10ನೇ ತರಗತಿ ಕೆಮ್ಮನೆ ಮೀಸೆವೊತ್ತೆನೇ ಕನ್ನಡ ನೋಟ್ಸ್ | 10th Kannada Kemmane Meesevottene Poem Notes

10ನೇ ತರಗತಿ‌ ಕನ್ನಡ ಕೆಮ್ಮನೆ ಮೀಸೆವೊತ್ತೆನೇ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು, 10th Standard Kannada Kemmane Meesevottene Poem Notes Question Answer Summary Mcq Pdf Download in Kannada Medium Karnataka State Syllabus 2024 Kseeb Solutions For Class 10 Kannada Poem 8 Notes Kemmane Meesevottene Notes in Kannada 10th Class Kannada 8th Poem Notes SSLC Kannada 8 Poem Notes Siri Kannada Text Book Class 10 Solutions Padya Chapter 8 Kemmane Meesevottane

Kemmane Meesevottene Poem Notes Pdf

Contents hide

ಪದ್ಯ -೮ , ಕೆಮ್ಮನೆ ಮೀಸೆವೊತ್ತೆನೇ 

ಕವಿ ಪರಿಚಯ :

ಪಂಪ ಮಹಾಕವಿ 

ಪಂಪ ಮಹಾಕವಿ ( ಕ್ರಿ.ಶ. ೯೪೧ ) ವೆಂಗಿ ಮಂಡಲದ ವೆಂಗಿಪಳು ಎಂಬ ಆಗಹಾರದವನು . ಚಾಲುಕ್ಯರ ಅರಿಕೇಸರಿಯ ಆಸ್ಥಾನಕವಿಯಾಗಿದ್ದ ಪಂಪ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯಂ ಎಂಬ ಮಹಾಕಾವ್ಯಗಳ ಕರ್ತೃ ವಿಕ್ರಮಾರ್ಜುನ ವಿಜಯ೦ ಕಾವ್ಯಕ್ಕೆ ಪಂಪಭಾರತ ಎಂಬ ಮತ್ತೊಂದು ಹೆಸರಿದೆ . ಕಲಿಯೂ ಕವಿಯೂ ಆಗಿದ್ದ ಪಂಪ ರತ್ನತ್ರಯರಲ್ಲಿ ಒಬ್ಬ ಸರಸ್ವತಿ ಮಣಿಹಾರ , ಸಂಸಾರ ಸಾರೋದಯ , ಕವಿತಾಗುಣಾರ್ಣವ ಎಂಬ ಬಿರುದುಗಳನ್ನು ಪಡೆದಿದ್ದ ಕವಿ . [ ಪಂಪಮಹಾಕವಿ ವಿರಚಿತ ವಿಕ್ರಮಾರ್ಜುನ ವಿಜಯಂ ಕಾವ್ಯವನ್ನು ಡಿ.ಎಲ್ . ನರಸಿಂಹಾಚಾರ್ಯರು ಸಂಪಾದಿಸಿದ್ದು ಅದರ ದ್ವಿತೀಯಾಶ್ವಾಸದಿಂದ ‘ ಕೆಮ್ಮನೆ ಮೀಸೆವೊತ್ತನೇ ‘ ಪದ್ಯಭಾಗವನ್ನು ಆಯ್ಕೆ ಮಾಡಲಾಗಿದೆ . 

 

Kemmane Meesevottene Poem Notes

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ . 

೧. ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು ? 

ಉ : ದ್ರೋಣನು ಪರಶುರಾಮರಲ್ಲಿಗೆ ದ್ರವ್ಯವನ್ನು ( ಹಣವನ್ನು) ಬೇಡುವುದಕ್ಕಾಗಿ ಬಂದನು . 

೨. ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು ? 

ಉ : ದ್ರೋಣನು ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು . 

೩. ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು ? 

ಉ : ಪರಶುರಾಮನು ದೋಣನಿಗೆ ವಾರುಣ , ವಾಯುವ್ಯ , ಆಗ್ನೆಯ , ಐಂದಾದಿ ಪ್ರಧಾನ ಅಸ್ತ್ರಗಳನ್ನು ಕೊಟ್ಟನು .

 ೪ ದ್ರುಪದನು ಪಡಿಯನಿಗೆ ಏನೆಂದು ಹೇಳಿ ಕಳುಹಿಸಿದನು ? 

ಉ : ಅಂತಹವನನ್ನು ನಾನು ತಿಳಿದಿಲ್ಲ : ಅವನನ್ನು ಹೊರಕ್ಕೆ ತಳ್ಳು ಎಂದು ದುಪದನು ಪಡಿಯಾನಿಗೆ ( ದ್ವಾರಪಾಲಕನಿಗೆ ) ಹೇಳಿದನು .

 ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ :

 ೧. ಪರಶುರಾಮನು ಮಣ್ಣಿನ ಪಾತ್ರೆಯಲ್ಲಿ ಅರ್ಥ್ಯವನ್ನು ಕೊಡಲು ಕಾರಣವೇನು ? 

ಉ : ಪರಶುರಾಮನು ತನ್ನಲ್ಲಿದ್ದದ್ದನ್ನೆಲ್ಲಾ ಬೇಡಿದವರಿಗೆ ದಾನಮಾಡಿದ್ದರಿಂದ ಆತನ ಬಳಿ ಬಿಲ್ಲು ಬಾಣಗಳಲ್ಲದೆ ಬೇರೇನೂ ಇರಲಿಲ್ಲ . ಆ ಸಂದರ್ಭದಲ್ಲಿ ದ್ರೋಣನು ಅಶ್ವತ್ಥಾಮನ ಜೊತೆಯಲ್ಲಿ ಏನಾದರು ದ್ರವ್ಯ ಬೇಡಲೆಂದು  ಪರಶುರಾಮನ ಬಳಿಗೆ ದನು . ಆಗ ಪರಶುರಾಮನು ತನ್ನ ಬಳಿ ಚಿನ್ನದ ಪಾತೆಗಳಿಲ್ಲದುದರಿಂದ ದ್ರೋಣರಿಗೆ ಮಣ್ಣಿನ ಪಾತ್ರೆಯಲ್ಲಿಯೇ ಅರ್ಭ್ಯವನ್ನು ಕೊಟ್ಟು ಪೂಜಿಸಿದನು . 

೨. ದ್ರುಪದನು ದ್ರೋಣರಿಗೆ ಹೇಳಿದ ಮಾತುಗಳು ಯಾವುವು ? 

ಉ : ದ್ರುಪದನು ದೋಣರಿಗೆ “ ನೀನು ಯಾರೆಂದು ನನಗೆ ತಿಳಿದಿಲ್ಲ . ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ಎಂಬ ಮಾತುಗಳಿಂದ ದ್ರೋಣನಿಗೆ ಮರ್ಮಭೇದಕ ವಾಗುವಂತೆ ಹೀಯ್ಯಾಳಿಸಿದನು . 

೩. ದ್ರುಪದನ ಮಾತಿಗೆ ದ್ರೋಣನ ಪ್ರತ್ಯುತ್ತರವೇನು ? 

ಉ : ದುಪದನ ಮಾತಿಗೆ ದ್ರೋಣನು ಎಲೋ ಏಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು ‘ ಎನ್ನುವ ಗಾದೆಯಂತೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲದೆ ಬಿಡುತ್ತಿದ್ದೇನೆ . ಈ ಸಭಾವಲಯದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನೀನು ಬೆಚ್ಚುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ ? ” ಎಂದು ಪ್ರತ್ಯುತ್ತರ ಕೊಟ್ಟನು .

10th Kemmane Meesevottane Questions and Answers Summary Notes Pdf

 ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯದಲ್ಲಿ ಉತ್ತರಿಸಿ 

೧. ದ್ರುಪದನಿಗೂ ದ್ರೋಣನಿಗೂ ನಡೆದ ಸಂಭಾಷಣೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ . 

 : ದ್ರುಪದನು ” ಅಂತಹವನನ್ನು ನಾನು ತಿಳಿದಿಲ್ಲ ; ಅವನನ್ನು ಹೊರಕ್ಕೆ ತಳ್ಳು ” ಎಂದು ದ್ವಾರಪಾಲಕನಿಗೆ ಹೇಳಿದಾಗ ದ್ವಾರಪಾಲಕನು ಬಂದು ಆ ರೀತಿಯಲ್ಲಿ ತಿಳಿಸಲಾಗಿ ದ್ರೋಣನು ಬಲವಂತವಾಗಿ ಒಳಕ್ಕೆ ಪ್ರವೇಶಿಸಿ ದ್ರುಪದನನ್ನು ನೋಡಿ ‘ ಅಣ್ಣಾ ನೀನೂ ನಾನೂ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದುದನ್ನು ತಿಳಿದಿಲ್ಲವೇ ‘ ಎನ್ನಲು ದ್ರುಪದನು ನಿನ್ನನ್ನು ನಾನು ತಿಳಿದಿಲ್ಲ . ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ‘ ಎಂಬ ಮಾತುಗಳಿಂದ ದೋಣನಿಗೆ ಮರ್ಮಭೇದಕ ವಾಗುವಂತೆ ಹೀಯಾಳಿಸಿದನು . ಹಾಗೆ ಮಾಡಿದುದೂ ಅಲ್ಲದೆ ದ್ರುಪದನು ” ಈ ನಾಚಿಕೆಗೆಟ್ಟ ಬ್ರಾಹ್ಮಣನನ್ನು ಎಳೆದು ಹೊರಗೆ ನೂಕಲ ” ಎನ್ನಲು ದ್ರೋಣನು ಹೀಗೆಂದನು- “ ಐಶ್ವರ್ಯ ಬರಲು ಮದ್ಯಪಾನ ಮಾಡಿದವರಂತೆ ಮಾತು ತೊದಲುವುದು , ಮುಖದಲ್ಲಿ ವಕಚೇಷ್ಟೆಯುಂಟಾಗುವುದು ; ಮಾತುಗಳು ನಾಚಿಕೆಯಿಲ್ಲದಾಗುವುವು ಸಂಬಂಧವನ್ನು ಮರೆಯುವಂತೆ ಮಾಡುವುದು ; ಅದುದರಿಂದ ಐಶ್ವರ್ಯವು ಕಳ್ಳಿನೊಡನೆ ಹೆಂಡದೊಡನೆ ) ಎಟ್ಟಿತು ಎಂಬುದನ್ನು ನಿಸ್ಸಂಶಯವಾಗಿ ತಟ್ಟನೆ ಈಗ ನಾನು ವಿಶದವಾಗಿ ತಿಳಿದೆನು . ಎಲೋ ಏಳನೇ “ ನೋಣಕ್ಕೆ ಕಸವೇ ಶ್ರೇಷ್ಠವಾದುದು ‘ ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ . ಈ ಸಭಾವಲಯದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನಿರಾಯಾಸವಾಗಿ , ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ ? ” ಕನ್ನಡ ದೀವಿಗೆ 

೨. ದ್ರೋಣನು ದ್ರುಪದನ ವಿರುದ್ಧ ತಪಥ ಮಾಡಲು ಕಾರಣವಾದ ಅಂಶಗಳನ್ನು ವಿವರಿಸಿ . 

ಉ : ದ್ರೋಣ ಮತ್ತು ದುಪದರಿಬ್ಬರೂ ಯಜ್ಞಸೇನನೆಂಬ ಗುರುವಿನಲ್ಲಿ ಸಹಪಾಠಿಗಳಾಗಿ ವಿದ್ಯಾಭ್ಯಾಸ ಮಾಡಿದರು . ದ್ರುಪದನು ತಾನು ದೊರೆಯಾದಾಗ ತನ್ನ ಬಳಿಕ ಬಂದರೆ ಸಹಾಯಮಾಡುವುದಾಗಿ ದ್ರೋಣನಿಗೆ ಹೇಳಿದನು . ಇಬ್ಬರ ವಿದ್ಯಾಭ್ಯಾಸ ಮುಗಿದ ನಂತರ ದುಪದನು ಛತ್ರಾವತಿಯಲ್ಲಿ ರಾಜನಾಗಿ ಆಳುತ್ತಿದ್ದನು . ಆಸಮಯದಲ್ಲಿ ದ್ರೋಣನಿಗೆ ಬಹಳ ಬಡತನ ಉಂಟಾಯಿತು . ಆಗ ಅವನು ದ್ರುಪದನು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಆಡಿದ್ದ ಮಾತುಗಳನ್ನು ಜ್ಞಾಪಿಸಿಕೊಂಡು ಸಹಾಯವನ್ನು ನಿರೀಕ್ಷಿಸಿ ದ್ರುಪದನಲ್ಲಿಗೆ ಬಂದನು . ಆದರೆ ದ್ರುಪದನಿಗೆ ಅಧಿಕಾರಮದ ಆವರಿಸಿತ್ತು . ದೋಣ ತನ್ನ ಸಹಪಾಠಿ ಎಂದು ಗುರುತಿಸದಾದನು . ದ್ರೋಣನು ದ್ರುಪದನರಮನೆಯ ಬಾಗಿಲಲ್ಲಿ ನಿಂತು ಬಾಗಿಲು ಕಾಯುವವನನ್ನು ಕರೆದು ನಿಮ್ಮ ಜೊತೆಯಲ್ಲಾಟವಾಡಿದ ಸ್ನೇಹಿತನಾದ ದ್ರೋಣನೆಂಬ ಬ್ರಾಹ್ಮಣನು ಬಂದಿದ್ದಾನೆಂದು ನಿಮ್ಮ ರಾಜನಿಗೆ ತಿಳಿಯಪಡಿಸು ಹೇಳಿ ಕಳುಹಿಸಿದಾಗ ದ್ರುಪದನು ಅವನಾರೋ ನನಗೆ ತಿಳಿದಿಲ್ಲ . ಅವನನ್ನು ಹೊರಕ್ಕೆ ತಳ್ಳು ‘ ಎಂದು ಆದೇಶಿಸಿದನು . ಆದರೆ ದೋಣನು ಬಲವಂತವಾಗಿ ಒಳಕ್ಕೆ ನುಗ್ಗಿ ಬಂದು ದಪದನಿಗೆ ತಮ್ಮಿಬ್ಬರೂ ಸಹಪಾಠಿಗಳಾಗಿದ್ದ ಸಂದರ್ಭವನ್ನು ಹೇಳಿದಾಗ ದ್ರುಪದನು “ ನೀನಾರೋ ನನಗೆ ತಿಳಿದಿಲ್ಲ. ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ” ಎಂದು ಹೀಯಾಳಿಸಿ ಮಾತನಾಡಿದ್ದನ್ನು ಕೇಳಿ ಕೋಪಗೊಂಡ ದೋಣನು “ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲದೆ ಬಿಡುತ್ತಿದ್ದೇನೆ . ಈ ಸಭಾವಲಯದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನೀನು ಬೆಚ್ಚುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ ? ” ಎಂದು ಶಪಥ ಮಾಡಿದನು . 

ಈ ) ಕೊಟ್ಟಿರುವ ಹೇಳಿಕೆಗಳಿಗೆ ಸಂದರ್ಭದೊಡನೆ ಸ್ವಾರಸ್ಯ ಬರೆಯಿರಿ : 

೧. ‘ ಈಗಳೊಂದಡಕೆಯುಮಿಲ್ಲ ಕೈಯೊಳ್ “

 ಉ : ಆಯ್ಕೆ : ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ಕೆಮ್ಮನೆ ಮೀಸೆವೊತ್ತನೇ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .

ಸಂದರ್ಭ: ದ್ರೋಣನು ತನಗೆ ಬಡತನವುಂಟಾಗಲು ಅಶ್ವತ್ಥಾಮನನ್ನೂ ಕರೆದುಕೊಂಡು ದೇಶದೇಶಗಳಲ್ಲೆಲ್ಲ ಸುತ್ತಿ ಪರಶುರಾಮನ ಬಳಿಗೆ ಬಂದು ಸಹಾಯ ಯಾಚಿಸಿದ ಸಂದರ್ಭದಲ್ಲಿ ಪರಶುರಾಮನು “ ನನ್ನ ಪದಾರ್ಥಗಳನ್ನೆಲ್ಲ ಬೇಡಿದವರಿಗೆ ಕೊಟ್ಟೆನು , ಭೂಮಂಡಲವನ್ನು ಗುರುಗಳಿಗೆ ಕೊಟ್ಟೆನು . ಈಗ ನನ್ನಲ್ಲಿ ಒಂದಡಕೆಯೂ ಇಲ್ಲ ” ಎಂದು ದ್ರೋಣನಿಗೆ ಹೇಳುತ್ತಾನೆ . 

ಸ್ವಾರಸ್ಯ : ದೋಣನು ತನ್ನ ಬಳಿ ಬಂದು ಸಹಾಯ ಯಾಚಿಸಿದಾಗ ಪರಶುರಾಮನು ಯಾವುದೇ ಮುಚ್ಚುಮರೆ ಇಲ್ಲದೆ ತನ್ನ ನಿಜ ಸ್ಥಿತಿಯನ್ನು ಹೇಳಿಕೊಳ್ಳುವುದು ಈ ಮಾತಿನಲ್ಲಿ ಸ್ವಾರಸ್ಯ ಪೂರ್ಣವಾಗಿ ವ್ಯಕ್ತವಾಗಿದೆ . 

೨. ವಿದ್ಯಾಧನಮೆ ಧನಮಪ್ಪುದು 

ಉ : ಆಯ್ಕೆ : ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ಕೆಮ್ಮನೆ ಮೀಸೆವೊತ್ತನೇ “ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .

ಸಂದರ್ಭ : ದೋಣನು ತನ್ನ ಬಳಿ ಬಂದು ಸಹಾಯ ಯಾಚಿಸಿದಾಗ ಪರಶುರಾಮನು “ ಎಲೈ ದ್ರೋಣನೆ ಈಗ ಇದೊಂದು ಬಿಲ್ಲ ಇದೊಂದು ದಿವ್ಯಾಸ್ತ್ರಗಳ ಸಮೂಹವೂ ಇದೆ . ನನ್ನಲ್ಲಿ ಬೇರೆ ಯಾವುದೇ ಆಸ್ತಿಯಿಲ್ಲ . ಇವುಗಳಲ್ಲಿ ನಿನಗೆ ಯಾವುದನ್ನು ಕೊಡಲಿ ? ಚೆನ್ನಾಗಿ ಹೇದ ಸಂದರ್ಭದಲ್ಲಿ ದೋಣನು “ ನನಗೆ ವಿದ್ಯಾಧನವೇ ಧನವಾಗಿರುವುದರಿಂದ ಆ ದಿವ್ಯಾಸ್ತ್ರಗಳನ್ನು ದಯಪಾಲಿಸಬೇಕು ” ಎಂದು ಹೇಳುತ್ತಾನೆ . ಯೋಚಿಸಿ ಹೇಳು ಎಂದು  

ಸ್ವಾರಸ್ಯ ‘ ‘ ವಿದ್ಯಾಧನರ್ವೆ ನಿಜವಾದ ಸಂಪತ್ತು ‘ ಎಂದು ಹೇಳುವ ಮೂಲಕ ದೋಣನು ವಿದ್ಯೆಯ ಮಹತ್ವವನ್ನು ತಿಳಿಸಿರುವುದು ಇಲ್ಲಿನ ಸ್ವಾರಸ್ಯವಾಗಿದೆ . 

೩. ‘ ಎಂತು ನಾಣಿಲಿಗರಪ್ಪರೆ ಮಾನಸರ್‌ ‘ 

ಉ : ಆಯ್ಕೆ : ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ಕೆಮ್ಮನೆ ಮೀಸೆವೊತ್ತನೇ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .

ಸಂದರ್ಭ : ದ್ರೋಣನು ದುಪದನ ಬಳಿಗೆ ಹೋಗಿ ” ಅಣ್ಣಾ ನೀನೂ ನಾನೂ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದುದನ್ನು ತಿಳಿದಿಲ್ಲವೇ ? ” ಎನ್ನಲು ದುಪದನು ನನಗೆ ನಿನ್ನ ಪರಿಚಯವಿಲ್ಲ . ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ಎಂಬ ಮಾತುಗಳಿಂದ ದೋಣನಿಗೆ ಹೀಯ್ಯಾಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ತನ್ನ ಸಹಪಾಠಿಯಾಗಿದ್ದ ಆತ್ಮೀಯ ಸ್ನೇಹಿತ ಒಬ್ಬ ಬಡವನೆಂಬ ಕಾರಣಕ್ಕೆ ‘ ನೀನಾರೋ ನನಗೆ ತಿಳಿದಿಲ್ಲ ‘ಎಂದು ಹೇಳುವ ದ್ರೋಣನ ಅಹಂಕಾರ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .

10th Standard Kannada Guide Question Answer

 ೪ , ‘ ಜಲಕ್ಕನೀಗಳದೆ ಸಿರಿ ಕಳ್ಕೊಡವುಟ್ಟಿತೆಂಬುದಂ 

ಉ : ಆಯ್ಕೆ : ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ ವಿಕಮಾರ್ಜುನ ವಿಜಯಂ ‘ ಕೃತಿಯಿಂದ ಆರಿಸಿಕೊಳ್ಳಲಾಗಿರುವ “ ಕಮ್ಮನೆ ಮೀಸೆವೊತ್ತನೇ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .

ಸಂದರ್ಭ : ತನ್ನ ಬಳಿ ಸಹಾಯ ಕೇಳಲು ಬಂದ ದ್ರೋಣನನ್ನು ಕುರಿತು ದ್ರುಪದನು “ ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ? ರಾಜನಿಗೂ ಬಾಹಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ” ಎಂದು ಹೀಯಾಳಿಸಿದ ಸಂದರ್ಭದಲ್ಲಿ ದೋಣನು “ ಐಶ್ವರ್ಯವೆಂಬ ಮದವೇರಿದರೆ ಮಾತಿನಲ್ಲಿ ಮುಖದಲ್ಲಿ ವಕತೆಯುಂಟಾಗುತ್ತದೆ ; ಸಂಬಂಧವನ್ನು ಐಶ್ವರ್ಯವು ಕಳ್ಳಿನೊಡನೆ ( ಹೆಂಡದೊಡನೆ ) ಹುಟ್ಟಿತು ಎಂಬುದನ್ನು ಈಗ ನಾನು ತಕ್ಷಣವೇ ಸ್ಪಷ್ಟವಾಗಿ ಮರೆಯುವಂತೆ ಮಾಡುವುದು ; ತಿಳಿದೆನು ” ಎಂದು ಹೇಳುತ್ತಾನೆ .

ಸ್ವಾರಸ್ಯ : ಸಮುದ್ರ ಮಥನ ಕಾಲದಲ್ಲಿ ಐಶ್ವರ್ಯ ( ಲಕ್ಷಿ ) ಮತ್ತು ಕಳ್ಳು ( ಅಮೃತ / ಸುರಪಾನ ) ಇವರಡೂ ಹುಟ್ಟಿದವು , ಆ ಘಟನೆಯನ್ನು ದ್ರೋಣನ ಮೂಲಕ ಮಹಾಕವಿ ಪಂಪನು ‘ ದುಪದನ ಐಶ್ವರ್ಯ ಮದಕ್ಕೆ ‘ ಅನ್ವಯಮಾಡಿ ಹೇಳಿರುವುದು ಇಲ್ಲಿನ ಸ್ವಾರಸ್ಯವಾಗಿದೆ . ಕನ್ನಡ ದೀವಿಗೆ

೫. ‘ ನೊಳವಿಂಗೆ ಕುಪ್ಪೆ ವರಂ ‘ 

ಉ : ಆಯ್ಕೆ : ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ಕೆಮ್ಮನೆ ಮೀಸೆವೊತ್ತನೇ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .

ಸಂದರ್ಭ : ದ್ರುಪದನು ಹೀಯಾಳಿಸಿದಾಗ ಕೋಪಗೊಂಡ ದ್ರೋಣನು ದ್ರುಪದನನ್ನು ಕುರಿತು “ ಎಲೋ ಏಳನೇ , ನೊಣಕ್ಕೆ ಕಸವೇ ಶ್ರೇಷ್ಠವಾದುದು ” ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ , ಈ ಸಭಾವಲಯದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನಿರಾಯಾಸವಾಗಿ , ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ ? ” ಎಂದು ಶಪಥ ಮಾಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ . 

ಸ್ವಾರಸ್ಯ : ‘ ನೊಣಕ್ಕೆ ಕಸವೇ ಶ್ರೇಷ್ಠ ‘ ಎಂಬಂತೆ ವ್ಯಕ್ತಿಯ ಯೋಗ್ಯತೆಗೆ ತಕ್ಕಂತೆ ಗುಣ – ನಡತೆ ಅಭಿರುಚಿಗಳಿರುತ್ತವೆ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ . 

ಭಾಷಾ ಚಟುವಟಿಕೆ 

ಅ ) ಕೊಟ್ಟಿರುವ ಪದಗಳನ್ನು ಬಿಡಿಸಿ , ಸಂಧಿ ಹೆಸರಿಸಿ . 

ವಲ್ಕಲಾವೃತ = ವಲ್ಕಲ + ಅವೃತ – ಸವರ್ಣದೀರ್ಘಸಂಧಿ

ದ್ರವ್ಯಾರ್ಥಿ = ದ್ರವ್ಯ + ಅರ್ಥಿ – ಸವರ್ಣದೀರ್ಘಸಂಧಿ

ನಿಮ್ಮರಸ = ನಿಮ್ಮ + ಆರಸ – ಲೋಪಸಂಧಿ

ಮದೋನ್ಮತ್ತ  = ಮದ + ಉನ್ನತ್ತ ಗುಣಸಂಧಿ

ಕುಲ್ಗುಡಿದ  =  ಕಳ + ಕುಡಿ – ಆದೇಶಸಂಧಿ

 ಆ ) ಕೊಟ್ಟಿರುವ ಪದಗಳನ್ನು ವಿಗ್ರಹ ವಾಕ್ಯ ಮಾಡಿ , ಸಮಾಸ ಹೆಸರಿಸಿ . 

ನಾಣಿಲಿ  = ನಾಣು ( ನಾಚಿಕೆ ) ಇಲ್ಲದವನು ಯಾರೋ ಅವನೇ  ( ನಾಚಿಕೆಗೇಡಿ ) – ಬಹುವೀಹಿ 

ದಿವ್ಯಶರಾಳಿ   =ದಿವ್ಯವಾದ + ಶರಾಳಿ – ಕರ್ಮಧಾರಯ ಸಮಾಸ   –

ಮಹೀಪತಿ= ಮಹೀ ( ಭೂಮಿ ) ಗೆ  ( ಒಡೆಯ ) ಆದವನು ಯಾರೋ ಅವನೇ ಮಹೀಪತಿ ( ರಾಜ )

 ಬಹುವೀಹಿ ಸಮಾಸ 

ಕುಲ್ಗುಡಿದ= ಕಳ್ಳಂ ( ಕಳನ್ನು + ಕುಡಿದ – ಕ್ರಿಯಾ ಸಮಾಸ  

ಇ ) ಕೊಟ್ಟಿರುವ ವಾಕ್ಯದಲ್ಲಿರುವ ಅಲಂಕಾರವನ್ನು ಗುರುತಿಸಿ , ಲಕ್ಷಣದೊಂದಿಗೆ ಸಮನ್ವಯಗೊಳಿಸಿ . ” 

ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನ ದೊಂದಳವು ? ”

 ಅಲಂಕಾರ : ಉಪಮಾಲಂಕಾರ 

ಲಕ್ಷಣ : ಎರಡು ವಸ್ತುಗಳಿಗಿರುವ ಸಾದೃಶ್ಯಸಂಪತ್ತನ್ನು ಪರಸ್ಪರ ಹೋಲಿಸಿ ವರ್ಣಿಸಿದರೆ ಅದು ‘ ಉಪಮಾಲಂಕಾರ‘

 ಉಪಮೇಯ : ದ್ರುಪದನ ಅಳವು ( ಯೋಗ್ಯತೆ / ಪರಾಕ್ರಮ ) 

ಉಪಮಾನ : ಕುಪ್ಪೆಯನ್ನೇ ಶ್ರೇಷ್ಠವೆಂದು ಭಾವಿಸಿದ ನೊಳ ( ನೊಣ ) ಉಪಮಾ ವಾಚಕ : ವೊಲ್

ಸಮನ್ವಯ : ಇಲ್ಲಿ ಉಪಮೇಯವಾಗಿರುವ ದುಪದನ ಯೋಗ್ಯತೆಯನ್ನು ಕುಪ್ಪೆಯನ್ನೇ ಶ್ರೇಷ್ಠವೆಂದು

ಭಾವಿಸಿದ ನೊಳ ( ನೊಣ ) ಕ್ಕೆ ಹೋಲಿಸಲಾಗಿರುವುದರಿಂದ ಇದು ಉಪಮಾಲಂಕಾರವಾಗಿದೆ .

ಈ ) ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ , ಗಣವಿಭಾಗ ಮಾಡಿ , ಛಂದಸ್ಸಿನ ಹೆಸರನ್ನು ಬರೆಯಿರಿ .

FAQ :

1. ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು ? 

ಉ : ದ್ರೋಣನು ಪರಶುರಾಮರಲ್ಲಿಗೆ ದ್ರವ್ಯವನ್ನು ( ಹಣವನ್ನು) ಬೇಡುವುದಕ್ಕಾಗಿ ಬಂದನು . 

2. ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು ? 

ಉ : ದ್ರೋಣನು ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು . 

ಇತರೆ ವಿಷಯಗಳು :

10th Standard All Subject Notes

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 10ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh