7ನೇ ತರಗತಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು ಸಮಾಜ ವಿಜ್ಞಾನ ನೋಟ್ಸ್‌ | 7th Standard Social Science Chapter 13 Notes

7ನೇ ತರಗತಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು ಸಮಾಜ ವಿಜ್ಞಾನ ನೋಟ್ಸ್‌, 7th Standard Social Science Chapter 13 Notes Question Answer in Kannada Pdf Kseeb Solutions For Class 7 Social Science Chapter 13 Notes in Kannada Medium 2023 7th Samajika Mattu Dharmika Sudharanegalu Notes in Kannada

7th Class Social Science Chapter 13 in Kannada Medium

ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ,

  1. ಸಂವಾದ ಕೌಮುದಿ ಪತ್ರಿಕೆಯನ್ನು ರಾಜಾ ರಾಮಮೋಹನರಾಯ್ ಅವರು ಆರಂಭಿಸಿದರು.
  2. ಗುಲಾಮಗಿರಿ ಎಂಬ ಕೃತಿಯನ್ನು ರಚಿಸಿದವರು ಮಹಾತ್ಮ ಜ್ಯೋತಿಬಾ ಪುಲೆ
  3. ಲಾಹೋರಿನಲ್ಲಿ ‘ದಯಾನಂದ ಆಂಗ್ಲೋವೇದಿಕ್ ಶಾಲೆಯನ್ನು ಆರಂಭಿಸಿದವರು ಲಾಲಾ ಹಂಸರಾಜ್‌
  4. ಮಹಿಳೆಯರ ಉದ್ಧಾರಕ್ಕಾಗಿ ‘ಮುಕ್ತಿಮಿಷನ್‌’ ಸಂಸ್ಥೆಯನ್ನು ಸ್ಥಾಪಿಸಿದವರು ಪಂಡಿತ್‌ ರಮಾಬಾಯಿ

ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

I. ‘ಭಾರತದ ನವೋದಯ ಪಿತಾಮಹ’ ಎಂದು ಯಾರನ್ನು ಕರೆಯುತ್ತಾರೆ?

ರಾಜಾ ರಾಮಮೋಹನರಾಯ್‌

2. ಮಹಾದೇವ ಗೋವಿಂದ ರಾನಡೆ ಯಾರು?

ಬ್ರಹ್ಮ ಸಮಾಜದ ಪ್ರಮುಖ ನಾಯಕರು

3, ಸತ್ಯಶೋಧಕ ಸಮಾಜದ ಸ್ಥಾಪಕರು ಯಾರು?

ಮಹಾತ್ಮ ಜ್ಯೋತಿಬಾ ಪುಲೆ

4. “ಏಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ” ಇದು ಯಾರ ಕರೆಯಾಗಿತ್ತು?

ಸ್ವಾಮಿ ವಿವೇಕಾನಂದ

5. ಅನಿಬೆಸೆಂಟ್ ಯಾರು?

ಥಿಯಸಾಫಿಕಲ್ ಸೊಸಯಟಿಯ ಅಧ್ಯಕ್ಷರು, ನ್ಯೂ ಇಂಡಿಯಾ ಪತ್ರಿಕೆ ಪ್ರಕಟಿಸಿದರು.

6. ಅಲಿಘರ್ ಚಳುವಳಿಯ ನೇತಾರ ಯಾರಾಗಿದ್ದರು?

ಸರ್ ಸೈಯ್ಯದ್ ಅಹ್ಮದ್‌ ಖಾನ್

7. ಶ್ರೀ ನಾರಾಯಣಗುರು ಸ್ಥಾಪಿಸಿದ ಸಂಸ್ಥೆ ಯಾವುದು?

ಶ್ರೀ ನಾರಾಯಣ ಧರ್ಮಪರಿಪಾಲನಾ ಯೋಗಂ

8. ‘ಸ್ತ್ರೀಪುರುಷ ತುಲನಾ’ ಕೃತಿಯ ಲೇಖಕಿ ಯಾರು?

ತಾರಾಬಾಯಿ ಶಿಂದೆ

9. ಭಾರತದ ಪ್ರಸಿದ್ಧ ಕ್ರೈಸ್ತ ಸಮಾಜ ಸುಧಾರಕಿ ಯಾರು?

ಉ: ಪಂಡಿತ್‌ ರಮಾಬಾಯಿ

ಈ ಕೆಳಕಂಡ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ.

