8ನೇ ತರಗತಿ ವಸ್ತುಗಳು: ಲೋಹಗಳು ಮತ್ತು ಅಲೋಹಗಳು ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, 8th Standard Science Chapter 4 Notes Question Answer Pdf in Kannada Medium Vastugalu Lohagalu Mattu Alohagalu Question Answer Mcq Pdf Kseeb Solutions For Class 8 Science Chapter 4 Notes
Vastugalu Lohagalu Mattu Alohagalu 8th
01) ಈ ಕೆಳಗಿನವುಗಳಲ್ಲಿ ಯಾವುದನ್ನು ಬಡಿದು ಹಾಳೆಗಳನ್ನಾಗಿ ಮಾಡಬಹುದು?
ಉತ್ತರ: ಸತು
02) ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಿದೆ
ಉತ್ತರ: c. ಸಾಮಾನ್ಯವಾಗಿ, ಲೋಹಗಳು ತನ್ಯ ಗುಣ ಹೊಂದಿವೆ.
03) ಬಿಟ್ಟ ಸ್ಥಳ ತುಂಬಿರಿ,
Vastugalu Lohagalu Mattu Alohagalu 8th Question Answer
1. ಫಾಸ್ಪರಸ್ ಒಂದು ಕ್ರಿಯಾಶೀಲ ಆಲೋಹವಾಗಿದೆ
2. ಲೋಹಗಳು ವಿದ್ಯುತ್ ಮತ್ತು ಶಾಖಗಳ ಉತ್ತಮ ವಾಹಕಗಳಾಗಿವೆ.
3. ಲೋಹಗಳು ಆಮ್ಲಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ ಹೈಡ್ರೋಜನ್
4. ಕಬ್ಬಿಣವು ತಾಮ್ರಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ.
ಸರಿ ಇದ್ದರೆ ‘ಸ’ ಎಂದು ತಪ್ಪಿದ್ದರೆ ‘ತ’ ಎಂದು ಗುರುತುಮಾಡಿ,
೩. ಸಾಮಾನ್ಯವಾಗಿ, ಅಲೋಹಗಳು ಆಮ್ಲಗಳೊಂದಿಗೆ ವರ್ತಿಸುತ್ತದೆ (ತ)
b. ಸೋಡಿಯಂ ಹಚ್ಚು ಕ್ರಿಯಾಶೀಲ ಧಾತುವಾಗಿದೆ (ಸ)
C. ತಾವುವು ಸತುವಿನ ಸಲ್ವೇಟ್ ದ್ರಾವಣದಿಂದ ಸತುವನ್ನು ಸ್ಥಾನಪಲ್ಲಟಗೊಳಿಸುತ್ತದೆ, (ತ)
d. ಕಲ್ಲಿದ್ದಲನ್ನು ತಂತಿಗಳಾಗಿ ಮಾರ್ಪಡಿಸಬಹುದು (ತ)
8th Standard Science Chapter 4 Notes
1.ಆಹಾರವಸ್ತುಗಳ ಪೊಟ್ಟಣ ಕಟ್ಟಲು ಅಲ್ಯೂಮಿನಿಯಂನ ತೆಳು ಹಾಳೆಯನ್ನು ಬಳಸುವರು.
ಉತ್ತರ: ಅಲ್ಯೂಮಿನಿಯಂ ಕುಟ್ಯತೆಯನ್ನು ಹೊಂದಿದ್ದು ತಳುವಾದ ಹಾಳೆಯ ರೂಪಕ್ಕೆ ಬಡಿಯಬಹುದಾಗಿದೆ. ಆದ್ದರಿಂದ, ಆಹಾರದಸ್ತುಗಳ ಮೊಟ್ಟಣ ಕಟ್ಟಲು ಅಲ್ಯೂಮಿನಿಯಂನ ತೆಳು ಹಾಳೆಯನ್ನು ಬಳಸುವರು.
2.ದ್ರವಗಳನ್ನು ಕಾಸಲು ಬಳಸುವ ಮುಳುಗು ಕಂಬಿಗಳನ್ನು (immersion rods) ಲೋಹೀಯ ವಸ್ತುಗಳಿಂದ ಮಾಡಿರುತ್ತಾರೆ.
ಉತ್ತರ: ಸಾಮಾನ್ಯವಾಗಿ, ಲೋಹಗಳು ತಾಯಿ ಮತ್ತು ವಿದ್ಯುತ್‌ನ ಉತ್ತಮ ವಾಹಕಗಳಾಗಿದೆ. ಆದ್ದರಿಂದ, ದ್ರವಗಳನ್ನು ಕಾಸಲು ಬಳಸುವ ಮುಳುಗು ಕಂಬಿಗಳನ್ನು ಲೋಹೀಯ ವಸ್ತುಗಳಿಂದ ಮಾಡಿರುತ್ತಾರೆ.
3. ಸತುವನ್ನು ಅದರ ಲವಣದ ದ್ರಾವಣದಿಂದ ತಾಮ್ರವು ಸ್ಥಾನಪಲ್ಲಟಗೊಳಿಸುವುದಿಲ್ಲ.
ಉತ್ತರ: ಲೋಹಗಳು ಅದರ ಲವಣದ ದ್ರಾವಣದಿಂದ ಅದಕ್ಕಿಂತ ಕಡಿಮೆ ಕ್ರಿಯಾಶೀಲ ಲೋಹಗಳನ್ನು ಮಾತ್ರ ಸ್ಥಾನಪಲ್ಲಟಗೊಳಿಸುತ್ತದೆ. ಆದರೆ, ಸತುವು ತಾಮ್ರಕ್ಕಿಂತ ಹೆಚ್ಚು ಕ್ರಿಯಾಶೀಲವಾದ ಲೋಹವಾಗಿದೆ. ಆದ್ದರಿಂದ, ಸತುವನ್ನು ಅದರ ಲವಣದ ದ್ರಾವಣದಿಂದ ತಾಮ್ರವು ಸ್ಥಾನಪಲ್ಲಟಗೊಳಿಸುವುದಿಲ್ಲ.
4. ಸೋಡಿಯಂ ಮತ್ತು ಪೊಟ್ಯಾಸಿಯಂಗಳನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ.
ಉತ್ತರ: ಸೋಡಿಯಂ ಮತ್ತು ಪೊಟ್ಯಾಸಿಯಂಗಳು ಹೆಚ್ಚು ಕ್ರಿಯಾಶೀಲ ವಸ್ತುಗಳಾಗಿದ್ದು, ಸಾಮಾನ್ಯವಾಗಿ ಗಾಳಿಯ ಸಂಪರ್ಕಕ್ಕೆ ಬಂದರೂ ಸಹ ತಕ್ಷಣ ಹೊತ್ತಿ ಉರಿಯುತ್ತವೆ. ಆದ್ದರಿಂದ, ಸೋಡಿಯಂ ಮತ್ತು ಮೊಟ್ಯಾಸಿಯಂಗಳನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
8th Standard Science Chapter 4 Notes
1. ನಿಂಬೆ ಹಣ್ಣಿನ ಉಪ್ಪಿನಕಾಯಿಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಸಂಗ್ರಹಿಸಿಡಬಹುದೇ? ವಿವರಿಸಿ,
ಉತ್ತರ: ಇಲ್ಲ. ನಿಂಬೆ ಹಣ್ಣಿನ ಉಪ್ಪಿನಕಾಯಿಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಸಂಗ್ರಹಿಸಿಡಲಾಗುವುದಿಲ್ಲ. ಏಕೆಂದರೆ, ನಿಂಬೆ ಹಣ್ಣಿನ ಉಪ್ಪಿನಕಾಯಿಯು ಆಮ್ಲವನ್ನು ಹೊಂದಿದ್ದು, ಅಲ್ಯೂಮಿನಿಯಂ ನೊಂದಿಗೆ ವರ್ತಿಸಿ ಹೈಡೋಜನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದು ಉಪ್ಪಿನಕಾಯಿಯನ್ನು ಕೆಡುವಂತೆ ಮಾಡುತ್ತದೆ
2. ಈ ಕೆಳಗಿನ ಸಂದರ್ಭಗಳಲ್ಲಿ ಏನಾಗುತ್ತದೆ?
a.ತಾಮ್ರದ ಫಲಕದ ಮೇಲೆ ಸಾರರಿಕ್ತ ಸಲ್ಯೂರಿಕ್ ಆದ್ದು ಸುರಿದಾಗ,
b. ಕಬ್ಬಿಣದ ಮೊಳೆಗಳನ್ನು ತಾಮ್ರದ ಸಲ್ಪೇಟ್ ದ್ರಾವಣದಲ್ಲಿ ಇಟ್ಟಾಗ.
ಈ ಮೇಲಿನ ಕ್ರಿಯೆಗಳ ಪದ ಸಮೀಕರಣ ಬರೆಯಿರಿ.
ಉತ್ತರ: a ತಾಮ್ರದ ಫಲಕದ ಮೇಲೆ ಸಾರರಿಕ್ತ ಸಲ್ಯೂರಿಕ್ ಆಮ್ಲ ಸುರಿದಾಗ: ಕಾಪರ್‌ಸಲ್ವೇಟ್ ನೀಲಿ ಬಣ್ಣದ ಹರಳುಗಳು ಉಂಟಾಗುವುದರ ಜೊತೆಗೆ ಹೈಡೋಜನ್ ಅನಿಲದು ಬಿಡುಗಡೆಯಾಗುತ್ತದೆ.
ತಾಮ್ರ + ಸೆಲ್ಯೂರಿಕ್ ಆಮ್ಲ + ತಾಮ್ರದ ಸಲ್ವೇಟ್ ಹೃದ್ರೋಜನ್
b. ಕಬ್ಬಿಣದ ಮೊಳೆಗಳನ್ನು ತಾಮ್ರದ ಸಲ್ವೇಟ್ ದ್ರಾವಣದಲ್ಲಿ ಇಟ್ಟಾಗ, ಕಬ್ಬಿಣವು ಹೆಚ್ಚು ಕ್ರಿಯಾಶೀಲವಾದ್ದರಿಂದ ತಾಮ್ರದ ಸಲ್ಪೇಟ್ ದ್ರಾವಣದಿಂದ ತಾದ್ರುವನ್ನು ಸ್ಥಾನಪಲ್ಲಟಗೊಳಿಸುತ್ತದೆ. ಈ ಕ್ರಿಯೆಯಲ್ಲಿ, ತಾಮ್ರದ ಸಲ್ವೇಟ್‌ನ ನೀಲಿ ಬಣ್ಣವು ಕ್ಷೀಣಿಸುತ್ತದೆ. ಮತ್ತು ತಾಮ್ರವು. ಕಬ್ಬಿಣದ ಮೊಳೆಯಮೇಲೆ ಶೇಖರಣೆಯಾಗುತ್ತದೆ.
ಕಬ್ಬಿಣ + ತಾಮ್ರದ ಸಲ್ಪೇಟ್ – ಕಬ್ಬಿಣದ ಸಲ್ಪೇಟ್ + ತಾಮ್ರ
3. ಉರಿಯುತ್ತಿರುವ ಕಲ್ಲಿದ್ದಲಿನ ಚೂರನ್ನು ಸಲೋನಿ ತೆಗೆದುಕೊಂಡಳು ಮತ್ತು ಅದರಿಂದ ಬಿಡುಗಡೆಯಾದ ಅನಿಲವನ್ನು ಪ್ರನಾಳದಲ್ಲಿ ಸಂಗ್ರಹಿಸಿದಳು.
a. ಅನಿಲದ ಸ್ವರೂಪವನ್ನು ಆಕೆ ಹೇಗೆ ಕಂಡುಕೊಳ್ಳುತ್ತಾಳೆ?
b. ಈ ಪ್ರಕ್ರಿಯೆಯಲ್ಲಿನ ಎಲ್ಲಾ ಕ್ರಿಯೆಗಳ ಪದ ಸಮೀಕರಣಗಳನ್ನು ಬರೆಯಿರಿ,
ಉತ್ತರ: ಈ ಅನಿಲವನ್ನು ಸಂಗ್ರಹಿಸಿರುವ ಪ್ರನಾಳದಲ್ಲಿ ಸ್ವಲ್ಪ ನೀರನ್ನು ಹಾಕಿ, ಪ್ರನಾಳದ ಬಾಯನ್ನು ಮುಚ್ಚಿ, ಚೆನ್ನಾಗಿ ಕಲಕಿ, ಕಲಕಿದ ನಂತರ, ದ್ರಾವಣವನ್ನು ಕೆಂಪು ಮತ್ತು ನೀಲಿ ಲಿಟ್ಮಸ್ ನಿಂದ ಪರೀಕ್ಷಿಸಿ, ಅದು ನೀಲಿ ಲಿಟ್ಮಸ್ ಕೆಂಪು ಬಣ್ಣಕ್ಕ ಪರಿವರ್ತಿಸುತ್ತದೆ. ಆದ್ದರಿಂದ, ಆ ಅನಿಲವು ಆಮ್ಲೀಯವಾಗಿದೆ ಎಂದು ತಿಳಿಯುತ್ತದೆ.
b. ಕಲ್ಲಿದ್ದಲು(ಕಾರ್ಬನ್) ಆಮ್ಲಜನಕದೊಂದಿಗೆ ವರ್ತಿಸಿ ಕಾರ್ಬನ್ ಡೈಆಕ್ಸೆಡ್‌ನ್ನು ಬಿಡುಗಡೆ ಮಾಡುತ್ತದೆ. ಕಲ್ಲಿದ್ದಲಿನಿಂದ ಬಂದ ಕಾರ್ಬನ್ + ಆಮ್ಲಜನಕ – ಕಾರ್ಬನ್ ಡೈಆಕ್ಸೆಡ್
ಕಾರ್ಬನ್ ಡೈಆಕ್ಸೆಡ್ ನೀರಿನೊಂದಿಗೆ ವರ್ತಿಸಿ ಕಾರ್ಬನಿಕ್ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ.
ಕಾರ್ಬನ್ ಡೈಆಕ್ಸೆಡ್ + ನೀರು → ಕಾರ್ಬನಿಕ್ ಆಮ್ಲ
4. ಒಂದು ದಿನ ರೀಟಾ ತನ್ನ ತಾಯಿಯ ಜೊತೆ ಆಭರಣದ ಅಂಗಡಿಗೆ ಹೊರಟಳು. ಅವಳ ತಾಯಿಯು ಅಕ್ಕಸಾಲಿಗನಿಗೆ ಹಳೆಯ ಚಿನ್ನದ ಆಭರಣಗಳನ್ನು ಪಾಲಿಶ್ ಮಾಡಲು ಕೊಡುತ್ತಾರೆ. ಮರುದಿನ ಆ ಆಭರಣಗಳನ್ನು ಅಕ್ಕಸಾಲಿಗನಿಂದ ಮರಳಿ ಪಡೆಯುತ್ತಾರೆ. ಆಭರಣಗಳ ತೂಕ ಸ್ವಲ್ಪ ಕಡಿಮೆ ಇದ್ದುದನ್ನು ಕಂಡುಕೊಳ್ಳುತ್ತಾರೆ. ಆಭರಣಗಳ ತೂಕ ಕಡಿಮೆಯಾಗಲು ಕಾರಣವೇನೆಂದು ನೀವು ಹೇಳುವಿರಾ?
ಉತ್ತರ: ಚಿನ್ನದ ಆಭರಣಗಳನ್ನು ಪಾಲಿಶ್ ಮಾಡಲು, ಅದನ್ನು ಹೃದ್ರೋಕ್ಲೋರಿಕ್ ಅನ್ನು ಮತ್ತು ನೈಟ್ರಿಕ್ ಆಮ್ಲಗಳ ಮಿಶ್ರಣವಾದ ಅಕ್ಟರೀಜಿಯಾದಲ್ಲಿ ಅದ್ದಲಾಗುತ್ತದೆ. ಇದರಿಂದಾಗಿ ಆಭರಣದ ಹೊರ ಪದರವು ಕರಗಿ, ಹೊಳೆಯುತ್ತಿರುವ ಒಳಗಿನ ಪದರವು ಕಾಣತೊಡಗುತ್ತದೆ.
5. ಕುಟ್ಯತೆ ಎಂದರೇನು?
ಉತ್ತರ: ಲೋಹಗಳನ್ನು ಬಡಿದು ತಳ ಹಾಳೆಗಳನ್ನಾಗಿಸುವ ಗುಣಕ್ಕೆ ಕುಟ್ಯತೆ ಎನ್ನುವರು.
6. ತನ್ಯತೆ ಎಂದರೇನು?
ಉತ್ತರ: ಲೋಹಗಳನ್ನು ತಂಸಿಗಳನ್ನಾಗಿ ಮಾರ್ಪಡಿಸುವ ಗುಣವನ್ನು ತನ್ಯತೆ ಎನ್ನುವರು.
7. ಲೋಹಗಳೆಂದರೇನು? ಉದಾಹರಿಸಿ.
ಉತ್ತರ: ಕೆಲವು ವಸ್ತುಗಳನ್ನು ಕಠಿಣ, ಹೊಳಪುಳ್ಳ, ಕುಟ್ಯ, ತನ್ಯ, ಶಾಬ್ಬನ ಹಾಗೂ ಶಾಖ ಮತ್ತು ವಿದ್ಯುತ್ ಉತ್ತಮ ವಾಹಕಗಳೆಂದು ಕರೆಯಬಹುದು, ಸಾಮಾನ್ಯವಾಗಿ ಈ ಲಕ್ಷಣಗಳನ್ನು ಹೊಂದಿರುವ ವಸ್ತುಗಳನ್ನು ಲೋಹಗಳು ಎಂದು ಕರೆಯುವರು. ಉದಾಹರಣೆ: ತಾಮ್ರ, ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ ಇತ್ಯಾದಿ,
8. ಆಲೋಹಗಳು ಎಂದರೇನು? ಉದಾಹರಿಸಿ
ಉತ್ತರ: ಕೆಲವು ವಸ್ತುಗಳು ಮೃದುವಾಗಿದೆ ಮತ್ತು ನೋಡಲು ಮಸುಕಾಗಿ ಕಾಣುತ್ತದೆ, ಇವುಗಳನ್ನು ಸುತ್ತಿಗೆಯಿಂದ ಬಡಿದಾಗ ಪುಡಿಯಾಗುತ್ತದೆ. ಅವುಗಳಿಗೆ ಶಾಬ್ದನ ಗುಣವಿಲ್ಲ ಹಾಗೂ ಶಾಖ ಮತ್ತು ವಿದ್ಯುತ್‌ನ ದುರ್ಬಲ ವಾಹಕಗಳಾಗಿವೆ. ಈ ವಸ್ತುಗಳನ್ನು ಆಲೋಹಗಳು ಎಂದು ಕರೆಯುವರು.
ಉದಾಹರಣೆ: ಕಲ್ಲಿದ್ದಲು, ಸಲ್ಫರ್, ಕಾರ್ಬನ್, ಆಕ್ಸಿಜನ್, ಫಾಸ್ಪರಸ್ ಇತ್ಯಾದಿ,
9. ತಾಮ್ರದ ಪಾತ್ರೆಗಳನ್ನು ಹೆಚ್ಚು ದಿನಗಳ ಕಾಲ ತೇವಾಂಶಯುಕ್ತ ಗಾಳಿಗೆ ತೆರೆದಿಟ್ಟಾಗ, ಅದು ಮುಸುಕಾದ ಹಸಿರು ಲೇಪನ ಪಡೆದುಕೊಳ್ಳುತ್ತದೆ. ಏಕೆ?
ಉತ್ತರ: ತಾದ್ರುದ ಪಾತ್ರೆಗಳನ್ನು ಹೆಚ್ಚು ದಿನಗಳ ಕಾಲ ತೇವಾಂಶಯುಕ್ತ ಗಾಳಿಗೆ ತೆರೆದಿಟ್ಟಾಗ, ಅದು ಮಸುಕಾದ ಹಸಿರು ಲೇಪನ ಪಡೆದುಕೊಳ್ಳುತ್ತದೆ, ಏಕೆಂದರೆ, ತಾಮ್ರವು ಗಾಳಿಯಲ್ಲಿನ ನೀರು, ಕಾರ್ಬನ್ ಡೈಆಕ್ಸೆಡ್ ಮತ್ತು ಆಕ್ಸಿಜನ್ ನೊಂದಿಗೆ ವರ್ತಿಸಿ ಹಸಿರು ಬಣ್ಣದ ತಾಮ್ರದ ಹೈಡ್ರಾಕ್ಸೆಡ್ [Cu(OH) 2] ಮತ್ತು ತಾಮ್ರದ ಕಾರ್ಬೋನೇಟ್‌ನ ಮಿಶ್ರಣವನ್ನು ಉತ್ಪತ್ತಿ ಮಾಡುತ್ತದೆ.
2Cu + H2O + CO₂+02 Cu(OH)2 + CuCO3
10.ಲೋಹ ಮತ್ತು ಲೋಹಗಳು ಅಣುಗಳೊಂದಿಗೆ ಹೇಗೆ ವರ್ತಿಸುತ್ತದೆ?
ಉತ್ತರ: ಸಾಮಾನ್ಯವಾಗಿ ಲೋಹಗಳು ಆಮ್ಲುಗಳೊಂದಿಗೆ ವರ್ತಿಸುತ್ತವೆ ಮತ್ತು ಉತ್ಪತ್ತಿಯಾದ ಹೈಡ್ರೋಜನ್ ಅನಿಲ ‘ಪಾಪ್’ ಶಬ್ದದೊಂದಿಗೆ ಉರಿಯುತ್ತದೆ. ಆದರೆ, ಸಾಮಾನ್ಯವಾಗಿ ಆಲೋಹಗಳು ಆಮ್ಲಗಳೊಂದಿಗೆ ವರ್ತಿಸುವುದಿಲ್ಲ.
11. ಲೋಹ ಪ್ರತ್ಯಾಮ್ಲಗಳೊಂದಿಗೆ ಹೇಗೆ ವರ್ತಿಸುತ್ತವೆ?
ಉತ್ತರ: ಕೆಲವು ಲೋಹಗಳು ಪ್ರತ್ಯಾಮ್ಲಗಳೊಂದಿಗೆ ವರ್ತಿಸಿ ಹೈಡ್ರೋಜನ್ ಅನಿಲವನ್ನು ಕೊಡುತ್ತವೆ.
12. ಲೋಹದ ಉಪಯೋಗಗಳು ತಿಳಿಸಿ,
ಉತ್ತರ: ಲೋಪಗಳನ್ನು ಯಂತ್ರೋಪಕರಣಗಳು, ಸ್ವಯಂಚಾಲಿತ ವಾಹನಗಳು, ವಿಮಾನಗಳು, ರೈಲುಗಳು, ಉಪಗ್ರಹಗಳು, ಕಾರ್ಖಾನೆಗಳ ಉಪಕರಣಗಳು, ಅಡುಗೆ ಪಾತ್ರೆಗಳು, ನೀರಿನ ಬಾಯ್ಸರ್‌ಗಳು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ.
13. ಆಲೋಹದ ಉಪಯೋಗಗಳು ತಿಳಿಸಿ.
ಉತ್ತರ: 01] ಅಲೋಹಗಳು ನಮ್ಮ ಜೀವನಕ್ಕೆ ಅತ್ಯವಶ್ಯಕವಾಗಿದೆ…. ಜೀವಿಗಳು ಉಸಿರಾಡಲು ಆಲೋಹವನ್ನು ಬಳಸುತ್ತದೆ.
02] ಆಲೋಹಗಳನ್ನು ಸಸ್ಯಗಳ ಬೆಳವಣಿಗೆ ಹೆಚ್ಚಿಸಲು ರಾಸಾಯನಿಕ ಗೊಬ್ಬರಗಳ ತಯಾರಿಕೆಯಲ್ಲಿ ಬಳಸುತ್ತಾರೆ.
031 ಆಲೋಹವನ್ನು ನೀರಿನ ಶುದ್ದೀಕರಣ ಪ್ರಕ್ರಿಯೆಯಲ್ಲಿ ಬಳಸುವರು. ದ್ರಾಮಣವು ಆಲೋಹವಾಗಿದೆ.
04) ಗಾಯಗಳ ಚಿಕಿತ್ಸೆಯಲ್ಲಿ ಬಳಸುವ ನೇರಳೆ ಬಣ್ಣದ ಸೋಂಕು ನಿವಾರಕ
05) ಪಟಾಕಿ ತಯಾರಿಸಲು ಆಲೋಹಗಳನ್ನು ಬಳಸುವರು.
FAQ
ಉತ್ತರ: ಕೆಲವು ಲೋಹಗಳು ಪ್ರತ್ಯಾಮ್ಲಗಳೊಂದಿಗೆ ವರ್ತಿಸಿ ಹೈಡ್ರೋಜನ್ ಅನಿಲವನ್ನು ಕೊಡುತ್ತವೆ.
ಉತ್ತರ: ಲೋಹಗಳನ್ನು ಬಡಿದು ತಳ ಹಾಳೆಗಳನ್ನಾಗಿಸುವ ಗುಣಕ್ಕೆ ಕುಟ್ಯತೆ ಎನ್ನುವರು.
ಇತರೆ ವಿಷಯಗಳು :
8th Standard Kannada Text Book Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.