ದ್ವಿತೀಯ ಪಿ.ಯು.ಸಿ ಕನ್ನಡವನ್ನು ಕಟ್ಟುವ ಕೆಲಸ ಕನ್ನಡ ನೋಟ್ಸ್‌ | 2 PUC Kannadavannu Kattuva Kelasa Kannada Notes

ಕನ್ನಡವನ್ನು ಕಟ್ಟುವ ಕೆಲಸ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd Puc Kannada Lessons Kannadavannu Kattuva Kelasa Notes Question Answer Pdf Download

Kannadavannu Kattuva Kelasa Notes

ತರಗತಿ : ದ್ವಿತೀಯ ಪಿ.ಯು.ಸಿ

ಪಾಠದ ಹೆಸರು : ಕನ್ನಡವನ್ನು ಕಟ್ಟುವ ಕೆಲಸ

ಕೃತಿಕಾರರ ಹೆಸರು : ಹಾ.ಮಾ. ನಾಯಕ್‌

ಕೃತಿಕಾರರ ಪರಿಚಯ :

ಹಾಮಾನಾ ಎಂದೇ ಪ್ರಸಿದ್ಧರಾಗಿರುವ ಡಾ || ಹಾರೋಗದ್ದೆ ಮಾನಪ್ಪ ನಾಯಕ ( ೧೯೩೧-೨೦೦೧ ) ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯವರು . ಶ್ರೀನಿವಾಸ ನಾಯಕ – ರುಕ್ಕಿಣಿಯಮ್ಮ ದಂಪತಿಗಳ ಸುಪುತ್ರರು , ಮೈಸೂರು ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ , ಗುಲಬರ್ಗಾ ವಿ.ವಿ.ಯ ಕುಲಪತಿಗಳಾಗಿ ಕರ್ತವ್ಯ ನಿರ್ವಹಿಸಿದವರು .

ಕನ್ನಡದ ಕಟ್ಟಾಳು ಎಂದೇ ತಮ್ಮನ್ನು ಗುರುತಿಸಿಕೊಂಡಿದ್ದ ಹಾ.ಮಾ. ನಾಯಕರು ತಮ್ಮ ಅಪಾರ ವಿದ್ವತ್ತಿನಿಂದ , ದಕ್ಷ ಆಡಳಿತದಿಂದ , ಸ್ನೇಹಪರ ಗುಣಪಕ್ಷಪಾತದಿಂದ ಹೆಸರಾಗಿದ್ದರು . ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ಖ್ಯಾತ ಅಂಕಣಕಾರರೆನಿಸಿದ್ದರು . ತಮ್ಮ ‘ ಸಂಪ್ರತಿ ‘ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಪಡೆಯುವ ಮೂಲಕ ದೇಶದಲ್ಲೇ ಅಂಕಣ ಬರಹಕ್ಕೆ ಮಾನ್ಯತೆಯನ್ನು ತಂದುಕೊಟ್ಟರು .

೧೯೮೫ ರಲ್ಲಿ ಬೀದರಿನಲ್ಲಿ ನಡೆದ ಐವತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಾ.ಮಾ. ನಾಯಕರು ಬಾಟಗಳು , ಸಂಪ್ರತಿ , ಸಲ್ಲಾಪ , ಸಂಭ್ರಮ , ಸೂಲಂಗಿ , ಸಂಪಣ , ಭಾರತದ ಧರ್ಮ , ರವೀಂದ್ರನಾಥ ಠಾಕೂರ್ , ಸಂಗತಿ , ನಮ್ಮ ಮನೆಯ ದೀಪ ಮುಂತಾದ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ . ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಹಾ.ಮಾ. ನಾಯಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ಐಬಿಎಚ್ ಪ್ರಶಸ್ತಿ , ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಇತ್ಯಾದಿ ಪುರಸ್ಕಾರಗಳು ಸಂದಿವೆ . ಬೀದರ್‌ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವನ್ನು ಅವರು ಕನ್ನಡವನ್ನು ಕಟ್ಟುವ ಕೆಲಸ ‘ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದರು . ಕನ್ನಡಕ್ಕೆ ಆಗಬೇಕಾಗಿರುವ ಕಾರ್ಯಸ್ವರೂಪದ ಬಹುಸೂಕ್ಷ್ಮ ಸಂಗತಿಗಳತ್ತ ಹಾಮಾನಾ ಇಲ್ಲಿ ಜನರ ಮತ್ತು ಆಳುವವರ ಗಮನ ಸೆಳೆದಿರುವುದನ್ನು ಮನಗಾಣಬಹುದು . ಅವರು ಚರ್ಚಿಸಿರುವ ಅನೇಕ ಸಂಗತಿಗಳಲ್ಲಿ ಕೆಲವನ್ನು ಇಲ್ಲಿ ಸಂಕಲಿಸಲಾಗಿದೆ .

ಕನ್ನಡವನ್ನು ಕಟ್ಟುವ ಕೆಲಸ Notes

ಶಬ್ದಾರ್ಥ :

ಸ್ಪುರಿಸು – ಮಿಂಚು , ಬುದ್ಧಿಗೆ ಗೋಚರಿಸು ; ಖಿಲ – ಪಾಳುಬೀಳು , ಶೂನ್ಯವಾಗು ; ಖೇದ – ದುಃಖ ; ಕ್ರೋಧ ಕೋಪ ; ಕುತ್ತು – ಆಪಾಯ ; ಪರದೇಶಿ – ದಿಕ್ಕಿಲ್ಲದವರು , ಹೊರನಾಡಿನವರು ; ದುರ್ದೈವ – ಕೆಟ್ಟ ಅದೃಷ್ಟ , ದೌರ್ಭಾಗ್ಯ ; ಪ್ರತಿಷ್ಠೆ – ಘನತೆ , ಗರ್ವ : ಕೃತಕ – ಸಹಜವಲ್ಲದ , ತೀವ್ರತರ – ಹರಿತ , ಉಗ್ರವಾದ ; ಅಂಗುಲ ಒಂದು ಇಂಚು , ಬೆರಳು .

ದ್ವಿತೀಯ ಪಿ.ಯು.ಸಿ ಕನ್ನಡವನ್ನು ಕಟ್ಟುವ ಕೆಲಸ ಕನ್ನಡ ನೋಟ್ಸ್‌ 2 PUC Kannadavannu Kattuva Kelasa Kannada Notes.
2 PUC Kannadavannu Kattuva Kelasa Kannada Notes.

ಪಾಠದ ಆಶಯ :

ನಮ್ಮ ಹಿರಿಯರನೇಕರು ಈ ನಾಡು – ನುಡಿಗಳನ್ನು ಕಟ್ಟಿ ಬೆಳೆಸಿದ್ದಾರೆ . ಈ ಕಟ್ಟುವ ಕೆಲಸವನ್ನು ಇಂದಿನವರು ಮುಂದುವರೆಸಿಕೊಂಡು ಹೋಗಬೇಕಾಗಿದೆ . ಈ ಕೆಲಸ ಸತತವಾಗಿ ನಡೆಯಬೇಕಾಗಿರುವಂಥದ್ದು , ನಮ್ಮ ಭಾಷೆ – ಸಾಹಿತ್ಯಗಳ ಅಭಿವೃದ್ಧಿಗಾಗಿ , ಕನ್ನಡನಾಡಿನ ಸರ್ವಾಂಗೀಣ ಬೆಳವಣಿಗೆಗಾಗಿ ನಾವೆಲ್ಲರೂ ಸಂಕಲ್ಪ ಬಲದಿಂದ ದುಡಿಯಬೇಕಾಗಿದೆ . ಭಾಷೆ ಬೆಳೆದರೆ ಸಂಸ್ಕೃತಿಯೂ ಬೆಳೆಯುತ್ತದೆ . ಶ್ರೀಮಂತ ಭಾಷೆಯಲ್ಲಿ ಮಾತ್ರವೇ ವಿಚಾರಗಳು ಸ್ಪಂದಿಸಬಲ್ಲವು . ಸಮಾಜದ ಆರೋಗ್ಯ ಪಾಲನೆಯಲ್ಲಿ ಭಾಷೆಯದೂ ಮಹತ್ವದ ಪಾಲಿದೆ . ಭಾಷೆಯ ರಕ್ಷಣೆ ಹಾಗೂ ಸಂವರ್ಧನೆ , ಅದರ ಬಳಕೆ ಹಾಗೂ ಪಚಾರವನ್ನು ಹೆಚ್ಚಿಸುವುದಕ್ಕೆ ಒಟ್ಟು ಸಮಾಜ , ಸರಕಾರಗಳು ಒಂದಾಗಿ ಸೇರಿ , ಕಾರ್ಯಪ್ರವೃತ್ತವಾಗಬೇಕಾಗುತ್ತದೆ . ಭಾಷೆಗೆ ಪ್ರೋತ್ಸಾಹದ ನೀರೆರೆಯಬೇಕಾಗುತ್ತದೆ . ಅದಕ್ಕೆ ಗಾಳಿ , ಬೆಳಕು ದೊರೆಯುವಂತಹ ವಾತಾವರಣವನ್ನು ಕಲ್ಪಿಸಬೇಕಾಗುತ್ತದೆ . ಪರ ಆಕ್ರಮಣದಿಂದ ರಕ್ಷಣೆ ಕೊಡಬೇಕಾಗುತ್ತದೆ . ಇವೆಲ್ಲವೂ ಅನ್ವಯವಾಗುವಂತಹ ಪರಿಸ್ಥಿತಿ ಇಂದು ಕನ್ನಡ ಭಾಷೆಗ ಇದೆ .

ಡಾ ಹಾ.ಮಾ. ನಾಯಕರು ಕನ್ನಡ ನಾಡು – ನುಡಿಗೆ ಅತ್ಯಗತ್ಯವೂ ಕಾರ್ಯಸಾಧ್ಯವೂ ಆಗಿರುವಂತಹ ಸಲಹೆ – ಸೂಚನೆಗಳನ್ನು ಪ್ರಸ್ತುತ ಲೇಖನದಲ್ಲಿ ನೀಡಿದ್ದಾರೆ. ಭಾಷೆ ಬೆಳೆಯದೆ ಜನ ಬೆಳೆಯುವುದಿಲ್ಲ . ನಾಡೂ ಬೆಳೆಯುವುದಿಲ್ಲ , ಸಾಹಿತ್ಯವೂ ಬೆಳೆಯುವುದಿಲ್ಲ . ಭಾಷೆ – ಸಂಸ್ಕೃತಿಗಳನ್ನು ಬೆಳೆಸಿಕೊಳ್ಳದ ಜನಾಂಗ ಅಂತರಿಕ ಚೈತನ್ಯವನ್ನು ಕಳೆದುಕೊಳ್ಳುತ್ತದೆ . ಅಂತಹ ಜನಾಂಗದ ಹೊರ ಬದುಕು ಬೆಳೆದರೂ ಒಳಬದುಕು ಬರಡಾಗುತ್ತದೆ .

KannadaVannu Kattuva Kelasa Question Answer

I. ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

1 ) ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ ಯಾವುದು ?

ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ ‘ ಬೌದ್ಧಧರ್ಮ ”

2 ) ಪ್ರಾಂತೀಯ ಭಾಷೆಗಳ ಸ್ಥಾನವನ್ನು ಆಕ್ರಮಿಸುತ್ತಿರುವ ಭಾಷೆಗಳಾವುವು ?

ಪ್ರಾಂತೀಯ ಭಾಷೆಗಳ ಸ್ಥಾನವನ್ನು ಆಕ್ರಮಿಸುತ್ತಿರುವ ಭಾಷೆ ಇಂಗ್ಲೀಷ್ ಮತ್ತು ಹಿಂದಿ .

3 ) ಯಾವ ಮರ್ಯಾದೆ ನಾವು ಮೀರಬಾರದು ?

ಯಾವ ಯಾವ ಭಾಷೆಗೆ ಯಾವ ಯಾವ ಸ್ಥಾನವಿರಬೇಕೋ ಆ ಮರ್ಯಾದೆಯನ್ನು ಮೀರಬಾರದು .

4 ) ಎ . ಆರ್ ಕೃಷ್ಣಶಾಸ್ತ್ರಿಗಳು ಎಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ?

ಎ.ಆರ್.ಕೃಷ್ಣಶಾಸ್ತ್ರಿಗಳು ಹೈದ್ರಾಬಾದಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .

5 ) ಸ್ಥಳೀಯ ಭಾಷೆ ಕಲಿಯದ ಅನ್ಯಭಾಷಿಕರು ಏನಾಗುತ್ತಾರೆ ?

ಸ್ಥಳೀಯ ಭಾಷೆ ಕಲಿಯದ ಅನ್ಯಭಾಷಿಕರು , “ ದ್ವೀಪ ಜೀವಿಗಳಾಗಿ ಉಳಿಯಬೇಕಾಗುತ್ತದೆ ”

6 ) ಯಾವುದು ನಮ್ಮ ಮೈಗೆ ಹತ್ತುವುದು ?

ನಮ್ಮ ಭಾಷೆಯಲ್ಲಿ ಓದಿದ್ದೆ ನಮ್ಮ ಮೈ ಹತ್ತುವುದು .

7 ) ಭಾಷೆ ಯಾವುದಕ್ಕಿಂತ ದೊಡ್ಡದು ?

ಬದುಕು ಭಾಷೆಗಿಂತ ದೊಡ್ಡದು , ಆದರೆ ಭಾಷೆಯನ್ನು ಬಿಟ್ಟು ಬದುಕು ಇರುವುದಿಲ್ಲ .

8 ) ಕನ್ನಡದ ಮೂಲಕ ಕಲಿತು ಶ್ರೇಷ್ಟ ವಿಜ್ಞಾನಿಯಾದವರು ಯಾರು ?

ಕನ್ನಡದ ಮೂಲಕ ಕಲಿತು ಶ್ರೇಷ್ಟ ವಿಜ್ಞಾನಿಯಾದವರು ಡಾ || ಸಿ.ಎನ್.ಆರ್ . ರಾವ್‌ರವರು .

9 ) ತಮ್ಮ ರಾಜ್ಯದಲ್ಲಿ ತಾವೇ ತಬ್ಬಲಿಗಳಾಗುತ್ತಿರುವವರು ಯಾರು ?

ಕನ್ನಡಿಗರು , ಕನ್ನಡ ನಾಡಿನಲ್ಲಿ ತಾವೇ ತಬ್ಬಲಿಗಳಾಗುತ್ತಿರುವವರಾಗಿದ್ದಾರೆ .

10 ) ಕನ್ನಡದ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ನಾವು ಏನು ಮಾಡಬೇಕು ?

ಕನ್ನಡದ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ನಾವು ಮೊದಲು ಕನ್ನಡಿಗರಾಗಬೇಕು .

II. ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

2nd Puc Chapter 4 KannadaVannu Kattuva Kelasa Question Answer

1 ) ತ್ರಿಭಾಷಾ ಸೂತ್ರದ ಬಳಕೆ ಹೇಗಿರಬೇಕು ?

ಪ್ರತಿಯೊಂದು ರಾಜ್ಯ ಹಾಗೂ ಕೇಂದ್ರ ಕಛೇರಿ ಹಾಗೂ ಸಂಸ್ಥೆಗಳಲ್ಲಿ ಫಲಕಗಳು ಹಾಗೂ ಸೂಚನೆಗಳು ಕರ್ನಾಟಕದ ಪ್ರಥಮ ಭಾಷೆ ಕನ್ನಡ ತ ಇಂಗ್ಲೀಷ್ ಹಾಗೂ ಹಿಂದಿಗಳಲ್ಲಿ ಇರಬೇಕು . ಶಾಲೆಗಳಲ್ಲಿ ಇದು ಆಚರಣೆಯಲ್ಲಿರಬೇಕು . ಆಗ ಮಾತ್ರ ತ್ರಿಭಾಷಾ ಸೂತ್ರ ಬಳಕೆಯಾದಂತಾಗುತ್ತದೆ .

2 ) ಎ.ಆರ್ . ಕೃಷ್ಣ ಶಾಸ್ತ್ರಿಗಳ ಭಾಷಣ ಓದಿ ಲೇಖಕರಲ್ಲಿ ಮೂಡಿದ ಭಾವನೆಗಳಾವುವು?

ಎ.ಆರ್ . ಕೃಷ್ಣ ಶಾಸ್ತ್ರಿಗಳ ಭಾಷಣ ಓದಿ ಲೇಖಕರಲ್ಲಿ ಉಂಟಾದ ಭಾವನೆಗಳೆಂದರೆ , ಮನಸ್ಸಿನಲ್ಲಿ ದುಃಖ , ಭಯ , ಕೋಪ , ಅಸಹಾಯಕತೆಯ ಭಾವನೆಗಳು ಮೂಡಿದವು . ಅವು ಸಂಸ್ಕೃತವನ್ನು ಇಲ್ಲಿ ಕೈ ಮಾಡಿ ತೋರಿಸಿರುವರಾದರೂ ಸಂದರ್ಭವು ಕನ್ನಡದ ಎಲ್ಲಾ ಕುತ್ತುಗಳನ್ನು ಪ್ರಾತಿನಿಧಿಕವಾಗಿ ಸಂಕೇತಿಸುತ್ತದೆ , ಆದ್ದರಿಂದ ಮೇಲ್ಕಂಡ ಎಲ್ಲಾ ಭಾವನೆಗಳು ಮೂಡಿ ಕನ್ನಡವನ್ನು ಉಳಿಸುವ ಪ್ರಯತ್ನಗಳು ನಡೆದವು .

3 ) ಕರ್ನಾಟಕದಲ್ಲಿ ಕನ್ನಡಕ್ಕೆ ಯಾವ ಸ್ಥಾನವಿರಬೇಕೆಂದು ಹಾಮಾನಾ ಅಪೇಕ್ಷಿಸಿದ್ದಾರೆ ?

ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನವಿರಬೇಕೆಂದು , ಪ್ರಧಾನ , ರಾಜ , ರಾಣಿ , ರಾಜಕುಮಾರ ಎಲ್ಲ , ಮಿಕ್ಕ ಯಾವ ಭಾಷೆಯಾದರೂ ಇಲ್ಲಿ ಸೇವಕರ ಸ್ಥಾನದಲ್ಲಿರಬೇಕು ಎಂದು ಹಾಮಾನಾರವರು ಆಪೇಕ್ಷಿಸಿದ್ದಾರೆ .

4 ) ಲೇಖಕರಲ್ಲಿ ಕನ್ನಡ ಪ್ರೀತಿ ಸ್ಪುರಿಸಿದ್ದು ಹೇಗೆ ?

ಲೇಖಕರಲ್ಲಿ ಕನ್ನಡದ ಪ್ರೀತಿ ಸ್ಪುರಿಸಿದ್ದು , ಮಾಸ್ತಿ , ಕುವೆಂಪು , ತೀನಂಶ್ರೀ ಅವರ ಪದ್ಯಗಳನ್ನು ಪಠ್ಯ ಪುಸ್ತಕಗಳಲ್ಲಿ ಓದಿದಾಗ ಸುರಿಸಿದ್ದು , ಬಿ.ಎಂಶ್ರೀ , ಆಲೂರು , ಮುದವೀಡರ ರೂಪಿತವಾದುದ್ದು , ಮುಂದೆ ಗಾಂಧೀ , ವಿನೋಬಾ ಮೊದಲಾದವರ ಚಿಂತನೆಗಳಿಂದ ಹರಳುಗೊಂಡಿದ್ದು , ಎ.ಆರ್.ಕೃಷ್ಣಶಾಸ್ತ್ರಿಗಳ ಅಧ್ಯಕ್ಷ ಭಾಷಣವನ್ನು ಓದಿದ ನಂದ ಲೇಖಕರಲ್ಲಿ ಕನ್ನಡದ ಪ್ರೀತಿ ಸ್ಪುರಿಸಿತು .

5 ) ಕೇಂದ್ರದ ರೈಲು , ಅಂಚೆ ಇಲಾಖೆಗಳು ಯಾವ ಧೋರಣೆ ಬೆಳೆಸಿಕೊಂಡಿದೆ ?

ಕೇಂದ್ರದ ರೈಲು , ಅಂಚೆ ಇಲಾಖೆಗಳು ಪ್ರಾದೇಶಿಕ ಭಾಷೆಗಳ ಮೇಲೆ ಸಾಕಷ್ಟು ಮಲತಾಯಿ ಧೋರಣೆ ಬೆಳೆಸಿಕೊಂಡಿವೆ . ಕೇಂದ್ರಾಡಳಿತದ ಯಾವುದೇ ಸಂಸ್ಥೆಗಳಿಗೆ ಹೋದರೂ ನಾವು ಪರದೇಶಿಗಳೆಂಬ ಭಾವನೆ ಬರುತ್ತದೆ .

6 ) ನಮ್ಮ ಸಾರ್ವಜನಿಕರ ಶಾಲೆಗಳ ಬಗ್ಗೆ ಲೇಖಕರ ಅಭಿಪ್ರಾಯವೇನು ?

ಪ್ರತಿಯೊಬ್ಬ ತಂದೆ – ತಾಯಿಗಳಿಗೂ ತಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು ಎಂಬುದು ಆಸೆಯಾಗಿರುತ್ತದೆ ಆದರೆ ನಮ್ಮ ಸಾರ್ವಜನಿಕರ ಶಾಲೆಗಳ ಕಟ್ಟಡಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ . ತರಗತಿಗಳು ದೊಡ್ಡಿ , ಅಧ್ಯಾಪಕರಿಲ್ಲದ ತರಗತಿಗಳು , ಶಿಸ್ತು – ಸುಸ್ತಾಗಿರುತ್ತದೆ . ಎಲ್ಲಿಯವರೆಗೆ ನಮ್ಮ ಈ ಸಾರ್ವಜನಿಕರ ಶಾಲೆಗಳು ಉತ್ತಮವಾಗುವುದಿಲ್ಲವೋ ಅಲ್ಲಿಯವರೆಗೆ ಶಿಕ್ಷಣದಲ್ಲಿ ಕನ್ನಡ ಆಕರ್ಷಕವೆನಿಸುವುದಿಲ್ಲ . ಎಂಬುದಾಗಿ ಲೇಖಕರು ಅಭಿಪ್ರಾಯ ಪಡುತ್ತಾರೆ .

7 ) ಕುಂಡದಲ್ಲಿ ನೆಟ್ಟ ಗಿಡಗಳ ಸ್ಥಿತಿ ಹೇಗಿರುತ್ತದೆ ?

ಕುಂಡದಲ್ಲಿ ನೆಟ್ಟ ಗಿಡಗಳಂತೆ ಬೇರು ನೆಲಕ್ಕಿಳಿಯುವುದಿಲ್ಲ , ಭೂಮಿಯ ಸಾರವನ್ನು ಅವು ಗ್ರಹಿಸುವುದಿಲ್ಲ . ಹಾಕಿದ ಹಿಡಿದ ಗೊಬ್ಬರದಲ್ಲೇ ಅದು ಜೀವಮಾನವನ್ನು ಕಳೆಯಬೇಕು . 8. ಕನ್ನಡದ ಸಮಸ್ಯೆಗಳು ಎಲ್ಲಿಯವರೆಗೆ ಇದ್ದೇ ಇರುತ್ತದೆ ? ಎಲ್ಲಿಯವರೆಗೆ ಕನ್ನಡ ನಮ್ಮ ಆಡಳಿತ , ಶಿಕ್ಷಣದಲ್ಲಿ ಪ್ರಥಮವೂ , ಪ್ರಧಾನವೂ ಆಗಿರುವುದಿಲ್ಲವೋ , ಎಲ್ಲಿಯವರೆಗೆ ಅದು ಜನಜೀವನವನ್ನು ತುಂಬಿಕೊಳ್ಳುವುದಿಲ್ಲವೋ , ಎಲ್ಲಿಯವರೆಗೆ ಕನ್ನಡಿಗರು ಸ್ವಾಭಿಮಾನಿಗಳಾಗುವುದಿಲ್ಲವೋ , ಅಲ್ಲಿಯವರೆಗೂ ಕನ್ನಡದ ಸಮಸ್ಯೆಗಳು ಇದ್ದೇ ಇರುತ್ತದೆ .

8 ) ಕನ್ನಡದ ಬಗ್ಗೆ ಮಾತಾಡಲು ನಾವು ಯೋಗ್ಯತೆ ಗಳಿಸುವುದು ಯಾವಾಗ ?

ಪ್ರತಿಯೊಬ್ಬ ಕನ್ನಡಿಗನೂ ಪ್ರತಿಯೊಂದು ಅಂಗುಲದಲ್ಲಿಯೂ ಕನ್ನಡಿಗನಾಗಬೇಕು , ಕನ್ನಡ ಕನ್ನಡ ಎನ್ನುವ ನಾವು ನಮ್ಮನ್ನು ಪ್ರಶ್ನಿಸಿಕೊಳ್ಳುವಂತಾಗಬೇಕು , ನಾವು ಯಾವ ಪತ್ರಿಕೆ ಓದುತ್ತಿದ್ದೇವೆ ? ಯಾವ ಸಿನಿಮಾ ನೋಡುತ್ತಿದ್ದೇವೆ ? ಮನೆಗೆ ಯಾವ ಭಾಷೆಯಲ್ಲಿ ಬೋರ್ಡ್ ಇದೆ ? ಇವುಗಳ ಉತ್ತರ ನಮ್ಮನ್ನು ಚುಚ್ಚದಿದ್ದರೆ ಮಾತ್ರ ನಾವು ಕನ್ನಡವನ್ನು ಕುರಿತು ಮಾತಾಡಲು ಯೋಗ್ಯತೆಗಳಿಸಿಕೊಂಡಿದ್ದೇವೆ ಎಂಬುದು ತಿಳಿಯುವುದು .

III. ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕದ ಪ್ರಶ್ನೆಗಳು )

2nd PUC Kannadavannu Kattuva Kelasa Notes Question Answer

1) ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಕನ್ನಡತನವಿಲ್ಲದಿರುವ ಬಗ್ಗೆ ಹಾಮಾನಾ ಹೇಗೆ ಟೀಕಿಸಿದ್ದಾರೆ ?

ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ರೈಲ್ವೆ , ಅಂಚೆ ಮತ್ತು ತಂತಿ ಇಲಾಖೆಗಳು , ಬ್ಯಾಂಕ್‌ಗಳು , ಲೈಫ್ ಇನ್ಸೂರೆನ್ಸ್ ಕಾರ್ಪೋರೇಷನ್ ಸಂಸ್ಥೆಗಳು ಹಿಂದಿ – ಇಂಗ್ಲೀಷ್ನಾವು ಯಾವುದೇ ಕಛೇರಿಗೆ ಹೋದರೂ ನಾವು ಪರದೇಶಿಗಳೆಂಬ ಭಾವನೆ ಬರುತ್ತದೆ . ಭಾಷೆಗಳಲ್ಲಿ ಫಲಕಗಳು ಹಾಗೂ ಸೂಚನಾ ಫಲಕಗಳನ್ನು ಹಾಕಿಕೊಂಡಿರುತ್ತವೆ . ಅಲ್ಲಿಯವರೆಗೆ ಇದು ಜನಜೀವನದಿಂದ ಹೊರಗೆ ಉಳಿಯುತ್ತದೆ ಎಂದು ಹಾಮಾನಾ ಎಲ್ಲಿಯವರೆಗೆ ಈ ಸಂಸ್ಥೆಗಳಲ್ಲಿ ನಮ್ಮದೇ ಭಾಷೆ ಕನ್ನಡದ ಬಳಕೆಯಾಗುವುದಿಲ್ಲವೆ ಟೀಕಿಸಿದ್ದಾರೆ .

2 ) ಹೊರನಾಡಿನಿಂದ ಬಂದು ಕನ್ನಡ ನಾಡಿನಲ್ಲಿ ನೆಲೆಸಿರುವವರ ಲೇಖಕರು ಹೇಗೆ ವಿವರಿಸಿದ್ದಾರೆ ?

ಜವಾಬ್ದಾರಿಗಳನ್ನು ಹೊರನಾಡಿನಿಂದ ಬಂದು ಕನ್ನಡ ನಾಡಿನಲ್ಲಿ ನೆಲೆಸಿರುವವರ ಜವಾಬ್ದಾರಿಗಳನ್ನು ಲೇಖಕರು ಬಹಳ ಸ್ಪಷ್ಟವಾಗಿ ವಿವರಿಸಿದ್ದಾರೆ . ನಮ್ಮ ರಾಜ್ಯದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಬದುಕುವ ಜನ ಇನ ಭಾಷೆ ಬಳಸುವುದು ಅನಿವಾರವಾಗುತ್ತದೆ . ನಮ್ಮ ನೆಲ ಜಲ ಬಯಸುವವರು : ಭಾಷೆಯನ್ನು ಸ್ವೀಕರಿಸುವಂತೆ ಮಾಡುವುದು ಸರ್ಕಾರ ಹಾಗೂ ಸಾರ್ವಜನಿಕರ ಕರ್ತವ್ಯವಾಗಿದೆ . ಶಿಕ್ಷಣದಲ್ಲಿಯೂ ತ್ರಿಭಾಷಾ ಸೂತ್ರವನ್ನು ಅಳವಡಿಸಿ ಯಾರೇ ಆಗಿದ್ದರೂ ಸರಿ ಕನ್ನಡವನ್ನು ಒಂದು ಭಾಷೆಯಾಗಿ ಮಾಡಲೇಬೇಕು ಎಂದು ವಿವರಿಸಿದ್ದಾರೆ .

3 ) ನಮಗೆ ಬೇಕಾಗಿರುವ ಕನ್ನಡ ಮಾಧ್ಯಮ ಶಿಕ್ಷಣ ಮತ್ತು ಇಂಗ್ಲೀಷ್ ಭಾಷೆಯ ಸಂಬಂಧ ಯಾವ ಸ್ವರೂಪದ್ದಾಗಿರಬೇಕೆಂದು ಲೇಖಕರು ಹೇಳಿದ್ದಾರೆ ?

ನಮಗೆ ಬೇಕಾಗಿರುವ ಕನ್ನಡ ಮಾಧ್ಯಮ ಶಿಕ್ಷಣ ಮತ್ತು ಇಂಗ್ಲೀಷ್ ಭಾಷೆಯ ಸಂಬಂಧಗಳ ಸ್ವರೂಪದ ಬಗ್ಗೆ ಲೇಖಕರು ಸ್ಪಷ್ಟವಾಗಿ ವಿವರಿಸಿದ್ದಾರೆ . ಇಂಗ್ಲೀಷ್‌ನ್ನು ಭಾಷೆಯನ್ನಾಗಿ ಕಲಿಸಬೇಕು , ಆದರೆ ಇತರ ವಿಷಯಗಳೆಲ್ಲವನ್ನು ನಮ್ಮ ಕನ್ನಡ ಮಾಧ್ಯಮದಲ್ಲಿಯೇ ಬೋಧಿಸಬೇಕು . ಭಾಷೆಯನ್ನು ಕಲಿಸುವುದು , ಭಾಷೆಗಳ ಮೂಲಕ ಕಲಿಸುವುದರ ಅಂತರವನ್ನು ಕಲಿಸುವವರು ತಿಳಿದಿರಬೇಕು . ಕನ್ನಡ ಮಾಧ್ಯಮವಾಗಬೇಕು ಎಂದರೆ ಇಂಗ್ಲೀಷ್ ಕಲಿಸಬಾರದು ಎಂದಲ್ಲ . ನಮ್ಮ ಭಾಷೆಯಲ್ಲಿ ಓದಿದ್ದು ನಮ್ಮ ತಲೆಗೆ ಬೇಗ ಹತ್ತುತ್ತದೆ ಎಂಬುದಾಗಿ ತಿಳಿಸಿದ್ದಾರೆ .

4 ) ಪೋಷಕರು ಖಾಸಗಿ ಶಾಲೆಗಳ ಕಡೆ ಹೊರಳು ಲೇಖಕರು ಯಾವ ಕಾರಣಗಳನ್ನು ಉದಾಕರಿಸುತ್ತಾರೆ ?

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಉತ್ತಮ ಶಾಲೆಗಳಲ್ಲಿ ಓದಬೇಕು , ಶಿಸ್ತು , ಸ್ವಚ್ಛತೆ , ಕಲಿತು ಒಳ್ಳೆಯ ಬುದ್ದಿವಂತರಾಗಬೇಕು ಎಂದು ಆಶಿಸುವುದು ಸಹಜವೇ ಸಾಹಿತ್ಯ ಸಂಪದ ಆಗಿರುತ್ತದೆ . ಅವರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಆಕಾಂಕ್ಷಿಗಳಾಗಿರುತ್ತಾರೆ . ಆದರೆ ಇವೆಲ್ಲ ನಮ್ಮ ಸಾರ್ವಜನಿಕ ಶಾಲೆಗಳಲ್ಲಿ ಮರೀಚಿಕೆಯಾಗಿದೆ . ಕುಸಿದು ಬೀಳುವ ಕಟ್ಟಡಗಳು , ದೊಡ್ಡಿಯಂತಿರುವ ತರಗತಿಗಳು , ಅಧ್ಯಾಪಕರಿಲ್ಲದ ತರಗತಿಗಳು , ಅನರ್ಹ ಅಧ್ಯಾಪಕರು , ಅಶಿಸ್ತಿನ ಅವ್ಯವಸ್ಥೆ , ಮೂತ್ರ – ದುರ್ವಾಸನೆಯ ಪರಿಸರ ಇರುವಾಗ ಪೋಷಕರು ಸಹಜವಾಗಿಯೇ ಖಾಸಗಿ ಶಾಲೆಗಳ ಕಡೆ ಹೊರಳುತ್ತಾರೆ ಎಂಬುದಾಗಿ ಲೇಖಕರು ತಿಳಿಸಿದ್ದಾರೆ .

5 ) ಕನ್ನಡಿಗರೆನ್ನಿಸಿಕೊಳ್ಳಲು ಯಾವ ಯೋಗ್ಯತೆಯ ಪ್ರಶ್ನೆಗಳು ನಮ್ಮನ್ನು ಚುಚ್ಚಬೇಕು ? ವಿವರಿಸಿ .

ಕನ್ನಡಿಗರೆನ್ನಿಸಿಕೊಳ್ಳಲು ನಾವು ಎಷ್ಟು ಯೋಗ್ಯತೆಯನ್ನು ಹೊಂದಿದ್ದೇವೆ ? ಎಂಬುದಕ್ಕೆ ನಾವೇ ಪ್ರಶ್ನಿಸಿಕೊಂಡಾಗ ನಾವು ಎಷ್ಟರ ಮಟ್ಟಿಗೆ ಕನ್ನಡ ಮಾತಾಡುತ್ತಿದ್ದೇವೆ ? ನಮ್ಮ ಮಕ್ಕಳನ್ನು ಯಾವ ಶಾಲೆಗಳಲ್ಲಿ ಓದಿಸುತ್ತಿದ್ದೇವೆ ? ಯಾವ ಪತ್ರಿಕೆ ಓದುತ್ತಿದ್ದೇವೆ ? ಯಾವ ಭಾಷೆಯ ಸಿನಿಮಾ ನೋಡುತ್ತಿದ್ದೇವೆ ? ನಮ್ಮ ಮನೆಯ ಬೋರ್ಡ್ ಯಾವ ಭಾಷೆಯಲ್ಲಿದೆ ? ಇಂಥಹ ಹಲವಾರು ಪ್ರಶ್ನೆಗಳನ್ನು ಕೇಳಿ ಕೊಳ್ಳಬೇಕು . ಇವುಗಳ ಉತ್ತರ ನಮ್ಮನ್ನು ಚುಚ್ಚದಿದ್ದರೆ ಮಾತ್ರ ನಾವು ಕನ್ನಡವನ್ನು ಕುರಿತು ಮಾತಾಡಲು ಯೋಗ್ಯತೆ ಗಳಿಸಿಕೊಂಡಿದ್ದೇವೆ ಎಂದು ಅರ್ಥವಾಗುತ್ತದೆ ಎಂದು ಹಾಮಾನಾರವರು ತಿಳಿಸಿದ್ದಾರೆ .

IV. ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

1) “ ಇಂಗ್ಲಿಷ್‌ ಹಿಂದಿ ಬಾರದವರು ವಿಮಾನ ಪ್ರಯಾಣ ಮಾಡಬಾರದೆ ? ”

ಡಾ ಹಾ.ಮಾ. ನಾಯಕರು ತಮ್ಮ ಕನ್ನಡವನ್ನು ಕಟ್ಟುವ ಕೆಲಸ ‘ ಎಂಬ ಲೇಖನದಲ್ಲಿ ಈ ಮೇಲಿನಂತೆ ಪ್ರಶ್ನಿಸಿದ್ದಾರೆ . ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಸೂಚನೆಗಳಿರದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಲೇಖಕರು ಕೇಂದ್ರ ಸರ್ಕಾರವು ಕನ್ನಡಕ್ಕೆ ತೋರಿಸಿರುವ ಮರಾದೆಯಿದೆಂದು ವ್ಯಂಗ್ಯವಾಡಿದ್ದಾರೆ . ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಸೂಚನೆಗಳಿಲ್ಲದಿದ್ದರೆ , ಇನ್ನು ಯಾವ ಕಡೆ ಇರುವುದು ಸಾಧ್ಯ ? ಎಂದು ಪ್ರಶ್ನಿಸಿರುವ ಲೇಖಕರು ವಿಮಾನ ನಿಲ್ದಾಣದ ಎಲ್ಲ ಪ್ರಕಟಣೆಗಳೂ ಪ್ರಾದೇಶಿಕ ಭಾಷೆಗಳಲ್ಲಿರುವುದು ಅಗತ್ಯವೆಂದಿದ್ದಾರೆ . ಬರೀ ಇಂಗ್ಲಿಷ್ – ಹಿಂದಿಗಳಲ್ಲಿ ಮಾತ್ರವೇ ಸೂಚನೆಗಳಿರುವುದಾದರೆ ಇಂಗ್ಲಿಷ್ – ಹಿಂದಿ ಬಾರದವರು ಈ ದೇಶದಲ್ಲಿ ವಿಮಾನ ಪ್ರಯಾಣ ಮಾಡಬಾರದೆ ? ಎಂದು ಕೇಳಿದ್ದಾರೆ . ಕೇಂದ್ರ ಸರ್ಕಾರವು ಪ್ರಾದೇಶಿಕ ಭಾಷೆಗಳನ್ನು ಗೌರವಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ .

2 ) “ ನಾವು ಪರದೇಶಿಗಳೆಂಬ ಭಾವನೆ ಬರುತ್ತದೆ . ”

ಡಾ ಹಾ.ಮಾ. ನಾಯಕರು ರಚಿಸಿರುವ ಕನ್ನಡವನ್ನು ಕಟ್ಟುವ ಕೆಲಸ ‘ ಎಂಬ ಲೇಖನದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು . ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ವಿವರಿಸುತ್ತಾ ಲೇಖಕರು ಈ ಮೇಲಿನ ಮಾತನ್ನಾಡಿದ್ದಾರೆ . ರೈಲ್ವೆ ಅಂಚೆ ಮತ್ತು ತಂತಿ ಇಲಾಖೆಗಳಲ್ಲಿ ಕನ್ನಡದ ವಾತಾವರಣವೇ ಇರುವುದಿಲ್ಲ . ಕನ್ನಡ ನಾಡಿನ ಸಣ್ಣಪುಟ್ಟ ಊರುಗಳಲ್ಲಿರುವ ರೈಲ್ವೆ ಸ್ಟೇಷನ್ನುಗಳಲ್ಲಿಯೂ ಹಿಂದಿ – ಇಂಗ್ಲಿಷ್‌ಗಳೇ ರಾರಾಜಿಸಿದರೆ ನಾವು ನಮ್ಮ ದೇಶದಲ್ಲಿದ್ದೇ ವೆಂಬ ಭಾವನೆ ಯಾರಿಗೂ ಬಾರದೆನ್ನುವ ಲೇಖಕರು ತಮ್ಮ ವಿಚಾರವನ್ನು ಮುಂದು ವರೆಸುತ್ತಾ ಲೈಫ್‌ ಇನ್‌ಶೂರೆನ್ಸ್ ಕಾರ್ಪೊರೇಷನ್ನಿನಂಥ ಸಂಸ್ಥೆಗಳು , ಬ್ಯಾಂಕುಗಳು ಹೀಗೆ ಕೇಂದ್ರಾಡಳಿತದ ಯಾವ ಸಂಸ್ಥೆಗಳಿಗೆ ಹೋದರೂ ನಾವು ಪರದೇಶಿಗಳೆಂಬ ಭಾವನೆ ಬರುತ್ತದೆ ಎಂದಿದ್ದಾರೆ . ಈ ಸಂಸ್ಥೆಗಳಲ್ಲಿ ನಮ್ಮದೇ ಭಾಷೆಗಳ ಬಳಕೆಯಾಗದಿದ್ದರೆ ಆ ಸಂಸ್ಥೆಗಳು ಜನಜೀವನದಿಂದ ಹೊರಗೇ ಉಳಿಯುತ್ತವೆಂದು ಎಚ್ಚರಿಸಿದ್ದಾರೆ .

3 ) “ ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೂ ನೋಡಲಾರಿರಿ . ”

ಡಾ || ಹಾ.ಮಾ. ನಾಯಕರು ಬರೆದಿರುವ ‘ ಕನ್ನಡವನ್ನು ಕಟ್ಟುವ ಕೆಲಸ ಎಂಬ ಲೇಖನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಇದು ಎ.ಆರ್ . ಕೃಷ್ಣಶಾಸ್ತ್ರಿಗಳು ತಮ್ಮ ಹೈದರಾಬಾದ್ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ನುಡಿಗಳಲ್ಲಿ ಹೇಳಿರುವ ಮಾತಾಗಿದೆ . ಸಂಸ್ಕೃತವು ಇಲ್ಲಿಂದ ಮರೆಯಾದರೆ ಅದು ಇನ್ನೊಂದೆಡೆ ಬಾಳಿ ಬದುಕುತ್ತದೆ . ಆದರೆ ಕನ್ನಡ ಭಾಷೆಯನ್ನು ಇಂಡಿಯ ದೇಶದ ದಕ್ಷಿಣ ಭಾಗದಲ್ಲಿ ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೂ ನೋಡಲು ಸಾಧ್ಯವಿಲ್ಲವೆಂದು ಕನ್ನಡಿಗರನ್ನು ಎಚ್ಚರಿಸಿರುವ ಕೃಷ್ಣಶಾಸ್ತ್ರಿಗಳು ಕನ್ನಡಿಗರು ಕನ್ನಡವನ್ನು ಅಲಕ್ಷ್ಯ ಮಾಡಿದರೆ , ಮಿಕ್ಕ ಯಾವ ದೇಶದ ಜನರೂ ಅದನ್ನು ಎತ್ತಿ ಹಿಡಿಯಲಾರರೆಂದಿದ್ದಾರೆ . ಶಾಸ್ತ್ರಿಗಳು ಕನ್ನಡಿಗರ ಜವಾಬ್ದಾರಿಯನ್ನು ಈ ಮೇಲಿನ ವಾಕ್ಯದ ಮೂಲಕ ತಿಳಿಸಿಕೊಟ್ಟಿದ್ದಾರೆ .

4 ) “ ನಮ್ಮ ಭಾಷೆಯಲ್ಲಿ ಓದಿದ್ದೇ ಮೈಗೆ ಹತ್ತುವುದು . ”

ಡಾ || ಹಾ.ಮಾ. ನಾಯಕರು ಬರೆದಿರುವ ‘ ಕನ್ನಡವನ್ನು ಕಟ್ಟುವ ಕೆಲಸ ಎಂಬ ಲೇಖನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಕಲಿಕೆಯ ಮಾಧ್ಯಮದ ವಿಚಾರ ಬಂದಾಗ ನಾಯಕರು ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸಿ , ವಿಷಯಗಳನ್ನು ನಮ್ಮ ಭಾಷೆಗಳಲ್ಲಿಯೇ ಕಲಿಸಬೇಕೆಂದು ಪ್ರತಿಪಾದಿಸಿದ್ದಾರೆ . ಕನ್ನಡ ಮಾಧ್ಯಮವಾಗಬೇಕು ಎಂದರೆ ಇಂಗ್ಲಿಷನ್ನು ಕಲಿಸಬಾರದು ಎಂದು ಅವರು ಹೇಳುತ್ತಿಲ್ಲ . ನಮ್ಮ ಭಾಷೆಯಲ್ಲಿ ಓದಿದ್ದೇ ಮೈಗೆ ಹತ್ತುತ್ತದೆ . ಆಧುನಿಕ ವಿಜ್ಞಾನವನ್ನು ನಮ್ಮ ಭಾಷೆಯಲ್ಲಿ ಕಲಿಸಲಾಗದು ಎಂಬುದು ಮೂಢನಂಬಿಕೆ ಎನ್ನುವ ನಾಯಕರು ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿ ಎನಿಸಿರುವ ಡಾ ಸಿ.ಎನ್.ಆರ್ . ರಾವ್ ಅವರ ಉದಾಹರಣೆ ನೀಡಿದ್ದಾರೆ . ಇಂಗ್ಲಿಷ್ ಪ್ರತಿಷ್ಠೆಯ ಸಂಕೇತವೆಂದು ಭಾವಿಸುವುದನ್ನು ಬಿಟ್ಟು ನಮ್ಮ ಭಾಷೆಯಲ್ಲಿ ಕಲಿಸಬೇಕೆಂದು ಲೇಖಕರು ವಾದಿಸುತ್ತಾರೆ .

5 ) “ ಒಂದೊಂದು ಭಾಷೆಯೂ ಒಂದೊಂದು ವರ . ”

ಡಾ ಹಾ.ಮಾ. ನಾಯಕರು ಬರೆದಿರುವ ‘ ಕನ್ನಡವನ್ನು ಕಟ್ಟುವ ಕೆಲಸ ಎಂಬ ಲೇಖನದಲ್ಲಿ ಈ ಮೇಲಿನ ವಾಕ್ಯವಿದೆ . ಇಂಗ್ಲಿಷ್ ಭಾಷೆ ನಮಗೆ ಬೇಕೆಂದು ಒಪ್ಪುವ ಲೇಖಕರು ಅದು ನಮ್ಮ ಭಾಷೆಯ ಬದಲಿಗೆ ಅಲ್ಲವೆಂದಿದ್ದಾರೆ . ನಮಗೆ ಇಂಗ್ಲಿಷ್ ಮಾತ್ರವಲ್ಲ ಇನ್ನೂ ಹಲವು ಭಾಷೆಗಳು ಬೇಕು . ಒಂದೊಂದು ಭಾಷೆಯೂ ಒಂದೊಂದು ವರ , ಒಂದೊಂದು ಜಗತ್ತು . ಆದರೆ ಯಾವ ಭಾಷೆ ಬೇಕೆಂಬುದು ನಮ್ಮ ಅಗತ್ಯಕ್ಕೆ ಸಂಬಂಧಿಸಿದ್ದು , ಹೊರ ಜಗತ್ತಿನ ಸಂಪರ್ಕಕ್ಕಾಗಿ ನಮಗೆ ಇಂಗ್ಲಿಷ್ ಬೇಕು . ಆದರೆ ಅದೇ ಸರ್ವ ಸ್ವವಾಗಿ ಅಲ್ಲ ಎಂದು ಡಾ ಹಾ.ಮಾ.ನಾ. ಸ್ಪಷ್ಟಪಡಿಸಿದ್ದಾರೆ .

6 ) “ ಕನ್ನಡಿಗರು ಮೊದಲು ಕನ್ನಡಿಗರಾಗಬೇಕು . ”

ಡಾ || ಹಾ.ಮಾ. ನಾಯಕರು ಬರೆದಿರುವ ‘ ಕನ್ನಡವನ್ನು ಕಟ್ಟುವ ಕೆಲಸ ‘ ಎಂಬ ವಿಚಾರಪೂರ್ಣ ಲೇಖನದ ಕೊನೆಯ ವಾಕ್ಯವಿದು . ಪ್ರತಿಯೊಬ್ಬ ಕನ್ನಡಿಗನೂ ಪ್ರತಿಯೊಂದು ಅಂಗುಲದಲ್ಲಿಯೂ ಕನ್ನಡಿಗನಾದಾಗ ಮಾತ್ರ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುವುದೆಂದು ಹೇಳುವ ಹಾ.ಮಾ.ನಾ. ಕನ್ನಡ ಹೇಳುವುದಕ್ಕೆ ಮಾತ್ರವಲ್ಲ , ಅನುಸರಿಸುವುದಕ್ಕೂ ಕೂಡ ಎಂಬುದನ್ನು ಜನ ಮೊದಲು ಅರಿಯಬೇಕೆಂದಿದ್ದಾರೆ . ನಮ್ಮ ಮಕ್ಕಳು ಓದುವ ಶಾಲೆ , ನಾವು ಓದುವ ಪತ್ರಿಕೆ , ನಾವು ನೋಡುವ ಸಿನಿಮಾ , ನಮ್ಮ ಮನೆಯ ಬೋರ್ಡು , ನಮ್ಮ ಲೆಟರ್‌ಹೆಡ್ ಗಳು , ಬ್ಯಾಂಕಿಗೆ ಬರೆಯುವ ಚೆಕ್ಕುಗಳು , ಕಾಗದಪತ್ರಗಳು – ಎಲ್ಲದರಲ್ಲಿಯೂ ಕನ್ನಡಕ್ಕೆ ಆದ್ಯತೆ ಸಲ್ಲಬೇಕು . ಹೀಗೆ ಬಳಕೆಯಲ್ಲಿ ಕನ್ನಡವನ್ನು ತಂದಾಗ ನಾವು ನಿಜವಾದ ಕನ್ನಡದವರಾಗುತ್ತೇವೆ . ಇಲ್ಲವೇ ಬರಿ ಹೆಸರಿಗಷ್ಟೇ ಕನ್ನಡಿಗರಾಗುತ್ತೇವೆ ಎಂದು ಲೇಖಕರು ವಿಚಾರಮಾಡಿದ್ದಾರೆ .

7 ) “ ನಾವು ಯಾವ ಪತ್ರಿಕೆಗಳನ್ನು ಓದುತ್ತಿದ್ದೇವೆ ? ”

ಡಾ ಹಾ.ಮಾ. ನಾಯಕ ಅವರು ಬರೆದಿರುವ ಕನ್ನಡವನ್ನು ಕಟ್ಟುವ ಕೆಲಸ ಎಂಬ ಲೇಖನದಲ್ಲಿ ಈ ಪ್ರಶ್ನೆಯನ್ನು ಲೇಖಕರೇ ಕೇಳಿದ್ದಾರೆ . ಕನ್ನಡ ಕನ್ನಡ ಎಂದು ಮಾತನಾಡುವ ನಾವು ಎಷ್ಟು ಕನ್ನಡವನ್ನು ಅನುಸರಿಸು ತಿದ್ದೇವೆ ? ಎಂದು ಪ್ರಶ್ನಿಸಿರುವ ಲೇಖಕರು ನಾವು ಓದುವ ಪತ್ರಿಕೆಗಳು ಕನ್ನಡ ಭಾಷೆಯದ್ದೇ ? ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕೆಂದಿದ್ದಾರೆ . ಇಂಗ್ಲಿಷ್ ಮತ್ತಿತರ ಭಾಷೆಯ ಪತ್ರಿಕೆಗಳನ್ನು ಓದುವ ನಾವು ಕನ್ನಡ ಬಗ್ಗೆ ಮಾತಾಡಲು ಅರ್ಹರಲ್ಲವೆಂಬ ಭಾವನೆ ನಾಯಕರದ್ದಾಗಿದೆ . ಕನ್ನಡ ಅನುಸರಿಸುವುದಕ್ಕೆ ಎಂಬುದು ನಮ್ಮ ಜೀವನಕ್ರಮದ ಭಾಗವಾಗಬೇಕೆಂದು ಅವರು ತಿಳಿಸಿರುವ ಸಂದರ್ಭವಿದಾಗಿದೆ .

2nd Puc Kannada Lessons Kannadavannu Kattuva Kelasa Notes Question Answer Pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

1 thoughts on “ದ್ವಿತೀಯ ಪಿ.ಯು.ಸಿ ಕನ್ನಡವನ್ನು ಕಟ್ಟುವ ಕೆಲಸ ಕನ್ನಡ ನೋಟ್ಸ್‌ | 2 PUC Kannadavannu Kattuva Kelasa Kannada Notes

Leave a Reply

Your email address will not be published. Required fields are marked *

rtgh