7ನೇ ತರಗತಿ ವಿಜ್ಞಾನ ಉಷ್ಣ ನೋಟ್ಸ್‌ | 7th Standard Science Chapter 4 Notes

7ನೇ ತರಗತಿ ವಿಜ್ಞಾನ ಉಷ್ಣ ನೋಟ್ಸ್‌ ಪ್ರಶ್ನೋತ್ತರಗಳು, 7th Standard Science Chapter 4 Notes Question Answer Extract Mcq Pdf Download in Kannada Medium Kseeb Solutions For Class 7 Science Chapter 4 Notes 7th Science Ushna Notes Pdf

7th Standard Science Chapter 4 Notes Question Answer

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಪ್ರಯೋಗ ಶಾಲಾ ತಾಪಮಾಪಕ ಮತ್ತು ವೈದ್ಯಕೀಯ ತಾಪಮಾಪಕಗಳ ನಡುವಣ ಹೋಲಿಕೆ ಮತ್ತು ವ್ಯತ್ಯಾಸಗಳನ್ನು ತಿಳಿಸಿ,

ಹೋಲಿಕೆಗಳು :

1. ಪ್ರಯೋಗ ಶಾಲಾ ತಾಪಮಾಪಕ ಮತ್ತು ವೈದ್ಯಕೀಯ ತಾಪಮಾಪಕಗಳೆರಡೂ ಉದ್ದವಾದ, ನೇರವಾದ ಗಾಜಿನ ನಳಿಕೆಗಳಿಂದ ಮಾಡಲ್ಪಟ್ಟಿರುತ್ತವೆ.

2.ಪ್ರಯೋಗ ಶಾಲಾ ತಾಪಮಾಪಕ ಮತ್ತು ವೈದ್ಯಕೀಯ ತಾಪಮಾಪಕಗಳೆರಡೂ ಪಾದರಸದ ಬುರಡೆಯನ್ನು ಹೊಂದಿರುತ್ತವೆ.

ವ್ಯತ್ಯಾಸಗಳು :

1. ಪ್ರಯೋಗ ಶಾಲಾ ತಾಪಮಾಪಕ ತಾಪದ ವ್ಯಾಪ್ತಿ -10ʼ C ನಿಂದ 110ʼ C ಮತ್ತು ವೈದ್ಯಕೀಯ ತಾಪಮಾಪಕಗಳೆರಡರ ತಾಪದ ವ್ಯಾಪ್ತಿ 35°C ನಿಂದ 42 C ಆಗಿರುತ್ತದೆ.

2. ಪ್ರಯೋಗ ಶಾಲಾ ಶಾಪಮಾಪಕವನ್ನು ಓದುವಾಗ ಕಣ್ಣಿನ ದೃಷ್ಟಿಯ ನೇರದಲ್ಲಿ ಹಿಡಿದು ಪಾದರಸದ ಮಟ್ಟವನ್ನು ಓದಬೇಕು ಮತ್ತು ವೈದ್ಯಕೀಯ ತಾಪಮಾಪಕವನ್ನು ಓದುವಾಗ ಓರೆಯಾಗಿರದೇ ನೇರವಾಗಿಟ್ಟುಕೊಂಡು ಓದಬೇಕು,

2, ಉಷ್ಣವಾಹಕಗಳು ಮತ್ತು ಅವಾಹಕಗಳಿಗೆ ತಲಾ ಎರಡು ಉದಾಹರಣೆ ನೀಡಿ,

ಉಷ್ಣವಾಹಕಗಳು:- 1. ಅಲ್ಯೂಮಿನಿಯಮ್ 2. ತಾಮ್ರ

ಉಷ್ಣ ಅವಾಹಕಗಳು:- 1. ಪ್ಲಾಸ್ಟಿಕ್ 2. ಮರ

ಬಿಟ್ಟ ಸ್ಥಳಗಳನ್ನು ತುಂಬಿ :

(ಎ) ವಸ್ತುವಿನ ಉಷ್ಣತೆಯ ಮಟ್ಟವನ್ನು ನಿರ್ಧರಿಸುವುದು ಅದರ ತಾಪ

(ಬಿ) ಕುದಿಯುವ ನೀರಿನ ತಾಪವನ್ನು ವೈದ್ಯಕೀಯ ತಾಪಮಾಪಕದಿಂದ ಅಳೆಯಲು ಸಾಧ್ಯವಿಲ್ಲ.