7th Standard Social Science Chapter 13 Notes Question Answer

I. ರಾಮಮೋಹನ್ ರಾಯರ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣ ಕ್ರಮಗಳನ್ನು ತಿಳಿಸಿ.

1828 ರಲ್ಲಿ ‘ಬ್ರಹ್ಮಸಭಾ’ವನ್ನು ಸ್ಥಾಪಿಸಿದರು. ಅದು ಮರು ವರ್ಷ ‘ಬ್ರಹ್ಮಸಮಾಜ’ ಎಂದು ನಾಮಕರಣಗೊಂಡಿತು. ಸತಿ ಪದ್ಧತಿ, ಜಾತಿ ಪದ್ಧತಿ, ಮೂರ್ತಿ ಪೂಜೆ, ಬಹುಪತ್ನಿತ್ವ, ಬಾಲ್ಯ ವಿವಾಹ ಹಾಗೂ ಎಲ್ಲಾ ತರಹ ಮೂಢ ನಂಬಿಕೆಗಳನ್ನು ಬ್ರಹ್ಮಸಮಾಜವು ಬಲವಾಗಿ ವಿರೋಧಿಸಿತು. ವಿಧವಾ ವಿವಾಹ ಮತ್ತು ಏಕದೇವತಾರಾಧನೆಯ ಪರವಾಗಿದ್ದರು. ‘ಸಂವಾದ ಕೌಮುದಿ’ ಪತ್ರಿಕೆಯ ಮೂಲಕ ಸಾಮಾಜಿಕ ಸುಧಾರಣಾ ಚಳವಳಿಯ ಪ್ರಕ್ರಿಯೆಯನ್ನು ಆರಂಭಿಸಿದರು.

2. ಸಮಾಜ ಸುಧಾರಣೆಯಲ್ಲಿ ಜ್ಯೋತಿ ಬಾಪುಲೆಯವರ ಪಾತ್ರವೇನು?

ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು, ಅಸ್ಪಶ್ಯರು, ಅನಾಥರು ಮತ್ತು ವಿಧವೆಯರಿಗಾಗಿ ಶಾಲೆಗಳನ್ನು ತೆರೆದರು. ಬ್ರಾಹ್ಮಣ ಪುರೋಹಿತಶಾಹಿಯನ್ನು ಖಂಡಿಸಿದರು. ಗುಲಾಮಗಿರಿ ಪತ್ರಿಕ ಆರಂಭಿಸಿದರು. ಮಣೆಯಲ್ಲಿ ಬಾಲಕಿಯರ ಶಾಲೆಯನ್ನು ಆರಂಭಿಸಿದರು. ಬಾಲ ವಿಧವೆಯರಿಗೆ 1863 ರಲ್ಲಿ ಮನರ್ ವಸತಿ ಕೇಂದ್ರವನ್ನು ತೆರೆಯುವ ಮೂಲಕ ನಡೆಯುತ್ತಿದ್ದ ತಿರುಹತ್ಯೆ ಪ್ರಕರಣಗಳನ್ನು ಕೊನೆಗಾಣಿಸುವ ಪ್ರಯತ್ನ ಮಾಡಿದರು. ವಿಧವಾ ವಿವಾಹವನ್ನು ಉತ್ತೇಜಿಸಿದರು.

3. ಥಿಯಸಾಫಿಕಲ್ ಸೊಸೈಟಿಯ ಉದ್ದೇಶಗಳೇನು?

1. ಭೇದವೆಲ್ಲವ ಬಿಟ್ಟು ವಿಶ್ವ ಭಾತೃತ್ವವನ್ನು ನೆಲೆಗೊಳಿಸುವುದು.

2, ಧರ್ಮ, ತತ್ತ್ವಶಾಸ್ತ್ರ ಮತ್ತು ವಿಜ್ಞಾನ ಇವುಗಳ ತುಲನಾತ್ಮಕ ಅಧ್ಯಯನ ನಡೆಸುವುದು,

3. ಪ್ರಕೃತಿಯ ನಿಗೂಢ ತತ್ವಗಳು ಮತ್ತು ಮನುಷ್ಯನಲ್ಲಿ ಅಡಗಿರುವ ಸುಪ್ತಪಕ್ತಿಗಳನ್ನು ಕುರಿತು ಶೋಧ ನಡೆಸುವುದು.

4. ಮುಸ್ಲಿಂ ಸಮುದಾಯವನ್ನು ಸುಧಾರಿಸುವಲ್ಲಿ ಸಯ್ಯದ್ ಅಹ್ಮದ್ ಖಾನರ ಪಾತ್ರವೇನು?

ಪರ್ದಾಪದ್ಧತಿ, ಬಹುಪತ್ನಿತ್ವ ಹಾಗೂ ವಿವಾಹ ವಿಚ್ಚೇದನ ಪದ್ಧತಿಗಳನ್ನು ವಿರೋಧಿಸಿದರು. ಟ್ರಾನ್ಸ್‌ ಲೇಷನ್ ಸೊಸೈಟಿಯನ್ನು ಪ್ರಾರಂಭಿಸಿದರು. ಆನಂತರದಲ್ಲಿ ಈ ಸಂಸ್ಥೆ ‘ಸೈಂಟಿಫಿಕ್ ಸೊಸೈಟಿ’ ಎಂದು ನಾಮಕರಣಗೊಂಡಿತು, ಆಲಿಘರ್ ಇನ್‌ಸ್ಟಿಟ್ಯುಟ್ ಸೆಟ್’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. 1875 ಮಹಮದನ್ ಆಂಗ್ಲ ಓರಿಯಂಟಲ್ ಕಾಲೇಜನ್ನು ಆರಂಭಿಸಿದರು. ಈ ಸಂಸ್ಥೆಯೇ 1920 ರಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿತು.

5. ಹಿಂದುಳಿದ ಸಮುದಾಯಗಳನ್ನು ಸುಧಾರಿಸುವಲ್ಲಿ ನಾರಾಯಣ ಗುರು ಕೈಗೊಂಡ ಕ್ರಮಗಳೇನು?

ಜಾತಿ ಪದ್ಧತಿಯನ್ನು, ಪ್ರಾಣಿಬಲಿಯನ್ನು ವಿರೋಧಿಸಿದರು. ಸಂಸ್ಕೃತ ಶಾಲೆಗಳನ್ನು ತೆರೆದು ಅಲ್ಲಿ ಜಾತಿಮತ ಭೇದರಹಿತವಾಗಿ ಎಲ್ಲರಿಗೂ ಪ್ರವೇಶ ನೀಡಿದರು. ಅವರು ಸುಮಾರು ಮೂವತ್ತು ದೇವಸ್ಥಾನಗಳನ್ನು ನಿರ್ಮಿಸಿದರು. ಕೇರಳದ ಅಸ್ಪಶ್ಯರೂ ಸೇರಿದಂತೆ ಎಲ್ಲಾ ಜಾತಿಯವರಿಗೂ ಪ್ರವೇಶ ಕಲ್ಪಿಸಿದರು.

6. ಮಹಿಳಾ ಸುಧಾರಣೆಯಲ್ಲಿ ಪಂಡಿತ್‌ ರಮಾಬಾಯಿ ಅವರ ಪಾತ್ರವೇನು?:

ಉ: ಮಹಿಳೆಯ ಉದ್ಧಾರಕ್ಕಾಗಿ ಜೀವನವನ್ನೇ ಮುಡುಪಿಟ್ಟು 1889 ರಲ್ಲಿ ‘ಮುಕ್ತಿ ಮಿಷನ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಸ್ಥೆಯು ವಿಧವೆಯರು, ಅನಾಥರು ಹಾಗೂ ಕುಡುಕರಿಗೆ ಜೀವನೋಪಾಯ ಕಲ್ಪಿಸುತ್ತಾ ಇಂದಿಗೂ ಕಾರ್ಯಶೀಲವಾಗಿದೆ.

FAQ

1, ಸತ್ಯಶೋಧಕ ಸಮಾಜದ ಸ್ಥಾಪಕರು ಯಾರು?

ಮಹಾತ್ಮ ಜ್ಯೋತಿಬಾ ಪುಲೆ

2. “ಏಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ” ಇದು ಯಾರ ಕರೆಯಾಗಿತ್ತು?

ಸ್ವಾಮಿ ವಿವೇಕಾನಂದ

3. ‘ಭಾರತದ ನವೋದಯ ಪಿತಾಮಹ’ ಎಂದು ಯಾರನ್ನು ಕರೆಯುತ್ತಾರೆ?

ರಾಜಾ ರಾಮಮೋಹನರಾಯ್‌

ಇತರೆ ವಿಷಯಗಳಿಗಾಗಿ:

7ನೇ ತರಗತಿ ಕನ್ನಡ ನೋಟ್ಸ್

7ನೇ ತರಗತಿ ಇಂಗ್ಲಿಷ್‌ ನೋಟ್ಸ್

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

Leave a Reply

Your email address will not be published. Required fields are marked *

rtgh