ದ್ವಿತೀಯ ಪಿ.ಯು.ಸಿ ತಿರುಳ್ಗನ್ನಡದ ಬೆಳ್ನುಡಿ ಕನ್ನಡ ನೋಟ್ಸ್‌ | 2 PUC Tirulgannadada Belnudi Kannada Notes

ತಿರುಳ್ಗನ್ನಡದ ಬೆಳ್ನುಡಿ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd Puc Notes Kannada Tirulgannadada Belnudi 7th Lesson Question Answer Pdf Download

ತರಗತಿ : ದ್ವಿತೀಯ ಪಿ.ಯು.ಸಿ

ಪಾಠದ ಹೆಸರು : ತಿರುಳ್ಗನ್ನಡದ ಬೆಳ್ನುಡಿ

ಕೃತಿಕಾರರ ಹೆಸರು : ಮುದ್ದಣ

2nd Puc Notes Kannada Tirulgannadada Belnudi

ಕೃತಿಕಾರರ ಪರಿಚಯ :

ʼಮುದ್ದಣ ‘ ( ೧೮೬೯-೧೯೦೧ ) ಎಂಬುದು ಲಕ್ಷ್ಮೀ ನಾರಾಯಣಪ್ಪ ಎಂಬ ಕವಿಯ ಕಾವ್ಯನಾಮ . ಉಡುಪಿ ಜಿಲ್ಲೆಯ ನಂದಳಿಕೆ ಎಂಬ ಗ್ರಾಮ ಈತನ ಹುಟ್ಟೂರು . ಪಾಠಾಳಿ ತಿಮ್ಮಪ್ಪಯ್ಯ ಮತ್ತು ಮಹಾಲಕ್ಷ್ಮಮ್ಮ ಈತನ ತಂದೆ – ತಾಯಿಯರು . ಬಡತನ ಮತ್ತು ಕ್ಷಯರೋಗಕ್ಕೆ ಬಲಿಯಾಗಿ ಚಿಕ್ಕವಯಸ್ಸಿನಲ್ಲೇ ತೀರಿಕೊಂಡ ಮುದ್ದಣ ಕವಿಯು ಉಡುಪಿಯ ಹೈಸ್ಕೂಲಿ ನಲ್ಲಿ ವ್ಯಾಯಾಮ ಶಿಕ್ಷಕನಾಗಿಯೂ , ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತನಾಗಿಯೂ ಕೆಲಸ ನಿರ್ವಹಿಸಿದ್ದನು . ಪ್ರಯೋಗಶೀಲ ವ್ಯಕ್ತಿತ್ವದ ಮುದ್ದಣನು ಸಾಹಿತ್ಯ , ಸಂಗೀತ , ಯಕ್ಷಗಾನ ಕಲೆಗಳಲ್ಲಿ ವಿಶೇಷ ಆಸಕ್ತಿ ಮತ್ತು ಪರಿಶ್ರಮ ಹೊಂದಿದ್ದನು .

ಅದ್ಭುತ ರಾಮಾಯಣ ‘ ʼಶ್ರೀರಾಮ ಪಟ್ಟಾಭಿಷೇಕ ‘ , ‘ ರಾಮಾಶ್ವಮೇಧ ‘ ಮುಂತಾದ ಕೃತಿಗಳನ್ನು ಈತ ರಚಿಸಿರುವನು . ‘ ರತ್ನಾವತೀ ಕಲ್ಯಾಣ ‘ ‘ ಕುಮಾರ ವಿಜಯ ‘ ಎಂಬೆರಡು ಯಕ್ಷಗಾನ ಪ್ರಸಂಗಗಳನ್ನೂ ರಚಿಸಿರುವ ಈತ ವಾಲ್ಮೀಕಿ ರಾಮಾಯಣ ಮತ್ತು ಭಗವದ್ಗೀತೆಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾನೆ . ಕಾಮಶಾಸ್ತ್ರ ಕುರಿತ ಗ್ರಂಥವೊಂದು ಈತನ ಹೆಸರಿನಲ್ಲಿದೆ . ‘ ಗೋದಾವರಿ ‘ ಎಂಬ ಅಪೂರ್ಣ ಕಾದಂಬರಿಯನ್ನು ಈತ ರಚಿಸಿದ್ದನು .

ಪಾಠದ ಆಶಯ :

ನಡುಗನ್ನಡ ಸಾಹಿತ್ಯವು ಹಿಂದೆ ಸರಿದು ಹೊಸಗನ್ನಡ ಸಾಹಿತ್ಯ ರೂಪುಗೊಳ್ಳುತ್ತಿದ್ದ ಸಂಕ್ರಮಣ ಕಾಲದಲ್ಲಿ ಮುದ್ದಣನು ಬದುಕಿ ಕೃತಿರಚನೆ ಮಾಡಿರುವನು . ಕನ್ನಡ ಭಾಷೆಯು ಇಂಗ್ಲಿಷ್ ಭಾಷೆಯ ಪ್ರಭಾವದಿಂದ ಹೊಸ ಸ್ಥಿತ್ಯಂತರಕ್ಕೆ ಒಳಪಡುತ್ತಿದ್ದ ಸಂದರ್ಭವದು . ಈ ಸಂದಿಗ್ಧ , ಸಂಕ್ರಮಣ ಕಾಲದ ಗೊಂದಲಗಳು , ಬದಲಾವಣೆಯ ಹಾದಿ ಮುಂತಾದವುಗಳ ಚರ್ಚೆಯನ್ನು ಮುದ್ದಣನಲ್ಲಿ ಕಾಣಬಹುದು . ‘ ಪದ್ಯಂ ವಧ್ಯಂ ಗದ್ಯಂ ಹೃದ್ಯಂ ” ಎಂಬ ಅವನ ಹೇಳಿಕೆಯು ಆಧುನಿಕ ಕಾಲದ ಹುಟ್ಟಿನೊಂದಿಗೆ ಪದ್ಯವನ್ನು ಪಕ್ಕಕ್ಕೆ ಒತ್ತರಿಸಿ ಗದ್ಯ ಆ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತಿದ್ದುದರ ಸೂಚನೆಯೂ ಆಗಿದೆ . ಗದ್ಯ ಆಧುನಿಕ ಕಾಲದ ಸಂಕೀರ್ಣತೆಯನ್ನು ವಿವರಗಳಲ್ಲಿ ಕಟ್ಟಿಕೊಟ್ಟ ಭಾಷಿಕರೂಪ . ‘ ಕನ್ನಡಂ ಕಸ್ತೂರಿಯಲ್ಲೆ ? ‘ ಎಂಬುದು ಸಂಸ್ಕೃತ ಭೂಯಿಷ್ಟತೆಯನ್ನು ವಿರೋಧಿಸುವಂತೆಯೂ ಅಚ್ಚಗನ್ನಡದ ದೇಸಿ ಶೈಲಿಯ ಬಗೆಗಿನ ಒಲವೂ ಆಗಿದೆ .

