ಹಳ್ಳಿಯ ಚಹಾ ಹೋಟೇಲುಗಳು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, Kannada Notes 2nd PUC Halliya Chaha Hotelugalu Notes Question Answer Guide Pdf Download
ತರಗತಿ : ದ್ವಿತೀಯ ಪಿ.ಯು.ಸಿ
ಪಾಠದ ಹೆಸರು : ಹಳ್ಳಿಯ ಚಹಾ ಹೋಟೇಲುಗಳು
ಕೃತಿಕಾರರ ಹೆಸರು : ವೀರೇಂದ್ರ ಸಿಂಪಿ
Kannada Notes 2nd PUC Halliya Chaha Hotelugalu
ಕೃತಿಕಾರರ ಪರಿಚಯ :
ವೀರೇಂದ್ರ ಸಿಂಪಿ ( ೧೯೩೮ ) : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದಲ್ಲಿ ಜನನ . ತಂದೆ ಡಾ || ಸಿಂಪಿ ಲಿಂಗಣ್ಣ , ತಾಯಿ ಸೋಬಲು ೧೯೬೩ ರಿಂದ ೧೯೯೭ ರ ವರೆಗೆ ಬೀದರಿನ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ಬೀದರ್‌ನಲ್ಲಿಯೇ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಕಾಗದದ ಚೂರು , ಭಾವ – ಮೈದುನ , ಸ್ವಚ್ಛಂದ ಮನದ ಸುಳಿದಾಟ , ಪರಿಸರ ಸ್ಪಂದನ ಇವರ ಪ್ರಮುಖ ಲಲಿತ ಪ್ರಬಂಧ ಸಂಕಲನಗಳಾಗಿವೆ . ವಿಶ್ವಕಲ್ಯಾಣ ಪತ್ರಿಕೆ ಮತ್ತು ದಿಕ್ಕೂಚಿ ಮಾಸಪತ್ರಿಕೆಗೆ ನಿಯಮಿತ ೮೦ ಕ್ಕೂ ಮೇಲ್ಪಟ್ಟು ಅಂಕಣಗಳು ಬರೆದಿರುತ್ತಾರೆ . ಜೀವನಚರಿತ್ರೆ , ಅನುವಾದ , ಸಂಪಾದನೆ , ವೈಚಾರಿಕ ಲೇಖನಗಳು ಮುಂತಾಗಿ ಇಲ್ಲಿಯವರೆಗೆ ಇವರು ೩೨ ಕೃತಿಗಳನ್ನು ಪ್ರಕಟಿಸಿದ್ದಾರೆ.
ʼಭಾವ – ಮೈದುನ ‘ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು , ಎರಡು ಬಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆಸಲ್ಲಿಸಿರುತ್ತಾರೆ . ಪ್ರಸಕ್ತ ಪ್ರಬಂಧವು ಇವರ ‘ ಸಮಗ್ರ ಲಲಿತ ಪ್ರಬಂಧ ‘ ಸಂಕಲನದಿಂದ ಆಯ್ದುಕೊಳ್ಳಲಾಗಿದೆ . ‘ ಬಹುಶ್ರುತತ್ವ ಹಾಗೂ ಜೀವನಾನುಭವದ ತಮ್ಮ ಆತ್ಮವೃತ್ತದ ಎಳೆಗಳೊಂದಿಗೆ ಸಮೂಹ ಚಿಂತನೆಯನ್ನು ಜೋಡಿಸುವುದು ‘ ಇವರ ಪ್ರಬಂಧಗಳ ವೈಶಿಷ್ಟ್ಯವಾಗಿದೆ.
ಪಾಠದ ಆಶಯ :
ಭಾರತೀಯರನ್ನು ತಮ್ಮ ಗ್ರಾಹಕರನ್ನಾಗಿ ಮಾಡಿಕೊಳ್ಳಲು ಇಂಗ್ಲಿಷರು ಮೊದಮೊದಲು ಪುಕ್ಕಟೆಯಾಗಿ ಜನರಿಗೆ ಚಹಾ ಕುಡಿಸುತ್ತಾ ಚಹಾ ಉದ್ಯಮ ಭಾರತದಲ್ಲಿ ಬೆಳೆಸಿದ್ದುಂಟು . ಕಾಡು ನಾಶವಾಗಿ ಚಹಾದ ತೋಟ ತಲೆ ಎತ್ತಿದಾಗ ಪಟ್ಟಣಿಗರು ಹಾಗೂ ಹಳ್ಳಿಗರು ಮೆಲ್ಲಮೆಲ್ಲನೆ ಇದಕ್ಕೆ ಎಷ್ಟು ಹೊಂದಿಕೊಂಡರೆಂದರೆ ಊಟವಿಲ್ಲದಿದ್ದರು ಅಡ್ಡಿಯಿಲ್ಲ ಪ್ರತಿಯೊಬ್ಬ ವ್ಯಕ್ತಿಗೂ ಇಂದು ನಿಯಮಿತವಾಗಿ ಚಹಾ ಸೇವನೆ ಬೇಕೇಬೇಕು . ಹಾಗೂ ಪರಸ್ಪರ ಗೌರವ ಆದರಗಳ ಚಹಾರಾಧನೆ ಇಂದು ಅತ್ಯವಶ್ಯಕವಾಗಿದೆ.
ʼಹಳ್ಳಿಯ ಚಹಾ ಹೋಟೇಲುಗಳು ಹಳ್ಳಿಗರ ಬದುಕಿನಲ್ಲಿ ಆಧುನಿಕತೆಯ ಗಾಳಿ ಬೀಸುವುದರೊಂದಿಗೆ ಬಹುಮುಖಿ ಸಾಮಾಜಿಕ ಸ್ತರಗಳ ಎಲ್ಲಾ ಸಮುದಾಯಗಳ , ವಯದ ಅಂತರವಿರದೆ ಒಂದೇ ಕಡೆ ಕೂಡುವಂತೆ ಮಾಡಿವೆ . ಮನರಂಜನೆ ಹಾಗೂ ಸಾರ್ವಜನಿಕ ಸುದ್ದಿಗಳ ತಾಣವಾಗಿವೆ.
ಶಬ್ಧಾರ್ಥ :
ಫಳಾರ – ತಿಂಡಿ; ಮಾಣಿ – ಹೋಟೇಲಲ್ಲಿ ತಿಂಡಿ ತಿನಿಸುಗಳು, ಚಹಾ ಕೊಡುವ ಹುಡುಗ; ಹಚ್ರಿ – ಖಾತೆಯಲ್ಲಿ ಬರೆಯುವುದು; ತರುಬಿ – ನಿಲ್ಲಿಸಿ; ಫರಸಿ – ಕಲ್ಲುಹಾಸು.
Kannada Notes 2nd PUC Halliya Chaha Hotelugalu Question Answer
ಅ ) ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )
ಮೂರು ಕಾಲಿನ ಕುರ್ಚಿ ಹಳ್ಳಿಯ ಚಹಾ ಹೋಟೆಲುಗಳಲ್ಲಿವೆ .
ಎತ್ತುಗಳು ಗಕ್ಕೆಂದು ಹಳ್ಳಿಯ ಚಹಾ ಹೋಟೆಲ್ಲುಗಳ ಮುಂದೆ ನಿಲ್ಲುತ್ತವೆ .
ಶಿವಶರಣಪ್ಪನಿಗೆ ಅಷ್ಟು ಸುಂದರ ಹೆಂಡತಿ ಯಾಕಿರಬೇಕು ? ಎಂದು ರಸಿಕ ಶಿಖಾಮಣಿ ಶ್ರೀಮಂತ ಕಲ್ಲಪ್ಪನವರ ಗೂಢ ಪ್ರಶ್ನೆ .
ವೃದ್ಧರಿಗೆ ಬಾಯಿ ಚಪಲ ಜಾಸ್ತಿ ಇರುತ್ತದೆ .
ಹಳ್ಳಿಯ ಚಹಾ ಹೋಟೆಲುಗಳಲ್ಲಿನ ಚಹಾ , ಕಲಿಯುಗದ ಅಮೃತವಾಗಿದೆ .
ಲೇಖಕರ ದೃಷ್ಟಿಯಲ್ಲಿ ಹಳ್ಳಿಯ ಚಹಾದ ಅಂಗಡಿಗಳು ಇಲಾಖೆಯಿದ್ದಂತೆ ”
ಬಿಸಿಯೂಟ ಬಂದ ಮೇಲೆ ಹೆಡ್‌ಮಾಸ್ತರರರು ಬಹಳ ಹಣಗಳಿಸಿದ್ದಾರೆಂದು ಅವರ ಬಗ್ಗೆ ಮೂಕರ್ಜಿಯೊಂದನ್ನು ಹಳ್ಳಿಗರು ಕೊಡುತ್ತಾರೆ .
ಹಳ್ಳಿಯ ಚಹಾ ಹೋಟೆಲ್‌ಗಳಲ್ಲಿ ಲೋಕಲ್ ಸುದ್ದಿಗಳಿಗೆ ಪ್ರಾಶಸ್ತ್ರವಿದೆ .
ಲೇಖಕರು ಹೇಳುವ ಹಳ್ಳಿಯ ಹೋಟೇಲಿನ ಹೆಸರು “ ಹಳ್ಳಿಯ ಪಾರ್ಲಿಮೆಂಟ್ ”
ಒಮ್ಮೆ ಹಳ್ಳಿಯ ಚಹಾ ಹೋಟೆಲುಗಳಿಗೆ ಭೇಟಿ ಕೊಡಬೇಕೆಂದು ಲೇಖಕರು ಹೇಳುತ್ತಾರೆ .
ಆ ) ಎರಡು- ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕಗಳ ಪ್ರಶ್ನೆಗಳು )
1. ಹಳ್ಳಿಯ ಚಹಾದ ಅಂಗಡಿಯೆಂದರೆ ಹೇಗಿರುತ್ತದೆ ?
ಕುಬ್ಬಸ ತೊಟ್ಟ ಚೆಲುವೆಯಂತೆ ” ನೋಡಲು ಅಂದವಿರದಿದ್ದರೂ ಸ್ವರ್ಗ ಸುಖ , ತೃಪ್ತಿ ಹಳ್ಳಿಯ ಚಹಾದ ಅಂಗಡಿ ಎಂದರೆ , ಇಳಕಲ್ಲ ಸೀರೆ ಉಟ್ಟು , ಗುಳೇದಗುಡ್ಡದ ಕೊಡುತ್ತವೆ . ಮುರುಕು ಬೆಂಚು ಕುರ್ಚಿಗಳಿದ್ದರೂ ಪ್ರೀತಿಯ ಆಹ್ವಾನ , ಉಪ ಇಲ್ಲಿದೆ .
2. ರೋಗಿಗಳ ಹಾಗೂ ಪಥ್ಯ ಮಾಡುವವರ ಜಿದ್ದು ಎಂತಹುದು ?
ಮನೆಯಲ್ಲಿ ಪಥ್ಯ ಎಂದು ಕರೆದ ತಿಂಡಿಗಳನ್ನು ಕೊಡದಿದ್ದಾಗ ಅಂಥಹವರು ಕರಿದ ಪದಾರ್ಥಗಳನ್ನು ಜಡಿಯುವ ಇವರ ಜಡ್ಡೆಂದೂ ನೆಟ್ಟಗಾಗದು . ಹಾಗೂ ಸಾಯುತ್ತೇವೆ . ಹೀಗೂ ಸಾಯುತ್ತೇವೆ . ಕರಿದಿದ್ದನ್ನು ತಿಂದು ಸಾಯುತ್ತೇವೆ ಎನ್ನುವ ಜಿದ್ದು ಇವರದು .
3. ಭಾವೈಕ್ಯತೆ ಈ ದೇಶದಲ್ಲಿ ಎಲ್ಲಿದೆ ?
ಭಾವೈಕ್ಯತೆ ಎಂಬುದು ನಮ್ಮ ದೇಶದಲ್ಲಿ ಇರುವುದಾದರೆ ನಮ್ಮ ಹಳ್ಳಿಯ ಚಹಾಫಳಹಾರದ ಹೊಟೇಲ್‌ಗಳಲ್ಲಿ ಮಾತ್ರ .
4. ಪಟ್ಟಣದ ಹೋಟೇಲಿನ ಕಟ್ಟಡ ಹೇಗಿದೆ ?
– ಮಾನವನನ್ನು ಆಕರ್ಷಿಸುವ ಕಟ್ಟಡಗಳು ಪಟ್ಟಣದ ಹೊಟೇಲಿನ ಕಟ್ಟಡಗಳಾಗಿವೆ . ಕಾಲು ಜಾರುವ ನಯವಾದ ಫಾರಸಿಯ ನೆಲ , ಕೂತರೆ ಮಾಸಿ ಹೋಗಬಹುದೆನ್ನುವ ಕುರ್ಚಿ , ತಂಪಾದ ಫ್ಯಾನಿನ ಗಾಳಿ , ಡೆಕೋಲಮ್‌ಗಳಿಂದ ಅಲಂಕೃತವಾದ ಟೇಬಲ್ಲುಗಳು , ನೀರು ತುಂಬಿದ ಗ್ಲಾಸ್‌ಗಳಿಂದ ಶೋಭಿಸುತ್ತಿರುತ್ತವೆ .
5. ಸುದ್ಧಿಯ ಸೂರಪ್ಪ ಗೊಂಬೆಯನ್ನು ಹೇಗೆ ವರ್ಣಿಸುತ್ತಾನೆ ?
“ ಏನ್ ಹೆಣ್ಣಪ್ಪಾ ಅದು , ಕೈ ತೊಳೆದು ಮುಟ್ಟಬೇಕು ಅದನ್ನು ” ಎಂದು ಸುದ್ದಿಯನ್ನು ಹನುಮಾನ್ ಭಕ್ತ ಭರಮಣ್ಣ ತಾನು ಪಟ್ಟಣಕ್ಕೆ ಹೋದಾಗ ಶೋರಂನ ಎದುರಿಗೆ ನಿಲ್ಲಿಸಿದ ಹೆಣ್ಣು ಗೊಂಬೆಯನ್ನು ನೋಡಿ ಹೇಳಿದ ಮಾತನ್ನು ಸುದ್ದಿ ಸೂರಪ್ಪ ಮತ್ತಷ್ಟು ಸೊಗಸಾಗಿ ವರ್ಣಿಸುತ್ತಾನೆ .
6. ಗಿಡ್ಡ ಮಾಸ್ತರು ಶಾಲೆಯಲ್ಲಿ ಹುಡುಗರಿಗೆ ಏಕೆ ಹೊಡೆಯುತ್ತಾರೆ ?
ಗಿಡ್ಡ ಮಾಸ್ತರರು ಶಾಲೆಯಲ್ಲಿ ಹುಡುಗರಿಗೆ ಬಹಳ ಹೊಡೆಯುತ್ತಾರಂತೆ ಏಕೆಂದರೆ ಮನೆಯಲ್ಲಿ ಅವರ ಹೆಂಡತಿಯರು ಕೂಡ ಬಹಳ ಜಾಸ್ತಿಯೆಂಬುದೇ ಕಾರಣ .
7. ಹಳ್ಳಿಗರ ಆಕ್ಷೇಪದ ವಿಷಯ ಯಾವುದು ?
ಪಟ್ಟಣಗಳಲ್ಲಿ ಈ ಗಂಡು ಹೆಣ್ಣುಗಳಾಗುತ್ತಿವೆಂದು , ಹೆಣ್ಣು ಗಂಡುಗಳಾಗುತ್ತಿವೆ ಎಂಬುದು ಹಳ್ಳಿಗರ ಆಕ್ಷೇಪದ ವಿಷಯವಾಗಿದೆ .
ಇ ) ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )
1. ಹಳ್ಳಿಗರು ಹೊತ್ತನ್ನು ಹೇಗೆ ಕಳೆಯುತ್ತಾರೆ ? ವಿವರಿಸಿ .
– ಹಳ್ಳಿಗರು ತಮ್ಮ ಹೆಚ್ಚಿನ ಸಮಯವನ್ನು ಈ ಹಳ್ಳಿಯ ಚಹಾದಂಗಡಿಯಲ್ಲಿಯೇ ಕಳೆಯುತ್ತಾರೆ . ವಾರ್ತಾ ಇಲಾಖೆಯಂತೆ ಇಲ್ಲಿ ಎಲ್ಲಾ ರೀತಿಯ ಸುದ್ದಿಗಳು ಬಿತ್ತರಗೊಳ್ಳುತ್ತದೆ . ಊರಿನ ಲೋಕಲ್ ವಿಷಯವೆಲ್ಲಾ ಚರ್ಚೆಗೊಳ್ಳುವುದು ಇದೇ ಹೊಟೇಲ್‌ಗಳಲ್ಲಿ ದೇಶ ವಿದೇಶಗಳ ಸುದ್ದಿಗೂ ಇಲ್ಲಿ ಪ್ರಾಶಸ್ಯವುಂಟು . ಆದರೆ ಲೋಕಲ್ ಸುದ್ದಿಗಳಿಗಿರುವ ಮಹತ್ವ ಹೊರಗಿನ ಸುದ್ದಿಗಳಿಗಿರುವುದಿಲ್ಲ . ಪಟ್ಟಣದ ಸುದ್ದಿಗಳು ಕೂಡ ಇಲ್ಲಿ ಒಬ್ಬರ ಮೇಲೊಬ್ಬರು ಹೇಳಿದ ವರ್ಣನೆಗಳನ್ನು ಸವಿಯುತ್ತಾ ಆನಂದಿಸುತ್ತಾರೆ . ಹಳ್ಳಿಯ ಎಲ್ಲಾ ಸುದ್ದಿ , ಮನೆ ಮನೆಯ ಸುದ್ದಿಯೂ ಇಲ್ಲಿ ಚರ್ಚೆಗೆ ಒಳಪಟ್ಟು ಈ ಚಹಾ ಹೋಟಲಿನಲ್ಲಿಯೇ ಹೊತ್ತು ಕಳೆಯುತ್ತಾರೆ .
2. ಪಟ್ಟಣದ ಚಹಾದಂಗಡಿಗಳು ಹೇಗಿರುತ್ತವೆ ?
ಪಟ್ಟಣದ ಚಹಾದಂಗಡಿಗಳು ನಯಾ ನಾಜೂಕಿಯ ಥಳುಕು ಬಳಕಿನಂತಿರುತ್ತದೆ . ಮನವನ್ನಾಕರ್ಷಿಸುವ ಭವ್ಯ ಕಟ್ಟಡಗಳು , ನಡೆದರೆ ಕಾಲು ಜಾರುವ ನಯವಾದ ಪಾರಸಿಯ ನೆಲ , ಕೂತರೆ ಮಾಸಿಹೋದೀತೆನ್ನುವ ಕುರ್ಚಿ , ತಂಪಾದ ಫ್ಯಾನಿನ ಗಾಳಿ , ಕೋಲಮ್‌ನಿಂದ ಅಲಂಕೃತವಾದ ಟೇಬಲ್ಲೂ , ಟೇಬಲ್ ಮೇಲೆ ನೀರು ತುಂಬಿದ ಗ್ಲಾಸುಗಳು ಇರುತ್ತವೆ . ಇನ್ನು ಇಲ್ಲಿಯ ತಿಂಡಿಗಳು ತಾಜಾ ಯಾವುದು , ಹಳಸಿದ್ದು ಯಾವುದು , ಹಸಿ – ಬಿಸಿಗಳು ಒಂದೂ ತಿಳೆಯದು .
3. ಹಳ್ಳಿ ಮತ್ತು ಪಟ್ಟಣ ಹೋಟೇಲುಗಳ ಮಾಣಿಯ ಕುರಿತು ಬರೆಯಿರಿ .
ಹಳ್ಳಿಯ ಮಾಣಿ , ನಮ್ಮ ಬೇಕು ಬೇಡಗಳನ್ನು ಅರಿತು , ಒಂದು ಕೈಯಿಂದ ಸಾಗು ತಂದಿಡುತ್ತಾನೆ . ಬೆವರನ್ನು ಒರೆಸಿಕೊಳ್ಳುತ್ತಾ ಇನ್ನೊಂದು ಕೈಯಿಂದ ಪೂರಿ – ಹೆಂಡತಿಗಿಂತ ಹೆಚ್ಚಿನ ಉಪಚಾರ ಈ ಮಾಣಿಯಿಂದ ದೊರೆಯುತ್ತದೆ . ಅಷ್ಟೆ ಅಲ್ಲದೆ ಅಂದಿನ ವಿಶೇಷ ತಿಂಡಿಯನ್ನು ಕಿವಿಯಲ್ಲಿ ಪ್ರೀತಿಯಿಂದ ಹೇಳಿದಾಗ ಒಲ್ಲೆ ಎನ್ನಲು ಮನಸ್ಸೆ ಬಾರದು . ಇನ್ನು ಪಟ್ಟಣದ ಮಾಣಿ ಇದಕ್ಕೆ ತದ್ವಿರುದ್ಧ . ಈತನು ಶುಭ್ರ ಸಮವಸ್ತ್ರವನ್ನು ಧರಿಸಿದ್ದು , ಇನ್ನೂ ತಿಂಡಿಯ ಬಗ್ಗೆ ವಿಚಾರಿಸಲು ಇರುವ ತಿಂಡಿಯ ಹೆಸರನ್ನೆಲ್ಲ ಪಟಪಟನೆ ಒದರುತ್ತಾನೆ. ಅದರಲ್ಲಿ ಹಸಿ ಬಿಸಿಯ ಬಗ್ಗೆ ಆ ಮಾಣಿಗೂ ತಿಳಿಯದು.
4. ಹಳ್ಳಿಯ ಚಹಾದಂಗಡಿಯನ್ನು ಪರಿಚಯಿಸಿ .
ಹಳ್ಳಿಯ ಚಹಾದಂಗಡಿಗಳು ಮುರುಕು ಚಪ್ಪರದ ಕೆಳಗೆ ಇದ್ದು ಮುರುಕಲು ಕುರ್ಚಿ , ಮುರುಕಲು ಬೆಂಚುಗಳನ್ನು ಹೊಂದಿರುತ್ತವೆ . ಆದರೆ ಇಲ್ಲಿನ ಚಹಾ ಅಮೃತಕ್ಕೆ ಸಮನಾಗಿರುತ್ತದೆ . ಗಟ್ಟಿ ಹಾಲಿನಲ್ಲಿ ಘಮಘಮಿಸುವ ಚಹ , ಹಾಗೂ ಅದನ್ನು ಕೊಡುವ – ಆತ್ಮೀಯತೆ ಹಳ್ಳಿಯ ಚಹಾ ಅಂಗಡಿಯಲ್ಲಿ ಕಾಣುತ್ತೇವೆ . ಹಳ್ಳಿಯ ಚಹಾ ಹೋಟೇಲುಗಳು ಹಳ್ಳಿಯ ಹೆಣ್ಣು ಇಳಕಲ್ಲ ಸೀರೆ ಉಟ್ಟು , ಗುಳೇದಗುಡ್ಡದ ಕುಬ್ಬಸ ತೊಟ್ಟ ಚೆಲುವೆಯಂತೆ , ನೋಡಲು ಅಂದವಿಲ್ಲದಿದ್ದರೂ ಅಲ್ಲಿ ಸ್ವರ್ಗ ಸುಖ ಸಂತೋಷ ತೃಪ್ತಿ ಇದೆ .
5. ಹಳ್ಳಿಯ ಹೊಟೇಲುಗಳಲ್ಲಿ ಬಂದ ನವೀನತೆಯನ್ನು ಕುರಿತು ಬರೆಯಿರಿ .
ಇಂದು ಹಳ್ಳಿಯ ಹೊಟೇಲುಗಳಲ್ಲಿ ನವೀನತೆಯನ್ನು ಕಾಣಬಹುದಾಗಿದೆ . ಒಂದೆಡೆ ದೇವರ ಚಿತ್ರಪಟಗಳಾದರೆ , ಮತ್ತೊಂದೆಡೆ ಐಶ್ವರ್ಯರೈ , ಹೇಮಮಾಲಿನಿ ಹಾಗೂ ಧರ್ಮೇಂದ್ರರ ಕ್ಯಾಲೆಂಡರುಗಳನ್ನು ನೇತು ಹಾಕಿರುತ್ತಾರೆ , ಇಂದು ಟಿ.ವಿ. ರೇಡಿಯೋ , ಸ್ಟೀರಿಯೋ , ಟೇಪ್ ರೆಕಾರ್ಡ್‌ಗಳಿಂದ ಹಿಡಿದು ಎಫ್.ಎಂ ರೇಡಿಯೋ ಶೋತೃಗಳನ್ನು ಮನತಣಿಸುತ್ತಿವೆ . ರಾಮಾಯಣ – ಮಹಾಭಾರತ ಸೀರಿಯಲ್ ಬರುವಾಗಲಂತೂ ಟಿ.ವಿ.ಗೆ ಪೂಜೆ ಸಲ್ಲಿಸಿ ಧಾರಾವಾಹಿಗಳನ್ನು ಬಹಳ ಭಯ ಭಕ್ತಿಯಿಂದ ನೋಡಿದ್ದುಂಟು . ಹೀಗೆ ಇಂದು ನವೀನತೆಯ ಗಾಳಿ , ಹಳ್ಳಿಯ ಚಹಾ ಫಳಾರದ ಅಂಗಡಿಗಳಲ್ಲಿ ಬೀಸಿದೆ .
ಈ ) ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :
1, “ ನನ್ನ ದೃಷ್ಟಿಯಲ್ಲಿ ವಾರ್ತಾ ಇಲಾಖೆ ಇದ್ದಂತೆ . ”
ಪ್ರೊ . ವೀರೇಂದ್ರ ಸಿಂಪಿಯವರು ತಮ್ಮ ‘ ಹಳ್ಳಿಯ ಚಹಾ ಹೊಟೇಲುಗಳು ‘ ಎಂಬ ಲಲಿತಪ್ರಬಂಧದಲ್ಲಿ ಹಳ್ಳಿಯ ಹೊಟೇಲುಗಳನ್ನು ವಾರ್ತಾ ಇಲಾಖೆಗೆ ಹೋಲಿಸಿ ದ್ದಾರೆ . ಹಳ್ಳಿಯ ಚಹಾ ಹೊಟೇಲುಗಳೆಂದರೆ ಸುದ್ದಿಯ ತಾಣ . ಯಾರ ಮನೆಯ ಹಸು ಕರುಹಾಕಿತು , ಯಾರ ಎಮ್ಮೆ ಸತ್ತಿತ್ತು . ಯಾರ ಹೆಂಡತಿ ಸುಂದರಿ , ಯಾರು ಭ್ರಷ್ಟ , ಯಾರ ಮಗ ಪೋಲಿ – ಇತ್ಯಾದಿ ಇತ್ಯಾದಿ ಸಂಗತಿಗಳೆಲ್ಲವೂ ಅಲ್ಲಿ ಹರಡುತ್ತಿರುತ್ತವೆ . ಇಲ್ಲಿ ಬರುವವರಿಗೆ ತಮ್ಮ ತಮ್ಮ ಮನೆಗಳ ಸ್ವಂತ ವಿಚಾರಗಳು ತಿಳಿದಿರದಿದ್ದರೂ ಊರಿನ ಮೂಲೆ ಮೂಲೆಗಳ ವಿಚಾರವೂ ತಿಳಿದಿರುತ್ತದೆ . ಆದ್ದರಿಂದ ಲೇಖಕರು ಹಳ್ಳಿಯ ಚಹಾ ಹೊಟೇಲುಗಳನ್ನು ವಾರ್ತಾ ಇಲಾಖೆಗೆ ಹೋಲಿಸಿರುವುದು ಸರಿಯಾಗಿದೆ .
2. “ ಇಂದು ಸ್ಪೆಶಲ್ ಅವಲಕ್ಕಿ ಸೂಸಲ ಮಾಡಿದ್ದೇನೆ . ”
ಪ್ರೊ . ವೀರೇಂದ್ರ ಸಿಂಪಿಯವರ ‘ ಹಳ್ಳಿಯ ಚಹಾ ಹೊಟೇಲು’ಗಳೆಂಬ ಲಲಿತ ಪ್ರಬಂಧದಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಹಳ್ಳಿಯ ಚಹಾ ಹೊಟೇಲಿನ ಮಾಣಿಗಳು ಗ್ರಾಹಕರನ್ನು ಆದರಿಸಿ ಆತಿಥ್ಯ ನೀಡವ ಬಗೆಯನ್ನು ವಿವರಿಸುತ್ತಾ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ .ಪೂರಿ ತಿಂದು ಪ್ಲೇಟನ್ನು ಪಕ್ಕಕ್ಕೆ ಸರಿಸುವಷ್ಟರಲ್ಲಿ ಮಾಣಿ “ ಇಂದು ಸ್ಪೆಶಲ್ ಅವಲಕ್ಕಿ ಉಸಲಿ ಮಾಡಿದ್ದೇನೆ . ” ಎಂದು ಮತ್ತೊಂದು ಪ್ಲೇಟನ್ನು ಪಕ್ಕದಲ್ಲಿ ತಂದಿರಿಸುತ್ತಾನೆ . ಈ ರೀತಿಯ ಉಪಚಾರವನ್ನು ಯಾವ ಹೆಂಡತಿಯೂ ತನ್ನ ಗಂಡನಿಗೆ ಮಾಡಿರಲಾರ ಳೆಂದು ಲೇಖಕರು ಹಳ್ಳಿ ಹೊಟೇಲಿನ ಮಾಣಿಗಳನ್ನು ಕೊಂಡಾಡಿದ್ದಾರೆ .
3. “ ಅನಕ್ಷರಸ್ಥರ ಪಾರ್ಲಿಮೆಂಟು . ”
ಪ್ರೊ . ವೀರೇಂದ್ರ ಸಿಂಪಿಯವರು ಬರೆದಿರುವ ‘ ಹಳ್ಳಿಯ ಚಹಾ ಹೊಟೇಲುಗಳು ‘ ಎಂಬ ಲಲಿತಪ್ರಬಂಧದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದಾಗಿದೆ . ಹಳ್ಳಿಯ ಚಹಾ ಹೊಟೇಲುಗಳೆಂದರೆ ಅದೊಂದು ಸಾರ್ವಜನಿಕರ ಕೂಟವೆಂದು ವರ್ಣಿಸಿರುವ ಲೇಖಕರು ಎಲ್ಲ ಬಗೆಯ , ಎಲ್ಲ ವರ್ಗದ , ಎಲ್ಲ ಚೌಕಿಯ ಜನರೂ ಕೂಡುವ ಸ್ಥಳವಿದೆಂದು ಹೇಳಿ ಯಾರಾರಿಗೆ ಯಾವ ಯಾವ ರೀತಿ ಚಹಾ ಹೊಟೇಲು ಕಂಡಿದೆ ಎಂಬುದನ್ನು ವಿವರಿಸುವಾಗ ಲೇಖಕರು ಅನಕ್ಷರಸ್ಥರ ಪಾಲಿಗೆ ಇದು ಪಾರ್ಲಿಮೆಂಟುಗಳಿದ್ದಂತೆ ಎಂದಿದ್ದಾರೆ . ಎಲ್ಲ ವಿಚಾರಗಳನ್ನೂ ಅಲ್ಲಿ ಚರ್ಚಿಸುವುದರಿಂದ ಅದನ್ನು ಪಾರ್ಲಿಮೆಂಟಿಗೆ ಲೇಖಕರು ಹೋಲಿಸಿದ್ದಾರೆ .
4. “ ಅದು ಯಾವ ಶಸ್ತ್ರಕ್ಕೂ ಮಣಿಯದು . ”
ಪ್ರೊ . ವಿರೇಂದ್ರ ಸಿಂಪಿಯವರು ಬರೆದಿರುವ ‘ ಹಳ್ಳಿಯ ಚಹಾ ಹೊಟೇಲುಗಳು ಎಂಬ ಲಲಿತಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಪಟ್ಟಣದ ಹೊಟೇಲುಗಳ ಬಗ್ಗೆ ವಿವರಿಸುವಾಗ ಲೇಖಕರು ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ . ಪಟ್ಟಣದ ಹೊಟೇಲಿನ ತಿಂಡಿಗಳು ತಾಜಾತನದಿಂದ ಕೂಡಿರುವುದಿಲ್ಲ . ಅದು ಯಾವಾಗ ತಯಾರಾಗಿದೆಯೆಂಬುದು ಸ್ವತಃ ಮಾಣಿಗೇ ತಿಳಿದಿರುವುದಿಲ್ಲ . ವಡೆಗೆ ಆದೇಶಿಸಿದರೆ ತಂಗಳಾದ ವಡೆ ನಮ್ಮೆದುರಿಗೆ ಬಂದು ಕೂರುತ್ತದೆ . ಅದು ಎಷ್ಟು ಪೆಡುಸಾಗಿರುತ್ತವೆಂದರೆ ಯಾವ ಶಸ್ತ್ರದಿಂದಲೂ ಚೂರು ಮಾಡಿ ತಿನ್ನಲಾಗದಷ್ಟು ಒರಟಾಗಿರುತ್ತವೆಂದು ಲೇಖಕರು ವಿವರಿಸಿರುವ ಅದನ್ನು ಸಂದರ್ಭವಿದಾಗಿದೆ .
5. “ ಇಳಕಲ್ ಸೀರೆ ಉಟ್ಟ ಗುಳೇದಗುಡ್ಡ ಕುಪ್ಪಸ ತೊಟ್ಟ ಹೆಣ್ಣಿದ್ದಂತೆ . ”
ಪ್ರೊ . ವೀರೇಂದ್ರ ಸಿಂಪಿಯವರು ರಚಿಸಿರುವ ‘ ಹಳ್ಳಿಯ ಚಹಾ ಹೊಟೇಲುಗಳು ‘ ಎಂಬ ಲಲಿತಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಪೇಟೆಯ ಮತ್ತು ಹಳ್ಳಿಯ ಹೊಟೇಲುಗಳನ್ನು ಹೋಲಿಸುತ್ತಾ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ . ಪೇಟೆಯ ಹೊಟೇಲುಗಳು ನೋಡಲು ಅಂದ ಚೆಂದವಾಗಿ ಕಾಣುತ್ತವೆ . ಆದರೆ ಅಲ್ಲಿನ ತಿಂಡಿಗಳಲ್ಲಿ ರುಚಿಯ ಸೊಗಸಿರುವುದಿಲ್ಲ . ಆದ್ದರಿಂದ ಅವು ನಾಜೂಕಾದ ಹೆಣ್ಣಿದ್ದಂತೆ , ಆದರೆ ಹಳ್ಳಿಯ ಹೊಟೇಲುಗಳ ಗುಳೇದ ಗುಡ್ಡದ ಕುಸುಬು ತೊಟ್ಟ ಹೆಣ್ಣಿದ್ದಂತೆ , ನೋಡಲು ಚೆನ್ನಾಗಿಲ್ಲದಿದ್ದರೂ ಸುಖ ಹೆಚ್ಚು ಎಂದು ಹೋಲಿಕೆ ಮಾಡಿ ಹೇಳಿದ್ದಾರೆ .
Kannada Notes 2nd PUC Halliya Chaha Hotelugalu Notes Question Answer Guide Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.