ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ ನೋಟ್ಸ್ | 2nd Puc History Chapter 1 Notes in Kannada

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ ನೋಟ್ಸ್ ಪ್ರಶ್ನೋತ್ತರಗಳು, 2nd Puc History Chapter 1 Notes Question Answer Mcq Pdf in Kannada Medium 2023 Introduction in India in Kannada Notes ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ ಭಾರತದ ಇತಿಹಾಸದ ಮೂಲಾಧಾರಗಳು ನೋಟ್ಸ್ 2nd Puc History Peetike Notes Answers

ಅಧ್ಯಾಯ-1 ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ-
ಭಾರತದ ಇತಿಹಾಸದ ಮೂಲಾಧಾರಗಳು

2nd Puc History Chapter 1 Notes in Kannada

Kseeb Solution For Class 12 History Chapter 1 Notes in Kannada

I. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :

1. ಪ್ಲಿನಿಯ ಪ್ರಸಿದ್ಧ ಗ್ರಂಥ ಯಾವುದು ?

ನ್ಯಾಚುರಲ್ ಹಿಸ್ಟೋರಿಯಾ .

2. ‘ ಇಂಡಿಯಾ ‘ ಎಂಬ ಪದವು ಯಾವ ಭಾಷೆಯಿಂದ ಬಂದಿದೆ ?

ಪರ್ಷಿಯನ್ ಭಾಷೆಯಿಂದ ಬಂದಿದೆ .

3. ಪ್ರಾಚೀನ ಕರ್ನಾಟಕದ ಮೇರೆ ಉಲ್ಲೇಖಿಸುವ ಗ್ರಂಥ ಯಾವುದು ?

ಶ್ರೀ ವಿಜಯನ ಕವಿರಾಜಮಾರ್ಗ .

4. ನಾಣ್ಯಶಾಸ್ತ್ರ ಎಂದರೇನು ?

ಆಯಾ ಕಾಲದಲ್ಲಿ ಚಾಲನೆಯಲ್ಲಿದ್ದ ನಾಣ್ಯಗಳ ಸಹಾಯದಿಂದ ಇತಿಹಾಸವನ್ನು ತಿಳಿಯುವುದೇ ನಾಣ್ಯಶಾಸ್ತ್ರವಾಗಿದೆ .

5. ಉತ್ಪನನ ಎಂದರೇನು ?

ಮೂಲಾಧಾರಗಳನ್ನು ಹೆಕ್ಕಿ ತೆಗೆಯಲು ಕೈಗೊಳ್ಳುವ ವೈಜ್ಞಾನಿಕ ಭೂ ಅಗೆತವನ್ನು ಉತ್ಪನನ ಎನ್ನುವರು .

6. ಐಹೊಳೆ ಶಾಸನ ಯಾರ ದಿಗ್ವಿಜಯಗಳನ್ನು ವಿವರಿಸುತ್ತದೆ ?

ಇಮ್ಮಡಿ ಮಲಿಕೇಶಿಯ ಸಾಧನೆಗಳನ್ನು ವಿವರಿಸುತ್ತದೆ .

7. ‘ ಬುದ್ಧಚರಿತ’ವನ್ನು ಬರೆದವರು ಯಾರು ?

“ ಬುದ್ಧಚರಿತ’ವನ್ನು ಬರೆದವರು ಅಶ್ವಘೋಷ

II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಎರಡು ಪದ ಅಥವಾ ವಾಕ್ಯಗಳಲ್ಲಿ ಉತ್ತರಿಸಿ :

1. ಭಾರತದ ಯಾವುದಾದರೂ ಎರಡು ಪರ್ವತಗಳನ್ನು ತಿಳಿಸಿ .

* ಮೌಂಟ್ ಎವರೆಸ್ಟ್ ಮತ್ತು

* ಕಾಂಚನಜುಂಗ ,

2. ಭಾರತದಲ್ಲಿ ಉದಯಿಸಿರುವ ಯಾವುದಾದರೂ ಎರಡು ಪ್ರಮುಖ ಧರ್ಮಗಳನ್ನು ಹೆಸರಿಸಿ .

ಜೈನಧರ್ಮ ಮತ್ತು ಬೌದ್ಧ ಧರ್ಮ .

3. ವಿಶ್ವಪರಂಪರೆ ಪಟ್ಟಿಯಲ್ಲಿರುವ ಭಾರತದ ಯಾವು ದಾದರೂ ಎರಡು ಐತಿಹಾಸಿಕ ತಾಣಗಳನ್ನು ತಿಳಿಸಿ .

ರಾಜಸ್ಥಾನದ ಗಿರಿದುರ್ಗಗಳು ಮತ್ತು ಹಂಪಿ

4. ಭಾರತವನ್ನು ಪಶ್ಚಿಮದೊಂದಿಗೆ ಸಂಪರ್ಕಿಸುವ ಯಾವುದಾದರೂ ಎರಡು ಕಣಿವೆಗಳನ್ನು ತಿಳಿಸಿ .

ಖೈಬರ್ ಮತ್ತು ಬೋಲಾನ್ ಕಣಿವೆ .

5. ವಿಷ್ಣುಪುರಾಣದ ಪ್ರಕಾರ ಭಾರತದ ವ್ಯಾಪ್ತಿ ಏನು ?

ಸಾಗರದಿಂದ ಉತ್ತರಕ್ಕೆ ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಪ್ರದೇಶವೇ ಭಾರತದ ವ್ಯಾಪ್ತಿ .

6. ಭಾರತದ ಯಾವುದಾದರೂ ಎರಡು ಹೆಸರುಗಳನ್ನು ತಿಳಿಸಿ .

ಹಿಂದೂಸ್ತಾನ , ಇಂಡಿಯಾ

7. ಭಾರತದ ಯಾವುದಾದರೂ ಎರಡು ನೈಸರ್ಗಿಕ ಲಕ್ಷಣಗಳನ್ನು ತಿಳಿಸಿ .

ಉತ್ತರಕ್ಕೆ ಹಿಮಾಲಯ , ದಕ್ಷಿಣಕ್ಕೆ ಸಾಗರಗಳು , ಪಶ್ಚಿಮದ ಮರುಭೂಮಿಗಳು , ದಖನ್ ಪ್ರಸ್ಥಭೂಮಿಗಳು .

8. ಪ್ರಾಚೀನ ಭಾರತದ ಯಾವುದಾದರೂ ಎರಡು ವಿಶ್ವವಿದ್ಯಾಲಯಗಳನ್ನು ಹೆಸರಿಸಿ .

ನಳಂದಾ ಮತ್ತು ವಿಕ್ರಮಶೀಲಾ ವಿಶ್ವವಿದ್ಯಾನಿಲಯಗಳು .

9. ಪ್ರಾಚೀನ ಭಾರತದ ಯಾವುದಾದರೂ ಎರಡು ಪ್ರಮುಖ ರಾಜಮನೆತನಗಳನ್ನು ಹೆಸರಿಸಿ

ಮೌರ್ಯರು ಮತ್ತು ಗುಪ್ತರು ,

10. ಮಧ್ಯಕಾಲೀನ ಭಾರತದ ಯಾವುದಾದರೂ ಎರಡು ಪ್ರಮುಖ ರಾಜಮನೆತನಗಳನ್ನು ಹೆಸರಿಸಿ .

ವರ್ಧನರು ಮತ್ತು ರಾಷ್ಟ್ರಕೂಟರು .

11. ಆಧಾರವಿಲ್ಲದೆ ಇತಿಹಾಸವಿಲ್ಲ , ಏಕೆ ?

ಇತಿಹಾಸವು ಗತಿಸಿಹೋದ ಘಟನೆಗಳ ವೈಜ್ಞಾನಿಕ ವಿಶ್ಲೇಶಣೆಯಾದ್ದರಿಂದ ಆಧಾರಗಳು ಅತ್ಯಗತ್ಯ , ಆದ್ದರಿಂದ ಆಧಾರವಿಲ್ಲದೆ ಇತಿಹಾಸವಿಲ್ಲ .

12. ಇತಿಹಾಸ ಮತ್ತು ಇತಿಹಾಸ ಪೂರ್ವಕಾಲಗಳ ನಡುವಿನ ವ್ಯತ್ಯಾಸವೇನು ?

ಲಿಖಿತ ಮೂಲಾಧಾರಗಳು ಲಭ್ಯವಿಲ್ಲದ ಕಾಲವೇ ಇತಿಹಾಸದ ಪೂರ್ವಕಾಲ .

ಲಿಖಿತ ಮೂಲಾಧಾರಗಳೂ ಲಭ್ಯವಿರುವ ಕಾಲವೇ ಇತಿಹಾಸ ಕಾಲ

13. ಇತಿಹಾಸ ರಚನೆಯಲ್ಲಿ ನಾಣ್ಯಗಳಿಂದಾಗುವ ಯಾವು ದಾದರೂ ಎರಡು ಉಪಯೋಗಗಳನ್ನು ತಿಳಿಸಿ .

* ನಾಣ್ಯಗಳು , ಕಾಲ , ರಾಜವಂಶ , ಆರ್ಥಿಕ ಸ್ಥಿತಿಗಳ ಬಗ್ಗೆ ತಿಳಿಸುತ್ತವೆ .

* ಕಲಾಕೌಶಲ್ಯ , ವ್ಯಾಪಾರ ಸಂಬಂಧದ ಬಗ್ಗೆ ಬೆಳಕು ಚೆಲ್ಲುತ್ತವೆ .

14. ಕವಿರಾಜಮಾರ್ಗದ ಪ್ರಕಾರ ಕರ್ನಾಟಕದ ಮೇರೆ ಎಲ್ಲಿಂದ ಎಲ್ಲಿಯವರೆಗೆ ಹಬ್ಬಿತ್ತು ?

ದಕ್ಷಿಣಕ್ಕೆ ಕಾವೇರಿ ನದಿಯಿಂದ ಉತ್ತರಕ್ಕೆ ಗೋದಾವರಿ ನದಿಯವರೆವಿಗೂ ಹಬ್ಬಿತ್ತು .

15. ಕರ್ನಾಟಕವನ್ನು ಆಳಿದ ಯಾವುದಾದರೂ ಎರಡು ಪ್ರಮುಖ ರಾಜಮನೆತನಗಳನ್ನು ಹೆಸರಿಸಿ .

ಬಾದಾಮಿ ಚಾಲುಕ್ಯರು ಮತ್ತು ಹೊಯ್ಸಳರು .

16. ಕರ್ನಾಟಕದ ಯಾವುದಾದರೂ ಎರಡು ಭೌಗೋಳಿಕ ಲಕ್ಷಣಗಳನ್ನು ಬರೆಯಿರಿ .

ಕಡಲತೀರಗಳು ಮತ್ತು ಪಶ್ಚಿಮ ಘಟ್ಟಗಳು ( ಸಹ್ಯಾದಿ ) ಮಲೆನಾಡು ಹಾಗೂ ಉತ್ತರ ದಕ್ಷಿಣದ ಬಯಲುಗಳು

17. ಇತಿಹಾಸ ರಚನೆಯಲ್ಲಿ ಶಿಲಾಶಾಸನಗಳು ಅತ್ಯಂತ ನಂಬಲಾರ್ಹ ಆಧಾರಗಳಾಗಿವೆ . ಏಕೆ ?

* ಅವು ಸಾಮಾನ್ಯವಾಗಿ ಸಮಕಾಲೀನವಾಗಿರುತ್ತವೆ .

* ಮೌಲ್ಯಯುತ , ಪ್ರಮಾಣಬದ್ದ , ನೇರ ಆಧಾರಗಳಾಗಿವೆ .

18. ಪಾಕ್ತನ ಅಥವಾ ಪುರಾತತ್ವ ಆಧಾರಗಳು ಎಂದರೇನು ?

ಪ್ರಾಚೀನ ಮಾನವರ ಜೀವನ ಮತ್ತು ಚಟುವಟಿಕೆಗಳ ಅವಶೇಷಗಳೇ ಪ್ರಾಕ್ತನ ಅಥವಾ ಪುರಾತತ್ವ ಆಧಾರಗಳು .

19. ಸಾಹಿತ್ಯಾಧಾರದ ಎರಡು ಪ್ರಮುಖ ಪ್ರಕಾರಗಳನ್ನು ತಿಳಿಸಿ .

* ದೇಶೀಯ ಸಾಹಿತ್ಯ

* ವಿದೇಶಿಯರ ಬರವಣಿಗೆಗಳು

20. ಭಾರತದ ಮಹಾಕಾವ್ಯಗಳನ್ನು ಹೆಸರಿಸಿ .

ರಾಮಾಯಣ ಮತ್ತು ಮಹಾಭಾರತ ,

21. ಆರ್ಯಭಟನ ಕೃತಿಗಳನ್ನು ಹೆಸರಿಸಿ .

ಸೂರ್ಯಸಿದ್ಧಾಂತ ಮತ್ತು ರೋಮಕ ಸಿದ್ಧಾಂತ .

22. ಭಾರತಕ್ಕೆ ಭೇಟಿ ನೀಡಿದ ಯಾರಾದರೂ ಇಬ್ಬರು ಚೀನಾ ಯಾತ್ರಿಕರನ್ನು ಹೆಸರಿಸಿ .

ಹೂಯಾನ್‌ತ್ಸಾಂಗ್ ಮತ್ತು ಫಾಹಿಯಾನ್ .

23. ವಿಜಯನಗರಕ್ಕೆ ಭೇಟಿ ನೀಡಿದ ಯಾರಾದರೂ ಇಬ್ಬರು ವಿದೇಶಿಯರನ್ನು ಹೆಸರಿಸಿ .

ಇಟಲಿಯ ನಿಕಲೋಕಾಂಟಿ ಮತ್ತು ಪರ್ಷಿಯಾದ ಅಬ್ದುಲ್ ರಜಾಕ್ .

Bharatada Itihasada Mele Bhoogolada Prabhava Notes

III . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15-20 ವಾಕ್ಯಗಳಲ್ಲಿ ಉತ್ತರಿಸಿ :

1. ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವವನ್ನು ಸಂಕ್ಷಿಪ್ತವಾಗಿ ವಿವರಿಸಿ .

ಭಾರತದ ಭೌಗೋಳಿಕ ಲಕ್ಷಣಗಳಾದ ಹಿಮಾಲಯ ಪರ್ವತಗಳು , ಉತ್ತರದ ಬಯಲುಗಳು , ಮರುಭೂಮಿ , ಪರ್ವತಗಳು , ನದಿಗಳು , ದಕ್ಷಿಣದ ಪ್ರಸ್ತಭೂಮಿ ಮತ್ತು ಕರಾವಳಿ ತೀರಗಳು ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದ ಮೇಲೆ ತನ್ನದೇ ಪ್ರಭಾವವನ್ನು ಬೀರಿದೆ .

  • ಹಿಮಾಲಯ ಪರ್ವತವು ಭಾರತವನ್ನು ಏಷ್ಯಾದ ಇನ್ನುಳಿದ ಭಾಗಗಳಿಂದ ಪ್ರತ್ಯೇಕಿಸಿದ್ದು ಇದು ಭಾರತಕ್ಕೆ ನೈಸರ್ಗಿಕ ತಡೆಗೋಡೆಯಂತಿದೆ . ಸದಾಕಾಲ ಹರಿಯುವ ನದಿಗಳಿಗೆ ಜನ್ಮ ನೀಡಿದೆ .
  • ಈ ನದಿಗಳು ಉತ್ತರದ ಫಲವತ್ತಾದ ಬಯಲುಗಳನ್ನು ನಿರ್ಮಿಸಿದ್ದು ಇವು ನಾಗರೀಕತೆ ಮತ್ತು ಸಾಮ್ರಾಜ್ಯಗಳ ತೊಟ್ಟಿಲುಗಳಾಗಿವೆ .
  • ಉತ್ತರದ ಕಣಿವೆಗಳಾದ ಖೈಬರ್ ಮತ್ತು ಬೋಲಾನ್ ಮುಂತಾದವು ವಿದೇಶಿಯರೊಂದಿಗೆ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಬೆಳೆಸಲು ಮತ್ತು ವಿದೇಶಿ ದಾಳಿಗೆ ಕಾರಣವಾಗಿದೆ .
  • ಪಶ್ಚಿಮದ ಮರುಭೂಮಿ ಮತ್ತು ದಕ್ಷಿಣದ ಪ್ರಸ್ತಭೂಮಿಯ ದಟ್ಟ ಕಾಡುಗಳು ಜನರನ್ನು ಕಠಿಣ ಪರಿಶ್ರಮಿ ಮತ್ತು ಯುದ್ಧಪ್ರಿಯರನ್ನಾಗಿಸಿವೆ .
  • ದಕ್ಷಿಣದ ಸಮುದ್ರಗಳು ಒಂದು ಕಾಲದಲ್ಲಿ ತಡೆಬೇಲಿಗಳಾಗಿದ್ದವು .
  • ನಂತರದಲ್ಲಿ ಜಗತ್ತಿನ ಇತರ ಭಾಗಗಳಿಗೆ ಸಂಪರ್ಕ ಬೆಳೆಸಲು ಸಾಧನಗಳಾದವು .
  • ಉತ್ತರ ಮತ್ತು ದಕ್ಷಿಣದ ನದಿ ಬಯಲುಗಳು ಅತಿ ಪುರಾತನ ಕಾಲದಿಂದ ಈ ದೇಶವನ್ನು ಕೃಷಿಪ್ರಧಾನ ದೇಶವನ್ನಾಗಿಸಿವೆ .
  • ಇಲ್ಲಿನ ಅನೇಕ ವಿಧದ ಖನಿಜಗಳು , ಬಂಡೆಗಳು , ಮರಳುಕಲ್ಲು , ಗ್ರಾನೈಟ್ ಮತ್ತು ಅಮೃತ ಶಿಲೆಯಂತಹ
  • ಶಿಲೆಗಳ ಲಭ್ಯತೆಯು ಅರಮನೆಗಳು , ದುರ್ಗಗಳು , ಕೋಟೆ , ಆಯುಧಗಳು , ಮತ್ತು ವಾಸ್ತುಶಿಲ್ಪದ ಸಿರಿವಂತಿಕೆಗೆ ಸಾಕ್ಷಿಯಾಗಿವೆ .

2. ಭಾರತ ಇತಿಹಾಸದ ವಿಶಿಷ್ಠ ಲಕ್ಷಣಗಳನ್ನು ವಿವರಿಸಿ .

  • ಭಾರತವು ವಿಸ್ತೀರ್ಣದಲ್ಲಿ ಜಗತ್ತಿನ ಏಳನೇ ದೊಡ್ಡ ರಾಷ್ಟ್ರವಾಗಿದ್ದು ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ .
  • ಇದು ಚೀನಾದ ಹಾಗೆ ಸುಮಾರು ನಾಲ್ಕು ಸಾವಿರ ವರ್ಷಗಳ ನಿರಂತರ ಇತಿಹಾಸವನ್ನು ಹೊಂದಿದೆ .
  • ಸಿಂಧೂ ನಾಗರೀಕತೆಯಿಂದ ವೈದಿಕ ನಾಗರೀಕತೆ , ಹೊಸ ಮತಗಳ ಉದಯಕ್ಕೆ , ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಅಭಿವೃದ್ಧಿಗೆ ಸರಬದ್ಧ ವಿಕಾಸವನ್ನು ರೂಪಿಸಿದೆ .
  • ಗ್ರೀಕರು , ಪರ್ಶಿಯನ್ನರು , ಹೂಣರು , ಶಕರು , ಅರಬ್ಬರು , ಟರ್ಕರು , ಕುಶಾನರು , ಆಫ್ಘನ್ನರು ಹೀಗೆ ವಿದೇಶೀಯರ ದಾಳಿಗೆ ಒಳಗಾದರೂ ಭಾರತೀಯ ಸಂಸ್ಕೃತಿಗೆ ಕಲೆ , ಮತ್ತು ವಾಸ್ತುಶಿಲ್ಪಕ್ಕೆ ಅಗಾಧ ಕೊಡುಗೆಗಳನ್ನು ನೀಡಿದ್ದಾರೆ .
  • ಹಿಂದೂ , ಜೈನ , ಬೌದ್ಧ , ಸಿಖ್ , ಮುಸ್ಲಿಂ , ಕ್ರೈಸ್ತ , ಪಾರಸೀ ಹಾಗು ವಿವಿಧ ಬುಡಕಟ್ಟು ಧರ್ಮ ಮತ್ತು ಆಚರಣೆಗಳ ತವರಾಗಿದೆ .
  • ಭಾರತವು ಜಗತ್ತಿಗೆ ಸಾಹಿತ್ಯ , ತತ್ವಶಾಸ್ತ್ರ , ಸಂಗೀತ , ನೃತ್ಯ , ಕಲೆ , ವಾಸ್ತುಶಿಲ್ಪ , ಮೂರ್ತಿಕಲೆ , ವಿಜ್ಞಾನ , ಯೋಗ , ವೈದ್ಯಕೀಯ , ಗಣಿತ , ಖಗೋಳಶಾಸ್ತ್ರ ಶಿಕ್ಷಣ ಮುಂತಾದ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ .
  • ವಿಶೇಷವಾದ ಭೌಗೋಳಿಕ ರಚನೆಯನ್ನು ಹೊಂದಿದ್ದು ವಿದೇಶಿಯರ ಆಕರ್ಷಣೆಯ ಕೇಂದ್ರವಾಗಿದೆ .
  • ವಿವಿಧತೆಯಲ್ಲಿ ಏಕತೆಯನ್ನು ರೂಪಿಸಿದೆ .

3. ವೈವಿಧ್ಯತೆಯಲ್ಲಿ ಏಕತೆ – ಭಾರತದ ಪ್ರಮುಖ ಲಕ್ಷಣ . ವಿವರಿಸಿ .

ಭಾರತವು ಭೌಗೋಳಿಕ ವೈವಿಧ್ಯತೆಯೊಂದಿಗೆ ಮಾನವ ಚಟುವಟಿಕೆಯ ಪ್ರತಿಯೊಂದು ರಂಗದಲ್ಲಿಯೂ ವೈವಿದ್ಯತೆಯನ್ನು ಹೊಂದಿದೆ .

  • ಭೌಗೋಳಿಕ ವೈವಿಧ್ಯತೆ- ಮರುಭೂಮಿಗಳು , ಹಿಮಾಲಯ ಪರ್ವತಗಳು , ಪ್ರಸ್ತಭೂಮಿಗಳು , ಕಡಲತೀರಗಳು ವೈವಿಧ್ಯಮಯವಾದ ಜೀವಸಂಕುಲಕ್ಕೆ ಆಶೆಯವಾಗಿದ್ದು ಏಕತೆಯನ್ನು ಹೊಂದಿದೆ .
  • ದ್ರಾವಿಡ , ನೀಗ್ರೋ , ಮಂಗೋಲಿಯನ್ , ಅಲ್ಪಾಯಿನ್ ಮುಂತಾದ ಜನಾಂಗಗಳು , ವಿವಿಧ ಜಾತಿ ಜನಾಂಗದವರು ವಿವಿಧ ಭಾಷಿಗರು ವಾಸವಾಗಿದ್ದು ಸಾಮರಸ್ಯದೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ .
  • ಸಂಪನ್ಮೂಲಗಳು ಅಸಮಾನವಾಗಿ ಹಂಚಿಕೆಯಾಗಿದ್ದು , ಬಡವರು ಮತ್ತು ಶ್ರೀಮಂತರು ಎಂಬ ಎರಡು ವರ್ಗಗಳಿದ್ದರೂ , ಕೆಲವು ಪ್ರದೇಶಗಳು ಅಭಿವೃದ್ಧಿಶೀಲ , ಕೆಲವು ಪ್ರದೇಶಗಳು ಅನಭಿವೃದ್ಧಿ ಹೊಂದಿವೆ .
  • ಹಲವಾರು ರಾಜ್ಯಗಳು ವಿಭಿನ್ನತೆಯನ್ನು ಹೊಂದಿದ್ದರೂ ಏಕೀಕರಿಸಿ ನಮ್ಮದೇ ಸಂವಿಧಾನವನ್ನು ರೂಪಿಸಿ ಏಕತೆ ಸ್ಥಾಪಿಸಲಾಗಿದೆ .
  • ಏಕರೂಪ ಶಿಕ್ಷಣ ಮತ್ತು ಸಾಹಿತ್ಯ ಮುಂತಾದ ಮಾರ್ಪಾಡುಗಳೊಂದಿಗೆ ವಿವಿಧತೆಯಲ್ಲಿ ಏಕತೆಯನ್ನು ಸ್ಥಾಪಿಸಲಾಗಿದೆ .

4 . ಭಾರತ ಇತಿಹಾಸ ರಚನೆಗೆ ವಿದೇಶಿ ಬರಹಗಾರರ ಕೊಡುಗೆಗಳನ್ನು ಕುರಿತು ಟಿಪ್ಪಣಿ ಬರೆಯಿರಿ .

ಭಾರತವು ತನ್ನ ವಿಶೇಷವಾದ ಆಕರ್ಷಣೆಯಿಂದಾಗಿ ವಿದೇಶೀಯರನ್ನು ತನ್ನತ್ತ ಸೆಳೆಯಿತು . ಅವರಲ್ಲಿ ಅನೇಕರು ತಮ್ಮ ಅನುಭವ ಅಭಿಪ್ರಾಯಗಳನ್ನು ಬರೆದಿಟ್ಟಿದ್ದಾರೆ . ಅವುಗಳೇ ವಿದೇಶಿ ಬರವಣಿಗೆಗಳು . ಇವುಗಳು ಭಾರತದ ಇತಿಹಾಸ ತಿಳಿಯಲು ಸಹಕಾರಿಯಾಗಿವೆ .

  • ಗ್ರೀಕ್ ರಾಯಭಾರಿ ಮೆಗಾಸ್ತನೀಸನ ‘ ಇಂಡಿಕಾ ‘ ಗ್ರಂಥದಿಂದ ಮೌರ್ಯರ ಕಾಲವನ್ನು ತಿಳಿದು ಕೊಳ್ಳಬಹುದು.
  • ಟಾಲಮಿಯ ‘ ಜಿಯಾಗ್ರಫಿ ‘ ಗ್ರಂಥದಿಂದ ಪ್ರಾಚೀನ ಭಾರತದ ವಾಣಿಜ್ಯ ಸಂಬಂಧದ ಬಗ್ಗೆ ತಿಳಿದು ಕೊಳ್ಳಬಹುದು .
  • ಪ್ಲಿನಿಯ ನ್ಯಾಚುರಲ್ ಹಿಸ್ಟೋರಿಯಾದಿಂದ ಭಾರತ ರೋಮ್ ಸಂಬಂಧ ಮತ್ತು ಅಂದಿನ ಭಾರತದ ರಾಜಕೀಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು .
  • ಚೀನಿ ಯಾತ್ರಿಕರಾದ ಫಾಹಿಯಾನ್ ಮತ್ತು ನ್ಯೂಯಾನ್ ತ್ಸಾಂಗ್‌ರ ಗ್ರಂಥಗಳಿಂದ ಮೌರ್ಯರ , ವರ್ಧನರ , ಬಾದಾಮಿ ಚಾಲುಕ್ಯರ ಇತಿಹಾಸವನ್ನು ತಿಳಿದುಕೊಳ್ಳಬಹುದು .
  • ಇಟಲಿಯ ನಿಕಲೋಕಾಂಟಿ , ಫರ್ಷಿಯಾದ ಅಬ್ದುಲ್ ರಜಾಕ್ , ಪೋರ್ಚುಗಲ್‌ನ ಬಾಸಾ , ಡೋಮಿಂ ಗೋಪೇಸ್ , ರಷ್ಯಾದ ನಿಕಟಿನ್ ಮುಂತಾದವರ ಬರಹಗಳಿಂದ ವಿಜಯನಗರ ಮತ್ತು ಬಹುಮನಿಗಳ ಇತಿಹಾಸದ ಬಗ್ಗೆ ತಿಳಿದುಕೊಳ್ಳಬಹುದು .

5. ಭಾರತದ ಇತಿಹಾಸ ರಚನೆಗೆ ಪ್ರಾಕ್ತನ ಆಧಾರಗಳ ಮಹತ್ವವನ್ನು ಕುರಿತು ಬರೆಯಿರಿ .

  • ಪ್ರಾಕ್ತನ ಅಥವಾ ಪುರಾತತ್ವ ಮೂಲಾಧಾರಗಳೂ ಪ್ರಾಚೀನ ಮಾನವರ ಜೀವನ ಮತ್ತು ಚಟುವಟಿಕೆಗಳ ಅವಶೇಷಗಳಾಗಿದ್ದು ಇವು ಇತಿಹಾಸದ ಪುನರ್ ರಚನೆಗೆ ಅಮೂಲ್ಯ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುತ್ತವೆ .
  • ಉತ್ಪನನಗಳು – ಮೂಲಾಧಾರಗಳನ್ನು ಹೆಕ್ಕಿ ತೆಗೆಯಲು ಕೈಗೊಳ್ಳುವ ವೈಜ್ಞಾನಿಕ ಭೂ ಅಗತ್ಯವೇ ಉತ್ಪನನ . ಭಾರತದ ಇತಿಹಾಸ ಪೂರ್ವಕಾಲವನ್ನು ಉತ್ಪನ ನಗಳ ಆಧಾರದಿಂದಲೇ ಬರೆಯಲಾಗಿದೆ . ಸಿಂಧೂ ನಾಗರೀಕತೆಯ ಅಧ್ಯಯನಕ್ಕೆ ಉತ್ಪನನಗಳೇ ಆಧಾರ , ಕಾಂಬೋಡಿಯಾ , ಜಾವಾ , ತಕ್ಷಶಿಲಾ , ಗಯಾ , ಪಾಟಲೀಪುತ್ರ ಹಂಪಿ ಮುಂತಾದ ಕಡೆ ನಡೆಸಿದ ಉತ್ಪನನಗಳಿಂದಾಗಿ ಭಾರತದ ಇತಿಹಾಸವನ್ನು ಅರಿಯಲು ಸಹಾಯಕವಾಗಿವೆ .
  • ಸ್ಮಾರಕಗಳು : ಇವು ಐತಿಹಾಸಿಕ ಮಹತ್ವದ ನಿವೇಶನಗಳು ಮತ್ತು ರಚನೆಗಳಾಗಿವೆ . ಕೋಟೆಗಳು , ಅರಮನೆಗಳು , ಗುಹೆಗಳು , ಗುಡಿಗಳು , ಬಸದಿಗಳು , ಮೂರ್ತಿಗಳು , ಸ್ತೂಪಗಳು ಮುಂತಾದವುಗಳಾಗಿವೆ .
  • ನಾಣ್ಯಗಳು : ನಾಣ್ಯಗಳು ಕಾಲ , ರಾಜವಂಶ , ಆರ್ಥಿಕಸ್ಥಿತಿ , ಧರ್ಮ ಲಿಪಿ ಮತ್ತು ಭಾಷೆಗಳನ್ನು ತಿಳಿಯಲು ಸಹಾಯ ಮಾಡುತ್ತವೆ .
  • ವರ್ಣಚಿತ್ರಗಳು : ವಿವಿಧ ಕಾಲಗಳ ವರ್ಣಚಿತ್ರಗಳು ನಮಗೆ ಅಂದಿನ ಕಾಲದ ಸಾಮಾಜಿಕ , ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಷಯಗಳನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತದೆ .
  • ಶಾಸನಗಳು : ಶಾಸನಗಳು ಇತಿಹಾಸ ರಚನೆಯಲ್ಲಿ ನಂಬಲಾರ್ಹ ಆಧಾರಗಳು , ಶಾಸನಗಳನ್ನು , ಶಿಲೆಗಳು , ಬಂಡೆಗಳು , ಗೋಡೆಗಳು , ಮಣ್ಣಿನ ಮುದ್ರಿಕೆಗಳು , ಕಬ್ಬಿಣದ ಕಂಬಗಳು , ತಾಮ್ರಪಟಗಳ ಮೇಲೆ ಕೆತ್ತಲಾಗಿದ್ದು ಭಾರತದಲ್ಲಿ ಈವರೆವಿಗೆ ಸುಮಾರು 75,000 ಶಾಸನಗಳು ದೊರೆತಿದ್ದು ಇವು ಇತಿಹಾಸದ ಅಧ್ಯಯನಕ್ಕೆ ಬೆಳಕು ಚೆಲ್ಲಿವೆ .

IV . ಹೊಂದಿಸಿ ಬರೆಯಿರಿ :

ಅ ಪಟ್ಟಿ ಬ ಪಟ್ಟಿ ಉತ್ತರಗಳು

1. ಆರ್ಯಭಟ ಎ . ಅಷ್ಟಾಂಗ ಯೋಗ ಸೂರ್ಯಸಿದ್ಧಾಂತ

2 .ಪತಾಂಜಲಿ ಬಿ . ಸೂರ್ಯಸಿದ್ಧಾಂತ ಅಷ್ಟಾಂಗ ಯೋಗ

3. ಕಲ್ಹಣ ಸಿ . ರಾಜತರಂಗಿಣಿ ರಾಜತರಂಗಿಣಿ

4. ಭಾಣಭಟ್ಟ ಡಿ . ಅರ್ಥಶಾಸ್ತ್ರ ಹರ್ಷಚರಿತ

5. ಕೌಟಿಲ್ಯ ಇ . ಹರ್ಷಚರಿತ ಅರ್ಥಶಾಸ್ತ್ರ

ಹೆಚ್ಚುವರಿ ಪ್ರಶ್ನೋತ್ತರಗಳು

1. ಕರ್ನಾಟಕ ಎಂಬ ಶಬ್ದವು ಮೊಟ್ಟಮೊದಲು ಎಲ್ಲಿ ಉಲ್ಲೇಖಿಸಲ್ಪಟ್ಟಿದೆ ?

ಮಹಾಭಾರತದ ಭೀಷ್ಮಪರ್ವ ಮತ್ತು ಸಭಾಪರ್ವದಲ್ಲಿ ,

2. ಕರುನಾಡು ಎಂದರೇನು ?

ಎತ್ತರದ ನಾಡು ಅಥವಾ ಭೂಮಿ ಎಂದರ್ಥ .

3. ಬೌದ್ಧ ಹಾಗೂ ಜೈನ ಪರಂಪರೆಗಳ ಪ್ರಕಾರ ಭಾರತವನ್ನು ಏನೆಂದು ಹೆಸರಿಸಲಾಗಿದೆ ?

ಜಂಬೂದ್ವೀಪ

4. ಭಾರತವನ್ನು ಹಿಂದೂಸ್ತಾನ ಎಂದು ಕರೆದವರು ಯಾರು ?

ಪರ್ಷಿಯನ್ನರು

5. ಭಾರತವು ಭೂವಿಸ್ತೀರ್ಣದಲ್ಲಿ ಎಷ್ಟನೇ ದೊಡ್ಡ ರಾಷ್ಟ್ರವಾಗಿದೆ ?

ಏಳನೇ ರಾಷ್ಟ್ರವಾಗಿದೆ

6. ಉತ್ಪನನದ ಕಾಲದಲ್ಲಿ ದೊರೆತ ಪಳಿಯುಳಿಕೆಗಳ ಕಾಲಘಟ್ಟವನ್ನು ಹೇಗೆ ನಿರ್ಧರಿಸಲಾಗುತ್ತದೆ ?

ಕಾರ್ಬನ್ 14 ಮತ್ತು ಪೊಟ್ಯಾಷಿಯಂ ವಿಧಾನಗಳಿಂದ ವೈಜ್ಞಾನಿಕ ಪರೀಕ್ಷೆಗೊಳಪಡಿಸಿ ಅವುಗಳ ಕಾಲಘಟ್ಟಗಳನ್ನು ನಿರ್ಧರಿಸಲಾಗುತ್ತದೆ .

FAQ

1. ‘ ಇಂಡಿಯಾ ‘ ಎಂಬ ಪದವು ಯಾವ ಭಾಷೆಯಿಂದ ಬಂದಿದೆ ?

ಪರ್ಷಿಯನ್ ಭಾಷೆಯಿಂದ ಬಂದಿದೆ .

2. ಪ್ಲಿನಿಯ ಪ್ರಸಿದ್ಧ ಗ್ರಂಥ ಯಾವುದು ?

ನ್ಯಾಚುರಲ್ ಹಿಸ್ಟೋರಿಯಾ .

3. ‘ ಬುದ್ಧಚರಿತ’ವನ್ನು ಬರೆದವರು ಯಾರು ?

́ಬುದ್ಧಚರಿತ’ವನ್ನು ಬರೆದವರು ಅಶ್ವಘೋಷ

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

1 thoughts on “ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ ನೋಟ್ಸ್ | 2nd Puc History Chapter 1 Notes in Kannada

Leave a Reply

Your email address will not be published. Required fields are marked *

rtgh