4ನೇ ತರಗತಿ ಬೀಸೋಕಲ್ಲಿನ ಪದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು 2024, 4th Standard Kannad Beeso Kallina Pada Poem Notes Question Answer Summary Mcq Pdf Download in Kanada Medium Karnataka State Syllabus 2024, Kseeb Solutions For Class 4 Kannada Chapter 7 Notes 4th Class Kannada 7th Lesson
Notes Beeso Kallina Pada Janapada
Biso Kallina Pada Question Answer Pdf
ಅಭ್ಯಾಸ
ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆ.
1. ರಾಗಿ ಹೇಗೆ ಉದುರುತ್ತದೆ ?
ಉತ್ತರ : ರಾಗಿಯು ಜಲ್ಲ ಜಲ್ಲನೆ ಉದುರುತ್ತದೆ .
2. ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ ?
ಉತ್ತರ : ಬೀಸುವ ಕಲ್ಲಿನ ಹಿಡಿಗೂಟ ಹಿಡಿದ ತಂದೆ – ತಾಯಿಗಳ ನೆನೆಯುತ್ತಾರೆ .
3. ಸರಸತಿಗೆ ಸಿಟ್ಟು ಬಂತು ಏಕೆ ?
ಉತ್ತರ : ಸರಸತಿಗೆ ಕಲ್ಲು ಬಿಟ್ಕಳೆಂದುಸಿಟ್ಟು ಬಂತು .
4. ಯಾವುದರ ಮೇಲೆ ಮಗ ಬರಲಿ ?
ಉತ್ತರ : ಪಲ್ಲಕ್ಕಿ ಮೇಲೆ ಮಗ ಬರಲಿ .
ಆ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರ ಬರೆ .
1. ಕಲ್ಲು ಕೊಟ್ಟಮ್ಮನನ್ನು ಏನೆಂದು ಹರಸುವಳು ?
ಉತ್ತರ : ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ , ಪಲ್ಲಕ್ಕಿಯ ಮೇಲೆ ಮಗ ಬರುವಂತಾಗಲಿ , ಮತ್ತು ಆ ಮನೆಗೆ ಮಲ್ಲಿಗೆ ಹೂ ಮುಡಿಯುವ ಸೊಸೆ ಬರಲಿ ಎಂದು ಹರಸುವಳು .
2. ಸಿಟ್ಟುಗೊಂಡ ಸರಸತಿಯನ್ನು ಸಮಾಧಾನ ಮಾಡಿದ ಬಗೆ ಹೇಗೆ ?
ಉತ್ತರ : ಸಿಟ್ಟುಗೊಂಡ ಸರಸತಿಯನ್ನು ಬಿದಿರಿನ ಬುಟ್ಟಿ ( ಕುಕ್ಕೆಯಲ್ಲಿ ) ರಾಗಿ ಬೆಳೆಯಲಿ , ಮತ್ತೆ ರಾತ್ರಿಯಲ್ಲಿ ತೆಗೆದುಕೊಂಡು ಬರುತ್ತೇನೆಂದು ಸಮಾಧಾನ ಮಾಡಿದಳು.
ಇ ) ಪದ್ಯದ ಮೊದಲರ್ಧ ಸಾಲಿಗೆ ಎರಡನೇ ಅರ್ಧ ಸಾಲನ್ನು ಹೊಂದಿಸಿ ಬರೆಯಿರಿ.
- ಬೆಲ್ಲಾದಾರುತಿಯಾ ಬರುತೀನಿ
- ಮತ್ತೆ ರಾತ್ರೀಗೆ ಬೆಳಗೇನು
- ರಾಗಿಯು ಮುಗಿದಾವು ನಡಿಸೇನು
- ಅಂದುಳ್ಳ ಅಡಿಗಲ್ಲು ರಾಜಾನ್ನ ಹೆಚ್ಚಾವು
- ಚಂದುಳ್ಳ ಮೇಗಲ್ಲು
ಉತ್ತರ :
ಉತ್ತರ : ಬೆಲ್ಲದಾರುತಿಯಾ ಬರುತ್ತೀನಿ ಬೆಳಗೇನು
ಮತ್ತೆ ರಾತ್ರಿಗೆ ಬೆಳಗೇನು ಬರುತ್ತೀನಿ
ಮಲ್ಲಿಗೆ ಮುಡಿಯೋ ನಡಿಸೇನು
ಸೊಸೆ ಬರಲಿ ಅಂದುಳ್ಳ ಅಡಿಗಲ್ಲು
ಸೋಸಿ ಬರಲಿ ಚಂದುಳ್ಳ ಮೇಗಲ್ಲು
ಚಂದುಳ್ಳ ಮೇಗಲ್ಲು
ಈ ) ಈ ಮಾದರಿಯಂತೆ ಕೊಟ್ಟಿರುವ ಪದಗಳಿಗೆ ಭಿನ್ನ ಅರ್ಥದಲ್ಲಿ ಸ್ವಂತ ವಾಕ್ಯ ಬರೆಯಿರಿ.
ಮಾದರಿ : ಅತ್ತೆ ನಾನು ಕಾಲಿಗೆ ಮುಳ್ಳು ಚುಚ್ಚಿದಾಗ ಅತ್ತೆನು .
ಅತ್ತೆ – ನಮ್ಮ ಅತ್ತೆ ನನಗೆ ಹೊಸ ಬಟ್ಟೆ ತಂದರು .
ತಂದೆ : ನಾನು ದಿನಾಲೂ ತಂದೆಯ ಕಾಲಿಗೆ ನಮಸ್ಕಾರಿಸಿ ಶಾಲೆಗೆ ಹೋಗುತ್ತೇನೆ .
ತಂದೆ : ನಾನು ಇಂದು ಮಾರುಕಟ್ಟೆಗೆ ಹೊಸ ನೋಟ್‌ಬುಕ್‌ಗಳನ್ನು ತಂದೆನು .
ಕಳೆ : ನಾನು ಶಾಲೆಗೆ ಹೋಗುವ ಬಸ್ಸಿನಲ್ಲಿ ಪೆನ್ನನ್ನು ಕಳೆದುಕೊಂಡೆನು .
ಕಳೆ : ರೈತನು ಹೊಲದಲ್ಲಿ ಬೆಳೆದ ಕಳೆಯನ್ನು ತೆಗೆದು ಹಾಕಿದನು .
ಆಡು : ನನ್ನ ಮಿತ್ರ ರವಿ ಮನೆಯಲ್ಲಿ ಆಡುಗಳನ್ನು ಸಾಕಿದ್ಯಾನೆ .
ಆಡು : ನನ್ನ ಮಿತ್ರ ರವಿಯೊಂದಿಗೆ ನಾನು ಕ್ರಿಕೆಟ್ ಆಟವನ್ನು ಆಡುತ್ತೇನೆ.
ಭಾಷಾ ಚಟುವಟಿಕೆ
ಅ ) ಆಡುಮಾತು ಮತ್ತು ಬರೆಹದ ಮಾತಿನ ನಡುವಿನ ವ್ಯತ್ಯಾಸ ಗಮನಿಸಿ .
ಆಡು ಮಾತು ಬರೆಹದ ರೂಪ
ಬರ್ತಾನೆ ಬರುತ್ತಾನೆ
ಯಿಲ್ಲ ಇಲ್ಲ
ಅರಕೆ ಹರಕೆ
ಅತ್ತಿರ ಹತ್ತಿರ
ಕರೆವೋಲೆ ಕರೆಯೋಲೆ
ಆ ) ಅಕ್ಷರ ಬಳಸಿ ಪದ ಬರೆಯಿರಿ .
ಕಸಿ
ಕಹಿ
ಕಸ
ಕದ
ಕರೆ
ಮಣ್ಣು
ಮಗ್ಗಿ
ಮಠ
ಮಟ್ಟ
ಮಡ್ಡಿ
ಇ ) ಕೆಳಗಿನ ಆಡು ನುಡಿಗಳನ್ನು ಮಾದರಿ ಬರೆಹದ ಭಾಷೆಯಲ್ಲಿ ಬರೆಯಿರಿ.
ಮಾದರಿ : ಹೆಚ್ಯಾವು – ಹೆಚ್ಚಾದವು .
ಉತ್ತರ : ವದಗ್ಯಾವು – ಒದಗುವವು
ಮುಗಿದಾವು – ಮುಗಿಯುವವು
ಸಿಟ್ಯಾಕೆ – ಸಿಟ್ಟು ಏಕೆ
ಬೆಳೆಯಾಲಿ – ಬಳಕೆ
ಚಟುವಟಿಕೆ
ಅ ) ಒಗಟು ಬಿಡಿಸು.
1. ಅವ್ವನ ಹಾಸಿಗೆ ಸುತ್ತಾಕಾಗೊಲ್ಲ , ಅಪ್ಪನ ದುಡ್ಡು ಎಣಿಸಾಕಾಗೊಲ್ಲ .
ಉತ್ತರ : ಆಕಾಶ – ಚುಕ್ಕೆಗಳು ( ನಕ್ಷತ್ರಗಳು )
2. ಕರಿ ಸೀರಿ ಉಟ್ಯಾಳ , ಕಾಲುಂಗರ ಇಟ್ಯಾಳ , ಮೇಲೆ ಹೋಗತಾಳ , ಕೆಳಗೆ ಬರತಾಳ
ಉತ್ತರ : ಒನಕೆ
3. ಅಪ್ಪಾ ಎಂದರೆ ಮುಚ್ಯುತಾವ ; ಅಮ್ಮ ಎಂದರೆ ತೆರಿತಾವ .
ಉತ್ತರ : ತುಟಿಗಳು .
ಆ ) ಕೊಟ್ಟಿರುವ ಕತೆ ಓದಿ . ಇದಕ್ಕೆ ಗಾದೆಗಳನ್ನು ಬರೆಯಿರಿ.
ಒಂದು ಊರಿನಲ್ಲಿ ಒಬ್ಬ ರೈತನಿದ್ದನು ಅವನಿಗೆ ಇಬ್ಬರು ಸೋಮಾರಿ ಮಕ್ಕಳಿದ್ದರು . ಅನಾರೋಗ್ಯದಿಂದ ರೈತ ಹಾಸಿಗೆ ಹಿಡಿದನು . ಮಕ್ಕಳನ್ನು ಹತ್ತಿರ ಕರೆದು , ” ಮಕ್ಕಳೇ ನಾನು ಸಂಪಾದಿಸಿದ ಸಂಪತ್ತನ್ನು ನಿಮಗಾಗಿ ಹೊಲದಲ್ಲಿ ಹೂತಿಟ್ಟಿದೇನೆ ” ಎಂದು ಹೇಳಿದನು . ಮಕ್ಕಳಿಬ್ಬರು ಹಾರೆ ಗುದ್ದಲಿ ಹಿಡಿದು ಹೊಲಕ್ಕೆ ಹೋದರು . ಆಗೆದು ಅಗೆದು ನಿಧಿಗಾಗಿ ಹುಡುಕಿದರು . ನಿಧಿ ಸಿಗಲಿಲ್ಲ . ಅದೇ ದಿನ ಮಳೆ ಸುರಿಯಿತು . ಇನ್ನೇನು ಮಾಡುವುದು ಎಂದು ಧಾನ್ಯ ಬಿತ್ತಿದರು . ಉತ್ತಮ ಬೆಳೆ ಬಂತು . ಕೈ ತುಂಬ ಹಣ ಸಂಪಾದಿಸಿದರು . ರೈತ ಮಕ್ಕಳನ್ನು ಕರೆದು , ” ಇದೇ ನಾನು ಹೊಲದಲ್ಲಿ ಹೂತಿಟ್ಟ ಸಂಪತ್ತು ‘ ಎಂದು ಹೇಳಿದನು .
- ಕೈ ಕೆಸರಾದರೆ ಬಾಯಿಗೆ ಮೊಸರು .
- ಆಳಾಗಿ ದುಡಿ ಅರಸನಾಗಿ ಉಣ್ಣು .
- ಬಿತ್ತಿದಂತೆ ಬೆಳೆ.
ಇ ) ಕೊಟ್ಟಿರುವ ಗಾದೆ ಮಾತನ್ನು ಬರೆಹದ ಭಾಷೆಗೆ ಬದಲಾಯಿಸು .
1. ಓಡಾಡ್ಕೊಂಡು ದನ ಕಾದ್ರೆ ಬೇಗ್ನೆ ಹೊತ್ತು ಮುಳುಗುತ್ತಾ ?
ಉತ್ತರ : ಓಡಾಡಿಕೊಂಡು ದನ ಕಾಯ್ದರೆ ಬೇಗನೆ ಕಳೆಯುತ್ತದೆಯೇ ?
2. ಕಡ್ಲೆ ಇದ್ದಾಗ ಹಲ್ಲಿಲ್ಲ ,ಹಲ್ಲಿದ್ದಾಗ ಕಡ್ಲಿಲ್ಲ
ಉತ್ತರ :ಕಡಲೆ ಇದ್ದಗ್ಗ ಹಲ್ಲಿಲ್ಲ ಹಲ್ಲಿದ್ದಾಗ ಕಡಲೆ ಇಲ್ಲ .
3. ಕುಟ್ಟಾಕ ಬರದೊಳು ಕೇರಿ ಕೇರಿ ನೋಡಿದಳಂತ
ಉತ್ತರ : ಕುಟ್ಟಲಿಕ್ಕೆ ಬರದೇ ಇರುವ್ಯರಕೇರಿ ನೋಡಿದಳಂತ ರುವವಳು ಕೇರಿ ಕೇರಿ ನೋಡಿದಳು .
ಈ ) ಕೆಳಗಿನ ಆಡುನುಡಿಗಳನ್ನು ಓದಿ ಬರೆ .
ಅ. ರವಿ ಶಾಲೆಗೆ ಹೋದನು .
ರವಿ ಸಾಲಿಗೆ ಹೋದ
ರವಿ ಸಾಲಿಗೆ ಹೋಗ್ಯಾನ್ರೀ
ಉತ್ತರ : ರವಿ ಸಾಲಿಗೆ ಹೊಗ್ರಾನ್ರೀ
ಆ . ಕಿರಣ ತಿಂಡಿ ತಿನ್ನುತ್ತಿದ್ದಾನೆ .
ಪದ್ಯದ ಸಾರಾಂಶ :
ನಮ್ಮ ದೇಶದ ಹಳ್ಳಿ ಹಳ್ಳಿಗಳಿಂದ ಹಲವು ಜನಪದ ಕಾವ್ಯಗಳು ಹುಟ್ಟಿಕೊಂಡಿವೆ . ನಮ್ಮ ಹಳ್ಳಿಯಲ್ಲಿ ವಾಸಿಸುವ ಜನ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮಾಡುತ್ತ ಇಂತಹ ಜನಪದ ಪದ್ಯಗಳನ್ನು ರಚಿಸಿದ್ದಾರೆ . ಪ್ರಸ್ತುತ ಬೀಸೋಕಲ್ಲಿನ ಪದ ‘ ಹಳ್ಳಿಯ ಒಬ್ಬ ಹೆಣ್ಣು ಮಗಳು ಮನೆಯ ಕೆಲಸ ಮಾಡುತ್ತ ಕಾಳುಗಳನ್ನು ಬೀಸುವ ‘ ಬೀಸುಕಲ್ಲಿನ ಕುರಿತು ಹಾಡುತ್ತಾಳೆ ಆ ಹೆಣ್ಣುಮಗಳು ಕಲ್ಲಮ್ಮ ತಾಯಿ ನೀನು ರಾಗಿಯನ್ನು ಮೆಲ್ಲುತ್ತಾ ಇಲ್ಲ ಜಲ್ಲಾನೆ ಉದುರಮ್ಮ ನಾನು ನಿನಗೆ ಬೆಲ್ಲದ ಆರತಿಯನ್ನು ಬೆಳಗುತ್ತೇನೆ ಎನ್ನುವಳು .ಅಂದವಾದ ಅಡಿಗಲ್ಲು ಸೊಗಸಾದ ಮೇಗಲ್ಲು ,ಚಂದ್ರಮತಿಯೆಂಬ ಈ ಎರಡು ಕಲ್ಲಿನ ಮೇಲಿರುವ ಹಿಡಿಗೂಟ ಹಿಡಿದುಕೊಂಡು ನನಗೆ ಜನ್ಮ ನೀಡಿದ ತಂದೆ ತಾಯಿಗಳನ್ನು ನೆನೆಯುತ್ತೇನೆ ಎನ್ನುತ್ತಾಳೆ .ಈಗ ರಾಗಿ ಬೀಸುವುದು ಮುಗಿದಿದೆ , ಸುವಾಸನೆಯುಳ್ಳ ಅಕ್ಕಿಯನ್ನು ಹೆಚ್ಚಿಗೆಯಾಗಿ ಬೀಸಿದ್ದೇನೆ , ತಾನು ಮಾಡಬೇಕೆಂದಿರುವ ಕೆಲಸ ಮುಗಿಸಿದೇನೆ , ರಾಗೀಕಲ್ಲೇ ನಾನು ನನ್ನ ಶಕ್ತಿಯಿಂದ ನಿನ್ನನ್ನು ತೂಗಿಬಿಡುತ್ತೇನೆ ಎನ್ನುತ್ತಾಳೆ . ಕಲ್ಕು ಜೋರಾಗಿ ತಿರುಗಿಸಿ ಬಿಟ್ಟೆನೆಂದು ನೀನು ಮಾಡಿಕೊಳ್ಳಬೇಡ , ಬಿದಿರಿನ ಬುಟ್ಟಿಯಲ್ಲಿ ರಾಗಿ ಬೆಳೆಯಲಿ ಮತ್ತೆ ಅದನ್ನುತೆಗೆದುಕೊಂಡು ರಾತ್ರಿ ಬರುತ್ತೇನೆ ಎಂದು ಸಮಾಧಾನ ಮಾಡುವಳು . * ಕಲ್ಕು ಕೊಟ್ಟ ಅಮ್ಮನಿಗೆ ಎಲ್ಲಾ ಭಾಗ್ರವು ಲಭಿಸಲಿ, ಪಲ್ಲಕ್ಕಿ ಮೇಲೆ ಕುಳಿತು ಆಕೆಯ ಮಗ ಬರಲಿ , ಆ ಮನೆಗೆ ಮಲ್ಲಿಗೆ ಮುಡಿಯೋ ಸೋಸೆ ಬರಲಿ ಎಂದು ಆ ಹೆಣ್ಣುಮಗಳು ಹರಸುತ್ತಾಳೆ.
FAQ :
ಉತ್ತರ : ರಾಗಿಯು ಜಲ್ಲ ಜಲ್ಲನೆ ಉದುರುತ್ತದೆ.
ಉತ್ತರ : ಬೀಸುವ ಕಲ್ಲಿನ ಹಿಡಿಗೂಟ ಹಿಡಿದ ತಂದೆ – ತಾಯಿಗಳ ನೆನೆಯುತ್ತಾರೆ .
ಇತರೆ ವಿಷಯಗಳು :
4th Standard Kannada Textbook Pdf
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.