10ನೇ ತರಗತಿ ಅಧ್ಯಾಯ-4 ಕಾರ್ಬನ್‌ ಮತ್ತು ಅದರ ಸಂಯುಕ್ತಗಳು ವಿಜ್ಞಾನ ನೋಟ್ಸ್‌ | Class 10 Science Chapter 4 Notes in Kannada

10ನೇ ತರಗತಿ ಅಧ್ಯಾಯ-4 ಕಾರ್ಬನ್‌ ಮತ್ತು ಅದರ ಸಂಯುಕ್ತಗಳು ವಿಜ್ಞಾನ ನೋಟ್ಸ್‌ ಪ್ರಶ್ನೆ ಉತ್ತರ, Class 10 Science Chapter 4 Notes Question Answer Mcq 2024 carbon and its compounds class 10 notes questions with answers Kseeb Solution For Class 10 Science Chapter 4 Notes in Kannada Medium

 

Karban Mattu Adara Samyuktagalu in Kannada

class 10 science chapter 4 question answer
Class 10 Science Chapter 4 Notes

Class 10 Science Chapter 4 Notes

ಪಠ್ಯದಲ್ಲಿರುವ ಪ್ರಶೋತ್ತರಗಳು

1.ಕಾರ್ಬನ್ ಡೈ ಆಕ್ಸೆಡ್ ನ ಅಣುಸೂತ್ರ CO, ಇದರ ಇಲೆಕ್ಟ್ರಾನ್ ಚುಕ್ಕಿ ರಚನೆಯನ್ನು ಬರೆಯಿರಿ.

class 10 science chapter 4 question answer

2. ಸಲ್ಫರ್ ನ ಎಂಟು ಪರಮಾಣುಗಳಿಂದ ಮಾಡಲ್ಪಟ್ಟಿರುವ ಸಲ್ವ‌ ಅಣುವಿನ ಇಲೆಕ್ಟ್ರಾನ್ ಚುಕ್ಕಿ ರಚನೆ ಬರೆಯಿರಿ.

class 10 science chapter 4 question answer

3. ಪೆಂಟೇನ್ ಗೆ ಎಷ್ಟು ಬಗೆಯ ರಚನಾ ಸಮಾಂಗಿಗಳನ್ನು ಬರೆಯಬಹುದು? ಪೆಂಟೇನ್ ಗೆ 3 ಬಗೆಯ ರಚನಾ ಸಮಾಂಗಿಗಳನ್ನು ಬರೆಯಬಹುದು.

class 10 science chapter 4 question answer

4. ಸುತ್ತ ಮುತ್ತಲೂ ನಾವು ನೋಡುವ ಅಸಂಖ್ಯಾತ ಕಾರ್ಬನ್‌ ಸಂಯುಕ್ತಗಳ ದೊರೆಯುವಿಕೆಗೆ ಕಾರಣವಾದ ಕಾರ್ಬನ್ ನ ಎರಡು ಗುಣಗಳಾವುವು ?

೧. ಕಟನೀಕರಣ

೨. ಚತುರ್ವೇಲೆನ್ಸಿ

5. ಸೈಕ್ಲೋಪೆಂಟೇನ್ ನ ಅಣುಸೂತ್ರ ಮತ್ತು ಇಲೆಕ್ಟ್ರಾನ್ ಚುಕ್ಕಿ ರಚನೆಯನ್ನು ಬರೆಯಿರಿ

ಸೈಕ್ಲೋ ಪೆಂಟೇನ್ ನ ಅಣುಸೂತ್ರ C H ಇದರ ಚುಕ್ಕಿ ವಿನ್ಯಾಸ,

class 10 science chapter 4 question answer

6. ಈ ಕೆಳಗಿನ ಸಂಯುಕ್ತಗಳ ರಚನಾ ವಿನ್ಯಾಸವನ್ನು ಬರೆಯಿರಿ.

ಅ) ಎಥನೋಯಿಕ್ ಆಮ್ಲ.

class 10 science chapter 4 question answer
class 10 science chapter 4 question answer
class 10 science chapter 4 question answer


ಪ್ರೋಮೋ ಪೆಂಟೇನ್ ಗೆ ರಚನಾ ಸಮಾಂಗಿಗಳಿವೆಯೇ ?

ಪ್ರೋಮೋ ಪೆಂಟೇನ್ ಗೆ ಅನೇಕ ರಚನಾ ಸಮಾಂಗಿಗಳಿವೆ. ( ಅವುಗಳ ರಚನೆ ಯನ್ನು ಮೇಲಿನ ಆ) ಚಿತ್ರದಲ್ಲಿ ತೋರಿಸಲಾಗಿದೆ).

Class 10 Science Chapter 4 Question Answer 2023

7. ಈ ಕೆಳಗಿನ ಸಂಯುಕ್ತಗಳನ್ನು ಹೇಗೆ ಹೆಸರಿಸುವಿರಿ.

class 10 science chapter 4 question answer

8. ಎಥನಾಲ್ ನ್ನು ಎಥನೋಯಿಕ್ ಆಮ್ಲವಾಗಿ ಪರಿವರ್ತಿಸುವುದು ಉತ್ಕರ್ಷಣ ಕ್ರಿಯೆಯಾಗಿದೆ ಏಕೆ?

class 10 science chapter 4 question answer

ಈ ಕ್ರಿಯೆಯಲ್ಲಿ ಎಥನಾಲ್ ಗೆ ಆಕ್ಸಿಜನ್ ನು ಸೇರಿಸುವ ಕಾರಣ ಅದು ಉತ್ಕರ್ಷಣ ಕ್ರಿಯೆಯಾಗಿದೆ.

9. ಬೆಸುಗೆ ಹಾಕಲು ಆಕ್ಸಿಜನ್ ಮತ್ತು ಈಥೈನ್ ಮಿಶ್ರಣವನ್ನು ದಹಿಸಲಾಗುತ್ತದೆ.ಈಥೈನ್ ಮತ್ತು ಗಾಳಿಯ ಮಿಶ್ರಣವನ್ನು ಏಕೆ ಬಳಸುವುದಿಲ್ಲ ?

class 10 science chapter 4 question answer

ಈಥೈನ್ ನ್ನು ಗಾಳಿಯಲ್ಲಿ ದಹಿಸಿದರೆ ಕಪ್ಪು ಬಣ್ಣದ ಹೊಗೆಯೊಂದಿಗೆ ದಹಿಸುತ್ತದೆ. ಇದಕ್ಕೆ ಕಾರಣ ಈಥೈನ್ ನ ಅಪೂರ್ಣ ದಹನ .ಆದರೆ ಇದೇ ಈಥೈನ ನ್ನು ಆಕ್ಸಿಜನ್‌ ಜೊತೆ ದಹಿಸಿದರೆ ಅದು ಸ್ವಚ್ಛ ಜ್ವಾಲೆಯೊಂದಿಗೆ ಉರಿಯುತ್ತದೆ ಮತ್ತು 3000°C ತಾಪವನ್ನು ಉತ್ಪತ್ತಿಮಾಡುತ್ತದೆ, ಆದ್ದರಿಂದ ಇದನ್ನು ಬೆಸುಗೆ ಹಾಕಲು ಬಳಸುತ್ತಾರೆ. ಆದರೆ ಗಾಳಿಯಲ್ಲಿ ಉರಿಸಿದರೆ ಇಷ್ಟು ಅಧಿಕ ತಾಪವನ್ನು ಪಡೆಯಲು ಸಾಧ್ಯವಿಲ್ಲ.

10. ಆಲೋಹಾಲ್ ಮತ್ತು ಕಾರ್ಬನಿಕ್ ಆಮ್ಲಗಳ ನಡುವಿನ ವ್ಯತ್ಯಾಸವನ್ನು ಪ್ರಾಯೋಗಿಕವಾಗಿ ಹೇಗೆ ಪತ್ತೆ ಹಚ್ಚುವಿರಿ,

ಆಲೋಹಾಲ್‌ ಮತ್ತು ಕಾರ್ಬನಿಕ್ ಆಮ್ಲಗಳ ನಡುವಿನ ವ್ಯತ್ಯಾಸವನ್ನು ಕಾರ್ಬೋನೇಟ್ ಮತ್ತು ಬೈಕಾರ್ಬೋನೇಟ್ ಜೊತೆ ಅವುಗಳ ವರ್ತನೆಯಿಂದ ತಿಳಿಯಬಹುದು.ಕಾರ್ಬನಿಕ್ ಆಮ್ಲವು ಕಾರ್ಬೋನೇಟ್ ಮತ್ತು ಬೈಕಾರ್ಬೋನೇಟ್ ಗಳ ಜೊತೆ ವರ್ತಿಸಿ ಲವಣ , ನೀರು ಮತ್ತು ಇಂಗಾಲದ ಡೈ ಆಕ್ಸೆಡ್‌ ನು ಉತ್ಪತ್ತಿ ಮಾಡಿ ಸುಣ್ಣದ ತಿಳಿ ನೀರನ್ನು ಹಾಲಿನಂತೆ ಬೆಳ್ಳಗಾಗಿಸುತ್ತದೆ.ಆದರೆ ಆಕ್ಕೋಹಾಲ್ ಕಾರ್ಬೋನೇಟ್ ಅಥವಾ ಬೈಕಾರ್ಬೋನೇಟ್ ಜೊತೆ ವರ್ತಿಸುವುದಿಲ್ಲ.

11,ಉತ್ಕರ್ಷಣಕಾರಿಗಳು ಎಂದರೇನು ?

ವಸ್ತುವೊಂದರಿಂದ ಆಮ್ಲಜನಕವನ್ನು ಹೊರತೆಗೆಯುವ ರಾಸಾಯನಿಕಗಳಿಗೆ ಉತ್ಕರ್ಷಣಕಾರಿಗಳು ಎನ್ನುವರು.

12. ಮಾರ್ಜಕಗಳನ್ನು ಬಳಸಿ ನೀರಿನ ಗಡಸುತನ ಪರೀಕ್ಷಿಸಬಹುದೇ ?

ಮಾರ್ಜಕಗಳು ನೀರಿನಲ್ಲಿರುವ ಗಡಸುತನಕ್ಕೆ ಕಾರಣವಾಗಿರುವ ಮೆಗ್ನಿಷಿಯಂ ಅಥವಾ ಕ್ಯಾಲ್ಸಿಯಂ ಅಯಾನ್ ಗಳ ಜೊತೆ ವರ್ತಿಸುವುದಿಲ್ಲ.ಆದರೆ ಸಾಬೂನು ಅವುಗಳೊಂದಿಗೆ ವರ್ತಿಸುತ್ತದೆ, ಹೀಗಾಗಿ ಮಾರ್ಜಕ ಗಡಸು ನೀರು ಮತ್ತು ಮೆದು ನೀರು ಎರಡರಲ್ಲೂ ನೊರೆ ಉತ್ಪತ್ತಿ ಮಾಡುತ್ತದೆ. ಆದ್ದರಿಂದ ಮಾರ್ಜಕವನ್ನು ಬಳಸಿ ನೀರಿನ ಗಡಸುತನ ಪರೀಕ್ಷಿಸಲು ಸಾಧ್ಯವಿಲ್ಲ.

13. ಜನರು ಬಟ್ಟೆ ತೊಳೆಯಲು ವಿವಿಧ ವಿಧಾನಗಳನ್ನು ಬಳಸುತ್ತಾರೆ.ಸಾಮಾನ್ಯವಾಗಿ ಸಾಬೂನನ್ನು ಸೇರಿಸಿದ ನಂತರ ಬಟ್ಟೆಗಳನ್ನು ಕಲ್ಲಿನ ಮೇಲೆ ಹೊಡೆಯುತ್ತಾರೆ, ಅಥವಾ ಕೋಲಿನಿಂದ ಹೊಡೆಯುತ್ತಾರೆ.ಅಥವಾ ಬ್ರಷ್ ನಿಂದ ಉಜ್ಜುತ್ತಾರೆ.ಅಥವಾ ಮಿಶ್ರಣವನ್ನು ಬಟ್ಟೆ ತೊಳೆಯುವ ಯಂತ್ರಕ್ಕೆ ಹಾಕಿ ಸ್ವಚ್ಛ ಗೊಳಿಸುತ್ತಾರೆ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಅವುಗಳನ್ನು ಉಜ್ಜುವಿಕೆಗೆ ಒಳಪಡಿಸಲು ಕಾರಣವೇನು ?

ಸಾಬೂನಿನ ಅಣುವಿನಲ್ಲಿ ಜಲಾಕರ್ಷಕ ಮತ್ತು ಜಲವಿಮೋಚಕಗಳೆಂಬ ಎರಡು ವಿಧಗಳಿರುತ್ತವೆ. ಇವು ಬಟ್ಟೆಯಲ್ಲಿರುವ ಗ್ರೀಸ್ ಅಥವಾ ಕೊಳೆಯ ಜೊತೆ ಸೇರಿ ಮಿಸ್ಟೆಲ್ ಗಳೆಂಬ ರಚನೆಯನ್ನು ಉಂಟುಮಾಡುತ್ತವೆ.ಈ ಮಿಸ್ಟೆಲ್ ಗಳನ್ನು ಹೊರತೆಗೆಯಲು ಬಟ್ಟೆಯನ್ನು ಉಜ್ಜುವಿಕೆಗೆ ಒಳಪಡಿಸಬೇಕಾಗುತ್ತದೆ.

ಅಭ್ಯಾಸದ ಪ್ರಶೋತ್ತರಗಳು

1. ಈಥೇನ್ ನ ಅಣುಸೂತ್ರ C.H, ಇದರಲ್ಲಿರುವುದು.

ಬಿ) 7 ಕೋವಲೆಂಟ್ ಬಂಧ

2. ಬ್ಯೂಟನೋನ್ ನಾಲ್ಕು ಕಾರ್ಬನ್ ಪರಮಾಣು ಹೊಂದಿರುವ ಸಂಯುಕ್ತವಾಗಿದ್ದು, ಇದರಲ್ಲಿನ ಕ್ರಿಯಾಗುಂಪೆಂದರೆ

ಸಿ) ಕೀಟೋನ್

3.ಅಡುಗೆ ಮಾಡುವಾಗ ಪಾತ್ರೆಯ ಹೊರಮೈ ಕಪ್ಪಾಗಿದ್ದರೆ ಇದರ ಅರ್ಥ ‌

ಬಿ) ಇಂಧನವು ಪೂರ್ಣವಾಗಿ ದಹನ ಹೊಂದುತ್ತಿಲ್ಲ.

4.CH CI ನಲ್ಲಿ ಬಂಧ ಉಂಟಾಗುವುದನ್ನು ಬಳಸಿಕೊಂಡು, ಕೋವೆಲೆಂಟ್ ಬಂಧದ ಗುಣವನ್ನು ವಿವರಿಸಿ.

class 10 science chapter 4 question answer


ಕಾರ್ಬನ್ ತನ್ನ ಹೊರ ಕವಚದಲ್ಲಿರುವ ನಾಲ್ಕು ಇಲೆಕ್ಟ್ರಾನ್ ಗಳನ್ನು ಕಳೆದುಕೊಳ್ಳುವುದು ಅಥವಾ ಇತರ ಧಾತುಗಳ ಪರಮಾಣುಗಳಿಂದ ನಾಲ್ಕು ಇಲೆಕ್ಟ್ರಾನ್ ಗಳನ್ನು ಪಡೆದುಕೊಳ್ಳುವುದು ಕಷ್ಟದ ಕೆಲಸ ಏಕೆಂದರೆ ಇದಕ್ಕೆ ಅಪಾರವಾದ ಶಕ್ತಿಯ ಅವಶ್ಯಕತೆ ಇದೆ. ಆದ್ದರಿಂದ ಇದು ಅಷ್ಟಕ ವಿನ್ಯಾಸವನ್ನು ಹೊಂದಲು ಇತರ ಕಾರ್ಬನ್ ಪರಮಾಣುಗಳೊಂದಿಗೆ ಅಥವಾ ಇತರ ಧಾತುಗಳ ನಾಲ್ಕು ಪರಮಾಣುಗಳೊಂದಿಗೆ ತನ್ನ ನಾಲ್ಕು ಇಲೆಕ್ಟ್ರಾನ್ ಗಳನ್ನು ಹಂಚಿಕೊಳ್ಳುತ್ತದೆ. ಇಲೆಕ್ಟ್ರಾನ್ ಗಳನ್ನು ಪರಸ್ಪರ ಹಂಚಿಕೊಳ್ಳುವುದರ ಮೂಲಕ ರಚನೆಯಾದ ಬಂಧವೇ ಕೋವಲೆಂಟ್ ಬಂಧ ಕೋವೆಲೆಂಟ್ ಬಂಧದಲ್ಲಿ ಎರಡೂ ಪರಮಾಣುಗಳು ವೆಲೆನ್ಸಿ ಇಲೆಕ್ಟ್ರಾನ್ ಗಳನ್ನು ಹಂಚಿಕೊಳ್ಳುತ್ತವೆ.

ಮೇಲಿನ ರಚನೆಯಲ್ಲಿ ಕಾರ್ಬನ್‌ ಅಷ್ಟಕ ವಿನ್ಯಾಸ ಹೊಂದಲು ನಾಲ್ಕು ಇಲೆಕ್ಟ್ರಾನ ಗಳ ಅವಶ್ಯಕತೆ ಇದೆ.ಅದೇ ರೀತಿ ಮೂರು ಹೈಡೋಜನ್ ಪರಮಾಣುಗಳು ಸ್ಥಿರ ವಿನ್ಯಾಸ ಹೊಂದಲು ತಲಾ ಒಂದೊಂದು ಇಲೆಕ್ಟ್ರಾನ ಗಳ ಅವಶ್ಯಕತೆ ಇದೆ. ಮತ್ತು ಕ್ಲೋರಿನ್ ಅಷ್ಟಕ ವಿನ್ಯಾಸ ಹೊಂದಲು ಒಂದು ಇಲೆಕ್ಟ್ರಾನ್ ನ ಅವಶ್ಯಕತೆ ಇದೆ. ಆದ್ದರಿಂದ ಈ ಮೂರು ಧಾತಗಳ ಪರಮಾಣುಗಳು ಇಲೆಕ್ಟ್ರಾನ್ ಗಳನ್ನು ಪರಸ್ಪರ ಹಂಚಿಕೊಳ್ಳುತ್ತವೆ.

5. ಕೆಳಗಿನವುಗಳಿಗೆ ಇಲೆಕ್ಟ್ರಾನ್ ಚುಕ್ಕಿ ರಚನೆಯನ್ನು ಬರೆಯಿರಿ.

class 10 science chapter 4 question answer

6. ಅನುರೂಪ ಶ್ರೇಣಿ ಎಂದರೇನು ? ಒಂದು ಉದಾಹರಣೆಯೊಂದಿಗೆ ವಿವರಿಸಿ.

ವಿಭಿನ್ನ ಸಂಖ್ಯೆಯ ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಒಂದೇ ರೀತಿಯ ಕ್ರಿಯಾಗುಂಪುಗಳನ್ನು ಹೊಂದಿರುವ ಮತ್ತು ಅನುಕ್ರಮ ಸದಸ್ಯರುಗಳ ನಡುವಿನ ವ್ಯತ್ಯಾಸ CH2 ಆಗಿರುವ ಕಾರ್ಬನ್ ಸಂಯುಕ್ತಗಳ ಶ್ರೇಣಿಗೆ ಅನುರೂಪ ಶ್ರೇಣಿಗಳೆನ್ನುವರು.

ಉದಾ: ಮೀಥೇನ್ -CH4

ಪ್ರೊಪೇನ್ – C3H8

ಬೂಟೇನ್ -C4H10

7. ಭೌತ ಮತ್ತು ರಾಸಾಯನಿಕ ಗುಣಗಳ ಆಧಾರದ ಮೇಲೆ ಎಥನಾಲ್ ಮತ್ತು ಎಥನೋಯಿಕ್‌ ಆಮ್ಲಗಳಿಗಿರುವ ವ್ಯತ್ಯಾಸ ಗಳನ್ನು ಬರೆಯಿರಿ.

class 10 science chapter 4 question answer

8. ಸಾಬೂನನ್ನು ನೀರಿಗೆ ಹಾಕಿದಾಗ ಮಿಸೈಲ್ ಗಳು ಏಕೆ ಉಂಟಾಗುತ್ತವೆ ?ಎಥನಾಲ್ ನಂತಹ ಬೇರೆ ದ್ರಾವಕಗಳಲ್ಲೂ ಮಿಸ್ಸೆಲ್‌ ಗಳು ಉಂಟಾಗುತ್ತವೆಯೇ ?

ಸಾಬೂನು ಸೋಡಿಯಂ ಅಥವಾ ಪೊಟ್ಯಾಷಿಯಂ ಲವಣದ ಉದ್ದ ಸರಪಣಿಯ ಮೇದಾಮ್ಲವಾಗಿದೆ.ಸಾಬೂನಿನ ಅಣುಗಳಲ್ಲಿ ವಿಭಿನ್ನ ಗುಣಗಳಿರುವ ಎರಡು ತುದಿಗಳಿರುತ್ತವೆ.ಒಂದು ತುದಿಯು ಜಲಾಕರ್ಷಕವಾಗಿದ್ದು ನೀರಿನ ಅಣುಗಳನ್ನು ಆಕರ್ಷಿಸುತ್ತದೆ. ಇನ್ನೊಂದು ತುದಿಯು ಜಲವಿಕರ್ಷಕವಾಗಿದೆ.ಮತ್ತು ಹೈಡೋಕಾರ್ಬನ್ ಗಳನ್ನು ಆಕರ್ಷಿಸುತ್ತದೆ.ನೀರಿನಲ್ಲಿ ಈ ಅಣುಗಳು ಒಂದು ಅನನ್ಯ ವಿನ್ಯಾಸವನ್ನು ಹೊಂದಿದ್ದು ಇದು ಹೈಡೋಕಾರ್ಬನ್ ಭಾಗವನ್ನು ನೀರಿನಿಂದ ಹೊರಗೆ ಇಡುತ್ತದೆ.ಹೀಗೆ ಅಣುಗಳಸಮೂಹದಲ್ಲಿ ಜಲವಿಕರ್ಷಕ ತುದಿಗಳು ಸಮೂಹದ ಒಳಭಾಗದಲ್ಲಿ ಮತ್ತು ಅಯಾನಿಕ್ ತುದಿಗಳು ಈ ಸಮೂಹಗಳ ಮೇಲೈಯಲ್ಲಿ ಕಂಡು ಬರುತ್ತವೆ.ಈ ರಚನೆಯನ್ನು ಮಿಸ್ಟೆಲ್‌ ಎನ್ನುವರು.ತೈಲಯುಕ್ತ ಕೊಳೆಯು ಮಿಸ್ಟೆಲ್‌ ನ ಕೇಂದ್ರದಲ್ಲಿ ಸಂಗ್ರಹವಾಗುವ ಕಾರಣ ಮಿಸಲ್ ರೂಪದ ಸಾಬೂನು ಸ್ವಚ್ಛಗೊಳಿಸಲು ಶಕ್ತವಾಗುತ್ತದೆ. ಎಥನಾಲ್ ನಂತಹ ದ್ರಾವಕಗಳಲ್ಲಿ ಮಿಸೆಲ್ ಗಳು ಉಂಟಾಗುವುದಿಲ್ಲ.ಯಾಕೆಂದರೆ ಸಾಬೂನಿನ ಅಲೈಲ್ ಗುಂಪು ಎಥನಾಲ್ ನಲ್ಲಿ ಕರಗುತ್ತದೆ.

class 10 science chapter 4 question answer

9. ಕಾರ್ಬನ್ ಮತ್ತು ಅದರ ಸಂಯುಕ್ತಗಳನ್ನು ಹೆಚ್ಚಾಗಿ ಇಂಧನಗಳನ್ನಾಗಿ ಉಪಯೋಗಿಸುತ್ತಾರೆ ಏಕೆ ?

ಕಾರ್ಬನ್ ಸಂಯುಕ್ತಗಳನ್ನು ಗಾಳಿಯೊಂದಿಗೆ ಉರಿಸಿದಾಗ ಅವು ಬೆಳಕು ಹಾಗು ಹೆಚ್ಚಿನ ಪ್ರಮಾಣದ ಉಷ್ಣವನ್ನು ಬಿಡುಗಡೆ ಮಾಡುತ್ತವೆ. ಪರ್ಯಾಪ್ತ ಹೈಡೋಕಾರ್ಬನ್ ಗಳು ಮಾಲಿನ್ಯ ರಹಿತವಾಗಿವೆ.ಇಂಧನಗಳಾಗಿ ಉಪಯೋಗಿಸುವ ಕಾರ್ಬನ್ ಸಂಯುಕ್ತಗಳು ಅಧಿಕ ಕ್ಯಾಲೋರಿ ಮೌಲ್ಯ ಹೊಂದಿವೆ. ಆದ್ದರಿಂದ ಕಾರ್ಬನ್ ಮತ್ತು ಅದರ ಸಂಯುಕ್ತಗಳನ್ನು ಹೆಚ್ಚಾಗಿ ಇಂಧನಗಳಾಗಿ ಉಪಯೋಗಿಸುತ್ತಾರೆ.

ಸಾಬೂನು ಗಡಸು ನೀರಿನೊಂದಿಗೆ ವರ್ತಿಸಿ ಕಲ್ಮಷ ಉಂಟಾಗುವುದನ್ನು ವಿವರಿಸಿ ಸಾಬೂನು ಸೋಡಿಯಂ ಅಥವಾ ಪೊಟ್ಯಾಷಿಯಂ ಲವಣದ ಉದ್ದ ಸರಪಣಿಯ ಮೇದಾಮ್ಲವಾಗಿದೆ. ಗಡಸು ನೀರು ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂ ಲವಣಗಳನ್ನು ಹೊಂದಿರುತ್ತದೆ. ಸಾಬೂನನ್ನು ಗಡಸು ನೀರಿಗೆ ಸೇರಿಸಿದಾಗ ಗಡಸು ನೀರಿನಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂ ಆಯಾನುಗಳು ಸಾಬೂನಿನಲ್ಲಿರುವ ಸೋಡಿಯಂ ಅಥವಾ ಪೊಟ್ಯಾಷಿಯಂ ಅಯಾನುಗಳನ್ನು ಸ್ಥಾನಪಲ್ಲಟಗೊಳಿಸಿ ಕರಗದ ಸ್ಥಿತಿಯಲ್ಲಿರುವ ಕಲ್ಮಷವನ್ನು ಉತ್ಪತ್ತಿ ಮಾಡುತ್ತದೆ.ಸಾಬೂನು ಪ್ರತ್ಯಾಷ್ಟ್ರೀಯ ಗುಣವನ್ನು ಹೊಂದಿದ ಕಾರಣ ಇದು ಕೆಂಪು ಲಿಟ್ಟಸನ್ನು ನೀಲಿಯಾಗಿ ಬದಲಾಯಿಸುತ್ತದೆ.

12.ಎಣ್ಣೆಗಳ ಹೈಡೋಜನೀಕರಣ ಎಂದರೇನು ? ಇದರ ಕೈಗಾರಿಕಾ ಅನ್ವಯಗಳೇನು ?

ಹೈಡೋಜನ್ ನು ಸೇರಿಸುವ ರಾಸಾಯನಿಕ ಕ್ರಿಯೆಗೆ ಹೈಶ್ರೀಜನೀಕರಣ ಎನ್ನುವರು ಅಪರ್ಯಾಪ್ತ ಹೈಡೋಕಾರ್ಬನ್ ಗಳಾದ ಸಸ್ಯಜನ್ಯ ತೈಲಗಳನ್ನು ನಿಕ್ಕಲ್ ಮತ್ತು ಪೆಲಾಡಿಯಂ ನಂತಹ ಕ್ರಿಯಾವರ್ಧಕಗಳ ಸಹಾಯದಿಂದ ಹೈಡೋಜನ್‌ ಸೇರಿಸುವ ಮೂಲಕ ಪರ್ಯಾಪ್ತ ಹೈಡೋಕಾರ್ಬನ್ ಗಳಾಗಿ ಪರಿವರ್ತಿಸಲಾಗುತ್ತದೆ.

class 10 science chapter 4 question answer

13. ಕೆಳಗಿನ ಯಾವ ಹೈಡೋಕಾರ್ಬನ್ ಗಳು ಸಂಕಲನ ಕ್ರಿಯೆಗಳಿಗೆ ಒಳಗಾಗುತ್ತವೆ?

ಅಪರ್ಯಾಪ್ತ ಹೈಡೋಕಾರ್ಬನ್ ಗಳು ಸಂಕಲನ ಕ್ರಿಯೆಗೆ ಒಳಗಾಗುತ್ತವೆ ಆದ್ದರಿಂದ CH & CH, ಗಳು ಸಂಕಲನ ಕ್ರಿಯೆಗೆ ಒಳಗಾಗುತ್ತವೆ.

