rtgh

8th Standard Hoovada Hudugi Kannada Notes | 8ನೇ ತರಗತಿ ಹೂವಾದ ಹುಡುಗಿ ಕನ್ನಡ ನೋಟ್ಸ್

8ನೇ ತರಗತಿ ಹೂವಾದ ಹುಡುಗಿ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Standard Hoovada Hudugi Kannada Notes Question Answer Mcq Pdf Download in Kannada Medium Karnataka State Syllabus 2023, Kseeb Solutions For Class 8 Kannada Chapter 5 Notes 8th Class Kannada 5th Chapter Notes Huvada Hudugi Lesson Question and Answer Hoovada Hudugi Kannada Story Pdf Huvada Hudugi Summary in Kannada Huvada Hudugi Kannada Notes

8th Hoovada Hudugi Question Answer in Kannada

Hoovada Hudugi Notes Pdf

ಗದ್ಯ ಭಾಗ5

ಪಾಠದ ಹೆಸರು : ಹೂವಾದ ಹುಡುಗಿ

ಕೃತಿಕಾರರ ಹೆಸರು : ಎ.ಕೆ ರಾಮಾನುಜನ್ 

ಕೃತಿಕಾರರ ಪರಿಚಯ

ಎ.ಕೆ ರಾಮಾನುಜನ್ ಅವರು ಕವಿ, ಚಿಂತಕ, ಪ್ರಾಧ್ಯಾಪಕ, ಜಾನಪದತಜ್ಞ ಹೀಗೆ ವಿವಿದ ಪ್ರತಿಭೆಗಳ
ಸಂಗಮವೆAದು ಖ್ಯಾತರಾದವರು. ಇವರ ಪೂರ್ಣ ಹೆಸರು ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್. ಇವರು ಮಾರ್ಚ್ 16 – 1929 ರಲ್ಲಿ ಮೈಸೂರುನಲ್ಲಿ ಜನಿಸಿದರು. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲಿ ‘ಹೊಕ್ಕುಳಲ್ಲಿ ಹೂವಿಲ್ಲ ಮತ್ತು  ಇತರ ಕವಿತೆಗಳು’, ‘ಕುಂಟೋಬಿಲ್ಲೆ’, ‘ಮತ್ತೊಬ್ಬನ ಆತ್ಮ ಚರಿತ್ರೆ’ ಪ್ರಸಿದ್ಧ ಕೃತಿಗಳು. ಕನ್ನಡ ವಚನ ಸಾಹಿತ್ಯವನ್ನು ‘ಸ್ಪೀಕಿಂಗ್ ಆಫ್ ಶಿವ’ ಎಂದು ಅನುವಾದಿಸಿದ್ದಾರೆ. ಇವರ ಸಾಹಿತ್ಯದಲ್ಲಿನ ಸಾಧನೆಗೆ 1976 ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 1983 ರಲ್ಲಿ ಪ್ರಸಿದ್ಧ ‘ಮ್ಯಾಕ್‌ಅರ್ಥರ್ಫೆ ಲೋಷಿಪ್’ ಗೌರವ ಸಂದಿದೆ.
ಪ್ರಸ್ತುತ ‘ಹೂವಾದ ಹುಡುಗಿ’ ಜನಪದ ಕಥೆಯನ್ನು ಶ್ರೀ ಎ. ಕೆ. ರಾಮಾನುಜನ್ ಅವರು ಸಂಪಾದಿಸಿರುವ
‘ಸಾಲು ಸಂಪಿಗೆ ನೆರಳು’ ಕೃತಿಯಿಂದ ಆಯ್ದು ನಿಗದಿಪಡಿಸಿದೆ

ಪದಗಳ ಅರ್ಥ

ಐಸಿರಿ         –     ಐಶ್ವರ್ಯ,   ಸಂಪತ್ತು;
ಕೊಪ್ಪರಿಗೆ  –      ಕಡಾಯಿ ;
ಗುಮ್ಮಾಗಿ   –     ಸುಮ್ಮನೆ,   ಯಾರ ಬಳಿಯಲ್ಲಿ ಮಾತನಾಡದೇ;
ತಿಕ್ಕಲು       –       ಬುದ್ಧಿಭ್ರಮಣೆ  , ಹುಚ್ಚು ;
ಮೊಗೆ        –     ಬೊಗಸೆ ತುಂಬ;
ಯಥಾಸ್ಥಿತಿ  –   ಮೊದಲು ಇದ್ದ ರೀತಿ;
ದರ‍್ಸು        –     ವಸ್ತ್ರ , ಬಟ್ಟೆ;

Hoovada Hudugi Notes Question Answer Mcq Pdf Download

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಮುದುಕಿಯ ಕಿರಿಯ ಮಗಳು ಏಕೆ ಹೂವಿನ  ಗಿಡವಾದಳು?

ಉತ್ತರ : ಒಂದು ಊರಿನಲ್ಲಿ ಒಬ್ಬ ಮುದುಕಿ ಇದ್ದಳು. ಇವಳು ಕೂಲಿಮಾಡಿ ತನ್ನ ಇಬ್ಬರು ಹೆಣ್ಣು
ಮಕ್ಕಳನ್ನು ಸಾಕುತ್ತಿದ್ದಳು. ಅಮ್ಮ ಕೂಲಿ ಮಾಡಿ ನಮ್ಮನ್ನು ಸಾಕುವುದು ಕಷ್ಟ ಆಗುತ್ತದೆ ಎಂದು ಮುದುಕಿಯ ಕಿರಿ
ಮಗಳು ಹೂವಿನ ಗಿಡವಾದಳು.

೨. ದೊರೆಯ ಹೆಂಡತಿ ಹೂವಿಗೆ   ಎಷ್ಟು ಹಣ ಕೊಟ್ಟಳು?

ಉತ್ತರ : ದೊರೆಯ ಹೆಂಡತಿ ಹೂವಿಗಾಗಿ ಒಂದು ಬೊಗಸೆ ತುಂಬ ಹಣಕೊಟ್ಟಳು.

೩. ಹೂವಾಗುವ ಹುಡುಗಿಡ ವಿಚಾರವನ್ನು ದೊರೆಯ ಮಗ ಯಾರ ಬಳಿ ಹೇಳಿದ?

ಉತ್ತರ : ಹೂವಾಗುವ ಹುಡುಗಿಯ  ವಿಚಾರವನ್ನು ದೊರೆಯ ಮಗ ಮಂತ್ರಿಯ ಮಗ ಬಳಿ ಹೇಳಿದನು.

೪. ದೊರೆಯ ಚಿಕ್ಕಮಗಳು ಗೆಳತಿಯರೊಂದಿಗೆ ಎಲ್ಲಿಗೆ ಹೋದಳು?

ಉತ್ತರ : ದೊರೆಯ ಚಿಕ್ಕಮಗಳು ಗೆಳತಿರೊಂದಿಗೆ ರೊಂದಿಗೆ ‘ಸುರಹೊನ್ನೆ’ ತೋಟಕ್ಕೆ ಹೋದರು.

೫. ಪಟ್ಟಣಕ್ಕೆ ಹಿಂದಿರುವಾಗ ಅಕ್ಕ ತಮ್ಮನಿಗೆ ಏನು ಉಡುಗೊರೆ ನೀಡಿದಳು?

ಉತ್ತರ : ಪಟ್ಟಣಕ್ಕೆ ಹಿಂದಿರುಗುವಾಗ ಅಕ್ಕ ತಮ್ಮನಿಗೆ ಬೇಕಾದಷ್ಟು  ಐಸಿರಿಯ ಉಡುಗೊರೆ ನೀಡಿದಳು.

Hoovada Hudugi Lesson Notes

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯದಲ್ಲಿ ಉತ್ತರಿಸಿ.

೧. ಅರಮನೆಗೆ ಹೂವು ಎಲ್ಲಿಂದ ಬರುತ್ತದೆಂದು ದೊರೆಮಗ ಹೇಗೆ ಕಂಡು ಹಿಡಿದನು?

ಉತ್ತರ : ಪ್ರತಿ ದಿನ ಹೂವಾದ ಹುಡುಗಿಯ ಅಕ್ಕ ಅರಮನೆಗೆ ತಂದು ಕೊಡುತ್ತಿದ್ದ ಹೂವು ದೊರೆಮಗನ
ಕಣ್ಣಿಗೆ ಬಿತ್ತು. ಒಳ್ಳೆ ಗಮಗಮ ಅನ್ನುತ್ತಿತ್ತು. ಇಂತಹ ಸೊಗಸಾದ ಹೂವನ್ನು ಅವನೆಂದೂ ನೋಡೇ ಇರಲಿಲ್ಲ.
ಈ ಹೂವನ್ನು ಯಾರು ತಂದು ಕೊಡುತ್ತಾರೆ ಎಂದು ಯೋಚಿಸಿ ಆ ದೊಡ್ಡ ಹುಡುಗಿ ತಂದು
ಕೊಡುವುದನ್ನು ನೋಡಿ ಅವಳನ್ನೇ ಹಿಂಬಾಲಿಸಿ ಹೋಗಿ ನೋಡಿದ. ಈ ಮನೆಯ ಸುತ್ತ ಮುತ್ತ ಹೂವಿನ
ಗಿಡಗಳಿಲ್ಲದನ್ನು   ಗಮನಿಸಿ ಇಂಥ ಹೂವು ಇವರಿಗೆಲ್ಲಿಂದ ಬರುತ್ತವೆ ಎಂದು ಯೋಚನೆ ಮಾಡಿ ಅರಮನೆಗೆ
ಬಂದ. ಮಾರನೆ ದಿನ ಸೂರ್ಯ ಹುಟ್ಟುವ ಮೊದಲೇ ಹೋಗಿ ಹುಡುಗಿಯರಿದ್ದ ಮನೆಯ ಮರದ ಮೇಲೆ
ಕುಳಿತುಕೊಂಡ ಅಂದು ಸಹ ಹುಡುಗಿಯರು, ಆ ಮರದಡಿ ಸಾರಿಸಿ ಗುಡಿಸಿದರು. ತಂಗಿ ಯಥಾಪ್ರಕಾರ
ಹೂವಿನ ಗಿಡವಾದಳು. ಅಕ್ಕ ಎಚ್ಚರಿಕೆಯಿಂದ ಹೂ ಬಿಡಿಸಿಕೊಂಡಳು. ಮತ್ತೇ ಮನುಷ್ಯನಾದಳು ಇದೆಲ್ಲವನ್ನು
ಮರದ ಮೇಲಿಂದ ರಾಜಕುಮಾರ ನೋಡಿದನು. ಈ ಹೂವು ಅರಮನೆಗೆ ಬರುವುದನ್ನು ಕಂಡು ಹಿಡಿದನು.

೨. ತಂಗಿ ಹೇಗೆ ಹೂವಿನ ಗಿಡವಾಗುತ್ತಿದ್ದಳು?

ಉತ್ತರ : ಹುಡುಗಿ ಹೂವಿನ ಗಿಡವಾಗುವ ಸ್ಥಳವನ್ನು ಮೊದಲು ಸಾರಿಸಿ, ಸ್ನಾನಮಾಡಿದ, ನಂತರ ತಂಗಿ
ದೇವರ ಧ್ಯಾನ ಮಾಡುತ್ತಾ ಕುಳಿತುಳ್ಳುವಳು. ಅಕ್ಕ, ಅವಳ ಮೇಲೆ ಚಿಳ್‌ಉಗುರು ಸೋಕದ ಹಾಗೆ ಎರಡು
ತಂಬಿಗೆ ನೀರನ್ನು ಸುರಿಯುವಳು. ಆಗ ತಂಗಿ ಘಮ ಘಮಿಸುವ ಹೂವಿನ ಗಿಡವಾಗುತ್ತಿದ್ದಳು. ಅಕ್ಕ,
ಜೋಪಾನವಾಗಿ ಬೇಕಾದಷ್ಟು ಹೂ ಬಿಡಿಸಿದ ನಂತರ ಒಂದು ತಂದಿಗೆ ನೀರು ಸುರಿಯುವಳು. ಆಗ ತಂಗಿ
ಮತ್ತೆ ಮನುಷ್ಯಳಾಗುತ್ತಿದ್ದಳು.ಹೀಗೆ ತಂಗಿ ಹೂವಿನ ಗಿಡವಾಗುತ್ತಿದ್ದಳು.

೩. ದೊರೆಯಮಗ ದೇಶಾಂತರ ಹೋಗಲು ಕಾರಣವೇನು?

ಉತ್ತರ : ದೊರೆ ಮಗಳು ತನ್ನ ಸ್ನೇಹಿತೆಯರಿಗೆಲ್ಲ, “ಸುರಹೊನ್ನೆ ತೋಟಕ್ಕೆ ಉಯ್ಯಾಲೆ ಆಡೋಕೆ
ಹೋಗೋಣ; ನಮ್ಮ ಅತ್ತಿಗೆ ಹೂವಿನಗಿಡ ಆಗ್ತಾಳೆ ನೀವೆಲ್ಲರೂ ಬನ್ನಿ. ಗಮಗಮ ಅನ್ನೋ ಹೂವು ಬೇಕಾದಷ್ಟು ಕೊಡ್ತೀನಿ”. ಎಂದು ಹೇಳಿ ತನ್ನ ತಾಯಿ, ಅಣ್ಣನ್ನು ಒಪ್ಪಿಸಿ ಅತ್ತಿಗೆಯನ್ನು ಸುರೆಹೊನ್ನೆ ತೋಟಕ್ಕೆ
ಕರೆದುಕೊಂಡು ಹೋಗಿ, ಹೂವಿನ ಗಿಡವಾಗಲು ಹೇಳಿ, ಅರ್ಧಂಬರ್ಧ ಮನುಷ್ಯಳಾಗಿದ್ದ ಅತಿಗ್ತೆಯನ್ನು
ತೋಟದಲ್ಲಿ ಬಿಟ್ಟು ಅರಮನೆಗೆ ಬಂದು, ತನ್ನ ಅಣ್ಣನಿಗೆ ಸುಳ್ಳು ಹೇಳುತ್ತಾಳೆ. ಇತ್ತ ನಿಜವಾದ ಸಂಗತಿ ತಿಳಿದೇ
ದೊರೆಮಗ ಬೇಜಾರಾಗಿ ಗೋಸಾಯಿ ದರ‍್ಸು ಹಾಕಿಕೊಂಡು ದೇಶಾಂತರ ಹೊರಟು ಹೋದನು.

೪. ಅರ್ಧಂಬರ್ದ ದೇಹವಾಗಿದ್ದವಳು ಹೇಗೆ ರಾಣಿಯ ಅರಮನೆ ಸೇರಿದಳು?

ಉತ್ತರ : ಅರ್ಧಂಬರ್ದ ದೇಹವಾಗಿದ್ದ ಹೂವಿನ ಹುಡುಗಿ ಮಳೆಯ ನೀರಿನಲ್ಲಿ ತೇಲಿಕೊಂಡು ಮೋರಿಯಲ್ಲಿ
ಬಿದ್ದಿದ್ದಳು. ಮಾರನೇ  ದಿನ ಅತ್ತ ಕಡೆಯಿಂದ ಅರಳೆ  ತುಂಬಿದ ಗಾಡಿಗಳು ಬರುತ್ತಿದ್ದವು. ಹ್ಞಾ……ಹ್ಞಾ… ಎಂದು
ಕೊರಗುವ ಶಬ್ದ ಕೇಳಿ ಗಾಡಿಯವನೊಬ್ಬನು ನೋಡಿದನು. ಇಡೀ ದೇಹದಲ್ಲಿ ಮುಖ ಮಾತ್ರ ಚೆನ್ನಾಗಿತ್ತು.
ಬಟ್ಟೆಯಿಲ್ಲ. ಅಯ್ಯೋ ಮನುಷ್ಯ ಕಣಪ್ಪ ಅಂತ ಹೇಳಿ ತನ್ನ ತಲೆ ವಸ್ತ್ರವನ್ನ  ಅದರ ಮೇಲೆ ಹಾಕಿ ಗಾಡಿಯಲ್ಲಿ
ಕೂರಿಸಿಕೊಂಡು ಮುಂದೂರಿನ ಹಾಳು ಮಂಟಪದಲ್ಲಿ ಗಾಡಿ ನಿಲ್ಲಿಸಿ ಅವಳನ್ನು ಮಂಟಪದಲ್ಲಿಟ್ಟು
ಯಾರಾದರೂ ಅನ್ನ, ನೀರು ಕೊಟ್ಟರೆ ಜೀವ ಉಳಿಸಿಕೋ ಅಂತ ಹೇಳಿ ಬಿಟ್ಟು ಹೋದನು. ಆ ಪಟ್ಟಣ ತನ್ನ
ಗಂಡನ ಅಕ್ಕನ ಪಟ್ಟಣವಾಗಿತ್ತು. ಆದ್ದರಿಂದ ಆ ಪಟ್ಟಣದ ಗೌಡರು, ದಾದೇರು ರಾಣಗೆ  ಈ ವಿಷಯವನ್ನು
ಹೇಳಿದರು. ಮೊದಲು ಒಪ್ಪದ ರಾಣಿ ನಂತರ ಒಪ್ಪಿದಳು. ಹೀಗಾಗಿ ಅರ್ಧಂಬರ್ದ ದೇಹವಾಗಿದ್ದ ಹುಡುಗಿ
ರಾಣಿಯ ಅರಮನೆ ಸೇರಿದಳು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯದಲ್ಲಿ  ಉತ್ತರಿಸಿ.

೧. ದೊರೆಯ ಕಿರಿಯ ಮಗಳು ತನ್ನ ಅತ್ತಿಗೆಗೆ ಮಾಡಿದ ದ್ರೋಹವೇನು?

ಉತ್ತರ : ದೊರೆ ಮಗಳು ತನ್ನ ಸ್ನೇಹಿತೆಯರಿಗೆಲ್ಲ, “ಸುರಹೊನ್ನೆ ತೋಟಕ್ಕೆ ಉಯ್ಯಾಲೆ ಆಡೋಕೆ
ಹೋಗೋಣ; ನಮ್ಮ ಅತ್ತಿಗೆ ಹೂವಿನಗಿಡ ಆಗ್ತಾಳೆ ನೀವೆಲ್ಲರೂ ಬನ್ನಿ. ಗಮಗಮ ಅನ್ನೋ ಹೂವು
ಬೇಕಾದಷ್ಟು ಕೊಡ್ತೀನಿ”. ಎಂದು ಹೇಳಿ ತನ್ನ ತಾಯಿ, ಅಣ್ಣನ್ನು ಒಪ್ಪಿಸಿ ಅತ್ತಿಗೆಯನ್ನು ಸುರೆಹೊನ್ನೆ ತೋಟಕ್ಕೆ
ಕರೆದುಕೊಂಡು ಹೋಗಿ, ಹೂವಿನ ಗಿಡವಾಗಲು ಹೇಳಿದಳು. “ಅಯ್ಯೋ ದೇವರೇ, ನಾನು ಮನುಷ್ಯಳು
ದೇವರು ಅಲ್ಲ, ದೆವ್ವನು ಅಲ್ಲ. ನಾನು ಹೂವಿನ ಗಿಡವಾಗುವ ವಿಷಯ ನಿನಗೆ ಯಾರು ಹೇಳಿದರು” ಎಂದು
ಗದರಿಸಿದಳು. ಆದರೂ ದೊರೆಯ ಕಿರಿಮಗಳು ಬಿಡದೇ ತನ್ನ ಅತ್ತಿಗೆಯನ್ನು ಹೂವಿನ ಗಿಡವಾಗಲು
ಒಪ್ಪಿಸಿದಳು. ಆಗ ತನ್ನ ಮೇಲೆ ನೀರು ಹೇಗೆ ಸುರಿಯಬೇಕು. ಹೇಗೆ ಹೂ ಕೀಳಬೇಕು ಎಂಬುದನ್ನೆಲ್ಲ
ಹೇಳಿಕೊಟ್ಟಳು. ಆದರೂ ಸರಿಯಾಗಿ ಕೇಳಿಸಿಕೊಳ್ಳದೆ ದೊರೆಯ ಮಗಳು ಹಾಗೂ ಗೆಳೆತಿಯರು ಅಡ್ಡ-
ದಿಡ್ಡಿಯಾಗಿ ನೀರು ಸುರಿದು ಹೂವು ಕೀಳೋ ಸಂಭ್ರಮದಲ್ಲಿ ತೊಟ್ಟು, ಎಲೆ, ಸುಳಿ ಕಿತ್ತು, ರೆಂಬೆಯನ್ನೆಲ್ಲ
ತರೆದು ಬಿಟ್ಟರು. ಅಷ್ಟರಲ್ಲಿ ಗುಡುಗು ಸಹಿತ ಮಳೆಗೆ ಹೆದರಿ ಅರ್ಧಂಬರ್ಧ ನೀರು ಸುರಿದು ಮನೆ ಕಡೆ
ಓಡಿದರು. ಆಕೆ ಮನುಷ್ಯಳಾಗದೆ ಕೈಯಿಲ್ಲದ, ಕಾಲು ಇಲ್ಲದ ದೇಹವಾಗಿದ್ದಳು. ಮೈಯೆಲ್ಲ ಗಾಯವಾಗಿತ್ತು.
ಮಳೆ ನೀರಿನಲ್ಲಿ ತೇಲಿಕೊಂಡು ಮೋರಿಗೆ ಬಿದ್ದಳು. ನಂತರ ಆಕೆ ಏನಾದಳೆಂದು ಕೂಡ ನೋಡದೆ
ಅರಮನೆಗೆ ಹೊರಟು ಹೋದಳು.

೨. ದೊರೆಯ ಮಗ ತನ್ನ ಹೆಂಡತಿಯನ್ನು ಹೇಗೆ ಪುನಃ ಪಡೆದನು?

ಉತ್ತರ : ಹೂವಾದ ಹುಡುಗಿಯು  ಅರ್ಧಂಬರ್ಧ ಮನುಷ್ಯಳಾಗಿ ಮೋರಿಯಲ್ಲಿ ಬಿದ್ದಿರುತ್ತಾಳೆ. ಅರಳೆ
ಗಾಡಿಯವರು ಅವಳನ್ನು ದೊರೆ ಮಗನ ದೊಡ್ಡಕ್ಕನ ಊರಿಗೆ ತಂದು ಬಿಟ್ಟು ಹೋಗುತ್ತಾರೆ. ಆ ಪಟ್ಟಣದ
ದಾದೇರು ದಿನಲೂ ನೀರಿಗೆ ಬರುವಾಗ ಇವಳನ್ನು ನೋಡಿದ್ದಿರು. ಈ ವಿಚಾರವನ್ನು ರಾಣಿಗೆ ತಿಳಿಸುತ್ತಾರೆ.
ರಾಣಿಗೆ ಅವಳ ಸೇವೆ ಮಾಡಲು ಮನಸ್ಸಿಲ್ಲದ್ದಿದ್ದರಿಂದ ತಾತ್ಸಾರ ಮಾಡುತ್ತಾಳೆ. ಕೂನೆಗೆ ಅವಳನ್ನು ತನ್ನ
ಅರಮನೆಗೆ ಕರಸಿ, ಸ್ನಾನಮಾಡಿಸಿ, ಗಾಯಗಳಿಗೆ ಔಷಧಿ ಹಾಕಿಸಿ ಉಪಚಾರ ಮಾಡುತ್ತಾಳೆ.
ಇತ್ತ ದೇಶಾಂತರ ಹೋಗಿದ್ದ ದೊರೆಮಗ ತನ್ನ ಅಕ್ಕನ ಪಟ್ಟಣದ ಬಾಗಿಲಿಗೆ ಬಂದು ಕುಳಿತುಕೊಂಡು
ಇರುತ್ತಾನೆ. ನೀರಿಗೆ ಹೋಗಿ ಬರುತ್ತಿದ್ದ ದಾದೇರು ಇವನನ್ನು ನೋಡಿ ಅರಮನೆಗೆ ಬಂದು ರಾಣಿಯವರೇ
ಯಾರೋ ನಿಮ್ಮ ತಮ್ಮ ಕುಳಿತಂಗ ಕಾಣುತ್ತೆ ಅಂತ ಗೋಗರೆದರು. ದುರಬೀನು ಹಾಕಿ ನೋಡಿ, ಕರೆಸಿ, ರಾಣಿ
ಚೆನ್ನಾಗಿ ನೋಡಿದಳು. ನನ್ನ ತಮ್ಮನೇ ಇರಬೇಕೆಂದು ಕೊಂಡಳು. ಕೊಪ್ಪ-ಕೊಪ್ಪರಿಗೆ ಎಣ್ಣೆ ಕಾಯಿಸಿ ನೆತ್ತಿಗೆ ತಿಕ್ಕಿಸಿ,
ಹಂಡೆ-ಹಂಡೆ ನೀರು ಹಾಕ್ಸಿ, ತನ್ನ ತಮ್ಮನೇ ವರತು ಬೇರಲ್ಲವೆಂದು ತಿಳಿದುಕೊಂಡಳು. ಅವನಿಗೆ ಎಷ್ಟು  ಉಪಚಾರ
ಮಾಡಿದರು ಮಾತನಾಡಲೇ ಇಲ್ಲ. ಕೊನೆಗೆ ದಾಸಿಯರಿಗೆ ಅಲಂಕಾರ ಮಾಡಿ ಅವನ ಸೇವೆ ಮಾಡಿಸಿದರು
ಉಪಯೋಗವಾಗಲಿಲ್ಲ. ಆಗ ಮಾರನೆಯ ದಿನ ರಾತ್ರಿದಾದೇರೆಲ್ಲ ಸೇರಿ ಅರಮನೆಯ ಮುಂದಿದ್ದ ಇವಳಿಗೆ
ಶೃಂಗಾರಮಾಡಿ, ರಾಣಿಯಿಂದ ಅಪ್ಪಣೆ ಪಡೆದು ಇವನ ಮಂಚದ ಮೇಲೆ ಕೂರಿಸಿದರು. ರಾತ್ರಿಯೆಲ್ಲ ಇವನ
ಕಾಲನ್ನು ಒತ್ತುತ್ತ, ಹೂ…..ಹೂ….. ಅಂತ ಕೊರಗುತ್ತಿತ್ತು. ಆಗ ಎದ್ದು ನೋಡಿದ, ಇವಳೇ ನನ್ನ
ಹೆಂಡತಿ ಎಂದು  ತಿಳ್ಕೊಂಡ. ಅನಂತರ ಮಂತ್ರಿಸಿ ನೀರನ್ನು ಹಾಕಿ ಹೂವಿನ ಗಿಡ ಮಾಡಿ, ಮುರಿದು ರೆಂಬೆ
ಕೊಂಬೆಗಳನ್ನೆಲ್ಲ ಜೋಡಿಸಿ, ನಂತರ ನೀರು ಹಾಕಿದಾಗ ಹೂವಾದ ಹುಡುಗಿ ಮತ್ತೇ ಮನುಷ್ಯಳಾದದಳು . ಹೀಗೆ
ದೊರೆಮಗ ತನ್ನ ಹೆಂಡತಿಯನ್ನು ಮತ್ತೇ ಪಡೆದನು

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ಅಕ್ಕಯ್ಯ ಅಮ್ಮನಿಗೆ ಹೇಳಬೇಡ  ಮುಚ್ಚಿಡು”

ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ ಸಾಲು ಸಂಪಿಗೆ ನೆರಳು
ಕೃತಿಯಿಂದ ಆಯ್ದು ‘ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಅಮ್ಮ ಕೂಲಿಮಾಡಿ ನಮ್ಮನ್ನು ಸಾಕುವುದನ್ನ ನೋಡಲಾಗದ ಹುಡುಗಿಯರು ತನ್ನ ತಾಯಿಗೆ
ಸಹಾಯಮಾಡಲು ಹೂವಿನ ಗಿಡವಾಗಿ, ಅದರಲ್ಲಿರುವ ಹೂವುಗಳನ್ನು ಮಾರಿ ಹಣ ಸಂಪಾದನೆ
ಮಾಡಬೇಕು ಎಂದು ನಿರ್ಧರಿಸುತ್ತಾರೆ. ಅದರಂತೆ ಮಾಡಿ ಅರಮನೆಗೆ ಹೋಗಿ ಹೂವು ಮಾರಿಕೊಂಡು ಹಣ
ಸಂಪಾದನೆ ಮಾಡಿದ ಸಂದರ್ಭದಲ್ಲಿ ಈ ಮಾತನ್ನು ಹೂವಾದ ಹುಡುಗಿ ತನ್ನ ಅಕ್ಕನಿಗೆ ಹೇಳುತ್ತಲೇ .
ಸ್ವಾರಸ್ಯ: ಅಮ್ಮನಿಗೆ ತಿಳಿಯದ ಹಾಗೆ ಹೂ ಗಿಡವಾಗಿ, ಹೂ ಮಾರಿ ಹಣವನ್ನು ಕೊಟ್ಟಾಗ ತಾಯಿಗೆ
ಅನುಮಾನ ಬಂದು ಹಣ ಎಲ್ಲಿಂದ ಬಂತು ಎಂದು ಕೇಳಿ ಬೈಯಬಹುದು. ಆದ್ದರಿಂದ ಮುಚ್ಚಿಡು ಎಂದು
ಹೇಳುವ ಮಾತು ಸ್ವಾರಸ್ಯಕರವಾಗಿದೆ.

೨. “ಈ ಸಂಪತ್ತಿಗೇಕೆ ನನ್ನ ಮದುವೆ ಆದಿರಿ?”

ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ ‘ಸಾಲು ಸಂಪಿಗೆ ನೆರಳು’
ಕೃತಿಯಿಂದ ಆಯ್ದು ‘ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ದೊರೆಮಗನು ಮೆಚ್ಚಿ ಹೂವಾದ ಹುಡುಯರನ್ನು ನ್ನು ಮದುಮೆಯಾದನು. ಅರಮನೆಯಲ್ಲಿ
ಅವರಿಬ್ಬರನ್ನು ಏಕಾಂತದಲ್ಲಿ ಬಿಟ್ಟರು. ಇವನಿಷ್ಟಕ್ಕೆ ಇವನಿದ್ದಾನೆ ಅವಳಿಷ್ಟಕ್ಕೆ ಅವಳಿದ್ದಾಳೆ. ಅವರೇ
ಮಾತನಾಡಲಿ ಅಂತ ಅವಳು. ಅವಳೇ ಮಾತಾಡಲಿ ಅಂತ ಅವನು. ಹೀಗೆ ಇಬ್ಬರೂ ಗುಮ್ಮಾಗಿ
ಸುಮ್ಮನಿದ್ದರು. ಆ ಮೌನ ಮುರಿದ ಸಂದರ್ಭದಲ್ಲಿ ಹೂವಾದ ಹುಡುಗಿ ಈ ಮಾತನ್ನು ದೊರೆ ಮಗನಿಗೆ
ಕೇಳಿದಳು.
ಸ್ವಾರಸ್ಯ : ತನ್ನ ಜೊತೆ ಮಾತನಾಡಲು ಇಷ್ಟವಿಲ್ಲದಿದ್ದ ಮೇಲೆ ತನ್ನನ್ನು ಏಕೆ ಮದುವೆಯಾಗಬೇಕಿತ್ತು
ಎಂಬುದಾಗಿ ನೇರ, ದಿಟ್ಟತನ, ಹುಸಿ ಮುನಿಸು ಸ್ವಾರಸ್ಯಕರವಾಗಿದೆ.

೩. “ಯಾರಾದರೂ ಅನ್ನ ನೀರು ಕೊಟ್ಟರೆ ಜೀವ ಉಳಿಸಿಕೋ”

ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ  ‘ಸಾಲು ಸಂಪಿಗೆ ನೆರಳು’
ಕೃತಿಯಿಂದ ಆಯ್ದು ‘ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಹೂವಾದ ಹುಡುಗಿಯು  ಮೋರಿಯಲ್ಲಿ ನರಳುತ್ತಿರುವುದನ್ನು ನೋಡಿದ ಅರಳೆ ಗಾಡಿಯವನು
ತನ್ನ ತಲೆಯ ಮೇಲಿದ್ದ ವಸ್ತçವನ್ನು ಕೊಟ್ಟು ಅವಳನ್ನು ತನ್ನ ಗಾಡಿಯಲ್ಲಿ ಕೂರಿಸಿಕೊಂಡು ಒಂದು ಊರಿನ
ಮಂಟಪದಲ್ಲಿ ಬಿಟ್ಟ ಸಂದರ್ಭದಲ್ಲಿ ಅರಳೆ ಗಾಡಿಯವನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ : ಹೂವಾದ ಹುಡುಗಿ ಮಾಡಿದ ಪುಣ್ಯದ ಫಲವೇನೋ ಗಾಡಿಯವನು ಇವಳನ್ನು ಒಂದು
ಪಟ್ಟಣದಲ್ಲಿ ಬಿಟ್ಟು ಹೋಗುತ್ತಾನೆ. ಗಾಡಿಯವನ ಪರೋಪಕಾರ ಗುಣವು ಸ್ವಾರಸ್ಯಕರವಾಗಿದೆ.

೪. “ಅವಳನ್ನು ನೋಡಿದರೆ ನಿಮ್ಮ ತಮ್ಮನ ಹೆಂಡತಿಯAತೆ ಕಾಣ್ತಾಳೆ,”

ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ  ‘ಸಾಲು ಸಂಪಿಗೆ ನೆರಳು’
ಕೃತಿಯಿಂದ ಆಯ್ದು ‘ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಹೂವಾದ ಹುಡುಗಿ  ಅರ್ಧ – ಬರ್ಧ ಮನುಷ್ಯಳಾಗಿ ಮೋರಿಯಲ್ಲಿ ಬಿದ್ದಿದ್ದಾಗ ಗಾಡಿಯವರ
ಸಹಾಯದಿಂದ ದೊರೆಮಗನ ದೊಡ್ಡಕ್ಕಯ್ಯನವರ ಪಟ್ಟಣದಲ್ಲಿ ಬಂದು ಬಿದ್ದಿರುತ್ತಾಳೆ. ಇವಳನ್ನು ನೋಡಿದ
ದಾದೇರು ತನ್ನ ರಾಣಿಯ ಬಳಿಗೆ ಹೋಗಿ ಈ ವಿಚಾರ ತಿಳಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ಅರ್ಧಂಬರ್ಧ ಮನುಷ್ಯಳಾಗಿದ್ದ ಹೂವಾದ ಹುಡುಯನ್ನು  ದಾದೋರಿ, ಹಾಗು ಗೌಡರು ರಾಣಿಯ
ಬಳಿ ಬಂದು ಆ ಹುಡುಗಿ ನಿಮ್ಮ ತಮ್ಮನ ಹೆಂಡತಿಯಂತೆ  ಕಾಣುವಳು. ಅವರನ್ನು ಕರೆ ತಂದು
ಉಪಚರಿಸೋಣವೇ ಎಂದು ಹೇಳುವ ಮಾತಿನಲ್ಲಿರುವ ಉಪಕಾರ ಗುಣ ಸ್ವಾರಸ್ಯಕರವಾಗಿದೆ.

ಉ. ಖಾಲಿಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ.

. ನೋಡಕ್ಕಯ್ಯ ನಾನಿಲ್ಲಿ ________ ಧ್ಯಾನಮಾಡಿ ಕುತುಕೋತಿನಿ.

. ಅವರು ಮಾತಾಡಲೇ ಇಲ್ಲವಲ್ಲ, ಮತ್ತೇಕೆ _________ ಯಾದರು.

. ನರಮನುಷ್ಯರು _____________ ಆಗೋದುಂಟೆ ?

. ದಿನವಹಿ ಮೈಮೇಲಿನ ಗಾಯಗಳಿಗೆ _________ ಹಾಕಿ ವಾಸಿಮಾಡಿದರು.

ಸರಿ ಉತ್ತರಗಳು.

೧. ದೇವರ

೨. ಮದುವೆ

೩. ಹೂವಿನಗಿಡ

೪. ಔಷದ

ಚಟುವಟಿಕೆ

ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ.

೧. ಧ್ಯಾನಮಾಡು : ದಿನಕ್ಕೇ ಒಮ್ಮೆಯಾದರು ಧ್ಯಾನಮಾಡು.

೨. ಬಡವರು : ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರು ಸ್ವಾಭಿಮಾನದಿಂದ ಬದುಕುವವರೆ ಬಡವರು.

೩. ಸಂಪಾದನೆ : ಈ ಬದುಕಿನ ಗಾಡಿ ಸಾಗಬೇಕಾದರೆ ನಾವು ಸಂಪಾದನೆ ಮಾಡಲೇಬೇಕು.

೪. ಉಡುಗೊರೆ : ನನ್ನ ಸ್ನೇಹಿತನ ಹುಟ್ಟು ಹಬ್ಬಕ್ಕೆ ವಾಚ್‌ನ್ನು ಉಡುಗೊರೆಯಾಗಿ ಕೊಟ್ಟೆನು.

ಕೊಟ್ಟಿರುವ ವಾಕ್ಯಗಳನ್ನು ಗ್ರಾಂಥಿಕ ರೂಪದಲ್ಲಿ ಬರೆಯಿರಿ.

೧. ನೀನು ಹೂ ತಕ್ಕೊಂಡು ಹೋಗಿ ಮರ‍್ಕೊಂಡು ಬಂದ್ಬಿಡೇ.

ಉತ್ತರ : ನೀನು ಹೂವು ತೆಗೆದುಕೊಂಡು ಹೋಗಿ ಮಾರಿಕೊಂಡು ಬಂದು ಬಿಡೇ.

೨. ದಾದೇರು ಗೋಗರೆದದ್ದಕ್ಕೆ ಒಪ್ಕತಾಳೆ.

ಉತ್ತರ : ದಾದೇರು ಗೋಗರೆದದ್ದಕ್ಕೆ ಒಪ್ಪಿಕೊಳ್ಳುತ್ತಾಳೆ.

೩. ತಾಯಿ ಅಣ್ಣನ ಕೇಳ್ಕೊಂಡು ರ‍್ಕೊಂಡೋಗು ಅನ್ತಾಳೆ.

ಉತ್ತರ : ತಾಯಿ ಅಣ್ಣನನ್ನು ಕೇಳಿ ಕರೆದುಕೊಂಡು ಹೋಗು ಅನ್ನುತ್ತಾಳೆ..

ಇತರೆ ವಿಷಯಗಳು :

8th Standard All Subject Notes

8th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 8ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *