ಹತ್ತಿ ಚಿತ್ತ ಮತ್ತು ಸಾರಾಂಶ, 2nd PUC Hatti Chitta Mattu Poem Summary In Kannada Saramsha Bhavartha Pdf Download 2022
ತರಗತಿ : ದ್ವಿತೀಯ ಪಿ.ಯು.ಸಿ
ಪದ್ಯದ ಹೆಸರು : ಹತ್ತಿ…ಚಿತ್ತ…ಮತ್ತು…
ಕೃತಿಕಾರರ ಹೆಸರು : ಟಿ. ಯಲ್ಲಪ್ಪ
ಹತ್ತಿ ಚಿತ್ತ ಮತ್ತು ಸಾರಾಂಶ
ಆತ್ಮ – ಪರಮಾತ್ಮಗಳ ಅಸ್ತಿತ್ವವನ್ನು ಹತ್ತಿ ಮತ್ತು ಚಿತ್ರಗಳ ಮೂಲಕ ಸಾಂಕೇತಿಸಿ ಕವಿ ಈ ಕವಿತೆಯನ್ನು ರಚಿಸಿದ್ದಾರೆ .
ಹಚ್ಚಿಟ್ಟ ಹಣತೆ ( ದೀಪ ) ದಲ್ಲಿ ಹತ್ತಿಯನ್ನು ಹೊಸೆದು ಬತ್ತಿಯಾಗಿ ಮಾಡಿ ಬೆಳಗಿಸಲಾಗಿದೆ . ಇಲ್ಲಿ ಬತ್ತಿಯು ಮಡಿಯುಟ್ಟು ಅಂದರೆ ಸ್ನಾನ ಮಾಡಿ ಶುಚಿಯಾಗಿ ಬಂದ ಭಕ್ತನಂತೆ ಎಣ್ಣೆಯಲ್ಲಿ ಮುಳುಗಿ ಕತ್ತಲು ಎಂಬ ಅಜ್ಞಾನವನ್ನು ಸರಿಸಿ , ಜ್ಞಾನವೆಂಬ ಬೆಳಕನ್ನು ಕೊಡುತ್ತಿರುವ ಯೋಗಿಯಂತೆ ಕಾಣುತ್ತಿದೆ . ಜೀವನದ ಸಾರ್ಥಕತೆಯನ್ನು ಪಡೆಯುತ್ತಿದೆ . ಕವಿ ಇದನ್ನೆ ಹೋಲುವ ಮತ್ತೊಂದು ಉದಾಹರಣೆಯನ್ನು ಇಲ್ಲಿ ನೀಡಿದ್ದಾರೆ . ಜೇಡವು ತನ್ನ ಒಡಲಿನಿಂದಲೇ ನೂಲನ್ನು ಹೆಣೆದು ತನ್ನ ಜೀವನದ ಜಾಲವನ್ನು ತಾನೇ ನಿರ್ಮಿಸಿಕೊಂಡು ಕೊನೆಗೆ ತಾನೇ ಹೆಣೆದ ಜೀವಜಾಲದಲ್ಲಿ ಸಿಲುಕಿ ಪ್ರಾಣವನ್ನು ತ್ಯಜಿಸುತ್ತದೆ .
ಜೇಡರಹುಳು ತಾನೇ ನೇಯ್ದ ಬಲೆಯಲ್ಲಿ ಸಿಲುಕಿ ಜೀವ ನೀಗುವ ಹಾಗೆ ಮಾನವ ಜೀವವೂ ದೇಹ ಒಡ್ಡುವ ಆಮಿಷಗಳ ಬಲೆಯಲ್ಲಿ ಸಿಲುಕಿ ಒದ್ದಾಡುತ್ತದೆ . ಹತ್ತಿಯ ಬೀಜ ತಾನೇ ಸುತ್ತಿಕೊಂಡ ಹತ್ತಿಯಿಂದ ತಯಾರಿಸಿದ ಬತ್ತಿಯಿಂದ , ತನ್ನ ಒಡಲಿನಿಂದಲೇ ಉದಿಸಿದ ಎಣ್ಣೆಯಿಂದಲೇ ಸುಡಲ್ಪಟ್ಟು ಇಲ್ಲವಾಗುತ್ತದೆ . ಆದರೂ ಅದರಿಂದ ಉಂಟಾದ ಬೆಳಕು ಲೋಕಕಲ್ಯಾಣಕ್ಕೆ ಕಾರಣವಾಗುತ್ತದೆ . ಅಂತೆಯೇ ಈ ಜೀವವಾದರೂ ಹಾಗೆಯೇ ದೇಹದ ವಾಂಛಗಳಿಂದ ಘಾಸಿಗೊಂಡರೂ ಆತ್ಮದ ಉನ್ನತಿಗೆ ಕಾರಣವಾಗುವುದರಲ್ಲೇ ಅದರ ಸಾರ್ಥಕ್ಯವನ್ನು ಕಂಡುಕೊಳ್ಳುತ್ತದೆ . ಇದು ಜೀವದ ಏಳುಬೀಳಿನ ಪಯಣದ ಕಥನವನ್ನು ಹೇಳಲು ಬಳಕೆಯಾಗಿರುವ ರೂಪಕ ವಾಗಿದೆ . ಆದರೆ ಇದು ಸದ್ದಿಲ್ಲದೆ ನಡೆಯುವ ಕಣ್ಣಿಗೆ ಕಾಣದ ಅಮೂರ್ತ ಪಯಣ ವಾಗಿದೆ .
ಈ ದೇಹ , ಜೀವ , ಆತ್ಮ ಪರಮಾತ್ಮಗಳ ಜಿಜ್ಞಾಸೆ ನಮ್ಮಲ್ಲಿ ಅನಾದಿಯಾಗಿ ನಡೆದೇ ಇದ್ದರೂ ಜೀವಸೃಷ್ಟಿ ಮಾತ್ರ ನಿಂತಿಲ್ಲ . ಅದು ನಿಸರ್ಗ ಸಹಜವಾಗಿ ನಡೆದೇ ಇದೆ . ನಿದ್ದೆ ತಿಳಿದೆದ್ದ ಮಗುವಿನ ಅಳುವನ್ನು ಕೇಳಿದವರು ಅವರವರಿಗೆ ತಿಳಿದಂತೆ ಅರ್ಥೈಸುತ್ತಾರೆ . ಅಮ್ಮನಿದ್ದೂ ಬಾಟಲಿ ಹಾಲಿಗೆ ಬಾಯೊಡ್ಡಬೇಕಾದ ಮಗುವಿನ ತಬ್ಬಲಿತನದ ದೌರ್ಭಾಗ್ಯವನ್ನು ಆಧುನಿಕವೆನ್ನಬೇಕೋ ಎಂದು ತಿಳಿಯದ ಗೊಂದಲದ ನಡುವೆಯೂ ಮನುಷ್ಯನ ಯಾವುದೋ ಜೈವಿಕ ಅಗತ್ಯಗಳಿಗೆ ಕಟ್ಟಿಹಾಕಿ ಈ ಸೃಷ್ಟಿ ಅವನನ್ನು ಸಂತೈಸುತ್ತಿದೆ ಎಂದು ಕವಿ ಭಾವಿಸುತ್ತಾನೆ .
ಭೌತಶರೀರದ ಅಳಿವು ಅವರ ಉಸಿರಾಟ ನಿಂತ ಒಡನೆಯೇ ನಮ್ಮ ಅರಿವಿಗೆ ಬರುತ್ತದೆ . ಎಣ್ಣೆ ಮುಗಿದು , ಬತ್ತಿ ಉರಿದು ಹೋದ ಮೇಲೆ ದೀಪವೂ ಆರಿ ಹೋಗುತ್ತದೆ . ದೇಹದ ಅಳಿವು – ದೀಪದ ಆರುವಿಕೆ ಇವೆರಡೂ ಭೌತಿಕ ಕ್ರಿಯೆಗಳ ಅಂತ್ಯ ಅನುಭವಕ್ಕೆ ವೇದ್ಯವಾಗುವಂತಹದು ಮತ್ತು ಮೂರ್ತವಾಗಿ ಗೋಚರಿಸುವಂತಹದ್ದು . ಆದರೆ ಆತ್ಮದ ಅರಿವು ಅಭೌತಿಕ – ಅಮೂರ್ತ , ಆತ್ಮಕ್ಕೆ ಕಮಟು ಹತ್ತುವ ವಾಸನೆಯನ್ನು ವ್ಯಕ್ತಿ ತಾವಲ್ಲದೆ ಅನ್ಯರಿಗೆ ತೋರಿಸಲಾಗುವುದಿಲ್ಲ . ಇಲ್ಲಿ ಬತ್ತಿಯು ಸುಟ್ಟು ವಾಸನೆಯ ಮೂಲಕ ವ್ಯಕ್ತಿಯ ಆತ್ಮದ ಅವನತಿಯನ್ನು ಸೂಚಿಸುತ್ತಿದೆ . ಅದು ಜೀವಾತ್ಮಗಳ ಪತನವೂ ಆಗಿರಬಹುದು .
ಕೆಲವೊಮ್ಮೆ ಕೆಲವು ಕೆಲಸ ಮೇಲ್ನೋಟಕ್ಕೆ ಮೂರ್ಖತನದ್ದೆಂಬಂತೆ ಕಾಣುತ್ತದೆ . ಉದಾಹರಣೆಗೆ , ವಯಸ್ಸಾದ ಮುಪ್ಪಿನ ಜೀವಿಗಳಿಗೆ ಹೇಗೂ ಸಾಯುವವರೆಂದು ಗೊತ್ತಿದ್ದು ಚಿಕಿತ್ಸೆ ಏಕೆಂದು ನಿರ್ಲಕ್ಷ್ಯ ವಹಿಸುವುದು ಮೂರ್ಖತನವೇ ಆದೀತು . ಮತ್ತೆ ಮತ್ತೆ ತೈಲ ಸುರಿಯುವ ಬತ್ತಿ ಹೊಸೆಯುವ ಆಶಾವಾದೀತನ , ಜೀವದ ಅಳಿ ವನ್ನು ಮುಂದೂಡುತ್ತಲೇ ಸಾವನ್ನು ಎದುರಿಸುವ ಜೀವನ ಪ್ರೇಮಗಳನ್ನು ಮೂರ್ಖತನ ಎನ್ನಲಾಗದು . ಹತ್ತಿಗೆ ಮೆತ್ತಿಕೊಂಡೇ ಇರುವ ಹತ್ತಿಬೀಜದಲ್ಲಿ ಹತ್ತಿಯನ್ನು ಸುಡಲು ಬೇಕಾದ ತೈಲವೂ ಅಂಟಿಕೊಂಡೇ ಇರುತ್ತದೆ . ಇದೇ ರೀತಿ ಭೌತಿಕವಾದ ಈ ದೇಹಕ್ಕೂ ಸಾವೆಂಬುದು ನಿಸರ್ಗದತ್ತವಾಗಿಯೇ ಅಂಟಿಕೊಂಡಿದೆ ಎಂಬ ಸಾರ್ವಕಾಲೀಕ ಕಟುವಾಸ್ತವ ಸತ್ಯವನ್ನು ಕವಿ ಕವಿತೆಯ ಈ ಭಾಗದಲ್ಲಿ ಚರ್ಚಿಸಿದ್ದಾರೆ .
ಹೇಗೆ ಹತ್ತಿ ಬತ್ತಿಯಾಗಿ ತೈಲದೊಂದಿಗೆ ಉರಿದು ಬೆಳಕುಕೊಟ್ಟು ತನ್ನ ಜೀವನದ ಸಾರ್ಥಕತೆಯನ್ನು ಪಡೆಯುವುದೋ ಅದೇ ರೀತಿ ಈ ಜೀವನವನ್ನು ಸಹ ಆತ್ಮ ನಿರ್ವಾಣಹೊಂದುವವರೆಗೂ ( ದೀಪದಲ್ಲಿ ಎಣ್ಣೆ ಮುಗಿಯುವವರೆಗೂ ) ಸಮಾಜಕ್ಕೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು . ಇಂಥಹ ಒಳಿತು ಕಾರ್ಯ ಮಾಡುವ ಚಿತ್ತವನ್ನು ಬೆಳೆಸಿಕೊಂಡು ಕಾರ್ಯ ಪ್ರವೃತ್ತರಾದಾಗ ಈ ಜೀವನದ ಸೊಬಗು ಬಣ್ಣಿಸಲಾರದಷ್ಟು ಸೊಬಗಿನಿಂದ ಸೌಂದಯ್ಯದಿಂದ ಕೂಡಿರುತ್ತದೆ ಎಂಬುದಾಗಿ ವಿವರಿಸಿದ್ದಾರೆ .
2nd PUC Hatti Chitta Mattu Poem Summary In Kannada Saramsha Bhavartha Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
- Hatti Chitta Mattu Kannada Notes
- 2 PUC Notes PDF
- 1 PUC Notes
- ವಿರುದ್ಧಾರ್ಥಕ ಪದಗಳು
- ತತ್ಸಮ ತದ್ಭವ
- 50+ ಪ್ರಬಂಧಗಳು
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.