9ನೇ ತರಗತಿ ಹೊಳೆಬಾಗಿಲು ಪಠ್ಯ ಪೂರಕ ಅಧ್ಯಯನ ಕನ್ನಡ ನೋಟ್ಸ್ | 9th Standard Holebagilu Kannada Notes 2023

9ನೇ ತರಗತಿ ಕನ್ನಡ ಹೊಳೆಬಾಗಿಲು ಪಾಠದ ಪ್ರಶ್ನೋತ್ತರ, 9th Standard Holebagilu Kannada Notes Question Answer Mcq Pdf Download in Kannada Medium 2023 Kseeb Solutions For Class 9 Kannada Puraka Pata 1 Notes Karnataka State Syllabus 9th Kannada Puraka Pata Notes Pdf 9th Class Holebagilu Kannada Lesson Notes

ತರಗತಿ : 9ನೇ ತರಗತಿ

ಪದ್ಯದ ಹೆಸರು : ಹೊಳೆಬಾಗಿಲು

ಕೃತಿಕಾರರ ಹೆಸರು : ಸುಶ್ರುತ ದೊಡ್ಡೇರಿ

9th Standard Holebagilu Kannada Notes 2022

9th Class Holebagilu kannada notes 2023

ಕೃತಿಕಾರರ ಪರಿಚಯ

ಕವಿ , ಪ್ರಬಂಧಕಾರ ಸುಶ್ರುತ ದೊಡ್ಡೇರಿ , ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವರು , ಈಗ ಬೆಂಗಳೂರು ವಾಸಿ ‘ ಪ್ರಣತಿ ‘ ಸಂಸ್ಥೆಯ ಜತೆ ಸಾಹಿತ್ಯ – ಸಂಸ್ಕೃತಿ – ಪ್ರಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು . ‘ ಚಿತ್ರಚಾಪ ‘ ( ಗೆಳೆಯರ ಜತೆ ) , ‘ ಹೊಳೆಬಾಗಿಲು ‘ ( ಲಲಿತ ಪ್ರಬಂಧಗಳು ) , ‘ ಬ್ಲಾಗಿಸು ಕನ್ನಡ ಡಿಂಡಿಮವ ‘ ( ಸಹ – ಸಂಪಾದಿತ ) ಇವರ ಪ್ರಕಟಿತ ಕೃತಿಗಳು . ‘ ಮೌನಗಾಳ ‘ ಎಂಬ ಬ್ಲಾಗಿನಲ್ಲಿ ಹಲವು ವರ್ಷಗಳಿಂದ ಬರೆಯುತ್ತಿದ್ದಾರೆ .

9ನೇ ತರಗತಿ ಹೊಳೆಬಾಗಿಲು ಪಠ್ಯ ಪೂರಕ ಅಧ್ಯಯನ ನೋಟ್ಸ್

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

1. ಲಾಂಚು ಬರುವವರೆಗೆ ಹೊತ್ತು ಕಳೆಯಲು ಏನೆಲ್ಲ ಚಟುವಟಿಕೆಯನ್ನು ಮಾಡಬಹುದು?

ಲಾಂಚು ಬರುವವರೆಗೆ ಹೊತ್ತು ಕಳೆಯಲು ದಂಡೆಗುಂಟ ಅಡ್ಡಾಡ್ಡುತ್ತಾ ಕಪ್ಪೆ ಚಿಪ್ಪು ನುಣ್ಣನೆ ಉರುಟು ಕಲ್ಲುಗಳನ್ನು ಹೆಕ್ಕಬಹುದು. ಹೆಕ್ಕಿದ ಕಲ್ಲನ್ನು ಹೊಳೆಗೆ ಎಸೆಯಬಹುದು. ಕಲ್ಲು ಬಿದ್ದ ಜಾಗದಲ್ಲಿ ಎದ್ದ ಅಲೆ, ಅಲೆ ಅಲೆಯಾಗಿ ನಿಮ್ಮತ್ತಲೇ ತೇಲಿಬರುವುದನ್ನು ನೋಡುತ್ತಾ ಮೈಮರೆಯಬಹುದು.

2. ಲಾಂಚು ಹೊಳೆಯ ದಡಕ್ಕೆ ಬಂದು ನಿಂತಾಗ ಜನರ ಗಡಿಬಿಡಿ ಹೇಗಿರುತ್ತದೆ?

ಲಾಂಚು ಬಂದು ನಿಂತದ್ದೇ ಮೊದಲು ಜನರೆಲ್ಲ ಓಡಿ ಹೋಗಿ ಹತ್ತಿದ್ದಾರೆ. ಆಮೇಲೆ ವಾಹನಗಳೆಲ್ಲ ಒಂದೊಂದಾಗಿ ಬರುತ್ತಿವೆ. ಎಲ್ಲಾ ವಾಹನಗಳು ಹಿಡಿಸುವುದಿಲ್ಲ. ಒಂದು ಕಾರಿಗೆ ಪಾಪ, ಮುಂದಿನ ಟ್ರಿಪ್ಪಿನವರೆಗೂ ಕಾಯಬೇಕು. ಲಾಂಚು ಇನ್ನೇನು ಹೊರಟಿತು. ಅನ್ನುವಷ್ಟರಲ್ಲಿ ಒಂದು ಬೈಕು ಹಾರನ್ನು ಮಾಡಿಕೊಂಡು ಬಂದಿದೆ. ಅದನ್ನು ಸಹ ಹತ್ತಿಸಿಕೊಳ್ಳಲಾಗಿದೆ. ಬಂದವನು ಬೈಕಿನಲ್ಲಿ ಬಂದಿದ್ದರೂ ಓಡಿ ಬಂದು ಹತ್ತಿದವನಂತೆ ಏದುಸಿರು ಬಿಡುತ್ತಿದ್ದಾನೆ.

3. ನದಿಯಲ್ಲಿ ಲಾಂಚು ಚಲಿಸುತ್ತಿರುವಾಗ ಅದರಲ್ಲಿ ಕೂತವರ ಮಧ್ಯೆ ಏನೇನು ಮಾತುಕತೆಗಳು ನಡೆದಿರುತ್ತವೆ?

ಅಜ್ಜಿ ಒಂದು ಕೈ ಮುಗಿದು ” ದೇವರೇ ಸುಖವಾಗಿ ಆ ದಡ ತಲುಪಿಸಪ್ಪಾ” ಎನ್ನುತ್ತಿದೆ. ಹುಡುಗನೊಬ್ಬ ಅಪ್ಪನಿಗೆ ” ಅಪ್ಪ ಇಷ್ಟು ದೊಡ್ಡ ಲಾಂಚನ್ನು ಇಲ್ಲಿಗೆ ಹೇಗೆ ತಂದರು? ಲಾರಿಯಲ್ಲೂ ಹಿಡಿಯುವುದಿಲ್ಲ ” ಎಂದು ಕೇಳುತ್ತಿದ್ದಾನೆ. ಅಪ್ಪನಿಗೆ ಏನು ತಿಳಿಯದಿದ್ದರೂ ” ಇದನ್ನು ದೂರದ ಸಮುದ್ರದಿಂದ ಡ್ರೈವ್‌ ಮಾಡಿಕೊಂಡು ಬಂದದ್ದು ಈ ಹೊಳೆ ಹೋಗಿ ಸಮುದ್ರಕ್ಕೆ ಸೇರುತ್ತಲ ಅಲ್ಲಿಂದ ಬಂದದ್ದು ” ಇದು ಎಂದು ಏನೋ ಸಮಜಾಯಿಷಿ ಕೊಟ್ಟಿದ್ದಾನೆ.

4. ಲಾಂಚು ತನ್ನ ಪಯಣ ಮುಗಿಸಿದಾಗ ಜನರು ಹೇಗೆ ಹೊರಡುತ್ತಾರೆ ?

ಲಾಂಚು ನಿಂತಿದ್ದೆ ಎಲ್ಲಾ ಆಚೆ ದಡಕ್ಕೆ ಜಿಗಿದಿದ್ದಾರೆ ಬಸ್ಸು ಕಾರು ಬೈಕುಗಳು ಬುರಬುನೆ ದಡ ಸೇರಿವೆ. ಎಲ್ಲರೂ ಹೋಟೆಲ್ಲಿಗೆ ನುಗ್ಗಿದ್ದಾರೆ. ಮಾಣಿ ಇವತ್ತು ಏನು ವಿಶೇಷ ಮಾಡಿದ್ರಾ? ಕೇಳುತ್ತಿದ್ದಾರೆ ಭಟ್ಟರ ಮಗನ ಬಳಿ . ತಿಂಡಿ ತಿಂದು ಕಾಫಿ ಕುಡಿದು ಎಲ್ಲರೂ ಮತ್ತೆ ಬಸ್ಸು ಹತ್ತಿದ್ದಾರೆ. ಅಲ್ಲಿಲ್ಲಿಗೆ ಚದುರಿ ಹೋಗಿದ್ದವರೆನ್ನಲ್ಲ ಕರೆ ಕರೆದು ಹೊಟ್ಟೆಗೆ ಸೇರಿಸಿಕೊಂಡು ಬಸ್ಸು ಹೊರಟಿದೆ. ಹೊಳೆ ದಾಟಿದ ಖುಷಿಯಲ್ಲಿ ಓಡತೊಡಗಿದೆ. ನಾಗಾಲೋಟದಲ್ಲಿ ಎಂದು ಲಾಂಚಿನ ಪಯಣ ಮುಗಿಸಿದ ಜನರ ಸಂಭ್ರಮವನ್ನು ಲೇಖಕರು ವರ್ಣಿಸಿದ್ದಾರೆ.

5. ಹೊಳೆ ಮತ್ತು ಲಾಂಚಿನ ಒಟ್ಟಾರೆ ದಿನಚರಿಯ ಬಗ್ಗೆ ಲೇಖಕರ ಅನಿಸಿಕೆಯೇನು?

ಹೊಳೆ ದಾಟಲು ಲಾಂಚ್‌ ಅನಿವಾರ್ಯ ನೀವು ಎಷ್ಟೆ ವೇಗವಾಗಿ ಬಂದರೂ ಹೊಳೆ ನಿಮ್ಮನ್ನು ತಡೆದು ನಿಲ್ಲಿಸುತ್ತದೆ ಅವಸರ ಮಾಡುವಂತಿಲ್ಲ. ದಿನವೂ ಅದೇ ಲಾಂಚ್‌ ಅದು ಅಲ್ಲಿಂದ ಜನ ವಾಹನಗಳನ್ನೆಲ್ಲ ಹತ್ತಿಸಿಕೊಂಡು ನಿಧಾನವಾಗಿ ಈಚೆ ದಡಕ್ಕೆ ಬರಬೇಕು. ಲಾಂಚಿನಲ್ಲಿ ಡ್ರೈವರ್‌ ಎಲ್ಲಿ ಕುಳಿತಿರುತ್ತಾನೆ. ಇದೇ ಲಾಂಚನ್ನು ಇದೇ ರೂಟಿನಲ್ಲಿ ಪ್ರತಿದಿನವು ಓಡಿಸಿಕೊಂಡಿರಲಿಕ್ಕೆ ಅವನಿಗೆ ಬೇಸರವಾಗುವುದಿಲ್ಲವಾ? ಎನ್ನುವ ಮಾತಿನಲ್ಲಿ ಒಂದೇ ತರಹದ ದಿನಚರಿಯಿಂದ ಆಗುವ ಬೇಸರವನ್ನು ಲೇಖಕರು ಹೊರಹಾಕುತ್ತಾರೆ.

FAQ :

1. ಲಾಂಚು ಬರುವವರೆಗೆ ಹೊತ್ತು ಕಳೆಯಲು ಏನೆಲ್ಲ ಚಟುವಟಿಕೆಯನ್ನು ಮಾಡಬಹುದು?

ಲಾಂಚು ಬರುವವರೆಗೆ ಹೊತ್ತು ಕಳೆಯಲು ದಂಡೆಗುಂಟ ಅಡ್ಡಾಡ್ಡುತ್ತಾ ಕಪ್ಪೆ ಚಿಪ್ಪು ನುಣ್ಣನೆ ಉರುಟು ಕಲ್ಲುಗಳನ್ನು ಹೆಕ್ಕಬಹುದು. ಹೆಕ್ಕಿದ ಕಲ್ಲನ್ನು ಹೊಳೆಗೆ ಎಸೆಯಬಹುದು. ಕಲ್ಲು ಬಿದ್ದ ಜಾಗದಲ್ಲಿ ಎದ್ದ ಅಲೆ, ಅಲೆ ಅಲೆಯಾಗಿ ನಿಮ್ಮತ್ತಲೇ ತೇಲಿಬರುವುದನ್ನು ನೋಡುತ್ತಾ ಮೈಮರೆಯಬಹುದು.

2. ಲಾಂಚು ಹೊಳೆಯ ದಡಕ್ಕೆ ಬಂದು ನಿಂತಾಗ ಜನರ ಗಡಿಬಿಡಿ ಹೇಗಿರುತ್ತದೆ?

ಲಾಂಚು ಬಂದು ನಿಂತದ್ದೇ ಮೊದಲು ಜನರೆಲ್ಲ ಓಡಿ ಹೋಗಿ ಹತ್ತಿದ್ದಾರೆ. ಆಮೇಲೆ ವಾಹನಗಳೆಲ್ಲ ಒಂದೊಂದಾಗಿ ಬರುತ್ತಿವೆ. ಎಲ್ಲಾ ವಾಹನಗಳು ಹಿಡಿಸುವುದಿಲ್ಲ. ಒಂದು ಕಾರಿಗೆ ಪಾಪ, ಮುಂದಿನ ಟ್ರಿಪ್ಪಿನವರೆಗೂ ಕಾಯಬೇಕು. ಲಾಂಚು ಇನ್ನೇನು ಹೊರಟಿತು. ಅನ್ನುವಷ್ಟರಲ್ಲಿ ಒಂದು ಬೈಕು ಹಾರನ್ನು ಮಾಡಿಕೊಂಡು ಬಂದಿದೆ. ಅದನ್ನು ಸಹ ಹತ್ತಿಸಿಕೊಳ್ಳಲಾಗಿದೆ. ಬಂದವನು ಬೈಕಿನಲ್ಲಿ ಬಂದಿದ್ದರೂ ಓಡಿ ಬಂದು ಹತ್ತಿದವನಂತೆ ಏದುಸಿರು ಬಿಡುತ್ತಿದ್ದಾನೆ.

4. ಲಾಂಚು ತನ್ನ ಪಯಣ ಮುಗಿಸಿದಾಗ ಜನರು ಹೇಗೆ ಹೊರಡುತ್ತಾರೆ ?

ಲಾಂಚು ನಿಂತಿದ್ದೆ ಎಲ್ಲಾ ಆಚೆ ದಡಕ್ಕೆ ಜಿಗಿದಿದ್ದಾರೆ ಬಸ್ಸು ಕಾರು ಬೈಕುಗಳು ಬುರಬುನೆ ದಡ ಸೇರಿವೆ. ಎಲ್ಲರೂ ಹೋಟೆಲ್ಲಿಗೆ ನುಗ್ಗಿದ್ದಾರೆ. ಮಾಣಿ ಇವತ್ತು ಏನು ವಿಶೇಷ ಮಾಡಿದ್ರಾ? ಕೇಳುತ್ತಿದ್ದಾರೆ ಭಟ್ಟರ ಮಗನ ಬಳಿ . ತಿಂಡಿ ತಿಂದು ಕಾಫಿ ಕುಡಿದು ಎಲ್ಲರೂ ಮತ್ತೆ ಬಸ್ಸು ಹತ್ತಿದ್ದಾರೆ. ಅಲ್ಲಿಲ್ಲಿಗೆ ಚದುರಿ ಹೋಗಿದ್ದವರೆನ್ನಲ್ಲ ಕರೆ ಕರೆದು ಹೊಟ್ಟೆಗೆ ಸೇರಿಸಿಕೊಂಡು ಬಸ್ಸು ಹೊರಟಿದೆ. ಹೊಳೆ ದಾಟಿದ ಖುಷಿಯಲ್ಲಿ ಓಡತೊಡಗಿದೆ. ನಾಗಾಲೋಟದಲ್ಲಿ ಎಂದು ಲಾಂಚಿನ ಪಯಣ ಮುಗಿಸಿದ ಜನರ ಸಂಭ್ರಮವನ್ನು ಲೇಖಕರು ವರ್ಣಿಸಿದ್ದಾರೆ.

ಇತರೆ ವಿಷಯಗಳು :

9th Standard All Subject Notes

9th Standard Kannada Textbook karnataka Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

3 thoughts on “9ನೇ ತರಗತಿ ಹೊಳೆಬಾಗಿಲು ಪಠ್ಯ ಪೂರಕ ಅಧ್ಯಯನ ಕನ್ನಡ ನೋಟ್ಸ್ | 9th Standard Holebagilu Kannada Notes 2023

Leave a Reply

Your email address will not be published. Required fields are marked *

rtgh