5ನೇ ತರಗತಿ ನನ್ನ ಕವಿತೆ ಕನ್ನಡ ನೋಟ್ಸ್
ತರಗತಿ : ೫
ಪಾಠದ ಹೆಸರು : ನನ್ನ ಕವಿತೆ
ಕೃತಿಕಾರರ ಹೆಸರು : ಮೂಡ್ನಾಕೂಡು ಚಿನ್ನಸ್ವಾಮಿ
ಮೂಡ್ನಾಕೂಡು ಚಿನ್ನಸ್ವಾಮಿ :
ಮೂಡ್ನಾ ಕೂಡು ಚಿನ್ನಸ್ವಾಮಿ ಅವರು ಕ್ರಿ.ಶ. 1954 ರಲ್ಲಿ ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದಲ್ಲಿ ಜನಿಸಿದರು . ಇವರು ತಮ್ಮ ವಿದ್ಯಾಭ್ಯಾಸ ಮುಗಿಸಿದ ಮೇಲೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ . ಸಾಹಿತ್ಯಾಸಕ್ತರಾದ ಇವರು ಕೊಂಡಿಗಳು ಮತ್ತು ಮುಳ್ಳು ಬೇಲಿಗಳು , ಗೋಧೂಳಿ , ನಾನೊಂದು ಮರವಾಗಿದ್ದರೆ , ಕೆಂಡಾಮಂಡಲ , ಭೀಮಾಭೋಯಿ , ಮೋಹದ ದೀಪ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ .
ಅಭ್ಯಾಸ
ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .
1. ಕವಿತೆಗೆ ಯಾರ ಮಿದುಳು ಇರಬೇಕು ?
ಕವಿತೆಗೆ ಅಲ್ಲಮ ಪ್ರಭುವಿನ ಮಿದುಳು ಇರಬೇಕು .
2. ಕವಿತೆಗೆ ಯಾರ ಹೃದಯ ಇರಬೇಕು ?
ಕವಿತೆಗೆ ಬಸವಣ್ಣನಂತಹ ಹೃದಯ ಇರಬೇಕು .
3. ಕವಿತೆಗೆ ಯಾರ ನಿಷ್ಠೆ ಇರಬೇಕು ?
ಕವಿತೆಗೆ ಮಹಮ್ಮದ್ ಪೈಗಂಬರರ ನಿಷ್ಮೆ ಇರಬೇಕು
4. ಕವಿತೆಗೆ ಯಾರ ನೋವು ಮತ್ತು ಕ್ಷಮೆ ಇರಬೇಕು ?
ಕವಿತೆಗೆ ಶಿಲುಬೆಯ ನೋವು ಮತ್ತು ಏಸುವಿನ ಕ್ಷಮೆ ಇರಬೇಕು .
5. ಕವಿತೆಗೆ ಯಾರ ಸರಳತೆ ಇರಬೇಕು ?
ಕವಿತೆಗೆ ಗಾಂಧೀಜಿಯ ಸರಳತೆ ಇರಬೇಕು .
Nanna Kavithe Summary in Kannada
ಮುಖ್ಯಾಂಶಗಳು
ಕವಿಯು ತಾವು ರಚಿಸುವ ಕವಿತೆಯ ಗುಣವಿಶೇಷಣಗಳು ಹೇಗಿರಬೇಕೆಂದು ಬಯಸುತ್ತಾರೆ . ಅದನ್ನು ಇಲ್ಲಿ ತಿಳಿಸಿದ್ದಾರೆ . ಅವರ ಕವಿತೆಗೆ ಅಲ್ಲಮ ಪ್ರಭುವಿನ ಮೆದುಳು ಎಂದರೆ ಜ್ಞಾನ ಸಂಪತ್ತಿರಬೇಕು . ಬಸವಣ್ಣನಂತಹ ಹೃದಯವಿರಬೇಕು . ಬುದ್ಧನ ಸ್ವಾಸ್ಥ್ಯ , ಆನಂದನ ಸ್ನೇಹ , ಪೈಗಂಬರರ ನಿಷ್ಠೆ , ಗುಮ್ಮಟದ ಏಕಾಗ್ರತೆ ಇರಬೇಕು . ನನ್ನ ಕವಿತೆಯು ರಕ್ತಸಿಕ್ತ ಶಿಲುಬೆಯ ನೋವನ್ನು ಅನುಭವಿಸಿದರೂ ಏಸುವಿನಂತೆ ಕ್ಷಮಾಗುಣವನ್ನು ಹೊಂದಿರಲಿ . ನನ್ನ ಕವಿತೆ ಗಾಂಧೀಜಿಯವರ ಸರಳತೆಯನ್ನು ಅಂಬೇಡ್ಕರರ ಛಲವನ್ನು ಹೊಂದಿರಬೇಕು . ಇಂತಹ ಎಲ್ಲಾ ಗುಣಗಳನ್ನು ನನ್ನ ಕವಿತೆ ಪಡೆದಿರಬೇಕೆಂಬುದೇ ನನ್ನ ಹಂಬಲ ಎಂದು ಕವಿವಯ್ಯರು ತಿಳಿಸುತ್ತಿದ್ದಾರೆ . ಈ ಎಲ್ಲಾ ಗುಣಗಳಿದ್ದಾಗ ಅದೊಂದು ಆದರ್ಶ ಕವಿತೆಯಾಗುತ್ತದೆ.
5th class kannada notes pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆಕನ್ನಡ ದೀವಿಗೆ.in ಜಾಲತಾಣದಲ್ಲಿ 5 ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.