rtgh

ದ್ವಿತೀಯ ಪಿ.ಯು.ಸಿ ಬದುಕನ್ನು ಪ್ರೀತಿಸಿದ ಸಂತ ಕನ್ನಡ ನೋಟ್ಸ್‌ | 2 PUC Badukannu Preethisida Santha Kannada Notes

ಬದುಕನ್ನು ಪ್ರೀತಿಸಿದ ಸಂತ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd Puc Kannada Lessons Badukannu Preethisida Santha Notes Question Answer Guide Pdf

ತರಗತಿ : ದ್ವಿತೀಯ ಪಿ.ಯು.ಸಿ

ಪಾಠದ ಹೆಸರು : ಬದುಕನ್ನು ಪ್ರೀತಿಸಿದ ಸಂತ

ಕೃತಿಕಾರರ ಹೆಸರು : ಎಚ್.‌ ಆರ್.‌ ರಾಮಕೃಷ್ಣರಾವ್‌

2nd Puc Kannada Lessons Badukannu Preethisida Santha

ಕೃತಿಕಾರರ ಪರಿಚಯ :

ಪ್ರೊ . ಎಚ್.ಆರ್ . ರಾಮಕೃಷ್ಣರಾವ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ೩೦.೦೫.೧೯೩೫ ರಲ್ಲಿ ಜನಿಸಿದರು . ಶ್ರೀ ಎಚ್.ವಿ. ರಂಗರಾವ್ ಮತ್ತು ರಂಗಮ್ಮ ಎಂಬ ದಂಪತಿಗಳ ಮಗ ಇವರು . ಮೈಸೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ . ಕಲಾಂ ಮೇಷ್ಟ್ರು . ಡಾ . ಸುಬ್ರಮಣ್ಯನ್ ಚಂದ್ರಶೇಖರ್ , ಸರ್ ಐಸಾಕ್ ನ್ಯೂಟನ್ , ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ , ಅಂತರಿಕ್ಷ , ಚಂದ್ರಯಾನ , ಬಿಗ್‌ಬ್ಯಾಂಗ್ , ಪ್ರಳಯ -೨೦೧೨ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ . ವಿಜ್ಞಾನದ ವಿಚಾರಗಳನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಸಲುವಾಗಿ ರಾಜ್ಯದಾದ್ಯಂತ ಉಪನ್ಯಾಸಗಳನ್ನು ನೀಡಿದ್ದಾರೆ . ಆಕಾಶವಾಣಿ , ದೂರದರ್ಶನಗಳಲ್ಲೂ ವಿಜ್ಞಾನ ಸಂಬಂಧಿ ಕಾಠ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ . ನಿವೃತ್ತಿಯ ನಂತರವೂ ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ . ಶ್ರೀಯುತರು ಕನ್ನಡ ಪುಸ್ತಕಾಭಿವೃದ್ಧಿ ಪ್ರಾಧಿಕಾರಕ್ಕಾಗಿ ರಚಿಸಿಕೊಟ್ಟಿರುವ ‘ ಕಲಾಂ ಮೇಷ್ಟ್ರು ‘ ಕೃತಿಯಿಂದ ಪ್ರಸ್ತುತ ‘ ಬದುಕನ್ನು ಪ್ರೀತಿಸಿದ ಸಂತ ‘ ಎಂಬ ಲೇಖನವನ್ನು ಸ್ವೀಕರಿಸಲಾಗಿದೆ .

ಪಾಠದ ಆಶಯ :

ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರದಲ್ಲಿ ವ್ಯಕ್ತಿಚಿತ್ರಣ / ಜೀವನಚರಿತ್ರೆಯೂ ಒಂದಾಗಿದೆ . ನಮ್ಮೆದುರಿಗೆ ಇಲ್ಲದ , ನಮ್ಮ ನಡುವಿನ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ , ಬಾಳಿಬದುಕಿದ ಅವರ ವ್ಯಕ್ತಿತ್ವ ನಮ್ಮ ಯುವಜನಾಂಗಕ್ಕೆ ಆದರ್ಶವಾಗಬೇಕು . ಮಹಾತ್ಮರ ಬದುಕನ್ನು ಓದಿ ಬದುಕು ಕಟ್ಟಿಕೊಳ್ಳಲು ಸ್ವಲ್ಪವಾದರೂ ಸಾಧ್ಯವಾದೀತೆಂಬುದನ್ನು ಪ್ರಸ್ತುತ ‘ ಕಲಾಂ ಮೇಷ್ಟ್ರು ‘ ಕೃತಿಯ ಆಯ್ದ ಭಾಗ ಬದುಕನ್ನು ಪ್ರೀತಿಸಿದ ಸಂತ ‘ ಲೇಖನ ನಿರೂಪಿಸುತ್ತದೆ .

ಸಾಮಾನ್ಯನಾದ ಬಾಲಕನೊಬ್ಬ ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಏರಿದ ಬಗೆ ನಮ್ಮ ಯುವಪೀಳಿಗೆಗೆ ದಾರಿದೀಪ , ಅವರ ಸರಳ ಬದುಕಿನ ಕ್ರಿಯಾಧರ್ಮದ ಮುನ್ನೋಟ , ಮಾನವೀಯ ಮಿಡಿತ , ಮಕ್ಕಳೊಂದಿಗಿನ ಒಡನಾಟ ಇವು ಡಾ ॥ ಎಪಿಜೆ ಅಬ್ದುಲ್ ಕಲಾಂ ಅವರ ಬದುಕಿನ ಸೂತ್ರಗಳು , ಅವರಿಗಿರುವ ಅಭಿರುಚಿ , ಆಸಕ್ತಿ , ಅನುಭವ ಜ್ಞಾನ ಮತ್ತು ಉನ್ನತವಾದ ಮಾನವ ಪ್ರೀತಿ , ಸರ್ವಧರ್ಮ ಸಮನ್ವತೆಯ ರೀತಿ ನಮ್ಮನ್ನು ಬೆರಗುಗೊಳಿಸುತ್ತದೆ . ಪ್ರಸ್ತುತ ಲೇಖನ ಅವರು ಬದುಕನ್ನು ಪ್ರೀತಿಸಿದ ರೀತಿಯನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ .

ದ್ವಿತೀಯ ಪಿ.ಯು.ಸಿ ಬದುಕನ್ನು ಪ್ರೀತಿಸಿದ ಸಂತ ಕನ್ನಡ ನೋಟ್ಸ್‌ 2 PUC Badukannu Preetisida Santha Kannada Notes.
ದ್ವಿತೀಯ ಪಿ.ಯು.ಸಿ ಬದುಕನ್ನು ಪ್ರೀತಿಸಿದ ಸಂತ ಕನ್ನಡ ನೋಟ್ಸ್‌, 2 PUC Badukannu Preetisida Santha Kannada Notes.

ಶಬ್ದಾರ್ಥ :

ಸಂಕೀರ್ಣ ಇಕ್ಕಟ್ಟಾದ : ಊರ್ಧ್ವಮುಖಿ – ಮೇಲುಮುಖ ; ಉದ್ದೀಪನ – ಉತ್ತೇಜನ , ಉರಿಸುವ ; ನಿಹಿತ ಇಟ್ಟ , ಇರಿಸಿದ ; ಸಬೂಬು -ಕಾರಣ , ನೆಪ ; ಕ್ಷಿಪಣಿ – ದೂರದಿಂದ ನಿಯಂತ್ರಿಸಲ್ಪಡುವ ಸ್ಫೋಟಕವಾಗಿ ಉಡಾಯಿಸುವ ಸಾಧನ ; ಮಜಲು – ಹಂತ ; ಘನತೆ – ಶ್ರೇಷ್ಠತೆ ; ಸೃಜನಾತ್ಮಕತೆ – ಕ್ರಿಯಾತ್ಮಕವಾದ ದೃಢತೆ – ಬಲಿಷ್ಠವಾದ , ದಿಟವಾದ ; ಕ್ರೋಡೀಕರಿಸು – ಸಂಗ್ರಹಿಸು ; ಭ್ರಮೆ – ಭ್ರಾಂತಿ , ಹುಚ್ಚು , ಉನ್ಮಾದ ; ಅಡಚಣೆ – ತೊಂದರೆ ; ಜಮಾಯಿಸು – ಸೇರು .

2nd Puc Kannada Lessons Badukannu Preethisida Santha Notes

I. ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

1 ) ‘ ಚಿಪ್‌ ‘ ಎಂದರೇನು ?

ಅಗತ್ಯ ಮಾಹಿತಿಗಳನ್ನು ಕ್ರೋಢೀಕರಿಸಿರುವ ಸೂಕ್ಷ್ಮ ಎಲೆಕ್ಟ್ರಾನಿಕ್ ಸಾಧನವನ್ನು ‘ ಚಿಪ್‌ ‘ಎನ್ನುವರು .

2 ) ವಿಜ್ಞಾನದ ಅಡಿಪಾಯ ಯಾವುದು ?

ಪ್ರಶ್ನೆ ಕೇಳುವುದು ವಿಜ್ಞಾನದ ಅಡಿಪಾಯವಾಗಿದೆ .

3 ) ಕಲಾಂರವರ ಆತ್ಮ ಚರಿತ್ರೆಯ ಹೆಸರೇನು ?

“ ವಿಂಗ್ಸ್ ಆಫ್ ಫೈರ್ ” ( ಅಗ್ನಿಜ್ವಾಲೆ ಯಾವಾಗಲೂ ಊರ್ಧ್ವಮುಖಿ ) ಎಂಬುದು ಕಲಾಂರವರ ಆತ್ಮ ಚರಿತ್ರೆಯಾಗಿದೆ .

4 ) ದೇವರಿಗೆ ಹತ್ತಿರವಾದವರು ಯಾರು ?

ಯಾರು ಭಗವಂತನ ಸೇವೆ ಮಾಡುತ್ತಾರೋ ಅವರೇ ದೇವರಿಗೆ ಹತ್ತಿರವಾದವರು .

5 ) ಕಲಾಂರವರ ಕ್ರಿಯಾಶೀಲತೆಗೆ ಸಾಕ್ಷಿ ಯಾವುದು ?

ಅಂತಾರಾಷ್ಟ್ರೀಯ ಕ್ಷಿಪಣಿ ಕೇಂದ್ರವಾಗಿ ಹೈದರಾಬಾದಿನ ಸಮೀಪದ ಬರಡು ಭೂಮಿಯನ್ನು “ ಸಂಶೋಧನಾ ಕೇಂದ್ರ ಇಮಾರತ್ ” ಎಂಬ ಹೆಸರಿನಲ್ಲಿ ಸ್ಥಾಪಿಸಿದರು . ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ .

6 ) ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರು ?

ಮಗುವೇ ಭೂಮಿಯ ಮೇಲಿನ ಮೊದಲ ವಿಜ್ಞಾನಿ

7 ) ಕಲಾಂರವರು ಯಾವ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರೊಫೆಸರ್ ಆಗಿದ್ದರು? .

ಕಲಾಂರವರು ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರೊಫೆಸರ್ ಆಗಿದ್ದರು .

8 ) ಕಲಾಂರವರು ರಾಷ್ಟ್ರಪತಿಯ ಸ್ಥಾನಕ್ಕೆ ಆಯ್ಕೆಯಾದ ಸುದ್ದಿ ತಿಳಿದಾಗ ಅವರು ಎಲ್ಲಿದ್ದರು ?

ಕಲಾಂರವರು ರಾಷ್ಟ್ರಪತಿಯ ಸ್ಥಾನಕ್ಕೆ ಆಯ್ಕೆಯಾದ ಸುದ್ದಿ ತಿಳಿದಾಗ ಅವರು ಚೆನ್ನೈನಲ್ಲಿದ್ದರು .

9 ) ಕಲಾಂರವರನ್ನು ಶಾಲೆಗೆ ಕಳುಹಿಸುವಂತೆ ಪ್ರೇರೇಪಿಸಿದವರು ಯಾರು ?

ಕಲಾಂರವರನ್ನು ಶಾಲೆಗೆ ಕಳುಹಿಸುವಂತೆ ಪ್ರೇರೇಪಿಸಿದವರು “ ಶಿವಸುಬ್ರಮಣ್ಯ ಅಯ್ಯರ್ ” .

II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

1 ) ಕಲಾಂರವರು ತಾವು ಆತ್ಮಕಥೆ ಬರೆದುದು ಏತಕ್ಕಾಗಿ ?

ಯಾವುದೋ ಮೂಲೆಯಲ್ಲಿನ ಊರಿನಲ್ಲಿ ಹುಟ್ಟಿ , ಸಾಮಾಜಿಕವಾಗಿ ಸೌಲಭ್ಯಗಳಿಂದ ವಂಚಿತವಾಗಿರುವ ಮಗುವಿಗೆ ಅದರಂತದೆ ಪರಿಸರದಲ್ಲಿದ್ದ ನನ್ನ ಭವಿಷ್ಯ ಅರಳಿದ್ದನ್ನು ಓದಿದಾಗ ಭರವಸೆ ಮೂಡಬಹುದು . ಅಂತಹ ಮಕ್ಕಳಿಗೆ ತಾವು ಹಿಂದುಳಿದವರು , ಅಸಮರ್ಥರು ಅನ್ನುವ ಭ್ರಮೆಯಿಂದ ಬಿಡುಗಡೆ ಹೊಂದಲು ನನ್ನ ಬದುಕು ಸ್ಫೂರ್ತಿ ನೀಡಬಹುದೇನೋ ಅದಕ್ಕಾಗಿ ತಾವು ಆತ್ಮಕಥೆ ಬರೆದುದಾಗಿ ಕಲಾಂರವರು ಹೇಳಿಕೊಂಡಿದ್ದಾರೆ .

2 ) ಕಲಾಂರವರ ಬದುಕಿನ ಮಂತ್ರ ಯಾವುದು ?

ಅಬ್ದುಲ್ ಕಲಾಂರವರು ತಮ್ಮನ್ನು ತಾವು ತೊಡಗಿಸಿಕೊಂಡದ್ದು ಪ್ರಶಸ್ತಿ , ಪುರಸ್ಕಾರ , ಹಣಕ್ಕಾಗಿ ಅಲ್ಲ . ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೇ , ಯಾರು ಅವರುಗಳ ಸೇವೆ ಮಾಡುತ್ತಾರೋ ಅವರೇ ದೇವರಿಗೆ ಹತ್ತಿರವಾದವರು ಎಂಬುದು ಅವರ ಬದುಕಿನ ಮಂತ್ರವಾಗಿತ್ತು .

3 ) ಕಲಾಂ ಅವರು ಬಂಡೆಗಳ ಬಸಿರಲ್ಲಿ ಕಂಡದ್ದೇನು ?

ಕಲಾಂ ಅವರು ಬಂಡೆಗಳ ಬಸಿರಲ್ಲಿ “ ಶಿವನ ನಿಹಿತ ಶಕ್ತಿಯನ್ನು ಕಂಡರು ಕ್ಷಿಪಣಿರೂಪದಲ್ಲಿ ಶಕ್ತಿ ಹೊರಬರಲು ಕಂಪಿಸುತ್ತಿರುವುದನ್ನು ಅವರ ಒಳಗಣ್ಣು ನೋಡಿತು .

4 ) ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರಿ ಮಂತ್ರ ಯಾವುದು ?

ಕಲಾಂ ಮೇಷ್ಟ್ರು ಹೇಳಿದ ಪಂಚಾಕ್ಷರಿ ಮಂತ್ರವೆಂದರೆ ಕುತೂಹಲ , ಆಲೋಚನಾಶಕ್ತಿ , ಜ್ಞಾನ ( ಅರಿವು ) , ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಗುರಿಸಾಧಿಸುವ ಛಲ .

5 ) ವಿ.ಜೆ. ಸುಂದರಮ್ ಸಿಕಂದರಾಬಾದ್ ಶಾಲಾ ಬಾಲಕಿ ಬಗೆಗೆ ಹೇಳಿದ ಹೆಮ್ಮೆಯ ಮಾತುಗಳಾವುವು ?

ಎ.ಜೆ.ಸುಂದರಮ್‌ರವರು ಸಿಕಂದರಾಬಾದ್ ಶಾಲಾ ಬಾಲಕಿ ಬಗೆಗೆ ಹೇಳಿದ ಹೆಮ್ಮೆಯ ಮಾತುಗಳೆಂದರೆ ಈ ಬಾಲಕಿ ನಮ್ಮ ಕ್ಷಿಪಣಿಯ ಆಕಾರ , ಗಾತ್ರ ಕುರಿತು ಒಂದಿಷ್ಟು ವಿವರ ಕೇಳಿದ್ದಳು . ನಾನು ಮಾಹಿತಿ ನೀಡಿದ್ದೆ . ನೋಡಿ ಎಂತಹ ಅದ್ಭುತ ಮಾದರಿ ತಯಾರಿಸಿದ್ದಾಳೆ ಎಂದರು .

6 ) ಕಲಾಂರವರ ದೃಷ್ಟಿಯಲ್ಲಿ ಕನಸುಗಳು ಏನಾಗುತ್ತವೆ ?

ಕಲಾಂರವರ ದೃಷ್ಟಿಯಲ್ಲಿ ಕನಸುಗಳು ಆಲೋಚನೆಗಳಾಗುತ್ತವೆ . ಆಲೋಚನೆಗಳು ಸೃಜನಾತ್ಮಕ ಕ್ರಿಯೆಗಳಾಗಿ ಪರಿವರ್ತನೆಗೊಳ್ಳುತ್ತವೆ .

III. ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )

1 ) ತಮ್ಮನ್ನು ಭೇಟಿಯಾದ ಮಕ್ಕಳಿಗೆ ಕಲಾಂ ಹೇಳಿದ್ದೇನು ?

ತಮ್ಮನ್ನು ಭೇಟಿಯಾದ ಮಕ್ಕಳಿಗೆ ಕಲಾಂರವರು ಪಂಚಾಕ್ಷರಿ ಮಂತ್ರವನ್ನು ಉಪದೇಶಿಸಿದರು . ಅದೆಂದರೆ ಕುತೂಹಲ , ಆಲೋಚನಾ ಶಕ್ತಿ , ಜ್ಞಾನ ( ಅರಿವು ) , ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಗುರಿ ಸಾಧಿಸುವ ಛಲ ಎಲ್ಲರಲ್ಲಿಯೂ ಇರಬೇಕು . ಮಕ್ಕಳಿಗೆ ಅವರು ಯಾವಾಗಲೂ ಹೇಳುತ್ತಿದ್ದುದು ಒಂದೇ ಮಾತು – ಎಲ್ಲವನ್ನು ಪ್ರಶ್ನಿಸಿ , ಪ್ರಶ್ನೆಗಳಿಂದ ವಿಕಾಸಗೊಂಡದ್ದೇ ವಿಜ್ಞಾನ .

2 ) ಚೆನ್ನೈನಲ್ಲಿ ನಡೆದ ಪದ್ಮ ಶೇಷಾದ್ರಿ ಬಾಲಭವನದ ಪ್ರೌಢಶಾಲೆಯಲ್ಲಿ ನಡೆದ ಕ್ವಿಜ್ ಕಾರ್ಯಕ್ರಮದ ಔಚಿತ್ಯವನ್ನು ಕುರಿತು ವಿವರಿಸಿ .

ಚೆನ್ನೈನಲ್ಲಿ ಪದ್ಮಶೇಷಾದ್ರಿ ಬಾಲಭವನದ ಪ್ರೌಢಶಾಲೆಯಲ್ಲಿ ಕ್ವಿಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಕ್ವಿಜ್ ಮಾಸ್ಟರ್ ಆಗಿದ್ದವರು ಅಬ್ದುಲ್‌ಕಲಾಂ , ಗಹನವಾದ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಒಂದು ಪ್ರಯತ್ನವಾಗಿತ್ತು . ಅಲ್ಲದೆ ಮಕ್ಕಳಲ್ಲಿ ಸಹಜವಾಗಿರುವ ಗುಣ ಕುತೂಹಲ , ಆ ಕುತೂಹಲವನ್ನು ಪ್ರಶ್ನೆಗಳ ರೂಪದಲ್ಲಿ ಹರಿಬಿಡುತ್ತಿದ್ದರು . ಪ್ರಶ್ನೆಗಳನ್ನು ಕೇಳುವುದು , ಪ್ರಶ್ನೆಗಳಿಗೆ ಉತ್ತರಿಸುವುದರ ಮೂಲಕ ಮಕ್ಕಳಲ್ಲಿ ಜಾಗ್ರತೆಯನ್ನು ಬೆಳೆಸುವುದೇ ಈ ಕ್ವಿಜ್ ಕಾರ್ಯಕ್ರಮದ ಉದ್ದೇಶವಾಗಿತ್ತು . ಹಾಗೂ ಅದರ ಔಚಿತ್ಯವಾಗಿತ್ತು .

3 ) ತಾಯಿ – ತಂದೆ ಶಿಕ್ಷಕರು ಸೇರಿ ಆದ ತ್ರಿಭುಜವೇ ಉತ್ತಮ ಬದುಕಿಗೆ ಆದರ್ಶ ಮಾದರಿ ಹೇಗೆ ? ವಿವರಿಸಿ .

ಮಕ್ಕಳನ್ನು ಬುದ್ಧಿವಂತರೂ ಮತ್ತು ಕಷ್ಟಪಟ್ಟು ಕೆಲಸ ಮಾಡುವಂತಹವರೂ ಆದ ಉತ್ತಮ ಮನುಷ್ಯರನ್ನಾಗಿ ಮಾಡುವುದು ತಂದೆ – ತಾಯಿಯರ ಆದ್ಯ ಕರ್ತವ್ಯವಾಗಿದೆ . ಅಧ್ಯಾಪಕರು ಕಲಿಕೆ ಮತ್ತು ಜ್ಞಾನದ ಬೆಳಕನ್ನು ಮಕ್ಕಳಿಗೆ ನೀಡುವ ಕಿಟಕಿಗಳು , ಮಕ್ಕಳಲ್ಲಿ ಕ್ರಿಯಾಶೀಲತೆ ಮೊಳೆಯುವಂತೆ ಮಾಡುವ ಆದರ್ಶ ವ್ಯಕ್ತಿಗಳು ತಾಯಿ , ತಂದೆ , ಶಿಕ್ಷಕರು ಸೇರಿ ಆದ ತಿಭಜವೇ ಉತ್ತಮ ಬದುಕಿಗೆ ಆದರ್ಶ ಮಾದರಿ , ಈ ಮೂವರು ಶ್ರದ್ಧೆಯಿಂದ ದುಡಿದಾಗ ಮಾತ್ರ ಭಾರತಕ್ಕೆ ಹೊಸ ತಾರುಣ್ಯ ಬರುತ್ತದೆ . ಮಾತಾಪಿತೃಗಳ ಹಿಂದೆ ಶಾಲೆ ಮತ್ತು ಶಿಕ್ಷಕರ ಹಿಂದೆ ಮನೆ ಇರುತ್ತದೆ . ಆದ್ದರಿಂದ ತಾಯಿ – ತಂದೆ ಶಿಕ್ಷಕರು ಸೇರಿ ಆದ ತ್ರಿಭುಜವೇ ಉತ್ತಮ ಬದುಕಿಗೆ ಆದರ್ಶ ಮಾದರಿ .

4 ) ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಲಾಂ ಹೇಳಿದ್ದೇನು ?

ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಲಾಂರವರು ಕನಸುಗಳು ಆಲೋಚನೆಗಳಾಗುತ್ತವೆ . ಆಲೋಚನೆಗಳು ಸೃಜನಾತ್ಮಕ ಕ್ರಿಯೆಗಳಾಗಿ ಪರಿವರ್ತನೆಗೊಳ್ಳುತ್ತವೆ ಎಂದು ಹೇಳಿದರು . ಇದುವರೆಗೆ ಏನಾಗಿದೆಯೋ ಅದೆಲ್ಲ ಒಳ್ಳೆಯದಕ್ಕೆ ಈಗ ಆಗುತ್ತಿರುವುದು ಒಳ್ಳೆಯದಕ್ಕಾಗಿಯೇ ಮತ್ತು ಮುಂದೆ ಆಗಲಿರುವುದು ಒಳ್ಳೆಯದಕ್ಕಾಗಿಯೇ . ಜೀವನ ಮೌಲ್ಯಗಳ ಬಗ್ಗೆ ತಿಳಿಸುತ್ತ “ ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು ” ಎಂದು ಹೇಳುತ್ತ ಎಲ್ಲರಿಗೂ ತಮ್ಮೊಟಿಗೆ ಹೇಳಲು ಹೇಳಿದರು . ಅವರು ವ್ಯಕ್ತಿಗಿಂತ ಎಂದು ವಾಕ್ಯ ಮುಗಿಸುವ ಮೊದಲೇ ಎಲ್ಲರೂ ‘ ರಾಷ್ಟ್ರ ದೊಡ್ಡದು ‘ ಎಂದು ದನಿಗೂಡಿಸಿದರು .

5 ) ಕಲಾಂರವರು ಯಾವಾಗಲೂ ಸಾಧ್ಯತೆಗಳನ್ನು ಅರಸುವ ಆಶಾ ಜೀವಿ ಹೇಗೆ ?ವಿವರಿಸಿ .

ಕಲಾಂರವರು ಯಾವಾಗಲೂ ಸಾಧ್ಯತೆಗಳನ್ನು ಅರಸುವ ಆಶಾಜೀವಿ . ಅವರಿಗೆ ಸಾಧ್ಯತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸುವುದು , ಸಾಧ್ಯವಿಲ್ಲ ಎಂದು ಹೇಳುವುದು ಅದಕ್ಕೆ ನೂರಾರು ಕಾರಣ ಕೊಡುವುದು ಅವರಿಗೆ ಸ್ವಲ್ಪವೂ ಇಷ್ಟವಿಲ್ಲದ್ದು , ಕಗ್ಗಲು , ಬಂಜರು ನಾಡಿನಲ್ಲಿ ಕ್ಷಿಪಣಿ ತಯಾರಿಸುವವರಿದ್ದಾಗ ಅನೇಕರು ಅಸಾಧ್ಯವೆಂದರು . ಆದರೆ ಆಶಾಜೀವಿಯಾದ ಕಲಾಂರವರು ಅದನ್ನು ಮಾಡಿ ತೋರಿಸಿದರು . ಇದು ಅವರು ಸಾಧ್ಯತೆಗಳನ್ನು ಅರಸುವ ಆಶಾಜೀವಿಗೆ ಉದಾಹರಣೆಯಾಗಿದೆ .

IV. ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ

1 “ ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು . ”

ಪ್ರೊ . ಎಚ್.ಆರ್ . ರಾಮಕೃಷ್ಣರಾವ್ ಅವರು ಬರೆದಿರುವ ‘ ಬದುಕನ್ನು ಪ್ರೀತಿಸಿದ ಸಂತ ‘ ಎಂಬ ವ್ಯಕ್ತಿಚಿತ್ರದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಡಾ || ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾದ ಸುದ್ದಿ ಪ್ರಕಟವಾದಾಗ ಚೆನ್ನೈನಲ್ಲಿದ್ದರು . ಸುದ್ದಿ ಮಾಧ್ಯಮದವರು ಅವರ ಸಂದರ್ಶನ ಪಡೆಯಲು ಸುತ್ತುವರೆದಾಗ ರಾಜಕಾರಣಿಯಂತೆ ವರ್ತಿಸದ ಕಲಾಂ ಅವರು ಪತ್ರಕರ್ತ ರನ್ನು ಮಕ್ಕಳಂತೆ ಕಂಡು , ಅವರೆಲ್ಲರ ಬಾಯಿಂದ ಒಟ್ಟಾಗಿ ” ವ್ಯಕ್ತಿಗಿಂತ ರಾಷ್ಟ್ರದೊಡ್ಡದು ” ಎಂಬುದನ್ನು ಹೇಳುವಂತೆ ಮಾಡಿದ ಸಂದರ್ಭವಿದಾಗಿದೆ .

2. “ ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು . ”

ಪ್ರೊ . ಎಚ್.ಆರ್ . ರಾಮಕೃಷ್ಣರಾವ್ ಅವರ ‘ ಬದುಕನ್ನು ಪ್ರೀತಿಸಿದ ಸಂತ ಎಂಬ ವ್ಯಕ್ತಿಚಿತ್ರದಿಂದಾಯ್ದ ಈ ಮೇಲಿನ ಮಾತನ್ನು ಕಲಾಂ ಅವರು ಹುಡುಗನೊಬ್ಬನ ಪ್ರಶ್ನೆಗೆ ಉತ್ತರವಾಗಿ ಹೇಳಿದ್ದಾರೆ . ಹುಡುಗನೊಬ್ಬನು ಮೊದಲ ವಿಜ್ಞಾನಿ ಯಾರೆಂದು ಕಲಾಂ ಅವರನ್ನು ಪ್ರಶ್ನಿಸಿ ದ್ದನು . ಅದಕ್ಕೆ ಉತ್ತರಿಸುತ್ತ ಕಲಾಂ ಅವರು ವಿಜ್ಞಾನದ ಮೂಲವನ್ನು ಪರಿಚಯಿಸಿದ್ದಾರೆ . ಅವರ ಅಭಿಪ್ರಾಯದಲ್ಲಿ ವಿಜ್ಞಾನದ ಅಡಿಪಾಯ ಯಾವುದೆಂದರೆ ಪ್ರಶ್ನೆ ಕೇಳುವುದು . ವಿಜ್ಞಾನ ಹುಟ್ಟಿದ್ದು ಮತ್ತು ಈಗಲೂ ಜೀವಂತವಾಗಿರುವುದು ಪ್ರಶ್ನೆಗಳಿಂದ ಮನೆಯಲ್ಲಿ ಪ್ರಶ್ನೆ ಕೇಳುವ ಮಕ್ಕಳೇ ಮೊದಲ ವಿಜ್ಞಾನಿಗಳೆಂಬ ಕಲಾಂ ಅವರ ಅಭಿಪ್ರಾಯವು ಸೂಕ್ತವಾದ ಉತ್ತರವಾಗಿದೆ .

3. “ ನೀನು ಯಾವ ಸ್ಕೂಲಿನಲ್ಲಿ ಓದುತ್ತಿದ್ದೀಯೆ ? ”

ಪ್ರೊ . ಎಚ್.ಆರ್ . ರಾಮಕೃಷ್ಣರಾವ್ ಅವರು ರಚಿಸಿರುವ ‘ ಬದುಕನ್ನು ಪ್ರೀತಿಸಿದ ಸಂತ ‘ ಎಂಬ ವ್ಯಕ್ತಿಚಿತ್ರದಲ್ಲಿ ಕಲಾಂ ಅವರು ಸಿಕಂದರಾಬಾದಿನ ಶಾಲಾ ಬಾಲಕಿಯನ್ನು ಈ ಮೇಲಿನಂತೆ ಪ್ರಶ್ನಿಸಿದ್ದಾರೆ . ೧೯೮೮ ರಲ್ಲಿ ಪೃಥ್ವಿ ಕ್ಷಿಪಣಿಯ ಉಡಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಸಿಕಂದರಾಬಾದಿನ ಶಾಲಾ ಬಾಲಕಿಯೊಬ್ಬಳು ಪೃಥ್ವಿಯ ಮಾದರಿ ಚಿತ್ರವನ್ನು ಬರೆದು ಅದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು . ಇದನ್ನು ನೋಡಿ ಸಂತಸಪಟ್ಟ ಕಲಾಂ ಆ ಹುಡುಗಿಗೆ ನಿಜವಾದ ಪೃಥ್ವಿ ಕ್ಷಿಪಣಿಯನ್ನು ನೋಡಿ ಆನಂದಿಸುವ ಅವಕಾಶ ಕಲ್ಪಿಸಿಕೊಟ್ಟರು . ಸಹಭೋಜನ ಸಮಯದಲ್ಲಿ ಕಲಾಂ ಆ ಬಾಲಕಿಯೊಂದಿಗೆ ಮಾತನಾಡುತ್ತ ಆಕೆಯ ಶಾಲೆ , ತಂದೆಯ ಉದ್ಯೋಗ , ಆಕೆಯ ಹವ್ಯಾಸಗಳ ಬಗ್ಗೆ ವಿಚಾರಿಸಿದ ಸಂದರ್ಭದಲ್ಲಿ ಈ ಮೇಲಿನ ವಾಕ್ಯವಿದೆ . ಕಲಾಂ ಅವರ ಪ್ರೋತ್ಸಾಹಕ ಗುಣ , ಸರಳತೆಗೆ ಈ ಸಂದರ್ಭವು ಸಾಕ್ಷಿಯಾಗಿದೆ .

4. ಮಗುವೇ ಮೊದಲ ವಿಜ್ಞಾನಿ . ”

ಪ್ರೊ . ಎಚ್.ಆರ್ . ರಾಮಕೃಷ್ಣರಾವ್ ಅವರು ಬರೆದಿರುವ ‘ ಬದುಕನ್ನು ಪ್ರೀತಿಸಿದ ಸಂತ ‘ ಎಂಬ ವ್ಯಕ್ತಿಚಿತ್ರದಲ್ಲಿ ಕಲಾಂ ಅವರು ಬಾಲಕನೊಬ್ಬನ ಪ್ರಶ್ನೆಗೆ ಉತ್ತರಿಸುತ್ತಾ ಈ ಮೇಲಿನ ಮಾತನ್ನು ಹೇಳಿದ್ದಾರೆ .ಬಾಲಕನೊಬ್ಬ ಕಲಾಂ ಅವರಿಗೆ “ ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರಾಗಿರಬಹುದು ? ದಯವಿಟ್ಟು ಹೇಳಿ ? ” ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಕಲಾಂ ಅವರು , “ ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು , ಕೊನೆಯಿಲ್ಲದಷ್ಟು ಪ್ರಶ್ನೆಗಳನ್ನು ಕೇಳುವವರು ಮಕ್ಕಳೇ ಎಂಬುದು ಪೋಷಕರಿಗೂ ಮತ್ತು ಶಿಕ್ಷಕರಿಗೂ ಚೆನ್ನಾಗಿ ತಿಳಿದಿದೆ . ಆದ್ದರಿಂದ ಮಗುವೇ ಮೊದಲ ವಿಜ್ಞಾನಿ ” ಎಂದು ಉತ್ತರಿಸಿದರು . ಎಲ್ಲರಿಗೂ ಈ ಉತ್ತರ ಸಮ್ಮತವೆನ್ನಿಸಿ ಚಪ್ಪಾಳೆ ತಟ್ಟಿದರು .

5. “ಮಿ , ಪ್ರೆಸಿಡೆಂಟ್ ನಿಮ್ಮ ಯಶಸ್ಸಿನ ಗುಟ್ಟೇನು ? ”

ಪ್ರೊ . ಎಚ್.ಆರ್ . ರಾಮಕೃಷ್ಣರಾವ್ ಅವರು ಬರೆದಿರುವ ‘ ಬದುಕನ್ನು ಪ್ರೀತಿಸಿದ ಸಂತ ‘ ಎಂಬ ವ್ಯಕ್ತಿಚಿತ್ರದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ . ಅಬ್ದುಲ್ ಕಲಾಂ ಅವರನ್ನು ಭೇಟಿಯಾದ ಮಕ್ಕಳು ಅವರನ್ನು ಯಾವಾಗಲೂ ಕೇಳುವ ಪ್ರಶ್ನೆ “ ಮಿ . ಪ್ರೆಸಿಡೆಂಟ್ ನಿಮ್ಮ ಯಶಸ್ಸಿನ ಗುಟ್ಟೇನು ? ” ಎಂಬುದಾಗಿತ್ತು . ಅದಕ್ಕೆ ಕಲಾಂ ಅವರ ಉತ್ತರದ ಪಂಚಾಕ್ಷರಿ ಮಂತ್ರವೆಂದರೆ ಕುತೂಹಲ , ಆಲೋಚನಾ ಶಕ್ತಿ , ಜ್ಞಾನ ( ತಿಳಿವು ) , ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಗುರಿ ಸಾಧಿಸುವ ಛಲ ಎಂಬುದಾಗಿತ್ತು . ಕಲಾಂ ಅವರ ಈ ಉತ್ತರ ಪ್ರತಿಯೊಬ್ಬರ ಬದುಕಿನ ಮೂಲಮಂತ್ರ ವಾಗಬೇಕಾಗಿದೆ .

6. “ ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೆ . ”

ಪ್ರೊ , ಎಚ್‌.ಆರ್‌ . ರಾಮಕೃಷ್ಣರಾವ್ ಅವರು ಬರೆದಿರುವ ‘ ಬದುಕನ್ನು ಪ್ರೀತಿಸಿದ ಸಂತ ‘ ಎಂಬ ವ್ಯಕ್ತಿಚಿತ್ರದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .ಡಾ || ಎ.ಪಿ.ಜೆ. ಅಬ್ದುಲ್ ಕಲಾಂ ಅವರು ವಿಜ್ಞಾನ – ತಂತ್ರಜ್ಞಾನಗಳ ಸಂಕೀರ್ಣ ಪ್ರಪಂಚದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಪ್ರಶಸ್ತಿ , ಪುರಸ್ಕಾರ ಅಥವಾ ಹಣ ಗಳಿಸಲಲ್ಲ ಎಂಬುದನ್ನು ವಿವರಿಸುತ್ತಾ ಲೇಖಕರು “ ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೆ ; ಯಾರು ಅವರುಗಳ ಸೇವೆ ಮಾಡುತ್ತಾರೋ ಅವರೇ ದೇವರಿಗೆ ಹತ್ತಿರವಾದವರು ” ಎಂಬುದು ಕಲಾಂ ಅವರ ಬದುಕಿನ ಮಂತ್ರವಾಗಿತ್ತು ಎಂದಿದ್ದಾರೆ . ಕಲಾಂ ಅವರ ನಿಷ್ಕಾಮಕರ್ಮ ದುಡಿಮೆಗೆ ಈ ಮಾತು ಕನ್ನಡಿ ಹಿಡಿಯುತ್ತದೆ .

7. ” ಎಲ್ಲ ಮಕ್ಕಳ ಕನಸೂ ಒಂದೇ . ”

ಪ್ರೊ . ಎಚ್.ಆರ್ . ರಾಮಕೃಷ್ಣರಾವ್ ಅವರು ಬರೆದಿರುವ ‘ ಬದುಕನ್ನು ಪ್ರೀತಿಸಿದ ಸಂತ ‘ ಎಂಬ ವ್ಯಕ್ತಿಚಿತ್ರದ ಕೊನೆಯಲ್ಲಿ ಕಲಾಂ ಅವರು ಹೇಳಿರುವ ಈ ಮೇಲಿನ ವಾಕ್ಯವನ್ನು ಗಮನಿಸಬಹುದು . ಕಲಾಂ ಅವರಿಗೆ ಮಕ್ಕಳೊಂದಿಗೆ ಸಂವಾದಿಸುವುದೆಂದರೆ ತುಂಬಾ ಪ್ರೀತಿ , ಅವರು ಅಧ್ಯಕ್ಷರಾದ ತರುವಾಯ ಲಕ್ಷಾಂತರ ಮಕ್ಕಳನ್ನು ಭೇಟಿಮಾಡಿದ್ದಾರೆ . ಬಡವ ಶ್ರೀಮಂತರೆಂಬ ಭೇದ ಕಲಾಂರಿಗೆ ಗೊತ್ತಿಲ್ಲ . ಎಲ್ಲ ಮಕ್ಕಳ ಕನಸೂ ಒಂದೇ ಆಗಿದೆ ಎಂದು ಅವರು ಹೇಳಿದ್ದಾರೆ . ಅದೆಂದರೆ “ ಎಲ್ಲರೂ ಶಾಂತಿ , ಸಮೃದ್ಧಿ ಮತ್ತು ಸುಭದ್ರ ಭಾರತದಲ್ಲಿ ಬದುಕಬಯಸುತ್ತಾರೆ . ” ಕಲಾಂ ಅವರು ಮಕ್ಕಳ ಉಜ್ವಲ ಭವಿಷ್ಯಕ್ಕೆಬೇಕಾದ ಭಾರತ ಹೇಗಿರಬೇಕೆಂಬುದನ್ನುಈ ಮೇಲಿನ ಮಾತಿನ ಮೂಲಕ ಸ್ಪಷ್ಟಪಡಿಸಿದ್ದಾರೆ.

2nd Puc Kannada Lessons Badukannu Preethisida Santha Notes Question Answer Guide Pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *