ಹೂಬನದಲಿ ನಲಿಯುತ ಓಲಾಡಿ

ಚೆಲುವಿನ ಬಲೆಯ ಬೀಸಿದಳೋ

ಈ ಗಂಧದ ಗುಡಿಯಲಿ ನೆಲೆಸಿದಳೋ

ಇದು ಯಾರ ತಪಸಿನ ಫಲವೋ

ಈ ಕಂಗಳು ಮಾಡಿದ ಪುಣ್ಯವೋ

ಒಹೊಹೊ ಹ ಆ॥೧॥

ನಾವಿರುವ ತಾಣವೇ ಗಂಧದ ಗುಡಿ

ಚಿಮ್ಮುತ ಓಡಿವೆ ಜಿಂಕೆಗಳು

ಕುಣಿದಾಡುತ ನಲಿದಿವೆ ನವಿಲುಗಳು

ಆಹಹಹಾ ಮುಗಿಲನು ಚುಂಬಿಸೋ ಆಸೆಯಲಿ

ತೂಗಾಡುತ ನಿಂತ ಮರಗಳಲಿ

ಹಾಡುತಿರೆ ಬಾನಾಡಿಗಳು

ಎದೆಯಲ್ಲಿ ಸಂತಸದಾ ಹೊನಲು

ಇದು ವನ್ಯ ಮೃಗಗಳ ಲೋಕವೋ

ಈ ಭೂಮಿಗೆ ಇಳಿದ ನಾಕವೋ

ಅಹಹಹ ಹೊಹೊ ॥೨॥

ನಾವಾಡುವ ನುಡಿಯೇ ಕನ್ನಡ ನುಡಿ

ನಾವಿರುವ ತಾಣವೇ ಗಂಧದ ಗುಡಿ,

ಅಂದದ ಗುಡಿ, ಗಂಧದ ಗುಡಿ,

ಚೆಂದದ ಗುಡಿ, ಶ್ರಿಗಂಧದ ಗುದಿ

ಆಹಹಹ ಆಹಹಹ

ಒಹೊಹೊ ಒಹೊಹೊ ಒಹೊ…ಹೊ…

Naavaduva Nudiye Kannada Nudi Mp3 Song Download

E Kannada Mannanu Maribeda Lyrics Download

ಕನ್ನಡ ರಾಜ್ಯೋತ್ಸವದ ಬಗ್ಗೆ ಹಾಡುಗಳು

ಚಿತ್ರ: ಸೋಲಿಲ್ಲದ ಸರದಾರ

(೧೯೯೨/1992)

ಸಾಹಿತ್ಯ: ಹಂಸಲೇಖ

ಸಂಗೀತ: ಹಂಸಲೇಖ

ಹಾಡಿದವರು: ಎಸ್.ಪಿ.ಬಿ.

ಕನ್ನಡ, ರೋಮಾಂಚನವೀ ಕನ್ನಡ

ಕಸ್ತೂರಿ ನುಡಿಯಿದು,

ಕರುಣಾಳು ಮಣ್ಣಿದು

ಚಿಂತಿಸು, ವಂದಿಸು,

ಪೂಜಿಸು, ಪೂಜಿಸು

ಈ ಕನ್ನಡ ಮಣ್ಣನು ಮರಿಬೇಡ

ಓ ಅಭಿಮಾನಿ, ಓ ಅಭಿಮಾನಿ

ಈ ಮಣ್ಣಿನ ಹೆಣ್ಣನು

ಜರಿಬೇಡ

ಓ ಅಭಿಮಾನಿ, ಓ ಅಭಿಮಾನಿ

ಸುಸಂಸ್ಕೃತ ಚರಿತೆಯ

ತಾಯ್ನಾಡು

ಮಹೋನ್ನತ ಕಲೆಗಳ

ನೆಲೆವೀಡು

ಕೆಡಿಸದಿರು ಈ ಹೆಸರ, ಈ

ಹೆಸರ

ಈ ಕನ್ನಡ ಮಣ್ಣನು ಮರಿಬೇಡ

ಓ ಅಭಿಮಾನಿ, ಓ ಅಭಿಮಾನಿ

ಈ ಮಣ್ಣಿನ ಹೆಣ್ಣನು

ಜರಿಬೇಡ

ಓ ಅಭಿಮಾನಿ, ಓ ಅಭಿಮಾನಿ

ಹಾಡಾಗಲಿ ಗೂಡಾಗಲಿ

ನಾಡಾಗಲಿ

ಕಟ್ಟೋಕೆ ನಾನಾದಿನ,

ಕೆಡವೋಕೆ ಮೂರೇ ದಿನ

ಹರಸಿದರು ಮುನಿಗಳು,

ಗಳಿಸಿದರು ಕಲಿಗಳು

ನೆತ್ತರದಿ ನೆಚ್ಚಿನ ಈ

ಮೆಚ್ಚಿನ ಸಾಮ್ರಾಜ್ಯವ

ಹಾಡಿದರು ಕವಿಗಳು,

ಕರಗಿದವು ಶಿಲೆಗಳು

ತುಂಬಿದರು ಎದೆಯಲಿ

ಸಿರಿಗನ್ನಡ ಅಭಿಮಾನವ

ಕನ್ನಡ, ರೋಮಾಂಚನವೀ ಕನ್ನಡ

ಹಾಡಿಸು, ಕೇಳಿಸು,

ಪ್ರೀತಿಸು

ಈ ಕನ್ನಡ ಮಣ್ಣನು ಮರಿಬೇಡ

ಓ ಅಭಿಮಾನಿ, ಓ ಅಭಿಮಾನಿ

ಈ ಮಣ್ಣಿನ ಹೆಣ್ಣನು

ಜರಿಬೇಡ

ಓ ಅಭಿಮಾನಿ, ಓ ಅಭಿಮಾನಿ

ಜ್ಞಾನ ಇದೆ, ಚಿನ್ನ ಇದೆ,

ಕಾವೇರಿ ಇದೆ

ಬಡತನವೆ ಮೇಲಾಗಿದೆ,

ನಮ್ಮತನವೆ ಮಂಕಾಗಿದೆ

ಯಾರಿಹರು ನಿಮ್ಮಲಿ,

ಮದಕರಿಯ ನಾಯಕ

ಕೆಚ್ಚೆದೆಯ ಎಚ್ಚಮ,

ರಣಧೀರರು ನುಡಿದಾಸರು

ಉಳಿದಿಹುದು ನಿಮ್ಮಲಿ,

ಹೊಯ್ಸಳರ ಕಿಡಿಗಳು

ಹೊನ್ನ ಮಳೆ ಸುರಿಸಿದ,

ಅರಿರಾಯರ ತೋಳ್ಬಲಗಳು

ಏಳಿರಿ, ಏಳಿರಿ, ಈ

ಪ್ರಾರ್ಥನೆಯ ಕೇಳಿರಿ

ಕಲಿಯಿರಿ, ದುಡಿಯಿರಿ,

ಉಳಿಸಿರಿ

ಈ ಕನ್ನಡ ಮಣ್ಣನು ಮರಿಬೇಡ

ಓ ಅಭಿಮಾನಿ, ಓ ಅಭಿಮಾನಿ

ಈ ಮಣ್ಣಿನ ಹೆಣ್ಣನು

ಜರಿಬೇಡ

ಓ ಅಭಿಮಾನಿ, ಓ ಅಭಿಮಾನಿ

ಸುಸಂಸ್ಕೃತ ಚರಿತೆಯ

ತಾಯ್ನಾಡು

ಮಹೋನ್ನತ ಕಲೆಗಳ

ನೆಲೆವೀಡು

ಕೆಡಿಸದಿರು ಈ ಹೆಸರ, ಈ

ಹೆಸರ

ಈ ಕನ್ನಡ ಮಣ್ಣನು ಮರಿಬೇಡ

ಓ ಅಭಿಮಾನಿ, ಓ ಅಭಿಮಾನಿ

ಈ ಮಣ್ಣಿನ ಹೆಣ್ಣನು

ಜರಿಬೇಡ

ಓ ಅಭಿಮಾನಿ, ಓ ಅಭಿಮಾನಿ

2. e kannada mannanu maribeda mp3 song download

Kalladare Naanu Kannada Song Lyrics Download

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ

ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ

ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ

ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ

ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಮುದ್ದು ಮುದ್ದು ಕನ್ನಡದ ಕಂದ

ತವರಿಗೆ ಇಂದು ಕೀರ್ತಿಯ ತಂದ

ಮುದ್ದು ಮುದ್ದು ಕನ್ನಡದ ಕಂದ

ತವರಿಗೆ ಇಂದು ಕೀರ್ತಿಯ ತಂದ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ

ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ

ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ

ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳೆವೆ

ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಮೇರೆವೆ

ಪದವಾದರೆ ನಾನು ಪಂಪನ ಪುಟದಲಿ ಮೆರೆವೆ

ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ

ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ

ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ

ಮುದ್ದು ಮುದ್ದು ಕನ್ನಡದ ಕಂದ

ತವರಿಗೆ ಇಂದು ಕೀರ್ತಿಯ ತಂದ

ಮುದ್ದು ಮುದ್ದು ಕನ್ನಡದ ಕಂದ

ತವರಿಗೆ ಇಂದು ಕೀರ್ತಿಯ ತಂದ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ

ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ

ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ

ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ

ಸ್ವರವಾದರೆ ನಾನು ದಾಸರ ಕಂಠದಿ ನಲಿವೆ

ಖಡ್ಗವಾದರೆ ನಾನು ಚೆನ್ನವ್ವನ ಕರದಲಿ ಮೆರೆವೆ

ಮರವಾದರೆ ನಾನು ಓಬವ್ವನ ಒನಕೆಯ ಬೆರೆವೆ

ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ

ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ

ಮುದ್ದು ಮುದ್ದು ಕನ್ನಡದ ಕಂದ

ತವರಿಗೆ ಇಂದು ಕೀರ್ತಿಯ ತಂದ

ಮುದ್ದು ಮುದ್ದು ಕನ್ನಡದ ಕಂದ

ತವರಿಗೆ ಇಂದು ಕೀರ್ತಿಯ ತಂದ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ

ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ

ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಸಿರಿಗನ್ನಡಂ ಗೆಲ್ಗೆ

ಸಿರಿಗನ್ನಡಂ ಗೆಲ್ಗೆ

ಸಿರಿಗನ್ನಡಂ ಗೆಲ್ಗೆ

3. kalladare naanu kannada song download

Karunada Tayi Sada Chinmayi lyrics

ಕರುನಾಡ ತಾಯಿ ಸದಾ ಚಿನ್ಮಯಿ

ಕರುನಾಡ ತಾಯಿ ಸದಾ ಚಿನ್ಮಯಿ

ಈ ಪುಣ್ಯ ಭೂಮಿ ನಮ್ಮ ದೇವಾಲಯ

ಪ್ರೇಮಾಲಯ, ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ

ಕರುನಾಡ ತಾಯಿ ಸದಾ ಚಿನ್ಮಯಿ

ವೀರ ಧೀರರಾಳಿದ ನಾಡು ನಿನ್ನದು

ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು

ವರ ಸಾಧು ಸಂತರ ನೆಲೆ ನಿನ್ನದು

ಮಹಾ ಶಿಲ್ಪಕಾರರ ಕಲೆ ನಿನ್ನದು

ಸಂಗೀತ ಸಾಹಿತ್ಯ ಸೆಲೆ ನಿನ್ನದು

ಕರುನಾಡ ತಾಯಿ ಸದಾ ಚಿನ್ಮಯಿ

ಕರುನಾಡ ತಾಯಿ ಸದಾ ಚಿನ್ಮಯಿ

ಈ ಪುಣ್ಯ ಭೂಮಿ ನಮ್ಮ ದೇವಾಲಯ

ಪ್ರೇಮಾಲಯ, ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ

ಕರುನಾಡ ತಾಯಿ ಸದಾ ಚಿನ್ಮಯಿ

ಜೀವ ತಂತಿ ಮೀಟುವ ಸ್ನೇಹ ನಮ್ಮದು

ಎಲ್ಲ ಒಂದೆ ಅನ್ನುವ ಔದಾರ್ಯ ನಮ್ಮದು

ಸೌಂದರ್ಯ ಸೀಮೆಯ ಗುಡಿ ನಮ್ಮದು

ಮಾಧುರ್ಯ ತುಂಬಿದ ನುಡಿ ನಮ್ಮದು

ಕಸ್ತೂರಿ ಕನ್ನಡದ ಸವಿ ನಮ್ಮದು

ರೋಮ ರೋಮಗಳು ನಿಂತವು ತಾಯೆ

ಚೆಲುವ ಕನ್ನಡದೊಳೇನಿದು ಮಾಯೆ

ಮುಗಿಲೇ ಕಡಲೆ ಸಿಡಿಲೆ ಕೇಳಿರಿ

ಮುಗಿಲೇ ಕಡಲೆ ಸಿಡಿಲೆ ಕೇಳಿರಿ

ತನುವು ಮನವು ಧನವು ಎಲ್ಲ ಕನ್ನಡ

ತನುವು ಮನವು ಧನವು ಎಲ್ಲ ಕನ್ನಡ

ಕರುನಾಡ ತಾಯಿ ಸದಾ ಚಿನ್ಮಯಿ

ಕರುನಾಡ ತಾಯಿ ಸದಾ ಚಿನ್ಮಯಿ

ಈ ಪುಣ್ಯ ಭೂಮಿ ನಮ್ಮ ದೇವಾಲಯ

ಪ್ರೇಮಾಲಯ, ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ

ಕರುನಾಡ ತಾಯಿ ಸದಾ ಚಿನ್ಮಯಿ

Karunada Tayi Sada Chinmayi Song Download

kelisade kallu kallinali lyrics kannada

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಧೂರಮೆಯ ಆಧಾರ
ಈ ಕಲೆಯ ಸಿಂಗಾರ
ಬಂಗಾರ ತೇರೇರಿ
ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ

ಇಂದಿಗೂ ಜೀವಂತ
ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ
ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕಣ ಕರೆ ನೀಡಿದೆ

ನೀನೊಮ್ಮೆ ಬಂದಿಲ್ಲಿ
ಹಿತವಾಗಿ ಹಾಡು… ಓ…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಗಾಳಿಯೇ ಆದೇಶ
ಮೇಘವೇ ಸಂದೇಶ
ಪ್ರೇಮಕೆ ಸಂಕೇತ
ಹೊಂಬಣ್ಣದಾಕಾಶ
ಋತು ಋತುಗಳು
ನಿನ್ನ ಕಾದಿವೆ

ನೀನಿರೆ ರಂಗೋಲಿ
ಸಂಗಾತಿ ಸುವ್ವಾಲಿ
ನವರಸವು ಮೈತಾಳಿ
ಜೀವನದ ಜೋಕಾಲಿ
ಯುಗಯುಗದಲು
ನಿನ್ನ ಕಾಯುವೆ

ನೀನೊಮ್ಮೆ ಬಂದಿಲ್ಲಿ
ಬೆಳಕನ್ನು ನೀಡು… ಓ…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ

ಇತರೆ ವಿಷಯಗಳು :

ಕನ್ನಡ ರಾಜ್ಯೋತ್ಸವದ ಬಗ್ಗೆ ಮಾಹಿತಿ

ಕನ್ನಡ ನಾಡು ನುಡಿ ಪ್ರಬಂಧ

ಕನ್ನಡ ರಾಜ್ಯೋತ್ಸವದ ಬಗ್ಗೆ ಭಾಷಣ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ 

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಕನ್ನಡ ರಾಜ್ಯೋತ್ಸವದ ಹಾಡುಗಳು ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಕನ್ನಡ ರಾಜ್ಯೋತ್ಸವದ ಹಾಡುಗಳು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ Comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Leave a Reply

Your email address will not be published. Required fields are marked *

rtgh