5th Standard Sullu Helabaradu Kannada Notes | 5ನೇ ತರಗತಿ ಸುಳ್ಳು ಹೇಳಬಾರದು ಕನ್ನಡ ನೋಟ್ಸ್ 

5th Sullu Helabaradu Standard Kannada Notes | 5ನೇ ತರಗತಿ ಸುಳ್ಳು ಹೇಳಬಾರದು ಕನ್ನಡ ನೋಟ್ಸ್ 

5th Sullu Helabaradu Standard Kannada Notes question answer, text book pdf download Kannada, 5ನೇ ತರಗತಿ ಸುಳ್ಳು ಹೇಳಬಾರದು ಪಾಠದ ನೋಟ್ಸ್ ಪ್ರಶ್ನೆ ಉತ್ತರ

ಪದಗಳ ಅರ್ಥ

 ಅಪ್ಪಿ = ತಬ್ಬಿಕೊಂಡು , ಆಲಿಂಗನ ಮಾಡಿ . ಉದಯಿಸು = ಹುಟ್ಟು , ಮೂಡು . ಕವಿದಿರುವ = ಆವರಿಸಿರುವ ,

ಮರೆಮಾಡಿರುವ ಕಪಾಯ = ಔಷಧಿ , ಗಿಡಮೂಲಿಕೆ ಇಳಿಸಿ ತೆಗೆದ ರಸ . ಕೆಂಬಣ್ಣ , = ಕೆಂಪು ಬಣ್ಣ ,

ರಕ್ತವರ್ಣ = ಚಾಚಿ = ನೀಡಿ , ಮುಂದೆ ಒಡ್ಡಿ ಚಾತುರ್ಮಾಸ = ನಾಲ್ಕು ತಿಂಗಳು , ನಾಲ್ಕು ತಿಂಗಳು ನಡೆಸುವ

ವ್ರತ – ನೆಟ್ಟ ಕಣ್ಣಿನಿಂದ 1 ತಿಂಗಳು ನೋಡು , ದಿಟ್ಟಿಸಿ ದಟ್ಟ = ಸಾಂದ್ರವಾದ , ಮಂದವಾ ಡಿನ್ನ = ದಿಬ್ಬ ,

ಬೋರೆ , ತೆವರು ದುರುಗುಟ್ಟು ನೋಡು ಪರದೆ = ತೆರೆ , ಜವನಿಕೆ . ಪಶ್ಚಾತ್ತಾಪ = ಮಾಡಿದ ತಪ್ಪು

ಕೆಲಸಕ್ಕಾಗಿ ಮರುಗುವಿಕೆ ಪ್ರಸಿದ್ಧ = ಹೆಸರುವಾಸಿಯಾದ , ಖ್ಯಾತಿ ಹೊಂದಿದ ಮುಂಜಾನೆ = ಬೆಳಗಿನ

ಜಾವ , ನಸುಕು ಮೀರಿ = ದಾಟಿ , ಮುಂದೆ ಹೋಗಿ ವ್ರತ = ನಿಯಮ , ನೋಂಪಿ ಸಂತೋಷ = ಹಿಗ್ಗು ,

ಆನಂದ ಶಪಥ = ಪ್ರತಿಜ್ಞೆ ಆಣೆ 

ಅಭ್ಯಾಸ 

ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .

 1. ಪುತಲೀಬಾಯಿಯವರು ಗಾಂಧೀಜಿಯವರನ್ನು ಏನೆಂದು ಕರೆಯುತ್ತಿದ್ದರು ? 

ಪುತಲೀಬಾಯಿಯವರು ಗಾಂಧೀಜಿಯವರನು ಪ್ರೀತಿಯಿಂದ ಮೋನು ಪಾಪು ಎಂದು ಕರೆಯುತ್ತಿದ್ದರು .

 1. ಪುತಲೀಬಾಯಿಯವರ ವ್ರತದ ನಿಯಮವೇನು ?

ವ್ರತದ ಪುತಲೀಬಾಯಿಯವರ ಸೂಯೋದಯವನ್ನು ನೋಡಿ ಊಟ ಮಾಡ ಬೇಕೆಂ ಬುದು .

 3 .  ಮೋನುಪಾವು ಏನೆಂದು ಆಸೆ ಪಡುತ್ತಿದ್ದನು ? 

ವ್ರತದ ದಿನಗಳಲ್ಲಿ ತನ್ನ ಅಮ್ಮ ಬೇಗನೆ ಊಟ

ಮಾಡಬೇಕೆಂದು ಆಸೆ ಪಡುತ್ತಿದ್ದನು . 

 1. ಮಕ್ಕಳಿಬ್ಬರಿಗೂ ಏಕೆ ನಾಚಿಕೆ ಉಂಟಾಯಿತು ? 

ಇಂತಹ ಒಳ್ಳೆ ಅಮ್ಮನಿಗೆ ಸುಳ್ಳು ಹೇಳಿದೆವಲ್ಲ ಎಂದು ನಾಚಿಕೆಯುಂಟಾಯಿತು . 

ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ . 

ಪುತಲೀಬಾಯಿಯವರು ಚಾತುರ್ಮಾಸದಲ್ಲಿ ಯಾವ ರೀತಿ ಉಪವಾಸ ವ್ರತವನ್ನು ಆಚರಿಸುತ್ತಿದ್ದರು ? ವಿವರಿಸಿರಿ ? 

ಮತಲೀಬಾಯಿಯವರು ಚಾತುರ್ಮಾಸದಲ್ಲಿ ಇಡೀ ದಿನ ಉಪವಾಸ ಮಾಡುತ್ತಿದ್ದರು . ಮಾರನೆಯ

ದಿನ ಸೂಯೋದಯವನ್ನುಎಂದರೆ ಸೂಯ್ಯನನ್ನು ನೋಡಿ ,

ನಮಸ್ಕರಿಸಿ ಊಟ ಮಾಡುತ್ತಿದ್ದರು . ಸೂರಿ ಕಾಣದೇ ಹೋದರೆ ಅಂದೂ ಉಪವಾಸ

ಮುಂದುವರೆಯುತ್ತಿತ್ತು . ಈ ವ್ರತವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದರು . 

 1. ಮೋನು ಪಾಪು ಮತ್ತು ರಲಿತ ಅಮ್ಮನಿಗೆ ಸುಳ್ಳು ಹೇಳಲು ಕಾರಣವೇನು ? 

ಒಮ್ಮೆ ಮೋನುವಿಗೆ ಐದು ವರ್ಷ ತುಂಬಿದ ಹುಟ್ಟಿದ ದಿನ ಚಾತುರ್ಮಾಸದ ವ್ರತದ ದಿನ ಎರಡು ದಿನಗಳಿಂದ ಅವರ

ಅಮ್ಮನಿಗೆ ಜ್ವರ ಬರುತ್ತಿದ್ದು , ಹಿಂದಿನ ರಾತ್ರಿ ವೈದ್ಯರು ಕಷಾಯ ಕುಡಿಸಿ , ಮಾರನೆಯ ದಿನ ಎಂದು ಹೇಳಿದ್ದರು . ಆದರೆ

ಅವರ ನೋಡದೆ ಊಟ ಮಾಡು ಸ್ವಲ್ಪವಾದರೂ ಊಟ ಮಯನನ್ನು ಮಾಡದೆ ಕಪ್ಪಲಿಲ್ಲ . ಅವರ ಅಮ್ಮ ಊಟ ಮಾಡದೆ

ಕಷ್ಟ ಪಡುವುದನ್ನು ನೋಡಲಾರದೆ ಸುಳ್ಳು ಹೇಳಿದರು . 

 1. ಮಕ್ಕಳಿಗೆ ಬುದ್ದಿ ಕಲಿಸಲು ಅಮ್ಮ ಮಾಡಿದ ಉಪಾಯವೇನು ?

 ಮಕ್ಕಳು ಸುಳ್ಳು ಹೇಳಿದ್ದು ತಪ್ಪು ಎಂದು ತಿಳಿದ ಅವರ ತಾಯಿ ಅತಂತ ದುಃಖದಿಂದ ಮಕ್ಕಳಿಗೆ ನೋಡಿ ಮಕ್ಕಳೇ

ನೀವು ಸೂಯ್ಯನನ್ನು ನೋಡಿದ್ದು ನಿಜವಾದರೆ ನಿಮ್ಮ ಬಲಗೈಯಿಂದ , ನೋಡಿಲ್ಲವಾದರೆ ಎಡಗೈಯಿಂದ ನನ್ನ ಕೈಯನ್ನು

ಮುಟ್ಟಿ , ನಾನು ಕಣ್ಣು ಮುಚ್ಚಿಕೊಂಡಿರುತ್ತೇನೆ . ನನಗೆ ನೀವು ಯಾವ ಕೈಯಿಂದ ಮುಟ್ಟಿದರೂ ಗೊತ್ತಾಗುವುದಿಲ್ಲ . ಆದರೆ ನನ್ನ ಒಳ್ಳೆಯ

ಮಕ್ಕಳು ಸುಳ್ಳು ಹೇಳುವುದಿಲ್ಲ ಎಂಬ ನಂಬಿಕೆಯಿದೆ ಎಂದು ಕಣ್ಮುಚ್ಚಿ ಕುಳಿತರು . ಮಕ್ಕಳು ತಾಯಿಯ ಕೈಯನ್ನು ಮುಟ್ಟಲೇ

ಇಲ್ಲ . ಇಂತಹ ಒಳ್ಳೆಯ ಅಮ್ಮನಿಗೆ ತಾವು ಸುಳ್ಳು ಹೇಳಿದೆವಲ್ಲ ಎಂದು ಪಶ್ಚಾತ್ತಾಪಪಟ್ಟರು . ನಂತರ ಅಮ್ಮ ಮಕ್ಕಳೇ ಯಾವುದೇ

ಕಾರಣಕ್ಕೂ ಹೇಳಬೇಡಿ ಎಂದಾಗ ಹಾಗೆಯೇ ಆಗಲೆಂದು ಶಪದ ಮಾಡಿದರು . ಈ ರೀತಿ ಅಮ್ಮ ತಮ್ಮ ಉಪಾಯದಿಂದ  ಮಕ್ಕಳಿಗೆ ಒಳ್ಳೆ

ಬುದ್ಧಿಯನ್ನು ಕಲಿಸಿದರು . 

ಇ ) ಹೊಂದಿಸಿ ಬರೆಯಿರಿ

 1. ಚಾತುರ್ಮಾಸ               ಸುಳ್ಳುಹೇಳಬಾರದು 
 2. ಪೂರ್ವದಿಕ್ಕಿನಲ್ಲಿ          ನಾಚಿಕೆ ಉಂಟಾಯಿತು 
 3. ಶಪಥ                          ಉಪವಾಸ ವ್ರತ 
 4. ಎಪೇ ಕಪ್ಪ                   ಬಂದರೂ ಸೂರ್ಯನ ಉದಯ 
 5. ಕೈ ಮುಟ್ಟಲು                ಪ್ರತಿಜ್ಞೆ 

ಉತ್ತರ : .. 

 1-3

  2-4 

 3-5 

 4-1 

 5-2 

ಈ ) ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸೂಕ್ತವಾದ ದ್ದನ್ನು ಆರಿಸಿ ಬಿಟ್ಟ ಸ್ಥಳ ಭರ್ತಿ ಮಾಡಿರಿ . 

 1. 1. ಅಮ್ಮ ಹಸಿವಿನಿಂದ ಇರುವುದು ಮೋನು ಬೇಸರವನ್ನುಂಟುಮಾಡುತ್ತಿತ್ತು . 
 2. ಸೂರ್ಯ ಉದಯಿಸುವುದು ಕಾಣಬೇಕಾದರೆ ಪರದೆ ಕಟ್ಟಿರುವ ಕಪ್ಪು ಮೋಡಗಳು ಕರಗಬೇಕು . 
 3. “ ನೀವಿಬ್ಬರೂ ಉದಯಿಸಿರುವ ಸೂರ್ಯನನ್ನು ಕಂಡದ್ದು ನಿಜವೆ ? ” ಎಂದು  ಪ್ರಶ್ನಿಸಿದರು
 1. ಇಬ್ಬರು ಮಕ್ಕಳೂ ಸುಳ್ಳು ಹೇಳಿದ್ದರಿಂದ ಅಮ್ಮನ ಕೈಮುಟ್ಟಲು ಭಯವಾಯಿತ

  ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ . 

 1. ನಾಮಪದ ಎಂದರೇನು ? ಉದಾಹರಣೆ ಕೊಡಿರಿ . 

ವ್ಯಕ್ತಿ , ವಸ್ತು , ಸ್ಥಳ ಮತ್ತು ಪ್ರಾಣಿಗಳ ಹೆಸರುಗಳನ್ನು ಸೂಚಿಸುವ ಪದಗಳಿಗೆ ನಾಮಪದ ಎನ್ನುವರು .

ಉದಾ : ರಾಮ , ಪುಸ್ತಕ , ಬೆಂಗಳೂರು , ಆನೆ . 

 1. ನಾಮ ಪದಗಳಲ್ಲಿ 3 ವಿಧ . ಅವು ಅಂಕಿತನಾಮ , ರೂಢನಾಮ , ಅನ್ವರ್ಥನಾಮ

 ಆ ) ಹೊಂದಿಸಿ ಬರೆಯಿರಿ .

             ‘ಅ ‘                               ‘ ಆ ‘

 1. ಅಂಕಿತ ನಾಮ                ರೂಢಿಯಿಂದ ಬಂದ ಪದಗಳಿ
 2. ರೂಢನಾಮ ರೂಪ ,     ಗುಣ ಸ್ವಭಾವಾದಿ ವಿಶೇಷವಾದ ಅರ್ಥಕ್ಕೆ ಅನುಗುಣವಾಗಿ ಬಂದ ಹೆಸರು
 3. ಅನ್ವರ್ಥನಾಮಗೆ            ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕೆಇಟ್ಟುಕೊಂಡ ಹೆಸರು

ಉತ್ತರ : 1-3 2-1 3-2 

 ಇ ) ಕೊಟ್ಟಿರುವ ಪದಗಳನ್ನು ರೂಢನಾಮ , ಅಂಕಿತ ನಾಮ ನಾಮ ಹಾಗೂ ಅನ್ವರ್ಥನಾಮಗಳಾಗಿ ವಿಂಗಡಿಸಿ ಬರೆಯಿರಿ . 

ಮೋನು , ರಲಿತ , ತಾಯಿ , ಗಾಂಧೀಜಿ , ಪ್ರವೀಣ , ಶಾಲೆ , ಹಸೀನಾ , ನ್ಯಾಯಾಧೀಶ , ಆನೆ , ವ್ಯಾಪಾರಿ , ಮಗು , ಪುಸ್ತಕ , ನೇಕಾರ , ಕಾವಲುಗಾರ , ಕುರುಡ . 

ರೂಢನಾಮ  ಅಂಕಿತ ನಾಮ  ಅನ್ವರ್ಥನಾಮ 
ತಾಯಿ ಮೋನು ವ್ಯಾಪಾರಿ
 ಶಾಲೆ ರಲಿತ ನೇಕಾರ
ಆನೆ ಗಾಂಧೀಜಿ ಕಾವಲುಗಾರ
ಮಗು ಪ್ರವೀಣ ಕುರುಡ
ಪುಸ್ತಕ ಹಸೀನಾ ನ್ಯಾಯಾಧೀಶ

ಊ ) ಶುಭನುಡಿ 

 1. ಕನ್ನಡಿ ನಿನಗೆ ಬೇಡ , ಕನ್ನಡಿಯೆ ನೀನಾಗು 
 2. ನುಡಿದರೆ ಮುತ್ತಿನ ಹಾರದಂತಿರಬೇಕು .
 3. ಮಾತಿನ ರೀತಿಗೆ ಪ್ರೀತಿಯ ಬೆಸುಗೆ . 

ಪ್ರವೇಶ 

ಎಳೆಯವರಿದ್ದಾಗ ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಸುಳ್ಳು ಹೇಳಿಯೇ ಹೇಳುತ್ತಾರೆ

ಮಹಾತ್ಮಾಗಾಂಧಿ ಕೂಡ ಇದಕ್ಕೆ ಹೊರತಾಗಿರಲಿಲ್ಲ . ಗಾಂಧೀಜಿಯವರ ಬದುಕಿನಲ್ಲಿ ನಡೆದ ಪಂದ ಮುಂದೆ

ಅವರನ್ನು ಸುಳ್ಳು ಹೇಳದಂತೆ ಸರಿಯಾದ ಮಾರ್ಗದರ್ಶನ , ಸಿಗಬೇಕಾದ ಸಂದರ್ಭದಲ್ಲಿ ಸಿಕ್ಕಿದರೆ ಎಂಥವರೂ

ತಮ್ಮ ತಪ್ಪನ್ನು ಎಂಬುದುಈ ಪಾಠದ ಆಶಯವಾಗಿದೆ .

 ಮುಖ್ಯಾಂಶಗಳು 

ಮಹಾತ್ಮ ಗಾಂಧೀಜಿಯವರು ಮಗುವಾಗಿದ್ದ ದಿನಗಳಲ್ಲಿ ಎಲ್ಲರೂ ಅವರನ್ನು ‘ ಮೋನುಪಾವು ‘ ಎಂದು ಕರೆಯುತ್ತಿದ್ದರು .

ಅವರ ತಾಯಿಯ ಹೆಸರು ಪುತಲೀಬಾಯಿ . ಚಾತುರ್ಮಾಸದಲ್ಲಿ ಅವರ ತಾಯಿ ಉಪವಾಸ ವ್ರತವನ್ನು ಮಾಡುತ್ತಿದ್ದರು .

ಮಾರನೆಯ ದಿನ ಉದಯಿಸುವ ಸೂರನನ್ನು ನೋಡದೆ ಊಟವನ್ನು ಮಾಡುತ್ತಿರಲಿಲ್ಲ . ಎಷ್ಟೋ ಕಷ್ಟವಾದರೂ ವ್ರತದ

ನಿಪ್ಪೆಯನ್ನು ಬಿಡುತ್ತಿರಲಿಲ್ಲ . ಅಂತಹ ದಿನಗಳಲ್ಲಿ ಮೋನುಪಾವುವು ಬೆಳಿಗ್ಗೆ ಬೇಗನೆ ಎದ್ದು ದಿಣ್ಣೆಯನ್ನು ಏರಿ ನಿಂತು

ಸೂರೆ ಹುಟ್ಟುವುದನ್ನು ಎಲ್ಲರಿಗಿಂತ ಮೊದಲು ನೋಡಿ , ಓಡಿ ಬಂದು ಅಮ್ಮನಿಗೆ ಹೇಳುತ್ತಿದ್ದ . ಅಮ್ಮ ಊಟ ಮಾಡಿದರೆ

ಮೋನು ಪಾಪುವಿಗೆ ಸಂತೋಷ ವಾಗುತ್ತಿತ್ತು .

ಆದರೆ ಮಳೆಗಾಲದಲ್ಲಿ ಮೋಡ ಕವಿದಿರುವುದರಿಂದ ಸೂರ್ಯನ ದರ್ಶನವಾಗುತ್ತಿರಲಿಲ್ಲ . ಆದರೆ ಮೋನುವಿನ

ತಾಯಿ ತನ್ನ ವ್ರತವನ್ನು ಭಂಗಗೊಳಿಸುತ್ತಿರಲಿಲ್ಲ . ಅಮ್ಮ ಊಟ ಮಾಡದೆ ಕಷ್ಟ ಪಡುವುದನ್ನು ಮೋನುವಿಗೆ

ನೋಡಲಾಗುತ್ತಿರಲಿಲ್ಲ . ಅವನಿಗೆ ಬೇಸರವಾಗುತ್ತಿತ್ತು . ಅವನಿ ಒಮ್ಮೆ ಮೋನುವಿಗೆ 5 ವರ್ಷ ತುಂಬಿದ ದಿನ ಹೊಸ

ಬಟ್ಟೆ ಹಾಕಿಕೊಂಡು ಸಿಹಿ ಊಟ ಮಾಡುವ ತರಾತುರಿಯಲ್ಲಿದ್ದನು . ಅಂದು ಅನಿರೀಕ್ಷಿತವಾಗಿ ಬೆಳಿಗ್ಗೆಯೇ ಮಳೆ ಬಂದಿದ್ದರಿಂದ

ಆಕಾಶದಲ್ಲಿನ್ನೂ ಕಪ್ಪು ಮೋಡಗಳಿದ್ದವು . ಸೂರ ಕಾಣುತ್ತಿರಲಿಲ್ಲ . ಅಮ್ಮ ಸೂಯ್ಯನನ್ನು ನೋಡದೆ ಊಟ ಮಾಡುವುದಿಲ್ಲ .

ಖಾಯಿಲೆ ಮಲಗಿರುವ ಅಮ್ಮ ಉಪವಾಸವಿದ್ದಾಗ ತಾನು ಸಿಹಿಯೂಟ ಮಾಡುವುದು ಇಷ್ಟವಿರಲಿಲ್ಲ . ಸುರಿಯುತ್ತಿರುವ ಮಳೆ ನಿಂತು , ಕಪ್ಪು ಮೋಡ

ಕರಗಿ ಸೂರ ಕಾಣುವುದು ಸಹ ಮಾಡುವುದೆಂದು ಯೋಚಿಸಿ ತನ್ನ ಅಕ್ಕ ಲಲಿತಳ ಜೊತೆ ಚರ್ಚೆ ಮಾಡಿ

ಅವರಿಬ್ಬರೂ ಸೇರಿ ಒಂದು ಉಪಾಯ ಮಾಡಿದರು . ಏಕೆಂದರೆ ವೈದ್ಯರು ಅವರ ಅವಳ ಹಿಂದಿನ ರಾತ್ರಿ ಕಷಾಯ

ಕುಡಿಸಿದ ಸ್ವಲ್ಪವಾದರೂ ಊಟ ಮಾಡಲೇಬೇಕು ಎಂದಿದ್ದರು . ಆ ಮಕ್ಕಳು ತಮ್ಮ ಉಪಾಯದ ಪ್ರಕಾರ ಮನೆಯ

ಜಗುಲಿಯಲ್ಲಿ ನಿಂತು ಒಳಮನೆಯಲ್ಲಿರುವ ಅಮ್ಮನಿಗೆ ಕೇಳಿಸುವಂತೆ ಓ , ಸೂರ ಉದಯಿಸಿದ , ಸೂರ ಕಾಣಿಸಿದ ಎಂದು

ಕಿರುಚಿದರು . ಹಾಗೇ ಹೇಳುತ್ತಲೇ ಅಮ್ಮನ ಎದುರು ನಿಂತರು . ಅಮ್ಮನಿಗೆ ತನ್ನ ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು

ಗೊತ್ತಾಗಿ ಬಿಟ್ಟಿತ್ತು . ಇದರಿಂದ ಅವಳಿಗೆ ತುಂಬಾ ದುಃಖವಾಯಿತು . ಆಗ ಮಕ್ಕಳನ್ನು ನೀವಿಬ್ಬರೂ ಉದಯಿಸುತ್ತಿರುವ

ಸೂಯ್ಯನನ್ನು ನೋಡಿದಿರಾ ? ಇದು ನಿಜವೇ ? ಎಂದು ಏನು

ಕೇಳಿದಳು . ಮಕ್ಕಳಿಗೆ ತಮ್ಮ ಅಮ್ಮ ಊಟ ಮಾಡುವುದು ತೀರ ಅಗತ್ಯ ಎಂದು ನಂಬಿದ್ದರಿಂದ ಹೌದು

ಎಂದು ಸುಳ್ಳು ಹೇಳಿಬಿಟ್ಟರು . ತಮ್ಮ ಮಕ್ಕಳು ಇನ್ನೊಮ್ಮೆ ಸುಳ್ಳು ಹೇಳಿದ್ದನ್ನು ಕಂಡು ಅವಳಿಗೆ ತುಂಬಾ

ದುಃಖವಾಯಿತು . ಆಗ ಅವಳು ಮಕ್ಕಳನ್ನು ಕರೆದು ತನ್ನ ಬಲ ಕೈಯನ್ನು ಮುಂದೆ ಮಾಡಿ ಈಗ ನಾನು ಕಣ್ಣು

ಮುಚ್ಚಿಕೊಳ್ಳುತ್ತೇನೆ . ನೀವು ಸೂಯ್ಯನನ್ನು ನೋಡಿದ್ದರೆ ಬಲಗೈಯಿಂದ , ನೋಡದಿದ್ದರೆ ಎಡಗೈಯಿಂದ ಮುಟ್ಟಬೇಕು .

ನಾನು ಕಣ್ಣು ಮುಚ್ಚಿರುವುದರಿಂದ ನನಗೆ ಯಾವ ಕೈಯಿಂದ ಮುಟ್ಟಿದರೆಂದು … ಆದರೆ ನನ್ನ ಮಕ್ಕಳು ಸುಳ್ಳು ಹೇಳಿ

ಮುಟ್ಟುವುದಿಲ್ಲ ಎಂದು ನಂಬಿದೇನೆ ಎಂದು ಹೇಳಿ ಕಣ್ಣು ಮುಚ್ಚಿ ಕುಳಿತಳು . ಮಕ್ಕಳಿಬ್ಬರಿಗೂ ಇಷ್ಟು ಒಳ್ಳೆಯ ಅಮ್ಮನ

ಬಳಿ ಸುಳ್ಳು ಹೇಳಿದ್ದಕ್ಕಾಗಿ ಅವರಿಗೆ ನಾಚಿಕೆಯಾಗಿತ್ತು . ಹಾಗೆಯೇ ಅವರಿಗೆ ಅವರ ತಪ್ಪಿನ ಅರಿವಾಗಿತ್ತು . ಅವರು ತಾಯಿಯ

ಕೈ ಮುಟ್ಟದೆ ಸುಮ್ಮನೆ ನಿಂತರು . ಬಹಳ ಹೊತ್ತಾದರೂ ಯಾರೂ ಕೈಯನ್ನು ಮುಟ್ಟದಿರಲು , ಸುಳ್ಳು ಹೇಳಿದ ಮಕ್ಕಳು ಈಗ

ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ತಿಳಿದು ಕಣ್ಣು ತೆರೆದಳು . ಇಬ್ಬರ ಮಕ್ಕಳನ್ನೂ ಹತ್ತಿರಕ್ಕೆ ಕರೆದು ಅಪ್ಪಿಕೊಂಡು ಮುದ್ದು

ಮಾಡಿದಳು . ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು ಮಕ್ಕಳೇ ಎಂದು ತಿಳಿಸಿ ಹೇಳಿದಳು . ಅಂದೇ ಮೋನು

ಶಪಥ ಮಾಡಿದನು . “ ಏನೇ ಕಷ್ಟ ಬಂದರೂ ಇನ್ನುಂದೆ ತಾನು ಸುಳ್ಳು ಹೇಳುವುದಿಲ್ಲ ” ಎಂದು ,

ಇದನ್ನು ಅವರು ತಮ್ಮ ಜೀವನವಿಡೀ ಪಾಲಿಸಿ , ಸತ್ಯಕ್ಕೆ ಹರಿಶಂದ್ರನಂತೆ ಇವರೂ ಮಾದರಿಯಾಗಿದ್ದಾರೆ .

ಈ ಪಾಠದಿಂದ ಮಕ್ಕಳೂ ಸಹ ತಮ್ಮ ಜೀವಮಾನದಲ್ಲಿ ಸುಳ್ಳು ಹೇಳುವುದಿಲ್ಲ ಎಂಬ ಸದ್ಗುಣವನ್ನು ಕಲಿಯಲಿ ಎಂಬುದೇ ಈ ಪಾಠದ ಆಶಯ . 

ಕೃತಿಕಾರರ ಪರಿಚಯ 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರು ಎಂಬಲ್ಲಿ 1951 ರಲ್ಲಿ ಜನಿಸಿದ ಮಹಮ್ಮದ್

ಕುಂಞ ಅವರು ನಲ್ಲಿರುವ ಸಿಂಡಿಕೇಟ್ ಬ್ಯಾಂಕಿನ ಕಛೇರಿಯಲ್ಲಿ ಮುಖ್ಯ ಪಬಂಧಕರಾಗಿದ್ದರು .

ಮುಸ್ಲಿಂ ಸಂಸ್ಕೃತಿಯನ್ನು ಕನ್ನಡ ಸಾಹಿತ್ಯದ ಮೂಲಕ ಲೋಕಾರ್ಪಣೆ ಮಾಡಿದವರಲ್ಲಿ ಮೊದಲಿಗರು 

‘ ದೇವರುಗಳ ರಾಜ್ಯದಲ್ಲಿ ‘ , ‘ ಆಕಾಶಕ್ಕೆ ನೀಲಿ ಪರದೆ ‘ , ‘ ಜಿಹಾದ್ ‘ , ‘ ಸ್ವಾತಂತ್ರ್ಯದ ಓಟ ‘ , ‘ ಪಂಡಿತ ಫಕೀರ

‘ , ‘ ತಟ್ಟು ಚಪ್ಪಾಳೆ ಪುಟ್ಟ ಮಗು ‘ , ‘ ಕಲಾಂ ಮೇಷ್ಟ್ರು ‘ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ .

ಕರ್ನಾಟಕ ಸಾಹಿತ್ಯ

ಅಕಾಡೆಮಿ ಪ್ರಶಸ್ತಿ , ಭಾರತೀಯ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ , ರಾಷ್ಟ್ರೀಯ ಚಲನಚಿತ್ರ ಕಥಾಪ್ರಶಸ್ತಿ ಮುಂತಾದ

ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ . ಪ್ರಸ್ತುತ ಕಥಾಭಾಗವನ್ನು ಬೊಳುವಾರರ ಕೇಂದ್ರ ಸಾಹಿತ್ಯ ಪ್ರಶಸ್ತಿ

ವಿಜೇತ ‘ ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ ‘ ಎಂಬ ಮಕ್ಕಳ ಕಾದಂಬರಿಯಿಂದ ಆಯ್ದುಕೊಳ್ಳಲಾಗಿದೆ . 

Sullu Helabaradu Kannada Question Answer PDF

5th Standard Sullu Helabaradu Kannada Note Lesson question answer pdf textbook summary Kannada Deevige 5th Class Sullu Helabaradu Kannada Notes question answer text book pdf download 5ನೇ ತರಗತಿ ಸುಳ್ಳು ಹೇಳಬಾರದುಕನ್ನಡ ನೋಟ್ಸ್  ಪ್ರಶ್ನೆ

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ  5 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

One thought on “5th Standard Sullu Helabaradu Kannada Notes | 5ನೇ ತರಗತಿ ಸುಳ್ಳು ಹೇಳಬಾರದು ಕನ್ನಡ ನೋಟ್ಸ್ 

Leave a Reply

Your email address will not be published. Required fields are marked *