ಸುಭಾಷಿತಗಳು | Subhashita in kannada

Subhashita in kannada, ಕನ್ನಡ ಸುಭಾಷಿತಗಳು,ಸುಭಾಷಿತ ಮಾತು, ಸುಭಾಷಿತಗಳು,Beautiful Subhashita in Kannada, kannada subhashita nudimuttugalu,

ಸುಭಾಷಿತಗಳು Subhashita in kannada
ಸುಭಾಷಿತಗಳು Subhashita in kannada
  • ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು ; ಲೋಕ ಧರ್ಮದ ಹಿತಕ್ಕಾಗಿ ಅಲ್ಲ. —–ಡಿ.ವಿ.ಜಿ.
  • ಜಾತಿಯನ್ನು ಕೇಳಬೇಡಿ , ಹೇಳಬೇಡಿ ಮತ್ತು ಅದರ ಬಗ್ಗೆ ಚಿಂತಿಸಲೂಬೇಡಿ.—- ನಾರಾಯಣ ಗುರು.
  • ಗುಣಾತ್ಮಕವಾಗಿ ಯೋಚಿಸುವುದಿಲ್ಲ ಎಂದಾದಲ್ಲಿ ನೀವು ಕನಿಷ್ಠ ಪಕ್ಷ ಸುಮ್ಮನಾದರೂ ಇರಿ.—– ಜೋಯೆಲ್ ಆಸ್ಟಿನ್ .
  • ಪ್ರೀತಿಯಲ್ಲಿ ಬೀಳುವುದಕ್ಕೆ ಗುರುತ್ವಾಕರ್ಷಣ ಶಕ್ತಿಯನ್ನು ಬೈದು ಪ್ರಯೋಜನವಿಲ್ಲ. ಅದೊಂದು ಜೈವಿಕ ಕ್ರಿಯೆ; ಭೌತ ಮತ್ತು ರಸಾಯನಶಾಸ್ತ್ರಕ್ಕೆ ಅಲ್ಲಿ ಸ್ಥಳವಿಲ್ಲ.—– ಆಲ್ಬರ್ಟ್ ಐನ್ ಸ್ಟೀನ್
  • ಪ್ರತಿಭೆಗೆ ಶಾಸ್ತ್ರಜ್ಞಾನವಿದ್ದರೆ ವಜ್ರಕ್ಕೆ ಕುಂದಣವಿಟ್ಟಂತೆ.—–ತ.ರಾ.ಸು.
  • ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾಂಗಿಗಳಲ್ಲ.——ಸರ್.ಫಿಲಿಪ್ ಸಿಡ್ನಿ.
  • ಕಾಲದ ಮರಳಿನಲ್ಲಿ ಹೆಜ್ಜೆಗುರುತುಗಳನ್ನು ಬಿಡು.ಕಾಲನ್ನೆಳೆಯುತ್ತಾ ನಡೆಯಬೇಡ.—-ಎ.ಪಿ.ಜೆ.ಅಬ್ದುಲ್ ಕಲಾಂ.
  • ನನ್ನ ಅಜ್ಜ ಯಾರೆಂದು ನನಗೆ ಗೊತ್ತಿಲ್ಲ;ಆದರೆ ಆತನ ಮೊಮ್ಮಗ ಏನಾಗಬೇಕೆಂದು ನನಗೆ ಗೊತ್ತಿದೆ. —– ಅಬ್ರಹಾಂ ಲಿಂಕನ್.
  • ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ.—— ಕುವೆಂಪು
