ಪ್ರಥಮ ಪಿ.ಯು.ಸಿ ಅರ್ಥಶಾಸ್ತ್ರ ಗ್ರಾಮೀಣಾಭಿವೃದ್ಧಿ ನೋಟ್ಸ್ ಪ್ರಶ್ನೋತ್ತರಗಳು,1st Puc Economic Chapter 6 Notes Question Answer Pdf in Kannada Medium 2023 Kseeb Solutions For Class 11 Economics Chapter 6 Notes First PUC Economics (Indian Economy) Chapter 6 Rural Development Notes In Kannada 1st puc Economics Gramina Abhivruddi Notes in kannada 1st Puc Economics 6th Lesson Notes Karnataka 1st PUC Economics Chapter 6 Rural Development in Kannada
1st Puc Economic Chapter 6 Notes in Kannada Medium
1. ಗ್ರಾಮೀಣಾಭಿವೃದ್ಧಿ ಎಂದರೇನು? ಗ್ರಾಮೀಣಾಭಿವೃದ್ಧಿಯ ಪ್ರಮುಖ ಸಮಸ್ಯೆಗಳನ್ನು ತಿಳಿಸಿ.
ಗ್ರಾಮೀಣ ಜನರಿಗೆ ಮೂಲಸೌಕರ್ಯಗಳನ್ನೊದಗಿಸಿ ಮತ್ತು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಮರ್ಥರಾಗುವಂತೆ ಮಾಡುವ ಮೂಲಕ ಅವರ ಸಾಮಾಜಿಕ ಮತ್ತು ಆರ್ಥಿಕ ಜೀವನವನ್ನು ಉತ್ತಮ ಪಡಿಸುವುದನ್ನು ಗ್ರಾಮೀಣಾಭಿವೃದ್ಧಿ ಎನ್ನುತ್ತೇವೆ.
ಗ್ರಾಮೀಣಾಭಿವೃದ್ಧಿಯ ಪ್ರಮುಖ ಸಮಸ್ಯೆಗಳೆಂದರೆ : ಕೃಷಿ ವಲಯದ ಮೇಲೆ ಅವಲಂಬಿತರಾಗಿರುವ ಜನಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಲ್ಲದೆ ಸುಧಾರಣೆಗಳನ್ನು ತಂದ ಮೇಲೆ, ಕೃಷಿ ವಲಯದ ಬೆಳವಣಿಗೆ ದರವು 1991 2012ರ ಅವಧಿಯಲ್ಲಿ ವಾರ್ಷಿಕ ಶೇ. 3ಕ್ಕೆ ಇಳಿಯಿತು. ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಹೂಡಿಕೆ ಇಳಿಮುಖವಾಗಿದೆ. ಜೊತೆಗೆ ಸಾಕಷ್ಟು ಮೂಲಸೌಕರ್ಯ ಗಳಿಲ್ಲದಿರುವುದು. ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಬದಲಿ ಉದ್ಯೋಗಾವಕಾಶ ಗಳ ಕೊರತೆ, ಹಂಗಾಮಿ ಉದ್ಯೋಗಗಳ ಹೆಚ್ಚಳ ಇತ್ಯಾದಿಗಳೂ ಸಹ ಗ್ರಾಮೀಣಾಭಿವೃದ್ಧಿಗೆ ಅಡ್ಡಿಯಾಗಿವೆ.
2. ಗ್ರಾಮೀಣಾಭಿವೃದ್ಧಿಯಲ್ಲಿ ಸಾಲದ ಮಹತ್ವವನ್ನು ಚರ್ಚಿಸಿ.
ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಾಗಿ ಗ್ರಾಮೀಣ ಜನರಿಂದ ಬಳಸಲ್ಪಡುವ ಸಾಲವು ಗ್ರಾಮೀಣ ಸಾಲವೆನಿಸುತ್ತದೆ. ರೈತರಿಗೆ ಬಿತ್ತನೆ ಮತ್ತು ಉತ್ಪಾದನೆ ನಂತರ ಆದಾಯ ಗಳಿಕೆಯ ನಡುವಿನ ಕಾಲಾವಧಿ ತುಂಬಾ ದೀರ್ಘವೆನಿಸುತ್ತದೆ. ಹಾಗಾಗಿ ಅವರು ಕೃಷಿಯಲ್ಲಿ ಬೀಜ, ಗೊಬ್ಬರ, ಉಪಕರಣಗಳ ಖರೀದಿಗಾಗಿ ಪ್ರಾರಂಭಿಕ ಹೂಡಿಕೆ ಮಾಡಲು ಮತ್ತು ತಮ್ಮ ಕೌಟುಂಬಿಕ ವೆಚ್ಚಗಳಾದ ಜನನ, ವಿವಾಹ, ಧಾರ್ಮಿಕಾಚರಣೆ, ಮರಣ ಇತ್ಯಾದಿಗಳಿಗಾಗಿ ವಿವಿಧ ಮೂಲಗಳಿಂದ ಸಾಲ ಪಡೆಯುತ್ತಾರೆ.
ಹಳ್ಳಿಗಳಲ್ಲಿ ಲೇವಾದೇವಿಗಾರರು, ವ್ಯಾಪಾರಿಗಳು ಮತ್ತು ಜಮೀನ್ದಾರರು, ಸಣ್ಣ, ಅತಿ ಸಣ್ಣ ರೈತರು ಹಾಗೂ ಭೂ ರಹಿತ ಕಾರ್ಮಿಕರಿಗೆ ಅಧಿಕ ಬಡ್ಡಿ ದರಕ್ಕೆ ಸಾಲ ನೀಡುವ ಮೂಲಕ ಅವರನ್ನು ಶೋಷಿಸುತ್ತಿದ್ದರು. 1982ರಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕು” (NABARD) ಅಸ್ತಿತ್ವಕ್ಕೆ ಬಂದಿತು. ಇದು ಹಣಕಾಸಿನ ಸಂಸ್ಥೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಗ್ರಾಮೀಣ ಸಾಲವನ್ನು ನೀಡುತ್ತದೆ. ಗ್ರಾಮೀಣ ಸಾಲ ಪದ್ಧತಿಯ ಸಾಂಸ್ಥಿಕ ರಚನೆಯು ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRBS) ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕು (PLDB)ಗಳನ್ನು ಒಳಗೊಳ್ಳುತ್ತದೆ. ಇವು ರೈತರಿಗೆ ಕಡಿಮೆ ಬಡ್ಡಿ ದರಗಳಲ್ಲಿ ಹಣಕಾಸನ್ನು ಒದಗಿಸುತ್ತವೆ. ಸ್ವ – ಸಹಾಯ ಗುಂಪುಗಳು ಪ್ರತೀ ಸದಸ್ಯರಿಗೆ ಸೂಕ್ಷ್ಮ ಸಾಲ ಯೋಜನೆಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತದೆ.
3. ಬಡವರಿಗೆ ಸಾಲದ ಅಗತ್ಯಗಳನ್ನು ಪೂರೈಸುವ ಸೂಕ್ಷ್ಮ ಸಾಲದ ಪಾತ್ರವನ್ನು ವಿವರಿಸಿ.
ಸ್ವ-ಸಹಾಯ ಗುಂಪುಗಳು ಪ್ರತೀ ಸದಸ್ಯರುಗಳ ಸಣ್ಣ ವಂತಿಕೆಯ ಮೂಲಕ ಮಿತವ್ಯಯವನ್ನು ಪ್ರೋತ್ಸಾಹಿಸುತ್ತಿವೆ. ಸಂಗ್ರಹಿಸಲ್ಪಟ್ಟ ಹಣದಿಂದ ಅಗತ್ಯವಿರುವವರಿಗೆ ಸುಲಭ ಕಂತುಗಳಲ್ಲಿ ಮರುಪಾವತಿ ಮಾಡಬಹುದಾದ ನ್ಯಾಯಯುತ ಬಡ್ಡಿದರದ ಸಾಲವನ್ನು ನೀಡಲಾಗುತ್ತದೆ. 2003ರ ಮಾರ್ಚಿ ವೇಳೆಗೆ ಏಳು ಲಕ್ಷಕ್ಕೂ ಅಧಿಕ ಸಂಘಗಳು ಸಾಲದ ವ್ಯವಸ್ಥೆಯೊಳಗೆ ಬಂದಿವೆ ಎಂದು ವರದಿಯಾಗಿದೆ. ಸ್ವ ಸಹಾಯ ಗುಂಪುಗಳ ಈ ಸಾಲ ಪದ್ಧತಿಯನ್ನು “ಸೂಕ್ಷ್ಮ ಸಾಲ ಯೋಜನೆಗಳು” ಎಂದು ಕರೆಯಲಾಗುತ್ತದೆ.
4. ಗ್ರಾಮೀಣ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿ
ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವಂತಹ 4 ಕ್ರಮಗಳೆಂದರೆ
- ಕ್ರಮಬದ್ಧವಾದ ಮತ್ತು ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣ.
- ನಿಯಂತ್ರಿತ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸುವುದು.
- ಭೌತಿಕ ಮೂಲಸೌಕರ್ಯಗಳ ಅಭಿವೃದ್ಧಿ, ರಸ್ತೆ ಹಾಗೂ ರೈಲು ಮಾರ್ಗಗಳು, ದಾಸ್ತಾನು ಮಳಿಗೆಗಳು, ಸಂಸ್ಕರಣಾ ಘಟಕಗಳು, ಶೈತ್ಯಾಗಾರ ಸಂಗ್ರಹಗಳು ಮುಂತಾದವು.
- ಸಹಕಾರಿ ಮಾರಾಟ ಸಂಘಗಳ ಸ್ಥಾಪನೆ.
- ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯ ಆಶ್ವಾಸನೆ.
- ಭಾರತೀಯ ಆಹಾರ ನಿಗಮ (FCI) ಮೂಲ ಗೋಧಿ ಮತ್ತು ಅಕ್ಕಿಯ ದಾಸ್ತಾನು
- ಪಡಿತರ ಪದ್ಧತಿಯ ಮೂಲಕ ಆಹಾರ ಧಾನ್ಯ ವಿತರಣೆ.
5. ಸುಸ್ಥಿರ ಜೀವನಾಧಾರಕ್ಕೆ ಕೃಷಿ ವೈವಿದ್ದೀಕರಣವು ಏಕೆ ಅಗತ್ಯವಾದುದಾಗಿದೆ?
ಸುಸ್ಥಿರ ಜೀವನಾಧಾರಕ್ಕಾಗಿ ವ್ಯವಸಾಯವನ್ನು ಅವಲಂಬಿಸಿರುವುದು ತುಂಬಾ ಅಪಾಯಕಾರಿಯಾಗಿರುವುದರಿಂದ, ವೈವಿಧೀಕರಣದ ಅಗತ್ಯತೆಯು ಉದ್ಭವಿಸುತ್ತದೆ. ಇದು ಕೃಷಿ ವಲಯದ ಗಂಡಾಂತರಗಳನ್ನು ಕಡಿಮೆ ಮಾಡುತ್ತದೆ ಮತ್ತು ಗ್ರಾಮೀಣ ಜನರ ಸುಸ್ಥಿರ ಫಲದಾಯಕ ಜೀವನಾಧಾರದ ಆಯ್ಕೆಯನ್ನು ಒದಗಿಸಲು ಹೊಸ ಕ್ಷೇತ್ರಗಳೆಡೆಗೆ ವೈವಿಧ್ಯಕರಣಗೊಳ್ಳುವ ಅವಶ್ಯಕತೆಯಿದೆ.
6. ಭಾರತದಲ್ಲಿ ಗ್ರಾಮೀಣಾಭಿವೃದ್ಧಿ ಪ್ರಕ್ರಿಯೆಯಲ್ಲಿ ಗ್ರಾಮೀಣ ಬ್ಯಾಂಕಿನ ಪಾತ್ರವನ್ನು ವಿಮರ್ಶಾತ್ಮಕವಾಗಿ ವಿಳದೀಕರಿಸಿ.
ಬ್ಯಾಂಕಿಂಗ್ ವ್ಯವಸ್ಥೆಯ ಗ್ರಾಮೀಣ ವ್ಯವಸಾಯ ಮತ್ತು ವ್ಯವಸಾಯೇತರ ಉತ್ಪನ್ನ ಆದಾಯ ಮತ್ತು ಉದ್ಯೋಗದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿತು. ಅದರಲ್ಲೂ ವಿಶೇಷವಾಗಿ ಹಸಿರುಕ್ರಾಂತಿಯ ನಂತರ ಈ ಧನಾತ್ಮಕ ಪರಿಣಾಮ ಹೆಚ್ಚಾಯಿತು. ಇದು ರೈತರು ಉತ್ಪದನಾ ಅಗತ್ಯಗಳನ್ನು ಭರಿಸಲು ಸಹಾಯ ಮಾಡಿತು. ಔಪಚಾರಿಕ ಸಂಸ್ಥೆಗಳು ಠೇವಣಿ ಸಂಗ್ರಹಣೆ ಮಾಡುವ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಿಕೊಳ್ಳುವಲ್ಲಿ – ಯೋಗ್ಯ ಸಾಲಗಾರರಿಗೆ ಸಾಲ ನೀಡಿಕೆ ಮತ್ತು ಪರಿಣಾಮ ಕಾರಿ ಸಾಲ ವಸೂಲಾತಿಯನ್ನು ಮಾಡುವಲ್ಲಿ ವಿಫಲವಾಗಿವೆ. ಕೃಷಿಸಾಲ ಮರುಪಾವತಿ ಮಾಡದಿರುವವರ ದರವು ಸತತವಾಗಿ ಹೆಚ್ಚುತ್ತಲೇ ಇದೆ.
7. ಕೃಷಿ ಮಾರುಕಟ್ಟೆ ಎಂದರೇನು?
ಕೃಷಿ ಮಾರುಕಟ್ಟೆ ವ್ಯವಸ್ಥೆಯು ದೇಶಾದ್ಯಂತ ವಿವಿಧ ಕೃಷಿ ಉತ್ಪನ್ನಗಳನ್ನು ಒಟ್ಟುಗೂಡಿಸುವ, ಸಂಗ್ರಹಿಸುವ, ಸಂಸ್ಕರಿಸುವ, ವರ್ಗೀಕರಿಸುವ, ಪ್ಯಾಕ್ ಮಾಡುವ ಮತ್ತು ಸಾಗಾಟದ ಮೂಲಕ ವಿತರಿಸುವ ಒಂದು ಪ್ರಕ್ರಿಯೆಯಾಗಿದೆ.
8. ಕೃಷಿ ಮಾರುಕಟ್ಟೆ ತಂತ್ರಗಳಿಗೆ ಅಡ್ಡಿಯುಂಟು ಮಾಡಿರುವ ಕೆಲವು ಅಡಚಣೆಗಳನ್ನು ತಿಳಿಸಿ.
ಲೇವಾದೇವಿಗಾರರು ಮತ್ತು ವ್ಯಾಪಾರಿಗಳು ದೋಷಪೂರಿತ ತೂಕ ಮತ್ತು ಅಳತೆಯನ್ನು ಬಳಸುವ ಹಾಗೂ ಲೆಕ್ಕವನ್ನು ತಿರುಚುವ ಮೂಲಕ ರೈತರನ್ನು ಮೋಸಗೊಳಿಸುತ್ತಿದ್ದರು.
ರೈತರು ಮಾರುಕಟ್ಟೆ ಮಾಹಿತಿ ಮತ್ತು ಸಂಗ್ರಹಣಾ ಸೌಲಭ್ಯವನ್ನು ಹೊಂದಿರಲಿಲ್ಲ.
9. ಕೃಷಿ ಮಾರುಕಟ್ಟೆಗೆ ಲಭ್ಯವಿರುವ ಪರ್ಯಾಯ ವ್ಯವಸ್ಥೆಗಳಾವುವು? ಉದಾಹರಣೆ ಕೊಡಿ.
ಪಂಜಾಬ್‌ನಲ್ಲಿ ಅಪನೀ ಮಂಡಿ, ಪುಣೆಯಲ್ಲಿ ಹಡಸ್ಟಾರ್ ಮಂಡಿ, ಆಂದ್ರದಲ್ಲಿ ರೈತುಬಜಾರ್, ತಮಿಳುನಾಡಿನಲ್ಲಿ ಉಜ್ವಾರ್ ಶಾಂಡಿ ಮತ್ತು ಕರ್ನಾಟಕದಲ್ಲಿ ರೈತರ ಸಂತೆ
10. ಹಸಿರು ಕ್ರಾಂತಿ ಮತ್ತು ಸುವರ್ಣ ಕ್ರಾಂತಿಯ ನಡುವಿನ ವ್ಯತ್ಯಾಸ ಗುರುತಿಸಿ.
ಹಸಿರು ಕ್ರಾಂತಿ : 1967 – 68ರಲ್ಲಿ ಆಹಾರ ಧಾನ್ಯಗಳ ಉತ್ಪನ್ನದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಇದು ಗ್ರಾಮೀಣ ಸಾಲ ಪದ್ಧತಿಯಲ್ಲಿನ ಪ್ರಧಾನ ಬದಲಾವಣೆಗೆ ಕಾರಣವಾಗಿತ್ತು. ಉತ್ಪಾದನಾ ಸಂಬಂಧಿತ ಸಾಲ ನೀಡಿಕೆಗೆ ಗಮನ ಕೊಡಲಾಗಿತ್ತು.
ಸುವರ್ಣ ಕ್ರಾಂತಿ : ಹಣ್ಣುಗಳ ಉತ್ಪಾದನೆಯಲ್ಲಿ ಕ್ಷಿಪ್ರ ಹೆಚ್ಚಳವಾಗಿದೆ. 1991 – 2003 ರ ಅವಧಿಯಲ್ಲಿ ತೋಟಗಾರಿಕೆಯಲ್ಲಿ ಯೋಜನಾ ಬದ್ಧ ಹೂಡಿಕೆಯಿಂದಾಗಿ ಉತ್ಪಾದಕತೆ ಹೆಚ್ಚಾಯಿತು ಮತ್ತು ತೋಟಗಾರಿಕಾ ವಲಯವು ಸುಸ್ಥಿರ ಜೀವನಾಧಾರ ಆಯ್ಕೆಯಾಗಿ ಹೊರ ಹೊಮ್ಮಿತು.
11. ಕೃಷಿ ಮಾರುಕಟ್ಟೆಯನ್ನು ಸುಧಾರಿಸಲು ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು ಸಾಕಾಗುವಷ್ಟಿವೆಯೇ? ಚರ್ಚಿಸಿ.
ಕೃಷಿ ಮಾರುಕಟ್ಟೆ ವ್ಯವಸ್ಥೆಯು ದೇಶದಾದ್ಯಂತ ಕೃಷಿ ಉತ್ಪನ್ನಗಳನ್ನು ಒಟ್ಟುಗೂಡಿಸುವ, ಸಂಗ್ರಹಿಸಿಡುವ, ಸಂಸ್ಕರಿಸುವ, ವರ್ಗೀಕರಿಸುವ, ಪ್ಯಾಕ್ ಮಾಡುವ ಮತು ಸಾಗಾಟದ ಮೂಲಕ ವಿತರಿಸುವ ಒಂದು ಪ್ರಕ್ರಿಯೆಯಾಗಿದೆ. ರೈತರು ಒತ್ತಾಯ ಪೂರ್ವಕವಾಗಿ ಕಡಿಮೆ ಬೆಲೆಗೆ ಮಾರುತ್ತಿದ್ದರು. ಆದುದರಿಂದ, ಖಾಸಗಿ ಚಟುವಟಿಕೆಗಳನ್ನು ನಿಯಂತ್ರಿಸಲು ಸರ್ಕಾರದ ಮಧ್ಯಪ್ರವೇಶ ಅನಿವಾರ್ಯವಾಗುತ್ತ ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸಲು ಸಹಾಯಕವಾಗುವ ಕೆಲವು ಕ್ರಮಗಳೆಂದರೆ,
1) ಸರಕುಗಳ ಉಗ್ರಾಣ ವ್ಯವಸ್ಥೆ
2) ಕ್ರಮಬದ್ಧವಾದ ಮತ್ತು ಆರ್ಥಿಕ ಸಾರಿಗೆ ವ್ಯವಸ್ಥೆ
3) ಮಧ್ಯವರ್ತಿಗಳ ನಿಷೇಧ
4) ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ಪಡೆಯುವ ಮಾರುಕಟ್ಟೆಯ ಕ್ರಮಗಳ ಬಗ್ಗೆ ಮಾಹಿತಿ ಒದಗಿಸುವುದು.
ಈ ಮೇಲೆ ತಿಳಿಸಿದ ಕೃಷಿ ಮಾರುಕಟ್ಟೆಯ ಅಗತ್ಯತೆಗಳನ್ನು ಇನ್ನು ಕೆಲವು ವರ್ಗಗಳಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ –
1) ಕ್ರಮಬದ್ಧವಾದ ಮತ್ತು ಪಾರದರ್ಶಕವಾದ ಮಾರುಕಟ್ಟೆ ವ್ಯವಸ್ಥೆಯನ್ನು ನಿರ್ಮಾಣ ಮಾಡುವಂತೆ ನಿಯಂತ್ರಿತ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸುವುದು.
2) ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯ ಭರವಸೆ
3) ಭಾರತೀಯ ಆಹಾರ ನಿಗಮದಿಂದ ಆಹಾರ ಧಾನ್ಯಗಳ ಶಾಪು ದಾಸ್ತಾನು.
4) ಆಹಾರ ಪದಾರ್ಥಗಳಿಗೆ ಬೆಂಬಲ ಬೆಲೆ ಘೋಷಣೆ.
12. ಗ್ರಾಮೀಣ ವೈವಿಧ್ಯಕರಣವನ್ನು ಉತ್ತೇಜಿಸಲು ಕೃಷಿಯೇತರ ಉದ್ಯೋಗದ ಪಾತ್ರವನ್ನು ವಿವರಿಸಿ.
ವೈವಿದ್ವೀಕರಣವು ಬೆಳೆ ವಿಧಾನದಲ್ಲಿ ಬದಲಾವಣೆ ಶ್ರಮ ಬಲವನ್ನು ಕೃಷಿಯಿಂದ ಅದರ ಸಂಬಂಧಿ ಚಟುವಟಿಕೆಗಳು (ಪಶುಸಂಗೋಪನೆ, ಮೀನುಗಾರಿಕೆ ಇತ್ಯಾದಿ) ಕೃಷಿಯೇತರ ವಲಯ ಮತ್ತು ಗೃಹ ಕೈಗಾರಿಕೆಗಳೆಡೆಗೆ ವರ್ಗಾಯಿಸುವುದಾಗಿದೆ. ಕೃಷಿ ವಲಯದ ಗಂಡಾಂತರಗಳನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ಗ್ರಾಮೀಣ ಜನರ ಸುಸ್ಥಿರ ಫಲದಾಯಕ ಜೀವನಾಧಾರ ಆಯ್ಕೆಯನ್ನು ಹೊಸ ಕ್ಷೇತ್ರಗಳೆಡೆಗೆ ವೈವಿದ್ದೀಕರಣದ ಅವಶ್ಯಕತೆಯಿದೆ.
ಕೃಷಿಯೇತರ ವಲಯಗಳಲ್ಲಿ ಪರ್ಯಾಯ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುತ್ತಿದ್ದಾರೆ. ಕೃಷಿಯೇತರ ವಲಯವು ಹಲವಾರು ಭಾಗಗಳನ್ನು ಹೊಂದಿದೆ. ಕ್ರಿಯಾತ್ಮಕ ವಿಭಾಗಗಳಾದ ಕೃಷಿ ಸಂಸ್ಕರಣೆ ಕೈಗಾರಿಕೆ, ಆಹಾರ ಸಂಸ್ಕರಣೆ ಚರ್ಮೋದ್ಯಮ, ಪ್ರವಾಸೋದ್ಯಮಗಳನ್ನು ಒಳಗೊಳ್ಳುತ್ತದೆ. ಆದರೆ ಸಾಮರ್ಥ್ಯವಿದ್ದು ಮೂಲಸೌಕರ್ಯ ಮತ್ತು ಇತರೆ ಉತ್ತೇಜನಗಳ ಕೊರತೆಯನ್ನು ಎದುರಿಸುತ್ತಿರವ ವಲಯಗಳೆಂದರೆ ಸಾಂಪ್ರದಾಯಿಕ ಕೈಗಾರಿಕೆಗಳು. ಗ್ರಾಮೀಣ ಪುರುಷರ ಜೊತೆಗೆ ಮಹಿಳೆಯರೂ ಸಹ ಕೃಷಿಯೇತರ ಕೆಲಸಗಳತ್ತ ಒಲವು ತೋರಿಸುತ್ತಿದ್ದಾರೆ
13. ವೈವಿಧ್ಯಕರಣದ ಮೂಲವಾಗಿ ಪಶುಸಂಗೋಪನೆ, ಮೀನುಗಾರಿಕೆ ಮತ್ತು ತೋಟಗಾರಿಕೆಯ ಮಹತ್ವವನ್ನು ವಿವರಿಸಿ.
ಪಶು ಸಂಗೋಪನೆ : ಪಶುಸಂಗೋಪನೆಯಲ್ಲಿ ದನಕರುಗಳು, ಕುರಿ, ಮೇಕೆ, ಕೋಳಿ ಇತ್ಯಾದಿಗಳನ್ನು ಹೆಚ್ಚಾಗಿ ಸಾಕಲಾಗುತ್ತದೆ. ಇದು ಕುಟುಂಬದ ಆದಾಯದಲ್ಲಿ ಸ್ಥಿರತೆ, ಆಹಾರ ಭದ್ರತೆ, ಪೌಷ್ಟಿಕತೆ, ಸಾರಿಗೆ ಮತ್ತು ಇಂಧನಗಳನ್ನು ಒದಗಿಸುತ್ತದೆ. ಇಂದು 70 ದಶಲಕ್ಷ ರೈತರಿಗೆ ಪಶುಸಂಗೋಪನೆಯ ವಿತರಣೆಯನ್ನು ತೋರಿಸುತ್ತದೆ. ಸಾಕಾಣೆಯು ಶೇ. 58 ರಷ್ಟಿದೆ. 2012 ರಲ್ಲಿ 108 ಮಿಲಿಯನ್ ಎಮ್ಮೆಗಳು 300 ಮಿಲಿಯನ್ ದನಕರುಗಳನ್ನು ಹೊಂದಿತ್ತು. ದೇಶದಲ್ಲಿ ಹಾಲು ಉತ್ಪನ್ನದಲ್ಲಿ ಐದು ಪಟ್ಟು ಹೆಚ್ಚಳವಾಗಿದೆ.
ಮೀನುಗಾರಿಕೆ : ಸಮುದ್ರ, ಸಾಗರ, ನದಿಗಳು, ಸರೋವರಗಳು, ನೀರಿನ ಕೊಳಗಳು, ಹಳ್ಳಗಳು ಇತ್ಯಾದಿಗಳು ಬದುಕನ್ನು ಕಟ್ಟಿಕೊಡುವ ಮೂಲಗಳಾಗಿವೆ. ಪ್ರಸ್ತುತ ಒಟ್ಟು ಮೀನು ಉತ್ಪಾದನೆಯಲ್ಲಿ ಶೇ. 64 ರಷ್ಟು ಉತ್ಪನ್ನವು ಒಳನಾಡಿನ ಮೂಲಗಳಿಂದ ಬಂದರೆ, ಉಳಿದ ಶೇ. 36 ರಷ್ಟು ಉತ್ಪನ್ನವು ಕಡಲ ವಲಯದಿಂದ ಬರುತ್ತಿದೆ. ಇದು ಒಟ್ಟು GDPಯ ಶೇ. 0.8 ರಷ್ಟಾಗಿದೆ. ಕೇರಳ, ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡುಗಳು ಪ್ರಮುಖ ಸಮುದ್ರ ಮೀನು ಉತ್ಪಾದಕ ರಾಜ್ಯಗಳಾಗಿವೆ.
ತೋಟಗಾರಿಕೆ : ತೋಟಗಾರಿಕಾ ಬೆಳೆಗಳಾದ ಹಣ್ಣುಗಳು, ತರಕಾರಿ, ಗೆಡ್ಡೆಗೆಣಸುಗಳು, ಹೂಗಳು ಮತ್ತು ಸುಗಂಧ ದ್ರವ್ಯ ಸಸ್ಯಗಳ ಬೆಳೆಯನ್ನು ಅಳವಡಿಸಿಕೊಂಡಿದೆ. ತೋಟಗಾರಿಕೆ ಬೆಳೆಗಳು ಆಹಾರ ಮತ್ತು ಪೌಷ್ಠಿಕತೆ ಉದ್ಯೋಗ ಮತ್ತು ಆದಾಯವನ್ನು ತಂದುಕೊಡುತ್ತವೆ. 1991–2003ರ ಅವಧಿಯನ್ನು ‘ಸುವರ್ಣ ಯುಗ’ ಎಂದು ಕರೆಯಲಾಗಿದೆ. ಭಾರತವು ವಿವಿಧ ಹಣ್ಣುಗಳಾದ ಮಾವಿನಹಣ್ಣು, ಬಾಳೆಹಣ್ಣು, ತೆಂಗು, ಗೋಡಂಬಿ ಮತ್ತು ಸಾಂಬಾರ ಪದಾರ್ಥಗಳ ಉತ್ಪಾದನೆಯಲ್ಲಿ ಪ್ರಪಂಚದ ಮುಂಚೂಣಿಯಾಗಿ ಹೊರಹೊಮ್ಮಿದೆ. ನಮ್ಮ ದೇಶವು ಹಣ್ಣುಗಳು ಮತ್ತು ತರಕಾರಿ ಉತ್ಪನ್ನದಲ್ಲಿ ವಿಶ್ವದಲ್ಲಿ ಎರಡನೇ ದೊಡ್ಡ ದೇಶವಾಗಿದೆ. ರೈತರ ಆರ್ಥಿಕ ಸ್ಥಿತಿಯು ಸುಧಾರಿಸಿದೆ ಮತ್ತು ಇದು ಸೌಕರ್ಯವಂಚಿತ ಹಲವು ವರ್ಗಗಳಿಗೆ ಜೀವಾಧಾರವನ್ನು ಸುಧಾರಿಸುವ ಸಾಧನವಾಗಿ ಪರಿಣಮಿಸಿದೆ.
14. ‘ಸುಸ್ಥಿರ ಅಭಿವೃದ್ಧಿ ಮತ್ತು ಆಹಾರ ಭದ್ರತೆಯನ್ನು ಸಾಧಿಸುವಲ್ಲಿ ಮಾಡಿ ತಂತ್ರಜ್ಞಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ’ ವಿಮರ್ಶಿಸಿ.
ವೈವಿಧ್ಯಕರಣವು ಎರಡು ಆಯಾಮಗಳನ್ನು ಒಳಗೊಂಡಿದೆ. ಒಂದು ಬೆಳೆ ಮಾದರಿಯ ಬದಲಾವಣಿಗೆ ಸಂಬಂಧಿಸಿರುತ್ತದೆ. ಮತ್ತು ಇನ್ನೊಂದು ಶ್ರಮವನ್ನು ಕೃಷಿಯಿಂದ ಇತರೆ ಸಂಬಂಧಿತ ಚಟುವಟಿಕೆಗಳು (ಪಶುಸಂಗೋಪನೆ, ಕೋಳಿ ಸಾಕಣೆ, ಮೀನುಗಾರಿಕೆ ಇತ್ಯಾದಿ) ಮತ್ತು ಕೃಷಿಯೇತರ ವಲಯಕ್ಕೆ ಬದಲಾಯಿಸುವುದಕ್ಕೆ ಸಂಬಂಧಿಸಿದೆ.
ಭಾರತೀಯ ಆರ್ಥಿಕತೆಯಲ್ಲಿ ಮಾಹಿತಿ ತಂತ್ರಜ್ಞಾನವು ಹಲವು ವಲಯಗಳಲ್ಲಿ ಕ್ರಾಂತಿಯನ್ನು ಉಂಟುಮಾಡಿದೆ. 21ನೇ ಶತಮಾನದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಆಹಾರ ಭದ್ರತೆ ಸಾಧಿಸಲು ಮಾಹಿತಿ ತಂತ್ರಜ್ಞಾನವು ಒಂದು ಗಂಭೀರ ಪಾತ್ರವನ್ನು ವಹಿಸಬಲ್ಲದೆಂಬ ಸ್ಪಷ್ಟ ಒಮ್ಮತವಿದೆ. ಸರ್ಕಾರಗಳು ಸೂಕ್ತವಾದ ಮಾಹಿತಿ ಮತ್ತು ಸಾಫ್ಟ್‌ವೇರ್ ತಂತ್ರಗಳನ್ನು ಬಳಸಿಕೊಂಡು ಆಹಾರದ ಅಭದ್ರತೆ ಖಂಡನೀಯ ಪರಿಸ್ಥಿತಿ ಎದುರಾಗಬಹುದು ಪ್ರದೇಶಗಳನ್ನು ಊಹಿಸಿ ತುರ್ತು ಪರಿಸ್ಥಿತಿ ಉಂಟಾಗಬಹುದಾದ ಸಾಧ್ಯತೆಯನ್ನು ತಪ್ಪಿಸಲು ಸಕ್ಕ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಇದು ಕೃಷಿಯ ವಲಯದ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುತ್ತದೆ. ಏಕೆಂದರೆ ಇದು ವಿವಿಧ ಬೆಳೆಗಳನ್ನು ಬೆಳೆಯಲು ಬೇಕಾದ ಆಧುನಿಕ ತಂತ್ರಜ್ಞಾನ ಮತ್ತು ಅದರ ಅಳವಡಿಕೆಗಳು, ಬೆಲೆಗಳು, ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುತ್ತದೆ. ಮಾಹಿತಿ ತಂತ್ರಜ್ಞಾನವು ತನ್ನಷ್ಟಕ್ಕೆ ತಾನೆ ಪರಿವರ್ತನೆ ಪ್ರಚೋದಕವಾಗಲ್ಲದಿದ್ದರೂ ಸಮಾಜದಲ್ಲಿ ಜ್ಞಾನವನ್ನು ಮತ್ತು ಸೃಜನಾತ್ಮಕತೆಯನ್ನು ಪ್ರಸಾರ ಮಾಡುವ ಒಂದು ಸಾಧನವಾಗಿ ಕಾರ್ಯನಿರ್ವಹಿಸಬಲ್ಲದು. ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ನಿರ್ಮಾಣ ಶಕ್ತಿಯನ್ನು ಹೊಂದಿದೆ.
15. ಸಾವಯವ ಬೇಸಾಯ ಎಂದರೇನು? ಮತ್ತು ಇದು ಹೇಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುತ್ತದೆ?
ಸಾವಯವ ಬೇಸಾಯವು ಜೀವ ಪರಿಸರ ಸಮತೋಲನವನ್ನು ಸಂರಕ್ಷಣೆ ಮಾಡುವ, ನಿರ್ವಹಿಸುವ ಮತ್ತು ಅದನ್ನು ಸಂವರ್ಧಿಸುವ ಒಂದು ಪರಿಪೂರ್ಣ ಬೇಸಾಯವಾಗಿದೆ.
ನಮ್ಮ ಆರೋಗ್ಯದ ಮೇಲಾಗುತ್ತಿರವ ರಾಸಾಯನಿಕ ಮುಕ್ತ ಗೊಬ್ಬರಗಳು ಮತ್ತು ಕ್ರಿಮಿ ಕೀಟನಾಶಕಗಳ ದುಷ್ಪರಿಣಾಮಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಜಾಗೃತಿ ಹೆಚ್ಚಾಗುತ್ತಿದೆ. ಸಾಂಪ್ರದಾಯಿಕ ಕೃಷಿಯು ರಾಸಾಯನಿಕ ಗೊಬ್ಬರ ಮತ್ತು ವಿಷಕಾರಕ ಕ್ರಿಮಿಕೀಟನಾಶಕಗಳ ಮೇಲೆ ಅತಿಯಾಗಿ ಅವಲಂಬಿಸಿದೆ. ಇದು ಆಹಾರ ಮತ್ತು ಜಲಮೂಲದೊಳಗೆ ಸೇರಿಹೋಗುತ್ತಿದೆ ಮತ್ತು ಜೈವಿಕ ಪರಿಸರ ಪದ್ಧತಿಯನ್ನು ನಾಶಮಾಡುತ್ತಿದೆ. ಸುಸ್ಥಿರ ಅಭಿವೃದ್ಧಿಗೆ ಅಗತ್ಯವಿರುವ ಪರಿಸರ ಸ್ನೇಹಿ ತಂತ್ರಜ್ಞಾನವೆಂದರೆ ಸಾವಯವ ಬೇಸಾಯವಾಗಿದೆ. ಪ್ರಪಂಚದಾದ್ಯಂತ ಸಂರಕ್ಷಿತ ಆಹಾರವನ್ನು ಪೂರೈಸುವ ಸಾವಯವ ಬೇಸಾಯದಿಂದ ಉತ್ಪಾದಿಸಿದ ಆಹಾರಕ್ಕೆ ಬೇಡಿಕೆ ಹೆಚ್ಚುತ್ತಿದೆ.
16. ಸಾವಯವ ಬೇಸಾಯದ ಪ್ರಯೋಜನ ಮತ್ತು ಮಿತಿಗಳನ್ನು ಗುರುತಿಸಿ.
ಸಾವಯವ ಬೇಸಾಯದ ಪ್ರಯೋಜಗಳು : ವಿಶ್ವ ಸಾಮಾನ್ಯ ಜನರ ಜೀವನದ ಗುಣಮಟ್ಟದಲ್ಲಿ ಸುಸ್ಥಿರ ಪ್ರಗತಿಯನ್ನು ಸಾಧಿಸುವುದು ಸಾವಯವ ಬೇಸಾಯದ ಗುರಿಯಾಗಿದೆ. ಇದು ಪ್ರಯೋಜನಗಳು ಹೀಗಿದೆ.
- ಈ ಪದ್ಧತಿಯೂ ಜೀವಿತಾವಧಿಯನ್ನು ಹೆಚ್ಚಿಸುವ ಮೂಲಕ ಜನರ ಜೀವನದ ಗುಣಮಟ್ಟ ಸುಧಾರಣೆಗೆ ಪ್ರಯೋಜನಕಾರಿಯಾಗಿದೆ.
- ಸ್ಥಳೀಯವಾಗಿ ಉತ್ಪಾದಿಸಲ್ಪಟ್ಟ ಸಾವಯವ ಆದಾನಗಳು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಇತ್ಯಾದಿಗಳಿಗಿಂತ ಅಗ್ಗವಾಗಿವೆ. ಹಾಗೆಯೇ, ಇದು ಹೂಡಿಕೆಯ ಮೇಲೆ ಉತ್ತಮ ಪ್ರತಿಫಲ ತಂದುಕೊಡುತ್ತದೆ.
- ಇದು ಸ್ವಾಭಾವಿಕ ಸಸ್ಯವರ್ಗವನ್ನು ಕಾಯ್ದುಕೊಳ್ಳುವ ಭರವಸೆಯನ್ನು ನೀಡುತ್ತದೆ.
- ಈ ಪದ್ಧತಿಯಲ್ಲಿ ಉತ್ಪಾದನಾ ವೆಚ್ಚ ಮತ್ತು ಕೃಷಿ ಉತ್ಪನ್ನದ ಬೆಲೆ ಕಡಿಮೆ ಇರುತ್ತದೆ.
- ಇದು ದೀರ್ಘಾವಧಿಯಲ್ಲಿ ಕೃಷಿ ಉತ್ಪನ್ನದ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ.
- ಇದು ಪರಿಸರದ ಮೇಲಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಮತ್ತು ಜನರಿಗೆ ಆರೋಗ್ಯಕರ ಆಹಾರವನ್ನು ಒದಗಿಸುತ್ತದೆ.
- ಈ ಪದ್ಧತಿಗೆ ಅಧಿಕ ಶ್ರಮಬಲದ ಅಗತ್ಯವಿರುವುದರಿಂದ, ಇದು ಹಳ್ಳಿಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.
ಸಾವಯವ ಬೇಸಾಯದ ಮಿತಿಗಳೆಂದರೆ
ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ರೈತರಲ್ಲಿ ಜಾಗೃತಿ ಮತ್ತು ಇಚ್ಛಾಶಕ್ತಿಯ ಕೊರತೆಯಿದೆ.
ಸಾವಯವ ಬೇಸಾಯವನ್ನು ಪ್ರೋತ್ಸಾಹಿಸಲು ಸೂಕ್ತ ಕೃಷಿ ನೀತಿಯ ಜೊತೆಗೆ ಮೂಲ ಸೌಕರ್ಯಗಳ ಕೊರತೆ ಮತ್ತು ಉತ್ಪನ್ನಗಳ ಮಾರುಕಟ್ಟೆ ಸಮಸ್ಯೆ.
ಪ್ರಾರಂಭದ ವರ್ಷಗಳಲ್ಲಿ ಸಾವಯವ ಬೇಸಾಯದ ಇಳುವರಿಯು ಆಧುನಿಕ ಬೇಸಾಯದ ಇಳುವರಿಗಿಂತ ಕಡಿಮೆ ಇದೆ.
- ಸಣ್ಣ ಮತ್ತು ಸೀಮಾಂತ ರೈತರಿಗೆ ಬೃಹತ್ ಪ್ರಮಾಣದ ಉತ್ಪನ್ನವನ್ನು ಸಾಧಿಸಲು ಕಷ್ಟ.
- ಸಾಯವ ಉತ್ಪನ್ನವು ರಾಸಾಯನಿಕಗಳನ್ನು ಸಿಂಪಡಿಸಿ ಬೆಳೆದ ಉತ್ಪನ್ನಕ್ಕಿಂತ ಬೇಗ ಕೆಡುವ ನ್ಯೂನತೆ ಹೊಂದಿದೆ.
- ಸಾವಯವ ಬೇಸಾಯದಲ್ಲಿ ಅಕಾಲಿಕ ಬೆಳೆ ಬೆಳೆಯುವ ಆಯ್ಕೆ ಬಹಳ ಮಿತಿಯಲ್ಲಿರುತ್ತದೆ. ಸಮಸ್ಯೆಗಳನ್ನು
17. ಸಾವಯವ ಬೇಸಾಯದ ಪ್ರಾರಂಭದ ವರ್ಷಗಳಲ್ಲಿ ರೈತರು ಎದುರಿಸುವ ಸಮ ಪಟ್ಟಿಮಾಡಿ.
- ಮೂಲಭೂತ ಸೌಕರ್ಯಗಳ ಕೊರತೆ.
- ಉತ್ಪನ್ನಗಳ ಮಾರುಕಟ್ಟೆ ಸಮಸ್ಯೆ.
- ಆಧುನಿಕ ಬೇಸಾಯದ ಇಳುವರಿಗಿಂತ ಕಡಿಮೆ ಇಳುವರಿ.
- ಸಣ್ಣ ಮತ್ತು ಸೀಮಾಂತ ರೈತರಿಗೆ ಸಾವಯವ ಬೇಸಾಯವನ್ನು ಅಳವಡಿಸಿಕೊಳ್ಳುವುದು ಕಷ್ಟ.
- ಸಾವಯವ ಉತ್ಪನ್ನವು ಬೇಗ ಕೆಡುತ್ತದೆ.
ಹೆಚ್ಚುವರಿ ಪ್ರಶೋತ್ತರಗಳು
1st Puc Economic Chapter 6 Notes
1. ಗ್ರಾಮೀಣ ವಲಯದಲ್ಲಿ ಯಾವುದು ಜೀವನಾಧಾರದ ಪ್ರಮುಖ ಮೂಲವಾಗಿದೆ.
ಕೃಷಿಯು ಗ್ರಾಮೀಣ ವಲಯದ ಜೀವನಾಧಾರದ ಪ್ರಮುಖ ಮೂಲವಾಗಿದೆ.
2. ಗ್ರಾಮೀಣ ಅಭಿವೃದ್ಧಿ ಎಂದರೇನು?
ಗ್ರಾಮೀಣ ಜನರಿಗೆ ಮೂಲಸೌಕರ್ಯಗಳನ್ನೊದಗಿಸಿ ಮತ್ತು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಮರ್ಥರಾಗುವಂತೆ ಮಾಡುವ ಮೂಲಕ ಅವರ ಸಾಮಾಜಿಕ ಮತ್ತು ಆರ್ಥಿಕ ಜೀವನವನ್ನು ಉತ್ತಮ ಪಡಿಸುವುದನ್ನು ಗ್ರಾಮೀಣಾಭಿವೃದ್ಧಿ ಎನ್ನುತ್ತೇವೆ.
3. ಗ್ರಾಮೀಣ ಸಾಲದ ಅರ್ಥ ನೀಡಿ.
ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗಾಗಿ ಗ್ರಾಮೀಣ ಜನರಿಂದ ಬಳಸಲ್ಪಡುವ ಸಾಲವು ಗ್ರಾಮೀಣ ಸಾಲವೆನಿಸುತ್ತದೆ.
4. NABARD ಅನ್ನು ವಿಸ್ತರಿಸಿ.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು
5, ಸೂಕ್ಷ್ಮ ಸಾಲ ಯೋಜನೆಗಳೆಂದರೇನು?
ಸ್ವ – ಸಹಾಯ ಗುಂಪುಗಳ ಸಾಲ ಪದ್ಧತಿಯನ್ನು “ಸೂಕ್ಷ್ಮ ಸಾಲ ಯೋಜನೆಗಳು” (Micro credit programme).
6. ಸ್ವ- ಸಹಾಯ ಗುಂಪುಗಳು (SHG) ಎಂದರೇನು?
ಸ್ವ – ಸಹಾಯ ಗುಂಪುಗಳು ಎಂದರೆ ಗ್ರಾಮಗಳಲ್ಲಿ 10-20 ಮಹಿಳೆಯರು ಅಥವಾ ಪುರುಷರು ಮಾಡಿಕೊಕಂಡಿರುವ ಒಂದು ಹಣಕಾಸಿನ ಮಾಧ್ಯಮವಾಗಿದೆ. ಪ್ರತಿ ಸದಸ್ಯರುಗಳಿಂದ ಸಂಗ್ರಹಿಸಲ್ಪಟ್ಟ ಹಣದಿಂದ ಅಗತ್ಯವಿರುವವರೆಗೆ ಸುಲಭ ಕಂತುಗಳಲ್ಲಿ ನ್ಯಾಯಯುತ ಬಡ್ಡಿದರ ಸಾಲವನ್ನು ನೀಡಲಾಗುತ್ತದೆ.
7. ಕಾಪು ದಾಸ್ತಾನು ಎಂದರೇನು?
ಕಾಪು ದಾಸ್ತಾನು ಎಂದರೆ ಕೃಷಿ ಉತ್ಪನ್ನದ ಬೆಲೆಗಳು ಕಡಿಮೆ ಇರುವ ಸಂದರ್ಭದಲ್ಲಿ ಸರ್ಕಾರ ಕೊಂಡುಕೊಂಡು ದಾಸ್ತಾನು ಮಾಡುತ್ತದೆ ಮತ್ತು ಅದನ್ನು ಬೆಲೆಗಳು ಹೆಚ್ಚಳವಾದ ಸಂದರ್ಭದಲ್ಲಿ ಬಿಡುಗಡೆಗೊಳಿಸುವ ವ್ಯವಸ್ಥೆಯಾಗಿದೆ.
8. ಭಾರತದ ಪ್ರಮುಖ ಆಹಾರ ಧಾನ್ಯಗಳ ಕಾಪು ದಾಸ್ತಾನು ನಿರ್ವಹಣೆಯನ್ನು ಯಾರು ನಿರ್ವಹಿಸುತ್ತಾರೆ?
ಭಾರತೀಯ ಆಹಾರ ನಿಗಮ (FCI)
9. ಕೃಷಿ ವೈವಿದ್ವೀಕರಣದ ಅರ್ಥ ಕೊಡಿ.
ಕೃಷಿ ವೈವಿದ್ವೀಕರಣವು ಬೆಳೆ ವಿಧಾನದಲ್ಲಿ ಬದಲಾವಣೆ, ಶ್ರಮ ಬಲವನ್ನು ಕೃಷಿಯಿಂದ ಅದರ ಸಂಬಧಿ ಚಟುವಟಿಕೆಗಳು, ಕೃಷಿಯೇತರ ವಲಯ ಮತ್ತು ಗೃಹ ಕೈಗಾರಿಕೆಗಳೆಡೆಗೆ ವರ್ಗಾಯಿಸುವುದನ್ನು ಒಳಗೊಂಡಿದೆ.
10, ಸಾವಯವ ಬೇಸಾಯ ಎಂದರೇನು?
ಸಾವಯವ ಬೇಸಾಯವು ಜೀವ ಪರಿಸರ ಸಮತೋಲನವನ್ನು ಸಂರಕ್ಷಣೆ ಮಾಡುವ, ನಿರ್ವಹಿಸುವ ಮತ್ತು ಅದನ್ನು ಸಂವರ್ಧಿಸುವ ಒಂದು ಪರಿಪೂರ್ಣ ಬೇಸಾಯವಾಗಿದೆ.
11. “ಹಸಿರು ಕ್ರಾಂತಿ” ಎಂದರೇನು?
1967-68 ರಲ್ಲಿ ಆಹಾರ ಧಾನ್ಯಗಳ ಉತ್ಪನ್ನದಲ್ಲಾದ ಗಮನಾರ್ಹ ಹೆಚ್ಚಳವನ್ನು ಹಸಿರು ಕ್ರಾಂತಿ ಎನ್ನುವರು.
12. “ಶ್ವೇತಕ್ರಾಂತಿ” ಎಂದರೇನು?
ಹಾಲಿನ ಉತ್ಪಾದನೆಯ ಗಮನಾರ್ಹ ಹೆಚ್ಚಳವನ್ನು ಶ್ವೇತಕ್ರಾಂತಿ ಎನ್ನುತ್ತಾರೆ. ಇದನ್ನು ಆಪರೇಷನ್ ಫ್ಲಡ್ ಎಂದೂ ಸಹ ಕರೆಯುತ್ತಾರೆ.
13. “ನೀಲಿ ಕ್ರಾಂತಿ” ಎಂದರೇನು?
ನೀಲಿಕ್ರಾಂತಿ ಎಂದರೆ ಮೀನು ಮತ್ತು ಇತರೆ ಜಲಚರ ಉತ್ಪನ್ನಗಳ ಉತ್ಪಾದನೆಯ ಪರಿಮಾಣಾತ್ಮಕ ಜಿಗಿತ ಎಂದರ್ಥ.
14. “ಸುವರ್ಣ ಕ್ರಾಂತಿ” ಎಂದರೇನು?
ಹಣ್ಣುಗಳ ಉತ್ಪಾದನೆಯಲ್ಲಿ ಕ್ಷಿಪ್ರ ಹೆಚ್ಚಳವನ್ನು ಸುವರ್ಣ ಕ್ರಾಂತಿ ಎನ್ನುವರು.
15.1991 – 2003ರ ಅವಧಿಯನ್ನು ಸುವರ್ಣಯುಗ ಎಂದು ಏಕೆ ಕರೆಯಲಾಗುತ್ತದೆ?
ಏಕೆಂದರೆ, ಈ ಅವಧಿಯಲ್ಲಿ ತೋಟಗಾರಿಕೆಯಲ್ಲಿ ಯೋಜನಾಬದ್ಧ ಹೂಡಿಕೆಯಿಂದಾಗಿ ಉತ್ಪಾದಕತೆ ಹೆಚ್ಚಾಯಿತು ಮತ್ತು ತೋಟಗಾರಿಕಾ ವಲಯವು ಸುಸ್ಥಿರ ಜೀವನಾಧಾರ ಆಯ್ಕೆಯಾಗಿ ಹೊರ ಹೊಮ್ಮಿತು.
16. ಕೃಷಿಯೇತರ ಚಟುವಟಿಕೆಗಳಾವುವು?
ಕೃಷಿ ಸಂಸ್ಕರಣೋದ್ಯಯ, ಆಹಾರ ಸಂಸ್ಕರಣೋದ್ಯಮ, ಚರ್ಮೋದಯ ಬೆಲ್ಲ ತಯಾರಿಕೆ, ಕುಂಬಾರಿಕೆ, ಕರಕುಶಲಗಾರಿಕೆ, ಕೈಮಗ್ಗಗಳು, ಗೊಂಬೆ ತಯಾರಿಕೆ, ಚಾಪೆ ಹೆಣಿಗೆ ಇತ್ಯಾದಿ.
17. ಯಾವ ಎರಡು ಉದ್ದೇಶಗಳಿಗೆ ಭಾರತೀಯ ರೈತರಿಗೆ ಸಾಲ ದೊರೆಯುತ್ತಿದೆ.
ಉತ್ಪಾದಕ ಚಟುವಟಿಕೆಗಳು
ಸಾಂಸ್ಥಿಕೇತರ ಮೂಲಗಳು.
18. ಭಾರತದ ಕೃಷಿ ಸಾಲದ ಎರಡು ವಿಧಗಳನ್ನು ಹೆಸರಿಸಿ.
ಸಾಂಸ್ಥಿಕ ಮೂಲಗಳು
ಸಾಂಸ್ಥಿಕೇತರ ಮೂಲಗಳು
19. ಅಲೈಡ್ ಚಟುವಟಿಕೆಗಳನ್ನು ಹೆಸರಿಸಿ.
ಪಶುಸಂಗೋಪನೆ, ಕೋಳಿ ಸಾಕಣೆ, ಮೀನುಗಾರಿಕೆ
20. ವೈವಿದ್ವೀಕರಣದ 2 ಉದ್ದೇಶಗಳನ್ನು ತಿಳಿಸಿ,
ಕೃಷಿ ವಲಯದಿಂದಾಗುವ ತೊಂದರೆಯನ್ನು ಕಡಿಮೆ ಮಾಡುತ್ತದೆ. 2: ಗ್ರಾಮೀಣ ಜನರಿಗೆ ಪರ್ಯಾಯ ಜೀವನಾಧಾರದ ಆಯ್ಕೆಯನ್ನು ಕಲ್ಪಿಸುತ್ತದೆ.
21. ಯಾವ ಋತುವಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕೃಷಿ ಚಟುವಟಿಕೆಗಳು ಕೇಂದ್ರಿಕೃತವಾಗಿರುತ್ತದೆ? ಮತ್ತು ಏಕೆ?
ಕೃಷಿ ಚಟುವಟಿಕೆಗಳು ಮುಂಗಾರು
ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಋತುವಿನಲ್ಲಿ ಮಾತ್ರ ಕೇಂದ್ರೀಕೃತವಾಗುತ್ತವೆ.
ಏಕೆಂದರೆ, ಹಿಂಗಾರು ಋತುವಿನಲ್ಲಿ ನೀರಾವರಿ ಸೌಲಭ್ಯ ಕೊರತೆಯಿರುವ ಕಡೆ ಲಾಭದಾಯಕ ಉದ್ಯೋಗವನ್ನು ಕಂಡುಕೊಳ್ಳುವುದು ತುಂಬಾ ಕಷ್ಟದಾಯಕ.
22. ಇಂದಿಗೂ ಎಷ್ಟು ಪ್ರಮಾಣದಲ್ಲಿ ಕೃಷಿ ಉತ್ಪನ್ನವು ದಾಸ್ತಾನು ಮಳಿಗೆಯ ಕೊರತೆ ಯಿಂದಾಗಿ ವ್ಯರ್ಥವಾಗುತ್ತಿದೆ?
ಇಂದಿಗೂ ಶೇ. 10 ಕ್ಕಿಂತಲೂ ಅಧಿಕ ಕೃಷಿ ಉತ್ಪನ್ನವು ದಾಸ್ತಾನು ಮಳಿಗೆಯ ಕೊರತೆಯಿಂದಾಗಿ ವ್ಯರ್ಥವಾಗುತ್ತಿದೆ.
23. ಗ್ರಾಮೀಣ ಯುವಕರು ಏಕೆ ನಗರಗಳತ್ತ ವಲಸೆ ಹೋಗುತ್ತಾರೆ?
ಗ್ರಾಮೀಣ ಪ್ರದೇಶದ ಸಮಸ್ಯೆಗಳು ಅಂದರೆ ಮೂಲ ಸೌಕರ್ಯಗಳ ಕೊರತೆ, ಮಳೆಯ ಅನಿಶ್ಚಿತತೆ, ಉದ್ಯೋಗದ ಅಭದ್ರತೆ ಮುಂತಾದವುಗಳಿಂದ ಬೇಸತ್ತ ಹಳ್ಳಿಗರು ನಗರಗಳ ಕಡೆ ವಲಸೆ ಹೋಗುತ್ತಾರೆ. ನಗರಗಳಲ್ಲಿನ ಕೈಗಾರಿಕೆಗಳು, ನಿರ್ಮಾಣ ಕೆಲಸ ಸೇವಾಕ್ಷೇತ್ರ ಮತ್ತು ಇತರೆ ವಲಯಗಳಲ್ಲಿ ಸಿಗುವ ಪರ್ಯಾಯ ಉದ್ಯೋಗಗಳನ್ನು ಅರಿಸಿಕೊಂಡು ಹಳ್ಳಿಗರು ನಗರಗಳತ್ತ ವಲಸೆ ಹೋಗುತ್ತಾರೆ.
24. ಗ್ರಾಮೀಣ ಸಾಲದ ಸಾಂಸ್ಥಿಕ ಮೂಲಗಳನ್ನು ಹೆಸರಿಸಿ?
ಗ್ರಾಮೀಣ ಸಾಲದ ಸಾಂಸ್ಥಿಕ ಮೂಲಗಳೆಂದರೆ : – ವಾಣಿಜ್ಯ ಬ್ಯಾಂಕುಗಳು (RRBS), ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕು (PLDBS) ಇತ್ತೀಚಿನ ದಿನಗಳಲ್ಲಿ ಸ್ವ – ಸಹಾಯ ಗುಂಪುಗಳು. (SHGS)
25. ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಹೇಗೆ ಲೇವಾದೇವಿಗಾರರು | ಮತ್ತು ಇತರರಿಂದ ಶೋಷಣೆಗೊಳಗಾಗುತ್ತಾರೆ?
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಲೇವಾದೇವಿಗಾರರು, ವ್ಯಾಪಾರಿಗಳು ಮತ್ತು ಜಮೀನ್ದಾರರು, ಸಣ್ಣ, ಅತಿ ಸಣ್ಣ ರೈತರು ಹಾಗೂ ಭೂ – ರಹಿತ ಕಾರ್ಮಿಕರಿಗೆ ಅಧಿಕ ಬಡ್ಡಿ ದರಕ್ಕೆ ಸಾಲ ನೀಡುವ ಮೂಲಕ ಅವರನ್ನು ಶೋಷಿಸುತ್ತಿದ್ದರು. ಅಲ್ಲದೆ ಸಾಲದ ಲೆಕ್ಕವನ್ನು ತಿರುಚುವ ಮೂಲಕ ಅವರನ್ನು ಸಾಲದ ಸುಳಿಗೆ ತಳ್ಳುತ್ತಿದ್ದರು.
26. ಪಶುಸಂಗೋಪನೆಯ ವಿವಿಧ ಪ್ರಕಾರಗಳನ್ನು ತಿಳಿಸಿ.
ಪಶುಸಂಗೋಪನೆಯು ಕೋಳಿಸಾಕಣೆ, ಜಾನುವಾರು, ಮೇಕೆ, ಕುರಿ, ಹಂದಿ ಮತ್ತು ಪಕ್ಷಿ ಸಾಕಣೆ, ಕತ್ತೆಗಳು ಹಾಗೂ ಕುದುರೆ ಸಾಕಣೆಯನ್ನು ಒಳಗೊಳ್ಳುತ್ತದೆ.
27. ಮೀನುಗಾರ ಸಮುದಾಯಕ್ಕೆ ಬದುಕು ಕಟ್ಟಿಕೊಡುವ ಮೂಲಗಳಾವುವು?
ನದಿಗಳು, ಸರೋವರಗಳು, ಕೆರೆಗಳು, ಸ್ವಾಭಾವಿಕ ನೀರಿನ ಕೊಳಗಳು, ಹೊಳೆ, ಮಹಾಸಾಗರಗಳು ಮತ್ತು ಸಮುದ್ರಗಳು, ಮೀನುಗಾರ ಸಮುದಾಯಕ್ಕೆ ಬದುಕನ್ನು ಕಟ್ಟಿಕೊಡುವ ಮೂಲಗಳಾಗಿವೆ.
28. ಆಧುನಿಕ ಬೇಸಾಯ ಮತ್ತು ಸಾವಯವ ಬೇಸಾಯದ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.
ಆಧುನಿಕ ಬೇಸಾಯ : ಹೈಬ್ರಿಡ್ ಬೀಜಗಳು, ರಾಸಾಯನಿಕ ಗೊಬ್ಬರ ಕ್ರಿಮಿನಾಶಕ ಔಷಧಿಗಳು ಇತ್ಯಾದಿಗಳನ್ನು ಬಳಸಿ ಮಾಡುವ ಬೇಸಾಯಕ್ಕೆ ಆಧುನಿಕ ಬೇಸಾಯ ಎನ್ನುವರು.
ಸಾವಯವ ಬೇಸಾಯ : ಹಸಿರು ಗೊಬ್ಬರ, ಮಿಶ್ರಗೊಬ್ಬರ ಮತ್ತು ಜೈವಿಕ ಕೀಟಗಳ ಬಳಕೆ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುವ ಕೃಷಿ ವಿಧಾನವಾಗಿದೆ.
29. ವಾಣಿಜ್ಯ ಬ್ಯಾಂಕುಗಳನ್ನು ಪ್ರಥಮ ಬಾರಿಗೆ ಯಾವಾಗ ರಾಷ್ಟ್ರೀಕರಿಸಲಾಯಿತು?
1969 ರಲ್ಲಿ
30. ಯಾವಾಗ ಗ್ರಾಮೀಣ ಹಣಕಾಸಿನ ಒಂದು ಬ್ಯಾಂಕಾಗಿ ಅಸ್ತಿತ್ವಕ್ಕೆ ಬಂದಿತು?
1982 ರಲ್ಲಿ
31. ಗ್ರಾಮೀಣ ಆರ್ಥಿಕತೆಯ ಪ್ರಮುಖ ಮೂಲ ಸಂಗತಿಗಳನ್ನು ವಿವರಿಸಿ.
ಮಾನವ ಸಂಪನ್ಮೂಲದ ಅಭಿವೃದ್ಧಿ : ಇದು ಸಾಕ್ಷರತೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಆರೋಗ್ಯ ನೈರ್ಮಲೀಕರಣ ಇತ್ಯಾದಿಗಳನ್ನೊಳಗೊಂಡಿದೆ.
ಭೂ – ಸುಧಾರಣೆಗಳ ಅನುಷ್ಟಾನ :- ಭೂ ಸುಧಾರಣೆಗಳ ಪ್ರಮುಖ 1 ಉದ್ದೇಶವೆಂದರೆ ಭೂ ಒಡೆತನವನ್ನು ಹಿಡುವಳಿದಾರನಿಂದ ಉಳಿವವನಿಗೆ ವರ್ಗಾಯಿಸುವುದು ಇದು ಸಾಮಾಜಿಕವಾಗಿ, ನ್ಯಾಯಯುತವಾದುದು ಮತ್ತು ಆರ್ಥಿಕವಾಗಿ ದಕ್ಷವಾದುದು ಆಗಿದೆ.
ಮೂಲ ಸೌಕರ್ಯದ ಅಭಿವೃದ್ಧಿ : ಸಾರಿಗೆ, ವಿದ್ಯುತ್, ನೀರಾವರಿ, ಸಾಲ ಮಾರುಕಟ್ಟೆ ವ್ಯವಸ್ಥೆ, ಕೃಷಿ ಸಂಶೋಧನೆ ಮತ್ತು ಮಾಹಿತಿ ಮುಂತಾದ ಚಟುವಟಿಕೆಗಳ ವಿಸ್ತರಣಾ ಪ್ರಕ್ರಿಯೆಯು ಗ್ರಾಮೀಣ ಆರ್ಥಿಕತೆಯ ಸರಾಗ ಕಾರನಿರ್ವಹಣೆ ಮತ್ತು ವೇಗ ವರ್ಧನೆಯನ್ನು ಬೆಂಬಲಿಸುತ್ತದೆ.
ವಿಶೇಷ ಕಾರ್ಯಕ್ರಮಗಳ ಜಾರಿ : ಇದು ದುರ್ಬಲ ವರ್ಗಗಳ ಬದುಕಿನ ಸ್ಥಿತಿಯನ್ನು ಸುಧಾರಿಸುವಂತಹ ಬಡತನ ಉಪಶಮನ ಮತ್ತು ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳ ಜಾರಿಯನ್ನೊಳಗೊಂಡಿರುತ್ತದೆ.
FAQ
ಗ್ರಾಮೀಣ ಜನರಿಗೆ ಮೂಲಸೌಕರ್ಯಗಳನ್ನೊದಗಿಸಿ ಮತ್ತು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಮರ್ಥರಾಗುವಂತೆ ಮಾಡುವ ಮೂಲಕ ಅವರ ಸಾಮಾಜಿಕ ಮತ್ತು ಆರ್ಥಿಕ ಜೀವನವನ್ನು ಉತ್ತಮ ಪಡಿಸುವುದನ್ನು ಗ್ರಾಮೀಣಾಭಿವೃದ್ಧಿ ಎನ್ನುತ್ತೇವೆ.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು
ಗ್ರಾಮೀಣ ಪ್ರದೇಶದ ಸಮಸ್ಯೆಗಳು ಅಂದರೆ ಮೂಲ ಸೌಕರ್ಯಗಳ ಕೊರತೆ, ಮಳೆಯ ಅನಿಶ್ಚಿತತೆ, ಉದ್ಯೋಗದ ಅಭದ್ರತೆ ಮುಂತಾದವುಗಳಿಂದ ಬೇಸತ್ತ ಹಳ್ಳಿಗರು ನಗರಗಳ ಕಡೆ ವಲಸೆ ಹೋಗುತ್ತಾರೆ. ನಗರಗಳಲ್ಲಿನ ಕೈಗಾರಿಕೆಗಳು, ನಿರ್ಮಾಣ ಕೆಲಸ ಸೇವಾಕ್ಷೇತ್ರ ಮತ್ತು ಇತರೆ ವಲಯಗಳಲ್ಲಿ ಸಿಗುವ ಪರ್ಯಾಯ ಉದ್ಯೋಗಗಳನ್ನು ಅರಿಸಿಕೊಂಡು ಹಳ್ಳಿಗರು ನಗರಗಳತ್ತ ವಲಸೆ ಹೋಗುತ್ತಾರೆ.
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12 ನೇ ತರಗತಿ ಎಲ್ಲಾ ನೋಟ್ಸ್
1 ರಿಂದ 12ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳ Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.