(ಸಿ) ತಾಪವನ್ನು ಡಿಗ್ರಿ ಸೆಲ್ಸಿಯಸ್ ನಿಂದ ಅಳೆಯುವರು,

(ಡಿ) ಉಷ್ಣವು ಪ್ರಸಾರವಾಗಲು ಯಾವುದೇ ಮಾಧ್ಯಮದ ಅಗತ್ಯವಿಲ್ಲದ ವಿಧಾನ ಉಷ್ಣ ವಿಕಿರಣ ವಿಧಾನ

(ಇ) ಬಿಸಿ ಹಾಲಿನ ಲೋಟದಲ್ಲಿ ಅದ್ದಿದ ಒಂದು ತಣ್ಣನೆಯ ಸ್ಟೀಲ್ ಚಮಚೆ ತನ್ನ ಇನ್ನೊಂದು ತುದಿಗೆ ಉಷ್ಣ ಪ್ರಸಾರ ಮಾಡುವ ವಿಧಾನ ಉಷ್ಣ ವಹನ

(ಎಫ್) ತಿಳಿಯಾದ ಬಣ್ಣದ ಬಟ್ಟೆಗಳಿಗಿಂತ ಹೆಚ್ಚು ಉಷ್ಣವನ್ನು ಹೀರುವ ಬಟ್ಟೆಗಳು ಕಡು ಬಣ್ಣದ್ದಾಗಿರುತ್ತವೆ.

ಈ ಕೆಳಗಿನವುಗಳನ್ನು ಹೊಂದಿಸಿ :

1. ನೆಲಗಾಲಿ ಬೀಸುವ ಕಾಲ -ರಾತ್ರಿ

2. ಕಡಲ್ಗಾಳಿ ಬೀಸುವ ಕಾಲ – ಹಗಲು

3, ದಟ್ಟವಾದ ಬಣ್ಣದ ಬಟ್ಟೆಗಳನ್ನು ತೊಡಲು ಇಚ್ಛಿಸುವ ಕಾಲ – ಚಳಿಗಾಲ

4. ತಿಳಿಯಾದ ಬಣ್ಣದ ಬಟ್ಟೆಗಳನ್ನು ತೊಡಲು ಇಚ್ಛಿಸುವ ಕಾಲ – ಬೇಸಿಗೆ

5. ಚಳಿಗಾಲದಲ್ಲಿ ಒಂದೇ ಪದರದ ದಪ್ಪ ಬಟ್ಟೆಯನ್ನು ಧರಿಸುವುದಕ್ಕಿಂತ ಹಲವು ಪದರಗಳ ಬಟ್ಟೆ ಧರಿಸುವುದು ನಮ್ಮನ್ನು ಬೆಚ್ಚಗೆ ಇಡುತ್ತದೆ. ಏಕೆ? ಚರ್ಚಿಸಿ,

ಬಟ್ಟೆಯ ಪದರಗಳ ನಡುವೆ ಗಾಳಿ ಹಿಡಿದಿಡಲ್ಪಟ್ಟಿರುತ್ತದೆ. ಗಾಳಿಯು ಅಲ್ಪ ಉಷ್ಣ ವಾಹಕವಾದುದರಿಂದ ಬಟ್ಟೆಯ ಪದರಗಳ ನಡುವೆ ಹಿಡಿದಿಡಲ್ಪಟ್ಟ ಗಾಳಿಯು ನಮ್ಮ ದೇಹದಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ಉಷ್ಣದ ವರ್ಗಾವಣೆಯನ್ನು ತಡೆಯುತ್ತದೆ. ಇದರಿಂದ ನಮಗೆ ಬೆಚ್ಚನೆಯ ಅನುಭವವಾಗುತ್ತದೆ. ಒಂದೇ ಪದರದ ದಪ್ಪ ಬಟ್ಟೆಗಿಂತ ಹೆಚ್ಚು ಪದರಗಳ ಬಟ್ಟೆಯು ಹೆಚ್ಚು ಗಾಳಿಯನ್ನು ಹಿಡಿದಿಡುವುದರಿಂದ ನಮಗೆ ಹೆಚ್ಚು ಬೆಚ್ಚನೆಯ ಅನುಭವವಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಹೆಚ್ಚು ಪದರಗಳ ಬಟ್ಟೆ ಧರಿಸುವುದು ಉತ್ತಮ.

6. ಚಿತ್ರ 4.13ನ್ನು ನೋಡಿ, ವಹನ, ಸಂವಹನ ಮತ್ತು ವಿಕಿರಣದಿಂದ ಎಲ್ಲೆಲ್ಲಿ ಉಷ್ಣ ಪ್ರಸಾರವಾಗುತ್ತಿದೆ ಗುರುತು ಮಾಡಿ

7, ಉಷ್ಣ ಹವಾಮಾನದ ಪ್ರದೇಶಗಳಲ್ಲಿ ಮನೆಗಳ ಹೊರಗೋಡೆಗಳಿಗೆ ಬಿಳಿ ಬಣ್ಣ ಬಳಿಯುವುದು ಸೂಕ್ತ. ವಿವರಿಸಿ.

ಉಷ್ಣ ಹವಾಮಾನದ ಪ್ರದೇಶಗಳಲ್ಲಿ ಮನೆಗಳ ಹೊರಗೋಡೆಗಳಿಗೆ ಬಿಳಿ ಬಣ್ಣ ಬಳಿಯುವುದು ಸೂಕ್ತ ಏಕೆಂದರೆ, ಬಿಳಿ ಬಣ್ಣವು ತನ್ನ ಮೇಲೆ ಬಿದ್ದ ಬಹುಪಾಲು ಉಷ್ಣವನ್ನು ಹೀರಿಕೊಳ್ಳದೆ ಪ್ರತಿಫಲಿಸುತ್ತದೆ. ಇದರಿಂದ ಹೊರಗೋಡೆ ಹೆಚ್ಚು ಬಿಸಿಯಾಗುವುದಿಲ್ಲ. ಇದರಿಂದ ಮನೆಯ ಒಳಗಿನ ಉಷ್ಣಾಂಶವನ್ನು ಹತೋಟಿಯಲ್ಲಿಡಬಹುದು.

8. 30 °C ನ ಒಂದು ಲೀಟರ್ ನೀರನ್ನು 50° C ನ ಒಂದು ಲೀಟರ್ ನೀರಿನೊಂದಿಗೆ ಬೆರೆಸಿದೆ. ಈ ಸಂದರ್ಭದಲ್ಲಿ ಮಿಶ್ರಣದ ತಾಪ ಎಷ್ಟಿರುತ್ತದೆ?

(1) 80°c

(2) 20°c

(3) 50° C ಗಿಂತ ಹೆಚ್ಚು 80°C ಗಿಂತ ಕಡಿಮೆ

(4) 30° C ನಿಂದ 50° C ನಡುವೆ,

ಉತ್ತರ:-(ಡಿ) 30 C ನಿಂದ 50° C ನಡುವೆ.

9, 40° C ನ ಒಂದು ಕಬ್ಬಿಣದ ಗುಂಡನ್ನು 40° C ನ ನೀರಿರುವ ಪಾತ್ರೆಗೆ ಹಾಕಿದರೆ ಉಷ್ಣವು

(ಎ) ಕಬ್ಬಿಣದ ಗುಂಡಿನಿಂದ ನೀರಿಗೆ ಹರಿಯುತ್ತದೆ.

(ಬಿ) ಕಬ್ಬಿಣದ ಗುಂಡಿನಿಂದ ನೀರಿಗಾಗಲಿ ಅಥವಾ ನೀರಿನಿಂದ ಕಬ್ಬಿಣದ ಗುಂಡಿಗಾಗಲೀ ಹರಿಯುವುದಿಲ್ಲ.

(ಸಿ) ನೀರಿನಿಂದ ಕಬ್ಬಿಣದ ಗುಂಡಿಗೆ ಹರಿಯುತ್ತದೆ.

(ಡಿ) ಎರಡರ ತಾಪವೂ ಹೆಚ್ಚಾಗುತ್ತದೆ.

ಉತ್ತರ:- (ಬಿ) ಕಬ್ಬಿಣದ ಗುಂಡಿನಿಂದ ನೀರಿಗಾಗಲಿ ಅಥವಾ ನೀರಿನಿಂದ ಕಬ್ಬಿಣದ ಗುಂಡಿಗಾಗಲೀ

10. ಹರಿಯುವುದಿಲ್ಲ. ಮರದ ಚಮಚವನ್ನು ಒಂದು ಕಪ್‌ ಐಸ್‌ಕ್ರೀಮ್‌ನಲ್ಲಿ ಅದ್ದಿದಾಗ ಅದರ ಇನ್ನೊಂದು ತುದಿ

(ಎ) ವಹನ ಕ್ರಿಯೆಯಿಂದ ತಣ್ಣಗಾಗುತ್ತದೆ.

(ಬಿ) ಸಂವಹನ ಕ್ರಿಯೆಯಿಂದ ತಣ್ಣಗಾಗುತ್ತದೆ.

(ಸಿ) ವಿಕಿರಣ ಕ್ರಿಯೆಯಿಂದ ತಣ್ಣಗಾಗುತ್ತದೆ.

(ಡಿ) ತಣ್ಣಗಾಗುವುದಿಲ್ಲ.

ಉತ್ತರ:- (ಡಿ) ತಣ್ಣಗಾಗುವುದಿಲ್ಲ.

11. ಸಾಮಾನ್ಯವಾಗಿ ಕಲೆರಹಿತ ಉಕ್ಕಿನ (stainless steel) ಬಾಣಲೆಗಳಿಗೆ ತಾಮ್ರದ ತಳ ಕಟ್ಟುವರು, ಇದಕ್ಕೆ

(ಎ) ತಾಮ್ರದ ತಳವು ಬಾಣಲೆ ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.

(ಬಿ) ಇಂತಹ ಬಾಣಲೆಗಳು ಬಣ್ಣ ಬಣ್ಣವಾಗಿ ಕಾಣಿಸುತ್ತವೆ.

(ಸಿ) ತಾಮ್ರದ ಕಲೆರಹಿತ ಉಕ್ಕಿಗಿಂತ ಉತ್ತಮ ಉಷ್ಣವಾಹಕ,

(ಡಿ) ಕಲೆರಹಿತ ಉಕ್ಕಿಗಿಂತ ತಾಮ್ರವನ್ನು ಸ್ವಚ್ಛಗೊಳಿಸುವುದು ಸುಲಭ.

ಉತ್ತರ:- (ಸಿ) ತಾದುವು ಕಲೆರಹಿತ ಉಕ್ಕಿಗಿಂತ ಉತ್ತಮ ಉಷ್ಣವಾಹಕ.

FAQ

1, ಉಷ್ಣವಾಹಕಗಳಿಗೆ ತಲಾ ಎರಡು ಉದಾಹರಣೆ ನೀಡಿ,

1. ಅಲ್ಯೂಮಿನಿಯಮ್ 2. ತಾಮ್ರ

2. ಅವಾಹಕಗಳಿಗೆ ತಲಾ ಎರಡು ಉದಾಹರಣೆ ನೀಡಿ,

1. ಪ್ಲಾಸ್ಟಿಕ್ 2. ಮರ

ಇತರೆ ವಿಷಯಗಳು :

7ನೇ ತರಗತಿ ಕನ್ನಡ ನೋಟ್ಸ್

7ನೇ ತರಗತಿ ಇಂಗ್ಲಿಷ್‌ ನೋಟ್ಸ್

7ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

Leave a Reply

Your email address will not be published. Required fields are marked *

rtgh