14. ಪರ್ಯಾಪ್ತ ಮತ್ತು ಅಪರ್ಯಾಪ್ತ ಹೈಡೋಕಾರ್ಬನ್ ಗಳ ನಡುವಿನ ವ್ಯತ್ಯಾಸ ತಿಳಿಯಲು ಕೈಗೊಳ್ಳಬಹುದಾದ ಒಂದು ರಾಸಾಯನಿಕ ಪರೀಕ್ಷೆಯನ್ನು ತಿಳಿಸಿ,

ಬೆಣ್ಣೆ ಪರ್ಯಾಪ್ತ ಮೇದಾಮ್ಲವಾಗಿದ್ದು ಹೈಡೋಜನೀಕರಣಗೊಳಿಸಲಾಗುವುದಿಲ್ಲ.ಆದರೆ ಸಸ್ಯ ಜನ್ಯ ತೈಲವನ್ನು ಹೈಡೋನೀಕರಣ ಗೊಳಿಸುವ ಮೂಲಕ ಪರ್ಯಾಪ್ತ ಕೊಬ್ಬಿನ ಆಮ್ಲವನ್ನಾಗಿ ಪರಿವರ್ತಿಸಬಹುದು.

15.ಸಾಬೂನುಗಳು ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ವಿವರಿಸಿ

ಬಟ್ಟೆಗಳಲ್ಲಿರುವ ಕೊಳೆಯು ಸಾವಯವ ಗುಣವನ್ನು ಹೊಂದಿದ್ದು ನೀರಿನಲ್ಲಿ ಕರಗುವುದಿಲ್ಲ.ಆದ್ದರಿಂದ ಕೇವಲ ನೀರಿನೊಂದಿಗೆ ತೊಳೆಯುವ ಮೂಲಕ ಬಟ್ಟೆಯಲ್ಲಿರುವ ಕೊಳೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಸಾಬೂನು ನೀರಿನೊಂದಿಗೆ ವರ್ತಿಸಿದಾಗ ಅದರ ಜಲಾಕರ್ಷಕ ತುದಿಯು ಕೊಳೆಯ ಜೊತೆ ಸೇರಿ ಅದನ್ನು ಬಟ್ಟೆಯಿಂದ ಹೊರತೆಗೆಯುತ್ತದೆ. ನಂತರ ಸಾಬೂನಿನ ಕಣಗಳು ಮಿಸ್ಸೆಲ್ ಗಳೆಂಬ ರಚನೆಯನ್ನು ಉತ್ಪತ್ತಿ ಮಾಡುತ್ತದೆ, ಅವು ನೀರಿನಲ್ಲಿ ನಿಲಂಬಿತ ಸ್ಥಿತಿಯಲ್ಲಿದ್ದು ಸುಲಭವಾಗಿ ಹೊರತೆಗೆಯಬಹುದಾಗಿದೆ.

class 10 science chapter 4 question answer

FAQ

ಉತ್ಕರ್ಷಣಕಾರಿಗಳು ಎಂದರೇನು ?

ವಸ್ತುವೊಂದರಿಂದ ಆಮ್ಲಜನಕವನ್ನು ಹೊರತೆಗೆಯುವ ರಾಸಾಯನಿಕಗಳಿಗೆ ಉತ್ಕರ್ಷಣಕಾರಿಗಳು ಎನ್ನುವರು.

ನುರೂಪ ಶ್ರೇಣಿ ಎಂದರೇನು ?

ವಿಭಿನ್ನ ಸಂಖ್ಯೆಯ ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಒಂದೇ ರೀತಿಯ ಕ್ರಿಯಾಗುಂಪುಗಳನ್ನು ಹೊಂದಿರುವ ಮತ್ತು ಅನುಕ್ರಮ ಸದಸ್ಯರುಗಳ ನಡುವಿನ ವ್ಯತ್ಯಾಸ CH2 ಆಗಿರುವ ಕಾರ್ಬನ್ ಸಂಯುಕ್ತಗಳ ಶ್ರೇಣಿಗೆ ಅನುರೂಪ ಶ್ರೇಣಿಗಳೆನ್ನುವರು.

ಇತರೆ ವಿಷಯಗಳು:

10th Standard Science 1st Lesson Notes

10th Standard Science Chapter 2 Notes

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ಪಠ್ಯ ಪುಸ್ತಕ Pdf

10ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

Leave a Reply

Your email address will not be published. Required fields are marked *

rtgh