  • ಕೊಟ್ಟು ಕೆಟ್ಟವರಿಲ್ಲ , ತಿಂದು ಬದುಕಿದವರಿಲ್ಲ. ಕೊಟ್ಟು ಕದಿಯಲು ಬೇಡ ,ಕೊಟ್ಟಾಡಿಕೊಳಬೇಡ. —– ಸರ್ವಜ್ಞ.
  • ಜಗತ್ತಿನಲ್ಲಿ ಹೇಳುವವರಿಗಿಂತ , ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು.—– ಗಳಗನಾಥ.
  • ಕ್ಷಮಿಸುವುದು ಉತ್ತಮ. ಮರೆತುಬಿಡುವುದು ಸರ್ವೋತ್ತಮ. —— ರಾಬರ್ಟ್ ಬ್ರೌನಿಂಗ್ .
  • ಮೌನ ಅನಂತದಷ್ಟು ಆಳವಾದದ್ದು.ಮಾತು ಕಾಲದಷ್ಟು ಕ್ಷಣಿಕ. —- ಥಾಮಸ್ ಕಾರ್ಲೈಲ್.
  • ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ. —–ಕುವೆಂಪು.
  • ಅದೃಷ್ಟ ವೆನ್ನುವುದು ಪ್ರಯತ್ನವೆಂಬ ತಾಯಿಗೆ , ಅವಕಾಶವೆಂಬ ತಂದೆಗೆ ಜನಿಸುವ ಮಗು.—–ಗುರುನಾನಕ್.
  • ಮಾತೇ ಮನಸ್ಸಿನ ಕನ್ನಡಿ.ಮಾತಿನಂತೆ ಮನುಷ್ಯ. —–ಪಿ.ಸೈರಸ್.
  • ಬಂಧಿತನಾದ ದೇವರೇ ಮನುಷ್ಯ ; ಬಂಧನದಿಂದ ಬಿಡಿಸಿಕೊಂಡ ಮನುಷ್ಯನೇ ದೇವರು. —– ರಾಮಕೃಷ್ಣ ಪರಮಹಂಸ.
  • ಸತ್ಯವನ್ನು ಹೇಳುವವನು , ಸ್ವಾರ್ಥವನ್ನು ಗೆದ್ದವನು ನಿಜವಾದ ಸುಖಿ.—– ಬುದ್ಧ.
  • ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು.—— ಶಿವರಾಮ ಕಾರಂತ.
  • ನಿನ್ನನ್ನು ಪೀಡಿಸುವ ಸಂಕಟಗಳನ್ನು ನಗುನಗುತ್ತಾ ನಾಶಪಡಿಸು.—- ಸ್ವಾಮಿ ವಿವೇಕಾನಂದ.
  • ತಾನು ಎಲ್ಲವನ್ನೂ ಬಲ್ಲೆನೆಂದು ತಿಳಿಯುವವನೆ ಮೂರ್ಖ. —– ಮಹಾಭಾರತ.
  • ರೂಪ ಕಣ್ಣುಗಳಿಗೆ ಸೀಮಿತ.ಗುಣ , ಆತ್ಮದವರೆಗೆ ತಲುಪುವ ಸಾಧನ.—–ತ್ರಿವೇಣಿ.
  • ಹಣಕ್ಕೆ ಕೈ , ಕಾಲುಗಳಿದ್ದಂತೆ ಉಪಯೋಗಿಸಿ, ಇಲ್ಲವೇ ಕಳೆದುಕೊಳ್ಳಿ.—–ಹೆನ್ರಿ ಫೋರ್ಡ್.

50 + Subhashitagalu In Kannada

  • ಹೊಗಳಿಕೆಯ ಮಾಲಿನ್ಯವನ್ನು ತೊಡೆದು ಹಾಕಲು ಏಕಮಾತ್ರ ಉಪಾಯ: ಕೆಲಸ ಮತ್ತು ಇನ್ನಷ್ಟು ಕೆಲಸ. ——ಆಲ್ಬರ್ಟ್ ಐನ್ ಸ್ಟೀನ್.
  • ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ತಾವೇ ಕಂಡುಕೊಳ್ಳಬೇಕು.ಧರ್ಮದ ದಾರಿ ಒಂದಲ್ಲ,ಹಲವು.—– ಕೆ.ಎಂ. ಮುನ್ಷಿ.
  • ಸಾಯುವುದು ಸುಲಭ, ಬಾಳುವುದು ದೊಡ್ಡ ಹೊಣೆಗಾರಿಕೆ. —- ಎಸ್. ವಿ.ರಂಗಣ್ಣ.
  • ವ್ಯಕ್ತಿತ್ವ ಸಾಧನೆ ಹೊಸ ಯುಗದ ಬೀಜಮಂತ್ರ.—-ರಂ.ಶ್ರೀ.ಮುಗಳಿ.
  • ನಿರ್ಭಯವೂ ನಿಷ್ಪಕ್ಷಪಾತವೂ ಆದ ಜಗತ್ತಿನ ಅನ್ವೇಷಣೆಯೇ ವಿಜ್ಞಾನ. —-‘ ಸಿ.ವಿ.ರಾಮನ್.
  • ಶ್ರಮಜೀವಿಯಂತೆ ಕೆಲಸ ಮಾಡು .ವೇದಾಂತಿಯಂತೆ ಯೋಚಿಸು.——- ಹೆನ್ರಿ ಬರ್ಗ್.
  • ನಮ್ಮ ಗುಣಗಳ ನೆರಳೇ ನಮ್ಮ ಲೋಕಗಳು.—– ಎಮರ್ ಸನ್.
  • ಲೋಕವೆಂಬುದೊಂದು ಸಂತೆ, ಬೇಕು ಬೇಡಗಳ ಕಂತೆ, ಸಾಕು ನಮಗಾ ಚಿಂತೆ.—– ಡಿ.ವಿ.ಗುಂಡಪ್ಪ.
  • ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದೂ ಬೇಸರದ್ದಾಗಿ ಕಾಣುವುದಿಲ್ಲ. —– ಮಹಾತ್ಮಾ ಗಾಂಧಿ.
  • ನಿಮ್ಮ ಮುಖವನ್ನು ಯಾವತ್ತೂ ಸೂರ್ಯನಿಗೆ ಅಭಿಮುಖವಾಗಿಟ್ಟು ಕೊಳ್ಳಿ.ನೆರಳು ಹಿಂದಕ್ಕೆ ಸರಿಯುತ್ತದೆ.—– ವಾಲ್ಟ್ ವಿಟ್ಮನ್.
  • ನಮ್ಮ ಧರ್ಮಗಳು ನಮಗೆ ಕೂಡಿ ಬಾಳಲು ಕಲಿಸದೇ ಇದ್ದರೆ ಆ ಧರ್ಮಗಳು ಏಕೆ.? —- ಸಿದ್ಧೇಶ್ವರ ಸ್ವಾಮಿಜಿ.
  • ಮಹಾ ಕಾರ್ಯಗಳು ಮಹಾ ತ್ಯಾಗದಿಂದ ಮಾತ್ರ ಸಾಧ್ಯ. —– ಸ್ವಾಮಿ ವಿವೇಕಾನಂದ.
  • ಲೋಕದಲ್ಲಿ ಯಾವ ಮಾನವನೂ ಪೂರ್ಣ ಸುಖಿಯೂ ಅಲ್ಲ. ಪೂರ್ಣ ದು:ಖಿಯೂ ಅಲ್ಲ. —- ಗೌತಮ ಬುದ್ಧ.
  • ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ. ಆದರೆ ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ.—— ಸ್ವಾಮಿ ವಿವೇಕಾನಂದ.
  • ಸುಖದಲ್ಲೂ ಭಯ , ಅಪಾಯ ಇದೆ. ಕಷ್ಟದಲ್ಲೂ ಹಿತ , ಭರವಸೆ ಇದೆ. —– ಫ್ರಾನ್ಸಿಸ್ ಬೇಕನ್.
  • “ನಮ್ಮನ್ನು ಪ್ರೀತಿಸುವವರಿದ್ದಾರೆ” ಎನ್ನುವ ನಂಬಿಕೆಯೇ ಜೀವನದ ಅತ್ಯಂತ ಹೆಚ್ಚಿನ ಸುಖ.—– ವಿಕ್ಟರ್ ಹ್ಯೂಗೊ.
  • ಯಾವಾಗ ಮೌನದಿಂದಿರಬೇಕು ಎಂಬುದನ್ನು ತಿಳಿಯದವನಿಗೆ ಯಾವಾಗ ಮಾತನಾಡಬೇಕು ಎಂಬುದೂ ತಿಳಿಯುವುದಿಲ್ಲ. ——ಪ.ಸೈರಸ್.
  • ಸೋಲು ಎಂಬುದು ಮತ್ತೊಮ್ಮೆ ಹೆಚ್ಚು ಚೈತನ್ಯದಿಂದ ಯತ್ನಿಸಲು ನೀಡಲ್ಪಡುವ ಒಂದು ಅವಕಾಶ
  • ನೀವು ಸೇವಿಸುವ ಅನ್ನವನ್ನು ಬೇಯಿಸುವ ನೀರು , ನಿಮ್ಮ ದುಡಿಮೆಯ ಬೆವರೋ ಅಥವಾ ಬೇರೆಯವರ ಕಣ್ಣೀರೋ ! —- ಡಿ.ವಿ.ಜಿ.
  • ಸುಖವನ್ನು ಸಹಿಸುವ ಶಕ್ತಿ ಒಬ್ಬನಿಗಿದ್ದರೆ ದುಃಖವನ್ನು ಸಹಿಸುವ ಶಕ್ತಿ ನೂರಾರು ಮಂದಿಗಿರುತ್ತದೆ.—– ಥಾಮಸ್ ಕಾರ್ಲೈಲ್.
  • ಕೋಪವನ್ನು ನಿಯಂತ್ರಿಸದಿದ್ದರೆ ಅದು ನಮ್ಮ ಮನಸ್ಸಿನ ಜ್ಯೋತಿಯನ್ನು ನಂದಿಸಿಬಿಡುತ್ತದೆ.——- ಇಂಗರ್ ಸಾಲ್.
  • ತಿಳಿದವಗೆ ಜಗವೆಲ್ಲ ರಸದ ಊಟ.—- ಜಿ.ಎಸ್.ಶಿವರುದ್ರಪ್ಪ.

ಕನ್ನಡ ಸುಭಾಷಿತಗಳು,

  • ಹುಲಿಗೆ ಹುಲ್ಲು ತಿನ್ನುವುದನ್ನು ಕಲಿಸಬಹುದು , ಮುರ್ಖನಿಗೆ ನೀತಿಯನ್ನು ಕಲಿಸುವುದು ಕಷ್ಟ ಸಾಧ್ಯ
  • ಯಾವ ಸರ್ಕಾರಕ್ಕೆ ಜನರನ್ನು ಸುಖಿಗಳನ್ನಾಗಿಸಬೇಕೆಂಬ ಅಪೇಕ್ಷೆ ಇದೆಯೋ, ಯಾವ ಸರ್ಕಾರಕ್ಕೆ ಅದನ್ನು ಸಾಧಿಸುವ ರೀತಿ ತಿಳಿದಿದೆಯೋ ಅದೇ ಶ್ರೇಷ್ಠ ಸರ್ಕಾರ. —–ಮೆಕಾಲೆ.
  • ಸತ್ಯದ ಜೊತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ.—- ಸಾಕ್ರೆಟಿಸ್.
  • ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ , ಶಿಕ್ಷಿಸುವ ಅಧಿಕಾರ ಉಂಟು.—– ರವೀಂದ್ರನಾಥ್ ಟ್ಯಾಗೋರ್.
  • ಸುಖ, ಸ್ನೇಹಿತರನ್ನು ಕರೆತರುತ್ತದೆ.ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ.——ಪಿ.ಸೈರಸ್.
  • ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ. ——ಮಹಾತ್ಮಾ ಗಾಂಧಿ.
  • ಧೈರ್ಯಶಾಲಿಗೆ ಮಾತ್ರ ವಿಜಯಲಕ್ಶ್ಮಿ ಒಲೆಯುತ್ತಾಳೆ , ಹೇಡಿಗಳಿಗಲ್ಲ
  • ನೀವು ಹುಟ್ಟುವಾಗ ಏನನ್ನೂ ತರುವುದಿಲ್ಲವಾದುದರಿಂದ ನಂತರ ಪಡೆದಿದ್ದೆಲ್ಲ ಲಾಭವೇ
  • ಪ್ರಚಂಡ ಆತ್ಮವಿಶ್ವಾಸ ನಮ್ಮನ್ನು ಸಮುದ್ರದ ಚಂಡಮಾರುತದಿಂದಲೂ ಫಾರಾಗಿಸಬಲ್ಲದು
  • ಭಾಗ್ಯವಿರಬಹುದು, ಬೇಕಾದವರು ಇರಬಹುದು , ಫಲ ಮಾತ್ರ ಪಡೆದಷ್ಟೇ.—– ಎ.ಆರ್.ಕೃಷ್ಣ ಶಾಸ್ತ್ರಿ.
  • ಮೂರ್ಖನ ಹೃದಯ ಅವನ ನಾಲಿಗೆಯಲ್ಲಿರುತ್ತದೆ , ವಿವೇಕಿಯ ನಾಲಿಗೆ ಅವನ ಹೃದಯದಲ್ಲಿರುತ್ತದೆ

ಸುಭಾಷಿತಗಳು | Subhashita in Kannada

ಇತರ ವಿಷಯಗಳು

ಶುಭನುಡಿಗಳು

Thought For The Day in Kannada

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಸುಭಾಷಿತಗಳು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ  

Leave a Reply

Your email address will not be published. Required fields are marked *

rtgh