ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bavaikyathe Prabandha in Kannada

Contents

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bavaikyathe Prabandha in Kannada

ಈ ಲೇಖನದಲ್ಲಿ ನೀವು ರಾಷ್ಟ್ರೀಯ ಭಾವೈಕ್ಯತೆ ಎಂದರೇನು, ಬಾವೈಕ್ಯತೆ ರೂಪಿಸುವಲ್ಲಿ ನಮ್ಮ ಪಾತ್ರಗಳೇನು, ರಾಷ್ಟ್ರೀಯ ಭಾವೈಕ್ಯತೆಯ ಮೇಲೆ ಪ್ರಭಾವ ಬೀರುವ ಅಂಶಗಳು, ಸಾಂಸ್ಕೃತಿಕ ಅಂಶಗಳು, ಮಾನಸಿಕ ವಿಕಾಸ ಅಂಶಗಳು, ದೈಹಿಕ ಸ್ವರೂಪದ ಅಂಶಗಳು, ಆರ್ಥಿಕ ಅಂಶಗಳು, ಭೌಗೋಳಿಕ ಅಂಶಗಳು, ಇದೆಲ್ಲದರ ಬಗ್ಗೆ ಮಾಹಿತಿಯನ್ನು ಪಡೆಯುವಿರಿ

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ Rashtriya Bavaikyathe Prabandha in Kannada
ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ Rashtriya Bavaikyathe Prabandha in Kannada

ಪೀಠಿಕೆ

ಒಂದು ರಾಷ್ಟ್ರದ ಭೌಗೋಳಿಕ ಪರಿಸರದಲ್ಲಿ ಜನರು ವಾಸಿಸುವ ಪ್ರದೇಶವನ್ನು ರಾಷ್ಟ್ರ ಎನ್ನುತ್ತೇವೆ ಹಾಗೂ ವಿವಿಧತೆಯಲ್ಲಿ ಏಕತೆಯಿಂದ ಇರುವುದನ್ನು ಭಾವೈಕ್ಯತೆ ಎನ್ನುತ್ತೆವೆ.

ರಾಷ್ಟ್ರೀಯ ಭಾವೈಕ್ಯತೆ ಎಂದರೆ ಒಂದು ದೇಶದಲ್ಲಿ ವಾಸಿಸುವ ಎಲ್ಲ ಜನರೂ ಸಹ ತಾವೆಲ್ಲಾ ಒಂದೇ ರಾಷ್ಟ್ರದ ನ ಎಂಬ ಭಾವನೆಯಿಂದ ಸಾಮರಸ್ಯ ಏಕತೆ , ಒಗ್ಗಟ್ಟುಗಳಿಂದ ಸಹಬಾಳ್ವೆ ಮಾಡುವ ಗುಣಧರ್ಮವೇ ರಾಷ್ಟ್ರೀಯ ಭಾವೈಕತೆ

ವಿಷಯ ಬೆಳವಣಿಗೆ

ಭಾರತ ಹಲವು ಮತ ಧರ್ಮಗಳನ್ನು ಹೊಂದಿರುವ ದೇಶ , ಹಲವು ಜನಾಂಗದ ಜನರು ಪ್ರಾಚೀನ ಕಾಲದಿಂದ ಇಲ್ಲಿ ನೆಲೆಸಿದ್ದಾರೆ . ವೇಷ , ಭೂಷಣ , ಭಾಷೆ ಬೇರೆ ಬೇರೆಯಾದರೂ ಎಲ್ಲರೂ ಭಾರತೀಯರು .

ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಗುಜರಾತ್‌ನಿಂದ ಪಶ್ಚಿಮಬಂಗಾಳದವರೆಗೂ ಇಪ್ಪತ್ತೊಂಬತ್ತು ರಾಜ್ಯಗಳನ್ನು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ವಿಶಾಲವಾಗಿ ಹಬ್ಬಿದೆ .

ನಮ್ಮ ರಾಷ್ಟ್ರದಲ್ಲಿ ಹಿಂದು , ಬೌದ್ಧ , ಜೈನ , ಮುಸ್ಲಿಂ , ಕ್ರೈಸ್ತ ಹೀಗೆ ಹಲವಾರು ಧರ್ಮದವರು ಸಾಕಷ್ಟು ಜನಸಂಖ್ಯೆ ಇದ್ದರೂ , ಎಲ್ಲರೂ ಭಾರತೀಯರು ಎಂಬ ಒಂದೇ ಭಾವನೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ .

ಇಲ್ಲಿ ಭಾಷೆ , ಆಚಾರ , ವಿಚಾರ , ಉಡುಗೆ , ಹಬ್ಬಗಳಲ್ಲಿ ಭಿನ್ನತೆ ಇದ್ದರೂ ರಾಷ್ಟ್ರದ ಏಕತೆಗೆ ಅಡ್ಡಿಯಾಗಿಲ್ಲ .

ಭಾರತ ಮಾತೆಯ ಮಕ್ಕಳು ಎಂಬ ಭಾವನೆ ಇದೆ. ಭಾರತ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹೊಂದಿದೆ . ಇಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ .

ಭಾರತದಂತಹ ಬಹುಭಾಷಿಕ , ಬಹು ಸಂಸ್ಕೃತಿಯ ವಿವಿಧ ಜಾತಿ – ಮತ – ಧರ್ಮಗಳಿರುವ ದೇಶದಲ್ಲಿ ಈ ಭಾವನೆ ಅತ್ಯವಶ್ಯಕವಾಗಿದೆ . ವಸುದೈವ ಕುಟುಂಬಕಂ ಎಂಬುವುದು ನಮ್ಮ ಸಂಸ್ಕೃತಿಯ ಮೂಲ ಮಂತ್ರವಾಗಿದೆ .

ಪರಕೀಯರ ಆಡಳಿತ ನಮ್ಮ ದೇಶದಲ್ಲಿ ಬಂದಾಗ ಜಾತಿ ಇತ್ಯಾದಿ ವಿಷಯಗಳಲ್ಲಿ ನಮ್ಮನ್ನು ಒಡೆದು ಆಳುವ ತಂತ್ರವನ್ನು ಅನುಸರಿಸುತ್ತಿದ್ದರು . ಇದರಿಂದ ನಮ್ಮಲ್ಲಿ ಸ್ವಲ್ಪಮಟ್ಟಿಗೆ ಭಿನ್ನಾಭಿಪ್ರಾಯಗಳು ಬಂದವು.

ಸ್ವತಂತ್ರ ಭಾರತದಲ್ಲಿಯೂ ಇಂತಹ ಭಾವನೆಗಳು ಮುಂದುವರಿಯುತ್ತಿರುವುದು ನಮ್ಮ ದೇಶದ ಅಭಿವೃದ್ಧಿಗೆ ಮಾರಕವಾಗಿ ದೊಡ್ಡ ಸಮಸ್ಯೆಯಾಗಿ ಪರಿಣಮಿಇಸಿದೆ .

ಇದು ಭಾರತದ ದೌರ್ಭಾಗ್ಯವೇ ಆಗಿದೆ . ರಾಷ್ಟ್ರೀಯ ಭಿನ್ನತೆಯಿಂದ ದೇಶವು ದುರ್ಬಲವಾಗಿರುತ್ತದೆ . ವಿವಿಧ ಸಮಸ್ಯೆಗಳು ರಾಜಕೀಯ ಮುಖಂಡರು , ಧಾರ್ಮಿಕತೆಯು ತಲೆಯೆತ್ತುತ್ತದೆ .

ರಾಜಕೀಯದಿಂದ ಒಂದುಗೂಡಿ ಬಾಳುವ ಜನತೆಯಲ್ಲಿ ಭೇದ , ದ್ವೇಷವನ್ನು , ಒಡಕನ್ನು ಉಂಟು ಮಾಡುವ ಪ್ರಸಂಗಗಳು ನಡೆಯುತ್ತಿವೆ , ಇವು ಶಾಶ್ವತವಲ್ಲ .

ಓಟಿಗಾಗಿ ರಾಜಕಾರಣಿಗಳು , ಸಮಾಜದಲ್ಲಿ ಒಡಕು ಉಂಟುಮಾಡುವ ಕಾರ್ಯಕ್ಕೆ ಜನರನ್ನು ಪ್ರೇರೇಪಿಸುವರು . ಅಧಿಕಾರಕ್ಕಾಗಿ ಸಮಾಜದ ಆರೋಗ್ಯವನ್ನು ಹಾಳು ಮಾಡುವರು , ಆದರೆ ಸಾಮಾನ್ಯ ಜನತೆ ಇದಕ್ಕೆ ಬೆಲೆ ಕೊಡದೆ ಎಲ್ಲರೂ ಒಂದು ಎಂಬ ಭಾವನೆಯಿಂದ ಬಾಳಿದರೆ , ಒಗ್ಗಟ್ಟಿನಿಂದ ಕಾರ್ಯ ಮಾಡಿದರೆ , ಜೀವನವೂ ಸುಖಮಯವಾಗುತ್ತದೆ ಹಾಗೂ ನಾಡು , ದೇಶ ಪ್ರಗತಿ ಹೊಂದುತ್ತದೆ .

ಆದುದರಿಂದ ನಾಯಕರು , ಸರ್ಕಾರ ಹಾಗೂ ಪ್ರತಿಯೊಬ್ಬ ನಾಗರೀಕರೂ ಸಹ ಸ್ವಾರ್ಥ ಭಾವನೆಗಳನ್ನು ದೂರಮಾಡಿ ನಾವೆಲ್ಲ ಒಂದು ಎಂಬ ಒಗ್ಗಟ್ಟಿನ ಭಾವನೆಯನ್ನು ಬೆಳೆಸಿಕೊಳ್ಳಬೇಕು .

ಈ ದೇಶದ ಅಖಂಡತೆ , ಹಾಗೂ ಭವ್ಯ ಸಂಸ್ಕೃತಿ ಪರಂಪರೆಗಳನ್ನು ಎತ್ತಿಹಿಡಿಯಬೇಕು . ದೇಶಭಕ್ತಿ , ತ್ಯಾಗ ಮನೋಭಾವನೆಯು ಜಾಗೃತವಾದಾಗ ಏಕತೆ ಗಟ್ಟಿಗೊಳ್ಳುತ್ತದೆ . ಭಾರತ ಸಂವಿಧಾನದಲ್ಲಿ ಮತೀಯ ಭೇದ ಭಾವಕ್ಕೆ ಅವಕಾಶವಿಲ್ಲ .

ಬಡವ , ಶ್ರೀಮಂತ , ಎಲ್ಲರೂ ಸಮಾನರಾಗಿ ಬಾಳಬೇಕು. ಎಲ್ಲ ಜಾತಿಯ ಜನರು ಸಮಾನತೆಯನ್ನು ಕಾಪಾಡಿಕೊಳ್ಳಬೇಕು . ಪ್ರಗತಿಪರ ಬೆಳವಣಿಗೆಗೆ ಭಾವೈಕ್ಯತೆ ಅಗತ್ಯವಾಗಿದೆ.

ಪ್ರಾಮುಖ್ಯತೆ :

ಒಂದು ರಾಷ್ಟ್ರದ ಜನತೆಯಲ್ಲಿ ಒಗ್ಗಟ್ಟು ಉಂಟುಮಾಡಲು ಭಾವೈಕ್ಯತೆ ಅಗತ್ಯವಾಗಿದೆ . ರಾಷ್ಟ್ರದ ಹಿತಾಸಕ್ತಿಯನ್ನು ಸಾಧಿಸಲು , ಅಭಿವೃದ್ಧಿ ಹೊಂದಲು ರಾಷ್ಟ್ರದ ಜನರು ತಾವೆಲ್ಲರೂ ಒಂದೆಂಬ ಭಾವನೆ ಬೆಳೆಸಲು ಭಾವೈಕ್ಯತೆ ಅಗತ್ಯವಾಗಿದೆ .

ಭಾವೈಕ್ಯತೆಯು ದೇಶದ ಸಮಗ್ರತೆ , ಸೋದರತೆ ಮತ್ತು ಸಮಾನತೆಗೆ ಪ್ರಮುಖ ಪ್ರೇರಣೆಯಾಗುತ್ತದೆ

ರಾಷ್ಟ್ರೀಯ ಭಾವೈಕ್ಯತೆಯ ಮೇಲೆ ಪ್ರಭಾವ ಬೀರುವ ಅಂಶಗಳು

1. ಸಾಂಸ್ಕೃತಿಕ ಅಂಶಗಳು :

ರಾಷ್ಟ್ರದ ವಿವಿಧ ಸಮುದಾಯಗಳಿಗೆ ತನ್ನದೇ ಆದ ಅಭಿವ್ಯಕ್ತಿ ಸ್ವರೂಪಗಳಿರುತ್ತವೆ . ಭಾಷೆ , ಉಡುಗೆ – ತೊಡುಗೆ , ಕಲೆ , ಸಾಹಿತ್ಯ , ವಾಸ್ತುಶಿಲ್ಪ .

ಊಟ – ಉಪಚಾರ , ರೀತಿ ನೀತಿಗಳು , ಧರ್ಮ , ಸಂಪ್ರದಾಯ , ನಡೆ – ನುಡಿ , ನಂಬುಗೆಗಳು ಮುಂತಾದವುಗಳೆಲ್ಲವೂ ಸಮುದಾಯದಿಂದ ಸಮುದಾಯಕ್ಕೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತವೆ .

ಪ್ರತಿಯೊಂದು ಸಮುದಾಯದಲ್ಲಿಯೂ ನಂಬುಗೆಯುಳ್ಳವರು ಮತ್ತು ಆಚಾರವಿಚಾರವುಳ್ಳವರಿರುತ್ತಾರೆ .

ಒಂದೇ ರಾಷ್ಟ್ರದಲ್ಲಿರುವ ಸಮುದಾಯದವರು , ಸಮಾಜದವರು , ಪ್ರದೇಶದವರು ತಮ್ಮ ತಮ್ಮ ಸಂಸ್ಕೃತಿ , ಧರ್ಮ , ಭಾಷೆ , ರೀತಿ ನೀತಿಗಳೇ ಶ್ರೇಷ್ಠವೆಂಬ ಸಂಕುಚಿತ ಭಾವನೆ , ಪ್ರತಿಷ್ಠೆ , ಅಹಂಕಾರಗಳೆಲ್ಲವೂ ಸಾಮಾಜಿಕ ಭಾವೈಕ್ಯತೆಯಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ.

ಅನ್ಯ ಸಂಸ್ಕೃತಿಗಳಲ್ಲಿಯ ಗುರುತಿಸುವ ಮತ್ತು ವಿವಿಧ ಸಂಸ್ಕೃತಿಗಳಲ್ಲಿಯ ಸಾಮ್ಯತೆಯನ್ನು ಬೆಳೆಸುವುದು ಮತ್ತು ಸಕಾರಾತ್ಮಕ ಬೇರೆ ವಿಭಿನ್ನವಾದ ಬೇರೆ ಗುರುತಿಸುವ ಮತ್ತು ರಾಷ್ಟ್ರೀಯ ಉತ್ತಮಗುಣಗಳನ್ನು ಹೃದಯ ವೈಶಾಲ್ಯತೆಯನ್ನು ಬೆಳೆಸುವುದು ಶಿಕ್ಷಣದಮೂಲಕ ಮನೋವೃತ್ತಿಯನ್ನು ರಾಷ್ಟ್ರದ ತ ಆಗಬೇಕು .

2. ಮಾನಸಿಕ ವಿಕಾಸ ಅಂಶಗಳು :

ಪ್ರತಿಯೊಂದು ರಾಜ್ಯದಲ್ಲಿ , ಸಮುದಾಯದಲ್ಲಿ , ಸಂಘ – ಸಂಸ್ಥೆಗಳಲ್ಲಿ , ಪ್ರತಿ ಗುಂಪಿನಲ್ಲಿ ಪ್ರತಿಯೊಬ್ಬನೂ ಅವನಿಗೆ ದೊರಕುವ ಅವಕಾಶಗಳನ್ನವಲಂಬಿಸಿ ಮಾನಸಿಕವಾಗಿ ಭಿನ್ನವಾಗಿರುತ್ತಾನೆ . ಅವನ ಜಾಣ್ನೆಯ ಮಟ್ಟ , ವಿಷಯ ಗ್ರಹಿಸಿ ಅರ್ಥಮಾಡಿಕೊಳ್ಳುವ ರೀತಿ , ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ರೀತಿ ಭಿನ್ನವಾಗಿರುತ್ತವೆ .

ಇಂಥ ವ್ಯತ್ಯಾಸವನ್ನು ಪಟ್ಟಣ ನಿವಾಸಿಗಳಲ್ಲಿ ಮತ್ತು ಗ್ರಾಮ ನಿವಾಸಿಗಳಲ್ಲಿ ಕಾಣಬಹುದು . ಇದೂಕೂಡ ರಾಷ್ಟ್ರದ ಪ್ರಜೆಗಳಲ್ಲಿ ಸಾಮರಸ್ಯ ತರಲಾರದು . ಆದ್ದರಿಂದ , ರಾಷ್ಟ್ರದ ಎಲ್ಲ ಪ್ರಜೆಗಳಿಗೆ ಸಮಾನಾವಕಾಶ ಮಾಡಿಕೊಡುವುದು ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ .

3. ದೈಹಿಕ ಸ್ವರೂಪದ ಅಂಶಗಳು :

ಎಲ್ಲ ಮಾನವರ ಸಮಗ್ರ ಸ್ವರೂಪವು ಒಂದೇ ಆಗಿರುತ್ತದೆಯಾದರೂ ವಿವಿಧ ಕುಲದ ಮಾನವರು ಭಿನ್ನ ಭೌಗೋಳಿಕ ಪ್ರದೇಶಗಳಲ್ಲಿ ವಿಕಾಸ ಹೊಂದಿರುವುದರಿಂದ ಮೇಲ್ನೋಟಕ್ಕೆ ಭಿನ್ನವಾಗಿ ಕಾಣುತ್ತಾರೆ .

ಅವರ ದೈಹಿಕ ಆಕಾರ ಸ್ವರೂಪಗಳು ಭಿನ್ನವಾಗಿರುತ್ತವೆ . ಈ ಲಕ್ಷಣಗಳನ್ನು ಆಯಾ ಸಮುದಾಯದ ಸದಸ್ಯರು ಅನುವಂಶೀಯವಾಗಿ ಪಡೆದುಕೊಂಡು ಜನ್ಮತಾಳಿರುತ್ತಾರೆ .

ಇಂಥ ದೈಹಿಕ ಸ್ವರೂಪದಲ್ಲಿಯ ಭಿನ್ನತೆಯೂಕೂಡ ರಾಷ್ಟ್ರೀಯ ಭಾವೈಕ್ಯತೆಗೆ ಅಡ್ಡಿಯುಂಟು ಮಾಡುತ್ತದೆ . ಆದರೆ , ಎಲ್ಲ ಮಾನವರಲ್ಲಿ ನಡೆಯುವ ದೈಹಿಕ ಪ್ರಕ್ರಿಯೆಗಳು ಒಂದೇ ಆಗಿರುತ್ತವೆ .

ಎಲ್ಲರ ಜೀವನಕ್ಕಾಗಿ ಬೇಕಾಗುವ ಆಮ್ಲಜನಕ , ಆಹಾರ , ನೀರು ಒಂದೇ , ಎಲ್ಲರ ಮೂಲ ಪ್ರವೃತ್ತಿಗಳೂ ಒಂದೇ . ಯಾವಕುಲದಲ್ಲಿಯೂ ಮೇಲು ಕೀಳು ಎನ್ನುವುದಿಲ್ಲವೆಂಬ ಭಾವನೆ ಎಲ್ಲರಲ್ಲಿಯೂ ಬಂದಾಗ ಮಾತ್ರ ರಾಷ್ಟ್ರೀಯ ಭಾವೈಕ್ಯತೆ ಸುಲಭವಾಗುತ್ತದೆ .

4. ಆರ್ಥಿಕ ಅಂಶಗಳು :

ವ್ಯಕ್ತಿ ವ್ಯಕ್ತಿಗಳ ನಡುವಿನ , ಸಮುದಾಯ ಸಮುದಾಯಗಳ ನಡುವಿನ ಆರ್ಥಿಕ ಭಿನ್ನತೆಯು ಅವರ ಬೌದ್ಧಿಕ ವಿಕಾಸ ಮತ್ತು ಅವರು ಪಡೆದ ಜೀವನ ಕೌಶಲ್ಯ , ಮುಂತಾದವುಗಳನ್ನು ಅವಲಂಬಿಸಿರುತ್ತದೆ .

ವ್ಯಕ್ತಿಗಳ ಅಥವಾ ಸಮುದಾಯಗಳಲ್ಲಿಯ ಆರ್ಥಿಕ ಅಸಮಾನತೆಯು ರಾಷ್ಟ್ರೀಯ ಭಾವೈಕ್ಯತೆಗೆ ತೊಡಕನ್ನು ಉಂಟುಮಾಡುತ್ತದೆ ಮತ್ತು ಅವರ ಮುಂಬರುವ ಸಂತತಿಗಳ ಶಿಕ್ಷಣ , ಮಾನಸಿಕ ವಿಕಾಸ ಮತ್ತು ಅವರಿಗೆ ಸಿಕ್ಕಬಹುದಾದ ಅವಕಾಶಗಳ ಮೇಲೆ ಪ್ರಭಾವಬೀರುತ್ತದೆ .

ಆದ್ದರಿಂದ ಬಡವರು ಶ್ರೀಮಂತರ ನಡುವಿನ ಆರ್ಥಿಕ ಅಂತರವನ್ನು ಕಡಿಮೆಗೊಳಿಸುವುದು ಸಮಾಜದ ಹೊಣೆಗಾರಿಕೆಯಾಗಿದೆ .

5. ಭೌಗೋಳಿಕ ಅಂಶಗಳು :

ಮಾನವರು ರಾಷ್ಟ್ರದಾದ್ಯಂತ ಮತ್ತು ಜಗತ್ತಿನಾದ್ಯಂತ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ವಾಸಿಸುತ್ತಾರೆ ತಾವು ವಾಸಿಸುವ ಪ್ರದೇಶವು ತಮ್ಮ ವೈಯಕ್ತಿಕ ಸೊತ್ತು ಅಲ್ಲಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳೆಲ್ಲವೂ ತಮಗಾಗಿ ಮಾತ್ರವೆಂದು ಭಾವಿಸುತ್ತಾರೆ . ಅವರು ಪರಕೀಯರಿಂದ ಅತಿಕ್ರಮಣವನ್ನು ವಿರೋಧಿಸುತ್ತಾರೆ .

ಒಂದು ರಾಷ್ಟ್ರದಲ್ಲಿ ಭೌಗೋಳಿಕವಾಗಿ ಬೇರೆ ಬೇರೆ ರಾಜ್ಯಗಳನ್ನಾಗಿ ವಿಂಗಡಿಸಲಾಗಿರುತ್ತದೆ . ಪರಸ್ಪರ ಅತಿಕ್ರಮಣ ಮಾಡುವುದಿಲ್ಲ . ರಾಜ್ಯಗಳ ಗಡಿಗಳು ಸಂಪನ್ಮೂಲಗಳು ಸಾರ್ವಜನಿಕ ಸೊತ್ತು .

ಅದರ ಮೇಲೆ ದುರುಪಯೋಗದಿಂದ ಉಳಿದವರು ತಮ್ಮ ಅಧಿಕಾರದಿಂದ ಆಡಳಿತದ ಅನುಕೂಲಕ್ಕಾಗಿ ಒಂದೇ ರಾಷ್ಟ್ರದ ವಿವಿಧ ರಾಜ್ಯದವರು ವಲ ಕಾಲ್ಪನಿಕ , ರಾಷ್ಟ್ರದ ನೈಸರ್ಗಿಕ ಲ್ಲರಿಗೂ ಸಮಾನವಾದ ಹಕ್ಕು ಇದೆ . ಅದರ ವಂಚಿತರಾಗುತ್ತಾರೆ .

ನಮ್ಮ ನಾಗರಿಕರ ಹಕ್ಕು ಬಾಧ್ಯತೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ . ಇಂಥ ಮನೋಭಾವನೆಯಿಂದ ಮಾತ್ರ ರಾಷ್ಟ್ರೀಯ ಭಾವೈಕ್ಯತೆ ಸಾಧ್ಯವಾಗುವುದು .

ಉಪ ಸಂಹಾರ

ಒಂದು ರಾಷ್ಟ್ರವು ಮುಂದುವರಿಯಬೇಕಾದರೆ ಬೇರೆ ಬೇರೆ ರಾಜ್ಯಗಳಿಗೂ ಕೇಂದ್ರಾಡಳಿತಕ್ಕೂ ಸಂಪೂರ್ಣ ಸಂಬಂಧವಿರಬೇಕು ಹಾಗೂ ಹೊಂದಾಣಿಕೆಯಿರಬೇಕು .

ಎಲ್ಲ ರಾಜ್ಯದ ಜನರಲ್ಲಿ ರಾಷ್ಟ್ರಪ್ರಜ್ಞೆ ಮತ್ತು ರಾಷ್ಟ್ರಾಭಿಮಾನ ಇರಬೇಕು.ಪ್ರಜೆಗಳು ರಾಷ್ಟ್ರದ ಕಷ್ಟಪಟ್ಟು ಕೆಲಸ ಮಾಡುವವರೂ ಅಭಿಮಾನಿಗಳೂ , ಸಾಹಸಿಗರೂ ,ಆಗಿರಬೇಕು .

ಇದು ನಮ್ಮ ದೇಶ , ಇದು ನಮ್ಮ ರಾಷ್ಟ್ರ ನಾವು ಈ ದೇಶದ ಮಕ್ಕಳು , ಇದರ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ನಾವು ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದೇವೆ ‘

ಎಂದು ನಂಬಿದವರೇ ರಾಷ್ಟ್ರಪ್ರೇಮಿಗಳು , ಇಂತಹ ಭಾವನೆಗಳಲ್ಲಿ ಎಲ್ಲ ಪ್ರಜೆಗಳಲ್ಲೂ ಏಕತೆ ಇರುವುದೇ ರಾಷ್ಟೀಯ ಬಾವೈಕೈತೆ

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bavaikyathe Prabandha in Kannada

ನನ್ನ ಕನಸಿನ ಭಾರತ ಪ್ರಬಂಧ

ಮತದಾನ ಪ್ರಬಂಧ

ಸಮೂಹ ಮಾಧ್ಯಮ ಪ್ರಬಂಧ

ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಬಂಧ

ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

2 thoughts on “ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bavaikyathe Prabandha in Kannada

Leave a Reply

Your email address will not be published. Required fields are marked *