rtgh

4th Standard Kadinallondu Sparde Kannada Notes | 4ನೇ ತರಗತಿ ಕಾಡಿನಲ್ಲೊಂದು ಸ್ಪರ್ಧೆ ಕನ್ನಡ ನೋಟ್ಸ್

4ನೇ ತರಗತಿ ಕಾಡಿನಲ್ಲೊಂದು ಸ್ಪರ್ಧೆ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 4th Standard Kadinallondu Spardhe Kannada Notes Question Answer Summary Mcq Pdf Download in Kannada Medium Karnataka State Syllabus 2024 Kseeb Solutions For Class 4 Kannada Chapter 17 Notes 4th Class Kannada 17th Lesson Notes 4th Kadinallondu Sparde in Kannada Notes Pdf

ಅಭ್ಯಾಸ

 ಅ ) ಒಂದೊಂದು ವಾಕ್ಯದಲ್ಲಿ  ಉತ್ತರ ಬರೆಯಿರಿ . 

1. ಪ್ರಾಣಿ ಪಕ್ಷಿಗಳ ಸಭೆಯನ್ನು ಕರೆದವರು ಯಾರು ? 

ಉತ್ತರ : ಪ್ರಾಣಿ ಪಕ್ಷಿಗಳ ಸಭೆಯನ್ನು ಕರೆದವರು ಕಾಡಿನ ರಾಜನಾದ ಸಿಂಹ .

2. ಕಾಡಿನಲ್ಲಿ ನಡೆದ ಸ್ಪರ್ಧೆ ಯಾವುದು ? 

ಉತ್ತರ : ಕಾಡಿನಲ್ಲಿ ನಡೆದ ಸ್ಪರ್ಧೆ ಆಶುಭಾಷಣ ಸ್ಪರ್ಧೆ . 

3. ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದವರು ಯಾರು ? 

ಉತ್ತರ : ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದವರು ಕೋಗಿಲೆ , ಕೋತಿ ಮತ್ತು ತೋಳ . 

ಆ ) ಮೂರು / ನಾಲ್ಕು ವಾಕ್ಯಗಳಲ್ಲಿ ಬರೆಯಿರಿ . 

1. ರೇಡಿಯೋದಲ್ಲಿ ನಾವು ಪ್ರತಿದಿನ ಯಾವ ಯಾವ ಕಾರ್ಯಕ್ರಮ ಕೇಳಬಹುದು ? 

ಉತ್ತರ : ರೇಡಿಯೋದಲ್ಲಿ ನಾವು ಪ್ರತಿದಿನ ಚಿಂತನ , ಕೃಷಿ  ಸಮಾಚಾರ , ಶಿಕ್ಷಣ ವಾರ್ತೆ , ಕ್ರೀಡೆ , ಸಂದರ್ಶನ ,  ರಾಜಕೀಯ , ಮನರಂಜನೆ , ಚಿತ್ರಗೀತೆ , ವಾರ್ತೆ , ಚಲನಚಿತ್ರ  ಧ್ವನಿವಾಹಿನಿ ಇತ್ಯಾದಿ ಕಾರ್ಯಕ್ರಮಗಳನ್ನು  ಕೇಳಬಹುದು . ದೇಶ ವಿದೇಶದ ಸಮಾಚಾರವನ್ನು ತಕ್ಷಣವೇ ಇದರ ಮೂಲಕ ತಿಳಿಯಬಹುದು . 

2. ರೈಲು ಪ್ರಯಾಣದ ಬಗ್ಗೆ ಚಿರತೆಯ ಅಭಿಪ್ರಾಯವೇನು ? 

ಉತ್ತರ : ನನಗಿಂತ ವೇಗವಾಗಿ ಚಲಿಸುವ ಉದ್ದವಾದ ವಾಹನವಿದು . ಇದು ಕಂಬಿಗಳ ಮೇಲೆ ಮಾತ್ರ ಚಲಿಸುತ್ತದೆ . ರೈಲಿನಲ್ಲಿ ಒಮ್ಮೆಗೆ ಹೆಚ್ಚು ಪ್ರಯಾಣಿಕರು ಪ್ರಯಾಣಿಸಬಹುದು . ಸರಕುಗಳನ್ನು ಸಾಗಿಸಬಹುದು . ರೈಲಿನಲ್ಲಿ ಶೌಚಾಲಯ , ಕುಡಿಯುವ ನೀರು , ಊಟ – ತಿಂಡಿ ,ಮಲಗುವ ವ್ಯವಸ್ಥೆ ಇರುತ್ತದೆ . ಈಗ ರೈಲು ಪ್ರಯಾಣ ಸುಖಕರ ಹಾಗೂ ಅದರ ದರವೂ ಕಡಿಮೆ ಎಂಬ ಅಭಿಪ್ರಾಯವನ್ನು ಚಿರತೆ ವ್ಯಕ್ತಪಡಿಸುತ್ತದೆ . 

3. ಆಶುಭಾಷಣ ಸ್ಪರ್ಧೆಯಲ್ಲಿ ಯಾರು ಯಾರು ಭಾಗವಹಿಸಿದ್ದರು ? 

ಉತ್ತರ : ಆನೆ , ಚಿರತೆ , ನವಿಲು , ಕರಡಿ , ಹಾವು , ಗಿಳಿ , ಮತ್ತು ನರಿ ಇವರೆಲ್ಲರೂ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು . 

ಇ ) ಈ ಮಾತುಗಳನ್ನು ಯಾರು ? ಯಾರಿಗೆ ಹೇಳಿದರು ?

1. ” ಆಮೆಯ ಜೊತೆ ಓಟದ ಸ್ಪರ್ಧೆಯಲ್ಲಿ ಸೋತಿದ್ದಕ್ಕೆ ಭಯವೇನು ? ” 

ಯಾರು ? : ಆನೆ 

ಯಾರಿಗೆ ? : ಮೊಲಕ್ಕೆ

2. ” ಅಬ್ಬಾ ! ಚೀಟಿಯಲ್ಲಿ ನನಗೆ ಇಷ್ಟವಾದ ವಿಷಯ ರೇಡಿಯೋ ಬಂದಿದೆ ” . 

ಉತ್ತರ 

ಯಾರು ? : ಆನೆ 

ಯಾರಿಗೆ ? : ಇನ್ನುಳಿದ ಸ್ಪರ್ಧಿಗಳಿಗೆ

 ಈ ) ಕೊಟ್ಟಿರುವ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ . 

1. ಸಂತೋಷದಿಂದ ನಡೆಸುತ್ತಿದ್ದವು ಸಹಬಾಳ್ವೆ ಪ್ರಾಣಿ ಪಕ್ಷಿಗಳು

ಪ್ರಾಣಿ ಪಕ್ಷಿಗಳು ಸಂತೋಷದಿಂದ ಸಹಬಾಳ್ವೆ ನಡೆಸುತ್ತಿದ್ದವು . 

2. ಕೇಳಿ ಕಲಿ ಕಾರ್ಯಕ್ರಮ ನನಗೆ ಎಂದರೆ ಅಚ್ಚು ಮೆಚ್ಚು 

ಉತ್ತರ : ನನಗೆ ಕೇಳಿ ಕಲಿ ಕಾರ್ಯಕ್ರಮ ‘ ಎಂದರೆ ಅಚ್ಚು ಮೆಚ್ಚು . 

3. ತುಂಬಾ ಇಷ್ಟ ನನಗೆ ಪ್ರಯಾಣವೆಂದರೆ ವಿಮಾನ 

ನನಗೆ ವಿಮಾನ ಪ್ರಯಾಣವೆಂದರೆ ತುಂಬಾ ಇಷ್ಟ . 

ಉ ) ಕೊಟ್ಟಿರುವ ಪದಗಳನ್ನು ಬಳಸಿ ಸಂತ ವಾಕ್ಯ ರಚಿಸಿ ,

ಸಹಬಾಳ್ವೆ : ನಾವು ಬೇರೆ ಬೇರೆ ಜಾತಿ ಅಥವಾ ಜನಾಂಗದವರೊಂದಿಗೆ ಸಹಬಾಳ್ವೆ ಹಾಗೂ ಸಹಕಾರದಿಂದ ಕೂಡಿ ಬಾಳಬೇಕು . 

ಆಕರ್ಷಣೆ : ನಾವು ವಿದೇಶಿ ಸಂಸ್ಕೃತಿಗೆ ಆಕರ್ಷಣೆ ಹೊಂದದೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬಾಳಿ ಬದುಕಬೇಕು . 

ಸ್ಪರ್ಧೆ : ನಾನು ವರ್ಷಕ್ಕೊಮ್ಮೆ ಶಾಲೆಯಲ್ಲಿ ಏರ್ಪಡಿಸುವ ಕ್ರೀಡಾ ಸ್ಪರ್ಧೆಯಲ್ಲಿ

ಅಚ್ಚುಮೆಚ್ಚು : ಶಾಲೆಯಲ್ಲಿ ವರ್ಷಕ್ಕೊಮ್ಮೆ ಕೈಗೊಳ್ಳುವ ಶೈಕ್ಷಣಿಕ ಪ್ರವಾಸಕ್ಕೆ ಹೋಗುವುದೆಂದರೆ ನನಗೆ ತುಂಬಾ ಅಚ್ಚುಮೆಚ್ಚು . 

ತಮಾಷೆ : ನಾನು ಮತ್ತು ನನ್ನ ಗೆಳೆಯರು ರವಿವಾರದಂದು ಸಾಯಂಕಾಲ ತಮಾಷೆ ಮಾಡುತ್ತಾ ಕಾಲ ಕಳೆದೆವು . 

ಊ ) ಕೊಟ್ಟಿರುವ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ. 

ಉತ್ತರ :

  1. ಭಯ X  ನಿರ್ಭಯ
  2. ಶತ್ರುX  ಮಿತ್ರ t
  3. ಸಂತೋಷX ಅಸಂತೋಷ . 
  4. ಮುಕ್ತಾಯX ಪ್ರಾರಂಭ 

ಭಾಷಾ  ಚಟುವಟಿಕೆ 

ಋ ) ನಾನು ಯಾರು ? ಯೋಚಿಸಿ ಬರೆ . 

ಜುಟ್ಟುಂಟು ನಾರಿಯಲ್ಲ 

ಕಣ್ಣುಂಟು ಮನುಷ್ಯನಲ್ಲ 

 ನೀರುಂಟು ಬಾವಿಯಲ್ಲ

 ಹಾಗಾದರೆ ನಾನು ಯಾರು ? 

ಉತ್ತರ : ತೆಂಗಿನಕಾಯಿ 

ನಾಲ್ಕು ಕಂಬಗಳುಂಟು ದೇವಾಲಯವಲ್ಲ , 

ಎರಡು ಮೊರಗಳುಂಟು ಕೇರಲಾಗುವುದಿಲ್ಲ 

ಒಂದು ಕಹಳೆಯುಂಟು ಊದಲಾಗುವುದಿಲ್ಲ 

ಹಾಗಾದರೆ ನಾನು ಯಾರು ? 

ಉತ್ತರ : ಆನೆ 

ಮರದ ಮೇಲಿರುವ ಪಕ್ಷಿಯಲ್ಲ 

ಹಸಿರಂಗಿ ತೊಟ್ಟಿರುವೆ ಬಾಲಕನಲ್ಲ

ಕೆಂಪು ಮೂತಿಯುಂಟು ಗಿಳಿಯಲ್ಲ 

ಹಾಗಾದರೆ ನಾನು ಯಾರು ? 

ಉತ್ತರ : ದಾಳಿಂಬೆ ಹಣ್ಣು . 

ಎ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ . 

ಮಾದರಿ : ರೈಲು + ಅನ್ನು = ರೈಲನ್ನು 

ಉತ್ತರ :

  1. ನಾಡು + ಅನ್ನು = ನಾಡನ್ನು 
  2. ಕಾಡು + ಅನ್ನು = ಕಾಡನ್ನು
  3. ಬಸ್ಸು + ಅನ್ನು = ಬಸ್ಸನ್ನು
  4. ಮಾತು + ಅನ್ನು = ಮಾತನ್ನ  

ಏ ) ಕೊಟ್ಟಿರುವ ಗೆರೆ ಹಾಕಿದ ಪದವನ್ನು ಗಮನವಿಟ್ಟು ಓದಿ . 

ಉತ್ತರ 

  1. ಆನೆ ಘೀಳಿಟ್ಟಿತು . – ಆನೆ : ಪೀಳಿಡು 
  2. ನವಿಲು ನರ್ತಿಸಿತು . – ನವಿಲು : ನರ್ತನ
  3. ಕರಡಿ ಕುಣಿಯಿತು . – ಕರಡಿ : ಕುಣಿತ 
  4. ಚಿರತೆ ವೇಗವಾಗಿ ಓಡಿತು . : ಚಿರತೆ : ಓಟ
  5. ಗಿಳಿ ರೆಕ್ಕೆ ಬಿಚ್ಚಿ ಹಾರುತ್ತಾ ಬಂದಿತು . ಗಿಳಿ : ಹಾರು

ಬಳಕೆ ಚಟುವಟಿಕೆ 

1) ಕೆಳಗಿನವುಗಳಲ್ಲಿ ಹಾಗು ಅನಾನುಕೂಲ ಮತ್ತು ಅನುಕೂಲಗಳನ್ನು ಬರೆಯಿರಿ 

ಅನುಕೂಲಅನಾನುಕೂಲ
ದೂರದರ್ಶನದೂರದ ಸುದ್ದಿ ಸಮಾಚಾರ ಬೇಗನೆ ನೋಡಬಹುದುಅತಿಯಾದ ವೀಕ್ಷಣೆಯಿಂದ ಕಣ್ಣಿಗೆ ಹಾನಿಕಾರ
ಪ್ರಯಾಣ ಮಾಡಿ ನೋಡಲಾಗದಿರುವ ಸ್ಥಳಗಳ ಚಿತ್ರವನ್ನ ವೀಕ್ಷಿಸಬಹುದುಬಡವರಿಗೆ ಕೈಗೆಟಕುವ ದರದಲ್ಲಿ  ದೂರದರ್ಶನ ಸಿಗುವುದಿಲ್ಲ
ಮೊಬೈಲ್ದೂರಸ್ಥಳದಲಿದ್ದವರೊಂದಿಗೆ ಮೊಬೈಲ್ ಮೂಲಕ ಸಂಭಾಷಣೆ ಮಾಡಬಹುದುತಲೆ ಅಥವಾ ಜೇಬಿನಲ್ಲಿ ಮೊಬೈಲ್ ಇಟ್ಟು ಕೊಳ್ಳುವುದರಿಂದ ಅದರಿಂದ ಬರುವ ತರಣಗಳಿಂದ ನಮ್ಮ ದೇಹಕ್ಕೆ ಹಾನಿಯುಂಟಾಗುತ್ತದೆ
ದೂರಸ್ಥಳದಲಿದ್ದವರೊಂದಿಗೆ ನಾವು ಮಾತನಾಡದೆ SMSಕಳುಹಿಸಿ ಸಂಪರ್ಕಿಸಬಹುದುಅನಕ್ಷರತೆ ಜನರಿಗೆ ಇದನ್ನು ಬಳಸುವ ಪದ್ಧತಿ ತಿಳಿಯುವುದಿಲ್ಲ

2) ನೀನು ಆಡುವ ಆಟಗಳನ್ನು ಚೌಕದಲ್ಲಿ  ಬರೆಯಿರಿ .

ಉತ್ತರ :

ಕ್ರಿಕೆಟ್ಕಬ್ಬಡಿಟೆನ್ನಿಕ್ವಾಯಿಟ್
ಕೇರಂಶಟಲ್ ಕಾಕ್ಬಾಸ್ಕೆಟ್ ಬಾಲ್
ಫುಟ್ ಬಾಲ್ಟೆನಿಸ್ಹಾಕಿ

FAQ :

ಕಾಡಿನಲ್ಲಿ ನಡೆದ ಸ್ಪರ್ಧೆ ಯಾವುದು ? 

ಉತ್ತರ : ಕಾಡಿನಲ್ಲಿ ನಡೆದ ಸ್ಪರ್ಧೆ ಆಶುಭಾಷಣ ಸ್ಪರ್ಧೆ . 

ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದವರು ಯಾರು ? 

ಉತ್ತರ : ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದವರು ಕೋಗಿಲೆ , ಕೋತಿ ಮತ್ತು ತೋಳ . 

ಇತರೆ ವಿಷಯಗಳು :

4th Standard Kannada Textbook Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 4ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *