9th Dharma Samadrusti Kannada Notes ಧರ್ಮಸಮದೃಷ್ಟಿ ಪ್ರಶ್ನೋತ್ತರಗಳು

Dharma Samadrusti Kannada Notes ಧರ್ಮಸಮದೃಷ್ಟಿ ಪ್ರಶ್ನೋತ್ತರಗಳು 9th kannada 3rd chapter

9th class kannada dharma samadrusti question answer, dharma samadrusti in kannada, dharma samadrusti question answer, 9th Kannada 3rd chapter, 9th Standard Dharma Samadrusti Kannada Notes, ಧರ್ಮ ಸಮದೃಷ್ಟಿ ನೋಟ್ಸ್ ಪ್ರಶ್ನೋತ್ತರಗಳು 3rd chapter notes in Kannada, 9th Kannada question answer

ಗದ್ಯ ಭಾಗ – 3

ಧರ್ಮ ಸಮದೃಷ್ಟಿ           -ಶಾಸನ        

ಕೃತಿಕಾರರ ಪರಿಚಯ

ಧರ್ಮಸಮದೃಷ್ಟಿ ಶಾಸನ ( 1368 ) ವಿಜಯನಗರ ಸಾಮ್ರಾಜ್ಯದ ಅರಸ ವೀರ ಬುಕ್ಕರಾಯನಿಗೆ ಸಂಬಂಧಿಸಿದ್ದಾಗಿದೆ . ಮತಧರ್ಮದ ಸಂಘರ್ಷದಲ್ಲಿ ಜೈನರು ಹಾಗೂ ವೈಷ್ಣವರು ಸಾಮರಸ್ಯದಿಂದ ಬಾಳಬೇಕೆಂಬ ಆಶಯದಿಂದ ವಿಧಿಸಿದ ಕಟ್ಟಳೆಯಿದು .

ವೀರ ಬುಕ್ಕರಾಯನ ಉದಾತ್ತತೆಯನ್ನೂ ಧರ್ಮಸಮನ್ವಯ ದೃಷ್ಟಿಯನ್ನೂ ಈ ಶಾಸನ ಬಿಂಬಿಸುತ್ತದೆ .ಭಕ್ತರು ಮಾಡುವ ಅನ್ಯಾಯವನ್ನು ಪೆನುಗೊಂಡೆಯ ಜೈನರು ಬಿನ್ನಹ ಮಾಡಿದಾಗ ಬುಕ್ಕರಾಯನು ವೈಷ್ಣವರು ಹಾಗೂ ಜೈನ ಪ್ರಮುಖರ ಕೈಹಿಡಿದು ಸಾಮರಸ್ಯದಿಂದ ಬಾಳಬೇಕೆಂದೂ ವೈಷ್ಣವ ಧರ್ಮಕ್ಕೂ ಜೈನಧರ್ಮಕ್ಕೂ ಯಾವುದೇ ಭೇದವಿಲ್ಲವೆಂದೂ

ಪರಸ್ಪರರು ಪೂರ್ವ ಸಂಪ್ರದಾಯದಂತೆ ಹೊಂದಾಣಿಕೆಯಿಂದಿರಬೇಕೆಂದೂ ತಪ್ಪಿದಲ್ಲಿ ಕಟ್ಟಳೆಯನ್ನು ಮೀರಿದಾಂತಾಗುವುದೆಂದೂ ರೂಪಿಸಿದ ಶಾಸನ ಇದಾಗಿದೆ ,

ನಬಿ.ಎಂ.ಶ್ರೀ.ಯವರು ಸಂಪಾದಿಸಿದ ಕನ್ನಡ ಬಾವುಟ ಕೃತಿಯಿಂದ ಈ ಪಾಠವನ್ನು ಆಯ್ದುಕೊಳ್ಳಲಾಗಿದೆ ,

  ಪದಗಳ ಅರ್ಥ

ಅನುಮತ                             – ಸಮ್ಮತಿ

ಈಶ್ವರ                                   – ಒಡೆಯ

ಜಪಾರ್ಜಿಸು                           -ಸಂಪಾದಿಸು

ಕಟ್ಟಳೆ                                    -ನಿಯಮ

ಕೀಲಕ ಸಂವತ್ಸರ                    – ಪ್ರಭವಾದಿ 60 ಸಂವತ್ಸರಗಳಲ್ಲೊಂದು .

ಶು||                                         –  ಶುದ್ಧ , ಶುಕ್ಲಪಕ್ಷ ,

ಚಂದ್ರಾರ್ಕಸ್ಥಾಯಿ                   – ಸೂರಚಂದ್ರರು ಇರುವ ತನಕ ಸ್ಥಿರವಾಗಿರು

ಚರಣ                                      – ಪಾದ

ಅಂಬುಜ                                  –  ತಾವರೆ .

ಜಾಂಬವಕುಲ                           – ಕರಡಿಗುರುತಿನ ಧ್ವಜವುಳ್ಳ ದೊರೆಯ ಕುಲದವರು , ಆಜಾನುಬಾಹುಗಳು ,

ತಿರಿಕುಲ                                    – ಅಲೆಮಾರಿಗಳು ತಿರುಪಣಿತಿರುವಿಡಿ

ತಣ್ಣೀರವರು                              – ರಾಟೆ ತಿರುಗಿಸಿ ನೀರು ಹರಿಸುವವರು .

ಬಡವಾ                                     – ಹೆಣ್ಣುಕುದುರೆ ,

ಬಸ್ತಿ                                          –  ಬಸದಿ

ಬಹೆವು                                      – ಬರುತ್ತೇವೆ

ಬಿನ್ನಹ                                      – ವಿಜ್ಞಾಪನೆ ( ತ್ಸ ) .

ಸಮಯಿ                                    –  ಒಂದು ನಿರ್ದಿಷ್ಟ ಸಿದ್ಧಾಂತವನ್ನು ಅನುಸರಿಸುವವನು .

ಸೊದೆ ( ದ್ಭ )                             –  ಸುಧೆ (ತ್ಸ ) .ಅಮೃತ ಬಿಳಿಯ ಬಣ್ಣದ್ದು

ಸೊದೆಯನಿಕ್ಕುವುದು                 – ಜೀರ್ಣೋದ್ಧಾರ ಮಾಡುವುದು

 

ಅಭ್ಯಾಸ

9th class kannada dharma samadrusti question answer

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ ,

 

1 , ಬುಕ್ಕರಾಯನ ಹಿರಿಮೆ ಏನು ?

ಉತ್ತರ : ಆರಿರಾಯ ವಿಭಾಡ ಹಾಗೂ ಭಾಷೆಗೆ ತಪ್ಪುವ ರಾಯರ ಗಂಡ ಎಂಬುದೇ ಬುಕ್ಕರಾಯನ ಹಿರಿಮೆ

3 . 2. ಬುಕ್ಕರಾಯನ ರಾಜ್ಯಭಾರದ ಕಾಲದಲ್ಲಿ ಯಾರೊಳಗೆ ಸಂವಾದ ನಡೆಯಿತು ?

ಉತ್ತರ : ಬುಕ್ಕರಾಯನ ರಾಜ್ಯಭಾರದ ಕಾಲದಲ್ಲಿ ಜೈನರಿಗೂ ಭಕ್ತರಿಗೂ ( ವೈಷ್ಣವ ) ನಡುವೆ ಸಂವಾದ ನಡೆಯಿತು .

4, ನಾಡ ಭವ್ಯ ಜನರು ಬುಕ್ಕರಾಯನ ಬಳಿ ಏನೆಂದು ಬಿನ್ನಹ ಮಾಡಿದರು ?

ಉತ್ತರ : ನಾಡ ಭವ್ಯ ಜನರು ಬುಕ್ಕರಾಯನ ಬಳಿ ಭಕ್ತರು ( ಶ್ರೀ ವೈಷ್ಣವರು ) ಮಾಡುವ ಅನ್ಯಾಯಗಳನ್ನು ಬಿನ್ನಹ ಮಾಡಿದರು .

4. ಶ್ರೀವೈಷ್ಣವರೊಡನೆ ಮಹಾರಾಜನು ಏನು ಹೇಳಿದನು ?

ಉತ್ತರ : ಶ್ರೀವೈಷ್ಣವರೊಡನೆ ಮಹಾರಾಜನು ಜೈನರ ಕೈಯಲ್ಲಿ ವೈಷ್ಣವರ ಕೈಯನ್ನಿಡಿಸಿ ಜೈನದರ್ಶನಕ್ಕೂ , ವೈಷ್ಣವ ದರ್ಶನಕ್ಕೂ ಭೇಧವಿಲ್ಲವೆಂದೂ ಹೇಳಿಸಿದನು .

5 , ರಾಯನು ವಿಧಿಸಿದ ಕಟ್ಟಳೆಯನ್ನು ಮೀರಿದರೆ ಆಗುವ ಪರಿಣಾಮವೇನು ?

ಉತ್ತರ : ರಾಯನು ವಿಧಿಸಿದ ಕಟ್ಟಳೆಯನ್ನು ಮೀರುತ್ತಾರೋ ಅವರನ್ನು ರಾಜದ್ರೋಹಿ ಆಗುವನು .

 

2 ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ ,

 

1)’ ಧರ್ಮಸಮದೃಷ್ಟಿ ‘ ಪಾಶದಲ್ಲಿ ರಾಮಾನುಜಾಚಾರ್ಯರ ಗುಣವಿಶೇಷತೆಯನ್ನು ಹೇಗೆ ಕೊಂಡಾಡಲಾಗಿದೆ ?

ಉತ್ತರ : ‘ ಧರ್ಮಸಮದೃಷ್ಟಿ ‘ ಪಾಠದಲ್ಲಿ ರಾಮಾನುಜಾಚಾರ್ಯರು ಪಾಷಂಡ ಸಾಗರ ಮಹಾಬಡವಮುಖಾಗ್ನಿಯಂತವರು . ಸಂಪ್ರದಾಯದ ವಿರೋಧಿಗಳಿಗೆ ಸಮುದ್ರದೊಳಗೆ

      ಕುದುರೆಯ ಮುಖದಿಂದ ಹೊರಟ ಬೆಂಕಿಯಂತಿರುವ ಶ್ರೀರಂಗನಾಥನ ಚರಣ ಪದ್ಯಗಳ ಮೂಲ ದಾಸರಾದ ಶ್ರೀ ವಿಷ್ಣುವಿನ ವೈಕುಂಠ ಲೋಕಕ್ಕೆ ಮಾರ್ಗವೆನಿಸಿದ ಜಿತೇಂದ್ರಿಯರಾದವರು ,

       ಯತಿ ರಾಜರಾದ ರಾಮಾನುಜರಿಗೆ ಜಯವಾಗಲಿ ಎಂದು “ ಧರ್ಮಸಮದೃಷ್ಟಿ ‘ ಪಾಠದಿಂದ ರಾಮಾನುಜಾಚಾರ್ಯರ ಗುಣ ವಿಶೇಷತೆಯನ್ನು ಕೊಂಡಾಡಲಾಗಿದೆ ,

2 , ಬುಕ್ಕರಾಯನು ನಡೆಸಿದ ಧರ್ಮಸಭೆಗೆ ಯಾರನ್ನೆಲ್ಲ ಆಹ್ವಾನಿಸಿದನು ?

ಉತ್ತರ : ಬುಕ್ಕರಾಯನು ನಡೆಸಿದ ಧರ್ಮಸಭೆಗೆ ಕೋವಿಲ್ ತಿರುಮಲೆ , ಪೆರುಮಾಳ್ ಕೋವಿಲ್ ತಿರುನಾರಾಯಣಪುರ , ಮುಖ್ಯರಾದ ಎಲ್ಲಾ ಆಚಾರ್ಯ , ಸಾತ್ವಿಕರೂ , ಒಂದು ನಿರ್ದಿಷ್ಟ ಸಿದ್ದಾಂತವನ್ನು ಅನುಸರಿಸುವ ಎಲ್ಲಾ ಸಮಯಿಗಳು .

ಅಕ್ಕಸಾಲಿಗರು , ಜಲಗಾರರು ಮುಖ್ಯವಾದ ನಲವತ್ತೆಂಟು ಕುಲದವರು . ಮಲನಾಡು ಪ್ರದೇಶದಲ್ಲಿ ವಾಸಿಸುವ ವಿಶೇಷವಾದ ಜನರೂ ಸಾಮಂತರೂ , ಅಲೆಮಾರಿಗಳೂ ಜಾಂಬವಕುಲದವರು , ಒಳಗೊಂಡ ಹದಿನೆಂಟು ನಾಡಿನವರನ್ನು ಕರೆಸಿದನು .

3 , ಜೈನಧರ್ಮದ ರಕ್ಷಣೆಗಾಗಿ ಬುಕ್ಕರಾಯನು ಕೈಗೊಂಡ ಕ್ರಮಗಳಾವುವು ?

ಉತ್ತರ : ವೀರ ಬುಕ್ಕರಾಯನ ಆಳ್ವಿಕೆ ಕಾಲದಲ್ಲಿ ಶ್ರೀವೈಷ್ಣವರಿಗೂ ಜೈನರಿಗೂ ಧರ್ಮ ಸಂಘರ್ಷ ಉಂಟಾಗುತ್ತಿತ್ತು . ಈ ಧರ್ಮ ಸಂಘರ್ಷ ಹೋಗಲಾಡಿಸಿ , ಧರ್ಮಸಮದೃಷ್ಟಿ ತರಲು ಒಂದು ಧರ್ಮ ಸಭೆಯನ್ನು ಮಾಡುತ್ತಾನೆ .

      ಧರ್ಮೀಯರ ಸಮ್ಮತಿಯಿಂದ ಶ್ರವಣ ಬೆಳಗೊಳದ ತೀರ್ಥದಲ್ಲಿ ವೈಷ್ಣವರ ಅಂಗರಕ್ಷೆಗಾಗಿ ಸಮಸ್ತ ರಾಜ್ಯದೊಳಗೆ ಇರುವಂತಹ ಜೈನರು ಬಾಗಿಲುಗಳನ್ನು ನಿಯಮವೆಂಬಂತೆ ಮನೆಮನೆಗೆ ವರ್ಷಕ್ಕೆ ಒಂದು ಬಾರಿ ಹಣ ಕೊಟ್ಟು ಸಂರಕ್ಷಿಸಬೇಕು .

ಆ ರೀತಿ ಸಂಗ್ರಹಿಸಿದ ಹೊನ್ನಿನಲ್ಲಿ ದೇವರ ಅಂಗರಕ್ಷಿಗೆ ಇಪ್ಪತ್ತು ಆಳುಗಳನ್ನು ನೇಮಿಸಿ , ಮಿಕ್ಕಹೊನ್ನನ್ನು ಜಿನಾಲಯಗಳಿಗೆ ಸುಣ್ಣ ಬಣ್ಣ ಬಳಿಸುವುದು .

ಸೂರ್ಯ ಚಂದ್ರರು ಇರುವವರೆಗೆ ಈ ಗೌರವವನ್ನು ನೀಡಬೇಕು ಪ್ರತಿವರ್ಷವೂ ಈ ಕ್ರಮವನ್ನು ಮುಂದುವರೆಸಿಕೊಂಡು ಬರಬೇಕು ಆ ಮೂಲಕ ಕೀರ್ತಿ ಮತ್ತು ಪುಣ್ಯವನ್ನು ಸಂಪಾದಿಸಿಕೊಳ್ಳಬೇಕು

ಎಂದು ಶಾಸನ ಬರೆಸುವುದರ ಮೂಲಕ ಜೈನ ಧರ್ಮದ ಸುಧಾರಣೆಗಾಗಿ ಬುಕ್ಕರಾಯನು

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ

 

1)  ಬುಕ್ಕರಾಯನು ತನ್ನ ಆಶ್ಚಯಲ್ಲಿ ಧರ್ಮಸಮದೃಷ್ಟಿಯನ್ನು ಹೇಗೆ ಆಚರಣೆಗೆ ತಂದೆನು

ಉತ್ತರ : ಶ್ರೀವೀರ ಬುಕ್ಕರಾಯನ ಆಳ್ವಿಕೆ ಕಾಲದಲ್ಲಿ ಜೈನರಿಗೂ ಶ್ರೀವೈಷ್ಣವರಿಗೂ ಧರ್ಮ ಕಲಹವುಂಟಾದಾಗ ಇದನ್ನು ಸರಿ ಪಡಿಸಲು ಧರ್ಮಸಭೆಯನ್ನು ಮಾಡುತ್ತಾನೆ .

ಕೋವಿಲ್ , ತಿರುಮಲೆ , ಪೆರುಮಾಳ್ ಕೋವಿಲ್ , ತಿರುನಾರಾಯಣಪುರ , ಮುಖ್ಯಕ್ಷೇತ್ರಗಳ ಸಕಲಾಚಾರ್ಯರು , ಸಕಲ ಧರ್ಮಾನುಯಾಯಿಗಳು , ಸಾತ್ವಕರು , ತಿರುಪಣಿ , ತಿರುವಿಡಿ , ಮುಂತಾದ ನಲವತ್ತೆಂಟು ಕುಲದವರು ಮುಂತಾದವರನ್ನು ಒಳಗೊಂಡ ಹದಿನೆಂಟು ನಾಡಿನವರನ್ನು ಬುಕ್ಕರಾಯನು ಈ ಧರ್ಮಸಭೆಗೆ ಕರೆಸಿ ಸಭೆ ಮಾಡುತ್ತಾನೆ .

            ಜೈನರ ಕೈಯಲ್ಲಿ ವೈಷ್ಣವರ ಕೈಯನ್ನಿಡಿಸಿ ಜೈನದರ್ಶನಕ್ಕೂ ವೈಷ್ಣವ ದರ್ಶನಕ್ಕೂ ಭೇದವಿಲ್ಲವೆಂದೂ ಹೇಳಿಸಿದನು . ಮತ್ತು ಜೈನಧರ್ಮಕ್ಕೆ ಈ ಹಿಂದೆ ಇದ್ದಂತೆ ಪಂಚಮಹಾವಾದ್ಯಗಳು ಕಲಶವೂ , ಸಲ್ಲಬೇಕೆಂದೂ ಶ್ರೀ ವೈಷ್ಣವರು ಜೈನರಿಗೆ ಹಾನಿಯೆಂದು ಭಾವಿಸಬೇಕು .

ಸಮಸ್ತ ರಾಜ್ಯದೊಳಗೆ ಇರುವಂತಹ ಜೈನರು ಬಾಗಿಲುಗಳನ್ನು ನಿಯಮವೆಂಬಂತೆ ಮನೆಮನೆಗೆ ವರ್ಷಕ್ಕೆ ಒಂದು ಬಾರಿ ಹಣ ಕೊಟ್ಟು ಸಂರಕಿಸಬೇಕು . ಈ ರೀತಿ ಸಂಗ್ರಹಿಸಿದ ರಾಜ್ಯದ 1 ಹಾನಿಯುಂಟು ಮಾಡಿದರೆ ವೆ ಹವರ

ಆ ದಿಕೆಗೆ 1 ಹೊನ್ನಿನಲ್ಲಿ ದೇವರ ಅಂಗರಕ್ಷೆಗೆ ಇಪ್ಪತ್ತು ಆಳುಗಳನ್ನು ನೇಮಿಸಿ , ಮಿಕ್ಕಹೊನ್ನನ್ನು ಜಿನಾಲಯಗಳಿಗೆ ಸುಣ್ಣ ಬಣ್ಣ ಬಳಿಸುವುದು , ಸೂರ್ಯ ಚಂದ್ರರು ಇರುವವರೆಗೆ ಈ ಗೌರವವನ್ನು ನೀಡಬೇಕು .

                ಪ್ರತಿವರ್ಷವೂ ಈ ಕ್ರಮವನ್ನು ಮುಂದುವರೆಸಿಕೊಂಡು ಬರಬೇಕು . ಮೂಲಕ ಕೀರ್ತಿ ಮತ್ತು ಪುಣ್ಯವನ್ನು ಸಂಪಾದಿಸಿಕೊಳ್ಳಬೇಕು . ಹೀಗೆ ಬುಕ್ಕರಾಯನು ತನ್ನ ಆಳ್ವಿಕೆಯಲ್ಲಿ ಧರ್ಮಸಮದೃಷ್ಟಿಯನ್ನು ಆಚರಣೆಗೆ ತಂದನು .

ಧರ್ಮ ಸಮದೃಷ್ಟಿ

ಈ ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ ,

 

1)’ ಪಾಷಂಡ ಸಾಗರ ಮಹಾಬಡವಮುಖಾಗ್ನಿ “

  ಆಯ್ಕೆ : ಈ ವಾಕ್ಯವನ್ನು ಬಿ , ಎಂ , ಶ್ರೀ ಅವರು ಸಂಪಾದಿಸಿದ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಧರ್ಮಸಮದೃಷ್ಟಿ ‘ ಎಂಬ ಗದ್ಯಭಾಗದಿಂದ ಆಯ್ದು ಕೊಳ್ಳಲಾಗಿದೆ .

ಸಂದರ್ಭ : ಈ ಮಾತನ್ನು ರಾಮಾನುಜಾಚಾರ್ಯರಗುಣಿ – ವಿಶೇಷತೆಯನ್ನು ಕೊಂಡಾಡುತ್ತಾ ಶ್ಲೋಕದಲ್ಲಿ ಹೇಳಲಾಗಿದೆ . ವೀರಬುಕ್ಕರಾಯನ ಕಾಲದ ‘ ಧರ್ಮಸಮದೃಷ್ಟಿ ‘ ಶಾಸನದ ಪ್ರಾರಂಭದಲ್ಲಿ ಶ್ರೀ ರಾಮಾನುಜಾಚಾರ್ಯರನ್ನು ಸ್ಮರಿಸುವ ಸಂದರ್ಭದಲ್ಲಿ ಶಾಸನಕಾರನು ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ: ಸಂಪ್ರದಾಯದ ವಿರೋಧಿಗಳಿಗೆ ಸಮುದ್ರದೊಳಗೆ ಕುದುರೆಯ ಮುಖದಿಂದ ಹೊರಟ ಬೆಂಕಿಯಂತವರು , ನಾಸ್ತಿಕ ನಡುವೆ ಶ್ರೀ ರಾಮಾನುಜಾಚಾರ್ಯರು ಆಸ್ತಿಕರಾಗಿ ಶೋಭಿಸುತ್ತಿದ್ದರು ಎಂಬುದನ್ನು ಈ ಮಾತಿನ ಮೂಲಕ ಸ್ವಾರಸ್ಯವಾಗಿ ಮೂಡಿ ಬಂದಿದೆ .

2) , “ ಎಲ್ಲಾ ರಾಜ್ಯದೊಳಗುಳ್ಳಂತಹ ಬಸ್ತಿಗಳಿಗೆ ಶ್ರೀವೈಷ್ಣವರು ಶಾಸನವ ನಟ್ಟು ಪಾಲಿಸುವರು .

ಆಯ್ಕೆ : ಈ ವಾಕ್ಯವನ್ನು ಬಿ . ಎಂ . ಶ್ರೀ ಅವರು ಸಂಪಾದಿಸಿದ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ಧರ್ಮಸಮದೃಷ್ಟಿ ‘ ಎಂಬ ಗದ್ಯಭಾಗದಿಂದ ಆಯ್ದು ಕೊಳ್ಳಲಾಗಿದೆ .

ಸಂದರ್ಭ : ಶ್ರೀವೀರ ಬುಕ್ಕರಾಯನ ಆಳ್ವಿಕೆ ಕಾಲದಲ್ಲಿ ಜೈನರಿಗೂ ಶ್ರೀವೈಷ್ಣವರಿಗೂ ಧರ್ಮ ಕಲಹವುಂಟಾದಾಗ ಇದನ್ನು ಸರಿ ಪಡಿಸಲು ಧರ್ಮಸಭೆಯನ್ನು ಮಾಡುತ್ತಾನೆ .

ಈ ಸಭೆಯಲ್ಲಿ ಶ್ರೀ ವೈಷ್ಣವರು ಕೈಯಲ್ಲಿ ಜೈನರ ಕೈಯನ್ನು ಇಟ್ಟು ಸಾಮರಸ್ಯದಿಂದ ಬಾಳಬೇಕು ಎಂದು ಹೇಳುತ್ತಾನೆ . ಈ ನನ್ನ ಮಾತನ್ನು ಒಂದು ಶಾಸನದ ರೀತಿ ಪಾಲಿಸಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಶ್ರೀ ವೈಷ್ಣವರು ಜೈನರ ಬಸದಿಗಳನ್ನು ರಕ್ಷಣೆ ಮಾಡಬೇಕು . ಗೌರವಿಸಬೇಕು ಎಂದು ಶಾಸನ ಬರೆಸುವುದರ ಮೂಲಕ ಧರ್ಮಸಮದೃಷ್ಟಿಯ ಸಾಮರಸ್ಯವನ್ನು ಮೂಡಿಸಿರುವುದು ಸ್ವಾರಸ್ಯಕರವಾಗಿದೆ .

3), “ ಮಿಕ್ಕ ಹೊನ್ನಿಂಗೆ ಜೀರ್ಣಜಿನಾಲಯಂಗಳಿಗೆ ಸೊದೆಯನಿಕ್ಕುವುದು . ”

ಆಯ್ಕೆ : ಈ ವಾಕ್ಯವನ್ನು ಬಿ . ಎಂ . ಶ್ರೀ ಅವರು ಸಂಪಾದಿಸಿದ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಧರ್ಮಸಮದೃಷ್ಟಿ ‘ ಎಂಬ ಗದ್ಯಭಾಗದಿಂದ ಆಯ್ದು ಕೊಳ್ಳಲಾಗಿದೆ .

ಸಂದರ್ಭ : 1 ಮಾತನ್ನು ವೀರಬುಕ್ಕರಾಯನು ಹೇಳಿದ್ದಾನೆ . ವೈಷ್ಣವರು ಮತ್ತು ಜೈನರ ನಡುವೆ ಭೇದವಾಗಿ ನೋಡಬಾರದು . ಜೈನರ ಹಾನಿಯನ್ನು ಶ್ರೀ ವೈಷ್ಣವರ ಹಾನಿಯೆಂದೆ ಭಾವಿಸಬೇಕು , ಜೈನರ ಬಸದಿಗಳನ್ನು ಕಾಯಲು ಅಂಗರಕ್ಷಕರನ್ನು ನೇಮಿಸಬೇಕು .

ಇವರಿಗೆ ಮನೆಮನೆಯಿಂದ ಹಣ ಸಂಗ್ರಹಿಸಿ ಕೊಡಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ ,

ಸ್ವಾರಸ್ಯ : ಬುಕ್ಕರಾಯನು ಜೈನರ ಬಸದಿಗಳಿಗೆ ಶ್ರೀ ವೈಷ್ಣವರ ಹೊನ್ನಿಯಿಂದ ಸುಣ್ಣ ಬಣ್ಣ ಮಾಡಿಸಬೇಕು ಎಂದು ಹೇಳಿರುವ ಮಾತಿನಲ್ಲಿ ಧರ್ಮ ಸಾಮರಸ್ಯವು ಸ್ವಾರಸ್ಯಕರವಾಗಿದೆ .

4)“ ಈ ಮಾಡಿದ ಕಟ್ಟಳೆಯನು ಆವನೊಬ್ಬನು ಮಾಡಿದವನು ರಾಜದ್ರೋಹಿಯಪ್ಪನು . ”

ಆಯ್ಕೆ : ಈ ವಾಕ್ಯವನ್ನು ಬಿ . ಎಂ . ಶ್ರೀ ಅವರು ಸಂಪಾದಿಸಿದ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಧರ್ಮಸಮದೃಷ್ಟಿ ‘ ಎಂಬ ಗದ್ಯಭಾಗದಿಂದ ಆಯ್ದು ಕೊಳ್ಳಲಾಗಿದೆ .

ಸಂದರ್ಭ: ಬುಕ್ಕರಾಯನ ಆಳ್ವಿಕೆ ಕಾಲದಲ್ಲಿ ಶ್ರೀವೈಷ್ಣವರಿಗೂ ಜೈನರಿಗೂ ಧರ್ಮ ಸಂಘರ್ಷ ಉಂಟಾಗುತ್ತದೆ , ಈ ವಿಷಯವು ಜೈನರಿಂದ ಬುಕ್ಕರಾಯನಿಗೆ ತಿಳಿಯುತ್ತದೆ .

ಎರಡು ಧರ್ಮದವರನ್ನು ಧರ್ಮ ಸಭೆಗೆ ಕರೆಸಿ ಇನ್ನೂ ಮುಂದೆ ಧರ್ಮ ಸಾಮರಸ್ಯದಿಂದ ಇರಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ರಾಜನಾದ ಬುಕ್ಕರಾಯನು ಮಾಡಿದ ಶಾಸನವನ್ನು ಯಾರು ಮೀರುವಂತಿಲ್ಲ , ಒಂದು ಪಕ್ಷ ಮೀರಿದರೆ ಅವರು ರಾಜದ್ರೋಹಿ ಆಗುವರು ಎಂಬ ಅಂಶ ಸ್ವಾರಸ್ಯಕರವಾಗಿದೆ .

 

ಉ ) ಬಿಟ್ಟಿರುವ ಸ್ಥಳಗಳಲ್ಲಿ ಸೂಕ್ತ ಪದಗಳನ್ನು ತುಂಬಿರಿ.

 

1, ರಾಮಾನುಜೊ………………. ಯತಿರಾಜರಾಜಃ  ,

2. ಜೈನದರ್ಶನಕ್ಕೆ ಪೂರ್ವಮರ್ಯಾದೆಯಲು…………………ಕಳಶವೂ ಸಲುವುದು

3 ,ವೈಷ್ಣವರೂ ಜೈನರೂ ಒಂದು……………….ಕಾಣಲಾಗದು

 

ಸರಿಯುತ್ತರಗಳು

1 , ವಿಜಯತೇ

2 , ಪಂಚ ಮಹಾವಾದ್ಯಂಗಳು

3 , ಭೇದವಾಗಿ

 

ಭಾಷಾ ಚಟುವಟಿಕೆ

 

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ,

 

1 , ವೃದ್ದಿಸಂಧಿ ಎಂದರೇನು ? ನಿದರ್ಶನಸಹಿತ ಬರೆಯಿರಿ

,    ಉತ್ತರ : ಅ.ಆ.ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವು ಓ ಔ ಕಾರಗಳು ಪರವಾದಾಗ ಔ ಕಾರವೂ ಆದೇಶವಾಗಿ ಬರುವುದಕ್ಕೆ ವೃದ್ಧಿಸಂಧಿ ಎನ್ನುವರು ..

         ಆ ಸ್ವರ ಮುಂದೆ ಏ ಸ್ವರವು ಬಂದಾಗ

ಏಕ  + ಏಕ                      =                      ಏಕೈಕ

ಗುಣ + ಏಕ                      =                      ಗುಣೈಕ

ಲೋಕ+ಏಕ                      =                     ಲೋಕೈಕ

 

 

   ಆ ಸ್ವರದ ಮುಂದೆ ಓ ಸ್ವರ ಬಂದಾಗ

          ವನ + ಓಷಧ                  = ಮನೌಷಧ ,

ಜಲ + ಓಘ                     = ಜಲೌಘ

ತಿಲ + ಓಘ                     =ತಿಲೌಘ

ಜನ + ಐಕ್ಯ                     =ಜನೈಕ್ಯ

 

ಆ ಸ್ವರದ ಮುಂದೆ ಐ ಕಾರ ಬಂದಾಗ

ಘನ  + ಔಷಧಿ                    =ಘನೌಷಧಿ

ವಿದ್ಯ + ಐಶ್ವರ್ಯ               =ವಿದ್ಯೈಶ್ವರ್ಯ

ಮಹ + ಔನ್ನತ್ಯ                  =ಮಹೌನ್ನತ್ಯ

2. ಯಣ್ ಸಂಧಿ ಎಂದರೇನು ? ನಿದರ್ಶನಸಹಿತ ಬರೆಯಿರಿ .

ಉತ್ತರ : ಇ , ಈ ಕಾರಗಳಿಗೆ ಯ ಕಾರವು ಉ ಊ ಕಾರಗಳಿಗೆ ವ್’ಕಾರವು , ಋ ಕಾರಕ್ಕೆ ರ್ ಕಾರವು ಆದೇಶವಾಗಿ ಬರುವುದದಕ್ಕೆ ಯಣ್ ಸಂಧಿ ಎನ್ನುವರು .

ಪ್ರತಿ + ಉದಕ+

ಅತಿ + ಅಂತ್ಯ                = ಅತ್ಯಂತ .

ಅತಿ + ಅವಸರ              = ಅತ್ಯವಸರ .

ಜಾತಿ + ಅತೀತ              = ಜಾತ್ಯತೀತ ,

ಕೋಟಿ + ಅಧೀಶ           = ಕೋಟ್ಯಾಧೀಶ .

ಪ್ರತಿ + ಉತ್ತರ                = ಪ್ರತ್ಯುತ್ತರ .

ಪಿತೃ + ಅರ್ಜಿತ              = ಪಿತ್ರಾರ್ಜಿತ .

ಪಿತೃ + ಅಂಶ                 = ಪಿತ್ರಂಶ

ಅಣು + ಅಸ್ತ್ರ                 = ಅಣ್ವಸ್ತ್ರ

ಮನು + ಅಂತರ             = ಮನ್ವಂತರ  

ಪ್ರತಿ + ಉದಕ                  = ಪ್ರತ್ಯುದಕ

 

2 ) ಕೊಟ್ಟಿರುವ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ ,

 ಚರಣಾಂಬುಜ , ಮಂಡಳೇಶ್ವರ , ಸಕಳಾಚಾರ , ಭೇದವಿಲ್ಲ . ಕೈವಿಡಿದು , ವೃದ್ದಿಯಾಗಿ , ಭೇದವಾಗಿ , ಕಾಣಲಾಗದು . ಜಿನಾಲಯ , ತಪ್ಪಲೀಯದೆ , ಚಂದ್ರಾರ್ಕ ಚರಣಾಂಬುಜ

 

ಚರಣಾಂಬುಜ = ಚರಣ + ಅಂಬುಜ= ಸವರ್ಣದೀರ್ಘ ಸಂಧಿ
ಮಂಡಳೇಶ್ವರ = ಮಂಡಳ + ಈಶ್ವರ     = ಗುಣಸಂಧಿ
ಸರಳಾಚಾರ್ಯ =ಸರಳ+ ಆಚಾರ್ಯ= ಸವರ್ಣದೀರ್ಘ ಸಂಧಿ
ಭೇದವಿಲ್ಲ =ಭೇದ + ಇಲ್ಲ         = ವಕಾರಾಗಮ ಸಂಧಿ
ಕೈವಿಡಿದ =ಕೈ+ ಪಿಡಿದು= ವಕಾರಾಗಮ ಸಂಧಿ
ವೃದ್ಧಿಯಾಗಿ =ವೃದ್ದ + ಆಗಿ= ಯಕಾರಾಗಮ ಸಂಧಿ
ಭೇದವಾಗಿ =ಭೇದ + ಆಗ= ವಕಾರಾಗಮ ಸಂಧಿ
ಕಾಣಲಾಗದು =ಕಾಣಲು+ ಆಗದು= ಲೋಪಸಂಧಿ
ಜಿನಾಲಯ =ಜಿನ + ಆಲಯ= ಸವರ್ಣದೀರ್ಘ ಸಂಧಿ
ತಪ್ಪಲೀಯದೆ =ತಪ್ಪಲು + ಈಯದೆ= ಲೋಪಸಂಧಿ
ಚಂದ್ರಾರ್ಕ =ಚಂದ್ರ + ಅರ್ಕ= ಸವರ್ಣದೀರ್ಘ ಸಂಧಿ

 

 

3) ಕೊಟ್ಟಿರುವ ಪದಗಳ ತತ್ಸಮ ತದ್ಭವ ಬರೆಯಿರಿ .

ಶ್ರೀ              –      ಸಿರಿ

ವರ್ಷ          –     ವರುಷ

ರಾಯ         –      ರಾಜ

ಭಕ್ತ             –      ಬಕುತ

ಬಿನ್ನಹ        –     ವಿಜ್ಞಾಪನೆ

ಚಂದ್ರ         –     ಚಂದಿರ

ದೆಸೆ             –      ದಿಶಾ

ಸೋದೆ        –       ಸುಧೆ

ಕಳಶ           –       ಕಲಸ

 

4 ) ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿರಿ ,

ಸಂವಾದ :ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದ ನಡೆಯಿತು ,

ಸಮಸ್ತ ; ಭಾರತದಲ್ಲಿರುವ ಸಮಸ್ತ ಪ್ರಜೆಗಳು ಭಾರತಾಂಬೆಯ ಮಕ್ಕಳು ,

ಭೇದವಿಲ್ಲ : ಮನುಷ್ಯ ಮನುಷ್ಯನ ನಡುವೆ ಯಾವುದೇ ಭೇದವಿಲ್ಲ .

ಕೈಹಿಡಿ  : ನಾನು ಕಷ್ಟದಲ್ಲಿರುವ ನನ್ನ ಸ್ನೇಹಿತನನ್ನು ಕೈಹಿಡಿದೆ .

 

2 ) ಕೊಟ್ಟಿರುವ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ .

ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?

ಗಾದೆಗಳು ವೇದಗಳಿಗೆ ಸಮ . ವೇದ ಸುಳ್ಳಾದರೂ ಗಾದೆ ಸುಳ್ಳಾಗದು . ಇವು ನಮ್ಮ ಹಿರಿಯರ ಅನುಭವದ ಮಾತುಗಳಾಗಿವೆ . ಗಾದೆಗಳು ಆಕರದಲ್ಲಿ ವಾಮನನಾದರೆ ಅರ್ಥದಲ್ಲಿ ತ್ರಿವಿಕ್ರಮನಂತೆ .

ಸಾವಿರ ಸಾಲುಗಳಲ್ಲಿ ಹೇಳು ವಿಷಯವನ್ನು ಒಂದೇ ಒಂದು ಗಾದೆ ಮಾತು ಹೇಳುತ್ತದೆ . ಅಂತಹ ಗಾದೆ ಮಾತುಗಳಲ್ಲಿ ಈ ಗಾದೆ ಮಾತು ಸಹ ಒಂದು.

ನಾವು ಒಂದು ಕೆಲಸವನ್ನು ಮಾಡುವುದಕ್ಕಿಂತ ಮೊದಲು ಈ ಕಾರ್ಯದ ಬಗ್ಗೆ ಚಿಂತಿಸುವುದು ಅತಿ ಮುಖ್ಯ ಅದರ ಬದಲಾಗಿ ಕೆಲಸ ಮುಗಿದ ಮೇಲೆ ಚಿಂತನೆ ಮಾಡಿ ಪ್ರಯೋಜನವಿಲ್ಲ ಎಂಬುದೇ ಈ ಗಾದೆಯ ಒಳಾರ್ಥವಾಗಿದೆ .

ಸ್ಪಷ್ಟ ಆಲೋಚನೆ ಮಾಡದೆ ಕಾರ್ಯಕ್ಕಿಳಿದರೆ ವ್ಯತ್ಯಾಸವಾಗಿ ಕಾರ್ಯ ಕೈಗೊಡದೆ ಹೋಗಬಹುದು . ಆಗಿ ಹೋದ ಕಾರ್ಯಕ್ಕೆ ಫಲವಿಲ್ಲ . ಚಿಂತಿಸುತ್ತಾ ಕುಳಿತರೆ ಕಾಲ ವ್ಯರ್ಥವಾಗುತತದೆ .

ಹೀಗೆ ಮಾಡಿದ್ದರೆ ಚೆನ್ನಾಗಿತ್ತು ಎಂದು ಕಳೆದುಹೋದ ಘಟನೆ ಕುರಿತು ಆಲೋಚಿಸುವ ಬದಲು ಮುಂದೆ ಅನುಭವದ ಉಪಯೋಗ ಪಡೆಯುವಂತಾಗಬೇಕು . ಕೇವಲ ಕೊರಗುವುದರಿಂದ ಕಾರ್ಯ ಆಗುವುದಿಲ್ಲ . ಜೀವನದಲ್ಲಿ ಒಮ್ಮೆ ಕಲಿತ ಪಾಠದಿಂದ ಮತ್ತೆ ತಪ್ಪು ಮಾಡಬಾರದು , .

ಉದಾಹರಣೆಗೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಚನ್ನಾಗಿ ಮಾಡದೆ ಅದರಲ್ಲಿ ವಿಫಲರಾದ ಮೇಲೆ ಯೋಚನೆ ಮಾಡಿದರೆ ಏನು ಪ್ರಯೋಜನ ಹೇಳಿ ,

-ಪರೀಕ್ಷೆಯ ಮೊದಲೇ ಯೋಚನೆ ಮಾಡಿ ಚನ್ನಾಗಿ ವಿದ್ಯಾಭ್ಯಾಸ ಮಾಡಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಬೇಕು ಆಗ ಜಯ ಸಿಗುತ್ತದೆ , ನಂತರ ಚಿಂತಿಸುವ ಪ್ರಮೇಯವೇ ಇರುವುದಿಲ್ಲ .

-ಚಿಂತಿಸಿದರು ಫಲ ಇಲ್ಲ ಎಂಬುದೇ ಇದರ ಅರ್ಥ , ಇರುಳು ಕಂಡ ಬಾವಿಗೆ ಹಗಲು ಬಿದ್ದಡೆ ಗಾದೆಗಳು ವೇದಗಳಿಗೆ ಸಮ , ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ .

-ಇವು ನಮ್ಮ ಜನಪದರ ಅನುಭವದ ನುಡಿಗಳು . ಗಾದೆಗಳು ನಮ್ಮ ಬಾಳಿನ ಮಾರ್ಗದರ್ಶನ ನೀಡಿ ಬಾಳನ್ನು ಹಸನುಗೊಳಿಸುತ್ತವೆ . ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಈ ಮೇಲಿನ ಗಾದೆ ಮಾತು ಸಹ ಒಂದು .

-ಸಾವಿರ ಪದಗಳಲ್ಲಿ ಹೇಳುವ ವಿಷಯವನ್ನು ಕೇವಲ ಒಂದು ಗಾದೆ ಮಾತು ಅಥೈಸುತ್ತದೆ . ಈ ಗಾದೆಯ ಮಾತಿನ ಅರ್ಥ ಸತ್ಯ ಗೊತ್ತಿದ್ದರೂ ಮೋಸ ಹೋಗಿವುದು . ಒಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದನು .

-ಅವನು ವ್ಯಾಪಾರ ಮಾಡುವಾಗ ತೂಕದಲ್ಲಿ ಜನರಿಗೆ ಮೋಸ ಮಾಡುತ್ತಿದ್ದನು . ಈ ವಿಷಯ ಇಡೀ ಊರಿಗೆ ಗೊತ್ತಾಗಿ ಮೋಸದ ವ್ಯಾಪರಸ್ಥ ಎಂದು ಕರೆಯುತ್ತಿದ್ದರು .

-ಈ ವ್ಯಾಪಾರಿ ಒಂದು ದಿನ ಸೋಮಣ್ಣನ ಹೊಲಕ್ಕೆ ಹೋಗಿ , ಸೋಮಣ್ಣ ಬೆಳೆದ ಟೊಮೊಟೊ ಹಣ್ಣುಗಳನ್ನು ವ್ಯಾಪಾರ ಮಾಡುತ್ತಾನೆ .

-ಆದರೆ ಸೋಮಣ್ಣನಿಗೆ ಹಣ ಕೊಡದೆ ನಾಳೆ ಕೊಡುತ್ತೇನೆ ಎಂದು ಸೋಮಣ್ಣನ ಹೊಲದಲ್ಲಿ ಬೆಳೆದ ಎಲ್ಲಾ ಟೊಮೊಟೋಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಬರುತ್ತಾನೆ .

-ಒಂದು ವಾರ ಕಳೆದರು ಈ ವ್ಯಾಪಾರಿ ಸೋಮಣ್ಣ ರೈತನಿಗೆ ಹಣ ಕೊಡುವುದಿಲ್ಲ . ಎಷ್ಟು ಬಾರಿ ಕೇಳಿದರು ನಾಳೆ ಕೊಡುತ್ತೇನೆ ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದನು . ಈ ವಿಷಯ ಊರಿನವರಿಗೆಲ್ಲ ಗೊತ್ತಾಗಿ ಹೋಯಿತು .

-ಈ ಊರಿನ ಜನರು ಸಹ ಎಷ್ಟು ಪ್ರಯತ್ನ ಪಟ್ಟರು ಮೋಸದ ವ್ಯಾಪಾರಿಯಿಂದ ಸೋಮಣ್ಣನಿಗೆ ಹಣ ಕೊಡಿಸಲು ಸಾಧ್ಯವಾಗಲೇ ಇಲ್ಲ .

-ಆದ್ದರಿಂದಲೇ ಹೇಳುವುದು ಇರುಳು ಕಂಡ ಬಾವಿಗೆ ಹಗಲೇ ಬಿದ್ದಂತೆ ಎಂದು ಈ ವ್ಯಾಪಾರಿ ಮಾಡುವ ಮೋಸ ಇಡೀ ಊರಿಗೆ ಗೊತ್ತಿದ್ದರು ಅವನ್ನು ನಂಬಿ ಸೋಮಣ್ಣ ರೈತನು ತನ್ನ ಹೊಲದಲ್ಲಿ ಬೆಳೆದ ಟೊಮೊಟೋಗಳನ್ನು ಅವನಿಗೆ ಹಣ ಪಡೆಯದೇ ಕೊಟ್ಟಿದ್ದು .

-ನಾವು ಜೀವನದಲ್ಲಿ ಒಮ್ಮೆ ವ್ಯಕ್ತಿ ಎಂತಹವನ್ನು ಎಂದು ತಿಳಿದುಕೊಂಡ ಮೇಲೆ ಪದೆಪದೇ ಆ ವ್ಯಕ್ತಿಯಿಂದ ಮೋಸ ಹೋಗಬಾರದು . ಎಲ್ಲಾ ವಿಷಯ ಗೊತ್ತಿದ್ದು ಮೋಸ ಹೋಗಬಾರದು ಎಂದು ಈ ಗಾದೆಯ ಅರ್ಥವಾಗಿದೆ.

Dharma Samadrusti ಧರ್ಮ ಸಮದೃಷ್ಟಿ 9th Kannada 3rd chapter

Dharma Samadrusti Kannada Notes Pdf in Kannada question answer

ಇತರ ವಿಷಯಗಳು

Books Pdf Download Notes App ಹಿಂದಕ್ಕೆ

1 thoughts on “9th Dharma Samadrusti Kannada Notes ಧರ್ಮಸಮದೃಷ್ಟಿ ಪ್ರಶ್ನೋತ್ತರಗಳು

Leave a Reply

Your email address will not be published. Required fields are marked *