ಆಯ್ಕೆಯಿದೆ ನಮ್ಮ ಕೈಯಲ್ಲಿ ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು, 3rd Lesson 2nd PUC Kannada Ayke Ide Namma Kaiyalli Chapter 3 Question Answer Notes Pdf
ತರಗತಿ : ದ್ವಿತೀಯ ಪಿ.ಯು.ಸಿ
ಪಾಠದ ಹೆಸರು : ಆಯ್ಕೆಯಿದೆ ನಮ್ಮ ಕೈಯಲ್ಲಿ
ಕೃತಿಕಾರರ ಹೆಸರು : ನೇಮಿಚಂದ್ರ
2nd Puc Ayke Ide Namma Kaiyalli Notes
ಕೃತಿಕಾರರ ಪರಿಚಯ :
ಶ್ರೀಮತಿ ನೇಮಿಚಂದ್ರ ( ಜನನ : ೧೬-೭-೧೯೫೯ ) ಎಚ್.ಎ.ಎಲ್.ನಲ್ಲಿ ಹಿರಿಯ ಇಂಜಿನಿಯರ್ ಆಗಿದ್ದಾರೆ . ತಂದೆ : ಶ್ರೀ ಜಿ . ಗುಂಡಪ್ಪ , ತಾಯಿ : ಶ್ರೀಮತಿ ತಿಮ್ಮಕ್ಕನವರು , ಸ್ತ್ರೀಸಂವೇದನೆಯುಳ್ಳ ಕಥೆಗಾರ್ತಿ ಎನಿಸಿರುವ ಇವರು ಉದಯವಾಣಿ ದಿನಪತ್ರಿಕೆಯ ಬದುಕು ಬದಲಿಸಬಹುದು ಎಂಬ ಅಂಕಣ ಬರಹದಿಂದ ಸುಪ್ರಸಿದ್ಧರಾಗಿದ್ದಾರೆ . ನಮ್ಮ ಕನಸುಗಳಲ್ಲಿ ನೀವಿದ್ದೀರಿ , ಮತ್ತೆ ಬರೆದ ಕತೆಗಳು , ಒಂದು ಶ್ಯಾಮಲ ಸಂಜೆ ಎಂಬ ಕಥಾಸಂಕಲನಗಳನ್ನು ಇವರು ಪ್ರಕಟಿಸಿದ್ದಾರೆ . ನೇಮಿಚಂದ್ರರ ಕಥೆಗಳು ಎಂಬ ಶೀರ್ಷಿಕೆಯಲ್ಲಿ ಇವರ ಸಮಗ್ರ ಕಥೆಗಳು ಬೆಳಕುಕಂಡಿವೆ .
ಥಾಮಸ್ ಆಲ್ವಾ ಎಡಿಸನ್ , ನೋವಿಗದ್ದಿದ ಕುಂಚ , ಬೆಳಕಿನೊಂದು ಕಿರಣ ಮೇರಿಕ್ಯೂರಿ ಎಂಬ ಜೀವನ ಚರಿತ್ರೆಗಳನ್ನೂ ಒಂದು ಕನಸಿನ ಪಯಣ , ಪೆರುವಿನ ಪವಿತ್ರ ಕಣಿವೆ ಎಂಬೆರಡು ಪ್ರವಾಸ ಕಥನಗಳನ್ನು ನೇಮಿಚಂದ್ರ ರಚಿಸಿದ್ದಾರೆ . ದುಡಿವ ಹಾದಿಯಲ್ಲಿ ಜೊತೆಗಾಗಿ , ನ್ಯಾಯಕ್ಕಾಗಿ ಕಾದ ಭಾಂವಿದೇವಿ , ನನ್ನಕತೆ – ನಮ್ಮಕತೆ , ಬೆಳಗೆರೆ ಜಾನಕಮ್ಮ , ಇವು ನೇಮಿಚಂದ್ರರ ಇತರ ಕೃತಿಗಳು . ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೂರು ಬಾರಿ ಪಡೆದಿರುವ ನೇಮಿಚಂದ್ರರಿಗೆ ಡಾ || ಹಾ.ಮಾ. ನಾಯಕ ಪ್ರಶಸ್ತಿ , ಶಿವರಾಮ ಕಾರಂತ ಪ್ರಶಸ್ತಿ ‘ ಯಾದ್ ವಶೇಮ್ ‘ ಕಾದಂಬರಿಗೆ ‘ ಅಕ್ಕ ‘ ಪ್ರಶಸ್ತಿ , ಕಥಾಸಾಹಿತ್ಯಕ್ಕೆ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌ನ ‘ ಇಂದಿರಾತನಯ ‘ ಪ್ರಶಸ್ತಿ , ವಿಜ್ಞಾನ , ಸಾಹಿತ್ಯ , ಮಹಿಳಾ ಅಧ್ಯಯನವನ್ನು ಕುರಿತಂತೆ ಮಂಗಳೂರಿನ ‘ ಸಂದೇಶ ಪ್ರಶಸ್ತಿ ‘ ಹಾಗೂ ಗದಗದ ‘ ಕಲಾಚೇತನ ‘ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.
ಲೇಖನದ ಆಶಯ :
ಅದೃಷ್ಟ – ದುರಾದೃಷ್ಟಗಳ ಏರಿಳಿತವು ಮನುಷ್ಯನ ಬದುಕಿನಲ್ಲಿ ಸರ್ವೇಸಾಮಾನ್ಯ . ಆದರೂ ಕಷ್ಟ , ದುಃಖ , ಸೋಲು , ನಿರಾಸೆಗಳು ಬಂದಾಗ ಹತಾಶೆಗೊಂಡ ಮನಸ್ಸು ದುರಾದೃಷ್ಟವನ್ನು ನಿಂದಿಸುವುದೇ ಹೆಚ್ಚು. ಛಲದಿಂದ ಬದುಕನ್ನು ಎದುರಿಸಿ ಗೆಲ್ಲುವ ಹಲವು ಆಯ್ಕೆಗಳನ್ನು ನಮಗೆ ಬದುಕು ಕೊಟ್ಟಿದೆ . ನಿರಾಸೆಯ ಮಡಿಲಿಗೆ ಬೀಳದೆ ಎಚ್ಚರಿಕೆಯ ಎಲ್ಲೆಯಲ್ಲಿ ಬದುಕನ್ನು ಬದಲಿಸಿಕೊಳ್ಳುವ , ಸಾಧಿಸುವ ತಾಳ್ಮೆ , ಸಹನೆಗಳ ಅಗತ್ಯವನ್ನು ಪ್ರತಿಪಾದಿಸುವ ಅನುಭವ ಕಥನವೊಂದು ಇಲ್ಲಿದೆ .
ಶಬ್ಧಾರ್ಥ :
ಸೋನಗ್ರಫಿ – ಮೂತ್ರಪಿಂಡದಲ್ಲಿನ ಕಲ್ಲನ್ನು ಪತ್ತೆಹಚ್ಚಲು ನಡೆಸುವ ತಪಾಸಣೆ ; ಕಿಡ್ನಿಸ್ಟೋನ್ – ಮೂತ್ರಪಿಂಡ ದಲ್ಲಿನ ಕಲ್ಲು ; ಜಲಬಾಧೆ – ಮೂತ್ರಬಾಧೆ , ಬಾಯಾರಿಕೆ ; ಯಥೇಚ್ಛ – ಬೇಕಾದಷ್ಟು : ಲೇಸರ್ – ಕಿರಣ ಚಿಕಿತ್ಸೆ : ಪಥ್ಯ ನಿಯಮದಂತೆ ತೆಗೆದುಕೊಳ್ಳಬೇಕಾದ ಆಹಾರ , ಔಷಧಿ ಇತ್ಯಾದಿ ; ಬಾಡು – ಮಾಂಸ ; ಅಡ್ಡಿಟ್ – ದಾಖಲಾಗು ; ನರ್ಸ್ – ಶುಶ್ರೂಷಕರು ; ಮೊಗೆದು – ತುಂಬಿ ; ತಾಪತ್ರಯ – ತೊಂದರೆ , ಕಷ್ಟ ( ಆದಿಭೌತಿಕ , ಆದಿದೈವಿಕ , ಆಧ್ಯಾತ್ಮಿಕ ಎನ್ನುವ ಮೂರು ರೀತಿಯ ಕಷ್ಟಗಳು ) ; ಡಿಗ್ರಿ – ಪದವಿ ; ರೋಸಿ – ಬೇಸತ್ತು : ಫುಟ್ ಪಾತ್ – ಪಾದಚಾರಿಗಳು ಚಲಿಸುವ ಪಥ .
2nd Puc Kannada 3rd Lesson Notes
I. ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )
ದುರಾಸೆಯ ಹುಡುಗನನ್ನು ನಿರಾಕರಿಸಿದವರು ನಿಶಾ ಶರ್ಮ ,
ಲೇಖಕಿಯ ಪತಿ ಮೂತ್ರಪಿಂಡದಲ್ಲಿ ಕಲ್ಲು ಸೇರಿದ್ದರಿಂದ ಹೊಟ್ಟೆನೋವಿನ ತೊಂದರೆಯಿಂದ ಬಳಲುತ್ತಿದ್ದರು .
ಕಿಡ್ನಿಸ್ಟೋನ್ ಬಗ್ಗೆ ತಿಳಿಯಲು ಲೇಖಕಿಯವರು ಕಮಲಮ್ಮ ಮೇಡಂ ಹಾಗೂ ಮುದ್ದೆಗೌಡರನ್ನು ಭೇಟಿಮಾಡಿದರು .
‘ಏನ್ ಮಾಡೋಕಾಗುತ್ತೆ ಎಲ್ಲಾ ಹಣೆಬರಹ , ಆಗೋದು ಆಗೆ ಆಗುತ್ತೆ ” ಎಂದು ಯಾರಾದರೂ ಹೇಳಿದರೆ ಲೇಖಕಿಗೆ ರೇಗಿ ಹೋಗುತ್ತಿತ್ತು .
ಅದೃಷ್ಟದ ಪ್ರಶ್ನೆ ಬಂದಾಗ ಲೇಖಕಿಗೆ ಆಕೆಯ ಬಾಲ್ಯ ಸ್ನೇಹಿತೆ ಸೀತೆಯ ನೆನಪಾಗುತ್ತದೆ .
ಲೇಖಕಿಯ ಪತಿಯನ್ನು , ಶಸ್ತ್ರಚಿಕಿತ್ಸೆಗೆ ಮುನ್ನ ಮೂತ್ರಪಿಂಡದಲ್ಲಿ ಕಲ್ಲು ಎಲ್ಲಾದರೂ ಸರಿದಿರಬಹುದೇನೋ ಎಂದು ಪರೀಕ್ಷಿಸಲು ಸೋನಗ್ರಫಿ ರೂಮ್‌ಗೆ ಕರೆದೊಯ್ದರು .
II. ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )
2nd PUC Kannada Ayke Ide Namma Kaiyalli Chapter 3 Question Answer
1 ) ಸೀತಾಳ ಓದುವ ಆಸಕ್ತಿ ಹೇಗಿತ್ತು ?
ಸೀತಾಳಿಗೆ ಓದುವುದರಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ . ಎಸ್.ಎಸ್.ಎಲ್.ಸಿ.ಯಲ್ಲಿ ಎಲ್ಲಾ ವಿಷಯಗಳಲ್ಲಿಯೂ ಫೇಲ್ ಆಗಿದ್ದಳು . ಮತ್ತೊಮ್ಮೆ ಕಟ್ಟಿ ಓದುವ ತಾಪತ್ರಯಕ್ಕೆ ಹೋಗಲಿಲ್ಲ . ಅವಳಿಗೆ ಓದಿಗಿಂತ ಸಿನಿಮಾ , ಮಾರ್ಕೆಟ್ ಎಂದು ಸುತ್ತುವುದರಲ್ಲಿ ಹೆಚ್ಚು ಆಸಕ್ತಿ ಇತ್ತು .
2 ) ಕಮಲ ಮೇಡಂ ವೈದ್ಯರ ಯಾವ ಸಲಹೆಯನ್ನು ರೂಢಿಸಿಕೊಂಡರು ?
ಕಮಲ ಮೇಡಂ ವೈದ್ಯ ಸಲಹೆಯಂತೆ ಯಥೇಚ್ಚವಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರು , ಅವರು ಹೇಳಿದ ಆಹಾರದ ಬದಲಾವಣೆಗಳನ್ನು ಜಾರಿಗೆ ತಂದರು , ಅದನ್ನು ರೂಢಿಸಿಕೊಂಡರು .
3 ) ಮುದ್ದೇಗೌಡರು ಪಥ್ಯದ ವಿಚಾರವಾಗಿ ಹೊಂದಿದ್ದ ನಿಲುವು ಯಾವುದು ?
ಮುದ್ದೇಗೌಡರು ಪಥ್ಯದ ವಿಚಾರವಾಗಿ ಹೊಂದಿದ್ದ ನಿಲುವು ‘ ಅಯ್ಯೋ ಅದೆಲ್ಲ ಪಥ್ಯ ಯಾರು ಮಾಡೋಕೆ ಆಗುತ್ತೆ ? ‘ ಬಾಡು ತಿನ್ವೇಡಿ , ಹಾಲಿನ ಪರ್ದಾಗಳನ್ನು ಜಾಸ್ತಿ ಸೇವಿಸಬೇಡಿ , ಸದಾ ನೀರು ಕುಡೀರಿ ಅಂತಾರೆ , ಅದೆಲ್ಲ ಆಗೋ ಮಾತಲ್ಲ ಬಿಡಿ ಎಂದು ತಲೆ ಕೊಡವಿದರು .
4 ) ಯಾವ ಉತ್ತರಗಳಿಂದ ಲೇಖಕಿಗೆ ತೃಪ್ತಿಯಾಗಲಿಲ್ಲ ?
“ ಅಯ್ಯೋ ಕೆಲವರಿಗೆ ಆಗುತ್ತೆ ಕೆಲವರಿಗೆ ಇಲ್ಲ . ಅವರವರ ಅದೃಷ್ಟ ” ಈ ಉತ್ತರಗಳು ಲೇಖಕಿಗೆ ತೃಪ್ತಿಯಾಗಲಿಲ್ಲ .
5 ) , ಸೀತಾಳ ಬಯಕೆ , ನಂಬಿಕೆಗಳು ಹೇಗಿದ್ದವು ?
ಸೀತಾಳ ಬಯಕೆ , ಸದಾಕಾಲ ಮಾರ್ಕೆಟ್ ಸುತ್ತುವುದು , ಸಿನಿಮಾ ಹೋಗುವುದು , ಆಕೆ ಸುಂದರವಾದ ಹುಡುಗಿ ಆದರೆ ಆಕೆಗೆ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಕೂಡ ಕಷ್ಟವಾಯಿತು . ನೂರು ದೂರು ಹಿಡಿದು ಇನ್ಸ್‌ಟ್ಯೂಟ್‌ಗೆ ಬರುತ್ತಿದ್ದಳು . ಸಂಪಾದಿಸಿ ತಂದುಹಾಕಿ ಹೆಂಡ್ತಿನಾ ಚೆನ್ನಾಗಿ ಇಟ್ಟುಕೊಳ್ಳುವುದು ಗಂಡನ ಜವಾಬ್ದಾರಿ ‘ ತಟ್ಟನೆ ಎಲ್ಲಾ ಸರಿಹೋಗಿ ಬಿಡಬೇಕು ‘ ಎಂದು ಬಯಸುತ್ತಿದ್ದಳು , ಕೈತುಂಬಾ ಎಂದು ನಂಬಿ ಕಿರುಬೆರಳು ಸಹ ಎತ್ತಲೂ ಸಿದ್ಧವಿರಲಿಲ್ಲ . ಯಾವುದೂ ಆಕೆಗೆ ಸಾಲುತ್ತಿರಲಿಲ್ಲ , ತನ್ನ ದುರ್ಹಣೆಬರಹ , ದುರಾದೃಷ್ಟ ಎಂದು ನಂಬಿದ್ದಳು .
6 ) ತಾನು ಅದೃಷ್ಟದಂತೆಯೆಂದು ಲೇಖಕಿ ಭಾವಿಸಲು ಕಾರಣವೇನು ?
ಲೇಖಕಿ ತನ್ನನ್ನು ತಾನು ಅದೃಷ್ಟವಂತೆ ಎಂದು ಭಾವಿಸಿದ್ದರು . ಏಕೆಂದರೆ ಹೈಸ್ಕೂಲಿನಿಂದಲೇ ಇಂಜಿನಿಯರ್ ಆಗಬೇಕೆಂದು ಹಠತೊಟ್ಟು ಓದುತ್ತಿದ್ದಳು . ಎಷ್ಟು ಬೇಕಾದರೂ ಓದಿಸಲು ಸಿದ್ದರಿದ್ದ ಅಪ್ಪ , ಸಂಶೋಧನೆಗೆ ಟಾಟಾ ಇನ್ಟೂಟ್ಯೂಟ್ಗೆ ಸೇರಿದ್ದು , ನಂತರ ಕೆಲಸಕ್ಕೆ ಸೇರಿದ್ದು ಎಲ್ಲವೂ ನೆನೆದು ತನ್ನನ್ನು ತಾನು ಅದೃಷ್ಟವಂತೆ ಎಂದೆ ಭಾವಿಸಿದ್ದರು .
III . ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕದ ಪ್ರಶ್ನೆಗಳು )
1) ಕಮಲಾ ಮೇಡಂಗೆ ಮೂತ್ರಪಿಂಡದಲ್ಲಿ ಕಲ್ಲು ಮೂಡಿದ್ದೇಕೆ ?
ಕಮಲಾ ಮೇಲೆ ಬಂದು ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು, ಶೌಚಾಲಯವಿರಲಿಲ್ಲ ಆದ್ದರಿಂದ ಜಲಬಾಧೆಯನ್ನು ಬಲವಂತವಾಗಿ ತಡೆಯುತ್ತಿದ್ದರು . ಅದಕ್ಕಾಗಿ ನೀರು ಸಹ ಕುಡಿಯುತ್ತಿರಲಿಲ್ಲ . ಇದರಿಂದ ತುಂಬಾ ಹೊಟ್ಟೆನೋವು ಜಾಸ್ತಿಯಾಗಿ ಡಾಕ್ಟರ ಬಳಿ ಹೋಗಿ ತೋರಿಸಲು , ಅವರಿಗೆ ಮೂತ್ರಪಿಂಡದಲ್ಲಿ ಕಲ್ಲು ಇರುವುದಾಗಿ ಹೇಳಿ , ಒಮ್ಮೆ ಅದರಿಂದ ಪಾರಾದ ಮೇಲೆ ವೈದ್ಯರ ಸಲಹೆಯಂತೆ ಯಥೇಚ್ಚವಾಗಿ ನೀರು ಕುಡಿಯಲು ಪ್ರಾರಂಭಿಸಿದರು , ಆಹಾರ ಸೇವನೆಯಲ್ಲಿಯೂ ವೈದ್ಯರ ಸಲಹೆಯಂತೆ ಪಥ್ಯದಿಂದ ಇರತೊಡಗಿದರು . ಇಪ್ಪತ್ತು ವರ್ಷಗಳಲ್ಲಿ ಎಂದೂ ಮನಃ ಆ ಬಾಧೆ ಮರುಕಳಿಸಲಿಲ್ಲ .
2 ) ಲೇಖಕಿಯ ಪತಿಯ ಮೂತ್ರಪಿಂಡದ ಕಲ್ಲು ಕರಗಿ ಹೋಗಿದ್ದು ಹೇಗೆ ?
ಲೇಖಕಿಯವರು ಕಿಡ್ನಿಸ್ಟೋನ್ ಯಾಕೆ ಆಗುತ್ತೇ ? ಪರಿಹಾರ ಎಂದು ಕಂಡುಕೊಳ್ಳಲು ಕಮಲ ಮೇಡಂನ್ನು ಭೇಟಿಮಾಡಿ ವಿಸ್ತಾರವಾಗಿ ಕೇಳಿ ತಿಳಿದುಕೊಂಡರು , ನಂತರ ಮನೆಗೆ ಬಂದು ಗಂಡ ಕೀರ್ತಿಯವರಿಗೆ ಯಥೇಚ್ಚವಾಗಿ ಎಳೆನೀರು , ಬಾರ್ಲಿ ವಾಟರ್ ಜೊತೆಗೆ ಕೊಳದಪ್ಪಲೆಗಟ್ಟಲೆ ನೀರು ಕುಡಿದು ಅಭ್ಯಾಸ ಮಾಡಿಕೊಳ್ಳಲು ಹೇಳಿದರು . ಮೊದಮೊದಲು ಒಪ್ಪದ ಪತಿರಾಯ , ಹೆಂಡತಿಯ ಪ್ರೀತಿಯ ಒತ್ತಾಯಕ್ಕೆ ಮಣಿದು ಸಾಕಷ್ಟು ನೀರು ಕುಡಿದರು , ನಿಗದಿತ ದಿನದಂದು ಶಸ್ತ್ರ ಚಿಕಿತ್ಸೆಗೆಂದು ಹೋದಾಗ ಕಲ್ಲಿನ ಸ್ಥಳ ಬದಲಾವಣೆ ಆಗರಬಹುದೆಂದು ತಿಳಿಯಲು ಪುನಃ ಸೋನಾಗ್ರಫಿ ಮಾಡಿ ಪರೀಕ್ಷಿಸಿದರೂ ಕಲ್ಲು ಮಾಯವಾಗಿತ್ತು . ಅದು ನೀರಿನೊಂದಿಗೆ ಎಲ್ಲೋ ಎಂದೋ ಕರಗಿಹೋಗಿತ್ತು .
3 ) ರಜೆಗೆಂದು ಮೈಸೂರಿಗೆ ಹೋದಾಗ ಲೇಖಕಿಯ ಪತಿಗಾದ ತೊಂದರೆಯೇನು ?
ರಜೆಗೆಂದು ಮೈಸೂರಿಗೆ ಲೇಖಕಿ ಪರಿವಾರಸಹಿತ ಹೋಗಿದ್ದರು , ಒಂದು ದಿನ ಇದ್ದಕ್ಕಿದ್ದಂತೆ ಲೇಖಕಿಯ ಪತಿಯವರಾದ ಕೀರ್ತಿಗೆ ಹೊಟ್ಟೆನೋವು ಕಾಣಿಸಿಕೊಂಡು ಒದ್ದಾಡತೊಡಗಿದರು , ತಕ್ಷಣ ಮಿಷನ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಎಲ್ಲಾ ಪರೀಕ್ಷಿಸಿ ಕೊನೆಗೆ ಸೋನಾಗ್ರಫಿ ಮಾಡಿ ಮೂತ್ರಪಿಂಡದಲ್ಲಿ 8 ಮಿ.ಮೀ ಉದ್ದದ ಕಲ್ಲು ಇರುವುದಾಗಿ , ಅದಕ್ಕಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ತಿಳಿಸಿ ಎರಡು ದಿನಗಳ ನಂತರ ದಿನಾಂಕವನ್ನು ಗೊತ್ತುಪಡಿಸಿದರು , ಹೊಟ್ಟೆನೋವು ಕಡಿಮೆಯಾಗಲು ಮಾತ್ರೆಗಳನ್ನು ಕೊಟ್ಟರು .
4 ) ಸೀತಾ ಎಂಬ ಗೆಳತಿಯ ಗುಣಸ್ವಭಾವವನ್ನು ಲೇಖಕಿ ಹೇಗೆ ಚಿತ್ರಿಸಿದ್ದಾರೆ ?
ಸೀತಾ ಲೇಖಕಿಯ ಗೆಳತಿ , ಮೈಸೂರಿನಲ್ಲಿ ಹೈಸ್ಕೂಲು ಓದುವಾಗ ಪರಿಚಯವಾದಳು , ಇಬ್ಬರ ತಂದೆಯರೂ ಕಾಲೇಜಿನಲ್ಲಿ ಪ್ರಾದ್ಯಾಪಕರು , ಎಷ್ಟು ಬೇಕಾದರೂ ಓದಿಸಲು ಸಿದ್ದರಿದ್ದರು . ಆದರೆ ಸೀತಾ ಓದಿನಲ್ಲಿ ಆಸಕ್ತಿ ತೋರಲಿಲ್ಲ , ಎಸ್.ಎಸ್.ಎಲ್.ಸಿ. ಯಲ್ಲಿ ಎಲ್ಲಾ ವಿಷಯದಲ್ಲೂ ಫೇಲ್ ಆದಳು , ಪುನಃ ಕಟ್ಟಿ ಓದಿ ಪಾಸುಮಾಡುವ ಯೋಚನೆಯೇ ಮಾಡಲಿಲ್ಲ . ಅದರ ಬದಲು ಮಾರ್ಕೆಟು , ಸಿನಿಮಾ ಎಂದು ಸುತ್ತುತ್ತಿದ್ದಳು . ಮುಂದೊಂದು ದಿನ ಸೀತಾ ಮದುವೆಯಾಗಿ ಬೆಂಗಳೂರು ಸೇರಿದಳು . ಕೈತುಂಬ ಸಂಬಳ ತರುವ ಹುಡುಗ ಸಿಗುವುದು ಕಷ್ಟವಾಯಿತು . ಇದರಿಂದಾಗಿ ಆಕೆಗೆ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಆಗಲೇ ಇಲ್ಲ , ವಾರವಾರಕ್ಕೆ ಲೇಖಕಿಯನ್ನು ಟಾಟಾ ಇನ್ನೂಟ್ಯೂಟ್ ಬಳಿ ಹುಡುಕಿಕೊಂಡು ಬಂದು ಗಂಡನ ಬಗ್ಗೆ ದೂರು ಹೇಳಲು ಪ್ರಾರಂಭಿಸಿದಳು , ಲೇಖಕಿ ಕೊಟ್ಟ ಸಲಹೆ ಅವಳಿಗೆ ಹಿಡಿಸಲಿಲ್ಲ . ಇದರಿಂದಾಗಿ ಆಕೆಯ ಮದುವೆಯ ಜೀವನವು ದುರಂತದಲ್ಲಿ ಕೊನೆಗೊಂಡಿತು .
5 ) ಬದುಕಿನಲ್ಲಿ ಆಯ್ಕೆಗಳು ಮುಖ್ಯ ಎಂಬುದನ್ನು ಲೇಖಕಿ ಹೇಗೆ ನಿರೂಪಿಸಿದ್ದಾರೆ ?
ಬದುಕಿನಲ್ಲಿ ಆಯ್ಕೆಗಳು ಬಹುಮುಖ್ಯ ಎಂಬುದನ್ನು ಲೇಖಕಿಯವರು ಕಮಲಾ ಮೇಡಂ , ಮುದ್ದೇಗೌಡರು ಕೀರ್ತಿಗೆ ಗೆಳತಿ ಸೀತಾ , ಪ್ಲೇವಿಯ , ನಿಶಾಶರ್ಮರವರ ಜೀವನವನ್ನು ತನ್ನ ಪತಿ ಕೀರ್ತಿ ಉದಾಹರಿಸುವುದರ ಮೂಲಕ ತೋರಿಸಿಕೊಟ್ಟಿದ್ದಾರೆ . ಇವೆಲ್ಲ ಉದಾಹರಣೆಗಳ ಆಧಾರದ ಮೇಲೆ ಕೆಲವು ಕಿವಿಮಾತುಗಳನ್ನು ಆಡಿದ್ದಾರೆ . ಅದೆಂದರೆ “ ನಮ್ಮಂತಹ ಮಧ್ಯಮ ವರ್ಗದವರ ಎದುರು ನೂರು ಸಾವಿರಾರು ಆಯ್ಕೆಗಳಿರುತ್ತವೆ , ಓದುವ ಆಯ್ಕೆ , ಆರೋಗ್ಯಕಾಪಾಡಿಕೊಳ್ಳುವ ಬಗೆ , ಜರ್ದಾಜಗಿಯದೆ ಇರುವ ಆಯ್ಕೆ , ಕುಡಿಯದೆ ಇರುವ ಆಯ್ಕೆ , ಜೂಜು ಆಡದೆ ಇರುವ ಆಯ್ಕೆ ಹೀಗೆ ನಮ್ಮ ಬದುಕಿನಲ್ಲಿ ಸರಿಯಾಗಿ ಆಯ್ಕೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ” ಎಂದು ತಿಳಿಸಿಕೊಟ್ಟಿದ್ದಾರೆ .
IV ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :
1 ) “ ಎಷ್ಟು ಬೇಕಾದರೂ ಓದಿಸಲು ಸಿದ್ಧರಿದ್ದ ಅಪ್ಪಂದಿರು . ”
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ‘ ಆಯ್ಕೆಯಿದೆ ನಮ್ಮ ಕೈಯಲ್ಲಿ ಎಂಬ ಅನುಭವ ಕಥನದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಅದೃಷ್ಟದ ಪ್ರಶ್ನೆ ಬಂದಾಗ ಲೇಖಕಿಗೆ ತಮ್ಮ ಹೈಸ್ಕೂಲು ಸಹಪಾಠಿ ಸೀತಾ ಜ್ಞಾಪಕಕ್ಕೆ ಬಂದಳು . ಲೇಖಕಿಯ ತಂದೆ ಮತ್ತು ಸೀತಾಳ ತಂದೆ ಇಬ್ಬರೂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು . ಇಬ್ಬರ ಮನೆಯಲ್ಲೂ ಗಂಡು – ಹೆಣ್ಣು ಎಂಬ ಭೇದವಿಲ್ಲದೆ ಎಷ್ಟು ಬೇಕಾದರೂ ಓದಿಸಲು ಸಿದ್ಧರಿದ್ದ ಅಪ್ಪಂದಿರಿದ್ದರು . ಲೇಖಕಿ ಹೈಸ್ಕೂಲಿನಲ್ಲಿರು ವಾಗಲೇ ಇಂಜಿನಿಯರ್ ಆಗುವ ಕನಸು ಕಂಡು ಅದನ್ನು ಸಾಕಾರಗೊಳಿಸಿಕೊಂಡರೆ , ಅವರ ಗೆಳತಿ ಸೀತಾ ಹೈಸ್ಕೂಲನ್ನೂ ಪೂರೈಸಲಿಲ್ಲ . ಓದುವ ಅವಕಾಶಗಳಿದ್ದಾಗ , ಓದಿಸುವವರಿದ್ದಾಗ ಚೆನ್ನಾಗಿ ಓದಿ ಬದುಕನ್ನು ಬೇಕಾದಂತೆ ರೂಪಿಸಿಕೊಳ್ಳಬೇಕೆಂಬುದನ್ನು ಲೇಖಕಿ ಇಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾರೆ .
2 ) “ ಮತ್ತೆ ಅವರಿಗೆ ಮೂತ್ರಪಿಂಡದ ಕಲ್ಲು ಕಾಣಿಸಿರಲಿಲ್ಲ . ”
ಶ್ರೀಮತಿ ನೇಮಿಚಂದ್ರ ಅವರು ಬರೆದಿರುವ ಆಯ್ಕೆಯಿದೆ ನಮ್ಮ ಕೈಯಲ್ಲಿ ಎಂಬ ಲೇಖನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಕಮಲಮ್ಮನವರಿಗಾಗಿದ್ದ ಮೂತ್ರಪಿಂಡದ ವಿಚಾರವನ್ನು ನಿರೂಪಿಸುತ್ತಾ ಲೇಖಕಿ ಈ ಮಾತನ್ನು ಹೇಳಿದ್ದಾರೆ . ಕಮಲಮ್ಮ ಮೇಡಂಗೆ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು . ಅವರು ಶಸ್ತ್ರಚಿಕಿತ್ಸೆಯ ನಂತರ ವೈದ್ಯರ ಸಲಹೆಯಂತೆ ಯಥೇಚ್ಛವಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರಲ್ಲದೆ , ವೈದ್ಯರು ಹೇಳಿದ್ದ ಕೆಲವು ಆಹಾರದ ಬದಲಾವಣೆಗಳನ್ನು ಜಾರಿಗೆ ತಂದರು . ಇದರಿಂದಾಗಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಮತ್ತೆ ಅವರಿಗೆ ಮೂತ್ರಪಿಂಡದ ಕಲ್ಲು ಕಾಣಿಸಿರಲಿಲ್ಲ . ಇದನ್ನು ವಿವರಿಸುತ್ತಾ ಲೇಖಕಿ ತೊಂದರೆಯನ್ನು ನಿವಾರಿಸಿಕೊಳ್ಳುವಲ್ಲಿ ಮನುಷ್ಯ ತನ್ನ ಪ್ರಯತ್ನವನ್ನು ಬಿಡದೆ ಪಾಲಿಸಬೇಕೆಂದಿರುವರು .
3 ) “ ನೋಡು , ನಿನ್ನ ಎದುರು ಎರಡು ಆಯ್ಕೆಗಳಿವೆ . ”
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ‘ ಆಯ್ಕೆಯಿದೆ ನಮ್ಮ ಕೈಯಲ್ಲಿ ‘ ಎಂಬ ಲೇಖನದಲ್ಲಿ ಲೇಖಕಿಯೇ ತಮ್ಮ ಪತಿಗೆ ಹೇಳಿರುವ ಮಾತಿದು . ಮೂತ್ರಪಿಂಡದ ಕಲ್ಲಿನ ತೊಂದರೆಯಿಂದ ಬಳಲುತ್ತಿದ್ದ ತಮ್ಮ ಪತಿ ಕೀರ್ತಿ ಯವರಿಗೆ ಕಮಲಮ್ಮ ಮೇಡಂ ಮತ್ತು ಮೂಲೆಮನೆ ಮುದ್ದೇಗೌಡರ ಶಸ್ತ್ರಚಿಕಿತ್ಸೆಯ ಅನುಭವಗಳನ್ನು ವಿವರಿಸಿದ ಲೇಖಕಿಯು “ ನೋಡು , ನಿನ್ನ ಎದುರು ಎರಡು ಆಯ್ಕೆಗಳಿವೆ . ಏನೂ ಮಾಡದೆ ಮುದ್ದೇಗೌಡರ ತರಹ ಎರಡೆರಡು ವರ್ಷಕ್ಕೆ ಆಪರೇಷನ್ ಮಾಡಿಸಿಕೊಳ್ಳೋದು . ಇಲ್ಲ ಕಮಲಮ್ಮ ಮೇಡಂ ತರಹ ಇನ್ನು ಮೇಲೆ ಚೆನ್ನಾಗಿ ನೀರು ಕುಡಿಯೋದು ” ಎಂದು ಹೇಳಿದರು . ಆ ಕ್ಷಣದಿಂದಲೇ ತಮ್ಮ ಪತಿ ಯಥೇಚ್ಛವಾಗಿ ದ್ರವಾಹಾರವನ್ನು ಸ್ವೀಕರಿಸುವಂತೆ ಎಚ್ಚರವಹಿಸಿ , ಶಸ್ತ್ರಚಿಕಿತ್ಸೆಯ ಅಗತ್ಯ ಬಾರದಂತೆ ನೋಡಿಕೊಂಡರು .
4 ) “ ಈ ಅದೃಷ್ಟ ನಿನಗೂ ಇತ್ತಲ್ಲೆ ? ”
ಶ್ರೀಮತಿ ನೇಮಿಚಂದ್ರ ಅವರ ‘ ಆಯ್ಕೆಯಿದೆ ನಮ್ಮ ಕೈಯಲ್ಲಿ ‘ ಎಂಬ ಅನುಭವ ಕಥನದಲ್ಲಿ ಲೇಖಕಿಯು ಈ ಮೇಲಿನ ಮಾತನ್ನು ತಮ್ಮ ಹೈಸ್ಕೂಲ್ ಸಹಪಾಠಿ ಸೀತಾ ಳನ್ನು ಉದ್ದೇಶಿಸಿ ಹೇಳಿದ್ದಾರೆ . ಲೇಖಕಿಯು ಚೆನ್ನಾಗಿ ಓದಿ , ಇಂಜಿನಿಯರ್ ಆಗಿ , ಸ್ವಂತ ಮನೆ ಕೊಂಡಿದ್ದನ್ನು ಕಂಡು ಅವರ ಗೆಳತಿ ಸೀತಾ “ ನೀನು ಬಿಡೆ , ತುಂಬಾ ಅದೃಷ್ಟವಂತೆ ” ಎಂದಾಗ ಅದಕ್ಕೆ ಉತ್ತರಿಸುತ್ತಾ ಈ ಮೇಲಿನ ಮಾತನ್ನು ಹೇಳುತ್ತಾರೆ . ಸೀತಾಳಿಗೂ ಓದುವ ಅವಕಾಶವಿತ್ತು , ಓದಿಸುವ ತಂದೆಯಿದ್ದರು . ಆದರೆ ಓದಿನಲ್ಲಿ ಆಸಕ್ತಿ ತೋರದೆ ಹೈಸ್ಕೂಲನ್ನೂ ಮುಗಿಸದೆ ಸಾಮಾನ್ಯ ಗೃಹಿಣಿಯಾಗಿದ್ದಳು . ಅದನ್ನು ನೆನಪಿಸುತ್ತಾ ಲೇಖಕಿಯು ‘ ಈ ಅದೃಷ್ಟ ನಿನಗೂ ಇತ್ತಲೆ ! ”ಎಂದು ಪ್ರಶ್ನಿಸಿದ್ದಾರೆ . ವಿದ್ಯಾವಂತರ ಕುಟುಂಬದಲ್ಲಿ ಹುಟ್ಟಿಯೂ ಓದದ ಸೀತಾಳದು ನಿಜಕ್ಕೂ ದುರದೃಷ್ಟ ಬದುಕು . ಹೆಣ್ಣು ಮಕ್ಕಳು ಚೆನ್ನಾಗಿ ಓದಿ , ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳುವುದು ಮುಖ್ಯ .
5 ) ‘ ಅದೃಷ್ಟವನ್ನೇ ‘ ಅವಲಂಬಿಸಿ ಬದುಕಲು ಸಾಧ್ಯವೇ ? ”
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ‘ ಆಯ್ಕೆಯಿದೆ ನಮ್ಮ ಕೈಯಲ್ಲಿ ‘ ಎಂಬ ಲೇಖನದ ಆರಂಭದಲ್ಲಿಯೇ ಈ ಮೇಲಿನ ವಾಕ್ಯವನ್ನು ಗಮನಿಸಬಹುದು . ಲೇಖಕಿಗೆ ಯಾರಾದರೂ ಮಾತಿನ ಮಧ್ಯೆ ‘ ಏನ್ ಮಾಡೋಕಾಗುತ್ತೆ ಎಲ್ಲಾ ಹಣೆಬರಹ , ಆಗೋದು ಆಗೇ ಆಗುತ್ತೆ ‘ ಎಂದರೆ ರೇಗಿ ಹೋಗುತ್ತದೆಯಂತೆ . ಏಕೆಂದರೆ ಅವರ ಪ್ರಕಾರ ನಾವು ಕೆಲವೊಮ್ಮೆ ಆಗುವುದನ್ನು ತಡೆಯಲಾಗದಿರಬಹುದು . ಆದರೆ ತಡೆಯುವ ಪ್ರಯತ್ನವನ್ನಾದರೂ ಮಾಡಬಹುದಲ್ಲವೆ ? ಎಂದು ಪ್ರಶ್ನಿಸಿಕೊಳ್ಳುತ್ತಾರೆ . ಲೇಖಕಿಯ ಖಚಿತ ಅಭಿಪ್ರಾಯದಂತೆ ‘ ಅದೃಷ್ಟ’ವನ್ನೇ ಅವಲಂಬಿಸಿ ಬದುಕಲಾಗದು . ಅದೃಷ್ಟವನ್ನು ನಂಬಿ ಕೈಕಟ್ಟಿ ಕೂರುವುದಕ್ಕಿಂತ ಮನುಷ್ಯ ಪ್ರಯತ್ನ ಅತಿಮುಖ್ಯವೆಂಬುದನ್ನು ಈ ಮೇಲಿನಂತೆ ಪ್ರಶ್ನಿಸುವ ಮೂಲಕ ಲೇಖಕಿ ಸೂಚಿಸಿದ್ದಾರೆ .
6 )“ ಮುಂಬಯಿಯ ಪ್ರಸಿದ್ಧ ನ್ಯಾಯವಾದಿಯಾದರು . ”
`ನೇಮಿಚಂದ್ರ ಅವರ ‘ ಆಯ್ಕೆಯಿದೆ ನಮ್ಮ ಕೈಯಲ್ಲಿ ‘ ಎಂಬ ಅನುಭವ ಕಥನ ದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ . ನ್ಯಾಯವಾದಿಯಾದ ಪ್ಲೇವಿಯಾ ಅವರ ಬದುಕನ್ನು ವಿವರಿಸುವಾಗ ಲೇಖಕಿ ಈ ಮೇಲಿನ ಮಾತನ್ನು ಹೇಳಿದ್ದಾರೆ . ಪ್ಲೇವಿಯಾ ದಿನನಿತ್ಯ ಹಿಂಸಿಸುವ ಗಂಡನ ಜೊತೆ ಬಾಳುವ ಕೌಟುಂಬಿಕ ಕೌರಕ್ಕೆ ಬಲಿಯಾಗಿದ್ದರು . ಅದನ್ನು ಪ್ರತಿಭಟಿಸಿ ಹೊರಬಂದ ಆಕೆ ತಾವು ಹತ್ತನೇ ತರಗತಿವರೆಗೆ ಮಾತ್ರ ಓದಿದ್ದನ್ನು ಮುಂದುವರೆಸಿದಾಗ ಮೂರು ಮಕ್ಕಳ ತಾಯಿ ಬೇರೆ . ನಲವತ್ತರ ವಯಸ್ಸಿನಲ್ಲಿ ಮುಂದೆ ಓದಿ ಮುಂಬಯಿಯ ಪ್ರಸಿದ್ಧ ನ್ಯಾಯವಾದಿ ಯಾದರಲ್ಲದೆ , ತಮ್ಮ ಮೂರು ಮಕ್ಕಳನ್ನೂ ಮುಂದೆ ತಂದರು . ಇದನ್ನು ವಿವರಿಸುತ್ತಾ ಲೇಖಕಿಯು ದುರದೃಷ್ಟವೆಂದು ಕೈಚೆಲ್ಲಿ ಕೂರುವ ಬದಲು ನಮ್ಮ ಹೆಣ್ಣುಮಕ್ಕಳಿಗೆ ಪ್ಲೇವಿಯಾರ ಬದುಕು ಆದರ್ಶವಾಗಬೇಕೆಂದಿದ್ದಾರೆ .
7 ) “ನಾನು ನಾಲ್ಕು ಬಾರಿ ಆಪರೇಷನ್ ಮಾಡಿಸಿಕೊಂಡಿದ್ದೇನೆ . ”
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ‘ ಆಯ್ಕೆಯಿದೆ ನಮ್ಮ ಕೈಯಲ್ಲಿ ‘ ಎಂಬ ಲೇಖನದಿಂದಾಯ್ದ ಈ ವಾಕ್ಯವನ್ನು ಮುದ್ದೇಗೌಡರು ಲೇಖಕಿಗೆ ಹೇಳುತ್ತಾರೆ . ಲೇಖಕಿಯ ತಮ್ಮ ಪತಿ ಕೀರ್ತಿಗೆ ಕಿಡ್ನಿಸ್ಟೋನ್ ಆದಾಗ ಈ ಹಿಂದೆ ಕಿಡ್ನಿಸ್ಟೋನ್ ಆಗಿ ಶಸ್ತ್ರಚಿಕಿತ್ಸೆಗೊಳಗಾದವರ ಅನುಭವವನ್ನು ಅರಿಯಲೆಂದು ನೆರೆಯಲ್ಲಿದ್ದ ಕೆಲವರನ್ನು ವಿಚಾರಿಸುತ್ತಾರೆ . ಆ ರೀತಿ ಚಿಕಿತ್ಸೆಗೊಳಗಾಗಿದ್ದ ಮೂಲೆಮನೆ ಮುದ್ದೇಗೌಡರು ತಮ್ಮ ಅನುಭವವನ್ನು ವಿವರಿಸುತ್ತಾ “ ಓಹ್ ಈಗದೇನೂ ದೊಡ್ಡ ಆಪರೇಷನ್ ಅಲ್ಲವಲ್ಲ . ನಾನು ನಾಲ್ಕು ಬಾರಿ ಮಾಡಿಸಿಕೊಂಡಿದ್ದೇನೆ ” ಎಂದು ಅಂಗಿ ಎತ್ತಿ ತೋರಿಸಿದ ಸಂದರ್ಭವಿದಾಗಿದೆ . ಮೂತ್ರಪಿಂಡದ ಕಲ್ಲಿನ ತೊಂದರೆಯನ್ನು ಅವರು ನಿರ್ಲಕ್ಷ್ಯದಿಂದ ಕಂಡಿರುವುದು ಮೇಲಿನ ವಾಕ್ಯದ ಮೂಲಕ ವ್ಯಕ್ತವಾಗುತ್ತದೆ .
2nd PUC Kannada Ayke Ide Namma Kaiyalli Chapter 3 Question Answer Notes Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
Notes