8ನೇ ತರಗತಿ ಯಶೋಧರೆ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Standard Yashodhare Kannada Notes Question Answer Mcq Pdf Download in Kannada Medium Karnataka State Syllabus 2024, Kseeb Solutions For Class 8 Kannada Chapter 6 Notes 8th Class Kannada 6th Lesson Notes Pdf Yashodhare Kannada Question Answer Kannada Deevige 8th Yashodhare, Yashodhare Class 8 8th Class Kannada 6th Chapter Notes
Yashodhare Kannada 8th Standard Question Answer
ಗದ್ಯ ಭಾಗ – 06
ಪಾಠದ ಹೆಸರು : ಯಶೋಧರೆ
ಕೃತಿಕಾರರ ಹೆಸರು : ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕೃತಿಕಾರರ ಪರಿಚಯ :
ಕನ್ನಡ ಸಾಹಿತ್ಯ ಲೋಕದಲ್ಲಿ ‘ಸಣ್ಣಕಥೆಗಳ ಜನಕ’ ರೆಂದೇ ಖ್ಯಾತಿಪಡೆದು, ‘ಶ್ರೀನಿವಾಸ’ ಕಾವ್ಯನಾಮದಿಂದ ಹೆಸರಾಂತ ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ ೬-೬-೧೮೯೧ ರಲ್ಲಿ ಜನಿಸಿದರು. ಇವರು ಕಾವ್ಯ, ನಾಟಕ, ಕಾದಂಬರಿ ವಿಮರ್ಶೆ – ಹೀಗೆ ಕನ್ನಡ
ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಇವರ ಸಣ್ಣಕಥೆಗಳು ಒಟ್ಟು ಹದಿಮೂರು ಸಂಪುಟಗಳಲ್ಲಿ ಪ್ರಕಟವಾಗಿವೆ. `ಗೌತಮಿ ಹೇಳಿದ ಕಥೆ’, `ಸಾರಿಪುತ್ರನ ಕೊನೆಯ ದಿನಗಳು’, `ಕುಚೇಲನ ಭಾಗ್ಯ, `ಹೇಮಕೂಟದಿಂದ ಬಂದ ಮೇಲೆ’, `ಚಿಕವೀರರಾಜೇಂದ್ರ ಮೊದಲಾದವು ಪ್ರಮುಖ ಕೃತಿಗಳು. ಇವರ ಚಿಕ್ಕವೀರರಾಜೇಂದ್ರ ಕೃತಿಗೆ 19830 ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇವರು6 -6-1986 ೬ರಲ್ಲಿ ನಿಧನರಾದರು. ಪ್ರಸ್ತುತ ಗದ್ಯಭಾಗವನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಯಶೋ್ದರೆ ’ ನಾಟಕದಿಂದ ಸಂಪಾದಿಸಿ ನಿಗದಿಪಡಿಸಿದೆ.
ಪೂರ್ವ ಕಥೆ ಮತ್ತು ನಾಟಕದ ಸಾರಾಂಶ
ಸಿದ್ಧಾರ್ಥ ರಾಜ್ಯವನ್ನು ಪರಿತ್ಯಾಗ ಮಾಡಿ ಹೋಗಿ ಹತ್ತು ವರ್ಷಗಳು ಕಳೆದಿವೆ. ತಂದೆಯನ್ನೇ ಕಾಣದ ಮಗು
ರಾಹುಲನಿಗೂ ಹತ್ತು ವರ್ಷಗಳಾಗಿವೆ. ಇತ್ತ ಕಪಿಲವಸ್ತುವಿನ ಅರಮನೆಯ ಅಂತಃಪುರದಲ್ಲಿ ಯಶೋಧರಾ ಒಬ್ಬಳೇ
ಚಿಂತಾಮಗ್ನಳಾಗಿ ಸಿದ್ಧಾರ್ಥನ ಪಠವನ್ನು ನೋಡುತ್ತಾ ಕಣ್ಣೀರಿಡುತ್ತಾ ಕುಳಿತಿರುತ್ತಾಳೆ. ದುಃಖಿಸಲು ಕಾರಣವನ್ನು
ಆಕೆಯ ಸಖಿ ಅಂಬಿಕೆ ಕೇಳಲಾಗಿ ಹಿಂದಿನ ರಾತ್ರಿ ಅಮಂಗಳವನ್ನು ಸೂಚಿಸುವ ಕನಸೊಂದನ್ನು ಕಂಡೆನೆಂದು
ಹೇಳುತ್ತಾ, ಹತ್ತು ವರ್ಷಗಳ ಹಿಂದೆ ಇಂಥಹ ಕನಸೊಂದನ್ನು ಕಂಡು ಎಚ್ಚರವಾಗಿ ನೋಡಿದರೆ ನನ್ನ ಮನದನ್ನ
ಇರದೇ ರಾಜ್ಯ ತೊರೆದು ಹೋಗಿದ್ದ. ಇಂದು ಕನಸಿನಿಂದ ಎಚ್ಚೆತ್ತು ನೋಡಿದರೆ ಮಗ ಇದ್ದಾನೆ. ಆದರೆ ಎಲ್ಲಿ ನನ್ನನ್ನು ತೊರೆದು ಹೋಗುತ್ತಾನೆಂದು ವ್ಯಾಕುಲತೆಗೆ ಒಳಗಾಗಿರುವುದಾಗಿ ತಿಳಿಸುತ್ತಾಳೆ. ಅಭ್ಯಾಸಕ್ಕೆ ಹೋಗಿದ್ದ ರಾಹುಲನು ಬಂದು ಅಮ್ಮ ತಂದೆಯನ್ನು ನಾನು ನೋಡಿಯೇ ಇಲ್ಲ, ಆತನನ್ನು ಕರೆತರಲು ನಾನು ಹೋಗುವುದಾಗಿ ತಿಳಿಸುತ್ತಾ ಇದಕ್ಕೆ ತಾತನ ಅನುಮತಿ ಪಡೆದಿರುವುದಾಗಿ ತಿಳಿಸುತ್ತಾನೆ. ಇದರಿಂದ ಆತಂಕಗೊಂಡು ರಾಜನನ್ನು ಕರೆಯಲು ಸಖಿ ಅಂಬಿಕೆಯನ್ನು ಕಳಿಸುತ್ತಾಳೆ. ರಾಜ ಅಂತಃಪುರಕ್ಕೆ ಅಂಬಿಕೆಯೊಂದಿಗೆ ಆಗಮಿಸುತ್ತಾನೆ.
ರಾಜನು ಅರಮನೆಗೆ ಬಂದಾಗ ಯಶೋಧರೆಯು ಎದ್ದು ಬಂದು ನಮಸ್ಕರಿಸಿ, “ಬಹಳ ದಿನಗಳಿಂದ ಬೇಡುತ್ತಿದ್ದೇನೆ. ನಿಮ್ಮ ಸೋದರಿಯ ಮಗಳೆಂದು ಬಾಲ್ಯದಲ್ಲಿಯೇ ನನ್ನ ಕರೆದುಕೊಂಡು ಬಂದು ಸುಖವಾಗಿ ಬೆಳೆಸಿದ್ದೀರಿ, ಮನೆಯ ಸೊಸೆಯಾಗಿ ಮಾಡಿಕೊಂಡಿದ್ದೀರಾ, ನನ್ನ ಬಾಳನ್ನು ಬೆಳಗಿಸಿದ್ದೀರ, ನಾನು ಕನಸ್ಸಿನಲ್ಲೂ ಕಾಣದ ಸುಖವನ್ನು ಅನುಭವಿಸುವಂತೆ ಮಾಡಿದ್ದಿರ. ನಿಮ್ಮ ಐಶ್ವರ್ಯದಲ್ಲಿ ಸ್ವಲ್ಪವೂ ಇಲ್ಲ ಅನ್ನದೇ ಎಲ್ಲವನ್ನ ಕೊಟ್ಟಿದ್ದೀರ. ಈಗ ಮತ್ತೋಮ್ಮೆ ನನ್ನ ಪತಿಯನ್ನು ಕೊಟ್ಟು ನನ್ನ ರಕ್ಷಿಸಿರಿ” ಎಂದು ಕೇಳಿಕೊಳ್ಳುತ್ತಾಳೆ. ಆಗ ರಾಜನು ನಾನು ಏನು ಮಾಡಬೇಕೆಂದು ಕೇಳುತ್ತಿರುವೆ? ಎಂದಾಗ ಯಶೋಧರೆಯು “ರಾಹುಲನು ತಂದೆಯನ್ನು ಕರೆ ತರಲು
ಹೋಗುತ್ತೇನೆಂದಾಗ ನೀವು ಒಪ್ಪಿಗೆ ಕೊಟ್ಟಿದ್ದಿರಂತೆ, ನಾನು ಮೊದಲೆ ನಿಮ್ಮ ಕೇಳಿಕೊಂಡು ಇದ್ದೇನೆ ನನ್ನ ಪತಿ ಇರುವ ಜಾಗಕ್ಕೆ ನಾನು ಹೋಗುತ್ತೇನೆ. ರಾಹುಲನು ಇಲ್ಲೇ ಇರಲಿ” ಎಂದು ಕೇಳುತ್ತಾಳೆ. ಆಗ ರಾಜನು “ಯಶೋಧರೆ, ರಾಹುಲನು ತನ್ನ ತಂದೆಯನ್ನು ಕರೆ ತರುತ್ತೇನೆ ಎಂದಾಗ ಕೇವಲ ತಮಾಷೆಗಾಗಿ ಆಗಬಹುದು ಎಂದೆನು. ಇಂತಹ ಕೆಲಸಕ್ಕೆ ಗುಪ್ತಚಾರರನ್ನು ಕಳುಹಿಸಬೇಕು. ಚಿಕ್ಕ ಬಾಲಕನಾದ ರಾಹುಲನನ್ನು ಯಾರಾದರೂ ಕಳುಹಿಸುತ್ತಾರ?” ಎಂದ ತಕ್ಷಣವೇ ‘ಏನು ತಾತ, ಮೊದಲು ತಂದೆಯನ್ನ ಕರೆತರಲು ಹೋಗು ಎಂದು ಹೇಳಿದ್ದವರು ಈಗ ಈ ರೀತಿ ಹೇಳುತ್ತಿದ್ದೀರ? ದೊಡ್ಡವರು ನನಗೊಂದು ರೀತಿ ತಾಯಿಗೆ ಮತ್ತೊಂದು ರೀತಿ ಹೇಳಬಹುದೇ?” ತಂದೆ ಬರದಿದ್ದರೆ ನನ್ನ ತಾಯಿ ಅಳುತ್ತಲೇ ಇರುವಳು ಅದಕ್ಕಾಗಿ ನಾನು ಹೋಗಿ ಕರೆ ತರುತ್ತೇನೆ” ಎಂದು ಹೇಳುತ್ತಾನೆ.
ಯಶೋಧರೆಯ ಕನಸಿನ ಬಗ್ಗೆ ಅಂಬಿಕೆಯಿಂದ ಕೇಳಿ ತಿಳಿದ ರಾಜನು “ಯಶೋಧರೆಯ ಪತಿ ಸಿದ್ಧಾರ್ಥನು ಮನೆ ಬಿಟ್ಟು ಹೋಗಿರುವ ನೋವೇ ಸಾಕಾಗಿದೆ, ಅದರ ಜೊತೆಗೆ ಕೆಟ್ಟ ಕನಸು ಬೇರೆ ಯಶೋಧರೆಗೆ ಹಿಂಸೆ ಪಡಿಸುತ್ತಿದೆ” ಎಂದು ಹೇಳಿದನು. ಸಿದ್ಧಾರ್ಥನು ಹತ್ತು ವರ್ಷಗಳ ಹಿಂದೆ ಹೆಂಡತಿ, ಮಕ್ಕಳು, ಅರಮನೆ ಎಲ್ಲವನ್ನು ಬಿಟ್ಟು ಮಧ್ಯೆ ರಾತ್ರಿಯಲ್ಲಿ ಜ್ಞಾನ ಸಂಪಾದಿಸಲು ಹೊರಟು ಹೋಗಿದ್ದನು. ಅಂದಿನಿಂದ ಇಂದಿನವರೆಗೂ ಯಶೋಧರೆಯು ಅರಮನೆಯಲ್ಲಿದ್ದರೂ ಕೂಡ ಸನ್ಯಾಸಿಯಂತೆ ಬದುಕುತ್ತಿದ್ದಳು. ಅಷ್ಟೆ ಅಲ್ಲ “ನಾನೂ ಸಹ ಪತಿಯಂತೆ ಸನ್ಯಾಸವನ್ನು ಸ್ಪೀಕರಿಸಿ ಪತಿಯ ಬಳಿಗೆ ಹೋಗುವೆನು. ಅವರೊಡನೆ ಸನ್ಯಾಸಿಯಂತೆಯೇ ಜೀವನ ನಡೆಸುವೆನು” ಎಂದು ಹೇಳುತ್ತಾಳೆ. ಆದ್ದರಿಂದ ರಾಜನು ಈಗ ನೀನಿರುವ ರೀತಿ ಸನ್ಯಾಸವಲ್ಲವೇ ಎಂದು ಹೇಳಿದನು. ನಿನ್ನ ದುಃಖವ ನಾನು ಕಾಣೆನೇ ? ಏಳಮ್ಮ, ಯಶೋಧರಾ ಎದ್ದು ಕುಳಿತುಕೊಂಡು ನಾನೇ ಹೋಗುವೆನು ಎಂದಾಗ ಸನ್ಯಾಸಿಯಾದವನು ಸತಿಯ ನೋಡುವ ಮಾತು ಸಂಪ್ರದಾಯಕೆ ವಿರೋಧ. ಎಂದು ರಾಜನು ಹೇಳುತ್ತಾನೆ. ಈ ದಿನವೇ ಗುಪ್ತಚಾರರನ್ನು ಕಳುಹಿಸುತ್ತೇನೆ. ಎಂದು ರಾಹಿಲನು ನಾನೇ ಹೋಗುತ್ತೇನೆ ಎಂದು ಹಠ ಹಿಡಿಯುತ್ತಾನೆ.
ಯಶೋಧರೆ ಅಣ್ಣಯ್ಯ ಮೊದಲು ಗುಪ್ತಚಾರರು ಹೋಗಿ ಅವರಿಚ್ಛೆಯನು ತಿಳಿದು ಮರಳಲಿ. ಎಂದು ಹೇಳುತ್ತಾಳೆ. ನಿಮಗೇನು ಅಣ್ಣನನು ನೋಡಿದ್ದೀರ, ನೋಡಬೇಕೆಂದಾಸೆ ಅಷ್ಟು ಬಲವಾಗಿಲ್ಲ. ನಾನವರ ನೋಡಿಲ್ಲ. ಇನ್ನೆಷ್ಟು ದಿನಕ್ಕೆ ನೋಡುವುದು? ಯಶೋಧರೆಯು ಮೊದಲು ಬೇಹಿನ ಜನರು ಹೋಗಿ ಅವರಿಚ್ಛೆಯನು ತಿಳಿದು ಮರಳಲಿ ಎಂದಾಗ ಬೇಹಿನವರನ್ನು ಕಳುಹಿಸಲು ರಾಹುಲನು ಇಷ್ಟಪಡಲಿಲ್ಲ . ಏಕೆಂದರೆ ತಾನೇ ತನ್ನ ತಂದೆಯನ್ನು ಹುಡುಕಿ ಮಾತನಾಡಿಸಿ ಅರಮನೆಗೆ ಕರೆತರಬೇಕೆಂಬುದು ರಾಹುಲನ ಆಸೆಯಾಗಿತ್ತು, ಇದನ್ನು ಮೊದಲೇ ತಿಳಿದ ರಾಜನು ಮೊಮ್ಮಗನಾದ ರಾಹುಲನಿಗೆ ಅನುಮತಿಯನ್ನು ಕೊಟ್ಟಿದ್ದನು. ಬೇಹಿನವರು ಹೋಗಿ ಬಂದಮೇಲೆ ಮತ್ತೆ ಹೋಗುವುದಕ್ಕೆ ನಾನೊಲ್ಲೆ. ನಾನೀಗಲೇ ಹೋಗಬೇಕು. ನಿಮಗೇನು ತಂದೆಯನ್ನು ನೋಡಿದ್ದಿರ, ನೋಡಬೇಕೆಂದಾಸೆ ಅಷ್ಟು ಬಲವಾಗಿಲ್ಲ. ನಾನವರ ನೋಡಿಲ್ಲ. ಇನ್ನೆಷ್ಟು ದಿನಕೆ ನೋಡುವುದು. ಬೇಹಿನವರನ್ನು ಕಳುಹಿಸುವುದಾಗಿ ಹೇಳಿದಾಗ ರಾಹುಲನಿಗೆ ನಿರಾಶೆಯಾಯಿತು. ಕೊನೆಗೆ ಅವರೊಂದಿಗೆ ತಾನು ಹೋಗಿ ಬರುವುದಾಗಿ ಹಠ ಅಮ್ಮಾಜಿ, ನಿನಗೆ ಭಯ ಬೇಡಮ್ಮ, ನಾ ಮರಳಿ ಬರುವೆನು. ಎಂದು ಹೇಳುತ್ತಾನೆ. ಕನಸು ನಿಜವಾಯಿತು. ಕನಸಿನಲಿ ಕಂಡ ಹುಲಿ ನಿಜದೊಳೆದುರಿಗೆ ಬಂದು, ಕೊಡು ನಿನ್ನ ಜೀವವನು, ಎಂದು ಕೇಳುತಲಿಹುದು. ಎಂದು ಯಶೋಧರೆ ದುಃಖಿಸುವಳು.
ರಾಹುಲನು ತಾಯಿ ಮತ್ತು ತಾತನ ಅನುಮತಿಯನ್ನು ಪಡೆದು ಅಂಬಿಕೆಯ ಜೊತೆಗೆ ತನ್ನ ತಂದೆಯನ್ನು ಕರೆ ತರಲು ಹೊರಡುತ್ತಾನೆ. ಆಗ ರಾಜನು “ಯಶೋಧರೆ ಅಂಬಿಕೆಯ ಜೊತೆಯಲ್ಲಿ ರಾಹುಲನ ಕಳುಹಿಸಿದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಧೈರ್ಯವಾಗಿರು” ಎಂದು ರಾಜನು ಹೇಳಿದಾಗ ಬಾಲಕನು ತನ್ನ ತಂದೆಯನೋಡಬೇಕೆಂದು ಆಶಿಸಲು ಬೇಡವೆನ್ನುವುದು ಸರಿಯೇ, ಕಳುಹಿಸುವುದು ಸರಿ ಎಂದರೆ ಕಳುಹಿರಿ ಬೇಡ ಎಂದುಹೇಳುವುದಿಲ್ಲ ಎಂದು ಯಶೋಧರೆ ಹೇಳುವಳು. ರಾಹುಲನು ಅಮ್ಮಾ, ಎಷ್ಟು ಒಳ್ಳೆಯವಳಮ್ಮಾ. ಅಂಬಿಕೇ, ನಡೆ, ಹೋಗಿ ಅಣ್ಣನನು ಕರೆತರೋಣ. ತಾತಾ ನಾನು ಹೋಗಿ ಬರುತ್ತೇನೆ. ? ಅಮ್ಮ ನಾವು ಹೋಗಿ ಬರುತ್ತೇವೆ. ಎಂದು ಅನುಮತಿಯನ್ನು ಪಡೆದು ಹೊಡಲು ಸಿದ್ಧರಾಗುವರು. ಆಗ ಯಶೋಧರೆ ನನ್ನ ಮರೆಯದಿರಣ್ಣ. ನಿಮ್ಮ ತಂದೆ ನಮ್ಮ ಮರೆತರು, ನನ್ನ ಬದುಕೆಲ್ಲ ಬಯಲಾಯ್ತು. ಅವರು ಬಿಟ್ಟಂತೆ ನೀನೆನ್ನ ಕೈ ಬಿಡಬೇಡ. ಹೋಗಿಬಾ. ಹೋಗಿಬಾ. ಎಂದು ಹೇಳುತ್ತಾಳೆ. ಆದರೆ ನನ್ನ ಮರೆಯದಿರು ಅಂಬಿಕೆ ಎಂದು ಹೇಳಿ , ನಂತರ ಮರೆತರು ತಪ್ಪಿಲ್ಲ ಬಿಡಿ ಎಲ್ಲಾ ನನ್ನ ವಿಧಿ. ಎಂದು ವ್ಯಥೆ ಪಡುತ್ತಾಳೆ ಆಗ ರಾಜ ನಿನ್ನ ವಿಧಿ ಕೆಟ್ಟುದೆಂದೆಣಿಸದಿರು ನಿನ್ನರಸನೀಗ ಲೋಕಕೆ ಪೂಜ್ಯನೆನಿಸಿಹನು. ರಾಜ್ಯವಾಳುವುದೆಂಬ ಕಿರಿಯ ಹಿರಿಮೆಯನು. ಜಗದ ಜೀವಗಳ ಉದ್ಧರಿಪ ಹಿರಿಹಿರಿಮೆಯನು ಅಳವಟ್ಟು, ರಾಜ ಅಧಿರಾಜ ವೃಂದಗಳಿಂದ ಓಲೈಸಿಕೊಳ್ಳುತ್ತಾ ಚಕ್ರಾಧಿಪತಿಯಂತೆ ನಿಂದಿಹನು. ಏಕೆ ಚಿಂತಿಸುವೆ ಎಂದು ಸಮಾಧಾನ ಪಡಿಸುವನು. ಯಶೋಧರೆಯ ವಿಧಿಯ ಬಗ್ಗೆ ರಾಜನು “ವಿಧಿ ಲಿಖಿತವೆಂದು ಸಂಕಟ ಪಡಬೇಡಮ್ಮ ನಿನ್ನ ವಿಧಿ ಕೆಟ್ಟದೆಂದು ಯೋಚಿಸದಿರು, ನಿನ್ನ ಅರಸನು ಈಗ ಇಡೀ ಲೋಕಕ್ಕೆ ಪೂಜ್ಯನೆನಿಸಿದ್ದಾನೆ.
ರಾಜ್ಯವನ್ನಾಳುವ ಬರಿ ಕಿರಿಯ ಹಿರಿಮೆಯನ್ನು ಬಿಟ್ಟು ಇಡೀ ಜಗತ್ತಿನ ಚಕ್ರವರ್ತಿಯಾಗಿ ಮೆರೆಯುತ್ತಿದ್ದಾನೆ. ಆದ್ದರಿಂದ ಚಿಂತಿಸಬೇಡ. ಹತ್ತು ವರ್ಷಗಳ ನಿಮ್ಮ ತಪಸ್ಸು ಖಂಡಿತ ವ್ಯರ್ಥವಾಗದು. ಯಜ್ಞ ಯಗಾದಿಗಳಲ್ಲಿ ಪುರೋಹಿತರು ಹೇಳುವ ಮಂತ್ರದಿಂದ ದೇವರೇ ಧರೆಗಿಳಿದಂತೆ ನಮ್ಮ ಈ ಬಾಲಕ ತನ್ನ ತಂದೆಯನ್ನು ಖಂಡಿತ ಕರೆತರುವನು. ಚಿಂತಿಸಬೇಡ” ಎಂದು ಹೇಳಿದನು. ರಾಹುಲನು ತಂದೆಯನ್ನು
ಕರೆತರಲು ಹೊರಡುವನು
ಪದಗಳ ಅರ್ಥ
ಆಣ್ಮ-ಒಡೆಯ, ಸ್ವಾಮಿ; ಆಶಿಸು-ಬಯಸು; ಉದ್ಗಾತೃ-ಋತ್ವಿಜ, ಯಜ್ಞದಲ್ಲಿ ಸಾಮಗಾನವನ್ನು ಹಾಡುವವನು;
ಎನಿತು-ಎಷ್ಟು; ಎಸಗಲಿ-ಆರ್ಶೀವದಿಸಲಿ; ಕವಿ-ಆವರಿಸು, ಮುತ್ತು; ಕಾನನ-ಕಾಡು, ಅರಣ್ಯ; ಚೇತನ-ಶಕ್ತಿ, ಚೈತನ್ಯ;
ತರಗು-ಕುಂದುವಿಕೆ, ಇರುಳು-ರಾತ್ರಿ; ತುಡುಕಿ-ಕಸಿದುಕೊಂಡು, ಕಿತ್ತುಕೊಳ್ಳು; ತೊಳಲು-ಚಿಂತೆಮಾಡು, ಶ್ರಮಪಡು;ಪರಿಪಾಲಿಸುರಕ್ಷಣೆ ಮಾಡು , ಕಾಪಾಡು; ಬೇಹು-ಗುಪ್ತಾಚಾರ; ಮಂಕು-ಬ್ರಾಂತಿ ; ವಿನೋದ – ಹಾಸ್ಯ, ಉತ್ಸುಕತೆ;
ವೃಂದ-ಸಮೂಹ, ಗುಂಪು; ಸಂದೇಹ-ಅನುಮಾನ; ಸತಿ-ಹೆಂಡತಿ; ಸಲಹುಕಾಪಾಡು; ಸುತೆ-ಮಗಳು; ಹವನಹೋಮ, ಯಜ್ಞ; ಹಸುಳೆ-ಮಗು;
ಅಭ್ಯಾಸ
ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಯಶೋಧರೆ ಮತ್ತೊಮ್ಮೆ ಯಾರನ್ನು ನೀಡಬೇಕೆಂದು ರಾಜನಲ್ಲಿ ಬೇಡುತ್ತಾಳೆ?
ಉತ್ತರ : ಯಶೋಧರೆ ಮತ್ತೊಮ್ಮೆ ಪತಿಯನ್ನು ತನಗೆ ನೀಡಬೇಕೆಂದು ರಾಜನಲ್ಲಿ ಬೇಡುತ್ತಾಳೆ.
2. ತಂದೆಯನ್ನು ಕರೆತರಲು ಹೋಗುವೆನೆಂದು ಹೇಳಿದವರಾರು?
ಉತ್ತರ : ತಂದೆಯನ್ನು ಕರೆತರಲು ರಾಹುಲ ಹೋಗುವೆನೆಂದು ಹೇಳಿದನು.
3. ರಾಜನಿಗೆ ಕನಸಿನ ವಿಚಾರವನ್ನು ತಿಳಿಸಿದವರಾರು?
ಉತ್ತರ : ರಾಜನಿಗೆ ಕನಸಿನ ವಿಚಾರವನ್ನು ಹೇಳಿದವಳು ಅಂಬಿಕೆ.
4. ಸಂಪ್ರದಾಯಕ್ಕೆ ವಿರುದ್ಧವಾದದ್ದು ಯಾವುದು?
ಉತ್ತರ : ಸನ್ಯಾಸಿಯಾದವನು ಸತಿಯನ್ನು ನೋಡುವುದು, ಮಾತನಾಡುವುದು ಸಂಪ್ರದಾಯಕ್ಕೆ
ವಿರೋಧವಾದದ್ದು.
5. ಈಗ ನೀನಿರುವ ಸ್ಥಿತಿ ಯಾವುದೆಂದು ರಾಜ ಹೇಳುತ್ತಾನೆ?
ಉತ್ತರ : “ಈಗ ನೀನಿರುವ ಸ್ಥಿತಿ ಸನ್ಯಾಸಿಯ ಸ್ಥಿತಿಯೇ” ಎಂದು ರಾಜ ಹೇಳುತ್ತಾನೆ.
ಆ. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.
1. ರಾಜನನ್ನು ಪೀಠದಲ್ಲಿ ಕುಳ್ಳಿರಿಸಿ ಯಶೋಧರೆ ಏನೆಂದು ವಿನಂತಿಸುತ್ತಾಳೆ?
ಉತ್ತರ : ರಾಜನನ್ನು ಪೀಠದಲ್ಲಿ ಕುಳ್ಳಿರಿಸಿ ಯಶೋಧರೆ “ಬಹಳ ದಿನಗಳಿಂದ ಬೇಡುತ್ತಿದ್ದೇನೆ. ನಿಮ್ಮ
ಸೋದರಿಯ ಮಗಳೆಂದು ಬಾಲ್ಯದಲ್ಲಿಯೇ ನನ್ನ ಕರೆದುಕೊಂಡು ಬಂದು ಸುಖವಾಗಿ ಬೆಳೆಸಿದ್ದೀರಿ, ಮನೆಯ ಸೊಸೆಯಾಗಿ ಮಾಡಿಕೊಂಡಿದ್ದೀರಾ, ನನ್ನ ಬಾಳನ್ನು ಬೆಳಗಿಸಿದ್ದೀರ, ನಾನು ಕನಸ್ಸಿನಲ್ಲೂ ಕಾಣದ ಸುಖವನ್ನು ಅನುಭವಿಸುವಂತೆ ಮಾಡಿದ್ದಿರ. ನಿಮ್ಮ ಐಶ್ವರ್ಯದಲ್ಲಿ ಸ್ವಲ್ಪವೂ ಇಲ್ಲ ಅನ್ನದೇ ಎಲ್ಲವನ್ನೂ ಕೊಟ್ಟಿದ್ದೀರ. ಈಗ ಮತ್ತೋಮ್ಮೆ ನನ್ನ ಪತಿಯನ್ನು ಕೊಟ್ಟು ನನ್ನ ರಕ್ಷಿಸಿರಿ” ಎಂದು ವಿನಂತಿಸುತ್ತಾಳೆ.
2. ಯಶೋಧರೆ ಮಂಡಿಯೂರಿ ನಮಸ್ಕರಿಸುತ್ತಾ ಏನು ಹೇಳುತ್ತಾಳೆ?
ಉತ್ತರ : ಯಶೋಧರೆಯ ಕನಸಿನ ಬಗ್ಗೆ ಅಂಬಿಕೆಯಿಂದ ಕೇಳಿ ತಿಳಿದ ರಾಜನು “ಯಶೋಧರೆಯ ಪತಿ
ಸಿದ್ಧಾರ್ಥನು ಮನೆ ಬಿಟ್ಟು ಹೋಗಿರುವ ನೋವೇ ಸಾಕಾಗಿದೆ, ಅದರ ಜೊತೆಗೆ ಕೆಟ್ಟ ಕನಸು ಬೇರೆ ಯಶೋಧರೆಗೆ
ಹಿಂಸೆ ಪಡಿಸುತ್ತಿದೆ” ಎಂದು ಹೇಳಿದನು. ಇಂದು ಇರುಳಾಗುತ್ತಿದೆ ಕನಸಿನ ಮೊಸಳೆ ಹಿಡಿದು ನನಗೆ ಇನ್ನೂ
ಯಾವ ನೋವು ಕೊಡುತ್ತದೆಯೋ! ಇನ್ನೆನಿತು ತೊಳಲಬೇಕೋ, ಭಯದಿಂದ ನನ್ನ ಚೇತನಗಳೆಲ್ಲ
ಕಲಕಿಹೋಗಿವೆ. ನನ್ನನುದ್ಧರಿಸಬೇಕು. ಎಂದು ಮಂಡಿಯೂರಿ ನಮಸ್ಕರಿಸುವಳು .
3. ರಾಜನು ಈಗ ನೀನಿರುವ ರೀತಿ ಸನ್ಯಾಸವಲ್ಲವೆ ಎನ್ನಲು ಕಾರಣವೇನು?
ಉತ್ತರ : ಸಿದ್ಧಾರ್ಥನು ಹತ್ತು ವರ್ಷಗಳ ಹಿಂದೆ ಹೆಂಡತಿ, ಮಕ್ಕಳು, ಅರಮನೆ ಎಲ್ಲವನ್ನೂ ಬಿಟ್ಟು ಮಧ್ಯೆ
ರಾತ್ರಿಯಲ್ಲಿ ಜ್ಞಾನ ಸಂಪಾದಿಸಲು ಹೊರಟು ಹೋಗಿದ್ದನು. ಅಂದಿನಿಂದ ಇಂದಿನವರೆಗೂ ಯಶೋಧರೆಯು
ಅರಮನೆಯಲ್ಲಿದ್ದರೂ ಕೂಡ ಸನ್ಯಾಸಿಯಂತೆ ಬದುಕುತ್ತಿದ್ದಳು. ಅಷ್ಟೆ ಅಲ್ಲ “ನಾನೂ ಸಹ ಪತಿಯಂತೆ
ಸನ್ಯಾಸವನ್ನು ಸ್ಪೀಕರಿಸಿ ಪತಿಯ ಬಳಿಗೆ ಹೋಗುವೆನು. ಅವರೊಡನೆ ಸನ್ಯಾಸಿಯಂತೆಯೇ ಜೀವನ ನಡೆಸುವೆನು” ಎಂದು ಹೇಳುತ್ತಾಳೆ . ಆದ್ದರಿಂದ ರಾಜನು ಈಗ ನೀನಿರುವ ರೀತಿ ಸನ್ಯಾಸವಲ್ಲವೇ ಎಂದು ಹೇಳಿದನು.
4. ಯಶೋಧರೆಯ ಆಂತರ್ಯದಲ್ಲಿರುವ ಸಂದೇಹವೇನು?
ಉತ್ತರ : ರಾಹುಲನು ‘ನಾನು ಹೋಗಿ ನನ್ನ ತಂದೆಯನ್ನು ಕರೆ ತರುತ್ತೇನೆ’ ಎಂದು ತಾತನ ಅಪ್ಪಣೆ
ಪಡೆದಿರು ವುದಾಗಿ ಹೇಳಿದಾಗ ಯಶೋಧರೆಗೆ ಗಾಬರಿಯಾಯಿತು. ಹತ್ತು ವರ್ಷಗಳ ಹಿಂದೆ ಪತಿ ಬಿಟ್ಟೋಹೋದಂತೆ ಎಲ್ಲಿ ತನ್ನ ಮಗನು ತನ್ನನ್ನು ಬಿಟ್ಟು ಹೊರಟು ಹೋಗುವನು. “ನನ್ನ ಪತಿಯನ್ನು ನೋಡುವಪುಣ್ಯವು ನನ್ನ ಕಣ್ಣುಗಳಿಗೆ ಇದೆಯೋ ಇಲ್ಲವೋ ತಿಳಿದಿಲ್ಲ, ಈಗ ಮಗನು ತಂದೆಯನ್ನು ನೋಡಬೇಕೆಂದು
ಬಯಸಲು ಬೇಡ ಎನ್ನುವುದು ಸರಿಯೇ?” ಎಂಬ ಸಂದೇಹ ಯಶೋಧರೆಯ ಆಂತರ್ಯದಲ್ಲಿ ಮೂಡಿತು.
ಇ. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯದಲ್ಲಿ ಉತ್ತರಿಸಿ.
1. ಬೇಹಿನವರನ್ನು ಕಳಿಸುವ ವಿಚಾರದಲ್ಲಿ ರಾಹುಲನ ಅಭಿಪ್ರಾಯವೇನು?
ಉತ್ತರ : ಯಶೋಧರೆಯು ಮೊದಲು ಬೇಹಿನ ಜನರು ಹೋಗಿ ಅವರಿಚ್ಛೆಯನು ತಿಳಿದು ಮರಳಲಿ
ಎಂದಾಗ ಬೇಹಿನವರನ್ನು ಕಳುಹಿಸಲು ರಾಹುಲನು ಇಷ್ಟಪಡಲಿಲ್ಲ. ಏಕೆಂದರೆ ತಾನೇ ತನ್ನ ತಂದೆಯನ್ನು
ಹುಡುಕಿ ಮಾತನಾಡಿಸಿ ಅರಮನೆಗೆ ಕರೆತರಬೇಕೆಂಬುದು ರಾಹುಲನ ಆಸೆಯಾಗಿತ್ತು, ಇದನ್ನು ಮೊದಲೇ
ತಿಳಿದ ರಾಜನು ಮೊಮ್ಮಗನಾದ ರಾಹುಲನಿಗೆ ಅನುಮಟೀಯನ್ನು ಕೊಟ್ಟಿದ್ದನು. ಬೇಹಿನವರು ಹೋಗಿ
ಬಂದಮೇಲೆ ಮತ್ತೆ ಹೋಗುವುದಕ್ಕೆ ನಾನೊಲ್ಲೆ. ನಾನೀಗಲೇ ಹೋಗಬೇಕು. ನಿಮಗೇನು ತಂದೆಯನ್ನು
ನೋಡಿದ್ದಿರ, ನೋಡಬೇಕೆಂದಾಸೆ ಅಷ್ಟು ಬಲವಾಗಿಲ್ಲ. ನಾನವರ ನೋಡಿಲ್ಲ. ಇನ್ನೆಷ್ಟು ದಿನಕೆ ನೋಡುವುದು. ಬೇಹಿನವರನ್ನು ಕಳುಹಿಸುವುದಾಗಿ ಹೇಳಿದಾಗ ರಾಹುಲನಿಗೆ ನಿರಾಶೆಯಾಯಿತು. ಕೊನೆಗೆ ಅವರೊಂದಿಗೆ
ತಾನು ಹೋಗಿ ಬರುವುದಾಗಿ ಹಠ ಹಿಡಿದನು.
2. ಯಶೋಧರೆಯ ವಿಧಿಯ ಬಗ್ಗೆ ರಾಜನು ಏನೆಂದು ಹೇಳಿದನು?
ಉತ್ತರ : ಯಶೋಧರೆಯ ವಿಧಿಯ ಬಗ್ಗೆ ರಾಜನು “ವಿಧಿ ಲಿಖಿತವೆಂದು ಸಂಕಟ ಪಡಬೇಡಮ್ಮ ನಿನ್ನ ವಿಧಿ
ಕೆಟ್ಟದೆಂದು ಯೋಚಿಸದಿರು, ನಿನ್ನ ಅರಸನು ಈಗ ಇಡೀ ಲೋಕಕ್ಕೆ ಪೂಜ್ಯನೆನಿಸಿದ್ದಾನೆ. ರಾಜ್ಯವನ್ನಾಳುವ ಬರಿ
ಕಿರಿಯ ಹಿರಿಮೆಯನ್ನು ಬಿಟ್ಟು ಇಡೀ ಜಗತ್ತಿನ ಚಕ್ರವರ್ತಿಯಾಗಿ ಮೆರೆಯುತ್ತಿದ್ದಾನೆ. ಆದ್ದರಿಂದ ಚಿಂತಿಸಬೇಡ.
ಹತ್ತು ವರ್ಷಗಳ ನಿಮ್ಮ ತಪಸ್ಸು ಖಂಡಿತ ವ್ಯರ್ಥವಾಗದು. ಯಜ್ಞ ಯಗಾದಿಗಳಲ್ಲಿ ಪುರೋಹಿತರು ಹೇಳುವ
ಮಂತ್ರದಿಂದ ದೇವರೇ ಧರೆಗಿಳಿದಂತೆ ನಮ್ಮ ಈ ಬಾಲಕ ತನ್ನ ತಂದೆಯನ್ನು ಖಂಡಿತ ಕರೆತರುವನು.
ಚಿಂತಿಸಬೇಡ” ಎಂದು ಹೇಳಿದನು.
ಈ. ಕೆಳಗಿನ ಹೇಳಿಕೆಗಳನ್ನು ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು.
1. “ಸೋದರಿಯ ಸುತೆಯೆಂದು ಎಳೆತನದಲೇ ನನ್ನ ಕರೆತಂದು ಸಾಕಿದಿರಿ”
ಆಯ್ಕೆ : ಈ ವಾಕ್ಯವನ್ನು ‘ಮಾಸ್ತಿ ವೆಂಕಟೇಶ್ ಅಯ್ಯಂಗಾರ್’ ಅವರು ರಚಿಸಿರುವ ‘ಯಶೋಧರೆ’
ನಾಟಕದಿಂದ ಆಯ್ದ ‘ಯಶೋಧರೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಈ ವಾಕ್ಯವನ್ನು ಯಶೋಧರೆ ತನ್ನ ಮಾವನವರಾದ ಶುದ್ಧೋದನ ರಾಜನಿಗೆ ಹೇಳಿದಳು.
ರಾಜನು ಅರಮನೆಗೆ ಬಂದಾಗ ಯಶೋಧರೆಯು ಎದ್ದು ಬಂದು ನಮಸ್ಕರಿಸಿ, “ಬಹಳ ದಿನಗಳಿಂದ
ಬೇಡುತ್ತಿದ್ದೇನೆ. ನಿಮ್ಮ ಸೋದರಿಯ ಮಗಳೆಂದು ಬಾಲ್ಯದಲ್ಲಿಯೇ ನನ್ನ ಕರೆದುಕೊಂಡು ಬಂದು ಸುಖವಾಗಿ
ಬೆಳೆಸಿದ್ದೀರಿ, ಮನೆಯ ಸೊಸೆಯಾಗಿ ಮಾಡಿಕೊಂಡಿದ್ದೀರಾ, ನನ್ನ ಬಾಳನ್ನು ಬೆಳಗಿಸಿದ್ದೀರ” ಎಂದು ಹೇಳಿದ
ಸಂದರ್ಭವಾಗಿದೆ.
ಸ್ವಾರಸ್ಯ : ಯಶೋಧರೆಯು ಶುದ್ಧೋದನನ ಸಹೋದರಿಯ ಮಗಳು ಎಂದು ಪ್ರೀತಿಯಿಂದ ತಮ್ಮ
ಅರಮನೆಗೆ ಕರೆದು ತಂದು ಎಷ್ಟು ಪ್ರೀತಿಯಿಂದ ಸಾಕಿ ಸಲುಹಿದನು ಎಂಬುದು ಸ್ವಾರಸ್ಯಕರವಾಗಿದೆ.
2. “ಅಮ್ಮಾಜಿ, ನಿನಗೆ ಭಯ ಬೇಡಮ್ಮ ನಾ ಮರಳಿ ಬಹೆನಮ್ಮ”
ಆಯ್ಕೆ : ಈ ವಾಕ್ಯವನ್ನು ‘ಮಾಸ್ತಿ ವೆಂಕಟೇಶ್ ಅಯ್ಯಂಗಾರ್’ ಅವರು ರಚಿಸಿರುವ ‘ಯಶೋಧರೆ’
ನಾಟಕದಿಂದ ಆಯ್ದ ‘ಯಶೋಧರೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ರಾಹುಲನು ತನ್ನ ತಂದೆಯನ್ನು ಹುಡುಕಿ ಕರೆ ತರುವೆನೆಂದು ಹೇಳುತ್ತಾನೆ. ಆಗ ಯಶೋಧಗೆ
ತಂದೆಯ ಬಳಿಗೆ ಮಗನನ್ನು ಕಳುಹಿಸಲು ಭಯಗೊಂಡಳು ಸಂದರ್ಭದಲ್ಲಿ ರಾಹುಲ ತನ್ನ ತಾಯಿ
ಯಶೋಧರೆಗೆ ಹೇಳುತ್ತಾನೆ.
ಸ್ವಾರಸ್ಯ : ಯಶೋಧರೆಯು ತಂದೆಯ ಬಳಿಗೆ ಹೋದ ಮಗ ಮತ್ತೇ ಮರಳಿ ಬರುವನೋ ಇಲ್ಲವೋ ಎಂಬ
ಸಂದೇಹ, ರಾಹುಲ್ ತಂದೆಯನ್ನು ಕರೆದುಕೊಂಡು ಖಂಡಿತ ಹಿಂತಿರುಗಿ ಬರುವುದಾಗಿ ಭರವಸೆ
ಕೊಡುವುದು ಸ್ವಾರಸ್ಯಕರವಾಗಿದೆ.
3. “ನಿನ್ನ ವಿಧಿ ಕೆಟ್ಟುದೆಂದೆಣಿಸದಿರು ಅಮ್ಮಾಜಿ”
ಆಯ್ಕೆ : ಈ ವಾಕ್ಯವನ್ನು ‘ಮಾಸ್ತಿ ವೆಂಕಟೇಶ್ ಅಯ್ಯಂಗಾರ್’ ಅವರು ರಚಿಸಿರುವ ‘ಯಶೋಧರೆ’
ನಾಟಕದಿಂದ ಆಯ್ದ ‘ಯಶೋಧರೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ಯಶೋಧರೆ ರಾಜನಿಗೆ ಹೇಳಿದಳು. ಯಶೋಧರೆಯು ತನ್ನ ವಿಧಿಯೇ
ಕೆಟ್ಟದಾಗಿದೆ ಎಂದು ರಾಜನಿಗೆ ಹೇಳಿದಾಗ ಸೊಸೆ ಯಶೋಧದರಯನ್ನು ಸಮಾಧಾನ ಪಡಿಸುವಾಗ
ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ.
ಸ್ವಾರಸ್ಯ : ನಿನ್ನರಸನು ನಿನ್ನಿಂದ ದೂರವಿದ್ದರೂ ಲೋಕ ಪೂಜಿತನಾಗಿದ್ದಾನೆ. ಅದಕ್ಕಾಗಿ ಹೆಮ್ಮೆಪಡಬೇಕು
ಎಂದು ಸಮಾಧಾನ ಪಡಿಸುವುದು, ಗೌತಮ ಬುದ್ಧನು ಶ್ರೇಷ್ಠತೆಯನ್ನು ತಿಳಿಸುವುದು ಸ್ವಾರಸ್ಯಕg Àವಾಗಿದೆ.
4. “ನಿದ್ದೆಯಲಿ ಮುಳುಗುವನ್ನಾವ ಕನಸಿನ ಮೊಸಳೆ ಹಿಡಿಯುವುದೋ”
ಆಯ್ಕೆ : ಈ ವಾಕ್ಯವನ್ನು ‘ಮಾಸ್ತಿ ವೆಂಕಟೇಶ್ ಅಯ್ಯಂಗಾರ್’ ಅವರು ರಚಿಸಿರುವ ‘ಯಶೋಧರೆ’
ನಾಟಕದಿಂದ ಆಯ್ದ ‘ಯಶೋಧರೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ಯಶೋಧರೆ ರಾಜನಿಗೆ ಹೇಳುತ್ತಾಳೆ. ಇಂದು ಇರುಳಾಗುತ್ತಿದೆ ಕನಸಿನ ಮೊಸಳೆ
ಹಿಡಿದು ನನಗೆ ಇನ್ನೂ ಯಾವ ನೋವು ಕೊಡುತ್ತದೆಯೋ! ಇನ್ನೆನಿತು ತೊಳಲಬೇಕೋ, ಭಯದಿಂದ ನನ್ನ
ಚೇತನಗಳೆಲ್ಲ ಕಲಕಿಹೋಗಿವೆ. ನನ್ನನುದ್ಧರಿಸಬೇಕು. ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಯಶೋಧರೆಯು ಇದೊಂದು ಕೆಟ್ಟ ಕನಸು, ಇದು ನಿದ್ದೆಯನ್ನು ಹಾಳು ಮಾಡುವುದೇ ಅಲ್ಲದೆ
ಮನಸ್ಸನ್ನು ಗಾಬರಿಗೊಳಿಸುವುದು. ಎಂದು ಕನಸಿಗೆ ಭಯಪಡುವುದು ಸ್ವಾರಸ್ಯಕರವಾಗಿದೆ .
ಉ. ಹೊಂದಿಸಿ ಬರೆಯಿರಿ.
1. ಯಶೋಧರೆ – ಯುವರಾಣಿ
2. ಶುದ್ಧೋದನ – ರಾಜ
3. ಅಂಬಿಕೆ – ಸಖಿ
4. ರಾಹುಲ – ಬುದ್ಧನ ಮಗ
5. ಸಿದ್ಧಾರ್ಥ – ಗೌತಮ ಬುದ್ಧ
ಊ. ಈ ಕೆಳಗಿನ ಪದಗಳಿಗೆ ತದ್ಭವ ಪದಗಳನ್ನು ಬರೆಯಿರಿ.
ವಿನೋದ – ಬಿನೋದ, ಬಿನದ
ದುಃಖ – ದುಕ್ಕೆ
ರಾಜ – ರಾಯ
ಕಾರ್ಯ – ಕಜ್ಜ
ಋ. ಈ ಪದಗಳನ್ನು ಬಿಡಿಸಿ ಸಂಧಿಯನ್ನು ಹೆಸರಿಸಿ.
ನಿನ್ನಾಣ್ಮ = ನಿನ್ನ + ಆಣ್ಮ = ಲೋಪ ಸಂಧಿ
ಚಕ್ರಾಧಿಪತಿ = ಚಕ್ರ + ಅಧಿಪತಿ = ಸವರ್ಣದೀರ್ಘ ಸಂಧಿ
ಹರಕೆಯನು = ಹರಕೆ + ಅನು = ಆಗಮ ಸಂಧಿ
ಪತಿಯೊಡನೆ = ಪತಿ + ಒಡನೆ = ಆಗಮ ಸಂಧಿ
ಇಂದಳುತ = ಇಂದು + ಆಳುತ = ಲೋಪ ಸಂದಿ
ಅಭ್ಯಾಸ ಚಟುವಟಿಕೆ
ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ
1. ಲಿಂಗದ ವಿಧಗಳಾವುವು?
ಉತ್ತರ : ಲಿಂಗದ ವಿಧಗಳು 1. ಪುಲ್ಲಿಂಗ 2. ಸ್ತ್ರೀಲಿಂಗ 3. ನಪುಂಸಕಲಿಂಗ
2. ಬಹುವಚನವನ್ನು ನಿದರ್ಶನದ ಮೂಲಕ ವಿವರಿಸಿ.
ಉತ್ತರ : ಒಂದಕ್ಕಿಂತ ಹೆಚ್ಚು ಇರುವ ವಸ್ತು ಅಥವಾ ವ್ಯಕ್ತಿಗಳನ್ನು ಸೂಚಿಸುವ ಪದಗಳೇ ಬಹುವಚನ.
ಏಕವಚನದ ನಾಮಪ್ರಕೃತಿಗಳಿಗೆ ಅರು, ವು, ಗಳು, ಅಂದಿರು ಇತ್ಯಾದಿ ಬಹುವಚನ ಸೂಚಕಗಳು ಸೇರಿ
ಬಹುವಚನ ಪದಗಳಾಗುತ್ತವೆ.
ಉದಾ : ರಾಜ + ಅರು > ರಾಜರು
ನೀನು + ವು > ನೀವು
ಮರ + ಗಳು > ಮರಗಳು
ಅಣ್ಣ + ಅಂದಿರು > ಅಣ್ಣಂದಿರು
ರಾಣಿ + ಅರು > ರಾಣಿಯರು
3. ವಾಕ್ಯ ಎಂದರೇನು?
ಉತ್ತರ : ವಾಕ್ಯ ಎಂದರೆ ಕರ್ತೃ, ಕರ್ಮ, ಕ್ರಿಯಾಪದಗಳಿಂದ ವ್ಯವಸ್ಥಿತವಾಗಿ ಕೂಡಿರುವ ಪದಸಮೂಹ.
ಪ್ರಾಯೋಗಿಕ ಭಾಷಾಭ್ಯಾಸ
4. ಕೊಟ್ಟಿರುವ ಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳಾಗಿ ವರ್ಗೀಕರಿಸಿ.
ರಾಹುಲ ಯಶೋಧರೆ ಸಖಿ ಅಮ್ಮಾಜಿ
ರಾಜ ವಿಧಿ ಅಂಬಿಕೆ ಲೋಕ
ಅರಮನೆ ತಂದೆ ಸನ್ಯಾಸ ಸತಿ
ಹುಲಿ ಕನಸು
1. ಪುಲ್ಲಿಂಗ : ರಾಹುಲ, ರಾಜ, ತಂದೆ
2. ಸ್ತ್ರೀಲಿಂಗ : ಯಶೋಧರೆ, ಅಂಬಿಕೆ, ಸತಿ , ಅಮ್ಮಾಜಿ,
3. ನಪುಂಸಕ ಲಿಂಗ : ವಿಧಿ, ಲೋಕ, ಅರಮನೆ, ಸನ್ಯಾಸ, ಹುಲಿ , ಕನಸು
5. ಕೊಟ್ಟಿರುವ ಪದಗಳ ಬಹುವಚನ ರೂಪ ಬರೆಯಿರಿ.
ನಾನು – ನಾವು ಅಮ್ಮ – ಅಮ್ಮಂದಿರು
ಕಿರಿಯ – ಕಿರಿಯರು ರಾಜ – ರಾಜರು
ನನ್ನ – ನಮ್ಮ ಲೋಕ – ಲೋಕಗಳು
ಬಾಲಕ – ಬಾಲಕರು ಮಗು – ಮಕ್ಕಳು
ತಾಯಿ – ತಾಯಂದಿರು ದೇವ – ದೇವರು
ಸ್ವರ – ಸ್ವರಗಳು ತಾತ – ತಾತಂದಿರು
ನೀನು – ನೀವು
6. ಕೊಟ್ಟಿರುವ ವಾಕ್ಯಗಳಲ್ಲಿರುವ ಕರ್ಮ, ಕ್ರಿಯಾ ಹಾಗೂ ಕರ್ತೃಪದಗಳನ್ನು ಆರಿಸಿ ಬರೆಯಿರಿ.
1. ಅಮ್ಮ ಅನ್ನ ಣ್ಣನನ್ನು ಕರೆಯುವೆನು.
2 ಸನ್ಯಾಸವನು ಕೊಂಡು ಪತಿಯನ್ನು ಸೇರುವೆನು.
3. ಸಿದ್ಧಾರ್ಥನು ಕರೆಯನ್ನು ಕೇಳಿಸಿಕೊಳ್ಳಲಿಲ್ಲ .
ಕತೃಪದ | ಕರ್ಮಪದ | ಕ್ರಿಯಾಪದ |
ಅಮ್ಮ | ಅಣ್ಣನನ್ನು | ಕರೆಯುವೆನು |
ಸನ್ಯಾಸವನ್ನು ,ಪತಿಯನ್ನು | ಸೇವೇನು | |
ಸಿದ್ದಾರ್ಥ | ಕರೆಯನ್ನು | 1. ಕೇಳಿಸಿಕೊಳ್ಳಲಿಲ್ಲ |
FAQ :
ಉತ್ತರ : ಸನ್ಯಾಸಿಯಾದವನು ಸತಿಯನ್ನು ನೋಡುವುದು, ಮಾತನಾಡುವುದು ಸಂಪ್ರದಾಯಕ್ಕೆ
ವಿರೋಧವಾದದ್ದು.
ಉತ್ತರ : ರಾಜನಿಗೆ ಕನಸಿನ ವಿಚಾರವನ್ನು ಹೇಳಿದವಳು ಅಂಬಿಕೆ.
ಉತ್ತರ : “ಈಗ ನೀನಿರುವ ಸ್ಥಿತಿ ಸನ್ಯಾಸಿಯ ಸ್ಥಿತಿಯೇ” ಎಂದು ರಾಜ ಹೇಳುತ್ತಾನೆ.
ಇತರೆ ವಿಷಯಗಳು :
8th Standard All Subject Notes
8th Standard Kannada Textbook Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
It is very nice app