ದ್ವಿತೀಯ ಪಿ.ಯು.ಸಿ ಒಮ್ಮೆ ನಗುತ್ತೇವೆ ಕನ್ನಡ ಸಾರಾಂಶ, 2nd PUC Omme Nagutteve Kannada Summary Saramsha Bhavartha Pdf Download 2022
ತರಗತಿ : ದ್ವಿತೀಯ ಪಿ.ಯು.ಸಿ
ಪದ್ಯದ ಹೆಸರು : ಒಮ್ಮೆ ನಗುತ್ತೇವೆ
ಕೃತಿಕಾರರ ಹೆಸರು : ಪ್ರೊ. ಬಿ. ಸುಕನ್ಯಾ ಮಾರುತಿ
Omme Nagutteve Kannada Summary
ಶ್ರೀಮತಿ ಸುಕನ್ಯಾ ಮಾರುತಿ ಅವರು ಬರೆದಿರುವ ‘ ಒಮ್ಮೆ ನಗುತ್ತೇವೆ ‘ ಎಂಬ ಕವಿತೆಯು ವ್ಯವಸ್ಥೆಯ ವಿರುದ್ಧ ಎತ್ತಿರುವ ಬಂಡಾಯದ ದನಿಯಾಗಿವೆ . ಸಾಮಾಜಿಕ ಅಸಮಾನತೆಯು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ ನರಳಿಸುತ್ತಿದೆ . ಅವರ ಮೊಗದಲ್ಲಿ ನಗೆ ಅರಳಬೇಕಾದರೆ ಮೂಲಭೂತ ಸೌಕರ್ಯಗಳನ್ನು ಮೊದಲು ಒದಗಿಸಬೇಕು . ಆ ಮೂಲಕ ಹೊರೆಯಾಗಿರುವ ಅವರ ಬದುಕಿನಲ್ಲಿ ನಗೆ ಮೂಡಿಸ ಬೇಕೆಂಬ ಕಳಕಳಿಯನ್ನು ಕವಯಿತ್ರಿ ಇಲ್ಲಿ ತೋರಿದ್ದಾರೆ .
“ ದನಗಳಿಗೆ ಮೇವಿಲ್ಲ , ಜನಗಳಿಗೆ ನೀರಿಲ್ಲ , ಗಂಜಿಗೂ ಗತಿಯಿಲ್ಲ , ತಿನ್ನಲು ತುತ್ತನ್ನವಿಲ್ಲದೆ , ಸತ್ತ ದನಗಳ ಕಿತ್ತು ತಿನ್ನುವ ದೃಶ್ಯ ನಿಜಕ್ಕೂ ಭೀಬತ್ಸ ಅದನ್ನು ನೋಡಿ ಮನ ಅಗ್ನಿ ಪರ್ವತದಂತೆ ಕುದಿಯುತ್ತದೆ ” ಎನ್ನುತ್ತಾರೆ ಕವಯಿತ್ರಿ .
ದನಕರುಗಳು – ಜನರು ಪಡುವ ಬವಣೆಯನ್ನು ಕಂಡು ಏನೂ ಮಾಡಲಾಗದ ಅಸಹಾಯಕತೆ ಕವಯಿತ್ರಿಯದು . ನೊಂದವರತ್ತ ಕಣ್ಣುಹಾಯಿಸಿ ನೋಡಲಾರದೆ ಕವಯಿತ್ರಿ ನೊಂದವರಿಗಾಗಿ ಆಕಾಶದತ್ತ ಕೈಚಾಚಿ ಮಳೆಗಾಗಿ ದೇವರನ್ನು ಪ್ರಾರ್ಥಿಸಿದ್ದಾರೆ . ಇಂತಹ ಸ್ಥಿತಿಯನ್ನು ನಿಮಾರ್ಣ ಮಾಡಿರುವ ದೇವರು – ಪ್ರಕೃತಿ – ವ್ಯವಸ್ಥೆ ಎಲ್ಲದರ ಬಗ್ಗೆಯೂ ಅತೀವ ಕೋಪಗೊಂಡಿರುವ ಕವಯಿತ್ರಿ ಧಗಿಧಗಿಸಿ ಉರಿಯುವ ಜ್ವಾಲಾ ಮುಖಿಯಾಗಿದ್ದಾರೆ . ಅವರಿಗೆ ದೇವರಲ್ಲಿ ಎಂದಿಗೂ ನಂಬಿಕೆಯಿರಲಿಲ್ಲ . ಆದರೂ ಜನರ ಕಷ್ಟ ನೋಡಲಾಗದೆ ಎಂದೂ ಕಾಣದ , ನಂಬಿರದ ದೇವರಲ್ಲಿ ಮೊರೆಯಿಟ್ಟು ಸಹಾಯವನ್ನು ಬೇಡುತ್ತಿರುವುದಾಗಿ ಕವಯಿತ್ರಿ ಹೇಳಿದ್ದಾರೆ .
ಮೊದಲಿಗೆ ಕಾಣದ ದೇವರನ್ನು ಕಷ್ಟ ನಿವಾರಣೆಗಾಗಿ ಪ್ರಾರ್ಥಿಸಿದ ಕವಯಿತ್ರಿಗೆ ದೇವರು ಜನರನ್ನು ಕಾಪಾಡುವುದಿಲ್ಲವೆಂಬುದು ಖಚಿತವಾದಾಗ , ಯಾರೂ ಸಹಾಯಕ್ಕೆ ಹಸ್ತವನ್ನು ಚಾಚದಿದ್ದಾಗ ತಮ್ಮ ಕಣ್ಣೀರಿನ ಲಾವಾರಸದಲ್ಲಿ ಇಡೀ ವಿಶ್ವವನ್ನೇ ಮುಳುಗಿಸಿ ಬಿಡಬೇಕೆಂಬ , ಜಗತ್ತನ್ನೇ ಸರ್ವನಾಶ ಮಾಡಬೇಕೆಂಬ ಛಲ ಮೂಡುತ್ತದೆ . ಬೆಂಕಿ ನಾಲಗೆಯನ್ನು ಚಾಚಿ ತಮ್ಮವರು ಅನುಭವಿಸುತ್ತಿರುವ ದಾರಿದ್ರವನ್ನೇ ನುಂಗಿ ನೊಣೆಯ ಬೇಕೆಂಬ ಭಾವ ಮೂಡುತ್ತದೆ . ಕ್ರೋಧದಿಂದ ಕವಯಿತ್ರಿ ಬಡಜನರ ದೀನದಲಿತತನಕ್ಕೆ ಧಿಕ್ಕಾರ ಕೂಗುತ್ತಾರೆ . ಮಾತ್ರವಲ್ಲ ಅವರ ನೋವನ್ನೇ ಸರ್ವನಾಶ ಮಾಡುವುದಾಗಿ ಹೇಳಿದ್ದಾರೆ .
ತನ್ನದೇ ಏನೂ ಮಾಡಲಾಗದ , ಏನೂ ನೋಡಲಾಗದ ಸ್ಥಿತಿಯಾಗಿದೆ . ನಾನು ಅವರಿಗಾಗಿ ಮುಗಿಲತ್ತ ಕೈಚಾಚಿ ನಿಂತಿದ್ದೇನೆ . ಈಗಿದ್ದಗಿಸುವ ಉರಿವ ಜ್ವಾಲಾಮುಖಿಯಾಗಿದ್ದೇನೆ . ನಾನೆಂದು ದೇವರನ್ನು ನಂಬಿಲ್ಲ . ಆದರೆ ಇಂದು ನನ್ನವರಿಗಾಗಿ ಕಂಡ ಕಂಡ ದೇವರಲ್ಲಿ ಮೊರೆಯಿಡುತ್ತಿದ್ದೇನೆ . ಯಾರು ನನ್ನ ಈ ಬಡವರ ಕೈ ಹಿಡಿಯದಿದ್ದಾಗ ನನ್ನ ಕಣ್ಣಲ್ಲಿ ಕಂಬನಿ ಲಾವಾರಸದಂತೆ ಹರಿಯುತ್ತದೆ . ಮನದಲ್ಲಿ ವಿಶ್ವವನ್ನೆ ಮುಳುಗಿಸಿ ಬಿಡುವ ಛಲ ಮೂಡುತ್ತದೆ . ಬೆಂಕಿಯ ನಾಲಿಗೆ ಚಾಚಿ ಈ ನನ್ನ ಬಡವರ ದಾರಿದ್ರವನ್ನೆಲ್ಲ ಒಟ್ಟಿಗೆ ಆಪೋಶನ ಮಾಡಿಬಿಡಬೇಕೆನಿಸುತ್ತದೆ .
ದಾರಿದ್ರವನ್ನು ಸರ್ವನಾಶ ಮಾಡಲೇಬೇಕೆಂದು ನಿರ್ಧರಿಸುತ್ತೇನೆ ಎಂಬುದಾಗಿ ಕವಯಿತ್ರಿ ನಿರ್ಧರಿಸುತ್ತಾರೆ . ಅವರ ನಗುವೇ ಕಾಣದ ಈ ಬಡಪಾಯಿಗಳನ್ನು ನಗಿಸುವ ಪ್ರಯತ್ನ ಮಾಡುವ ತೀರ್ಮಾನ ಕೈಗೊಳ್ಳುತ್ತಾರೆ . ಅವರೇ ಹೇಳುವಂತೆ – “ ನನ್ನವರನ್ನು , ನನ್ನ ಪ್ರೀತಿಯ ಜನರನ್ನು ನಾನೇ ನಗಿಸುತ್ತೇನೆ . ಅವರನ್ನು ದಾರಿದ್ರವೆಂಬ ಧಗೆಯಿಂದ ಹೊರಬರುವಂತೆ ಮಾಡುತ್ತೇನೆ . ಅವರ ನಗುವಿನೊಂದಿಗೆ ನಾನು ನಗುತ್ತೇನೆ . ಆ ನಗು ಆಕಾಶದವರೆಗೂ ಮುಟ್ಟುವಂತನಾಗಬೇಕು . ಕಾರ್ಮೋಡದವರೆಗೂ ಆ ನಗು ಕೇಳಿಸಬೇಕು . ಕಾರ್ಮೋಡವು ಮಳೆಯ ರೂಪದಲ್ಲಿ , ಹೊಳೆಯರೂಪದಲ್ಲಿ , ಬೆಳೆಯ ರೂಪದಲ್ಲಿ ನಗು ತುಂಬಿ ಹರಿದು ಬರುತ್ತದೆ . ದನ , ಜನ ಎಲ್ಲಾ ಕೂಡಿ ನಗುತ್ತೇವೆ . ಒಮ್ಮೆ ನಕ್ಕೆ ನಗುತ್ತೇವೆ . ಈ ದಾರಿದ್ರದಿಂದ ಪಾರಾಗುತ್ತೇವೆ ” ಎಂಬ ಭರವಸೆಯನ್ನು ಕವಯಿತ್ರಿ ಶೋಷಿತರಲ್ಲಿ ಮೂಡಿಸಿದ್ದಾರೆ .
2nd PUC Omme Nagutteve Kannada Summary Saramsha Bhavartha Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.