rtgh

ದ್ವಿತೀಯ ಪಿ.ಯು.ಸಿ ಧಣಿಗಳ ಬೆಳ್ಳಿಲೋಟ ಕನ್ನಡ ನೋಟ್ಸ್‌ | 2 PUC Dhanigala Bellilota Kannada Notes.

ಧಣಿಗಳ ಬೆಳ್ಳಿಲೋಟ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd PUC Dhanigala Bellilota Kannada Notes 5 Lesson Question Answer Guide pdf Download 2023

ತರಗತಿ : ದ್ವಿತೀಯ ಪಿ.ಯು.ಸಿ

ಪದ್ಯದ ಹೆಸರು : ಧಣಿಗಳ ಬೆಳ್ಳಿಲೋಟ

ಕೃತಿಕಾರರ ಹೆಸರು : ಎಚ್.‌ ನಾಗವೇಣಿ

Dhanigala Bellilota Lesson Notes

ಕೃತಿಕಾರರ ಪರಿಚಯ :

ಡಾ | ಎಚ್ . ನಾಗವೇಣಿ ( ಜನನ : ೨೯.೧೧.೧೯೬೨ ) : ಆಧುನಿಕ ಕನ್ನಡ ಸಾಹಿತ್ಯದ ಮಹತ್ವದ ಲೇಖಕಿಯರಲ್ಲಿ ಎಚ್‌ . ನಾಗವೇಣಿ ಒಬ್ಬರು . ನಾಗವೇಣಿಯವರು ಮಂಗಳೂರಿನ ಹೊನ್ನಕಟ್ಟೆ ಎಂಬಲ್ಲಿ ಜನಿಸಿದರು . ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೊಲ್ಕತ್ತಾದ ರಾಷ್ಟ್ರೀಯ ಗ್ರಂಥಾಲಯದ ಕೇಂದ್ರೀಯ ಪರಾವರ್ತನೆಯಲ್ಲಿ ಸೇವೆ ಸಲ್ಲಿಸಿ ಈಗ ಹಂಪಿ ಕನ್ನಡ ವಿ.ವಿ.ಯಲ್ಲಿ ಮುಖ್ಯ ಗ್ರಂಥಪಾಲಕಿ ಆಗಿದ್ದಾರೆ . ಹೊಸ ಕಥನ ಶೈಲಿಯನ್ನು ರೂಢಿಸಿಕೊಂಡಿರುವ ನಾಗವೇಣಿಯವರು ಕರಾವಳಿಯ ಪರಿಸರವನ್ನು ತಮ್ಮ ಕಥನಗಳಲ್ಲಿ ಆಪ್ತವಾಗಿ ಚಿತ್ರಿಸಿದ್ದಾರೆ .

ಗಾಂಧಿ ಬಂದ ಕಾದಂಬರಿ , ನಾಕನೇ ನೀರು , ಮೀಯುವ ಆಟ ಇವರ ಕಥಾಸಂಕಲನಗಳು , ವಸುಂಧರೆಯ ಗ್ಯಾನ ಪ್ರಬಂಧಗಳ ಸಂಕಲನ , ಸೂರ್ಯನಿಗೊಂದು ವೀಳ್ಯ ಅಂಕಣ ಬರಹಗಳ ಸಂಗ್ರಹ , ನವೋದಯದ ಕತೆಗಾರ್ತಿ ಗೌರಮ್ಮ , ರಂಗಸಂಪನ್ನ ಕಂಬಾರ , ಸಾರ – ವಿಸ್ತಾರ , ತಿರುಳು ತೋರಣ ಇವುಗಳು ಇವರ ಇನ್ನಿತರ ಪ್ರಮುಖ ಕೃತಿಗಳು . ಇವರ ‘ ಗಾಂಧಿ ಬಂದ ‘ ಕಾದಂಬರಿಯು ರಂಗಕೃತಿಯಾಗಿ ರೂಪಾಂತರಗೊಂಡು ಜನಪ್ರೀತಿ ಗಳಿಸಿದೆ . ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಚದುರಂಗ ಪ್ರಶಸ್ತಿ , ಎಸ್.ಎಸ್ . ಭೂಸನೂರಮಠ ಪ್ರಶಸ್ತಿ , ಗೀತಾ ದೇಸಾಯಿ ಪ್ರಶಸ್ತಿ ಇನ್ನೂ ಮುಂತಾದ ಪುರಸ್ಕಾರಗಳು ಇವರಿಗೆ ಸಂದಿವೆ .

ʼಧಣಿಗಳ ಬೆಳ್ಳಿಲೋಟ ‘ ಕತೆಯಲ್ಲಿ ‘ ಹೊಳೆ ‘ ಒಂದು ಪಾತ್ರವಾಗಿ ಬಂದಿದೆ . ಉಳ್ಳವರು ತಮ್ಮ ಸ್ವಾರ್ಥ , ಆಮಿಷಕ್ಕೆ ಬಡವರನ್ನು ಧಾರುಣವಾಗಿ ದುಡಿಸಿಕೊಳ್ಳುವ ರೀತಿ ಅಮಾನುಷವಾದುದು . ಶೋಷಿತರು ತಮ್ಮ ನ್ಯಾಯಕ್ಕೆ , ಜೀವನ ಮೌಲ್ಯಕ್ಕೆ ಭಂಗ ಬಂದಾಗ ಹೇಗೆ ಆಕ್ರೋಶಗೊಳ್ಳುತ್ತಾರೆ ಎಂಬುದು ಈ ಕತೆಯಲ್ಲಿ ಮಾರ್ಮಿಕವಾಗಿ ಚಿತ್ರಣಗೊಂಡಿದೆ .

ಪಾಠದ ಆಶಯ :

ಸಮಾಜದಲ್ಲಿ ಮೊದಲಿನಿಂದಲೂ ಬಡವರ , ಕೂಲಿಕಾರರ , ನಿರ್ಗತಿಕರ ಬಗ್ಗೆ ತಾರತಮ್ಯ ಧೋರಣೆ ಎದ್ದು ಕಾಣುತ್ತದೆ . ಉಳ್ಳವರು ದುರ್ಬಲರ ಶ್ರಮವನ್ನಾಗಲಿ , ಪ್ರತಿಭೆಯನ್ನಾಗಲಿ ಗೌರವಿಸದೆ ಅವರ ಪರಿಶ್ರಮದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ . ಶೋಷಿತರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹೇಗೆ ಪ್ರತಿರೋಧ ವ್ಯಕ್ತವಾಗುತ್ತದೆ ಎನ್ನುವುದು ಈ ಕತೆಯಲ್ಲಿ ಅನಾವರಣಗೊಂಡಿದೆ . ಮನುಷ್ಯನ ಭಾವನೆಗಳು ಹೊಳೆಗೂ ಇರುವಂತೆ ಹೊಳೆಯ ಪಾತ್ರವನ್ನು ಸಕ್ರಿಯವಾಗಿ ತಂದಿದ್ದಾರೆ . ಕರಾವಳಿ ತೀರದ ಬಡವರ ಬದುಕು , ಅವರ ಅಸಹಾಯಕತೆ ಹಾಗೂ ಆಡುಭಾಷೆಯ ಸೊಗಸು ಮನೋಜ್ಞವಾಗಿ ಕತೆಯ ಉದ್ದಕ್ಕೂ ಗಮನ ಸೆಳೆಯುವಂತಿದೆ . ಸಣ್ಣ ಕತೆಯ ಮುಖ್ಯ ಲಕ್ಷಣವಾದ ಆಕರ್ಷಕ ಶೈಲಿ , ಯಾರು ಊಹಿಸದ ಅಂತ್ಯ ಈ ಕತೆಗೆ ಮೆರಗನ್ನು ತಂದಿದೆ . ಕರಾವಳಿಯ ಬದುಕಿನ ವಿವರಗಳೊಂದಿಗೆ ಈ ಕತೆ ಹೃದಯಂಗಮವಾಗಿ ನಿರೂಪಿತವಾಗಿದೆ .

ಶಬ್ದಾರ್ಥ :

ಬೈಗಳ ಕೆಟ್ಟಮಾತು , ನಿಂದನೆ ; ಇಂಗು – ಒಣಗು , ಬತ್ತು ; ಸೆರಗು – ಅಂಚು : ಗೆರಟ – ತೆಂಗಿನ ಚಿಪ್ಪು ; ಹಡಬೆ ಒಂದು ಬೈಗಳದ ಪದ ; ಗಾಳ – ಮೀನು ಹಿಡಿಯುವ ಕೊಕ್ಕು : ಆಟಿ – ಸೋಣ – ಆಷಾಡ ಶ್ರಾವಣ ( ಆಟ – ಆಷಾಡ , ಸೋಣ – ಶ್ರಾವಣ ) : ರೀಪ – ಪಕ್ಕಾಸು -ಮನೆಯ ಮೇಲ್ಮಾವಣಿಗೆ ಹಾಕುವ ಮರದ ಸಾಮಗ್ರಿಗಳು : ನಾಕು – ನಾಲ್ಕು ; ಹೇಂಟೆ – ಹೆಣ್ಣುಕೋಳಿ : ತೋಡು – ಕಾಲುವೆ , ಚಿಕ್ಕಹೊಳೆ : ಹೂಟ – ಪಿತೂರಿ , ಏರ್ಪಾಟು : ಬಿಕನಾಸಿ – ದರಿದ್ರ , ಭಿಕ್ಷುಕ , ಕುದ್ರ ; ಉಗ್ರಾಣಿ – ಗ್ರಾಮ ಸಹಾಯಕ ( ಶಾನುಭೋಗರ ಸಹಾಯಕ ) ; ಉಪಟಳ ಹಿಂಸೆ , ತೊಂದರೆ : ದರೆ – ದಿಣ್ಣೆ , ತಿಟ್ಟು : ಜಡಿಮಳೆ – ಎಡೆಬಿಡದೆ ಸುರಿವ ಮಳೆ : ದೇವಳ – ದೇವಾಲಯ : ತುಳುವ ಹಲಸು – ಹಲಸಿನ ಒಂದು ಜಾತಿ , ಅಂಬಲಿ ಹಲಸು , ಬಿಳುವ ; ಸೌಟು – ದೊಡ್ಡ ಚಮಚ , ಸೋರ – ಹುಡುಗ , ಬಾಲಕ : ಕೋಮಣ – ಲಂಗೋಟಿ , ಕೌಪೀನ : ಚೊಂಬು – ತಂಬಿಗೆ : ದಾರಂದ – ಬಾಗಿಲು ; ಪಡಿ – ಅಕ್ಕಿ , ಧಾನ್ಯರೂಪದಲ್ಲಿ ಕೊಡುವ ದಿನಗೂಲಿ ; ಕೊತ್ತಳಿಗೆ ತೆಂಗಿನ ಮರದ ದಿಂಡು , ಹೂಳು – ಹೊಳೆಯ ತಳಭಾಗದ ಕೆಸರು : ಬುಗುಡಿ – ಕಿವಿಯಲ್ಲಿ ಧರಿಸುವ ಆಭರಣ : ಪಾವು – ಅಳತೆಯ ಸಾಧನ ; ತಾಕತ್ತು – ಶಕ್ತಿ : ಮೂತಿ – ತುದಿ , ಮೋರೆ ; ಕುಣಿಕೆ – ಸರಿಗಂಟು ; ನೊರೆಕಾಯಿ – ಅಂಟುವಾಳ ಕಾಯಿ ; ಕಾರು – ಕಕ್ಕು , ಹೊರಹಾಕು : ದಿಗಿಣನೆಗೆತ , ಯಕ್ಷಗಾನದ ನೆಗೆತ : ಮೋರೆ – ಮುಖ ; ವಲ್ಲಿ – ಉತ್ತರೀಯ , ಬಳ್ಳಿ ; ನೊರೆಕಾಯಿ – ಇದನ್ನು ಪಾತ್ರೆ ಉಜ್ಜಲು , ಬಟ್ಟೆಯನ್ನು ಶುದ್ದೀಕರಿಸಲು , ಆಭರಣ ಶುಚಿಗೊಳಿಸಲು ಬಳಸುತ್ತಾರೆ . ಮಲೆನಾಡಿನಲ್ಲಿ ಅಂಟುವಾಳಕಾಯಿ ಎಂದು ಕರೆಯುತ್ತಾರೆ .

ದ್ವಿತೀಯ ಪಿ.ಯು.ಸಿ ಧಣಿಗಳ ಬೆಳ್ಳಿಲೋಟ ಕನ್ನಡ ನೋಟ್ಸ್‌ 2 PUC Dhanigala Bellilota Kannada Notes.

Dhanigala Bellilota Question Answer

I. ಒಂದು ವಾಕ್ಯದಲ್ಲಿ ಉತ್ತರಿಸಿ . ( ಒಂದು ಅಂಕದ ಪ್ರಶ್ನೆಗಳು ) :

1 ) ‘ ಗುಡ್ಡ ‘ ಹೊಳೆಯಲ್ಲಿ ಯಾವ ಆಟ ಆಡುತ್ತಿದ್ದನು ?

ಗುಡ್ಡ ಹೊಳೆಯಲ್ಲಿ ಮುಸುಕಿ ಪಾತ್ರೆಗಳಲ್ಲಿ ಮೀನು ಹಿಡಿಯುವ ಆಟವಾಡುತ್ತಿದ್ದನು .

2 ) ಹೊಳೆ ಯಾವುದಕ್ಕೆ ಹೊಂಚು ಹಾಕುತ್ತಿರುತ್ತದೆ ?

ಹೊಳೆಯು ಧಣಿ ಕಟ್ಟಿದ ಧರೆಯನ್ನು ಕೆಡವಲು ಹೊಂಚು ಹಾಕುತ್ತಿರುತ್ತದೆ .

3 ) ಧಣಿಗಳ ಹೆಸರೇನು ?

ಧಣಿಗಳ ಹೆಸರು ವೆಂಕಪ್ಪಯ್ಯ

4 ) ಹೂಳೆತ್ತುವ ಕೆಲಸದ ಒತ್ತಡ ಯಾವ ರೀತಿಯದು ?

ಹೂಳೆತ್ತುವ ಕೆಲಸವೆಂದರೆ ಮೂಳೆ ಮುರಿದು ಹೋಗುವಂಥಹ ಒತ್ತಡದ ಕೆಲಸ .

5 ) ಧಣಿಗಳ ಮನೆಯ ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆ ಯಾವುದು ?

ಧಣಿಗಳ ಮನೆಯ ಪಕ್ಕ ಹರಿಯುತ್ತಿದ್ದುದು ಶಾಂಭವಿ ಹೊಳೆ ,

6 ) ಬೆಳ್ಳಿಲೋಟ ಲಪಟಾಯಿಸಿದ ಅಪವಾದವನ್ನು ಯಾರ ಮೇಲೆ ಹೊರಿಸಲಾಯಿತು ?

ಬೆಳ್ಳಿಲೋಟ ಲಪಟಾಯಿಸಿದ ಅಪವಾದವನ್ನು ‘ ಗುಡ್ಡ’ನ ಮೇಲೆ ಹೊರಿಸಲಾಯಿತು .

7 ) ಧಣಿಗಳ ದಾಂಪತ್ಯಕ್ಕೆ ಯಾವುದು ಮೂಕ ಸಾಕ್ಷಿಯಾಗಿತ್ತು ?

ಬೆಳ್ಳಿ ಲೋಟವು ಧಣಿಗಳ ದಾಂಪತ್ಯಕ್ಕೆ ಮೂಕಸಾಕ್ಷಿಯಾಗಿತ್ತು .

8 ) ಧಣಿ ಎಂದಿಗೂ ಯಾರನ್ನು ನಂಬುವುದಿಲ್ಲ ?

ಧಣಿ ‘ ಎಂದಿಗೂ ಒಕ್ಕಲು ಮಕ್ಕಳನ್ನು ನಂಬುವುದಿಲ್ಲ .

9 ) ‘ ಬೆಳ್ಳಿಲೋಟ ಏನನ್ನು ಕಳೆದುಕೊಂಡಿತ್ತು ?

ಬೆಳ್ಳಿಲೋಟ ಹೊಳೆಯ ಹೂಳಿನಲ್ಲಿ ಅವಿತಿದ್ದರಿಂದ ಅದರ ಬಣ್ಣ – ಗಾಂಭೀರ ಕಳೆದುಕೊಂಡಂತಿತ್ತು .

II. ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕಗಳ ಪ್ರಶ್ನೆಗಳು )

1 ) ಮಳೆಗಾಲದಲ್ಲಿ ಹೊಳೆ ಹೇಗೆ ಕಿರಿಕಿರಿ ಎಬ್ಬಿಸುತ್ತದೆ ?

ಮಳೆಗಾಲದಲ್ಲಿ ಬಂದೊಡನೆ ಬರೀ ಕ್ರಿಯೆಯಲ್ಲೇ ತನ್ನ ವ್ಯಾಪ್ತಿ , ತನ್ನ ಪರಿಹಾರ , ತನ್ನ ಬಲ ಎಷ್ಟೆಂಬುದನ್ನೂ ಧಣಿಗಳಿಗೆ ಮನವರಿಕೆ ಮಾಡಿ ಅವರಿಗೆ ಕಿರಿಕಿರಿ ಎಬ್ಬಿಸುತ್ತದೆ . ತೋಟದಲ್ಲೆಲ್ಲ ನೀರು ನುಗ್ಗಿ ಬೇಸಾಯಕ್ಕೆ ತೊಂದರೆ ಮಾಡಿ ಕಿರಿಕಿರಿ ಮಾಡುತ್ತಿದ್ದಳು , ಬೇಸಿಗೆಯಲ್ಲಿ ಹೂಳು ತುಂಬಿಕೊಳ್ಳುತ್ತಿತ್ತು .

2 ) ನದಿಯ ಒಡಲು ಯಾವಾಗ ಪ್ರಕ್ಷುಬ್ಧವಾಗಿರುತ್ತದೆ ?

ಆಷಾಡ – ಶ್ರಾವಣ ಮತ್ತು ಭಾದ್ರಪದ ಮಾಸದಲ್ಲಿ ನದಿಯ ಒಡಲು ವ್ಯಗ್ರ ಪ್ರಕ್ಷುಬ್ಧಗೊಳ್ಳುತ್ತದೆ .

3 ) .ಧಣಿಗಳು ಹೊಳೆಯನ್ನು ಹೇಗೆ ಮೂದಲಿಸುತ್ತಿದ್ದರು ?

ಧಣಿಗಳು , ಹೊಳೆಯನ್ನು – “ ಮಳೆಗಾಲದಲ್ಲಿ ಈ ಹೊಳೆ ಆಡಿದ್ದೇ ಆಟ , ಹೂಡಿದ್ದೆ ಹೂಟ , ಮಳೆಗಾಲ ಬಂದರೆ ಸಾಕು ಈ ಬಿಕನಾಸಿ ಹೊಳೆ ಊರಡೀ ತನ್ನ ಸೆರಗನ್ನೇ ಹಾಸಿ ಬಿಡುತ್ತದೆ . ಎಷ್ಟಗಲ ಸೆರಗು ಹಾಸಿದರೂ ಇನ್ನಷ್ಟು ದೂರಕ್ಕೆ ಹಾಸಬೇಕೆಂಬ ಚಟ ಇದಕ್ಕೆ ” ಎಂಬುದಾಗಿ ಮೂದಲಿಸುತ್ತಿದ್ದರು .

4 ) ಯಾವ ವಸ್ತುಗಳು ನೀರು ಪಾಲಾದವು ?

ಎರಡು ಕಂಚಿನ ಕೊಳಗ , ಎರಡೆ ಹಿತ್ತಾಳೆ ಕೊಳಗ , ಹಿತ್ತಾಳೆ ಲೋಟ , ಎರಡು ಚೊಂಬು , ಆರು ಮರದ ಸೌಟು , ಎರಡು ಹಿತ್ತಾಳೆ ಸೌಟು , ಹತ್ತು ಕಂಚಿನ ಬಟ್ಟಲು , ಎಂಟು ಹಿತ್ತಾಳೆ ತಟ್ಟೆ , ಒಂದು ಬಾಣಲೆ …. ಇವೆಲ್ಲ ವಸ್ತುಗಳು ನೀರು ಪಾಲಾದವು .

5 ) ಮುಸುರೆ ಪಾತ್ರೆಗಳ ‘ ಒಡೆಯ ‘ ಏನೆಂದು ಯೋಚಿಸಿದನು ?

ಮುಸುರೆ ಪಾತ್ರೆಗಳ ‘ ಒಡೆಯ ‘ ಯಾವತ್ತೂ ನಮ್ಮ ಮುಸುರೆ ಪಾತ್ರೆಗಳನ್ನು ನುಂಗದ ಹೊಳೆ ಇವತ್ತು ನನ್ನಪ್ಪ ಮದುವೆಯಲ್ಲಿ ಕೊಟ್ಟ ಬೆಳ್ಳಿಲೋಟವನ್ನು ನುಂಗಿತಾ ” ಎಂದು ಯೋಚಿಸಿದನು .

6 ) ಕುದುಪನಿಗೆ ಹನಿಗಣ್ಣಾಗಲು ಕಾರಣವೇನು ?

ಧಣಿಯರ ಆದೇಶದಂತೆ ಹೂಳೆತ್ತಿದ್ದ ಕುದುಪನಿಗೆ ಕೆಸರಿನ ಬುಟ್ಟಿಯೊಳಗಿನಿಂದ ಕಳೆದು ಹೋಗಿದ್ದ ಬೆಳ್ಳಿಲೋಟ ಕಾಣಿಸಿಕೊಂಡಿತ್ತು . ಮೆಲ್ಲನೆ ಅದನ್ನು ಹೊಳೆಯ ನೀರಿನಲ್ಲಿ ತೊಳೆದು ಈ ಲೋಟದಿಂದಾಗಿ ತಾನೆಷ್ಟು ಅಪಮಾನದ ಮಾತುಗಳನ್ನು ಈ ಧಣಿ ಪತ್ನಿಯವರ ಕೊಳಕು ಬಾಯಿಂದ ಕೇಳಿಬಿಟ್ಟೆ ಎಂದು ನೊಂದುಕೊಂಡಾಗ ಕುದುಪನಿಗೆ ಹನಿಗಣ್ಣಾಯಿತು .

7 ) ಮುಂಜಾನೆ ಚಿನ್ನಮ್ಮ ಯಾವ ಕೆಲಸದಲ್ಲಿ ತೊಡಗಿದ್ದಳು ?

ಮುಂಜಾನೆ ಚಿನ್ನಮ್ಮ ಎಂದಿನಂತೆ ಹೊಳೆಯ ಸೆರಗಲ್ಲಿ ಮುಸುರೆ ಪಾತ್ರೆಗಳನ್ನು ರಾಶಿ ಹಾಕಿ ಕೂತು ಪಕ್ಕದಲ್ಲಿ ಬೂದಿಯ ಗೆರೆಟೆಯನ್ನಿರಿಸಿಕೊಂಡು ಹೊಳೆಯ ‘ ಗುಣವಾಚನಕ್ಕೆ ತೊಡಗಿದ್ದಳು .

8 ) ಧಣಿಪತ್ನಿ ಬೆಳ್ಳಿಲೋಟವನ್ನು ಹೇಗೆ ಪರಿಚಯಿಸಿದ್ದಾಳೆ ?

ಧಣಿ ಪತ್ನಿ ಆ ಬೆಳ್ಳಿಲೋಟವನ್ನು ಈ ರೀತಿ ಪರಿಚಯಿಸಿದ್ದಾಳೆ ‘ ಅದು ತನ್ನ ಮದುವೆಯಾದಾಗ ಅವರಪ್ಪ ಕೊಟ್ಟಿದ್ದು , ಅದನ್ನು ಕುಡ್ಲದ ರಥಬೀದಿಯಲ್ಲಿರುವ ನರಸಿಂಹಾಚಾರಿಯಲ್ಲಿ ಮಾಡಿದ್ದು ಆಗಿದೆ , ಅದರ ಮೈಮೇಲಿನ ಹೂಬಳ್ಳಿಯನ್ನು ಈ ಕಾಲದಲ್ಲಿ ಯಾವ ಆಚಾರಿ ತಾನೆ ಮಾಡಿಯಾನು . ” ಎಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದಳು .

9 ) ಧಣಿಯ ಬಡಿತದಿಂದ ಗುಡ್ಡ ಬಂಧಮುಕ್ತಾವಾದುದು ಹೇಗೆ ?

ಎಂದು ಗುಡ್ಡನನ್ನು ಅಂಗಳದ ಹೊಂಗಾರೆ ಮರಕ್ಕೆ ಆತನನ್ನು ಬಿಗಿದು ಆ ಮಳೆಯಲ್ಲೇ ತೆಂಗಿನ ಕೊತ್ತಳಿಗೆಯಲ್ಲಿ ಬಡಿದೇ ಬಡಿದರು . ಚಿನ್ನಮ್ಮ ಓಡಿ ಬಂದು “ ಊರ ಕೋಡಬ್ಬು ದೈವದ ಆಣೆಯಿದೆ . ಇನ್ನು ನನ್ನ ಮಗನ ಮೇಲೆ ಕೈ ಮಾಡಿದ್ದಲ್ಲಿ ಅಸಹಾಯಕತನದಿಂದ ಕಿರಿಚುತ್ತ ಧಣಿಗಳ ಕಾಲಿಗೆ ಬಿದ್ದು , ಬೆಳ್ಳಿ ಲೋಟದ ಹಣವನ್ನು ವರ್ಷಾನುಗಟ್ಟಲೆ ಪಡಿಯಿಲ್ಲದೆ ದುಡಿದು ತೀರಿಸುವನೆಂದು ಬೇಡಿಕೊಂಡಳು . ಮುಂದಿನ ಮೂರು ಬೇಸಿಗೆಯವರೆಗೆ ಚಿನ್ನಮ್ಮ ದುಡಿತಕ್ಕೆ ಪಡ್ಡಿಯಿಲ್ಲ ಎಂಬ ಕರಾರಿನಿಂದ ಗುಡ್ಡ ಬಂದ ಮುಕ್ತವಾದ .

III. ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )

1 ) ಚಿನ್ನಮ್ಮನ ಕುಟುಂಬ ಹೊಳೆಯ ಬಗ್ಗೆ ಅಸಹನೆ ಹೊರಬಾರದೆಂದು ಲೇಖಕಿ ಬಯಸುವುದೇಕೆ ?

ವಿವರಿಸಿ . ಚಿನ್ನಮ್ಮನ ಕುಟುಂಬ ಹೊಳೆಯ ಬಗ್ಗೆ ಅಸಹನೆ ಹೊಂದಿಬಾರರೆಂದು ಲೇಖಕಿ ಬಯಸಿದ್ದುದರ ಉದ್ದೇಶವೆಂದರೆ – “ ಎಷ್ಟೋ ಬಾರಿ ಹೊಳೆ ಅವರಿಗೆ ಒಳ್ಳೆಯದನ್ನೆ ಮಾಡಿದೆ . ಅದು ಹರಿದು ಬರುವಾಗಲೆಲ್ಲಾ ತನ್ನ ಸೆರಗಂಚಿನಲ್ಲಿರುವ ತೋಟಗಳಿಂದ ಆಗಾಗ್ಗೆ ಅಷ್ಟಿಷ್ಟು ತೆಂಗಿನಕಾಯಿ , ಸೌದೆ , ಕಟ್ಟಿಗೆಗಳನ್ನು ತಂದು ಕುದುಪನ ದಿಟ್ಟಿಗೆ ಬೀಳಿಸುತ್ತಿವೆ . ಆಷಾಡ – ಶ್ರಾವಣ ಕಾಲದ ಮಳೆಗಾಲದಲ್ಲಂತೂ ಅಲ್ಲಿ – ಇಲ್ಲಿಂದ ಪಾತ್ರೆ – ಪಗಡೆ , ಸೌದೆ – ಕಟ್ಟಿಗೆ , ಕೋಳಿ – ಕುರಿ , ಏಣಿ – ರೋಣಿ , ರೀಮ – ಪಕ್ಕಾಸುಗಳನ್ನು ಹೊತ್ತು ತಂದು ಚಿನ್ನಮ್ಮ – ಕುರುಪದ ಮಡಲಿಗೆ ಸುರಿಯುವುದು ಮಾಮೂಲಾಗಿತ್ತು .

2 ) ಬೆಳ್ಳಿಲೋಟ ಕಂಡಾಗ ಧಣಿಯಲ್ಲಿ ಆತಂಕ , ಗಾಬರಿ , ಭಯ ಉಂಟಾಗಲು ಕಾರಣವೇನು ?

ಬೆಳ್ಳಿಲೋಟ ಕಂಡಾಗ ಧಣಿಯಲ್ಲಿ ಆತಂಕ , ಗಾಬರಿ , ಭಯ ಉಂಟಾಯಿತು . ಏಕೆಂದರೆ ಆ ಬೆಳ್ಳಿಲೋಟದಿಂದಾಗಿ ಧಣಿಗಳ ಪಡಿಯಕ್ಕಿ ಉಳಿದಿತ್ತು . ಮುಗ್ಧ ಬಾಲಕನನ್ನು ಹೊಂಗಾರೆ ಮರಕ್ಕೆ ಕಟ್ಟಿ ಹೊಡೆದದ್ದು ನೆನಪಾಗಿ , ಶೋಷಿತರಾದ ಚಿನ್ನಮ್ಮ , ಕುದುಪ ಲೋಟ ಮುಖದ ಮೇಲೆ ಎಸೆದು ಎಲ್ಲಿ ಮಾನಮಯ್ಯಾದೆಯನ್ನು ಕಳೆಯುವರೋ ಎಂಬ ಭಯ ಆವರಿಸಿತು , ಇದರಿಂದಾಗಿ ಅವರ ಎದೆಯ ಬಡಿತದ ಲಯ ತಪ್ಪತೊಡಗಿತ್ತು .

3 ) ಧಣಿ ಹಾಗೂ ಹೊಳೆಯ ನಡುವಿನ ಸಮರವನ್ನು ಚಿತ್ರಿಸಿ .

ಧಣಿ ಹಾಗೂ ಹೊಳೆಯ ನಡುವಿನ ಸಮರವನ್ನು ಬಹು ಮಾರ್ಮಿಕವಾಗಿ ಚಿತ್ರಿಸಿದ್ದಾರೆ . ಧಣಿ , ಹೊಳೆಯನ್ನು ಮೂದಲಿಸುವುದು – ‘ ಮಳೆಗಾಲದಲ್ಲಿ ಈ ಹೊಳೆ ಆಡಿದ್ದೆ ಆಟ , ಹೂಡಿದ್ದೆ ಹೂಟ , ಮಳೆಗಾಲ ಬಂದರೆ ಸಾಕು ಈ ಬಿರನಾಸಿ ಹೊಳೆ ದೂರಕ್ಕೆ ಹಾಸಬೇಕೆಂಬ ಚಟ ಇದಕ್ಕೆ ‘ ಎಂದು ಧಣಿಗಳು ಯಾವತ್ತೂ ಹೊಳೆಯನ್ನು ಮೂದಲಿಸುವುದು ಇದ್ದೆ ಇದೆ . ಒಂದು ವೇಳೆ ಹೊಳೆಗೂ ಬಾಯೇನಾದರೂ ಬರುತ್ತಿದ್ದರೆ – ‘ ಎಲ್ಲವೋ ಹುಲು ಮಾನವ ವೆಂಕಪ್ಪಯ್ಯ , ಸುತ್ತಲ ನಾಕೂರಲ್ಲಿರುವ ಯಾವನೇ ಶ್ಯಾನುಭೋಗ ಉಗ್ರಾಣಿಯನ್ನಾದರೂ ಕರೆತಂದು ನನ್ನೆದರು ಸರಪಳಿ ಎಳೆಸು , ಅವೆಲ್ಲವೂ ನನ್ನದಲ್ಲದಿದ್ದರೆ ಕೇಳು ಮತ್ತೆ ಎಂದು ಮರು ಉತ್ತರ ಕೊಡುತ್ತಿತ್ತು . ಬಾಯಿ ಇಲ್ಲದಿದ್ದವನಂತೆ ಮಳೆಗಾಲ ಬಂದೊಡನೆ ಕ್ರಿಯೆಯಲ್ಲೇ ತನ್ನ ವ್ಯಾಪ್ತಿ , ತನ್ನ ಪರಿಹಾರ , ತನ್ನ ಬಲ ಎಷ್ಟೆಂಬುದನ್ನು ಧಣಿಗಳಿಗೆ ಮನವರಿಕೆ ಮಾಡಿಕೊಡುತ್ತಿತ್ತು .

4 ) ಚಿನ್ನಮ್ಮ ಮತ್ತು ಆಕೆಯ ಕುಟುಂಬಕ್ಕೆ ಹೊಳೆಯ ಬಗ್ಗೆ ಅಸಹನೆ ಕೋಪ ಉಂಟಾಗಲು ಕಾರಣವೇನು ?

ಚಿನ್ನಮ್ಮ ಮತ್ತು ಆಕೆಯ ಕುಟುಂಬಕ್ಕೆ ಹೊಳೆಯ ಬಗ್ಗೆ ಎಲ್ಲಿಲ್ಲದ ಕೋಪ , ಅಸಹನೆ , ಏಕೆಂದರೆ ಮೊದಲೇ ಶೋಷಿತರಾಗಿದ್ದ ಇವರು ಮತ್ತಷ್ಟು ಶೋಷಿತರಾಗಬೇಕಾಯಿತು . ಅಂದರೆ ಹೊಳೆಯು ಬೆಳ್ಳಿಲೋಟ ನುಂಗಿದ್ದರಿಂದ ತನ್ನ ಮಗ ಚರ್ಮ ಸುಲಿಯವರೆಗೂ ಹೊಡೆತ ತಿನ್ನಬೇಕಾಯಿತು . ಸಾಲದೆಂಬಂತೆ ಕಳ್ಳತನದ ಆಪಾದನೆ , ಕೊನೆಗೆ ಪಡೆಯಿಲ್ಲದೆ ಮೂರು ಬೇಸಿಗೆಯವರೆಗೂ ದುಡಿಯಬೇಕು , ಎಷ್ಟು ದುಡಿದರೂ ಆ ಧಣಿಗೆ ಧಣಿಪತ್ನಿಗೆ ತೃಪ್ತಿ ಇಲ್ಲ . ಇಷ್ಟೆಲ್ಲ ಆದದ್ದು ಈ ಹೊಳೆಯಿಂದ ಈ ಹೊಳೆ ಬೆಳ್ಳಿಲೋಟ ನುಂಗದಿದ್ದರೆ ಇವೆಲ್ಲ ಸಹಿಸುವ ಅಗತ್ಯವಿರಲಿಲ್ಲ . ಇಷ್ಟೆ ಅಲ್ಲದೆ ಬೇಸಿಗೆಯಲ್ಲಿ ಹೊಳೆ ನಿತ್ರಾಣವಾಗುತ್ತಿತ್ತು . ಮೂಳೆ ಮುರಿಯುವಂತೆ ಹೂಳೆತ್ತುವ ಕೆಲಸ ಮಾಡಬೇಕಾಯಿತು . ಆದ್ದರಿಂದ ಈ ಕುಟುಂಬಕ್ಕೆ ಹೊಳೆಯ ಬಗ್ಗೆ ಅಸಹನೆ ಕೋಪ ಉಂಟಾಗಲು ಕಾರಣವಾಯಿತು .

5 ) ಮುಸುರೆ ಪಾತ್ರೆಗಳ ನೀರು ಪಾಲಾದುದು ಹೇಗೆ ? ಅವುಗಳನ್ನು ಮೇಲೆತ್ತಲು ಮಾಡಿದ ಪ್ರಯತ್ನಗಳೇನು ?

ಗುಡ್ಡ , ಧಣಿಗಳ ತೋಟದ ಅಂಚಲ್ಲಿ ಕೂತು ಬೂದಿಯಿಂದ ತಿಕ್ಕಿದ ಪಾತ್ರೆಗಳು ಹೊಳೆಯ ನೀರಲ್ಲಿ ಜಾಲಾಡಿಸುತ್ತಿದ್ದ . ಆತ ಕುಳಿತಿದ್ದ ಜಾಗ ಮೆತ್ತಗಾಗಿ ಕಾಲು ಜಾರತೊಡಗಿತು . ಕ್ಷಣಮಾತ್ರದಲ್ಲಿ ಗುಡ್ಡದ ಜತೆ ಧಣಿಗಳ ಮನೆಯ ಪಾತ್ರೆ , ಸೌಟು , ಕೊಳಗ , ತಪ್ಪಲೆಗಳೆಲ್ಲವೂ ನೀರು ಪಾಲಾದವು . ಗುಡ್ಡ ಈಜಿ ಹುಡುಕಲು ಪ್ರಯತ್ನಿಸಿದ ಸಾಧ್ಯವಾಗದಿದ್ದಾಗ ಅವರ ಅಪ್ಪನನ್ನು ಕರೆದನು . ಕುರುಪ ಓಡಿಬಂದು ನೀರಿನೊಳಗೆ ಇಳಿದು ಪಾತ್ರೆಗಳನ್ನು ಹುಡುಕಿ ತೆಗೆದನು . ಆದರೆ ಬೆಳ್ಳಿಲೋಟದ ನೆನಪೇ ಬರಲಿಲ್ಲ . ಬಹಳ ಹೊತ್ತಿನ ನಂತರ ಅದರ ನೆನಪು ಬಂದಿತಾದರೂ ಪ್ರಯೋಜನವಾಗಲಿಲ್ಲ . ಏಕೆಂದರೆ ಎಷ್ಟೇ ಹುಡುಕಿದರೂ ಬೆಳ್ಳಿಲೋಟ ಸಿಗಲಿಲ್ಲ .

6 ) ತಮ್ಮ ಕುಟುಂಬದ ಮೇಲಿನ ಅಪವಾದವನ್ನು ನಿವಾರಿಸಿಕೊಳ್ಳುವ ಅವಕಾಶ ಇದ್ದರೂ ಚಿನ್ನಮ್ಮ ಆ ಸಾಧ್ಯತೆಯನ್ನು ನಿರಾಕರಿಸಲು ಕಾರಣವೇನು ?

ತಮ್ಮ ಕುಟುಂಬದ ಮೇಲಿನ ಅಪವಾದವನ್ನು ನಿವಾರಿಸಿಕೊಳ್ಳುವ ಅವಕಾಶ ಇದ್ದರೂ ಚಿನ್ನಮ್ಮ ಆ ಸಾಧ್ಯತೆಯನ್ನು ನಿರಾಕರಿಸಿದ್ದಳು . ಇದಕ್ಕೆ ಕಾರಣವೆಂದರೆ ಆ ಬೆಳ್ಳಿಲೋಟದ ಮೇಲಿನ ಆಕ್ರೋಶ , ಆ ಬೆಳ್ಳಿಲೋಟದಿಂದಾಗಿ ಅಪವಾದ ಹೊರಬೇಕಾಯಿತು . ಪಡಿಯಕ್ಕಿ ಇಲ್ಲದ ಅವಿರತ ದುಡಿತ , ಮಗನ ಮೇಲೆ ನಡೆದ ಅತ್ಯಾಚಾರ , ಇವೆಲ್ಲವೂ ಅವಳಿಗೆ ನೆನಪಿಗೆ ಬಂದವು . ಅಲ್ಲದೆ ವೆಂಕಪ್ಪಯ್ಯನಂಥಹ ಧಣಿಗಳು ಒಕ್ಕಲಮಕ್ಕಳನ್ನು ನಂಬುತ್ತಿರಲಿಲ್ಲ . ಅದರ ಬದಲಾಗಿ ಮತ್ತಷ್ಟು ಕೆಟ್ಟಪದಗಳಿಂದ ಬೈಯುವರು . ಎಲ್ಲಾ ಮುಗಿದ ಮೇಲೆ ಈಗ ಬೆಳ್ಳಿಲೋಟ ಅವರಿಗೆ ಕೊಟ್ಟರೂ ಮೂರು ವರ್ಷದ ಅವರ ಶ್ರಮವಾಗಲಿ , ಅದಕ್ಕೆ ತಕ್ಕ ಫಲವಾಗಲಿ ಕೊಡುತ್ತಿರಲಿಲ್ಲ . ಆದ್ದರಿಂದ ಚಿನ್ನಮ್ಮ ಅದನ್ನು ಮತ್ತೆ ಹೊಳೆಯ ಮಡುವಿಗೆ ಎಸೆದಳು .

IV. ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

1 )“ ಕಾವಿಗೆ ಕೂತ ಹೇಂಟೆಯಂತೆ – ಒಡಲು ಯಾವತ್ತೂ ವ್ಯಗ್ರ – ಪ್ರಕ್ಷುಬ್ಧ ”

ಡಾ || ಎಚ್ . ನಾಗವೇಣಿಯವರು ರಚಿಸಿರುವ ‘ ಧಣಿಗಳ ಬೆಳ್ಳಿಲೋಟ ‘ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಶ್ರಾವಣ ಮಾಸದ ನಾಲ್ಕನೇ ದಿನ ಚಿನ್ನಮ್ಮನ ಮಗ ಗುಡ್ಡ ಶಾಂಭವಿ ಹೊಳೆಯ ದಡದಲ್ಲಿ ಕುಳಿತು ಧಣಿಗಳ ಮನೆಯ ಮುಸುರೆ ಪಾತ್ರೆಗಳನ್ನು ತಿಕ್ಕುತ್ತಿದ್ದಾಗ ಶಾಂಭವಿ ಹೊಳೆಯು ರಭಸದಿಂದ ಹರಿಯುತ್ತಿದ್ದ ಬಗೆಯನ್ನು ಲೇಖಕರು ಮೇಲಿನ ವಾಕ್ಯದ ಮೂಲಕ ವಿವರಿಸಿದ್ದಾರೆ . ಆಷಾಢ – ಶ್ರಾವಣ – ಭಾದ್ರಪದ ಮಾಸಗಳಲ್ಲಿ ಮಳೆ ಹೆಚ್ಚು ಸುರಿಯುವ ಕಾರಣ ನದಿಯು ಮೈದುಂಬಿ ಹರಿಯುತ್ತದೆ . ಅದರ ರಭಸ ವ್ಯಗ್ರ – ಪ್ರಕ್ಷುಬ್ಧವಾದ್ದರಿಂದ ಲೇಖಕಿಯು ಅದನ್ನು ಕಾವಿಗೆ ಕೂತಿರುವ ಹೇಂಟೆಗೆ ಹೋಲಿಸಿದ್ದಾರೆ . ಕಾವಿಗೆ ಕುಳಿತಿರುವ ಕೋಳಿಗೆ ಕೋಪ ಹೆಚ್ಚು . ಅದರಂತೆಯೇ ಶಾಂಭವಿ ಹೊಳೆಯೂ ಪ್ರಕ್ಷುಬ್ಧವಾಗಿ ಹರಿಯುತ್ತಿತ್ತೆಂಬ ಹೋಲಿಕೆ ಚೆನ್ನಾಗಿದೆ ಎನ್ನಬಹುದು .

2 ) “ ಗದ್ದೆಯಲ್ಲಿ ಬಿತ್ತುವುದನ್ನು ಮರಳದಿನ್ನೆ ಮೇಲೆ ಬಿತ್ತಿದೆಯಲ್ಲವ ಮಾರಾಯ …. ? ”

ಶ್ರೀಮತಿ ಎಚ್ . ನಾಗವೇಣಿ ಅವರು ಬರೆದಿರುವ ‘ ಧಣಿಗಳ ಬೆಳ್ಳಿಲೋಟ ‘ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಧಣಿಗಳಾದ ವೆಂಕಪ್ಪಯ್ಯನವರು ಪ್ರತಿವರ್ಷವೂ ಹೊಳೆಯ ನೀರು ಬೇಸಿಗೆಯಲ್ಲಿ ಬತ್ತಿದಾಗ ತಮ್ಮ ಗದ್ದೆ – ತೋಟದ ಅಂಚನ್ನು ಮೂಾಲ್ಕು ಅಡಿ ಎತ್ತರಿಸುತ್ತಿದ್ದರೂ ಮಳೆಗಾಲದಲ್ಲಿ ಅದು ಕೊಚ್ಚಿ ಹೋಗಿ ಹೊಳೆ ಪಾಲಾಗುತ್ತಿತ್ತು . ಹೊಳೆಯು ತನ್ನ ಜಾಗವನ್ನು ಮಳೆಗಾಲದಲ್ಲಿ ಆಕ್ರಮಿಸಿಕೊಂಡು ಬಿಡುತ್ತಿದ್ದುದರಿಂದ ವೆಂಕಪ್ಪಯ್ಯನವರ ಶ್ರಮವೆಲ್ಲಾ ಹೊಳೆಯಲ್ಲಿ ಹುಣಿಸೆಹಣ್ಣು ಹಿಂಡಿದಂತಾಗುತ್ತಿತ್ತು . ವೆಂಕಪ್ಪಯ್ಯ ಬಿರುಬೇಸಿಗೆ ಯಲ್ಲಿ ಗದ್ದೆಯಂಚನ್ನು ಎತ್ತರಿಸುವುದನ್ನು ಕಂಡು ತೆಪ್ಪಗಿರುತ್ತಿದ್ದ ಹೊಳೆ , ಮಳೆಗಾಲ ಬಂದೊಡನೆ “ ಗದ್ದೆಯಲ್ಲಿ ಬಿತ್ತುವುದನ್ನು ಮರಳ ಮೇಲೆ ಬಿತ್ತಿದೆಯಲ್ಲವ ಮಾರಾಯ ? ” ಎಂದು ವೆಂಕಪ್ಪಯ್ಯನವರ ಪೆದ್ದುತನವನ್ನು ಅಣಕಿಸಿ ಆ ಎತ್ತರವನ್ನು ಕೆಡವಿ ಹಾಕುತ್ತಿತ್ತೆಂಬುದನ್ನು ವರ್ಣಿಸಿರುವ ಸಂದರ್ಭ ವಿದಾಗಿದೆ . ಹೊಳೆಯ ಶಕ್ತಿಯ ಮುಂದೆ ಹುಲುಮಾನವರಾದ ವೆಂಕಪ್ಪಯ್ಯನವರ ಪ್ರಯತ್ನ ವಿಫಲವಾದುದು .

3 ) “ ಅದಕ್ಕೂ ಚಿನ್ನಮ್ಮನ ಪುಟ್ಟ ಸಂಸಾರದ ಬಗ್ಗೆ ಅದೆಷ್ಟು ಪ್ರೀತಿ ವಾತ್ಸಲ್ಯ .

ಡಾ || ಎಚ್ . ನಾಗವೇಣಿಯವರು ಬರೆದಿರುವ ‘ ಧಣಿಗಳ ಬೆಳ್ಳಿಲೋಟ ‘ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ . ಶಾಂಭವಿ ಹೊಳೆಯ ಬಗ್ಗೆ ನಿರೂಪಕಿ ಈ ಮಾತನ್ನು ಹೇಳಿದ್ದಾರೆ .ಶಾಂಭವಿ ಹೊಳೆಯು ಚಿನ್ನಮ್ಮನ ಕುಟುಂಬಕ್ಕೆ ಮಾಡಿರುವ ಉಪಕಾರವನ್ನು ವಿವರಿಸುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವನ್ನು ಲೇಖಕಿ ಹೇಳಿರುವರು . ಚಿನ್ನಮ್ಮನ ಸಂಸಾರಕ್ಕೆ ಶಾಂಭವಿ ಹೊಳೆಯು ಮೀನುಗಳನ್ನು ಒದಗಿಸುತ್ತಿತ್ತು . ತಾನು ಹರಿದು ಬರುವಾಗ ಸೆರಗಂಚಿನ ತೋಟಗಳಿಂದ ತೆಂಗಿನಕಾಯಿ – ಸೌದೆಗಳನ್ನು ತಂದು ಕುದುಪನ ಕಣ್ಣಿಗೆ ಬೀಳಿಸುತ್ತಿತ್ತು . ಕೆಲವು ಮಳೆಗಾಲದಲ್ಲಿ ಪಾತ್ರೆ – ಪಗಡಿ , ಕೋಳಿ ಕುರಿ , ಏಣಿ – ದೋಣಿ , ರೀಪು – ಪಕ್ಕಾಸುಗಳನ್ನು ಹೊತ್ತು ತಂದು ಹಾಕುತ್ತಿದ್ದ ಶಾಂಭವಿ ಹೊಳೆಗೆ ಚಿನ್ನಮ್ಮನ ಪುಟ್ಟ ಸಂಸಾರದ ಬಗ್ಗೆ ತುಂಬಾ ಪ್ರೀತಿವಾತ್ಸಲ್ಯಗಳಿದ್ದವೆಂದು ಲೇಖಕಿ ವಿವರಿಸಿದ್ದಾರೆ . ಈ ಹೊಳೆಯಿಂದಾಗಿಯೇ ಚಿನ್ನಮ್ಮನ ಕುಟುಂಬ ಅಪವಾದಕ್ಕೆ ಸಿಕ್ಕಿಕೊಳ್ಳುವಂತಾದುದು ಕಥೆಯ ಮುಂದಿನ ಬೆಳವಣಿಗೆಯಲ್ಲಿ ಗಮನಿಸುತ್ತೇವೆ .

4 ). “ ಆತನ ಈಜಿಗೆ ಮೀನುಗಳೇ ನಾಚಬೇಕು , ”

ಡಾ | ಎಚ್‌ . ನಾಗವೇಣಿಯವರು ರಚಿಸಿರುವ ‘ ಧಣಿಗಳ ಬೆಳ್ಳಿಲೋಟ ‘ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಕುದುಪ – ಚನ್ನಮ್ಮರ ಏಕಮಾತ್ರ ಪುತನಾದ ಗುಡ್ಡ ರಭಸದಿಂದ ಹರಿಯುತ್ತಿರುವ ಶಾಂಭವಿ ಹೊಳೆಯ ಅಂಚಿನಲ್ಲಿ ಧಣಿಗಳ ಮುಸುರೆ ಪಾತ್ರೆಗಳನ್ನು ತೊಳೆಯುತ್ತಾ ಕುಳಿತ್ತಿದ್ದ , ಹಿಂದಿನ ದಿನ ರಾತ್ರಿಯ ಹರಿಕಥೆ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾ ಅವನು ನಗುನಗುತ್ತಾ ಪಾತ್ರೆ ತೊಳೆಯುತ್ತಿರುವಾಗ ಕಾಲಡಿಯ ಮಣ್ಣು ಕುಸಿದು , ಪಾತ್ರೆಗಳ ಸಮೇತ ಗುಡ್ಡ ನೀರಿಗೆ ಬಿದ್ದನು . ಅವನು ಚಿಕ್ಕವನಾದರೂ ಚೆನ್ನಾಗಿ ಈಜು ಬಲ್ಲವನಾಗಿದ್ದ . ಆತನ ಈಜಿಗೆ ಮೀನುಗಳೇ ನಾಚಬೇಕು . ಹಾಗೆ ಈಜಿ ದಡ ಸೇರಿದವನು ತಂದೆಯ ಬಳಿ ಬಂದು ಪಾತ್ರೆಗಳು ನೀರು ಪಾಲಾದ ವಿಚಾರವನ್ನು ತಿಳಿಸಿದನು .

5 ) “ ಧಣಿಯವರು ಎಂದಾದರೂ ಒಕ್ಕಲು ಮಕ್ಕಳನ್ನು ನಂಬಿದ್ದುಂಟೆ ? ”

ಡಾ ಎಚ್ . ನಾಗವೇಣಿಯವರು ಬರೆದಿರುವ ‘ ಧಣಿಗಳ ಬೆಳ್ಳಿಲೋಟ ‘ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಗುಡ್ಡ ಮುಸುರೆ ಪಾತ್ರೆಗಳೆಲ್ಲಾ ಹೊಳೆ ಪಾಲಾದವೆಂದು ಬಂದು ಹೇಳಿದಾಗ ಕುದುಪ ಹೊಳೆಯಲ್ಲಿ ಮುಳುಗಿ ಸಿಕ್ಕ ಪಾತ್ರೆಗಳನ್ನೆಲ್ಲ ಜಾಲಾಡಿ ತಂದನು . ಕೊನೆಯಲ್ಲಿ ಏನು ಮಾಡಿದರೂ ಧಣಿಗಳ ಮನೆಯ ಬೆಳ್ಳಿಲೋಟ ಪತ್ತೆಯಾಗಲಿಲ್ಲ . ಚಿನ್ನಮ್ಮ ಕುದುಪ – ಗುಡ್ಡರ ಕಣ್ಣೀರು ಹೊಳೆಯನ್ನು ಸೇರಿತೇ ವಿನಾ ಅನ್ಯ ಪ್ರಯೋಜನವಾಗಲಿಲ್ಲ . ಆಕಾಶ – ಭೂಮಿಯನ್ನು ಒಂದು ಮಾಡುವಂತೆ ಮಳೆ ಸುರಿಯುತ್ತಿದ್ದುದರಿಂದ ಅಸಹಾಯಕನಾದ ಕುದುಪ ಧಣಿಗಳ ಮನೆಯಂಗಳದಲ್ಲಿ ನಿಂತು ಬೆಳ್ಳಿಲೋಟ ಕಣ್ಮರೆಯಾದ ವಿಷಯ ತಿಳಿಸಿದ . ಧಣಿಗಳು ಎಂದೂ ಒಕ್ಕಲು ಮಕ್ಕಳನ್ನು ನಂಬುವುದಿಲ್ಲ . ಇದರಿಂದಾಗಿ ಕುದುಪನ ಕುಟುಂಬವೇ ಬೆಳ್ಳಿಲೋಟವನ್ನು ಲಪಟಾಯಿಸಿದೆಯೆಂಬ ಆಪಾದನೆಯನ್ನು ಹೊರಬೇಕಾಗಿ ಬಂತು . ಅಸಹಾಯಕ ಸ್ಥಿತಿಯಲ್ಲಿರುವ ಬಡವರನ್ನು ಯಾರೂ ನಂಬದೆ , ಅನುಮಾನದಿಂದಲೇ ಕಾಣುವ ಸಿರಿವಂತರ ನಡೆವಳಿಕೆಯನ್ನು ಲೇಖಕಿ ಈ ಮೇಲಿನ ಮಾತಿನ ಮೂಲಕ ವ್ಯಂಗ್ಯವಾಡಿದ್ದಾರೆ .

6 ) “ ಪಾವಕ್ಕಿ ಕಮ್ಮಿ ಮಾಡಿದರೆ ಸುಮ್ಮನೆ ಇರಿಯೇನೋ ನೀನು ? ”

ಡಾ | ಎಚ್ . ನಾಗವೇಣಿಯವರು ಬರೆದಿರುವ ‘ ಧಣಿಗಳ ಬೆಳ್ಳಿಲೋಟ ‘ ಎಂಬ ಸಣ್ಣಕಥೆಯಲ್ಲಿ ಧಣಿಗಳಾದ ವೆಂಕಪ್ಪಯ್ಯ ಕುದುಪನಿಗೆ ಈ ಮೇಲಿನ ಮಾತನ್ನು ಹೇಳುತ್ತಾರೆ . ಹೊಳೆಯಿಂದ ಹೂಳೆತ್ತಿ ತೆಂಗಿನಮರದ ಬುಡಕ್ಕೆ ಸುರಿಯುವ ಕೆಲಸದಲ್ಲಿ ಕುದುಪ – ಚಿನ್ನಮ್ಮರು ತೊಡಗಿದ್ದರು . ಮೂಳೆ ಮುರಿದು ಹೋಗುವಂತಹ ಈ ಕೆಲಸದ ನಡುವೆ ಸುಸ್ತಾದ ಕುದುಪ ಒಂದರೆಕ್ಷಣ ನೀರಲ್ಲಿ ಕುಸಿದು ಕುಳಿತಾಗ ಧಣಿಗಳು ಸಿಟ್ಟು ನೆತ್ತಿಗೇರಿತು . ಅವರು ಕುದುಪನನ್ನು ಗದರಿಸುತ್ತಾ “ ಎದ್ದೇಳೋ ಮೂರ‍್ಕಾಸಿನವ ” ಪಡಿ ಅಳೆಯುವಾಗ ಪಾವಕ್ಕೆ ಕಮ್ಮಿ ಮಾಡಿದರೆ ಸುಮ್ಮನೆ ಇರ‍್ತಿಯೇನೋ ನೀನು ” ಎಂದು ಬೈಯ್ದರು . ಮೊದಲೇ ಬೆಳ್ಳಿಲೋಟದ ಆಪಾದನೆಯಿಂದ ಬಸವಳಿದಿದ್ದ ಚಿನ್ನಮ್ಮನ ಕುಟುಂಬಕ್ಕೆ ಈ ಬಿಡುವಿಲ್ಲದ ದುಡಿತ , ಬೈಗುಳಗಳಿಂದ ಇನ್ನಷ್ಟು ನೋವಾಗುತ್ತದೆ . ಅವರಿಬ್ಬರ ಅಸಹಾಯಕ ಕಣ್ಣೀರು ಹೊಳೆಗೆ ಸೇರುತ್ತದೆ .

7 ) “ ಇದೇ ಲೋಟವಲ್ಲವೇ …. ತನ್ನ ಬೆವರಿನ ಬೆಲೆ ಕಳೆದದ್ದು . ”

ಡಾ || ಎಚ್ . ನಾಗವೇಣಿಯವರ ‘ ಧಣಿಗಳ ಬೆಳ್ಳಿಲೋಟ ‘ ಎಂಬ ಸಣ್ಣ ಕಥೆಯಲ್ಲಿ ಬೆಳ್ಳಿಲೋಟವನ್ನು ಕೈಯಲ್ಲಿ ಹಿಡಿದುಕೊಂಡು ಚಿನ್ನಮ್ಮ ತನ್ನಲ್ಲಿಯೇ ಹೇಳಿಕೊಳ್ಳುವ ಮಾತುಗಳಿವು .ಹೊಳೆಯಲ್ಲಿ ಹೂಳೆತ್ತುವಾಗ ಸಿಕ್ಕಿದ ಬೆಳ್ಳಿಲೋಟವನ್ನು ಕುದುಪನ ಕೈಯಿಂದ ಕಿತ್ತುಕೊಂಡ ಚಿನ್ನಮ್ಮ ಅದನ್ನು ತಿರುಗಿಸಿ ತಿರುಗಿಸಿ ನೋಡಿದಳು . ಅವಳಿಗೆ ಆ ಲೋಟದ ಪರಿಚಯ ಚೆನ್ನಾಗಿತ್ತು . ತನ್ನ ಕುಟುಂಬವನ್ನು ಕಷ್ಟಕ್ಕೀಡುಮಾಡಿದ ಬೆಳ್ಳಿಲೋಟದ ಮೇಲೆ ಕೋಪ ಉಕ್ಕಿತು . “ ಇದೇ ಲೋಟವಲ್ಲವೆ ….. ತನ್ನ ಬೆವರಿನ ಬೆಲೆ ಕಳೆದದ್ದು ಕಳ್ಳತನದ ಕಿರೀಟವನ್ನು ತನ್ನ ಮುರುಕಲು ಗುಡಿಸಲ ಚಾವಣಿಗೆ ಜೋಡಿಸಿದ್ದು ” ಎಂದು ಕೋಪ ಕೆರಳಿತು . ಈ ಬೆಳ್ಳಿಲೋಟದಿಂದಾಗಿ ತನ್ನ ಕುಟುಂಬ ಉಂಡ ನೋವು , ಅವಮಾನ , ಪಟ್ಟಪಾಡು , ಪರಿತಾಪಗಳೆಲ್ಲವೂ ನೆನಪಿಗೆ ಬಂದು ಕೋಪದಿಂದ ನೀರಿನ ಮಡುವಿಗೆ ಆ ಲೋಟವನ್ನು ಎಸೆದುಬಿಟ್ಟಳು . ಬೆಳ್ಳಿಲೋಟ ತಂದ ಕಷ್ಟಕ್ಕೆ ಚಿನ್ನಮ್ಮ ಅದರ ಮೇಲೆ ತೋರುವ ಕೋಪದ ಪ್ರತಿಕ್ರಿಯೆ ಇಲ್ಲಿ ಚಿತ್ರಿತವಾಗಿದೆ .

8 ) “ ಮೂರು ಬೇಸಿಗೆಯವರೆಗೆ ಚಿನ್ನಮ್ಮನ ದುಡಿತಕ್ಕೆ ಪಡಿಯಿಲ್ಲ . ”

ಡಾ || ಎಚ್ . ನಾಗವೇಣಿಯವರು ಬರೆದಿರುವ ‘ ಧಣಿಗಳ ಬೆಳ್ಳಿಲೋಟ ‘ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಕುದುಪನ ಕುಟುಂಬವೇ ಬೆಳ್ಳಿಲೋಟವನ್ನು ಅಪಹರಿಸಿದೆಯೆಂದು ತೀರ್ಮಾನಿಸಿದ ಧಣಿಯು ಮುಸುರೆ ಪಾತ್ರೆ ತಿಕ್ಕುತ್ತಿದ್ದ ಗುಡ್ಡನ ಬಾಯಿಬಿಡಿಸಲು ಅಂಗಳದ ಹೊಂಗಾರೆ ಮರಕ್ಕೆ ಆತನನ್ನು ಕಟ್ಟಿ ಮಳೆಯಲ್ಲೇ ತೆಂಗಿನ ಕೊತ್ತಳಿಗೆಯಲ್ಲಿ ಬಡಿಯುತ್ತಿದ್ದರು . ತನ್ನ ಕರುಳ ಕುಡಿಯ ಚೀರಾಟ – ನರಳಾಟ ನೋಡಲಾಗದ ಚಿನ್ನಮ್ಮ ಧಣಿಗಳ ಕಾಲಿಗೆ ಬಿದ್ದು ತನ್ನ ಮಗನನ್ನು ಬಿಟ್ಟು ಬಿಡುವಂತೆಯೂ ತಾನು ವರ್ಷಾನುಗಟ್ಟಲೆ ಪಡಿಯಿಲ್ಲದೆ ಆ ಬೆಳ್ಳಿಲೋಟದ ಹಣವನ್ನೂ ದುಡಿದು ತೀರಿಸುವು ದಾಗಿಯೂ ಅಳುತ್ತಾ ಬೇಡಿಕೊಂಡಳು . ಆಗ ಧಣಿಗಳು ಗುಡ್ಡನಿಗೆ ಹೊಡೆಯುವುದನ್ನು ನಿಲ್ಲಿಸಿ , ಚಿನ್ನಮ್ಮನಿಗೆ ಮೂರು ಬೇಸಿಗೆವರೆಗೆ ಪಡಿಯಿಲ್ಲದೆ ದುಡಿಯುವ ಕರಾರು ವಿಧಿಸಿದರು . ಬೆಳ್ಳಿಲೋಟ ಕಣ್ಮರೆಯಾದುದಕ್ಕೆ ಬಡವರು ಹೊರಬೇಕಾಗಿಬಂದ ಕಳ್ಳತನದ ಆಪಾದನೆ , ಹಿಂಸೆ ಮತ್ತು ಧಣಿಗಳ ಕೌರವನ್ನು ಲೇಖಕಿ ಇಲ್ಲಿ ಚಿತ್ರಿಸಿದ್ದಾರೆ .

2nd PUC Dhanigala Bellilota Kannada Notes 5 Lesson Question Answer Guide pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *