8ನೇ ತರಗತಿ ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ವಿಜ್ಞಾನ ನೋಟ್ಸ್‌ | 8th Standard Science Chapter 5 Notes in Kannada Medium

8ನೇ ತರಗತಿ ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 8th Standard Science Chapter 5 Notes Question Answer Mcq Pdf in Kannada Medium 2022 Kseeb Solutions for Class 8 science Chapter 5 Notes 8th Kalliddalu Mattu Petroleum Question Answer 8th Standard Science 5th Lesson Notes

8th Kalliddalu Mattu Petroleum Science Notes in Kannada

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

8th Standard Science Chapter 5 Notes

01) CNG ಮತ್ತು LPG ಗಳನ್ನು ಇಂಧನಗಳಾಗಿ ಬಳಸುವುದರ ಅನುಕೂಲತೆಗಳೇನು?

ಉತ್ತರ: CNG ಮತ್ತು LPG ಗಳನ್ನು ಇಂಧನಗಳಾಗಿ ಬಳಸುವುದರ ಕೆಲವು ಅನುಕೂಲತೆಗಳು:

01) ಅವನ್ನು ನೇರವಾಗಿ ದಹಿಸಬಹುದು.

02] ಅವುಗಳನ್ನು ಕೊಳವೆಗಳ ಮೂಲಕ ಸುಲಭವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಬಹುದು.

03] ಅವುಗಳು ಶುದ್ಧರೂಪದ ಇಂಧನಗಳಾಗಿದೆ ಮತ್ತು ದಹಿಸಿದಾಗ ಹೊಗೆಯನ್ನು ಉತ್ಪತ್ತಿ ಮಾಡುವುದಿಲ್ಲ.

04) ದಹಿಸಿದಾಗ ಹೆಚ್ಚು ಶಾಖವನ್ನು ಉತ್ಪತ್ತಿ ಮಾಡುತ್ತದೆ.

02) ರಸ್ತೆಗಳ ಮೇಲೆ ನಿರ್ಮಾಣದಲ್ಲಿ ಉಪಯೋಗಿಸುವ ಪೆಟ್ರೋಲಿಯಂ ಉತ್ಪನ್ನವನ್ನು ಹೆಸರಿಸಿ,

ಉತ್ತರ: ‘ಬಿಟುಮೆನ್’ ರಸ್ತೆಗಳ ಮೇಲೆ ನಿರ್ಮಾಣದಲ್ಲಿ ಉಪಯೋಗಿಸುವ ವ ಪೆಟ್ರೋಲಿಯಂ ಉತ್ಪನ್ನವಾಗಿದೆ.

03) ಸತ್ತ ಸಸ್ಯರಾಶಿಯಿಂದ ಕಲ್ಲಿದ್ದಲು ಹೇಗೆ ಉಂಟಾಗುತ್ತದೆ ಎನ್ನುವುದನ್ನು ವಿವರಿಸಿ ಈ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ’

ಉತ್ತರ: ಸುಮಾರು 300 ಮಿಲಿಯನ್ ವರ್ಷಗಳ ಹಿಂದೆ ಭೂಮಿಯು ತಗ್ಗಾದ ತೇವಾಂಶದಿಂದ ಕೂಡಿದ ಪ್ರದೇಶಗಳಲ್ಲಿ ದಟ್ಟವಾದ ಅರಣ್ಯಗಳನ್ನು ಹೊಂದಿತ್ತು, ಪ್ರವಾಹದಂತಹ ನೈಸರ್ಗಿಕ ಪ್ರಕ್ರಿಯೆಗಳಿಂದ ಈ ಅರಣ್ಯಗಳು ಮಣ್ಣಿನ ಅಡಿಯಲ್ಲಿ ಹೂತು ಹೋದವು, ಅವುಗಳ ಮೇಲೆ ಹೆಚ್ಚು ಮಣ್ಣು ಸಂಗ್ರಹವಾದಂತೆ, ಆವು ಸಂಪೀಡನೆಗೊಳಗಾದವು. ಅವು ಹೆಚ್ಚು ಹೆಚ್ಚು ಆಳಕ್ಕೆ ಹೂತುಹೋಗುತ್ತಿದ್ದಂತೆ ತಾಪವೂ ಹೆಚ್ಚಾಯಿತು. ಸತ್ತ ಸಸ್ಯಗಳು ಹೆಚ್ಚಿನ ಒತ್ತಡ ಮತ್ತು ಹೆಚ್ಚಿನ ತಾಪದಲ್ಲಿ, ನಿಧಾನವಾಗಿ ಕಲ್ಲಿದ್ದಲಾಗಿ ಪರಿವರ್ತನೆಗೊಂಡವು. ಕಲ್ಲಿದ್ದಲು ಪ್ರಮುಖವಾಗಿ ಕಾರ್ಬನ್‌ ಳನ್ನು ಹೊಂದಿರುವುದರಿಂದ, ಸತ್ತ ಸಸ್ಯವರ್ಗ ಕಲ್ಲಿದ್ದಲಾಗಿ ಪರಿವರ್ತನೆ ಹೊಂದುವ ನಿಧಾನಗತಿಯ ಪ್ರಕ್ರಿಯೆಯನ್ನು ಕಾರ್ಬನೀಕರಣ ಎನ್ನುವರು.

04) ಬಿಟ್ಟ ಸ್ಥಳಗಳನ್ನು ತುಂಬಿರಿ,

(a) ಕಲ್ಲಿದ್ದಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳು ಪಳೆಯುಳಿಕೆ ಇಂಧನಗಳು.

(b) ಪೆಟ್ರೋಲಿಯಂನ ವಿವಿಧ ಘಟಕಗಳನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ಶುದ್ದೀಕರಣ ಎನ್ನುವರು.

(c) ಅತ್ಯಂತ ಕಡಿಮೆ ಮಾಲಿನ್ಯ ಉಂಟುಮಾಡುವ ವಾಹನ ಇಂಧನ ಒತ್ತಡದಲ್ಲಿ ಸಂಪೀಡಿತ ನೈಸರ್ಗಿಕ ಅನಿಲದ (CNG)

05) ಕೆಳಗಿನ ಹೇಳಿಕೆಗಳ ಮುಂದೆ ಸರಿ/ತಪ್ಪು ಗುರುತಿಸಿ,

(a) CNG ಯು ಪೆಟ್ರೋಲ್‌ಗಿಂತ ಹೆಚ್ಚು ಮಾಲಿನ್ಯ ಉಂಟುಮಾಡುವ ಇಂಧನವಾಗಿದೆ. ಉತ್ತರ; ತಪ್ಪು

(b) ಪಳೆಯುಳಿಕೆ ಇಂಧನಗಳನ್ನು ಪ್ರಯೋಗಶಾಲೆಯಲ್ಲಿ ತಯಾರಿಸಬಹುದು. ಉತ್ತರ: ತಪ್ಪು

(c) ಕಲ್ಲಿದ್ದಲು ಅನಿಲ ಅನೇಕ ವಸ್ತುಗಳ ಮಿಶ್ರಣವಾಗಿದೆ. ಉತ್ತರ: ಸರಿ.

(d) ಸೀಮೆಎಣ್ಣೆ ಒಂದು ಪಳೆಯುಳಿಕೆ ಇಂಧನದಲ್ಲ. ತಪ್ಪು

(c) ಕೋಕ್ ಕಾರ್ಬನ್‌ ನ ಬಹುತೇಕ ಶುದ್ಧ ರೂಪವಾಗಿದೆ ಉತ್ತರ: ಸರಿ

06) ಪಳೆಯಳಿಕೆ ಇಂಧನಗಳು ಏಕೆ ಬರಿದಾಗುವ ನೈಸರ್ಗಿಕ ಸಂಪನ್ಮೂಲಗಳು ಎನ್ನುವುದನ್ನು ವಿವರಿಸಿ,

ಉತ್ತರ: ಸತ್ತ ಜೀವಿಗಳು ಈ ಇಂಧನಗಳಾಗಿ ಪರಿವರ್ತನೆಗೊಳ್ಳಲು ಆನೇಕ ಮಿಲಿಯನ್ ವರ್ಷಗಳೇ ಬೇಕಾಗುತ್ತದೆ. ಇನ್ನೊಂದೆಡೆಯಲ್ಲಿ ನಮಗೆ ತಿಳಿದಿರುವ ಇವುಗಳ ಸಂಗ್ರಹ ಇನ್ನು ಕೆಲವು ನೂರು ವರ್ಷಗಳಲ್ಲಿ ಮುಗಿದು ಹೋಗುತ್ತದೆ. ಇವುಗಳು ಸುಷ್ಟಿಯಾಗಲು ಹೆಚ್ಚಿನ ಒತ್ತಡ ಮತ್ತು ಉಷ್ಣತೆಗಳ ಅಗತ್ಯವಿದ್ದು, ಅವುಗಳನ್ನು ನಾವು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆದ್ದರಿಂದ, ಪಳೆಯುಳಿಕೆ ಇಂಧನಗಳು ಬರಿದಾಗುವ ನೈಸರ್ಗಿಕ ಸಂಪನ್ಮೂಲಗಳು ಎನ್ನುವರು.

07) ಕೋಕ್‌ನ ಲಕ್ಷಣಗಳು ಮತ್ತು ಉಪಯೋಗಗಳನ್ನು ವಿವರಿಸಿ

ಉತ್ತರ: ಕೋಕ್ ಲಕ್ಷಣಗಳು: ‌

1) ಕಠಿಣವಾಗಿಗುತ್ತದೆ

2] ರಂಧ್ರಯುಕ್ತವಾಗಿರುತ್ತದೆ ಮತ್ತು

3] ಕಪ್ಪು ಬಣ್ಣದ ವಸ್ತು,

4] ಉಕ್ಕಿನ ಉತ್ಪಾದನೆ ಮತ್ತು ಅನೇಕ ಲೋಹಗಳ ಉದ್ದರಣೆಯಲ್ಲಿ ಕೋಕ್‌ ಅನ್ನು ಉಪಯೋಗಿಸುತ್ತಾರೆ.

08) ಪೆಟ್ರೋಲಿಯಂ ಉಂಟಾಗುವ ಪ್ರಕ್ರಿಯೆಯನ್ನು ವಿವರಿಸಿ,

ಉತ್ತರ: ಸಮುದ್ರದಲ್ಲಿ ವಾಸಿಸುವ ಜೀವಿಗಳಿಂದ ಪೆಟ್ರೋಲಿಯಂ ಉಂಟಾಗಿದೆ. ಈ ಜೀವಿಗಳು ಸತ್ತಾಗ ಅವುಗಳ ದೇಹಗಳು ಸಮುದ್ರದ ತಳವನ್ನು ಸೇರುತ್ತವೆ ಮತ್ತು ಮರಳು ಮತ್ತು ಜೇಡಿ ಮಣ್ಣಿನ ಪದರಗಳಿಂದ ಆವರಿಸಲ್ಪಡುತ್ತದೆ. ಮಿಲಿಯನ್‌ಗಟ್ಟಲೆ ವರ್ಷಗಳಲ್ಲಿ, ಗಾಳಿಯ ಅನುಪಸ್ಥಿತಿ, ಹೆಚ್ಚಿನ ತಾಪ ಮತ್ತು ಹೆಚ್ಚಿನ ಒತ್ತಡ, ಸತ್ತ ಜೀವಿಗಳನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲವಾಗಿ ಪರಿದರ್ಶಿಸಿದೆ.

09. ಪಳೆಯುಳಿಕೆ ಇಂಧನಗಳು ಎಂದರೇನು?

ಸತ್ತ ಜೀವಿಗಳ ಉಳಿಕೆಗಳಿಂದ ಉಂಟಾಗಿರುವ ಸಂಪನ್ಮೂಲಗಳಿಗೆ ಪಳೆಯುಳಿಕೆ ಇಂಧನಗಳು ಎನ್ನುವರು.

10. ಲಭ್ಯತೆಯ ಆಧಾರದ ಮೇಲೆ ನೈಸರ್ಗಿಕ ಸಂಪನ್ಮೂಲಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಲಾಗಿದೆ? ಹೆಸರಿಸಿ,

ಉತ್ತರ: ಲಭ್ಯತೆಯ ಆಧಾರದ ಮೇಲೆ ನೈಸರ್ಗಿಕ ಸಂಪನ್ಮೂಲಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು,

(I) ಬರಿದಾಗದ ನೈಸರ್ಗಿಕ ಸಂಪನ್ಮೂಲಗಳು

(2) ಬರಿದಾಗುವ ನೈಸರ್ಗಿಕ ಸಂಪನ್ಮೂಲಗಳು.

11) ಬರಿದಾಗದ ನೈಸರ್ಗಿಕ ಸಂಪನ್ಮೂಲಗಳು ಎಂದರೇನು? ಉದಾಹರಿಸಿ,

ಉತ್ತರ: ನಿಸರ್ಗದಲ್ಲಿ ಅಪರಿಮಿತ ಪ್ರಮಾಣದಲ್ಲಿರುವ ಮತ್ತು ಮಾನವನ ಚಟುವಟಿಕೆಗಳಿಂದ ಬರಿದಾಗುವ ಸಾಧ್ಯತೆಗಳಿಲ್ಲದ ಸಂಪನ್ಮೂಲಗಳನ್ನು ಬರಿದಾಗದ ನೈಸರ್ಗಿಕ ಸಂಪನ್ಮೂಲಗಳು ಎನ್ನುವರು. ಉದಾಹರಣೆ: ಸೌರಬೆಳಕು, ಗಾಳಿ ಇತ್ಯಾದಿಗಳು,

12) ಬರಿದಾಗುವ ನೈಸರ್ಗಿಕ ಸಂಪನ್ಮೂಲಗಳು ಎಂದರೇನು? ಉದಾಹರಿಸಿ,

ಉತ್ತರ: ನಿಸರ್ಗದಲ್ಲಿ ಸೀಮಿತ ಪ್ರಮಾಣದಲ್ಲಿರುವ ಮುತ್ತುದನವನ ಚಟುವಟಿಕೆಗಳಿಂದ ಬರಿದಾಗಬಹುದಾದ ಸಂಪನ್ಮೂಲಗಳನ್ನು

ಬರಿದಾಗದ ನೈಸರ್ಗಿಕ ಸಂಪನ್ಮೂಲಗಳು ಎನ್ನುವರು. ಉದಾಹರಣೆ: ಅರಣ್ಯಗಳು, ವನ್ಯಜೀವಿಗಳು, ಖನಿಜಗಳು, ಕಲ್ಲಿದ್ದಲು, ಪೆಟ್ರೋಲಿಯಂ, ನೈಸಗಿಕ ಆನಿಲ ಇತ್ಯಾದಿಗಳು,

13) ಕಲ್ಲಿದಲ್ಲಿನ ಉಪಯೋಗಗಳನ್ನು ಪಟ್ಟಿಮಾಡಿ.

01) ಅಡುಗೆಮಾಡಲು ಇಂಧನವಾಗಿ ಬಳಸುತ್ತಾರೆ.

02] ಹಿಂದೆ ಇದನ್ನು ರೈಲು ಎಂಜಿನ್‌ಗಳಲ್ಲಿ ಹಬೆಯನ್ನು ಉತ್ಪತ್ತಿ ಮಾಡಿ ಎಂಜಿನ್ ಚಲಾಯಿಸಲು ಬಳಸುತ್ತಿದ್ದರು.

03) ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುಚ್ಛಕ್ತಿಯ ಉತ್ಪಾದನೆಗೆ ಇದನ್ನು ಬಳಸುತ್ತಾರೆ.

04) ಕಲ್ಲಿದ್ದಲನ್ನು ವಿವಿಧ ಕಾರ್ಖಾನೆಗಳಲ್ಲಿ ಇಂಧನವಾಗಿ ಬಳಸುತ್ತಾರೆ.

14) ಕಲ್ಲಿದ್ದಲು ಡಾಂಬರುಗಳ ಲಕ್ಷಣ ಮತ್ತು ಉಪಯೋಗಗಳನ್ನು ಪಟ್ಟಿಮಾಡಿ,

ಉತ್ತರ: ಕಲ್ಲಿದ್ದಲು ಡಾಂಬರುಗಳು ಹಿತಕರವಲ್ಲದ ವಾಸನೆ ಹೊಂದಿರುವ ಕಪ್ಪಗಿನ, ಮಂದವಾದ ದ್ರವ, ಇದು ಸುಮಾರು 200 ವಸ್ತುಗಳ ಮಿಶ್ರಣವಾಗಿದೆ.

ಕಲ್ಲಿದ್ದಲು ಡಾಂಬರುಗಳ ಉಪಯೋಗಗಳು: ಕಲ್ಲಿದ್ದಲು ಡಾಂಬರು ದೈನಂದಿನ ಜೀವನದಲ್ಲಿ ಮತ್ತು ಕೈಗಾರಿಕೆಗಳಲ್ಲಿ ಉಪಯೋಗಿಸುವ ಸಂಶ್ಲೇಷಿತ ರಂಗುಗಳು, ಔಷಧಗಳು, ಸ್ಫೋಟಗಳು, ಸುವಾಸಿಕಗಳು, ಪ್ಲಾಸ್ಟಿಕ್‌ಗಳು, ಬಣ್ಣಗಳು, ಛಾಯಾಗ್ರಹಣದ ವಸ್ತುಗಳು, ಛಾವಣಿಗೆ ಬಳಸುವ ವಸ್ತುಗಳಂತಹ ವಿವಿಧ ವಸ್ತುಗಳ ಉತ್ಪಾದನೆಯಲ್ಲಿ ಕಲ್ಲಿದ್ದಲು ಡಾಂಬರಿನಿಂದ ಪಡೆದ ವಸ್ತುಗಳನ್ನು ಕಚ್ಚಾವಸ್ತುವಾಗಿ ಉಪಯೋಗಿಸುತ್ತಾರೆ. ಪತಂಗಗಳು ಮತ್ತು ಇತರ ಕೀಟಗಳ ವಿಕರ್ಷಕಗಳಾಗಿ ಬಳಸುವ ನ್ಯಾಪ್ಟಲಿನ್ ಗುಳಿಗೆಗಳನ್ನೂ ಕಲ್ಲಿದ್ದಲು ಡಾಂಬರಿನಿಂದ ಪಡೆಯಲಾಗುತ್ತದೆ ಎಂಬುದು ಆಸಕ್ತಿದಾಯಕ ವಿಚಾರವಾಗಿದೆ.

15) ಪೆಟ್ರೋಲಿಯಂನ ಲಕ್ಷಣಗಳನ್ನು ತಿಳಿಸಿ?

ಉತ್ತರ: ಪೆಟ್ರೋಲಿಯಂ ಒಂದು ಕಪ್ಪು ತೈಲದಂತಹ ದ್ರವ ಇದು ಅಹಿತಕರವಾದ ವಾಸನೆಯನ್ನು ಹೊಂದಿದೆ. ಇದು ಪೆಟ್ರೋಲಿಯಂ ಅನಿಲ, ಪೆಟ್ರೋಲ್, ಡೀಸೆಲ್, ಅಪಘರ್ಷಕ ತೈಲ, ಪ್ಯಾರಾಫಿನ್‌ ಮೇಣ ಮೊದಲಾದ ವಿವಿಧ ಘಟಕಗಳ ಮಿಶ್ರಣವಾಗಿದೆ.

16) ಪೆಟ್ರೋರಾಸಾಯನಿಕಗಳ ಉಪಯೋಗಗಳನ್ನು ಪಟ್ಟಿಮಾಡಿ,

ಉತ್ತರ: 01) ಪೆಟ್ರೋರಾಸಾಯನಿಕಗಳನ್ನು ಮಾರ್ಜಕಗಳು, ಎಳೆಗಳು (ಪಾಲಿಸ್ಟರ್, ನೈಲಾನ್, ಆಕ್ರಿಲಿಕ್, ಇತ್ಯಾದಿ) ಪಾಲಿಥೀನ್, ಮತ್ತು ಇತರ ಮಾನದ ನಿರ್ಮಿತ ಪ್ಲಾಸ್ಟಿಕ್‌ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

02] ನೈಸರ್ಗಿಕ ಅನಿಲದಿಂದ ಪಡೆದ ಹೈಡೋಜನ್ ಅನಿಲವನ್ನು ರಾಸಾಯನಿಕ ಗೊಬ್ಬರಗಳ (ಯೂರಿಯಾ) ಉತ್ಪಾದನೆಯಲ್ಲಿ ಉಪಯೋಗಿಸುತ್ತಾರೆ.

17) ಸತ್ತ ಜೀವಿಗಳಿಂದ ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಬಹುದೇ?

ಉತ್ತರ: ಇಲ್ಲ, ಅವುಗಳ ಉಂಟಾಗುವಿಕೆ ಪ್ರಕ್ರಿಯೆ ತುಂಬಾ ನಿಧಾನ ಗತಿಯದು ಮತ್ತು ಅವುಗಳ ಉಂಟಾಗುವಿಕೆಗೆ ಬೇಕಾದ ನಿಬಂಧನೆಗಳನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ.

18) ಭಾರತದಲ್ಲಿ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ (Petroleum Conservation Research Associasion -PCRA) ವಾಹನ ಚಲಾಯಿಸುವಾಗ ಹೇಗೆ ಪೆಟ್ರೋಲ್ ಮತ್ತು ಡೀಸಲ್ ಉಳಿಸಬೇಕೆನ್ನುವುದರ ಕುರಿತು ನೀಡಿರುವ ಕೆಲವು ಸಲಹೆಗಳನ್ನು ಪಟ್ಟಿಮಾಡಿ,

ಉತ್ತರ: 1) ಸಧ್ಯವಾದಷ್ಟೂ ದೂರ ಸ್ಥಿರವಾದ ಮತ್ತು ಮಿತವಾದ ವೇಗದಲ್ಲಿ ವಾಹನ ಚಲಾಯಿಸಬೇಕು.

02) ಟ್ರಾಫಿಕ್ ಸಿಗ್ನಲ್‌ ಗಳಲ್ಲಿ ಅಥವಾ ಯಾವುದಾದರೂ ಸ್ಥಳದಲ್ಲಿ ನೀವು ಕಾಯುವ ಸಂದರ್ಭದಲ್ಲಿ ವಾಹನದ ಎಂಜಿನ್ನನ್ನು ಸ್ಥಗಿತಗೊಳಿಸಬೇಕು.

03] ಚಕ್ರದಲ್ಲಿನ ಗಾಳಿಯ ಒತ್ತಡ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

04] ವಾಹನದ ನಿಯಮಿತ ನಿರ್ವಹಣೆಯನ್ನು ಮರೆಯಬಾರದು.

FAQ

1. ಪಳೆಯುಳಿಕೆ ಇಂಧನಗಳು ಎಂದರೇನು?

ಸತ್ತ ಜೀವಿಗಳ ಉಳಿಕೆಗಳಿಂದ ಉಂಟಾಗಿರುವ ಸಂಪನ್ಮೂಲಗಳಿಗೆ ಪಳೆಯುಳಿಕೆ ಇಂಧನಗಳು ಎನ್ನುವರು.

2. ಬರಿದಾಗದ ನೈಸರ್ಗಿಕ ಸಂಪನ್ಮೂಲಗಳು ಎಂದರೇನು? ಉದಾಹರಿಸಿ,

ಉತ್ತರ: ನಿಸರ್ಗದಲ್ಲಿ ಅಪರಿಮಿತ ಪ್ರಮಾಣದಲ್ಲಿರುವ ಮತ್ತು ಮಾನವನ ಚಟುವಟಿಕೆಗಳಿಂದ ಬರಿದಾಗುವ ಸಾಧ್ಯತೆಗಳಿಲ್ಲದ ಸಂಪನ್ಮೂಲಗಳನ್ನು ಬರಿದಾಗದ ನೈಸರ್ಗಿಕ ಸಂಪನ್ಮೂಲಗಳು ಎನ್ನುವರು. ಉದಾಹರಣೆ: ಸೌರಬೆಳಕು, ಗಾಳಿ ಇತ್ಯಾದಿಗಳು,

ಇತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

8th Standard Kannada Text Book Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh