10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ-10 ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು ನೋಟ್ಸ್‌ | Class 10 Social Science Chapter 10 Notes in Kannada

10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ-10 ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು ನೋಟ್ಸ್‌ ಪ್ರಶ್ನೋತ್ತರಗಳು, 10th Social Science Chapter 10 Question Answer Mcq Pdf Download Karnataka State Syllabus 2024, Kseeb Solution For Class 10 Chapter 10 Notes in Kannada SSLC Bharata Bhougolika Sthana Hagu Prakrutika Lakshanagalu Notes in Kannada

 

Class 10th Social Science Chapter 10 Question Answer

ಆತ್ಮೀಯ ವಿದ್ಯಾರ್ಥಿಗಳೇ…..ಇಲ್ಲಿ ನಾವು 10ನೇ ತರಗತಿ ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು ಸಮಾಜ ವಿಜ್ಞಾನ ನೋಟ್ಸ್‌ ನ್ನು ಕೊಟ್ಟಿರುತ್ತೇವೆ, ಈ ಪಾಠದ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು 10ನೇ ತರಗತಿ ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್‌ ನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಅಭ್ಯಾಸಗಳು

ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗವನ್ನು ಭರ್ತಿ ಮಾಡಿರಿ

1. ಇಂಡಿಯಾ ಎಂಬ ಹೆಸರು ಸಿಂಧು ನದಿಯಿಂದ ಬಳಕೆಗೆ ಬಂದಿದೆ.

2. ಭಾರತವು ಒಟ್ಟು 32,87,263 ಚದರ ಕಿಲೋಮೀಟರ್‌ಗಳಷ್ಟು ವಿಸ್ತಾರವಾಗಿದೆ.

3. ಭಾರತದ ಮಧ್ಯಭಾಗದಲ್ಲಿ 23½(ಕರ್ಕಾಟಕ ಸಂಕ್ರಾಂತಿ ವೃತ್ತ) ಉತ್ತರ ಅಕ್ಷಾಂಶ ಹಾಯ್ದು ಹೋಗುತ್ತದೆ.

4. ಭಾರತದ ದಕ್ಷಿಣ ತುದಿಯಲ್ಲಿರುವ ದೇಶ ಶ್ರೀಲಂಕಾ

5. ಭಾರತವು ಹೊಂದಿರುವ ಉದ್ದವಾದ ಕರಾವಳಿಯು 6100 ಕಿಲೋಮೀಟರುಗಳಷ್ಟು ಆಗಿದೆ.

6. ಭಾರತದ ಭೂ ಸ್ವರೂಪವನ್ನು ನಾಲ್ಕು ಪ್ರಧಾನ ವಿಭಾಗಗಳಾಗಿ ವಿಂಗಡಿಸಲಾಗಿದೆ.

7. ಮಹಾ ಹಿಮಾಲಯವನ್ನು ಹಿಮಾಚಲ ಅಥವಾ ಮಧ್ಯ ಹಿಮಾಲಯ ಎಂದು ಕರೆಯುವರು

8. ಪ್ರಪಂಚದಲ್ಲಿಯೇ ಮೌಂಟ್‌ ಎವರೆಸ್ಟ್‌ ಅತ್ಯುನ್ನತ ಶಿಖರವಾಗಿದೆ.

9. ಉತ್ತರ ಭಾರತದ ಮೈದಾನವು ಮೆಕ್ಕಲು ಮಣ್ಣಿನಿಂದ ನಿರ್ಮಾಣವಾಗಿದೆ.

10. ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಎಂದು ಕರೆಯುವರು.

ಈ ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

1.ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿದೆ?

ಭಾರತವು ಏಷ್ಯಾ ಖಂಡದ ಆಗ್ನೇಯ ಭಾಗದಲ್ಲಿದೆ

2. ಭಾರತವು ಭೂಮಿಯ ಯಾವ ಗೋಲಾರ್ಧದಲ್ಲಿ ಇದೆ?

ಭಾರತವು ಭೂಮಿಯ ಉತ್ತರ ಗೋಳಾರ್ಧ ಹಾಗೂ ಪೂರ್ವಗೋಳಾರ್ಧ ಮಧ್ಯದಲ್ಲಿದೆ.

3. ಭಾರತದ ಭೂರಾಶಿಯ ದಕ್ಷಿಣ ತುದಿ ಯಾವುದು?

ಭಾರತದ ಭೂರಾಶಿಯ ದಕ್ಷಿಣ ತುದಿ ಇಂದಿರಾ ಪಾಯಿಂಟ್.

4.‌ ಭಾರತದ ದಕ್ಷಿಣ ಭಾಗದ ಭೂ ಶಿಖರದ ಹೆಸರೇನು?

ಭಾರತದ ದಕ್ಷಿಣ ಭಾಗದ ಭೂ ಶಿಖರದ ಹೆಸರು ಕನ್ಯಾಕುಮಾರಿ.

5. ಭಾರತದ ಮಧ್ಯಭಾಗದಲ್ಲಿ ಹಾದು ಹೋಗುವ ಮುಖ್ಯ ಅಕ್ಷಾಂಶ ಯಾವುದು?

ಭಾರತದ ಮಧ್ಯಭಾಗದಲ್ಲಿ ಹಾದು ಹೋಗುವ ಮುಖ್ಯ ಅಕ್ಷಾಂಶ ಕರ್ಕಾಟಕ ಸಂಕ್ರಾಂತಿ ವೃತ್ತ 23½ ಉತ್ತರ ಅಕ್ಷಾಂಶ.

6. ಇಂದಿರಾ ಪಾಯಿಂಟ್‌ ಯಾವ ದ್ವೀಪದಲ್ಲಿದೆ?

ಇಂದಿರಾ ಪಾಯಿಂಟ್‌ ಗ್ರೇಟ್‌ ನಿಕೋಬಾರ್‌ ದ್ವೀಪದಲ್ಲಿ ಇದೆ.

7. ಹಿಮಾಲಯದ ಪಾದ ಬೆಟ್ಟಗಳ ಮತ್ತೊಂದು ಹೆಸರು ಯಾವುದು?

ಹಿಮಾಲಯದ ಪಾದ ಬೆಟ್ಟಗಳ ಮತ್ತೊಂದು ಹೆಸರು ಶಿವಾಲಿಕ್‌ ಶ್ರೇಣಿ.

8. ಭಾರತದ ಭೂ ಸ್ವರೂಪ ವಿಭಾಗಗಳಲ್ಲಿ ಯಾವುದು ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ?

ಭಾರತದ ಭೂ ಸ್ವರೂಪ ವಿಭಾಗಗಳಲ್ಲಿ ಶಿವಾಲಿಕ್‌ ಶ್ರೇಣಿ ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ

9. ಹಿಮಾಲಯ ಪರ್ವತದಿಂದ ಆಗುವ ಪ್ರಯೋಜನಗಳು ಯಾವುವು?

ಹಿಮಾಲಯ ಪರ್ವತದಿಂದ ಆಗುವ ಪ್ರಯೋಜನಗಳು :

  • ಭಾರತದ ಜನಜೀವನದ ಮೇಲೆ ಅಪಾರ ಪ್ರಭಾವ ಬೀರುತ್ತದೆ.
  • ಇವು ಭಾರತಕ್ಕೆ ರಕ್ಷಣೆಯನ್ನು ಒದಗಿಸುತ್ತದೆ.
  • ಉತ್ತರ ಏಷ್ಯಾದಿಂದ ಬೀಸುತ ಶೀತಗಾಳಿಯನ್ನು ತಡೆಯುತ್ತದೆ.
  • ನದಿಗಳ ಉಗಮದ ಪ್ರದೇಶವಾಗಿದೆ.
  • ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ.
  • ಅಪಾರವಾದ ಖನಿಜ ಸಂಪನ್ಮೂಲಗಳನ್ನು ಒಳಗೊಂಡಿದೆ.

10. ಪರ್ಯಾಯ ಪ್ರಸ್ಥಭೂಮಿಯ ಹೊಂದಿರುವ ವ್ಯಾಪ್ತಿಯನ್ನು ವಿವರಿಸಿ?

ಪರ್ಯಾಯ ಪ್ರಸ್ಥಭೂಮಿಯ ಹೊಂದಿರುವ ವ್ಯಾಪ್ತಿ :

  • ಸಟ್ಲೆಜ್‌ ಗಂಗಾ ಮೈದಾನದ ದಕ್ಷಿಣದಲ್ಲಿ ಹಿಂದೂ ಮಹಾ ಸಾಗರದವರೆಗೆ ಚಾಚಿಕೊಂಡಿದೆ.
  • ಇದು ಉತ್ತರದಲ್ಲಿ ಅರಾವಳಿ ಪರ್ವತದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಹರಡಿದೆ.
  • ಪಶ್ಚಿಮದಲ್ಲಿ ಪಶ್ಚಿಮಘಟ್ಟಗಳಿಂದ ಪೂರ್ವದಲ್ಲಿ ಜಾರ್ಖಂಡ್‌ ರಾಜ್‌ ಮಹಲ್‌ ಬೆಟ್ಟಗಳವರೆಗೆ ವ್ಯಾಪಿಸಿದೆ.

11. ಶಿವಾಲಿಕ್‌ ಶ್ರೇಣಿಯನ್ನು ಕುರಿತು ಬರೆಯಿರಿ?

  • ಶಿವಾಲಿಕ್‌ ಶ್ರೇಣಿ ಅತ್ಯಂತ ದಕ್ಷಿಣದಲ್ಲಿರುವ ಸರಣಿ ಹಾಗೂ ಅತಿ ಕಡಿಮೆ ಎತ್ತರವನ್ನು ಹೊಂದಿದೆ. ಇದನ್ನು ಹಿಮಾಲಯದ ಪಾದ ಬೆಟ್ಟಗಳು ಎನ್ನುವರು.
  • ಇಲ್ಲಿ ಸಮತಟ್ಟಾದ ಕಿರಿದಾದ ಮೈದಾನಗಳಿವೆ ಇವುಗಳನ್ನು ಡೋನ್‌ ಗಳು ಎಂದು ಕರೆಯುವರು.
  • ಇವು ಸಮುದ್ರದಿಂದ 600-1500ಮೀ ಗಳಷ್ಟು ಎತ್ತರವಾಗಿದೆ.

12. ಉತ್ತರ ಮೈದಾನವನ್ನು ಸಂಚಯನ ಮೈದಾನ ಎಂದು ಕರೆಯುತ್ತಾರೆ ಏಕೆ?

ಉತ್ತರ ಭಾರತದ ಮೈದಾನವು ನದಿಗಳು ಹೊತ್ತು ತಂದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿರುವುದರಿಂದ ಇದನ್ನು ಸಂಚಯನ ಮೈದಾನ ಎಂದು ಕರೆಯುತ್ತಾರೆ.

13. ಪಶ್ಚಿಮ ಘಟ್ಟಗಳು ಪೂರ್ವಘಟ್ಟಗಳಿಗೆ ಇರುವ ವ್ಯತ್ಯಾಸವನ್ನು ತಿಳಿಸಿ?

ಪಶ್ಚಿಮ ಘಟ್ಟಗಳು ಪೂರ್ವಘಟ್ಟಗಳು
ಇವು ದಖನ್‌ ಪ್ರಸ್ಥಭೂಮಿಯ ಪಶ್ಚಿಮದಲ್ಲಿದೆ.ಇವು ದಖನ್‌ ಪ್ರಸ್ಥಭೂಮಿಯ ಪೂರ್ವದಲ್ಲಿದೆ.
ಇವು ಹೆಚ್ಚು ಎತ್ತರವಾಗಿಲ್ಲ.ಇವು ಹೆಚ್ಚು ಎತ್ತರವಾಗಿವೆ.
ಇವು ನಿರಂತರವಾಗಿ ಇಲ್ಲ. ಇವು ನಿರಂತರವಾಗಿದೆ.
ನದಿ ಕಣಿವೆಗಳಿಂದ ಪ್ರತ್ಯೆಕಿಸಲ್ಪಟ್ಟಿವೆ.ನದಿ ಕಣಿವೆಗಳಿಂದ ಪ್ರತ್ಯೆಕಿಸಲ್ಪಟ್ಟಿಲ್ಲ.

FAQ :

1. ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿದೆ?

ಭಾರತವು ಏಷ್ಯಾ ಖಂಡದ ಆಗ್ನೇಯ ಭಾಗದಲ್ಲಿದೆ

2.‌ ಭಾರತದ ದಕ್ಷಿಣ ಭಾಗದ ಭೂ ಶಿಖರದ ಹೆಸರೇನು?

ಭಾರತದ ದಕ್ಷಿಣ ಭಾಗದ ಭೂ ಶಿಖರದ ಹೆಸರು ಕನ್ಯಾಕುಮಾರಿ.

3. ಹಿಮಾಲಯದ ಪಾದ ಬೆಟ್ಟಗಳ ಮತ್ತೊಂದು ಹೆಸರು ಯಾವುದು?

ಹಿಮಾಲಯದ ಪಾದ ಬೆಟ್ಟಗಳ ಮತ್ತೊಂದು ಹೆಸರು ಶಿವಾಲಿಕ್‌ ಶ್ರೇಣಿ.

ಇತರೆ ವಿಷಯಗಳು:

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ವಿಜ್ಞಾನ ಎಲ್ಲಾ ಪಾಠಗಳ ನೋಟ್ಸ್‌

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

1 thoughts on “10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ-10 ಭಾರತ: ಭೌಗೋಳಿಕ ಸ್ಥಾನ ಹಾಗೂ ಪ್ರಾಕೃತಿಕ ಲಕ್ಷಣಗಳು ನೋಟ್ಸ್‌ | Class 10 Social Science Chapter 10 Notes in Kannada

Leave a Reply

Your email address will not be published. Required fields are marked *

rtgh