ದ್ವಿತೀಯ ಪಿ.ಯು.ಸಿ ತಿರುಳ್ಗನ್ನಡದ ಬೆಳ್ನುಡಿ ಕನ್ನಡ ನೋಟ್ಸ್‌ 2 PUC Tirulgannadada Belnudi Kannada Notes.

ಶಬ್ಧಾರ್ಥ :

ಸಂಪ್ರಾಪ್ತ – ಒದಗಿ ಬಂದಿರುವ ; ವರ್ಷಕಾಲ – ಮಳೆಗಾಲ ; ದೆವಸ – ದಿವಸ ; ಬೈಗುಂಬೊಱು – ಸಂಜೆಯ ಹೊತ್ತು : ಓಲಗ – ರಾಜನ ಸಭೆ , ದರ್ಬಾರು ; ಕಬ್ಬಿಗರ ಬಲ್ಲಹ – ಕವಿಗಳ ವಲ್ಲಭ , ಕವಿಗುರು ; ಬೊಜಮಟ್ಟು ಹೊರಹೊರಟು ; ಮೊರೆವೀಡು – ವಾಸದ ಮನೆ ಎಟ್ಟು – ಎದ್ದು ; ಚೌಕಿ – ಒಳಮನೆ ; ತನಿವಣ್ಣು – ರುಚಿಯಾದ ತಾಜಾ ಹಣ್ಣು : ಬಱಲೈ – ಆಯಾಸ , ಬಳಲಿಕೆ ; ಮುಡಿ – ಪರಿಹಾರವಾಗು , ಮುಕ್ತಾಯವಾಗು ; ಕೆಳದಿ – ಗೆಳತಿ ; ನಜುದಂಬುಲ ರಸವತ್ತಾದ ಕಂಪುಭರಿತ ತಾಂಬೂಲ ; ಬಲ್ಲೋನೆ – ಭಾರೀಮಳೆ , ಜಡಿಮಳೆ , ಬಗೆ – ಮನಸ್ಸು : ನಲ್ಗತೆ – ಸುಂದರವಾದ ಕಥೆ , ಹಿತಕರವಾದ ಕಥೆ : ಆವ ಗಹನ – ಅದು ಯಾವ ಕಷ್ಟ ;

ಪ್ರಬಂಧ – ಕಾವ್ಯ ; ಅರು – ಪ್ರೀತಿ ; ಬಟ್ಟೆದೋಱೆಪ ದಾರಿತೋರಿಸುವ , ಬದುಕಿನ ಮಾರ್ಗ ತಿಳಿಸುವ ; ರಸ – ಕಾವ್ಯಾನುಭವದಿಂದ ದೊರೆಯುವ ಒಂದು ಅನುಭೂತಿ , ರಸಾನುಭವ ( ರಸಗಳು ಒಂಬತ್ತು : ಶೃಂಗಾರ , ಹಾಸ್ಯ , ರೌದ್ರ , ಕರುಣ , ಬೀಭತ್ಸ , ವೀರ , ಭಯಾನಕ , ಅದ್ಭುತ ಮತ್ತು ಶಾಂತ ) ; ಒಳವು – ಇವೆ , ಇರುವವು ; ನಲ್ಕೆ – ಪ್ರೀತಿ , ಅನುಗ್ರಹ , ಕೃಪೆ ; ಒರೆ – ಹೇಳು ; ಬಿತ್ತರಿಪು – ವಿಸ್ತರಿಸಿ ಹೇಳು , ನಿರೂಪಿಸು ; ಬಲ್ಗತೆ – ದೊಡ್ಡಕಥೆ ; ಇರ್ಕೆ – ಇರಲಿ ; ಓರೊಂದು – ಒಂದೊಂದು ; ಇನಿಸಿನಿಸು – ಇಷ್ಟಿಷ್ಟು ;ವಧ್ಯಂ – ಅಪ್ರಿಯವಾದುದು , ತಿರಸ್ಕರಿಸಲು ಯೋಗ್ಯವಾದುದು ; ಹೃದ್ಯ – ಹಿತಕರವಾದುದು , ಪ್ರಿಯವಾದುದು , ಮನೋಹರವಾದುದು ;

ರನ್ನಗಡಗ – ರತ್ನದ ಕಡಗ ; ಪೊನ್ನ ಕಂಠಿಕೆ – ಬಂಗಾರದ ಒಂದೆಳೆಯ ಸರ , ಏಕಾವಳಿ , ಮುತ್ತಿನಹಾರ ; ಮೆಚ್ಚು – ಉಡುಗೊರೆ ; ಪೆಱತೇಂ – ಮತ್ತಿನ್ನೇನು , ಬೇರೆ ಏನು ; ಗಡಸುಗಾರ್ತಿ – ಗಟ್ಟಿಗಿತ್ತಿ : ಪೋಕೆ ಹೋಗಲಿ ; ಬಟೆಯಮ – ನಂತರವಲ್ಲವೆ ; ಕಬ್ಬ – ಕಾವ್ಯ ಕಚ್ಚಱ- ಕೈಕಡಗ , ಬಹುಮಾನವಾಗಿ ನೀಡುವ ಬಳೆ ( ಕಡಗ ) ; ಈಯೆನ್ – ಕೊಡುವುದಿಲ್ಲ ; ನೋಱೆರಿ – ನೋಡುವೆನು ; ಮುರುಳ್ – ಸಾರ , ಸತ್ತ : ಫಣೀಂದ್ರ – ನಾಗೇಂದ್ರ , ಆದಿಶೇಷ ; ವಸುಧೆ – ಭೂಮಿ ; ಬಸದಿ – ಚೈತ್ಯಾಲಯ , ಜೈನರ ಪೂಜಾಮಂದಿರ ;

ರಮಣಿ – ಪ್ರಿಯೆ , ಸುಂದರಿ ; ಕಚ – ಮುಡಿ , ತಲೆಗೂದಲು ; ಸಕ್ಕದ – ಸಂಸ್ಕೃತ ; ಅಱೆ – ತಿಳಿ ; ಆರ್ತೆನಿಲ್ಲ – ಸಮರ್ಥಳಿಲ್ಲ : ಬೆಳ್ಳುಡಿ – ಸವಿಮಾತು , ತಿಳಿಯಾದ ಭಾಷೆ ; ತಿರುಳನ್ನಡ – ಸಾರವತ್ತಾದ , ಅರ್ಥಪೂರ್ಣವಾದ ಕನ್ನಡ , ದೇಸಿ ಮಾತು : ಕತ್ತುರಿ – ಕಸ್ತೂರಿ ; ಪುರುಳು – ಸಾರ ; ರನ್ನವಣಿ – ರತ್ನದ ಮಣಿ , ರತ್ನದ ಹರಳು ; ಪೊನ್ನು – ಬಂಗಾರ ; ಒಸರು – ಜಿನುಗು ; ಚೆಂಬವಳ – ಕೆಂಪು ಹವಳ : ಲಕ್ಕಣ- ( ಕಾವ್ಯ ) ಲಕ್ಷಣ ; ಎಡೆಯೆಡೆ ಅಲ್ಲಲ್ಲಿ , ನಡುನಡುವೆ ; ಉಸಿರ್ವೆ – ಹೇಳುವೆನು .

Tirulgannadada Belnudi 7th Lesson Question Answer

ಅ ) ಒಂದು ಅಂಕದ ಪ್ರಶ್ನೆಗಳು :

1. ಯಾವ ಕತೆ ಹೇಳಬೇಕೆಂದು ಮನೋರಮೆ ಕೇಳಿದಳು ?

ರಾಮಾಯಣದ ಯಾವುದಾದರೂ ಪ್ರಸಂಗವನ್ನು ಹೇಳಬೇಕೆಂದು ಮನೋರಮೆ ಕೇಳಿಕೊಂಡಳು .

2. ಶೇಷನು ರಾಮಾಯಣದ ಕತೆಯನ್ನು ಯಾರಿಗೆ ಹೇಳಿದನು ?

ಶೇಷನು ರಾಮಾಯಣದ ಕಥೆಯನ್ನು ವಾತ್ಸಾಯನನಿಗೆ ಹೇಳಿದನು .

3. ಮುದ್ದಣ ಅರಮನೆಯಿಂದ ಬರುತ್ತಿರುವುದನ್ನು ನಿಂತು ನೋಡಿದವರಾರು ?

ಮುದ್ದಣ ಅರಮನೆಯಿಂದ ಬರುತ್ತಿರುವುದನ್ನು ಮನೋರಮೆಯು ನಿಂತು ನೋಡಿದಳು .

4. ಎಂತಹ ಗದ್ಯದಲ್ಲಿ ಕತೆ ಹೇಳೆಂದು ಮನೋರಮೆ ಕೇಳುವಳು ?

ಹೃದ್ಯವಾದ ಗದ್ಯದಲ್ಲಿ ಕಥೆ ಹೇಳೆಂದು ಮನೋರಮೆ ಕೇಳಿದಳು .

5. ಮನೋರಮೆ ಬಹುಮಾನವಾಗಿ ಏನನ್ನು ಕೊಡುವೆನೆಂದಳು ?

ಮನೋರಮೆ ಬಹುಮಾನವಾಗಿ ತನ್ನನ್ನೇ ತಾನು ಕೊಡುವುದಾಗಿ ಹೇಳಿದಳು .

6. ಕನ್ನಡವು ಕಸ್ತೂರಿಯಲ್ಲವೆ ! ಎಂದವರಾರು ?

ಕನ್ನಡವು ಕಸ್ತೂರಿಯಲ್ಲವೆ ಎಂದವರು ಮನೋರಮೆ .

7. ವಸುಧೆಗೆ ಒಡೆಯನೆನಿಸಿದವನು ಯಾರು ?

ವಸುಧೆಗೆ ಒಡೆಯನೆನಿಸಿದವನು ಶ್ರೀರಾಮಚಂದ್ರ

ಆ ) ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕಗಳ ಪ್ರಶ್ನೆಗಳು )

2nd Puc Notes Kannada Tirulgannadada Belnudi Notes

1. ಮನೋರಮೆ ಕತೆ ಹೇಳೆಂದು ಕೇಳಲು ಕಾರಣವೇನು ?

ಒಬ್ಬಳೇ ಇದ್ದು ಬೇಸರವಾಗಿದೆಯೆಂದು , ಜೊತೆಗೆ ಜಡಿಮಳೆ ಹಿಡಿದಿದೆಯೆಂದು ತನ್ನ ಬೇಸರ ಕಳೆಯಲು ಒಂದು ಒಳ್ಳೆಯ ನೀತಿಯುಕ್ತ , ಜೀವನಕ್ಕೆ ದಾರಿ ತೋರುವ ಕತೆ ಹೇಳಲು ಕೇಳಿದಳು .

2. ಕತೆಯನ್ನು ಯಾವ ರಸಗಳಲ್ಲಿ ಹೇಳಲೆಂದು ಮುದ್ದಣ ಕೇಳಿದನು ?

ಕತೆಯನ್ನು ಶೃಂಗಾರರಸದಲ್ಲಿ ಅಥವಾ ವೀರರಸದಲ್ಲಿ ಅಥವಾ ಹಾಸ್ಯರಸದೊಳಗೆ ಹೇಳಬೇಕೆ ಎಂದು ಮುದ್ದಣನು ಮನೋರಮೆಗೆ ಕೇಳಿದನು .

3. ಮುದ್ದಣವನ್ನು ಮನೋರಮೆ ಹೇಗೆ ಉಪಚರಿಸಿದಳು ?

ಸಂಜೆಯ ವೇಳೆ ಅರಮನೆಯ ದರ್ಬಾರಿನಲ್ಲಿ ಕವಿ ಗೋಷ್ಟಿಯನ್ನು ಮುಗಿಸಿ ಮನೆಗೆ ಬರುತ್ತಿರುವ ಮುದ್ದಣವನ್ನು ಮನೋರಮೆಯ ದೂರದಿಂದಲೇ ನೋಡಿ , ಅವನನ್ನು ಎದುರುಗೊಂಡು ಮನೆಗೆ ಬರುತ್ತಲೆ ಕೈ – ಕಾಲುಗಳಿಗೆ ನಾರು ಕೊಟ್ಟು ಒಳಗೆ ಕರೆತಂದು ಮಣೆ ಹಾಕಿ ಕುಳ್ಳರಿಸಿ , ಸವಿಯಾದ ತಾಜ ಹಣ್ಣನ್ನು ತಿನ್ನಲು ಕೊಟ್ಟು , ಕೆನೆಭರಿತ ಹಾಲನ್ನು ಕುಡಿಯಲು ಕೊಟ್ಟಳು , ನಂತರ ಸುವಾಸನೆಯುಳ್ಳ ತಾಂಬೂಲವನ್ನು ಮೆಲ್ಲಲು ಕೊಟ್ಟು , ಸವಿಯಾದ ಮಾತುಗಳನ್ನಾಡುತ್ತಾ ಉಪಚರಿಸಿದಳು .

4 . ಯಾವ ಧಾಟಿಯಲ್ಲಿ ಕಥೆಯನ್ನು ಹೇಳೆಂದು ಮನೋರಮೆ ಕೇಳಿದಳು ?

ಹೃದಯಕ್ಕೆ ಹತ್ತಿರವಾಗುವ , ಸುಲಭವಾಗಿ ಅರ್ಥವಾಗುವ , ಮನಸ್ಸಿನ ಮೇಲೆ ಪರಿಣಾಮ ಬೀರುವ ಗದ್ಯದ ಧಾಟಿಯಲ್ಲಿ ಕಥೆಯನ್ನು ಹೇಳಬೇಕೆಂದು ಮನೋರಮೆ ಕೇಳಿದಳು .

5. ಸಂಸ್ಕೃತ – ಕನ್ನಡಗಳು ಸೇರಿದರೆ ಹೇಗೆ ಸೊಗಯಿಸುತ್ತದೆ ?

ಕನ್ನಡಗಳು ಸೇರಿದರೆ ಸುಂದರ ಕರಿಮಣಿ ಸರಕ್ಕೆ ರತ್ನವನ್ನು ಪೋಣಿಸಿದರೆ ಮತ್ತಷ್ಟು ಸುಂದರವಾಗಿ ಕಾಣುವಂತೆ ಸಂಸ್ಕೃತವು ಕನ್ನಡದ ಕಾವ್ಯಕ್ಕೆ ಸೇರಿದರೆ ಮತ್ತಷ್ಟು ಸೊಗಸಾಗಿ ಕಾವ್ಯವು ಮೂಡಿಬರುವುದು ಎಂದು ಹೇಳಲಾಗಿದೆ .

6. ಅರಮನೆಯಿಂದ ಎಂತಹ ಬಹುಮಾನ ಸಿಗಬಹುದೆಂದು ಮುದ್ದಣ ಹೇಳಿದನು ?

ಅರಮನೆಯಲ್ಲಿ ಉತ್ತಮ ಕತೆಯನ್ನು ಹೇಳಿದರೆ ಕೈಗೆ ಚಿನ್ನದ ಕಡಗ ಅಥವಾ ಕೊರಳಿಗೆ ಚಿನ್ನದ ಕಂಠಿಹಾರ ಬಹುಮಾನವಾಗಿ ಸಿಗುತ್ತಿತ್ತು ಎಂದು ಮುದ್ದಣನು ಹೇಳಿದನು .

7. ನೀರಿಳಿಯದ ಗಂಟಲಲ್ಲಿ ಕಡಬನ್ನು ತುರುಕಿದಂತಾಯ್ತು ಎಂದು ಮನೋರಮೆ ಹೇಳಿದ್ದೇಕೆ ?

ಮುದ್ದಣನು ಮನೋರಮೆಗೆ ಅರ್ಥವಾಗದ ಸಂಸ್ಕೃತದಲ್ಲಿ ಕತೆಯನ್ನು ಪ್ರಾರಂಭಿಸಿದಾಗ , ಆತನನ್ನು ತಡೆದು , “ ತನಗೆ ಸಿರಿಯಾಗಿ ಕನ್ನಡವೇ ಅರ್ಥವಾಗದು , ಅಥಧ ಮೇಲೆ ಸಂಸ್ಕೃತ ಅರ್ಥವಾಗುವುದೇ ಎಂಬುದನ್ನು ಸಾಂಕೇತಿಕವಾಗಿ ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಯ್ತು ” ಎಂದಳು .

ಇ ) ನಾಲ್ಕು ಅಂಕಗಳ ಪ್ರಶ್ನೆಗಳು :

1. ಮುದ್ದಣ – ಮನೋರಮೆಯರ ಸಂವಾದದ ಸ್ವಾರಸ್ಯವನ್ನು ವಿವರಿಸಿ .

ಮುದ್ದಣ – ಮನೋರಮೆಯರ ಪ್ರಸಂಗವು ಅತ್ಯಂತ ಸ್ವಾರಸ್ಯಕರವೆಂದು ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧವಾಗಿದೆ . ಇಲ್ಲಿ ಗಂಡ – ಹೆಂಡತಿಯ ನಡುವಿನ ಸರಸ – ಸಲ್ಲಾಪ , ಅನ್ನೋನ್ಯತೆ , ಸಾಹಿತ್ಯ ಪ್ರೀತಿಗಳೆಲ್ಲವನ್ನೂ ತೋರಿದೆ . ಮಾತ್ರವಲ್ಲದೆ ಕನ್ನಡ ಸಾಹಿತ್ಯವು ಕಾವ್ಯದಿಂದ ಗದ್ಯಕ್ಕೆ ಹೊರಳುತ್ತಿದ್ದ ಸಂಕ್ರಮಣ ಕಾಲವನ್ನು “ ಪದ್ಯಂ ವಧ್ಯಂ ಗದ್ಯ ಹೃದ್ಯಂ ” ಎಂಬ ಮಾತಿನ ಮೂಲಕ ಸಂಕೇತಿಸಿರುವುದು ಮುಖ್ಯವಾಗಿದೆ . ‘ ಮನೋರಮೆಯು ಪತ್ನಿಯಾಗಿ , ವಿಮರ್ಶಕಿಯಾಗಿ , ಸಹೃದಯ ಸಂಪನ್ನಳಾಗಿಯೂ ಚಿತ್ರಿತಗೊಂಡಿರುವುದು ಈ ಸಂವಾದದಲ್ಲಿ ಗಮನಿಸಬಹುದಾದ ಅತಿಮುಖ್ಯ ಸಂಗತಿಯಾಗಿದೆ,

2. ಒಳ್ಳೆಯದೊಂದು ಕತೆ ಹೇಳಬೇಕೆಂದಾಗ ಮುದ್ದಣನ ಪ್ರತಿಕ್ರಿಯೆಯೇನು ?

ಮನೋರಮೆಯು ಹಗಲು – ರಾತ್ರಿ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ಮನಸ್ಸಿಗೆ ಬೇಸರವಾಗಿದೆಯೆಂದೂ ಅದನ್ನು ಪರಿಹರಿಸಲು ಯಾವುದಾದರೊಂದು ನಲ್ಗತೆಯನ್ನು ಹೇಳೆಂದು ಕೇಳಿಕೊಂಡಳು . ಅದಕ್ಕೆ ಪ್ರತಿಕ್ರಿಯಿಸಿದ ಮುದ್ದಣ “ ಪ್ರಾಣೇಶ್ವರಿ , ನಿನ್ನ ಬಯಕೆ ಇಷ್ಟೊಂದು ಗಹನವಾಗಿರುವಾಗ ಖಂಡಿತವಾಗಿಯೂ ಕಥೆ ಹೇಳುತ್ತೇನೆ . ಯಾವ ಒಳ್ಳೆಯ ಕಥೆ ಹೇಳಲಿ ? ಭೋಜ ಪ್ರಬಂಧ , ವಿಕ್ರಮ ವಿಜಯ್ , ಮಹಾವೀರ ಚರಿತೆ ಇವುಗಳಲ್ಲಿ ಯಾವುದನ್ನು ಹೇಳಲಿ ? ” ಎಂದು ಕೇಳಿದನು . ಅಲ್ಲದೆ ಯಾವ ರಸದಲ್ಲಿ ಆಕೆ ಕಥೆ ಕೇಳಲು ಬಯಸುವಳೆಂಬುದನ್ನೂ ಕೇಳಿ ತಿಳಿಯುವನು . ಅವಳ ಬಯಕೆಯಂತೆಯೇ ರಾಮಾಯಣದ ಶ್ರೀರಾಮ ಅಶ್ವಮೇಧ ಪ್ರಸಂಗದ ಕಥೆಯನ್ನು ಕಸ್ತೂರಿ ಕನ್ನಡದ ತಿರುಳನ್ನಡದ ಬೆಳ್ಳುಡಿಯಲ್ಲಿ ಹೇಳಲು ಸಮ್ಮತಿಸುವನು .

3. ಎಂತಹ ತಿರುಳು ಕನ್ನಡದಲ್ಲಿ ಕತೆಯನ್ನು ಹೇಳುವುದಾಗಿ ಮುದ್ದಣ ಹೇಳುವನು ?

ಸಂಸ್ಕೃತ ಭೂಯಿಷ್ಠವಾದ ಭಾಷೆಯಲ್ಲಿ ಮುದ್ದಣನು ಕಥೆಯನ್ನು ಹೇಳಲು ಆರಂಭಿಸಿದಾಗ ಅದನ್ನು ನಡುವೆಯೇ ತಡೆದ ಮನೋರಮೆಯು ಆ ಭಾಷೆ ತನಗೆ ಅರ್ಥವೇ ಆಗುತ್ತಿಲ್ಲವೆಂದು ನುಡಿದಳು . ನೀರಿಳಿಯದ ಗಂಟಲಿನಲ್ಲಿ ಕಡುಬನ್ನು ತುರುಕಿದಂತಿರುವ ಭಾಷೆ ಬೇಡವೆಂದಾಗ ಅವಳ ಅಪೇಕ್ಷೆಯಂತೆಯೇ ಮುದ್ದಣನು ತಿರುಳನ್ನಡದ ಬೆನ್ನುಡಿಯಲ್ಲಿ ಕಥೆಯನ್ನು ಹೇಳಲು ಒಪ್ಪುವನು . ಆದರೂ ಸಂಸ್ಕೃತ ಮತ್ತು ಕನ್ನಡ ಭಾಷೆಯ ಮೇಲೈಕೆಯ ಅಗತ್ಯವನ್ನು ಹೇಳಿ , ರತ್ನವನ್ನು ಚಿನ್ನದೊಂದಿಗೆ ಸೇರಿಸಿ ಆಭರಣ ತಯಾರಿಸಿದಾಗ ಅದು ಸುಂದರವಾಗಿ ಕಾಣುವಂತೆ , ತಾನು ಸಂಸ್ಕೃತ ಕನ್ನಡದ ಹದ ಬೆರೆತ ಭಾಷೆಯಲ್ಲಿ ಕಥೆಯನ್ನು ಹೇಳುವುದಾಗಿ ತಿಳಿಸಿದನು .

4. ಮುದ್ದಣ ಅರಮನೆಯಿಂದ ಬಂದ ಪರಿಯನ್ನೂ ಮನೋರಮೆಯ ಉಪಚಾರವನ್ನೂ ವಿವರಿಸಿ .

ಕಾಡು ಮತ್ತು ನಾಡುಗಳೆರಡೂ ಸುಂದರವಾಗಿ ತೋರುವ ಒಂದು ಮಳೆಗಾಲದ ಸಂಜೆಹೊತ್ತಿನಲ್ಲಿ ಅರಮನೆಯ ಓಲಗ ಸಭೆಯನ್ನು ಮುಗಿಸಿಕೊಂಡು ಮನೆಗೆ ಹೊರಟ ಮುದ್ದಣನನ್ನು ಅವನ ಪತ್ನಿ ಮನೋರಮೆಯು ಹೊರಗೆ ಕಾದು ನಿಂತಿದ್ದು ಸ್ವಾಗತಿಸಿದಳು . ಆತನು ಕಾಲನ್ನು ತೊಳೆಯಲು ನೀರನ್ನು ಕೊಟ್ಟಳು . ಆನಂತರ ಕೈಹಿಡಿದು ಒಳಚೌಕಿಗೆ ಕರೆದೊಯ್ದು ಮಣೆ ಹಾಕಿ ಕುಳ್ಳಿರಿಸಿದಳು . ಹಸಿವು – ಆಯಾಸ ಪರಿಹರಿಸಲು ರಸಭರಿತ ಹಣ್ಣುಗಳನ್ನು ಕೆನೆಭರಿತ ಹಾಲನ್ನು ನೀಡಿದಳು . ಅದಾದ ನಂತರ ಮೆಲ್ಲಲು ಸವಿಯಾದ ರಸಗವಳದ ತಾಂಬೂಲವನ್ನು ನೀಡಿ ಉಪಚರಿಸಿದಳು .

ಈ ) ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

1. “ ನಿನಗಾವ ರಸದೊಳಿಷ್ಟಂ? ”

ಮುದ್ದಣ ಕವಿಯ ‘ ಶ್ರೀರಾಮಾಶ್ವಮೇಧಂ ‘ ಸಂಗ್ರಹದಿಂದಾಯ್ದ ತಿರುಳನ್ನಡದ ಬೆಳ್ಳುಡಿ ‘ ಎಂಬ ಗದ್ಯಭಾಗದಲ್ಲಿ ಮುದ್ದಣನು ಮನೋರಮೆಯನ್ನು ಈ ಮೇಲಿನಂತೆ ಪ್ರಶ್ನಿಸಿರುವನು . ಸುರಿಯುತ್ತಿರುವ ಮಳೆಯಿಂದಾಗಿ ಮನಸ್ಸಿಗೆ ಬೇಸರ ಮೂಡಿರುವುದರಿಂದ ಯಾವುದಾದರೊಂದು ಕಥೆ ಹೇಳೆಂದು ಮನೋರಮೆಯು ಮುದ್ದಣನನ್ನು ಕೇಳಿದಳು . ಆಗ ಮುದ್ದಣನು ಆಕೆ ಯಾವ ರಸದಲ್ಲಿ ಕಥೆ ಕೇಳಲು ಬಯಸುವಳೆಂಬುದನ್ನು ವಿಚಾರಿಸುತ್ತಾ “ ನಿನಗಾವ ರಸದೊಳಿಷ್ಟ ? ಶೃಂಗಾರ ರಸದಲ್ಲಿ ಹೇಳಲೇ ? ವೀರ ರಸವೇ ? ಇಲ್ಲ ಹಾಸ್ಯ ರಸವೇ ? ” ಎಂದು ಪ್ರಶ್ನಿಸುವ ಸಂದರ್ಭವಿದು . ಮನೋರಮೆಯು ನವರಸಗಳಲ್ಲೂ ಕಥೆಯನ್ನು ಹೇಳಬೇಕೆಂದು ಕೇಳಿಕೊಳ್ಳುವಳು .

2. “ ಸೀತಾಪಹರಣ ಕಥನದೊಳ್ ಬಯಕೆಯೆ ? ”

ಮುದ್ದಣ ಕವಿಯ ‘ ಶ್ರೀರಾಮಾಶ್ವಮೇಧಂ ‘ ಸಂಗ್ರಹದಿಂದಾಯ್ದ ತಿರುಳನ್ನಡದ ಬೆಳ್ಳುಡಿ ‘ ಎಂಬ ಗದ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಮನೋರಮೆಯು ನಲ್ಗಥೆಯೊಂದನ್ನು ಹೇಳಬೇಕೆಂದು ಕೇಳಿದಾಗ ಮುದ್ದಣನು ಯಾವ ಕಥೆ ಹೇಳಲಿ , ಭೋಜ ಪ್ರಬಂಧವೆ ? ವಿಕ್ರಮ ವಿಜಯವೆ ? ಮಹಾವೀರ ಚರಿತೆಯೆ ? ಎಂದಾಗ ಮನೋರಮೆ ಆ ಯಾವ ಕಥೆಯೂ ಬೇಡ , ನವರಸದಲ್ಲಿ ರಾಮಾಯಣದ ಕಥೆ ಹೇಳೆಂದಳು . ಆತ ಮುದ್ದಣನು ನಿನಗೆ ಸೀತಾಸ್ವಯಂವರದ ಕಥೆ ಹೇಳಲೆ ಎಂದಾಗ ಮನೋರಮೆಯು ಅದನ್ನು ನಾನು ಕೇಳಿದ್ದೇನೆ ಎಂದಳು . ಆಗ ಮುದ್ದಣನು ಹಾಗಾದರೆ ನಿನಗೆ ‘ ಸೀತಾಪಹರಣ ಕಥನ’ವನ್ನು ಕೇಳುವ ಬಯಕೆ ಮೂಡಿದೆಯೆ ? ಎಂದು ಪ್ರಶ್ನಿಸಿದನು . ಮನೋರಮೆಯೂ ಅದನ್ನು ಒಪ್ಪದೆ ಶ್ರೀರಾಮನು ಅಶ್ವಮೇಧಯಾಗ ಮಾಡಿದ ಕಥೆಯನ್ನು ಹೇಳಬೇಕೆಂದು ಕೇಳುವ ಸಂದರ್ಭವಿದು .

3. “ ಪದ್ಯ ವಧ್ಯಂ ; ಗದ್ಯಂ ಹೃದ್ಯಂ . ”

ಮುದ್ದಣ ಕವಿಯ ‘ ಶ್ರೀರಾಮಾಶ್ವಮೇಧಂ ‘ ಸಂಗ್ರಹದಿಂದಾಯ್ದ ‘ ತಿರುಳನ್ನಡದ ಬೆಳ್ಳುಡಿ ‘ ಎಂಬ ಗದ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದ್ದು ಮನೋರಮೆಯು ಮುದ್ದಣನಿಗೆ ಈ ಮೇಲಿನಂತೆ ಹೇಳಿದಳು . ಮನೋರಮೆಯು ಶ್ರೀರಾಮನು ಅಶ್ವಮೇಧಯಾಗ ಮಾಡಿದ ಕಥೆಯನ್ನು ಹೇಳಬೇಕೆಂದು ಮುದ್ದಣನನ್ನು ಕೋರಿದಾಗ , ಅದಕ್ಕೆ ಸಮ್ಮತಿಸಿದ ಮುದ್ದಣ ಆಕೆಯು ಯಾವ ಧಾಟಿಯಲ್ಲಿ ಕತೆ ಹೇಳಲೆಂದು ಪ್ರಶ್ನಿಸಿದನು . “ ನೀನು ಯಾವ ಧಾಟಿಯಲ್ಲಿ ಕಥೆ ಕೇಳಬಯಸುವೆ ? ‘ ಎಂಬ ಪ್ರಶ್ನೆಗೆ ಉತ್ತರವಾಗಿ ಮನೋರಮೆಯು ಈ ಮೇಲಿನಂತೆ ಹೇಳುವಳು . ಪದ್ಯವು ಕೇಳಿ ಸಾಕಾಗಿದೆ , ಅದು ಬೇಡ , ಹೃದಯಕ್ಕೆ ಪ್ರಿಯವಾದ ಗದ್ಯದಲ್ಲಿ ಕಥೆ ಹೇಳೆಂದು ಆಕೆ ಹೇಳುವ “ ಪದ್ಯಂ ವಧ್ಯಂ ; ಗದ್ಯಂ ಹೃದ್ಯಂ ” ಎಂಬ ಈ ಮಾತು ಅತ್ಯಂತ ಜನಪ್ರಿಯವಾದ ವಾಕ್ಯವಾಗಿದೆ .

4 , “ ನೀರಿಟೆಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು . ”

ಮುದ್ದಣ ಕವಿಯ ‘ ಶ್ರೀರಾಮಾಶ್ವಮೇಧಂ’ದಿಂದಾಯ್ದ ತಿರುಳನ್ನಡದ ಬೆನ್ನುಡಿ ‘ ಎಂಬ ಗದ್ಯಭಾಗದಲ್ಲಿ ಮನೋರಮೆಯು ಮುದ್ದಣನಿಗೆ ಹೇಳಿರುವ ಮಾತಿದು . ಮುದ್ದಣನು ಮನೋರಮೆಗೆ ಕಥೆ ಹೇಳಲೆಂದು “ ಸ್ವಸ್ತೀ ಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ ಫಣೀಂದ್ರ ಮಣಿಮಕುಟ ಘಟಿತ … ” ಎಂದು ಕ್ಲಿಷ್ಟವಾದ ಭಾಷೆಯನ್ನು ಪ್ರಯೋಗಿಸಿದಾಗ ಅದನ್ನು ತಡೆದ ಮನೋರಮೆಯು ಈ ಮೇಲಿನಂತೆ ಹೇಳಿದಳು . ನಿನ್ನ ಕ್ಲಿಷ್ಟವಾದ ಭಾಷೆ ನನಗೆ ಅರ್ಥವಾಗುತ್ತಿಲ್ಲ . ನೀರೇ ಇಳಿಯದ ಗಂಟಲಲ್ಲಿ ಕಡುಬನ್ನು ತುರುಕಿದರೆ ಇಳಿಯುವುದೆ ? ಹಾಗಿದೆ ನಿನ್ನ ಕ್ಲಿಷ್ಟವಾದ ಭಾಷೆ ಎಂದು ಮುದ್ದಣನಿಗೆ ಹೇಳಿ ಅವನನ್ನು ತಡೆದ ಸಂದರ್ಭವಿದಾಗಿದೆ .

5. “ ಕನ್ನಡಂ ಕತ್ತುರಿಯಲ್ಲೆ . ”

ಮುದ್ದಣನು ರಚಿಸಿರುವ ‘ ಶ್ರೀರಾಮಾಶ್ವಮೇಧಂ ‘ ಸಂಗ್ರಹದಿಂದ ಆಯ್ದು ಕೊಂಡಿರುವ ‘ ತಿರುಳನ್ನಡದ ಬೆಳ್ಳುಡಿ ‘ ಎಂಬ ಗದ್ಯಭಾಗದಲ್ಲಿ ಮನೋರಮೆಯು ಮುದ್ದಣನಿಗೆ ಹೇಳುವ ಮಾತಿದು . ಸಂಸ್ಕೃತ ಭೂಯಿಷ್ಠವಾದ ಮಾತುಗಳಲ್ಲಿ ಕಥೆ ಹೇಳುವುದನ್ನು ಮನೋರಮೆಯು ತಡೆದಾಗ ಮುದ್ದಣನು ‘ ಹಾಗಾದರೆ ಇನ್ನು ಯಾವ ರೀತಿಯಲ್ಲಿ ಕಥೆ ಹೇಳಲಿ ? ‘ಎಂದನು . ಅದಕ್ಕೆ ಉತ್ತರಿಸುತ್ತಾ ಮನೋರಮೆಯು ಕನ್ನಡವೇ ಕಸ್ತೂರಿ ಯಲ್ಲವೆ ? ತಿರುಳನ್ನಡದ ಬೆಳ್ಳುಡಿಯಲ್ಲಿ ಸರಳವಾಗಿ ಕಥೆಯನ್ನು ಹೇಳ ಬೇಕೆಂದು ಕೇಳಿಕೊಂಡಳು . ಮುದ್ದಣನು ಅಂತೆಯೇ ಆಗಲೆಂದು ಒಪ್ಪಿಕೊಳ್ಳುವ ಸನ್ನಿವೇಶವಿದಾಗಿದೆ .

6. “ ಬನೆಯ ಜಿನುಂಗಿನತ್ತಣಿನೆನ್ನ ಬಗೆಯುಂ ಬೇಸರ್ತುದು . ”

ಮುದ್ದಣ ಕವಿಯ ‘ ಶ್ರೀರಾಮಾಶ್ವಮೇಧಂ ‘ ಸಂಗ್ರಹದಿಂದಾಯ್ದ ‘ ತಿರುಳನ್ನಡದ ಬೆಳ್ಳುಡಿ ‘ ಎಂಬ ಗದ್ಯಭಾವದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .ಅರಮನೆಯಿಂದ ಮನೆಗೆ ಹಿಂದಿರುಗಿದ ಮುದ್ದಣನನ್ನು ಸ್ವಾಗತಿಸಿ , ಆತನನ್ನು ಸವಿಯಲು ರಸಗವಳವನ್ನೀಯುತ್ತಾಳೆ , ಆನಂತರ ಆತನೊಂದಿಗೆ ಸರಸ ಸುಖದಲ್ಲಿ ರಸಭರಿತ ಹಣ್ಣು ಮತ್ತು ಕೆನೆಹಾಲುಗಳಿಂದ ಸತ್ಕರಿಸಿದ ಮನೋರಮೆಯು ಆತನಿಗೆ ಸಲ್ಲಾಪ ನಡೆಸುತ್ತಾ ಪ್ರಿಯನೇ ಹಗಲು – ರಾತ್ರಿ ಎಡೆಬಿಡದೆ ಸುರಿಯುತ್ತಿರುವ ಈ ಭಾರೀ ಮಳೆಯಿಂದ ಮನಸ್ಸಿಗೆ ತುಂಬಾ ಬೇಸರವಾಗಿದೆ . ಈ ಬೇಸರ ಕಳೆಯುವಂತಹ ಯಾವುದಾದರೊಂದು ಒಳ್ಳೆಯ ಕಥೆಯನ್ನು ಹೇಳೆಂದು ಕೇಳುವಳು . ಈ ಸಂದರ್ಭದಲ್ಲಿ ಮೇಲಿನ ವಾಕ್ಯವನ್ನು ಗಮನಿಸಬಹುದು .

7. “ ಕಬ್ಬಮಂ ಕಂಡ ಕಚ್ಚವೆಯನಿತ್ತರ್ ”

ಮುದ್ದಣನ ‘ ತಿರುಳನ್ನಡದ ಬೆನ್ನುಡಿ ‘ ಎಂಬ ಗದ್ಯಭಾಗದ ಈ ಮೇಲಿನ ವಾಕ್ಯವನ್ನು ಮನೋರಮೆಯು ಮುದ್ದಣನಿಗೆ ಹೇಳುವಳು . ಕಥೆ ಹೇಳಿದ್ದಕ್ಕೆ ಬಳುವಳಿಯಾಗಿ ಏನು ನೀಡುವೆಯೆಂದು ಮುದ್ದಣ ಮನೋರಮೆಯನ್ನು ಕೇಳಿದಾಗ ಅವಳು ಕಥೆ ಕೇಳಿಯಾದ ಮೇಲಷ್ಟೇ ಉಡುಗೊರೆಯ ವಿಷಯ ನಿರ್ಧಾರವಾಗುವುದೆಂದು ಹೇಳಿ , ಅರಮನೆಯವರು ನಿನ್ನ ಕಾವ್ಯವನ್ನು ಕೇಳಿಸಿಕೊಂಡಾದ ಮೇಲೆ ಕೈ ಕಡಗವನ್ನು ಕೊಟ್ಟಿದ್ದೆಂದು ನೆನಪಿಸಿ , ತನ್ನ ಮಾತನ್ನು ಸಮರ್ಥಿಸಿಕೊಂಡಿರುವ ಸಂದರ್ಭವಿದಾಗಿದೆ . ಮನೋರಮೆಯ ಜಾಣೆ ಇಲ್ಲಿ ಅನಾವರಣಗೊಂಡಿದೆ .

2nd Puc Notes Kannada Tirulgannadada Belnudi 7th Lesson Question Answer Pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh