Raksha Bandhan in Kannada

About Raksha Bandhan in Kannada |  Raksha Bandhan in Kannada

 

 

ಭಾರತದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿರುವ ಈ ರಕ್ಷಾಬಂಧನದ ಮಹತ್ವವೇನು……. ? ಈ ಆಚರಣೆಯ ಹಿಂದಿನ ಉದ್ದೇಶವೇನು…. ? ಭಾರತದಲ್ಲಿ ಈ ಹಬ್ಬವನ್ನು ಹೇಗೆಲ್ಲ ಆಚರಿಸಲಾಗುತ್ತಿದೆ…… ?

ಇಲ್ಲಿದೆ ಉತ್ತರ…:-)

ಭಾವನೆಗಳಿಗೆ ಸಂಬಂಧಿಸಿದ ಹಬ್ಬ ‘ ರಕ್ಷಾ ಬಂಧನ ಭಾವನೆಗಳಿಗೆ ಸಂಬಂಧಿಸಿದ ಹಬ್ಬ .

ಅಂದು ಬೆಳಿಗ್ಗೆಯೇ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಹೊಸ ಬಟ್ಟೆ ಧರಿಸಿ , ಅಣ್ಣ – ತಂಗಿಯರ ಸಂಬಂಧ ಉತ್ತಮವಾಗಿರಲೆಂದು ಬೇಡಿ ,

ತನ್ನ ಅಣ್ಣನಿಗೆ ತಿಲಕವಿಟ್ಟು ಆರತಿ ಮಾಡಿ ,

ಆತನ ಮಣಿಕಟ್ಟಿಗೆ ರಾಖಿ ಕಟ್ಟಿ ನಮಸ್ಕರಿಸಿ ಆಶೀರ್ವಾದವನ್ನು ತಂಗಿ ಸ್ವೀಕರಿಸುತ್ತಾಳೆ .

ಅಣ್ಣನೂ ಸಹ ಅದಕ್ಕೆ ಪ್ರತಿಯಾಗಿ ಉಡುಗೊರೆ ನೀಡುತ್ತಾನೆ .

ಆದರೆ ಇವೆಲ್ಲಾ ಪೂಜಾ ಕ್ರಮಗಳನ್ನು ಹಬ್ಬದಂದು ಮಾತ್ರ ಮಾಡುವ ಆಚರಣೆಯಾಗಿದೆ .

 

ಅಣ್ಣನಿಂದ ರಕ್ಷಣೆಯ ಭರವಸೆ ಬಹುಷಃ ಯಾವಾಗ ಮನೆ ಮಗಳು ಮದುವೆಯಾಗಿ ತವರು ಮನೆಯಿಂದ ಗಂಡನ ಮನೆಗೆ ಸೇರಿದಳೋ ಅಂದಿನಿಂದಲೇ ಆಕೆಗೆ ಹೆಚ್ಚಿನ ರಕ್ಷಣೆಯ ಅಗತ್ಯವಿರುತ್ತದೆ .

ಹೆಣ್ಣಿನ ಮೇಲೆ ಹಲವು ರೀತಿಯ ಶೋಷಣೆ ಹಾಗೂ ಕಿರುಕುಳದಿಂದಾಗಿ ಆಕೆ ತನ್ನ ಗಂಡನ ಮನೆ ತೊರೆದು ತವರಿಗೆ ಬರುತ್ತಾಳೆ .

ಏಕೆಂದರೆ ತವರಿನಲ್ಲಿ ತನಗೆ . ರಕ್ಷಣೆ ಹಾಗೂ ಸಹಕಾರ ದೊರೆಯುತ್ತದೆಂಬ ನಂಬಿಕೆಯಿಂದ , ಹಾಗೆಯೇ ಎಲ್ಲಿ ತನ್ನ ತಂಗಿ . ಪುನಃ ಗಂಡನ ಮನೆಗೆ ಹೋದರೆ ಸಂಕಷ್ಟಕ್ಕೆ ಸಿಲುಕುತ್ತಾಳೋ ಎಂಬ ಭಯದಿಂದ ಇಂದಿಗೂ ಮದುವೆಯಾದ ಹೆಣ್ಣು ಮಗಳು ತನ್ನ ತವರಿನಲ್ಲೇ ಉಳಿದಿರುವ ಸಂಖ್ಯೆಯೂ ಅದೆಷ್ಟೋ

. ಇಂತಹ ಸಂದರ್ಭದಲ್ಲಿ ಅಣ್ಣ ಧೈರ್ಯ ಹೇಳಿ ಪುನಃ ತಂಗಿಯನ್ನು ಕರೆದುಕೊಂಡು ಹೋಗಿ ಗಂಡನ ಮನೆಯಲ್ಲಿ ಬಿಟ್ಟಾಗ ತನ್ನ ರಕ್ಷಣೆಗೆ ಹಾಗೂ ಸಹಾಯಕ್ಕೆ ಸದಾ ತನ್ನ ತವರು ಇದ್ದೇ ಇರುತ್ತದೆ ಎಂಬ ದೃಢ ವಿಶ್ವಾಸವನ್ನು ವ್ಯಕ್ತಪಡಿಸುತ್ತಾಳೆ . ಇದೇ ನಿಜವಾದ ರಕ್ಷಾ ಬಂಧನ .

ತಂಗಿಯರ ನಿರ್ಮಲವಾದ ಪ್ರೀತಿ , ಭಾಂಧವ್ಯ ಮತ್ತು ಸಂತಸ . ಈ ರಾಖಿ ಹಬ್ಬ ಈ ಬಾರಿ ಆಗಸ್ಟ್ 26 ರಂದು ದೇಶಾದ್ಯಂತ ಆಚರಿಸಲಾಗುತ್ತಿದೆ .

ಶ್ರಾವಣ ಮಾಸದ ಹುಣ್ಣಿಮೆ ಬಂತೆಂದರೆ ಎಲ್ಲೆಲ್ಲೂ ರಕ್ಷಾ ಬಂಧನ ಹಬ್ಬದ ಸಡಗರ , ಸಂಭ್ರಮ . ಅಂದು ಹೆಣ್ಣು ಮಕ್ಕಳೆಲ್ಲರೂ ತನ್ನ ಅಣ್ಣನಿಗೆ ರಾಖಿ ಕಟ್ಟಲು ಕಾತುರರಾಗಿರುತ್ತಾರೆ .

ಅಂಗಡಿಗಳಲ್ಲಂತೂ ಬಗೆಬಗೆಯ ರಾಖಿ ಮಾರಾಟದ ಪ್ರಕ್ರಿಯೆ ಆರಂಭವಾದರೆ , ಮತ್ತೊಂದೆಡೆ ತನ್ನ ಅಣ್ಣನಿಗಾಗಿ ಯಾವ ಬಗೆಯ ರಾಖಿ ಕೊಳ್ಳುವುದು ಎಂದು ಹಪಹಪಿಸುವ ತಂಗಿಯರು !

ಈ ಎಲ್ಲದರ ನಡುವೆ ರಾಖಿ ಹಬ್ಬದಂದು ಹಂಚಿಕೆಯಾಗುವುದು ಅಣ್ಣ ತಂಗಿಯರ ನಿರ್ಮಲವಾದ ಪ್ರೀತಿ , ಭಾಂಧವ್ಯ ಮತ್ತು ಸಂತಸ  ಈ ರಾಖಿ ಬಾರಿ ಆಗಸ್ಟ್ 26 ರಂದು ದೇಶಾದ್ಯಂತ ಆಚರಿಸಲಾಗುತ್ತಿದೆ .

 

ರಾಖಿ ಕೇವಲ ದಾರವಲ್ಲ , ಪವಿತ್ರ ಬಂಧ ಇಂದು ಮಾರುಕಟ್ಟೆಗೆ ತರಹೇವಾರಿ ರಾಖಿಗಳು ಬಂದಿವೆ .

ಒಂದು ರೂಪಾಯಿ ರಾಖಿಯಿಂದ ಹಿಡಿದು , ಅಣ್ಣನಿಗಾಗಿ ಲಕ್ಷಾಂತರ ರೂ . ಬೆಲೆಬಾಳುವ ವಜ್ರದ ರಾಖಿಯನ್ನೇ ಕಟ್ಟುವವರೂ ಇದ್ದಿರಬಹುದು . ಅವೆಲ್ಲವೂ ಅವರವರ ಅನುಕೂಲ .

ಆದರೆ ಅಣ್ಣನಿಂದ ಸಿಗುವ ಉಡುಗೊರೆಯನ್ನೋ , ದುಬಾರಿ ವಸ್ತುವನ್ನೋ ನಿರೀಕ್ಷಿಸಿ ಕಟ್ಟುವ ದು ಬಾರಿ ರಾಖಿಗಿಂತ , ಶುದ್ಧ ಮನಸ್ಸಿನಿಂದ , ಪ್ರೀತಿಯಿಂದ ಕಟ್ಟುವ ಒಂದೇ ಒಂದು ದಾರಕ್ಕೂ ವಿಶಿಷ್ಟ ಅರ್ಥವಿದೆ . ಅಣ್ಣನಿಗೆ ಆರತಿ ಮಾಡಿ , ಸಿಹಿ ತಿನ್ನಿಸಿ , ನಿಷ್ಕಲ್ಮಶ ಮನಸ್ಸಿನಿಂದ ರಾಖಿ ಕಟ್ಟಬೇಕು .

ಅಣ್ಣ ಅಥವಾ ತಮ್ಮನಿಗೆ ದೀರ್ಘಾಯುರಾರೋಗ್ಯ ನೀಡುವಂತೆ ದೇವರನ್ನು ಬೇಡಿ , ತನಗೆ ಸದಾ ರಕ್ಷಣೆ ನೀಡುವಂತೆ ಅಣ್ಣನನ್ನು ಕೇಳಿಕೊಳ್ಳುವ ಸಾಕೇಂತಿಕ ಆಚರಣೆ ಈಇ ರಕ್ಷಾಬಂಧನ 

Raksha Bandhan Acharaneya Vishesha:-

ಆತ ತಂಗಿಗಾಗಿ ತನ್ನ ಪ್ರಾಣ ನೀಡುವುದಕ್ಕೂ ಸಿದ್ಧನಾಗಿರುವ ಅಣ್ಣ , ತಂಗಿಯ ತುಂಟಾಟ , ಕೋಪ , ಪ್ರೀತಿ , ಮುದ್ದು , ಸಂತೋಷ , ದುಃಖ ಎಲ್ಲದಕ್ಕೂ ಮೊದಲ ಕಿವಿ ಅವನೇ ! ಮೊದಲ ಸಾಂತ್ವನವೂ , ಮೊದಲ ಪ್ರತಿಕ್ರಿಯೆಯೂ ಅವನದೇ ! ಅದೆಷ್ಟೇ ಕಿತ್ತಾಡಿದರೂ , ರಂಪ ಮಾಡಿದರೂ , ಒಂದು ದಿನ ಮಾತಿಲ್ಲದೆ ಕಳೆದರೂ , ಒಂದು ಕ್ಷಣ ಅಣ್ಣನನ್ನು ಬಿಟ್ಟಿರುವುದೂ ತಂಗಿಗೆ ಅಪಥ್ಯ !

ಅಣ್ಣನಿಗೂ ಹಾಗೇ . ಒಟ್ಟಿನಲ್ಲಿ ಅವರಿಬ್ಬರ ಸಂಬಂಧ ರಕ್ಷೆಯಲ್ಲಿ ಬೆಸೆದ ದಾರಗಳ ಹಾಗೇ ಒಂದನ್ನೊಂದು ಬಿಟ್ಟಿರದ ಬೆಸುಗೆ ! ಮತ್ತೆ ರಕ್ಷಾಬಂಧನ ಬಂದಿದೆ . ಅಣ್ಣ – ತಂಗಿಯ ಬಂಧವನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯುವ ಈ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ .

ಹಲವು ವಿಭಿನ್ನ ಆಚರಣೆಗಳಿಂದಾಗಿಯೇ ಉಳಿದೆಲ್ಲ ಸಂಸ್ಕೃತಿಗಳಿಗಿಂತ ಔನತ್ಯದ ಸ್ಥಾನದಲ್ಲಿರುವ ಭಾರತೀಯ ಸಂಸ್ಕೃತಿಯಲ್ಲಿ ಭ್ರಾತೃತ್ವದ ಸಂಕೇತವಾದ ರಕ್ಷಾಬಂಧನ ಮಹತ್ವದ ಸ್ಥಾನ ಪಡೆದಿದೆ . ಭಾರತದೊಂದಿಗೆ ನೇಪಾಳದ ಕೆಲವೆಡೆಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ .

ರಾಖಿ ಹಿಂದೆ ಪುರಾಣ ಕತೆ ರಾಖಿ ಹಬ್ಬದ ಹಿಂದೆ ಹಲವು ಪುರಾಣ ಮತ್ತು ಐತಿಹಾಸಿಕ ಕತೆಗಳಿವೆ .

ಶ್ರೀಕೃಷ್ಣನಂಥ ಅಣ್ಣ ಸಿಗಲಿ ದೌಪದಿ ಕಟ್ಟಿದ ಸೀರೆಯ ತುಂಡನ್ನೇ ಕೃಷ್ಣ ರಕ್ಷೆ ಎಂದುಕೊಂಡು ಆಕೆಯನ್ನು ತಂಗಿ ಎಂದು ಸ್ವೀಕರಿಸುವ ಕೃಷ್ಣ , ಮುಂದೆ ಆಕೆಯ ರಕ್ಷಣೆಗೆ ಬದ್ಧನಾಗುತ್ತಾನೆ

ಶಿಶುಪಾಲನನ್ನು ಕೊಲ್ಲುವುದಕ್ಕೆಂದು ಸುದರ್ಶನ ಚಕ್ರ ಬಳಸಲು ಹೊರಟ ಕೃಷ್ಣನ ಕೈ ಬೆರಳಿಗೆ ಗಾಯವಾದಾಗ ಬ್ರೌಪದಿ ತನ್ನ ಸೀರೆಯನ್ನೇ ಹರಿದು ಆತನ ಕೈಬೆರಳಿಗೆ ಕಟ್ಟುತ್ತಾಳೆ . ಅದಕ್ಕೆ ಪ್ರತಿಯಾಗಿ ದುಶ್ಯಾಸನ ದೌಪದಿಯ ಸೀರೆ ಎಳೆಯುವಾಗ ಶ್ರೀಕೃಷ್ಣ ದೌಪದಿಗೆ ಸೀರೆಯನ್ನು ದಯಪಾಲಿಸುತ್ತಾನೆ .

ವೃಕ್ಷ ರಕ್ಷತಿ ರಕ್ಷಿತಃ…

ಜಾರ್ಖಂಡ್ ನ ಬುಡಕಟ್ಟು ಮಹಿಳೆಯರು ಮರಕ್ಕೆ ರಾಖಿ ಕಟ್ಟುವ ಮೂಲಕ ತಮ್ಮನ್ನು ರಕ್ಷಿಸುವಂತೆ ಮಾಡಿಕೊಂಡಿದ್ದಾರೆ . ಮರವನ್ನು ರಕ್ಷಿಸಿದರೆ , ಮರ ನಮ್ಮನ್ನು ರಕ್ಷಿಸುತ್ತದೆ ಎಂಬ ನಂಬಿಕೆ,,,

ಹೀಗೇ ರಕ್ಷಾಬಂಧನದ ಆಚರಣೆ ಆರಂಭವಾಯ್ತು ಎಂಬುದು ಪುರಾಣದ ಒಂದು ಕತೆ . ತಮಗೂ ಶ್ರೀಕೃಷ್ಣನಂತೇ ರಕ್ಷಣೆ ನೀಡುವ ಸಿಗಲಿ ಎಂಬ ಉದ್ದೇಶದಿಂದ ಇಂದಿಗೂ ಸಹೋದರಿಯರು ತಮ್ಮ ಅಣ್ಣ ತಮ್ಮಂದಿರಿಗೆ ರಕ್ಷೆ ಕಟ್ಟುತ್ತಾರೆ .

ಇತ್ತೀಚಿನ ದಿನಗಳಲ್ಲಿ ರಕ್ಷಾಬಂಧನದ ಆಚರಣೆಯು

ಹುಡುಗಾಟದ ಆಚರಣೆಯಾಗುತ್ತಿರುವ ಹಬ್ಬ

ಆದರೆ ಇತ್ತೀಚಿನ ದಿನಗಳಲ್ಲಿ ರಕ್ಷಾ ಬಂಧನ ಎಂಬುದು ಹುಡುಗಾಟಿಕೆಯ ವಸ್ತುವಾಗಿ ಬಳಸಲಾಗುತ್ತಿದೆ .

ಸಹ ಶಿಕ್ಷಣ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಹುಡುಗಿಯರು ಹುಡುಗರ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಆತನಿಗೆ ರಾಕಿ ಕಟ್ಟುವುದು ಹಾಗೂ ಹುಡುಗನೊಬ್ಬ ಪ್ರೇಮಿಸುವುದಾಗಿ ಹೇಳಿದಾಗ ಇಷ್ಟವಿಲ್ಲದಿದ್ದರೆ ಆತನ ಮನಸ್ಸಿಗೆ ನೋವಾಗದಂತೆ ನಾಜೂಕಾಕಿ ಆತನ ಕೈಗೆ ರಾಕಿ ಕಟ್ಟುವ ಮೂಲಕ ಪ್ರೇಮವನ್ನು ನಯವಾಗಿ ತಿರಸ್ಕರಿಸಿ ‘ ನಾವಿಬ್ಬರೂ ಅಣ್ಣ ತಂಗಿಯರಾಗಿ , ಸ್ನೇಹಿತರಾಗಿ ಇರೋಣ ‘ ಎಂದು ಹೇಳುವ , ಹುಡುಗರು ಚುಡಾಯಿಸಿದರೆ ಆತನಿಗೆ ರಾಕಿ ಕಟ್ಟಿ ಬೆದರಿಸುವ ಮಟ್ಟಕ್ಕೆ ರಕ್ಷಾ ಬಂಧನ ತಲುಪಿದೆ .

ಇಷ್ಟಾದರೂ ಸಹ ರಕ್ಷಾ ಬಂಧನ ಹಬ್ಬ ತನ್ನ ಪಾವಿತ್ರ್ಯತೆ ಕಳೆದುಕೊಳ್ಳದೆ ಒಳ್ಳೆಯ ರೀತಿಯಲ್ಲಿ ಹೆಣ್ಣಿನ ರಕ್ಷಣೆಗೆ ನಿಂತಿರುವ ಸಾಧನವಾಗಿ ಕಾರ್ಯ ನಿರ್ವಹಿಸುತ್ತಿದೆ . ಶಾಂತಿನಿಕೇತನದಲ್ಲಿ ರಾಖಿ ಉತ್ಸವ ಇತ್ತೀಚೆಗೆ ಪಾದ್ರಿಗಳು ಭಕ್ತರಿಗೆ , ಹೆಂಡತಿ ಗಂಡನಿಗೆ , ಹುಡುಗಿ ಹುಡುಗನಿಗೆ , ಶಿಷ್ಯರು ಗುರುಗಳಿಗೆ ರಾಖಿ ಕಟ್ಟುವ ಮೂಲಕ ತಮ್ಮ ರಕ್ಷಣೆ ಹಾಗೂ ಬಾಂಧವ್ಯವು ನಡೆಯುತ್ತಿದೆ,,,,,, .

FAQ

ಪ್ರಶ್ನೆ: ರಕ್ಷಾ ಬಂಧನ ಹಬ್ಬವನ್ನು ಯಾವಾಗ ಆಚರಿಸಲಾಗುತ್ತದೆ ?
ಉತ್ತರ : ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು

ಪ್ರಶ್ನೆ: ರಕ್ಷಾಬಂಧನ ಹಬ್ಬದ 2001ರ ದಿನಾಂಕ ?
ಉತ್ತರ : ಆಗಸ್ಟ್ 22

ಪ್ರಶ್ನೆ: ಈ ವರ್ಷ ರಾಖಿ ಕಟ್ಟಲು ಶುಭ ಸಮಯ ಯಾವುದು ?
ಉತ್ತರ: ಬೆಳಿಗ್ಗೆ 6:15 ರಿಂದ ಸಂಜೆ 7:40 ರವರೆಗೆ

ಇನ್ನೂ ಹೆಚ್ಚಿನ ರಕ್ಷಾಬಂಧನ ಹಬ್ಬದ ಇಮೇಜಸ್ ಗಳು, ಶುಭಾಶಯಗಳು , ಮತ್ತು ಕವನಗಳು ನೀವು ನೋಡಬೇಕೆಂದರೆ ನಿಮಗೆ ಇಲ್ಲಿ ಕನ್ನಡ ಆಪ್ ಲಿಂಕ್ ಅನ್ನು ಕೊಟ್ಟಿರುತ್ತೇನೆ ಆಪನ್ನು ಡೌನ್ಲೋಡ್ ಮಾಡಿ ನಿಮಗೆ ಬೇಕಾದ ವಿಷಯಗಳನ್ನು ನೀವು ಮಾಡಿಕೊಳ್ಳಬಹುದು                Download App Kannada Thoughts

ಇನ್ನು ಹೆಚ್ಚಿನ ವಿಷಯಗಳನ್ನು  ಓದಿ:

 

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh